ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 24-06-2022
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 111/2022 ಕಲಂ: 302 ಐ.ಪಿ.ಸಿ: ಇಂದು ದಿನಾಂಕ: 23/06/2022 ರಂದು ಮಧ್ಯಾಹ್ನ 2.30 ಪಿ.ಎಂ.ಕ್ಕೆ ಶ್ರೀ ರಾಮಪ್ಪ @ ರಮೇಶ ತಂ/ ನಿಂಗಪ್ಪ, ವ|| 35 ವರ್ಷ, ಜಾ|| ವಡ್ಡರ(ಬೋವಿ), ಉ|| ಕೂಲಿಕೆಲಸ, ಸಾ|| ಅಮರಾಪೂರ, ತಾ|| ದೇವದುರ್ಗ, ಜಿ|| ರಾಯಚೂರು ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಅಜರ್ಿಯನ್ನು ಸಲ್ಲಿಸಿದ ಸಾರಾಂಶ ಏನೆಂದರೆ, ನಾವು 3 ಜನ ಅಣ್ಣತಮ್ಮಂದಿರಿದ್ದು, ಅಣ್ಣ ದೇವಪ್ಪ ತಂ/ ನಿಂಗಪ್ಪನು ನಮ್ಮೂರಲ್ಲಿಯೇ ಇದ್ದು ಕೂಲಿಕೆಲಸ ಮಾಡಿಕೊಂಡಿರುತ್ತಾನೆ. ತಮ್ಮ ಶಿವಗೇನಿ ತಂ/ ನಿಂಗಪ್ಪ ಈತನು ಕಳೆದ 3 ವರ್ಷಗಳ ಹಿಂದಿನಿಂದ ತನ್ನ ಹೆಂಡತಿ ಭೀಮಮ್ಮನೊಂದಿಗೆ ಹೆಂಡತಿಯ ತವರು ಮನೆ ಜಾಲಹಳ್ಳಿ ಗ್ರಾಮದಲ್ಲಿ ಕೂಲಿಕೆಲಸ ಮಾಡಿಕೊಂಡು ವಾಸವಾಗಿರುತ್ತಾನೆ. ನನ್ನ ತಮ್ಮನಿಗೆ 3 ವರ್ಷದ ಒಬ್ಬ ಮಗನಿರುತ್ತಾನೆ. ಹೀಗಿದ್ದು, ನಿನ್ನೆ ದಿನಾಂಕ: 22/06/2022 ರಂದು ರಾತ್ರಿ 8.00 ಪಿ.ಎಂ.ಕ್ಕೆ ನನ್ನ ತಮ್ಮನ ಬಾವಮೈದ ಹಣಮಂತ ತಂ/ ಮಾರೆಪ್ಪ ಗುಂಡಳ್ಳಿ ಈತನು ನನಗೆ ಫೋನ್ ಮಾಡಿ ದಿನಾಂಕ: 21/06/2022 ರಂದು ಬೆಳಿಗ್ಗೆ ಕೂಲಿಕೆಲಸಕ್ಕೆ ಹೋದ ನನ್ನ ಮಾವ ಶಿವಗೇನಿಯು ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವುದಿಲ್ಲ ಅಂತಾ ಹೇಳಿದ್ದರಿಂದ ನಾನು ಇಂದು ದಿನಾಂಕ: 23/06/2022 ರಂದು ನಾನು ಜಾಲಹಳ್ಳಿಗೆ ಹೋಗಿ ತಮ್ಮನ ಹೆಂಡತಿ ಭೀಮಮ್ಮ ಗಂ/ ಶಿವಗೇನಿ ಮತ್ತು ಅಳಿಯ ಹಣಮಂತ ತಂ/ ಮಾರೆಪ್ಪ ಗುಂಡಳ್ಳಿ ಇವರಿಗೆ ಬೇಟಿಯಾಗಿ ನನ್ನ ತಮ್ಮ ಕಾಣೆಯಾದ ಬಗ್ಗೆ ಜಾಲಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಕೇಸು ಕೊಡಲು ಹೇಳಿ, ನಾನು ನನ್ನ ತಮ್ಮನಿಗೆ ಹುಡುಕಿಕೊಂಡು ದೇವದುರ್ಗ, ಹತ್ತಿಗುಡೂರ ಮಾರ್ಗವಾಗಿ ಶಹಾಪೂರ ಕಡೆಗೆ ಹೊರಟಿದ್ದಾಗ ಇಂದು ಮಧ್ಯಾಹ್ನ 12.30 ಪಿ.ಎಂ. ಸುಮಾರಿಗೆ ರಸ್ತಾಪೂರ ಕಮಾನ ಇಂದ ಶಹಾಪೂರ ಕಡೆಗೆ ಹೋಗುವ ರೋಡಿನಲ್ಲಿ ಬಹಳಷ್ಟು ವಾಹನಗಳು ರಸ್ತೆಯ ಬದಿಯಲ್ಲಿ ನಿಂತಿದ್ದವು, ಆಗ ಅಲ್ಲಿದ್ದವರಿಗೆ ವಿಚಾರಿಸಲಾಗಿ, ಹತ್ತಿರದ ಹೊಲದಲ್ಲಿ ಯಾರೋ ಒಬ್ಬ ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುತ್ತಾರೆ ಅಂತಾ ಹೇಳಿದಾಗ ನಾನು ಹತ್ತಿರ ಹೋಗಿ ನೋಡಲಾಗಿ ಹೊಲದಲ್ಲಿ ಕೊಲೆಯಾಗಿ ಬಿದ್ದಿದ್ದ ವ್ಯಕ್ತಿ ನನ್ನ ತಮ್ಮ ಶಿವಗೇನಿ ತಂ/ ನಿಂಗಪ್ಪ, ವ|| 32 ವರ್ಷ, ಜಾ|| ವಡ್ಡರ(ಬೋವಿ), ಉ|| ಕೂಲಿಕೆಲಸ, ಸಾ|| ವರಟಗೇರಾ ಓಣಿ, ಜಾಲಹಳ್ಳಿ, ತಾ|| ದೇವದುರ್ಗ, ಈತನಿದ್ದನು. ಇಂದು ದಿನಾಂಕ: 22/06/2022 ರಂದು ರಾತ್ರಿ 10.00 ಪಿ.ಎಂ. ಇಂದ ಇಂದು ದಿನಾಂಕ: 23/06/2022 ರಂದು ಬೆಳಗಿನ ಜಾವ 04.00 ಎ.ಎಂ. ಮಧ್ಯದ ಅವಧಿಯಲ್ಲಿ ಯಾರೋ ದುಷ್ಕಮರ್ಿಗಳು ಯಾವುದೋ ಉದ್ದೇಶದಿಂದ ರಸ್ತಾಪೂರ ಸೀಮಾಂತರದ ಒಂದು ಹೊಲದಲ್ಲಿರುವ ನಾಲೆಯಲ್ಲಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರಿಂದ ನನ್ನ ತಮ್ಮನ ತಲೆಯ ಮೇಲೆ, ಎಡ ಮತ್ತು ಬಲಭಾಗದಲ್ಲಿ ಭಾರೀ ರಕ್ತಗಾಯವಾಗಿದ್ದು, ಬಲಗಣ್ಣ ಗುಡ್ಡೆ ಹೊರಗೆ ಬಂದು ಮೃತಪಟ್ಟಿದ್ದನು. ಕಾರಣ ನನ್ನ ತಮ್ಮನಿಗೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ದುಷ್ಕಮರ್ಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಲಿಖಿತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.111/2022 ಕಲಂ 302 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು
ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 95/2022 ಕಲಂ. 279, 337, 338 ಐಪಿಸಿ ಮತ್ತು 187 ಐ.ಎಮ್.ವಿ.ಕಾಯ್ದೆ: ಇಂದು ದಿನಾಂಕ 23-06-2022 ರಂದು ಮದ್ಯಾಹ್ನ 12:30 ಗಂಟೆಗೆ ಅಜರ್ಿದಾರನು ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಂಶವೆನೆಂದರೆ ದಿನಾಂಕ.22-06-2022 ರಂದು ಸಾಯಂಕಾಲ 5:30 ಗಂಟೆಗೆ ನನ್ನ ಮಗ ಹಣಮಂತ ಮತ್ತು ನನ್ನ ಅಳಿಯ ನಾಗರಾಜ ಇಬ್ಬರು ಕೂಡಿ ಮೊಟರ ಸೈಕಲ್ ನಂ.ಕೆ.ಎ.33 ಎಕ್ಸ್-3926 ನೆದ್ದರ ಮೇಲೆ ಯಾದಗಿರಿ-ರಾಯಚೂರ ಮುಖ್ಯ ರಸ್ತೆಯ ಮೇಲೆ ಆರ್.ಹೊಸ್ಸಳ್ಳಿ ಕ್ರಾಸ ಹತ್ತಿರ ರಸ್ತೆ ದಾಟುತ್ತಿರುವಾಗ ಲಾರಿ ನಂ.ಕೆ.ಎ.56 0457 ನೆದ್ದರ ಚಾಲಕನು ತಾನು ಚಲಾಯಿಸುವ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಮೊಟರ ಸೈಕಲ್ಗೆ ಅಪಘಾತಪಡಿಸಿ ಲಾರಿಯನ್ನು ಅಲ್ಲೆ ಬಿಟ್ಟು ಓಡಿ ಹೊಗಿದ್ದು ಅಪಘಾತದಲ್ಲಿ ನನ್ನ ಮಗ ಹಣಮಂತ ಮತ್ತು ನನ್ನ ಅಳಿಯ ನಾಗರಾಜ ಇವರಿಗೆ ಭಾರಿ ರಕ್ತ ಗಾಯ ಮತ್ತು ಸಾದ ಸ್ವರೂಪದ ಗಾಯಗಳಾಗಿರುತ್ತವೆ.ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳ ಬೆಕೆಂದು ಫಿರ್ಯಾದಿ ಇರುತ್ತದೆ.
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 76/2022 ಕಲಂ 279, 337, 338 ಐಪಿಸಿ: ಇಂದು ದಿನಾಂಕ 23.06.2022 ರಂದು ಸಾಯಂಕಾಲ 5.00 ಗಂಟೆಗೆ ಮಲ್ಲಪ್ಪ ತಂದೆ ಭೀಮರಾಯ ದನಕಾಯೋರ ವಯ|| 28 ವರ್ಷ, ಜಾ|| ಮಾದಿಗ ಉ|| ಒಕ್ಕಲುತನ, ಸಾ|| ಭೀಮನಳ್ಳಿ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಬಂದು ಹಾಜರಪಡಿಸಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಮ್ಮ ತಂದೆ-ತಾಯಿಗೆ ನಾವು 8 ಜನ ಮಕ್ಕಳಿದ್ದು ನಾನು ಮೊದಲನೆಯ ಮಗನಿರುತ್ತೇನೆ. ನನ್ನ ತಂದೆ ಭೀಮರಾಯ ಇವರು ದಿನಾಂಕ 21.06.2022 ರಂದು ಬೆಳಿಗ್ಗೆ ನಮ್ಮೂರಿನ ಚಿದಾನಂದ ತಂದೆ ಹಳ್ಳೆಪ್ಪ ದಾಸರ ಇವರೊಂದಿಗೆ ಅವರ ಹಿರೋ ಹೋಂಡಾ ಮೋಟಾರ ಸೈಕಲ್ ನಂಬರ ಕೆ.ಎ-33, ಎಲ್-1360 ನೇದ್ದರಲ್ಲಿ ಕುಳಿತು ತೆಲಂಗಾಣ ರಾಜ್ಯದ ಕೊತ್ತಪಲ್ಲಿ ಗ್ರಾಮಕ್ಕೆ ಒಕ್ಕಲುತನ ಉಪಕರಣವಾದ ಕುಂಟೆ ದಿಂಡು ಕೇಳಿಬರಲು ಹೋಗಿದ್ದರು.ಹೀಗಿದ್ದು ಆ ದಿನ ಮಧ್ಯಾಹ್ನ 3-10 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ತಂದೆ ನನಗೆ ಫೋನ ಮಾಡಿ ತಿಳಿಸಿದ್ದೇನೆಂದರೆ, ಚಿದಾನಂದ ದಾಸರ ಈತನು ನಾವು ಮರಳಿ ಊರಿಗೆ ಬರುವಾಗ ಮೋಟಾರ ಸೈಕಲ್ ವೇಗವಾಗಿ ನಡೆಸಿ ಸ್ವಲ್ಪ ಹೊತ್ತು ಮೊದಲು ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೆಟ್ಟಿಹಳ್ಳಿ ಬ್ರಿಡ್ಜ್ ಹತ್ತಿರ ಬೈಕ್ ಕೆಡವಿ ಬಿಟ್ಟಿದ್ದಾನೆ ನನಗೆ ಬಲಗಡೆ ಕಿವಿಯ ಕೆಳಗಡೆ ಮತ್ತು ತಲೆಗೆ ಮೂಗ ಪೆಟ್ಟು ಮತ್ತು ರಕ್ತಗಾಯ ಆಗಿ ಚಕ್ಕರ ಬರುತ್ತಿದೆ ಅಂತ ತಿಳಿಸಿ ಫೋನ್ ಕಟ್ ಮಾಡಿದ್ದ. ಕೂಡಲೇ ನಾನು, ನನ್ನ ತಮ್ಮ ಬಸವರಾಜ ಇಬ್ಬರೂ ಒಂದು ಖಾಸಗಿ ಕಾರ್ ವಾಹನ ತೆಗೆದುಕೊಂಡು ಹೋಗಿದ್ದೆವು. ಶೆಟ್ಟಿಹಳ್ಳಿ ಬ್ರಿಡ್ಜ್ನ ರೋಡಿನ ಅಂಚಿಗೆ ನನ್ನ ತಂದೆ ಭೀಮರಾಯ ಮತ್ತು ಚಿದಾನಂದ ಇಬ್ಬರು ಗಾಯಗೊಂಡು ಮಲಗಿದ್ದರು. ಹೋಗಿ ಬರುವ ಸಾರ್ವಜನಿಕರು ಸಹ ನಿಂತಿದ್ದರು. ನಾವು ಒಯ್ದ ಕಾರ್ ವಾಹನದಲ್ಲಿ ಗಾಯಗೊಂಡ ನನ್ನ ತಂದೆ ಮತ್ತು ಚಿದಾನಂದನಿಗೆ ಹಾಕಿಕೊಂಡು ರಾಯಚೂರ ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವು. ಅಲ್ಲಿಂದ ನನ್ನ ತಂದೆಗೆ ಬಾಲಂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದೇವು. ನನ್ನ ತಂದೆ ಬೇವಸ್ನಲ್ಲಿದ್ದ ಕಾರಣ ಪುನ: ರಿಮ್ಸ್ ರಾಯಚೂರ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದೇವೆ. ರಸ್ತೆ ಅಪಘಾತದಲ್ಲಿ ನನ್ನ ತಂದೆಯಾದ ಭೀಮರಾಯ ತಂದೆ ಮಲ್ಲಪ್ಪ ದನಕಾಯೋರ ವಯ|| 48 ವರ್ಷ, ಜಾ|| ಮಾದಿಗ ಉ|| ಒಕ್ಕಲುತನ ಮತ್ತು ಮೋಟಾರ ಸೈಕಲ್ ನಡೆಸಿದ ಚಿದಾನಂದ ತಂದೆ ಹಳ್ಳೆಪ್ಪ ದಾಸರ ವಯ|| 50 ವರ್ಷ, ಜಾ|| ದಾಸರ ಉ|| ಒಕ್ಕಲುತನ ಸಾ|| ಭೀಮನಳ್ಳಿ ತಾ|| ಜಿ|| ಯಾದಗಿರಿ ಇವರಿಬ್ಬರಿಗೆ ಪೆಟ್ಟುಗಳಾಗಿವೆ. ಕಾರಣ ತನ್ನ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿ ನಿಯಂತ್ರಿಸದೆ ಅಪಘಾತ ಸಂಭವಿಸಲು ಕಾರಣನಾದ ಮೋಟಾರ ಸೈಕಲ ಸವಾರ ಚಿದಾನಂದ ತಂದೆ ಹಳ್ಳೆಪ್ಪ ದಾಸರ ವಯ|| 50 ವರ್ಷ, ಜಾ|| ದಾಸರ ಉ|| ಒಕ್ಕಲುತನ ಸಾ|| ಭೀಮನಳ್ಳಿ ಗ್ರಾಮ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ನನ್ನ ತಂದೆಗೆ ಉಪಚಾರ ಮಾಡಿಸುವ ಸಂಬಂಧ ನಾನು ರಾಯಚೂರನಲ್ಲಿ ಇದ್ದ ಕಾರಣ ಇಂದು ತಡವಾಗಿ ದೂರು ನೀಡಿರುತ್ತೇನೆ. ಅಂತ ಅಪಾದನೆ.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 110/2020.ಕಲಂ, 498(ಎ) ,504,506ಸಂ, 34. ಐ.ಪಿ.ಸಿ: ಇಂದು ದಿನಾಂಕ 22/06/2022 ರಂದು 20-35 ಗಂಟೆಗೆ ಸರಕಾರಿ ಆಸ್ಪತೆಯಿಂದ ಎಂ.ಎಲ್.ಸಿ.ಇದೆ ಅಂತ ಮಾಹಿತಿ ಬಂದಮೇರೆಗೆ ಆಸ್ಪತ್ರೆಗೆ 20-45 ಪಿ.ಎಂ.ಕ್ಕೆ ಹೋಗಿ ಉಪಚಾರ ಪಡೆಯುತ್ತಿದ್ದ ಶ್ರೀಮತಿ, ಮಂಜುಳಾ ಗಂಡ ಶೇಖಪ್ಪ ಸುರಪೂರ ವ|| 32 ಜಾ|| ಕಬ್ಬಲಿಗ ಉ|| ಟೇಲರ ಸಾ|| ಆಲ್ಯಾಳ ತಾ|| ಸುರಪೂರ ಹಾ||ವ|| ಜೀವೇಶ್ವರ ನಗರ ಶಹಾಫೂರ 9019999381. ಇವರ ಹೇಳಿಕೆಯನ್ನು 22-00 ಪಿ.ಎಂ ವರೆಗೆ ಪಡೆದುಕೊಂಡು ಮರಳಿ ಠಾಣೆಯಗೆ 22-20 ಪಿ.ಎಂ. ಕ್ಕೆ ಬಂದು ಸದರಿ ಹೇಳಿಕೆಯ ಸಾರಾಂಶವೆನೆಂದರೆ. ನನಗೆ ಸುಮಾರು 13 ವರ್ಷದ ಹಿಂದೆ ಹಾಲ್ಯಾಳ ಗ್ರಾಮ ಶೇಖಪ್ಪ ತಂದೆ ಹಣಮಂತ್ರಾಯ ಸುರಪೂರ ಈತನೊಂದಿಗೆ ನಮ್ಮ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಾನು ಮತ್ತು ನನ್ನ ಗಂಡನಾದ ಶೇಖಪ್ಪ ಇಬ್ಬರು ಸುಖವಾಗಿ ಸಂಸಾರ ಮಾಡಿಕೊಂಡು ಬಂದಿದ್ದು ಇರುತ್ತದೆ. ನಮಗೆ ಇಬ್ಬರು ಮಕ್ಕಳಿದ್ದು ಮೊದಲನೇ ಮಗಳಾದ ವಶರ್ಿಣಿ ಈಕೆಗೆ 10 ವರ್ಷ, ಎರಡನೆ ಮಗನಾದ ಮಹೇಶ ಈತನಿಗೆ 6 ವರ್ಷ ಇರುತ್ತದೆ ಸದ್ಯ ನಾನು ಗಬರ್ಿಣಿ ಇರುತ್ತೇನೆ.ಹೀಗಿದ್ದು ನಾನು ಮತ್ತು ನನ್ನ ಗಂಡನಾದ ಶೇಖಪ್ಪ ತಂದೆ ಹಣಮಂತ್ರಾಯ ಇಬ್ಬರು ಉಪಜೀವನಕ್ಕಾಗಿ ಶಹಾಪೂರಕ್ಕೆ ಸುಮಾರು 1 ವರ್ಷ 6 ತಿಂಗಳ ಹಿಂದೆ ಬಂದು ನನ್ನ ಗಂಡ ಶೇಖಪ್ಪ ಈತನು ಎಗ್ಗ ರೈಸ ಬಂಡಿ ಇಟ್ಟುಕೊಂಡಿದ್ದನು. ನಾನು ಟೇಲರ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದು ಇರುತ್ತದೆ. ಇತ್ತಿಚೆಗೆ ನನ್ನ ಗಂಡನಾದ ಶೇಖಪ್ಪ ಈತನು ನನಗೆ ನಿನು ಸರಿಯಾಗಿಲ್ಲ ನಿನಗೆ ಅಡುಗೆ ಮಾಡಲು ಬರುವುದಿಲ್ಲಾ ನಿನು ನನಗೆ ತಕ್ಕ ಹೆಂಡತಿ ಅಲ್ಲಾ ಅಂತ ಕಿರುಕುಳ ಕೊಡುತ್ತಿದ್ದು. ನನಗೆ ಸೂಳಿ ಮಂಜಿ ನಿನ್ನ ನಡತೆ ಸರಿ ಇಲ್ಲಾ ಅಂತ ಅವಾಚ್ಯವಾಗಿ ಬೈಯುವದು ಮಾಡುತ್ತಿದ್ದನು, ಮತ್ತು ನನ್ನ ಮೈದುನರಾದ ಶರಣಪ್ಪ ತಂದೆ ಹಣಮಂತ್ರಾಯ ಸುರಪೂರ, ಯಂಕಪ್ಪ ತಂದೆ ಹಣಮಂತ್ರಾಯ ಸುರಪೂರ ಇವರು ಆಗಾಗ ಮನೆಗೆ ಬಂದಾಗ ನಿನು ನಮ್ಮ ಅಣ್ಣನಿಗೆ ತಕ್ಕ ಹೆಂಡತಿ ಅಲ್ಲ ನೀನು ಸರಿಯಾಗಿಲ್ಲಾ ಅಂತ ಕಿರುಕುಳ ಕೊಡುತ್ತಿದ್ದರು. ಆಗ ನನ್ನ ತಾಯಿಯಾದ ಬಾಗಮ್ಮ ಗಂಡ ಶಿವಪ್ಪ ಮೋಟಗಿ ಇವರು ನನ್ನ ಮನೆಗೆ ಬಂದಾಗ ನನ್ನ ಗಂಡ ನನ್ನ ಮೈದುನದರು ಕಿರುಕುಳ ಕೊಡುತ್ತಿದ್ದ ಬಗ್ಗೆ ನಾನು ತಿಳಿಸುತ್ತಿದೆನು. ಆಗ ನನ್ನ ತಾಯಿ ನಮಗೆ ಚೆನ್ನಾಗಿ ಸಂಸಾರ ಮಾಡಲು ಮತ್ತು ಚೆನ್ನಾಗಿ ಇರಲು ಬುದ್ದಿಮಾತು ಹೇಳುತ್ತಿದ್ದಳು. ನಾನು ಹೋಗಲಿ ಅಂತ ಸುಮ್ಮನಾಗಿ ನನ್ನ ಗಂಡನೊಂದಿಗೆ ಚೆನ್ನಾಗಿ ಸಂಸಾರ ಮಾಡಿಕೊಂಡು ಹೊಗುತ್ತಿದ್ದೆನು. ನನ್ನ ಗಂಡನು ಮತ್ತು ನನ್ನ ಮೈದುನದವರು ಕಿರುಕುಳ ಕೊಡುವುದು ಬಿಟ್ಟಿರಲಿಲ್ಲಾ. ಸುಮಾರು 2 ತಿಂಗಳಿಂದ ನನ್ನ ಗಂಡನು ನನಗೆ ಬಿಟ್ಟು ಹೋಗಿದ್ದನು.ಇಂದು ದಿನಾಂಕ 22/06/2022 ರಂದು ಸಾಯಂಕಾಲ ನಾನು ಮತ್ತು ನನ್ನ ತಾಯಿ ಬಾಗಮ್ಮ ಇಬ್ಬರು ಕುಂಬಾರ ಓಣಿಯ ಉಮಾ ಆಸ್ಪತ್ರೆಯ ಹತ್ತಿರ ಇದ್ದಾಗ ನನ್ನ ಗಂಡ ಶೇಖಪ್ಪ, ಮತ್ತು ನನ್ನ ಮೈದುನರವರಾದ ಶರಣಪ್ಪ ತಂದೆ ಹಣಮಂತ್ರಾಯ ಸುರಪೂರ, ಯಂಕಪ್ಪ ತಂದೆ ಹಣಮಂತ್ರಾಯ ಸುರಪೂರ ಇವರು ಬಂದು ನನಗೆ ನಿನು ಸರಿಯಾಗಿ ಇಲ್ಲಾ, ನಿನ್ನ ನಡತೆ ಸರಿಯಾಗಿಲ್ಲಾ ಬಾ ನ್ಯಾಯಮಾಡಬೆಕು ಅಂತ ಕರೆದರು ಆಗ ನಾನು ಸರಿ ಬರುತ್ತೇನೆ ಅಂತ ಹೇಳಿ ನಾನು ಮತ್ತು ನನ್ನ ತಾಯಿ ಬಾಗಮ್ಮ ಇಬ್ಬರು ಅವರೊಂದಿಗೆ ಹೋಗಿ ಬಸವೇಶ್ವರ ನಗರದ ಅಯ್ಯಣ್ಣ ಕನ್ಯಾಕೊಳ್ಳೂರ ಇವರ ಮನೆಯ ಹತ್ತಿರ ಸಾಯಂಕಾಲ 4-30 ಗಂಟೆಗೆ ಹೊದೆವು ಆಗ ನನ್ನ ಗಂಡ ಶೇಖಪ್ಪ ಮತ್ತು ನನ್ನ ಮೈದುನದವರಾದ ಶರಣಪ್ಪ, ಯಂಕಪ್ಪ, ಇವರು ನನಗೆ ಮಂಜಿ ಸೂಳಿ ನಿನಗೆ ಅಡುಗೆ ಮಾಡಲು ಬರುದಿಲ್ಲಾ ನಿನ್ನ ನಡತೆ ಸರಿ ಇಲ್ಲಾ ನಿನ್ನ ತವರು ಮನಿಗೆ ಹೋಗು ಇಲ್ಲಿ ಇರಬೇಡಾ ಇಲ್ಲಿ ಇದ್ದರೆ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಅಂತ ಜೀವ ಬೆದರಿಕೆ ಹಾಕಿದರು. ಆಗ ನನ್ನ ತಾಯಿ ಅವರಿಗೆ ಈರಿತಿ ಮಾತನಾಡುವುದು ಸರಿ ಅಲ್ಲಾ ಅಂತ ಬುದ್ದಿಮಾಡು ಹೇಳಿದಳು. ಸದರಿ ಜಗಳವು 4-30 ಗಂಟೆಯ ಸುಮಾರಿಗೆ ಅಯ್ಯಣ್ಣ ಕನ್ಯಾಕೊಳ್ಳೂರ ಇವರ ಮನೆಯ ಹತ್ತಿರ ಜರುಗಿರುತ್ತದೆ. ಆಗ ನಾನು ಮತ್ತು ನನ್ನ ತಾಯಿ ನಮ್ಮ ಮನೆಗೆ ಬಂದೆವು ಸದರಿ ವಿಷಯವನ್ನು ನನ್ನ ಮನಸಿನ ಮೇಲೆ ತೆಗೆದುಕೊಂಡು ಮನನೊಂದು ಮನೆಯಲ್ಲಿ ಹೆನಿನ ಪುಡಿಯನ್ನು ಕುಡಿದಿರುತ್ತೇನೆ. ನಂತರ ನನ್ನ ತಾಯಿಗೆ ನಾನು ಹೇನಿನ ಪುಡಿಯನ್ನು ಕುಡಿರುತ್ತೇನೆ ಅಂತ ತಿಳಿಸಿದಾಗ ನನ್ನ ತಾಯಿ ಬಾಗಮ್ಮ ಇವಳು ನನಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರ ಕುರಿತು ಸೇರಿಕೆ ಮಾಡಿದ್ದರಿಂದ ಉಪಚಾರ ಪಡೆಯುತ್ತಿದ್ದೆನೆ.ಕಾರಣ ನನಗೆ ವಿನಾಕಾರಣ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರಕುಳ ನೀಡಿ ಅವಾಚ್ಚ ಶಬ್ದಗಳಿಂದ ಬೈದು ಜೀವದ ಭಯ ಹಾಕಿದ ನನ್ನ ಗಂಡ ಶೇಖಪ್ಪ, ನನ್ನ ಮೈದುನರಾದ ಶರಣಪ್ಪ, ಯಂಕಪ್ಪ, ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೆಕು ಅಂತ ಹೇಳಿಕೆಯ ಸಾರಾಂಶದ ಮೆಲಿಂದ ಠಾಣೆಯ ಗುನ್ನೆ ನಂ 110/2022 ಕಲಂ 498(ಎ),504,506,ಸಂ, 34 ಐ,ಪಿ,ಸಿ, ನ್ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಗೆ ಕೈಕೊಂಡೆನು
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 45/2022 78(3) ಕೆ.ಪಿ.ಆ್ಯಕ್ಟ್: : ಇಂದು ದಿನಾಂಕ: 23/06/2022 ರಂದು 5.15 ಪಿ.ಎಮ್ ಕ್ಕೆ ಸಾಯಂಕಾಲ ಗೋಗಿಪೇಠ ಗ್ರಾಮದ ಬಸ್ ನಿಲ್ದಾಣದ ಹತ್ತಿರ ರೋಡಿನ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಪಿ.ಎಸ್.ಐ ರವರಿಗೆ ಬಾತ್ಮಿ ಬಂದಿದ್ದರಿಂದ ಪಿ.ಎಸ್.ಐ ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ 5.40 ಪಿಎಮ್ ಕ್ಕೆ ದಾಳಿ ಮಾಡಿ ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ಅಶೋಕ ತಂದೆ ಸಾಬಯ್ಯ ಗುತ್ತೇದಾರ, ವ:52ವರ್ಷ, ಜಾ:ಈಳಿಗೇರ, ಉ:ಒಕ್ಕಲುತನ, ಸಾ:ಗೋಗಿಪೇಠ, ತಾ:ಶಹಾಪೂರ ಈತನಿಗೆ ಹಿಡಿದು ಸದರಿಯವನಿಂದ ನಗದು ಹಣ 1050/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ 5.40 ಪಿಎಮ್ ದಿಂದ 06.40 ಪಿ.ಎಮ್ ವರೆಗೆ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 45/2022 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಕೊಡೆಕಲ್ಲ ಪೊಲೀಸ್ ಠಾಣೆ:-
ಗುನ್ನೆ ನಂ: 48/2022 ಕಲಂ: 323, 324, 504, 506 ಸಂಗಡ 34 ಐಪಿಸಿ : ಇಂದು ದಿನಾಂಕ:23.06.2022 ರಂದು 12:30 ಪಿ.ಎಮ್ ಕ್ಕೆ ಪಿಯರ್ಾದಿ ಶ್ರೀ ಬಸವರಾಜ ತಂದೆ ಸ್ವಾಮಣ್ಣ ಮುಂಡರಗಿ ವ:30 ವರ್ಷ ಉ:ಒಕ್ಕಲುತನ ಜಾ:ಹಿಂದೂ ಬೇಡರ ಸಾ:ಗೊಲ್ಲಪಲ್ಲೇರದೊಡ್ಡಿ ಕಕ್ಕೇರಾ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ನಾನು ಹಾಗೂ ಪರಮೇಶ, ಪರಮಾತ್ಮ ಅಂತ ಮೂರು ಜನ ಗಂಡು ಮಕ್ಕಳಿದ್ದು ನಾನು ತಂದೆ ತಾಯಿಯವರೊಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ಇದ್ದು ನನ್ನ ತಮ್ಮನಾದ ಪರಮೇಶ ಮುಂಡರಗಿ ಇತನು ಈಗ 3 ವರ್ಷಗಳಿಂದ ಬುಂಕಲದೊಡ್ಡಿಯ ಮಾನಪ್ಪ ತಂದೆ ಮಾಳಪ್ಪ ಬಾಂಬೆದವರ ರವರ ಜೆಸಿಬಿಯ ಚಾಲಕನಾಗಿ ಕೆಲಸ ಮಾಡುತ್ತಿರುವನು. ಈಗ 20 ದಿನಗಳಿಂದ ನನ್ನ ತಮ್ಮ ಪರಮೇಶನು ತಾನು ನಡೆಸುವ ಜೆಸಿಬಿಯನ್ನು ಬಾಡಿಗೆಗಾಗಿ ದುಡಿಸಲು ಗೋನಾಟ್ಲರ್ದೊಡ್ಡಿಗೆ ತಂದಿದ್ದು ನನ್ನ ತಮ್ಮ ಪರಮೇಶನು ದಿನಾಲೂ ರಾತ್ರಿ ಮನೆಗೆ ಬಂದು ಮತ್ತೆ ಬೆಳಿಗ್ಗೆ ಜೆಸಿಬಿ ನಡೆಸಲು ಹೋಗುತ್ತಿದ್ದು ನಿನ್ನೆ ದಿನಾಂಕ 22.06.2022 ರಂದು ಬೆಳಿಗ್ಗೆ 06:00 ಗಂಟೆಗೆ ನನ್ನ ತಮ್ಮನು ಜೆಸಿಬಿ ನಡೆಸಲು ಗೋನಾಟ್ಲರ್ದೊಡ್ಡಿಯ ಹಣಮಂತ ತಂದೆ ದೇವಣ್ಣ ಗೋನಾಟ್ಲರ್ ರವರ ಹೊಲಕ್ಕೆ ಹೋಗಿದ್ದು ಇರುತ್ತದೆ. ಹೀಗಿರುವಾಗ ನಿನ್ನೆ ದಿನಾಂಕ 22.06.2022 ರಂದು ಸಾಯಂಕಾಲ 8:00 ಗಂಟೆಯ ಸುಮಾರಿಗೆ ನಾನು ನನ್ನ ತಂದೆ ಸ್ವಾಮಣ್ಣ ತಾಯಿ ದ್ಯಾಮವ್ವ ರವರೊಂದಿಗೆ ನಮ್ಮ ಮನೆಯಲ್ಲಿದ್ದಾಗ ಜೆಸಿಬಿ ನಡೆಸಲು ಹೋದ ನನ್ನ ತಮ್ಮ ಪರಮೇಶನು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ ನಾನು ನನ್ನ ಜೆಸಿಬಿ ಕೆಲಸ ಮುಗಿಸಿಕೊಂಡು ಬುಂಕಲದೊಡ್ಡಿಗೆ ಹೋಗಬೇಕೆಂದು ನನ್ನ ಜೆಸಿಬಿ ನಂ:36 ಎನ್:8743 ನೇದ್ದನ್ನು ನಡೆಯಿಸಿಕೊಂಡು ಗೋಜಗಾರದೊಡ್ಡಿಯ ಸ್ವಾಮಣ್ಣ ತಂದೆ ನಿಂಗಪ್ಪ ಬುಳ್ಳರ ರವರ ಮನೆಯ ಪಕ್ಕದ ರಸ್ತೆಯ ಮೇಲಿಂದ ಹೋಗುತ್ತಿರುವಾಗ ಸ್ವಾಮಣ್ಣ ತಂದೆ ನಿಂಗಪ್ಪ ಬುಳ್ಳರ ರವರ ಮನೆಯ ಮುಂದಿನ ರಸ್ತೆಯ ಮೇಲೆ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಮದುವೆಯ ಹಂದರದ ತಪ್ಪಲು ತುಂಬಿಕೊಂಡು ಹೋಗುತ್ತಿದ್ದು ನಾನು ಅವರಿಗೆ ದಾರಿ ಬಿಡಲು ಜೆಸಿಬಿಯ ಹಾರ್ನ ಹೊಡೆದರೂ ಕೂಡ ದಾರಿ ಬಿಡದೇ ಇದ್ದು ಆಗ ನಾನು ಕೆಳಗೆ ಇಳಿದು ನಾನು ಮುಂದೆ ಹೋಗುತ್ತೇನೆ ದಾರಿ ಬಿಡಿರಿ ಅಂತ ಅಂದಾಗ ಸ್ವಾಮಣ್ಣ ತಂದೆ ನಿಂಗಪ್ಪ ಬುಳ್ಳರ, ಭೀಮಣ್ಣ ತಂದೆ ಸ್ವಾಮಣ್ಣ ಬುಳ್ಳರ ಸಾ:ಇಬ್ಬರೂ ಗೋಜಗಾರದೊಡ್ಡಿ ಹಾಗೂ ಸ್ವಾಮಣ್ಣ ತಂದೆ ಹುಲಗಪ್ಪ ಗುಗಲಗಟ್ಟಿ, ಚನ್ನಬಸಪ್ಪ ತಂದೆ ಹುಲಗಪ್ಪ ಗುಗಲಗಟ್ಟಿ ಸಾ:ಇಬ್ಬರೂ ಗುಗಲಗಟ್ಟಿ ಇವರೆಲ್ಲರೂ ನನಗೆ ಸೂಳೆ ಮಗನೇ ನಾವು ದಾರಿ ಬಿಡುವದಿಲ್ಲ ಏನ್ ಶಂಟ ಹರಕೊತಿದೀ ಅಂತ ಬೈದು ತಕರಾರು ಮಾಡುತ್ತಿದ್ದಾರೆ ಕೂಡಲೇ ಬಾ ಅಂತ ತಿಳಿಸಿದ್ದರಿಂದ ನಾನು ಮನೆಯಿಂದ ಹೊರಟು ಹೋಟೆಲ್ ಮುಂದೆ ಕುಳಿತಿದ್ದ ನನಗೆ ಮಾವಂದಿರಾಗಬೇಕಾದ ಯಂಕಪ್ಪ ತಂದೆ ಬಸಪ್ಪ ಗೋನಾಟ್ಲರ್ ಮತ್ತು ಅಂಬ್ರಪ್ಪ ತಂದೆ ಬಸಪ್ಪ ಗೋನಾಟ್ಲರ್, ಹಣಮಂತ ತಂದೆ ದೇವಣ್ಣ ಗೋನಾಟ್ಲರ್ ಸಾ:ಎಲ್ಲರೂ ಗೋನಾಟ್ಲರ್ದೊಡ್ಡಿ ಎಲ್ಲರೂ ಕೂಡಿ ಮೋಟರ್ ಸೈಕಲ್ಗಳ ಮೇಲೆ ನನ್ನ ತಮ್ಮನು ಪೋನ್ ಮಾಡಿದ ಗೋಜಗಾರದೊಡ್ಡಿಯ ಸ್ವಾಮಣ್ಣ ತಂದೆ ನಿಂಗಪ್ಪ ಬುಳ್ಳರ ರವರ ಮನೆಯ ಹತ್ತಿರ ಹೋಗಿ ನೋಡಲಾಗಿ ಅಲ್ಲಿ ನನ್ನ ತಮ್ಮ ಪರಮೇಶನು ಇದ್ದು ಅವನಿಗೆ ಸ್ವಾಮಣ್ಣ ತಂದೆ ನಿಂಗಪ್ಪ ಬುಳ್ಳರ, ಭೀಮಣ್ಣ ತಂದೆ ಸ್ವಾಮಣ್ಣ ಬುಳ್ಳರ ಸಾ:ಇಬ್ಬರೂ ಗೋಜಗಾರದೊಡ್ಡಿ ಹಾಗೂ ಸ್ವಾಮಣ್ಣ ತಂದೆ ಹುಲಗಪ್ಪ ಗುಗಲಗಟ್ಟಿ, ಚನ್ನಬಸಪ್ಪ ತಂದೆ ಹುಲಗಪ್ಪ ಗುಗಲಗಟ್ಟಿ ಸಾ:ಇಬ್ಬರೂ ಗುಗಲಗಟ್ಟಿ ಇವರೆಲ್ಲರೂ ಅವಾಚ್ಛ ಶಬ್ದಗಳಿಂದ ಬೈಯುತ್ತಿದ್ದು ಆಗ ನಾವು ನನ್ನ ತಮ್ಮನಿಗೆ ಯಾಕೆ ಬೈಯುತ್ತಿರಿ ಅಂತ ಅವರಿಗೆ ಕೇಳಿದಾಗ ಅವರೆಲ್ಲರೂ ನಮಗೆ ಸೂಳೆ ಮಕ್ಕಳೇ ಪರಮ್ಯಾನಿಗೆ ಬಿಡಿಸಿಕೊಳ್ಳಲಿಕ್ಕೆ ಬಂದಿರೆನಲೇ ಅಂತ ಬೈದವರೇ ಅವರಲ್ಲಿಯ ಭೀಮಣ್ಣ ತಂದೆ ಸ್ವಾಮಣ್ಣ ಬುಳ್ಳರ ಇತನು ನನ್ನ ತಮ್ಮ ಪರಮೇಶನ ಬಲಗೈ ಮುಡ್ಡಿಯ ಮೇಲೆ ಕಲ್ಲಿನಿಂದ ಹೊಡೆದು ಒಳಪೆಟ್ಟು ಮಾಡಿದ್ದು ಸ್ವಾಮಣ್ಣ ತಂದೆ ಹುಲಗಪ್ಪ ಇತನು ನನ್ನ ತಮ್ಮನಿಗೆ ನೆಲಕ್ಕೆ ಕೆಡವಿ ಕಾಲಿನಿಂದ ಹೆಡಕಿನ ಮೇಲೆೆ ಒದ್ದು ತುಳಿದು ಗುಪ್ತಗಾಯ ಪಡಿಸಿದ್ದು, ಚನ್ನಬಸಪ್ಪ ತಂದೆ ಹುಲಗಪ್ಪ ಇತನು ನನ್ನ ತಮ್ಮ ಪರಮೇಶನ ಬೆನ್ನಿನ ಮೇಲೆ ಒದ್ದು ತುಳಿದು ಒಳಪೆಟ್ಟು ಮಾಡಿದ್ದು ಆಗ ನಾನು ಬಿಡಿಸಲು ಹೋದಾಗ ಸ್ವಾಮಣ್ಣ ತಂದೆ ನಿಂಗಪ್ಪ ಬುಳ್ಳರ ಇತನು ನನ್ನ ಬಲಗಾಲ ತೊಡೆಯ ಮೇಲೆ ಒದ್ದು ಒಳಪೆಟ್ಟು ಮಾಡಿದ್ದು ಆಗ ನಾನು ನನ್ನ ತಮ್ಮ ನಮ್ಮನ್ನು ಉಳಿಸಿರಪ್ಪೋ ಅಂತ ಚೀರಾಡ ಹತ್ತಿದಾಗ ನನ್ನ ಜೊತೆಗೆ ಬಂದಿದ್ದ ನಮ್ಮ ಮಾವಂದಿರಾದ ಯಂಕಪ್ಪ ತಂದೆ ಬಸಪ್ಪ ಗೋನಾಟ್ಲರ್ ಮತ್ತು ಅಂಬ್ರಪ್ಪ ತಂದೆ ಬಸಪ್ಪ ಗೋನಾಟ್ಲರ್, ಹಣಮಂತ ತಂದೆ ದೇವಣ್ಣ ಗೋನಾಟ್ಲರ್ ಇವರುಗಳು ನೋಡಿ ಬಿಡಿಸಿದ್ದು ಹೋಗುವಾಗ ಅವರೆಲ್ಲರೂ ನನಗೆ ಮತ್ತು ನನ್ನ ತಮ್ಮನಿಗೆ ಸೂಳೆ ಮಕ್ಕಳೆ ಇವತ್ತು ನಮ್ಮ ಕೈಯಲ್ಲಿ ಉಳಿದುಕೊಂಡಿರಿ ಇನ್ನೊಂದು ಸಲ ಸಿಕ್ಕಾಗ ಜೀವಂತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು ನಂತರ ನಿನ್ನೆ ದಿನ ರಾತ್ರಿ ನನ್ನ ತಮ್ಮ ಪರಮೇಶನಿಗೆ ನಾನು ಮತ್ತು ಜಗಳ ಬಿಡಿಸಿದ ಮೇಲೆ ನಮೂದಿಸಿದ ನನ್ನ ಮಾವಂದಿರು ಕೂಡಿ ಉಪಚಾರಕ್ಕಾಗಿ ಕಕ್ಕೇರಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಕಕ್ಕೇರಾ ವೈದ್ಯರು ನನ್ನ ತಮ್ಮನಿಗೆ ಪ್ರಥಮ ಉಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಲಿಂಗಸೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಸುದ್ದಿ ತಿಳಿದು ಕಕ್ಕೇರಾ ಸರಕಾರಿ ಆಸ್ಪತ್ರೆಗೆ ಬಂದಿದ್ದ ನನ್ನ ತಂದೆತಾಯಿ ರವರು ನನ್ನ ತಮ್ಮನಿಗೆ ನಿನ್ನೆ ದಿನ ರಾತ್ರಿ ಲಿಂಗಸೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನನ್ನ ತಮ್ಮನು ಇನ್ನೂ ಲಿಂಗಸೂರು ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು ಈ ಘಟನೆಯಲ್ಲಿ ನನಗೆ ಅಷ್ಟೇನೂ ಪೆಟ್ಟಾಗಿರುವದಿಲ್ಲ ಉಪಚಾರಕ್ಕಾಗಿ ಆಸ್ಪತ್ರೆಗೆ ಹೋಗುವದಿಲ್ಲ ನಿನ್ನೆಯ ದಿನ ರಾತ್ರಿಯಾಗಿದ್ದರಿಂದ ಈ ದಿವಸ ವಿಚಾರ ಮಾಡಿ ತಡವಾಗಿ ಬಂದು ದೂರು ಕೊಡುತ್ತಿದ್ದು ಕಾರಣ ನನಗೆ ಹಾಗೂ ನನ್ನ ತಮ್ಮನಿಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 4 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:48/2022 ಕಲಂ: 323, 324, 504, 506 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು
ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 22/2022 ಕಲಂ: 87 ಕೆ.ಪಿ ಯಾಕ್ಟ್: ಇಂದು ದಿನಾಂಕ: 23/06/2022 ರಂದು 8:30 ಪಿ.ಎಂ.ಕ್ಕೆ ಸಕರ್ಾರಿ ತಫರ್ೇ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಫನ ಪತ್ರ ನೀಡಿದ್ದು ಇದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ದಿನಾಂಕ: 23/06/2022 ರಂದು 5:30 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗ ರಾಯನಗೋಳ ಗ್ರಾಮದ ಅಂಗನವಾಡಿ ಕೇಂದ್ರದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎನ್ನುವ ಇಸ್ಪೀಟ ಜೂಜಟ ಆಡುತ್ತಿದ್ದಾರೆ ಅಂತಾ ಪೊಲೀಸ್ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿದ್ದು, ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವಂತೆ ಮಾನ್ಯ ಜೆ.ಎಂ.ಎಪ್.ಸಿ ನ್ಯಾಯಾಲಯ ಸುರಪೂರ ರವರಲ್ಲಿ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 22/2022 ಕಲಂ 87 ಕೆಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.
ಸಿಕ್ಕ ಆರೋಪಿತರ ಹೆಸರು ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
1) ಹಣಮಪ್ಪ ತಂದೆ ಚಂದಪ್ಪ ದೇಸಾಯಿ ವಯ:27 ವರ್ಷ,ಉ:ಕೂಲಿ ಜಾಹಿಂದೂ ದೊರೆ, ಸಾ:ರಾಯನಗೋಳ ತಾ:ಹುಣಸಗಿ,
2) ನಾಗಪ್ಪ ತಂದೆ ಗದ್ದೆಪ್ಪ ಗೌಡರ ವಯ:40 ವರ್ಷ, ಉ: ಕೂಲಿ ಜಾ:ಹಿಂದೂ ಬೇಡರ, ಸಾ:ರಾಯನಗೋಳ ತಾ:ಹುಣಸಗಿ,
ಓಡಿ ಹೋದ ಆರೋಪಿತರ ಹೆಸರು ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
1)ಬಸಣ್ಣ ತಂದೆ ಹಣಮಂತ ಚೌಧರಿ ವ: 45 ವರ್ಷ ಉ:ಕೂಲಿ ಜಾ:ಹಿಂದೂ ಬೇಡರ, ಸಾ:ರಾಯನಗೋಳ ತಾ:ಹುಣಸಗಿ,
2)ಸಾಯಬಣ್ಣ ತಂದೆ ಹಣಮಪ್ಪ ಗೌಡರ ವ: 35 ವರ್ಷ ಉ:ಕೂಲಿ ಜಾ:ಹಿಂದೂ ಬೇಡರ, ಸಾ:ರಾಯನಗೋಳ ತಾ:ಹುಣಸಗಿ,
3)ಬಸಪ್ಪ ತಂದೆ ಅಂಬ್ರಪ್ಪ ಬಿರಾದರ ವ: 35 ವರ್ಷ ಉ:ಕೂಲಿ ಜಾ:ಹಿಂದೂ ಬೇಡರ, ಸಾ:ರಾಯನಗೋಳ ತಾ:ಹುಣಸಗಿ,
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 54/2022 ಕಲಂ: 143, 147, 323, 324, 504, 506 ಸಂಗಡ 149 ಐಪಿಸಿ: ಇಂದು ದಿನಾಂಕ:23/06/2022 ರಂದು ರಾತ್ರಿ 21.00 ಗಂಟೆಗೆ ಶ್ರೀ. ತಿಪ್ಪಣ್ಣ ತಂದೆ ಸೋಮಪ್ಪ ಪೊ.ಪಾಟೀಲ ವಯಾ-25 ವರ್ಷ ಜಾ:ಕುರುಬರ ಉ:ಒಕ್ಕಲುತನ ಸಾ:ಹೆಬ್ಬಾಳ(ಕೆ) ತಾ:ಹುಣಸಗಿ ಜಿಲ್ಲಾ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಟೈಪ್ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಫಿರ್ಯಾದಿಯ ತಂದೆ ಗಾಯಾಳು ಹೆಬ್ಬಾಳ(ಕೆ) ಗ್ರಾಮದ ತನ್ನ ಹೊಲದಲ್ಲಿದ್ದಾಗ, ಆರೋಪಿತರು ತಮ್ಮ ಹತ್ತಿರ ಕರೆಯಿಸಿಕೊಂಡು ಮಗನೆ ಹೊಸ ದಾರಿ ಕೊಡು ಅಂದರೆ, ಹಳೆ ದಾರಿಗೆ ಹೋಗು ಅಂತಿಯೇನು ಅಂತಾ ಜಗಳ ತೆಗೆದು, ಚಿದಾನಂದಪ್ಪ ತಂದೆ ಬಸಣ್ಣ ಮಲ್ಕಾಪೂರ ಈತನು ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದು, ಉಳಿದವರು ಈ ಮಗನಿಗೆ ಬಿಡಬೇಡರಿ ಅಂತಾ ಕೈಯಿಂದ ಹೊಡೆದಿದ್ದು, ಫಿರ್ಯಾದಿಯ ತಂದೆ ಚೀರಾಡಿದಾಗ ಫಿರ್ಯಾದಿ & ಇತರರು ಕೂಡಿ ಅಲ್ಲಿಗೆ ಹೋಗಿ ಜಗಳ ಬಿಡಿಸಿದ್ದು, ಆರೋಪಿತರೆಲ್ಲರೂ ಮಗನೆ ನಿಮ್ಮ ಹೊಲದಲ್ಲಿ ದಾರಿ ಕೊಡಸಿದ್ದರೆ ನಿನಗೆ ಜೀವಂತ ಬಿಡುವದಿಲ್ಲ ಅಂತಾ ಜೀವ ಬೆದರಿಕೆ ಹಾಕುತ್ತಾ ಹೋಗಿದ್ದು, ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.