ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 24-07-2022


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 130/2022 ಕಲಂ: 279, 304(ಎ) ಐ.ಪಿ.ಸಿ ಸಂಗಡ ಕಲಂ 187 ಐ.ಎಂ.ವಿ ಯಾಕ್ಟ: ಇಂದು ದಿನಾಂಕ 23/07/2022 ರಂದು ಸಾಯಂಕಾಲ 6.30 ಪಿ.ಎಂ.ಕ್ಕೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ವಸೂಲಾತಗಿದ್ದರಿಂದ ಸಂಗಡ ತನಿಖಾ ಸಹಾಯಕ ಹೆಚ್.ಸಿ-165 ರವರೊಂದಿಗೆ ಠಾಣೆಯಿಂದ ಹೊರಟು 6.40 ಪಿ.ಎಂ.ಕ್ಕೆ ಆಸ್ಪತ್ರೆಗೆ ಬೇಟಿಕೊಟ್ಟು, ಫಿರ್ಯಾಧಿ ಪ್ರಭುದೇವರಡ್ಡಿ ತಂ/ ರಾಮಣ್ಣಗೌಡ ಹೊಸ್ಮನಿ ಸಾ|| ಉಕ್ಕಿನಾಳ, ಹಾ.ವ|| ಬಾಪುಗೌಡನಗರ, ಶಹಾಪೂರ ರವರ ಫಿಯರ್ಾದಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದಿದ್ದು, ಸದರಿ ಫಿಯರ್ಾದಿ ಹೇಳಿಕೆ ಸಾರಾಂಶದ ಏನೆಂದರೆ, ಇಂದು ದಿನಾಂಕ: 23/07/2022 ರಂದು ಸಾಯಂಕಾಲ 5.00 ಪಿ.ಎಂ. ಸುಮಾರಿಗೆ ನನ್ನ ತಮ್ಮ ಶರಣಗೌಡ ತಂ/ ರಾಮಣ್ಣಗೌಡ ಹೊಸ್ಮನಿ ಈತನು ದಿಗ್ಗಿ ಸಂಗಮೇಶ್ವರ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ತನ್ನ ಹೋಂಡಾ ಸ್ಕೂಟಿ ನಂ. ಕೆಎ-33 ಇ.ಎ-1445 ನೇದ್ದನ್ನು ಚಲಾಯಿಸಿಕೊಂಡು ಮನೆಯಿಂದ ಹೋದನು.
ಸಾಯಂಕಾಲ 6.15 ಪಿ.ಎಂ. ಸುಮಾರಿಗೆ ನನಗೆ ಪರಿಚಯಯದ ಶ್ರೀ ನಾಗಪ್ಪ ತಂ/ ಮರೆಪ್ಪ ನಾಯ್ಕೋಡಿ ಸಾ|| ಗುತ್ತಿಪೇಟ ಶಹಾಪೂರ ಈತನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ಇಂದು 6.05 ಪಿ.ಎಂ. ಸುಮಾರಿಗೆ ನಾನು ಮತ್ತು ಬಸವರಾಜ ತಂ/ ಶರಣಪ್ಪ ಚನ್ನೂರ ಇಬ್ಬರೂ ಕೂಡಿಕೊಂಡು ಶಹಾಪೂರ-ಭೀ.ಗುಡಿ ಮುಖ್ಯ ರಸ್ತೆಯಲ್ಲಿರುವ ಶಹಾಪೂರ ನಗರದ ಸರಕಾರಿ ಪದವಿ ಕಾಲೇಜ್ ಗೇಟ್ ಮುಂದೆ ಮಾತನಾಡುತ್ತಾ ನಿಂತಿದ್ದೆವು, ಅದೇ ಸಮಯಕ್ಕೆ ನಿಮ್ಮ ತಮ್ಮನವರಾದ ಶರಣಗೌಡ ತಂ/ ರಾಮಣ್ಣಗೌಡ ಹೊಸ್ಮನಿ ರವರು ಒಂದು ಸ್ಕೂಟಿಯನ್ನು ಚಲಾಯಿಸಿಕೊಂಡು ಕಾಲೇಜ್ ಪಕ್ಕದಲ್ಲಿರುವ ದಿಗ್ಗಿ ರೋಡಿನಿಂದ ಮೇನ್ ರೋಡ್ ಕಡೆಗೆ ಹೊರಟಿದ್ದರು, ಅದೇ ಸಮಯಕ್ಕೆ ಭೀ.ಗುಡಿ ಕಡೆಯಿಂದ ಒಂದು ಅಶೋಕಾ ಲೈಲ್ಯಾಂಡ್ ಟಿಪ್ಪರ್ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಮ್ಮ ತಮ್ಮನ ಸ್ಕೂಟಿಗೆ ಡಿಕ್ಕಿಪಡಿಸಿದರಿಂದ ನಿಮ್ಮ ತಮ್ಮ ಸ್ಕೂಟಿ ಸಮೇತವಾಗಿ ರೋಡಿನಲ್ಲಿ ಬಿದ್ದ ಪರಿಣಾಮ, ನಿಮ್ಮ ತಮ್ಮನಿಗೆ ತಲೆಯ ಹಿಂದೆ ಎಡ ಸೈಡಿಗೆ ಭಾರೀ ರಕ್ತಗಾಯ, ಎಡ ಕಿವಿಯ ಕೆಳಗೆ, ಬಲ ಹುಬ್ಬಿಗೆ, ಎಡಗೈ ಮೊಳಕೈಗೆ, ಬಲಗಾಲ ತೊಡೆಯ ಚಪ್ಪೆಗೆ, ಬಲಗಾಲ ಮೊಳಕಾಲಿಗೆ ಚಪ್ಪೆಗೆ ತರಚಿದಗಾಯ, ಎಡಗಾಲ ಹೆಬ್ಬೆರಳ ಉಗುರು ಕಿತ್ತಿ ಬಂದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಇಲ್ಲಿಯೇ ಇದ್ದ ಟಿಪ್ಪರ ನಂಬರ ನೋಡಲಾಗಿ ಕೆಎ-32 ಡಿ-5599 ಅಂತಾ ಇದ್ದು, ಅದರ ಚಾಲಕನಿಗೆ ಹೆಸರು ವಿಳಾಸದ ಬಗ್ಗೆ ವಿಚಾರಿಸಲಾಗಿ ತನ್ನ ಹೆಸರು ನಿಂಗಪ್ಪ ಗುಂಟನೂರ ಸಾ|| ದೋರನಹಳ್ಳಿ ಅಂತಾ ಹೇಳಿ ತನ್ನ ಟಿಪ್ಪರ್ ಬಿಟ್ಟು ಓಡಿ ಹೋಗಿರುತ್ತಾನೆ. ಸ್ಥಳಕ್ಕೆ 108 ವಾಹನ ಬಂದ ನಂತರ ತಮ್ಮನನ್ನು ಹಾಕಿಕೊಂಡು ಶಹಾಪುರ ಸರಕಾರಿ ಆಸ್ಪತ್ರೆಗೆ ಬರುತ್ತೇವೆ ನೀವು ಶಹಾಪೂರ ಸರಕಾರಿ ಆಸ್ಪತ್ರೆಗೆ ಬನ್ನಿ ಅಂತಾ ಹೇಳಿದ್ದರಿಂದ ನಾನು ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ತಮ್ಮನಿಗೆ ಮೇಲ್ಕಾಣಿಸಿದಂತೆ ಗಾಯಗಳಾಗಿ ಮೃತಪಟ್ಟಿದ್ದನು. ಅಲ್ಲಿಯೇ ಇದ್ದ, ನಾಗಪ್ಪ ನಾಯ್ಕೋಡಿಗೆ ವಿಚಾರಿಸಲಾಗಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ತಪಾಸಣೆ ಮಾಡಿದ ವೈಧ್ಯರು ಆಸ್ಪತ್ರೆಗೆ ಬರುವುದಕ್ಕಿಂತ ಮೊದಲೇ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಬಗ್ಗೆ ನನಗೆ ಹೇಳಿರುತ್ತಾನೆ.ಕಾರಣ ಅಪಘಾತಪಡಿಸಿ ತನ್ನ ವಾಹನ ಬಿಟ್ಟು ಓಡಿ ಹೋದ ಅಶೋಕಾ ಲೇಲ್ಯಾಂಡ್ ಟಿಪ್ಪರ್.ನಂ. ಕೆಎ-32 ಡಿ-5599 ನೇದ್ದರ ಚಾಲಕ ನಿಂಗಪ್ಪ ಗುಂಟನೂರ ಸಾ|| ದೋರನಹಳ್ಳಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 130/2022 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 58/2022 ಕಲಂ. 279, 283, 304(ಎ) ಐಪಿಸಿ : ದಿನಾಂಕ:23/07/2022 ರಂದು ರಾತ್ರಿ 10.30 ಗಂಟೆಗೆ ವಜ್ಜಲ ಕಡೆಯಿಂದ ಮೃತ ಸಂಗಮೇಶ ಈತನು ತನ್ನ ಮೋಟಾರ್ ಸೈಕಲ್ ನಂ: ಕೆಎ-33 ವಿ-2872 ನೇದ್ದರ ಮೇಲೆ ಹುಣಸಗಿಗೆ ಬರಲು ಹೊರಟಾಗ, ವಜ್ಜಲ ದಾಟಿದ ಮೇಲೆ ರಸ್ತೆಯ ಎಡಗಡೆ ಲಾರಿ ನಂ:ಕೆಎ-33 ಬಿ-2487 ನೇದ್ದರ ಚಾಲಕನು ತನ್ನ ಲಾರಿಯನ್ನು ರಸ್ತೆಯ ಮೇಲೆ ಯಾವುದೇ ಸೂಚನಾ ಪಲಕವಿಲ್ಲದೆ & ರಸ್ತೆಯ ಮೇಲೆ ನಿಲ್ಲಿಸಿದರೆ ಮಾನವ ಜೀವಕ್ಕೆ ಅಪಾಯವಾಗುತ್ತದೆ ಅಂತಾ ಗೊತ್ತಿದ್ದರೂ ಸಹ ಕತ್ತಲಲ್ಲಿ ಲಾರಿ ನಿಲ್ಲಿಸಿದ್ದರಿಂದ, ಮೃತನು ತನ್ನ ಮೋಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಲಾರಿಯ ಹಿಂಬಾಗಕ್ಕೆ ಜೋರಾಗಿ ಡಿಕ್ಕಿ ಕೊಟ್ಟಿದ್ದರಿಂದ ಮೃತನ ತಲೆಯ ಮುಂಬಾಗಕ್ಕೆ ಭಾರಿ ರಕ್ತಗಾಯವಾಗಿ ತಲೆಯ ಪಟ್ಟಿ ಬಿಚ್ಚಿ ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ಅಪರಾಧ.

 

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 87/2022 ಕಲಂ 78(3) ಕೆ.ಪಿ ಎಕ್ಟ್ 1963: ಇಂದು ದಿನಾಂಕ. 23/07/2022 ರಂದು 06-15 ಪಿಎಂಕ್ಕೆ ಶ್ರೀ ಚಂದ್ರಶೇಖರ ಪಿ.ಎಸ್.ಐ ಕಾ.ಸೂ ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜ್ಞಾಪನ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 23/07/2022 ರಂದು 4-00 ಪಿಎಂಕ್ಕೆ ನಾನು ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾರೋ ಒಬ್ಬನು ಯಾದಗಿರಿ ನಗರದ ಹಳೆ ಬಸನಿಲ್ದಾಣದ ಮದನಪೂರಗಲ್ಲಿ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಹೋಗಿ 05-00 ಪಿಎಂಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಪ್ರಕಾಶ ತಂದೆ ಶಂಕರಗೌಡ ವಂದಲ್ಯೋರ ವ: 32 ಜಾತಿ: ಲಿಂಗಾಯಿತ ಉ:ಖಾನಾವಳಿಯಲ್ಲಿ ಕೆಲಸ ಸಾ: ವೀರಭದ್ರೇಶ್ವರ ನಗರ ಯಾದಗಿರಿ. ಅಂತಾ ತಿಳಿಸಿದ್ದು ನಂತರ ಆತನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) 1100=00 ನಗದು ಹಣ 2) ಒಂದು ಮಟಕಾ ಚೀಟಿ ಅಂ.ಕಿ.00-00, 3) ಒಂದು ಬಾಲಪೆನ್ ಅಂ.ಕಿ.00-00 ಸಿಕ್ಕಿದ್ದು ಸದರಿ ಮುದ್ದೆಮಾಲನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 23/07/2022 ರಂದು 05-00 ಪಿಎಂದಿಂದ 06-00 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟಾಪದಲ್ಲಿ ಗಣಕೀಕರಣ ಮಾಡಿ ಮುಗಿಸಿದ್ದು ನಂತರ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿಪಂಚನಾಮೆಯನ್ನು ಮುಗಿಸಿಕೊಂಡು ಮರಳಿ ಠಾಣೆಗೆ 06-15 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿರವರಿಗೆ ಜ್ಞಾಪನಾ ಪತ್ರದೊಂದಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಕೊಟ್ಟ ಜ್ಞಾಪನದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 87/2022 ಕಲಂ.78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 112/2022 ಕಲಂ 78 (3) ಕೆ.ಪಿ ಕಾಯ್ದೆ: ದಿನಾಂಕ: 23-07-2022 ರಂದು ರಾತ್ರಿ 08-05 ಗಂಟೆಗೆ ಶ್ರೀ ರಾಜಕುಮಾರ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಕಟಗಿಶಹಾಪೂರ ಗ್ರಾಮದ ಆಂಜನೇಯ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 540=00 ರೂಪಾಯಿಗಳು, ಮಟಕಾ ಬರೆದ ಚೀಟಿ ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.112/2022 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 86/2022 ಕಲಂ 279, 338 ಐಪಿಸಿ: ಇಂದು ದಿನಾಂಕ 23.07.2022 ರಂದು ಬೆಳಿಗ್ಗೆ 11 ಗಂಟೆಗೆ ಸಿದ್ದಪ್ಪ ತಂದೆ ನಿಂಗಪ್ಪ ಮುಕಡೆ, ವ|| 55 ವರ್ಷ, ಜಾ|| ಕುರುಬರು, ಉ|| ಒಕ್ಕಲುತನ, ಸಾ|| ಕರಣಿಗಿ ಗ್ರಾಮ ಇವರು ಠಾಣೆಗೆ ಬಂದು ಹಾಜರುಪಡಿಸಿದ ಲಿಖಿತ ಕೊಟ್ಟ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ನನ್ನತಮ್ಮ ರಮೇಶ ತಂದೆ ನಿಂಗಪ್ಪ ಮುಕಡೆ ಈತನು ಈಡ್ಲೂರು ಗ್ರಾಮದಲ್ಲಿ ಸಾಗುವಳಿ ಜಮೀನೊಂದನ್ನು ಲೀಜಿಗೆ ಹಾಕಿಕೊಂಡು ಜಮೀನಿನಲ್ಲಿ ಕಬ್ಬು ಬೆಳೆದಿದ್ದಾನೆ. ನಿನ್ನೆ ದಿನಾಂಕ 22.07.2022 ರಂದು ಮಧ್ಯಾಹ್ನ ನನ್ನತಮ್ಮ ರಮೇಶ ಈಡ್ಲೂರು ಗ್ರಾಮದ ಜಮೀನಿಗೆ ಮೋಟಾರ್ ಸೈಕಲ್ ಮೇಲೆ ಹೋಗುವ ಕಾಲಕ್ಕೆ ನಮ್ಮೂರು ಗ್ರಾಮ ಸೀಮಾಂತರದ ಕೆರೆಯ ಪಕ್ಕದ ರಸ್ತೆಯ ಮೇಲೆ ಮೋಟಾರ್ ಸೈಕಲ್ ಮೇಲಿಂದ ಬಿದ್ದು ಗಾಯಗೊಂಡಿದ್ದಾನೆ ಅಂತಾ ನನ್ನತಮ್ಮನ ಮಗ ನನಗೆ ಫೋನ್ಮಾಡಿ ತಿಳಿಸಿದ ತಕ್ಷಣ ನಾನು ನನ್ನತಮ್ಮ ಬಿದ್ದ ಸ್ಥಳಕ್ಕೆ ಹೋಗಿದ್ದೆ. ನನ್ನತಮ್ಮನ ಹಣೆಗೆ ಭಾರಿ ರಕ್ತಗಾಯವಾಗಿ ರೋಡಿನ ಮೇಲೆ ಬಿದ್ದಿದ್ದ. ಅವನ ಅಕ್ಕಪಕ್ಕದಲ್ಲಿ ರಕ್ತ ಹರೆದು ಬೇವಸಾಗಿದ್ದ. ನಮ್ಮೂರಿನವರು ಯಾರೋ 108 ಅಂಬುಲೆನ್ಸ್ಗೆ ಫೋನ್ ಮಾಡಿದ್ದರಿಂದ ಸ್ವಲ್ಪ ಸಮಯದಲ್ಲಿ ಅಂಬುಲೆನ್ಸ್ ಸ್ಥಳಕ್ಕೆ ಬಂತು. ಅಂಬುಲೆನ್ಸ್ನಲ್ಲಿ ಗಾಯಗೊಂಡ ನನ್ನತಮ್ಮನಿಗೆ ಹಾಕಿಕೊಂಡು ಸೈದಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೆವು. ಸೈದಾಪೂರ ವೈದ್ಯಾಧಿಕಾರಿಗಳು ಅಂಬುಲೆನ್ಸ್ ವಾಹನದಲ್ಲೇ ನನ್ನತಮ್ಮನಿಗೆ ಚೆಕ್ಮಾಡಿ ಸೀರೆಸಿದೆ ರಾಯಚೂರು ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ನನ್ನತಮ್ಮನಿಗೆ ರಾಯಚೂರು ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದೆವು.
ರಿಮ್ಸ್ ವೈದ್ಯಾಧಿಕಾರಿಗಳು ನನ್ನತಮ್ಮ ರಮೇಶನಿಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರಿಂದ ಅಂಬುಲೆನ್ಸ್ ವಾಹನದಲ್ಲಿ ನನ್ನತಮ್ಮನ ಹೆಂಡತಿ, ಮಕ್ಕಳು ಆತನಿಗೆ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನಾನು ನಿನ್ನೆರಾತ್ರಿ ಮರಳಿ ನಮ್ಮೂರಿಗೆ ಹೋಗಿದ್ದೆ. ನಿನ್ನೆ ರಾತ್ರಿಯೇ ಠಾಣೆಗೆ ಬಂದು ದೂರು ನೀಡಬೇಕೆಂದರೆ ನಿರಂತರ ಮಳೆ ಇದ್ದ ಕಾರಣ ಬರಲು ಸಾಧ್ಯವಾಗಲಿಲ್ಲ. ನನ್ನತಮ್ಮ ರಮೇಶ ತಂದೆ ನಿಂಗಪ್ಪ ಈತನು ತನ್ನ ಮೋಟಾರ್ ಸೈಕಲ್ ವಾಹನ ನೊಂದಣೆ ಸಂಖ್ಯೆ ಕೆಎ-33-ಎಸ್-8385 ವಾಹನದ ಮೇಲೆ ಸವಾರಿ ಮಾಡುತ್ತ ನಮ್ಮೂರಿನಿಂದ ಈಡ್ಲೂರು ಕಡೆಗೆ ಹೋಗುವ ಕಾಲಕ್ಕೆ ತನ್ನ ವಾಹನ ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ವಾಹನ ನಿಯಂತ್ರಿಸದೆ ನಿನ್ನೆ ದಿನಾಂಕ 22.07.2022 ರಂದು ಮಧ್ಯಾಹ್ನ 12.30 ಗಂಟೆ ಸುಮಾರಿಗೆ ನಮ್ಮೂರಿನ ಕೆರೆಯ ಪಕ್ಕದಲ್ಲಿ ಹಾದೋದ ರಸ್ತೆಯ ಮೇಲೆ ತನ್ನಿಂದ ತಾನೆ ಮೋಟಾರ್ ಸೈಕಲ್ ಮೇಲಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ರಸ್ತೆ ಅಪಘಾತ ಕಾಲಕ್ಕೆ ನನ್ನತಮ್ಮನ ತೆಲೆಗೆ ಭಾರಿ ಪೆಟ್ಟಾಗಿದೆ. ಮತ್ತು ನನ್ನತಮ್ಮನ ಮೋಟಾರ್ ಸೈಕಲ್ ಜಖಂಗೊಂಡಿದೆ. ರಸ್ತೆ ಅಪಘಾತ ನಡೆದೋಗಲು ಕಾರಣಿಭೂತನಾದ ನನ್ನತಮ್ಮ ರಮೇಶ ತಂದೆ ನಿಂಗಪ್ಪ ಮುಕಡೆ, ವ|| 40 ವರ್ಷ, ಜಾ|| ಕುರುಬರು, ಉ|| ಒಕ್ಕಲುತನ, ಸಾ|| ಕರಣಿಗಿ ಗ್ರಾಮ ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ಕೋರಿದೆ ಅಂತಾ ಆಪಾದನೆ.

 

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 87/2022 ಕಲಂ 78 (3) ಕೆ.ಪಿ ಕಾಯ್ದೆ: ದಿನಾಂಕ: 23-07-2022 ರಂದು ಸಾಯಂಕಾಲ 6-45 ಗಂಟೆಗೆ ಪಿ.ಐ ಸಾಹೇಬರು ಠಾಣೆಗೆ ಹಾಜರಾಗಿ ಸೈದಾಪೂರ ಕನಕ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ 1)ಒಂದು ಮಟಕಾ ಬರೆದ ಚೀಟಿ ಅ.ಕಿ 00-00 ರೂ.2) ಒಂದು ಬಾಲಪೆನ್ ಅ.ಕಿ 00-00 ರೂ.3) ಜಪ್ತಿ ನಗದು ಹಣ 1230/-ರೂ ಜಪ್ತಿ ಮಾಡಿಕೊಂಡು ಬಂದು ಮೂಲಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲುಗಳನ್ನು ಹಾಗೂ ಒಬ್ಬ ಆರೋಪಿತನನ್ನು ಠಾಣೆಗೆ ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.87/2022 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 97/2022 ಕಲಂ: 279, 337, 338 ಐಪಿಸಿ: ಇಂದು ದಿನಾಂಕ:23/07/2022 ರಂದು 7-45 ಪಿಎಮ್ ಕ್ಕೆ ಶ್ರೀ ಬಸವರಾಜ ತಂದೆ ಭೀಮಶಪ್ಪ ಸಂಗ್ವಾರ, ವ:30, ಜಾ:ಮಾದರ, ಉ:ಕೂಲಿ ಸಾ:ಮಾಚನೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದು, ನಮ್ಮಣ್ಣನಾದ ತಿಮ್ಮಾರೆಡ್ಡಿ ತಂದೆ ಭೀಮಶಪ್ಪ ಸಂಗ್ವಾರ ಈತನು ಹೆಂಡತಿ-ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿಕೊಂಡಿರುತ್ತೇನೆ. ಹೀಗಿದ್ದು ದಿನಾಂಕ:21/07/2022 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಮ್ಮಣ್ಣನಾದ ತಿಮ್ಮಾರೆಡ್ಡಿ ತಂದೆ ಭೀಮಶಪ್ಪ ಸಂಗ್ವಾರ ಈತನು ಮೋಟರ್ ಸೈಕಲ್ ನಂ. ಕೆಎ 02 ಇಎಫ 2206 ನೇದರ ಹಿಂದಿನ ಗಾಲಿಯ ರಿಮ್ ಹೋಗಿದ್ದರಿಂದ ಹೊಸ ರಿಮ್ ಹಾಕಿಸಲು ಹೊಸ ರಿಮ್ ತನ್ನ ಮಗನಾದ ಅಶೋಕ ತಂದೆ ತಿಮ್ಮಾರೆಡ್ಡಿ ಈತನ ಕೈಯಲ್ಲಿ ಕೊಟ್ಟು ಮೋಟರ್ ಸೈಕಲ್ ಮೇಲೆ ಹಿಂದೆ ಕೂಡಿಸಿಕೊಂಡು ರಿಮ್ ಫಿಟ್ ಮಾಡಿಕೊಂಡು ಬರಲು ಬಿಳ್ಹಾರ ಗ್ರಾಮಕ್ಕೆ ಹೋದನು. ಸಾಯಂಕಾಲ 6-30 ಗಂಟೆ ಸುಮಾರಿಗೆ ನಾನು ನಮ್ಮ ಮನೆ ಹತ್ತಿರ ಇದ್ದಾಗ ನಮ್ಮೂರ ಮೌನೇಶ ತಂದೆ ಬೀರಪ್ಪ ಈತನು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಾನು ಮತ್ತು ಅಯ್ಯಪ್ಪ ಸ್ವಾಮಿ ಇಬ್ಬರೂ ಬಿಳ್ಹಾರಕ್ಕೆ ಹೋಗುತ್ತಿದ್ದಾಗ ಇದಿಗ 6-30 ಪಿಎಮ್ ಸುಮಾರಿಗೆ ನಿಮ್ಮಣ್ಣ ತಿಮ್ಮಾರೆಡ್ಡಿ ಮತ್ತು ಅವನ ಮಗ ಅಶೋಕ ಇಬ್ಬರೂ ಮೋಟರ್ ಸೈಕಲ್ ಮೇಲೆ ಬರುತ್ತಿದ್ದವರಿಗೆ ಬಿಳ್ಹಾರ-ಬೂದನಾಳ ರೋಡ ಬೂದನಾಳ ಹಳ್ಳದ ಬ್ರಿಡ್ಜ್ ಹತ್ತಿರ ಬೂದನಾಳ ಕಡೆಯಿಂದ ಮೋಟರ್ ಸೈಕಲ್ ಸವಾರನು ವೇಗವಾಗಿ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿರುತ್ತಾನೆ. ಇಬ್ಬರೂ ಭಾರಿ ಗಾಯಗೊಂಡಿರುತ್ತಾರೆ ಎಂದು ಹೇಳಿದಾಗ ಗಾಬರಿಯಾದ ನಾನು ಮತ್ತು ನಮ್ಮ ತಮ್ಮನಾದ ರವಿ ತಂದೆ ಭೀಮಶಪ್ಪ ಇಬ್ಬರೂ ಹೋಗಿ ನೋಡಿದೆವು. ಅಪಘಾತದಲ್ಲಿ ನಮ್ಮಣ್ಣ ತಿಮ್ಮಾರೆಡ್ಡಿಗೆ ತಲೆಗೆ ಗುಪ್ತಗಾಯ, ಎಡಕಿವಿಗೆ ರಕ್ತಗಾಯ, ಬಲಗೈ ನಡು ಬೆರಳಿಗೆ ಭಾರಿ ರಕ್ತಗಾಯ ಮತ್ತು ಬಲಗಾಲ ಹೆಬ್ಬೆಟ್ಟಿಗೆ ರಕ್ತಗಾಯವಾಗಿತ್ತು. ನಮ್ಮಣ್ಣನ ಮಗ ಅಶೋಕನಿಗೆ ಬಲಗಾಲ ಮೊಳಕಾಲ ಮತ್ತು ಪಾದದ ಮದ್ಯ ಭಾರಿ ಗುಪ್ತ ಮತ್ತು ರಕ್ತಗಾಯವಾಗಿತ್ತು. ಅಪಘಾತದ ಬಗ್ಗೆ ಮೌನೇಶನಿಗೆ ಕೇಳಿದಾಗ ಅವರು ಹೇಳಿದ್ದೇನಂದರೆ ನಾನು ಮತ್ತು ಅಯ್ಯಪ್ಪ ಸ್ವಾಮಿ ಇಬ್ಬರೂ ಮೋಟರ್ ಸೈಕಲ್ ಮೇಲೆ ಬಿಳ್ಹಾರಕ್ಕೆ ಹೋಗುತ್ತಿದ್ದೇವು. 6-30 ಪಿಎಮ್ ಸುಮಾರಿಗೆ ಬಿಳ್ಹಾರ-ಬೂದನಾಳ ರೋಡ ಬೂದನಾಳ ಬ್ರಿಡ್ಜ್ ಹತ್ತಿರ ನಿಮ್ಮಣ್ಣ ತಿಮ್ಮಾರೆಡ್ಡಿಯು ಮೋಟರ್ ಸೈಕಲ್ ನಂ. ಕೆಎ 02 ಇಎಫ 2206 ರ ಮೇಲೆ ತನ್ನ ಮಗ ಅಶೋಕನಿಗೆ ಕೂಡಿಸಿಕೊಂಡು ಊರಿಗೆ ಬರುತ್ತಿದ್ದಾಗ ನಮ್ಮ ಮುಂದುಗಡೆ ಹಣಮಂತ ತಂದೆ ಹೊನಕೆರೆಪ್ಪ ವಗ್ಗರ ಸಾ:ಬೂದನಾಳ ಈತನು ಮೋಟರ್ ಸೈಕಲ್ ನಂ. ಕೆಎ 33 ಇಸಿ 0811 ನೇದನ್ನು ಬೂದನಾಳ ಕಡೆಯಿಂದ ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಿಮ್ಮಣ್ಣನಿಗೆ ಡಿಕ್ಕಿಪಡಿಸಿರುತ್ತಾನೆ ಎಂದು ಹೇಳಿದನು. ಅಲ್ಲಿಯೇ ಇದ್ದ ಅಪಘಾತಪಡಿಸಿದ ಮೋಟರ್ ಸೈಕಲ್ ಸವಾರನಿಗೆ ಹೆಸರು ವಿಳಾಸ ಕೇಳಿದಾಗ ಹಣಮಂತ ತಂದೆ ಹೊನಕೆರೆಪ್ಪ ವಗ್ಗರ ಸಾ:ಬೂದನಾಳ ಎಂದು ಹೇಳಿದನು. ನಮ್ಮಣ್ಣ ಮತ್ತು ಮಗ ಅಶೋಕನಿಗೆ ಮೇಲಿನಂತೆ ಗಾಯಗಳಾಗಿದ್ದವು. ಅಲ್ಲಿಂದ ನಾವು ವಡಗೇರಾ ಸರಕಾರಿ ಆಸ್ಪತ್ರೆಗೆ ಬಂದು ಪ್ರಥಮ ಉಪಚಾರ ಮಾಡಿಸಿಕೊಂಡು ಅಲ್ಲಿಂದ ಕಲಬುರಗಿಯ ಎ.ಎಸ್.ಎಮ್ ಮಣೂರು ಆಸ್ಪತ್ರೆಗೆ ಹೋಗಿ ಇಬ್ಬರಿಗೆ ಸೇರಿಕೆ ಮಾಡಿರುತ್ತೇವೆ. ಅಲ್ಲಿನ ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾವು ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ಹೇಳಿರುತ್ತೇವೆ. ನಂತರ ನಮ್ಮ ಹಿರಿಯರಿಗೆ ವಿಚಾರ ಮಾಡಿದಾಗ ಅವರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡು ಎಂದು ಹೇಳಿದ್ದರಿಂದ ಈಗ ನಾನು ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತಿದ್ದೇನೆ. ಕಾರಣ ಮೋಟರ್ ಸೈಕಲ್ ಸವಾರ ಹಣಮಂತ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 97/2022 ಕಲಂ: 279, 337, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 


ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 62/2022 ಕಲಂ15(ಎ), 32(3) ಕೆ.ಇ ಎಕ್ಟ್: ಇಂದು ದಿನಾಂಕ:23/07/2022 ರಂದು 4 ಪಿ.ಎಮ್.ಕ್ಕೆಆರೋಪಿತನು ಹುರಸಗುಂಡಗಿಗ್ರಾಮದಲ್ಲಿನತನ್ನ ದಿನಸಿ ಅಂಗಡಿಯ ಮುಂದೆಇರುವ ಸಾರ್ವಜನಿಕಖುಲ್ಲಾಜಾಗದಲ್ಲಿಸರಕಾರದಿಂದಯಾವುದೇ ಪರವಾನಿಗೆಯನ್ನು ಪಡೆಯದೇಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯಕುಡಿಯಲು ಅನುಕೂಲ ಮಾಡಿಕೊಟ್ಟಾಗ ಪಿ.ಎಸ್.ಐರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿ ಸಮಯದಲ್ಲಿಆರೋಪಿತನಿಂದ ಸಿಕ್ಕ ಅಂದಾಜು 491.82/- ರೂಕಿಮ್ಮತ್ತಿನ 1.260 ಲೀಟರ್ ಮದ್ಯವನ್ನು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಕ್ರಮಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

 


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 129/2022 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್: ಇಂದು ದಿನಾಂಕ 23.07.2022 ರಂದು 6 ಎಎಮ್ ಕ್ಕೆ ಮಾನ್ಯ ಪಿಐ ಸಾಹೇಬರು ಶಹಾಪೂರ ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು, ಒಬ್ಬ ಆರೋಪಿ ಹಾಗು ಜಪ್ತಿ ಪಂಚನಾಮೆಯೊಂದಿಗೆ ಒಂದು ವರಧದಿಯನ್ನು ಹಾಜರುಪಡಿಸಿದ್ದು ಸದರಿ ವರಧಿ ಸಾರಾಂಶವೇನಂದರೆ ಇಂದು ದಿನಾಂಕ 23/07/2022 ರಂದು ನಾನು, ಜೊತೆಯಲ್ಲಿ ಜೀಪ್ ನಂ ಕೆಎ-33-ಜಿ-0316 ರ ಚಾಲಕ ರುದ್ರಗೌಡ ಎ.ಪಿ.ಸಿ 34 ರವರೊಂದಿಗೆ ಪಟ್ರೋಲಿಂಗ್ ಕರ್ತವ್ಯ ಕುರಿತು ನಗರದಲ್ಲಿ ತಿರುಗಾಡುತ್ತಾ ಹಳೆ ಬಸ್ ನಿಲ್ದಾಣದ ಹತ್ತಿರ 03-30 ಗಂಟೆಗೆವಿದ್ದಾಗ ಎಮ್.ಕೊಳ್ಳುರ ಗ್ರಾಮದ ಕಡೆಯಿಂದ ಒಂದು ಟಿಪ್ಪರ ಚಾಲಕ ಅಕ್ರಮವಾಗಿ ಮರಳು ತುಂಬಿಕೊಂಡು ಬರುತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ರಾತ್ರಿ ವಿಶೇಷ ಗಸ್ತು ಚೆಕ್ಕಿಂಗ್ ಕರ್ತವ್ಯದಲ್ಲಿದ್ದ ಶ್ರೀ ಸಿದ್ದಾರೂಢ ಎ.ಎಸ್.ಐ, ಭಾಗಣ್ಣ ಪಿ.ಸಿ 194 ರವರಿಗೆ ವಾಕಿ-ಟಾಕಿ ಮೂಲಕ ಬಸವೇಶ್ವರ ವೃತ್ತಕ್ಕೆ ಕರೆಯಿಸಿಕೊಂಡು ಅವರಿಗೆ ಮೇಲ್ಕಂಡ ಬಾತ್ಮಿಯ ವಿಷಯ ತಿಳಿಸಿ ಭಾಗಣ್ಣ ಪಿ.ಸಿ 194 ರವರ ಮಖಾಂತರ ಇಬ್ಬರೂ ಪಂಚರಾದ 1) ಶ್ರೀ ಸಂಗನಗೌಡ ತಂದೆ ಶಿವಯೋಗೆಪ್ಪ ಲಕ್ಕಶೆಟ್ಟಿ, ವಯಸ್ಸು 31 ವರ್ಷ, ಜಾತಿ ಗಾಣಿಗ ಉಃ ಡ್ರೈವರ್ ಕೆಲಸ ಸಾಃ ದೋರನಹಳ್ಳಿ ತಾಃ ಶಹಾಪೂರ 2) ಶ್ರೀ ಅಬ್ದುಲ್ ಭಾಷಾ ತಂದೆ ಲಾಲ್ ಅಹ್ಮದ ಶಿರವಾಳ, ವಯಸ್ಸು 40 ವರ್ಷ, ಜಾತಿ ಮುಸ್ಲಿಂ ಉಃ ಒಕ್ಕಲುತನ ಸಾಃ ಶಿರವಾಳ ಹಾಲಿವಸತಿ ಖವಾಸಪೂರ ಶಹಾಪೂರ ತಾಃ ಶಹಾಪೂರ ಜಿಃ ಯಾದಗಿರಿ ರವರಿಗೆ ವಿಷಯ ತಿಳಿಸಿ ಎಲ್ಲರೂ ಕೂಡಿ ಬಸವೇಶ್ವರ ವೃತ್ತದಿಂದ ವಿಭೂತಿಹಳ್ಳಿ ಕಡೆಗೆ ಹೋಗುವ ರೋಡಿನ ಶಹಾಪೂರ ಪಟ್ಟಣದ ಹೊರವಲಯದಲ್ಲಿ ಹೋಗಿ ಚಾಂದ ಪೆಟ್ರೋಲ್ ಪಂಪ್ ಹತ್ತಿರ ನಿಂತುಕೊಂಡು ಮರಳು ತುಂಬಿಕೊಂಡು ಬರುವ ಟಿಪ್ಪರ ವಾಹನವನ್ನು ನಿಗಾ ಮಾಡುತ್ತಾ ನಿಂತಿದ್ದಾಗ, ಬೆಳಗಿನ ಜಾವ 04-00 ಗಂಟೆಯ ಸುಮಾರಿಗೆ ವಿಭೂತಿಹಳ್ಳಿ ಕಡೆಯಿಂದ ಒಂದು ಟಿಪ್ಪರ ವಾಹನ ಬಂದಿದ್ದು, ಅದರ ನಂಬರ ನೋಡಲಾಗಿ, ಕೆಎ-36-ಸಿ-6121 ನೇದ್ದು ಇದ್ದು, ವಾಹನದ ಅಂ.ಕಿ 10,00000=00 ರೂಪಾಯಿ ಇದ್ದು, ಸದರಿ ಟಿಪ್ಪರನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ ಅಂದಾಜು 4 ಬ್ರಾಸ್ ಮರಳು ತುಂಬಿದ್ದು, ಮರಳಿನ ಅಂ.ಕಿ 12000=00 ರೂಪಾಯಿ ಇರುತ್ತದೆ. ಟಿಪ್ಪರ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲು ಆತನು ತನ್ನ ಹೆಸರು ಭೀಮರಾಯ ತಂದೆ ನಾಗಪ್ಪ ನಾಟೀಕಾರ, ವಯಸ್ಸು 23 ವರ್ಷ ಜಾತಿ ಬೇಡರ, ಉಃ ಚಾಲಕ ಸಾಃ ಮಹಲರೋಜಾ ತಾಃ ಶಹಾಪೂರ ಅಂತಾ ತಿಳಿಸಿದ್ದು ನಂತರ ಆತನಿಗೆ ಮರಳು ಎಲ್ಲಿಂದ ತೆಗೆದುಕೊಂಡು ಬಂದಿದ್ದು, ಹಾಗೂ ಅದಕ್ಕೆ ಸಂಬಂಧಿಸಿದ ಮರಳು ಸಾಗಾಣಿಕೆ ಪರವಾನಿಗೆ ಪತ್ರ ಇತ್ಯಾದಿ ವಿಚಾರಿಸಲು ಯಾವದೇ ರಾಯಲ್ಟಿ ಇರುವದಿಲ್ಲ ಅಂತ ತಿಳಿಸಿದನು. ಅಲ್ಲದೇ ಸದರಿ ಮರಳನ್ನು ನಾನು ದೇವದುರ್ಗ ತಾಲುಕಿನ ಕರಕಳ್ಳಿ ಸೀಮಾಂತರದಲ್ಲಿನ ಸ್ಟಾಕ್ ಯಾಡರ್್ನಿಂದ ತುಂಬಿಕೊಂಡು ಕಲಬುರಗಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತಿದ್ದೇನೆ ಅಂತಾ ಹೇಳಿದನು. ಚಾಲಕನು ತನ್ನ ಸ್ವಂತ ಲಾಭಕ್ಕಾಗಿ ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನ ಮಾಡಿಕೊಂಡು ಮರಳಿಗೆ ಸಂಬಂಧಿಸಿದ ಮರಳು ಸಾಗಾಣಿಕೆ ಪರವಾನಿಗೆ ಪತ್ರ ಪಡೆಯದೇ ಅಕ್ರಮವಾಗಿ ಸಾಗಿಸುತಿದ್ದ ಬಗ್ಗೆ ಕಂಡು ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ಸದರಿ ವಾಹವನವನ್ನು ಇಂದು ದಿನಾಂಕ 23/07/2022 ರಂದು ಬೆಳಗಿನ ಜಾವ 04-10 ಗಂಟೆಯಿಂದ 05-10 ಗಂಟೆಯ ಅವಧಿಯಲ್ಲಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ನಂತರ ಸದರಿ ಮರಳು ತುಂಬಿದ ಟಿಪ್ಪರ ವಾಹನ ಮತ್ತು ಚಾಲಕನ್ನು ವಶಕ್ಕೆ ತೆಗೆದುಕೊಂಡು ಸದರಿ ಟಿಪ್ಪರ ಚಾಲಕನೊಂದಿಗೆ ಠಾಣೆಗೆ ಮುಂಜಾನೆ 05-30 ಗಂಟೆಗೆ ಬಂದಿದ್ದು, ಮರಳು ತುಂಬಿದ ಟಿಪ್ಪರ ವಾಹನ ಮತ್ತು ಚಾಲಕ ಮತ್ತು ಮೂಲ ಜಪ್ತಿ ಪಂಚನಾಮೆಯನ್ನು ವರದಿಯೊಂದಿಗೆ ಹಾಜರ ಪಡಿಸಿದ್ದು, ಟಿಪ್ಪರ ಚಾಲಕನ ವಿರುದ್ಧ ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಕ್ರಮ ಕೈಕೊಳ್ಳುವಂತೆ ಕೊಟ್ಟ ವರಧಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂಬರ 129/2022 ಕಲಂ 379 ಐಪಿಸಿ ಮತ್ತು 44 ಕೆ ಎಮ್ ಎಮ್ ಆರ್ ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 24-07-2022 10:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080