ಅಭಿಪ್ರಾಯ / ಸಲಹೆಗಳು


                                                ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 24-08-2021

ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 21/2021 ಕಲಂ.279, 337, 338, 304(ಎ) ಐಪಿಸಿ & 187 ಐ.ಎಮ್.ವ್ಹಿ ಕಾಯ್ದೆ : ದಿನಾಂಕ:20/04/2021 ರಂದು 16.30 ಗಂಟೆಗೆ ಹುಣಸಗಿ ಸರಕಾರಿ ಆಸ್ಪತ್ರೆಯಿಂದಾ ಪೋನ ಮುಖಾಂತರ ಎಂ.ಎಲ್.ಸಿ ಮಾಹಿತಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ, ಗಾಯಾಳು ಶಿವಶರಣಪ್ಪ ಈತನು ಮಾತನಾಡುವ ಸ್ಥಿತಿಯಲ್ಲಿ ಇರದೇ ಇದ್ದುದ್ದಕ್ಕೆ ಶಿವಶರಣಪ್ಪನೊಂದಿಗೆ ಇದ್ದ ಶಿವಲಿಂಗಪ್ಪ ತಂದೆ ರೇವಣಸಿದ್ದಪ್ಪ ಕುಂಬಾರ ವಯ:64 ವರ್ಷ ಜಾ:ಕುಂಬಾರ ಉ:ಒಕ್ಕಲತನ ಸಾ: ಹೆಬ್ಬಾಳ(ಬಿ) ಈತನಿಗೆ ವಿಚಾರಣೆ ಮಾಡಿ ಹೇಳಿಕೆ ಪಡೆಯಲು ಹೇಳಿಕೆ ನೀಡಿದ್ದೇನೆಂದರೆ, ಇಂದು ದಿ:20/04/2021 ರಂದು ನಮ್ಮಣ್ಣನ ಮಗನಾದ ಶಿವಶರಣಪ್ಪ ಈತನು ತನ್ನ ಮೋಟಾರ್ ಸೈಕಲ್ ನಂ. ಕೆಎ-33 ಆರ್ 515 ನೇದ್ದರ ಮೇಲೆ ತಾಳಿಕೋಟಿಯಿಂದಾ ಹುಣಸಗಿಗೆ ಬರುವಾಗ ಮದ್ಯಾಹ್ನ 3 ಗಂಟೆಯ ಸುಮಾರಿಗೆ ಕುಪ್ಪಿ ಕ್ರಾಸ್ ಸಮೀಪ ಕಲಮಡಿ ಹಳ್ಳದ ಪೂಲಿನ ಮೇಲೆ ಹಿಂದಿನಿಂದಾ ಆರೋಪಿತನು ತನ್ನ ಕಾರನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಶಿವಶರಣಪ್ಪ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಸ್ಥಳದಲ್ಲಿ ಕಾರ ಬಿಟ್ಟು ಓಡಿಹೋಗಿದ್ದು, ಅಪಘಾತದಲ್ಲಿ ಶಿವಶರಣಪ್ಪನಿಗೆ ತೆಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯ ಮತ್ತು ಎರಡು ಕಾಲುಗಳಿಗೆ ತರಚಿದ ರಕ್ತಗಾಯವಾಗಿ ಬೇವೋಷ್ ಆಗಿರುತ್ತಾನೆ. ಕಾರಣ ಕಾರ ಚಾಲಕ ಮೇಲೆ ಕ್ರಮ ಜರುಗಿಸಬೇಕೆಂದು ಇತ್ಯಾದಿ ಹೇಳಿಕೆ ಕೊಟ್ಟಿದ್ದು ಪಡೆದುಕೊಂಡು ಮರಳಿ ಠಾಣೆಗೆ ಬಂದು ಕ್ರಮ ಜರುಗಿಸಿದ್ದು ಇರುತ್ತದೆ. ನಂತರ ಇಂದು ದಿನಾಂಕ:23/08/2021 ರಂದು ಬೆಳಿಗ್ಗೆ 11.00 ಗಂಟೆಗೆ ಫಿರ್ಯಾದಿ ಶ್ರೀ. ಶಿವಲಿಂಗಪ್ಪ ತಂದೆ ರೇವಣಸಿದ್ದಪ್ಪ ಕುಂಬಾರ ಸಾ: ಹೆಬ್ಬಾಳ(ಬಿ) ಈತನು ಠಾಣೆಗೆ ಹಾಜರಾಗಿ ಪುರವಣಿ ಹೇಳಿಕೆ ಕೊಟ್ಟಿದ್ದು ಸಾರಾಂಶವೆನೆಂದರೇ, ದಿನಾಂಕ:24/04/2021 ರಂದು ಅಪಘಾತದಲ್ಲಿ ಗಾಯವಾಗಿದ್ದ ಶಿವಶರಣಪ್ಪ ತಂದೆ ಸಂಗಪ್ಪ ಕುಂಬಾರ ಸಾ:ಹೆಬ್ಬಾಳ(ಬಿ) ತಾ:ಹುಣಸಗಿ ಈತನಿಗೆ ಸಂಜೀವಿನಿ ಸುಪರ್ ಸ್ಪೆಶಲಿಟಿ ಆಸ್ಪತ್ರೆ ವಿಜಯಪೂರದಲ್ಲಿ ಚಿಕಿತ್ಸೆ ಕೊಡಿಸಿ ದಿನಾಂಕ:27/05/2021 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ನಮ್ಮೂರಿಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ಸದರಿಯವನು ಮಾತನಾಡದೆ ಕೋಮಾದಲ್ಲಿದ್ದು, 15 ದಿವಸಗಳಿಗೊಮ್ಮೆ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುತ್ತಿದ್ದು, ಆದರೂ ಸಹ ಕೋಮಾದಲ್ಲಿ ಇದ್ದನು. ಇಂದು ದಿನಾಂಕ:23/08/2021 ರಂದು ಬೆಳಿಗ್ಗೆ 9.00 ಗಂಟೆಗೆ ಅಪಘಾತದಲ್ಲಿ ಆದ ಗಾಯಗಳಿಂದ ಗುಣಮುಖವಾಗದೆ ಶಿವಶರಣಪ್ಪ ತಂದೆ ಸಂಗಪ್ಪ ಕುಂಬಾರ ಸಾ:ಹೆಬ್ಬಾಳ(ಬಿ) ಈತನು ಮನೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಆತನ ಶವವನ್ನು ಹುಣಸಗಿ ಸರಕಾರಿ ಆಸ್ಪತ್ರೆಗೆ ತಂದಿದ್ದು ಇರುತ್ತದೆ. ಕಾರಣ ಮುಂದಿನ ಕ್ರಮ ಕೈಕೊಳ್ಳಬೇಕು ಅಂತಾ ಹೇಳಿಕೆ ಕೊಟ್ಟಿದ್ದು ಇರುತ್ತದೆ. ಕಾರಣ ಸದರಿ ಪ್ರಕರಣದಲ್ಲಿ ಕಲಂ.304(ಎ) ಐಪಿಸಿ ಅಳವಡಿಸಿಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು ಇರುತ್ತದೆ ಅಂತಾ ಪ್ರಕರಣದಲ್ಲಿ ಈ ಶೀಘ್ರವರದಿಯನ್ನು ಸಲ್ಲಿಸಲಾಗುತ್ತಿದೆ.

 

ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 63/2021 ಕಲಂ- 78 (3) ಕೆ.ಪಿ ಯಾಕ್ಟ : ದಿನಾಂಕ:23/08/2021 ರಂದು 17.10 ಪಿ.ಎಮ್ ಕ್ಕೆ, ಶ್ರೀ. ದೌಲತ್ ಎನ್. ಸಿಪಿಐ ಹುಣಸಗಿ ವೃತ್ತ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು ಏನೆಂದರೆ, ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಿಹಾಳ ಗ್ರಾಮದ ಗ್ರಾಮ ಪಂಚಾಯತಿ ಕಾಯರ್ಾಲಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:63/2021 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ ನಂತರ ಸಿಪಿಐ ಸಾಹೇಬರು ಹುಣವಸಗಿ ವೃತ್ತ ರವರು ಸಿಬ್ಬಂದಿಯೊಂದಿಗೆ ಸಾಯಂಕಾಲ 19.45 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 5230/- ರೂ.ಗಳು, 2 ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಆದೇಶ ನೀಡಿದ್ದು ಇರುತ್ತದೆ. ಆರೋಪಿತ ಹೆಸರು 1) ದೇವಿಂದ್ರ ತಂದೆ ಯಮನಪ್ಪ ದೇಸಾಯಿ ವಯಾ-29 ವರ್ಷ, ಜಾ:ಬೇಡರ ಉ:ಮಟಕಾ ಬರೆಯುವದು ಸಾ:ಕೊಳಿಹಾಳ ತಾ:ಹುಣಸಗಿ ಜಿ:ಯಾದಗಿರ ಅಂತಾ ಇರುತ್ತಾನೆ.

 

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 107/2021 ಕಲಂ: 279, 337, 338 ಐಪಿಸಿ : ದಿನಾಂಕ: 23/08/2021 ರಂದು 1-45 ಪಿಎಮ್ ಕ್ಕೆ ಶ್ರೀಮತಿ ಖಾಜಾಬೀ ಗಂಡ ಖಾಜಾಹುಸೇನ ವ:35, ಜಾ:ಮುಸ್ಲಿಂ, ಉ:ಹೊಲಮನೆ ಕೆಲಸ ಸಾ:ದೇವರ ಗುಂಡಗುತರ್ಿ ತಾ:ದೇವದುರ್ಗ, ಜಿ:ರಾಯಚೂರು ಹಾ:ವ:ಗಂಜ ಏರಿಯಾ ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನಗೆ 3 ಜನ ಹೆಣ್ಣು ಮಕ್ಕಳು ಮತ್ತು ಇಬ್ಬರೂ ಗಂಡು ಮಕ್ಕಳು ಹೀಗೆ ಒಟ್ಟು 5 ಜನ ಮಕ್ಕಳಿರುತ್ತಾರೆ. ನನ್ನ ಗಂಡನು ಲಾರಿ ನಡೆಸುತ್ತಿದ್ದು, ನಾವು ಸದ್ಯ ಮಕ್ಕಳೊಂದಿಗೆ ಯಾದಗಿರಿಯ ಗಂಜ ಏರಿಯಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತೇವೆ. ಹೀಗಿದ್ದು ನನ್ನ ಹಿರಿಮಗಳಾದ ನಫಿಲಾ ವ:18 ವರ್ಷ ಇವಳು ಸುಮಾರು 4-5 ದಿವಸಗಳ ಹಿಂದೆ ತನ್ನ ಅಜ್ಜಿ-ಅಜ್ಜ ಹತ್ತಿರ ದೇವರ ಗುಂಡಗುತರ್ಿಗೆ ಹೋಗಿದ್ದಳು. ಸದರಿ ನನ್ನ ಮಗಳು ನಫೀಲಾ ಇವಳು ಯಾದಗಿರಿಯಲ್ಲಿ ಬಿ.ಕಾಂ 3 ನೇ ಸೆಮಿಸ್ಟರ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ದಿನಾಂಕ:22/08/2021 ರಂದು ನನ್ನ ಮಗಳ ಬಿ.ಕಾಂ ಪರೀಕ್ಷೆ ಇದ್ದುದ್ದರಿಂದ ನನ್ನ ಗಂಡ ಖಾಜಾಹುಸೇನ ತಂದೆ ಅಮೀದಸಾಬ ಈತನು ನನ್ನ ಮಗಳಿಗೆ ಪರೀಕ್ಷೆಗೊಸ್ಕರ ದೇವರಗುಂಡಗುತರ್ಿಯಿಂದ ಯಾದಗಿರಿಗೆ ಕರೆದುಕೊಂಡು ಬರುತ್ತೇನೆ ಎಂದು ಮೊನ್ನೆ ದಿನಾಂಕ:21/08/2021 ರಂದು ಸಾಯಂಕಾಲ ಮೋಟರ್ ಸೈಕಲ್ ನಂ. ಕೆಎ 36 ಇಬಿ 9648 ನೇದ್ದರ ಮೇಲೆ ಊರಿಗೆ ಹೊದನು. ನಿನ್ನೆ ದಿನಾಂಕ:22/08/2021 ರಂದು ಬೆಳಗ್ಗೆ 9:15 ಗಂಟೆ ಸುಮಾರಿಗೆ ನಾನು ಯಾದಗಿರಿ ಮನೆಯಲ್ಲಿದ್ದಾಗ ನನ್ನ ಮಗಳಾದ ನಫಿಲಾ ಇವಳು ನನಗೆ ಫೊನ ಮಾಡಿ ಹೇಳಿದ್ದೇನಂದರೆ ನಾನು ಮತ್ತು ಪಪ್ಪಾ ಇಬ್ಬರೂ ಮೋಟರ್ ಸೈಕಲ್ ಮೇಲೆ ದೇವರಗುಂಡಗುತರ್ಿಯಿಂದ ಯಾದಗಿರಿಗೆ ಬರುತ್ತಿದ್ದಾಗ ಯಾದಗಿರಿ-ಶೋರಾಪೂರ ಮೇನ ರೋಡ ತಡಿಬಿಡಿ ಗ್ರಾಮದ ಸರಕಾರಿ ಪ್ರೌಢ ಶಾಲೆ ಹತ್ತಿರ ಎದುರುಗಡೆಯಿಂದ ಒಬ್ಬ ಮೋಟರ್ ಸೈಕಲ್ ಸವಾರನು ತಡಿಬಿಡಿ ಗ್ರಾಮದೊಳಗಿಂದ ಸಣ್ಣ ರೋಡಿನಿಂದ ಮೇನ ರೋಡಿಗೆ ಬಂದವನೆ ರಸ್ತೆ ಮದ್ಯದ ಡಿವೈಡರ್ ದಾಟಿ ರಾಂಗ ರೂಟಿಗೆ ನಮ್ಮ ಕಡೆ ಬಂದು ನಮ್ಮ ಮೋಟರ್ ಸೈಕಲ್ ಗೆ ಡಿಕ್ಕಿಪಡಿಸಿರುತ್ತಾನೆ. ಅಪಘಾತದಲ್ಲಿ ಪಪ್ಪಾನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ನನಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿರುತ್ತವೆ ಎಂದು ಅಳುತ್ತಾ ಹೇಳಿದಾಗ ಗಾಬರಿಯಾದ ನಾನು ಯಾದಗಿರಿಯಲ್ಲಿದ್ದ ನಮ್ಮ ಸಂಬಂಧಿಕ ಶರೀಫ ದೋರನಳ್ಳಿ ಈತನಿಗೆ ವಿಷಯ ತಿಳಿಸಿ ಅವನಿಗೆ ಕರೆಸಿಕೊಂಡು ಇಬ್ಬರೂ ಯಾದಗಿರಿಯಿಂದ ತಕ್ಷಣ ಅಪಘಾತ ಸ್ಥಳಕ್ಕೆ ಬಂದು ನೋಡಿದಾಗ ನನ್ನ ಗಂಡ ಖಾಜಾಹುಸೇನನಿಗೆ ಗದ್ದಕ್ಕೆ ಭಾರಿ ರಕ್ತಗಾಯವಾಗಿತ್ತು, ತುಟಿಗೆ ರಕ್ತಗಾಯವಾಗಿತ್ತು. ಎಡ ಭುಜದ ಮುಡ್ಡಿಗೆ ಭಾರಿ ಒಳಪೆಟ್ಟಾಗಿತ್ತು. ನನ್ನ ಮಗಳಾದ ನಫೀಲಾ ಇವಳಿಗೆ ಎರಡು ಅಂಗೈಗಳಿಗೆ ತರಚಿದ ಗಾಯಗಳಾಗಿದ್ದವು. ಅಪಘಾತಪಡಿಸಿದ ಮೋಟರ್ ಸೈಕಲ್ ಸವಾರನು ಕೂಡಾ ಗಾಯಗೊಂಡಿದ್ದು, ಅವನಿಗೆ ಹೆಸರು ವಿಳಾಸ ಕೇಳಿದಾಗ ಮಲ್ಲಪ್ಪ ತಂದೆ ಸಿದ್ದಪ್ಪ ಸಾ:ತಡಿಬಿಡಿ ಎಂದು ಹೇಳಿದನು. ಆತನಿಗೆ ಬಲಗಡೆ ತೆಲೆ ಮತ್ತು ಹಣೆಗೆ ರಕ್ತಗಾಯಗಳಾಗಿದ್ದವು. ಅಪಘಾತಪಡಿಸಿದ ಸವಾರನ ಮೋಟರ್ ಸೈಕಲ್ ನಂ. ಕೆಎ 33 ವೈ 8136 ಇತ್ತು. ಅಪಘಾತದ ಬಗ್ಗೆ ನನ್ನ ಮಗಳಿಗೆ ಕೇಳಿದಾಗ ಅವಳು ಹೇಳಿದ್ದೇನಂದರೆ ನಾನು ಮತ್ತು ಪಪ್ಪಾ ಇಬ್ಬರೂ ಮೋಟರ್ ಸೈಕಲ್ ನಂ. ಕೆಎ 36 ಇಬಿ 9648 ನೇದ್ದರ ಮೇಲೆ ದೇವರಗುಂಡಗುತರ್ಿಯಿಂದ ಯಾದಗಿರಿಗೆ ಬರುತ್ತಿದ್ದಾಗ ಬೆಳಗ್ಗೆ 9:00 ಗಂಟೆ ಸುಮಾರಿಗೆ ಯಾದಗಿರಿ-ಶೋರಾಪೂರ ಮೇನ ರೋಡ ತಡಿಬಿಡಿ ಗ್ರಾಮದ ಸರಕಾರಿ ಪ್ರೌಢ ಶಾಲೆ ಹತ್ತಿರ ಎದುರುಗಡೆಯಿಂದ ಮೋಟರ್ ಸೈಕಲ್ ನಂ. ಕೆಎ 33 ವೈ 8136 ನೇದ್ದರ ಸವಾರನು ತಡಿಬಿಡಿ ಗ್ರಾಮದೊಳಗಿಂದ ಸಣ್ಣ ರೋಡಿನಿಂದ ಮೇನ ರೋಡಿಗೆ ಬಂದವನೆ ರಸ್ತೆ ಮದ್ಯದ ಡಿವೈಡರ್ ದಾಟಿ ರಾಂಗ ರೂಟಿಗೆ ನಮ್ಮ ಕಡೆ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮಗೆ ಡಿಕ್ಕಿಪಡಿಸಿದನು ಎಂದು ಹೇಳಿದಳು. ನನ್ನ ಗಂಡ ಖಾಜಾ ಹುಸೇನ ಮತ್ತು ಅಪಘಾತಪಡಿಸಿದ ಸವಾರ ಮಲ್ಲಪ್ಪ ಇಬ್ಬರಿಗೆ ಕಲಬುರಗಿಯ ಮಣೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದೆವು. ಮಣೂರು ಆಸ್ಪತ್ರೆಯವರು ಆರ್.ಟಿ.ಎ ಎಮ್.ಎಲ್.ಸಿ ಮಾಡಿರುತ್ತಾರೆ. ಕಾರಣ ಮೋಟರ್ ಸೈಕಲ್ ನಂ. ಕೆಎ 33 ವೈ 8136 ನೇದ್ದರ ಸವಾರನು ತನ್ನ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ರಾಂಗರೂಟಿನಲ್ಲಿ ಚಲಾಯಿಸಿಕೊಂಡು ಬಂದು ನನ್ನ ಗಂಡನಿಗೆ ಡಿಕ್ಕಿಪಡಿಸಿ, ಭಾರಿಗಾಯಗೊಳಿಸಿದ್ದು, ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 107/2021 ಕಲಂ: 279, 337, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 122/2021 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 23.08.2021 ರಂದು 1800 ಗಂಟೆಗೆ ಮಾನ್ಯ ಗಜಾನಂದ ಪಿ ಎಸ್ ಐ ಸಾಹೇಬರು ಕೆಂಭಾವಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಕೊಟ್ಟ ಜ್ಞಾಪನವೇನಂದರೆ, ದಿನಾಂಕ:23.08.2021 ರಂದು 14 :00 ಗಂಟೆಗೆ ಕೆಂಭಾವಿ ಪೊಲೀಸ್ ಠಾಣೆಯ ಹದ್ದಿಯ ಪೈಕಿ ಯಡಿಯಾಪೂರ ಗ್ರಾಮದ ಹತ್ತಿರ ಪೆಟ್ರೋಲಿಂಗ್ ಕರ್ತವ್ಯದ ಮೇಲೆ ಇದ್ದಾಗ ಯಡಿಯಾಪೂರ ಗ್ರಾಮದಲ್ಲಿ ಇರುವ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಭಾತ್ಮೀ ಬಂದಿದ್ದು, ಸದರಿ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿ ದಾಳಿ ಮಾಡುವ ಕುರಿತು ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರರವರಲ್ಲಿ ಅನುಮತಿ ಕೊಡುವ ಕುರಿತು ಪತ್ರ ಬರೆದು ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು 18:00 ಗಂಟೆಗೆ ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತ ಕೊಟ್ಟ ಜ್ಞಾಪನ ಪತ್ರದಂತೆ ಠಾಣಾ ಗುನ್ನೆ ನಂಬರ 122/2021 ಕಲಂ 78[111] ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಯಾದಗಿರ ನಗರ ಪೊಲೀಸ ಠಾಣೆ
ಗುನ್ನೆ ನಂ:92/2021 ಕಲಂ:143,341,323,504,506 ಸಂ.149 ಐಪಿಸಿ : ಇಂದು ದಿನಾಂಕ.23/08/2021 ರಂದು ರಾತ್ರಿ 8-30 ಪಿಎಂಕ್ಕೆ ಪಿರ್ಯಾದಿ ಶ್ರೀ ನಾಗಪ್ಪ ತಂ. ಬಾಳಪ್ಪ ಪಾಸಮೇಲ್ ವಃ 74 ಜಾಃ ಬೋವಿ ಉಃ ವ್ಯಾಪಾರ ಸಾಃ ವಾರ್ಡ ನಂ.5 ಬೋವಿವಾಡ ಯಾದಗಿರಿ ರವರು ಒಂದು ಪಿರ್ಯಾದಿಯನ್ನು ಕೊಟ್ಟಿದ್ದು ಸಾರಾಂಶವೆನೆಂದರೆ ನಾನು ಈ ಮೇಲಿನ ಹೆಸರು ಮತ್ತು ವಿಳಾಸದವನಿದ್ದು ಸಿಮೇಂಟ ವ್ಯಾಪಾರ ಮಾಡಿಕೊಂಡು ಉಪಜೀವನ ಸಾಗಿಸುತ್ತೇನೆ. ನನಗೆ ಮೂರು ಜನ ಗಂಡ ಮಕ್ಕಳಿರುತ್ತಾರೆ. ನಮಗೂ ಮತ್ತು ನಮ್ಮ ಅಣ್ಣತಮ್ಮಕಿಯವರಾದ ನಮ್ಮ ಓಣಿಯ 1. ವಿನೋದಕುಮಾರ ತಂ. ನಾರಾಯಣರಾವ ಪಾಸಮೇಲ್, ಮತ್ತು ಆತನ ಮಗನಾದ 2. ಅಮೀತ ತಂದೆ ವಿನೋದಕುಮಾರ ಪಾಸಮೇಲ್, ಮತ್ತು ಆತನ ತಮ್ಮನಾದ 3. ದ್ವಾರಕನಾಥ ತಂದೆ ನಾರಾಯಣರಾವ ಪಾಸಮೆಲ್, ಮತ್ತು ಇತನ ಮಗನಾದ 4, ಸೋನು ತಂದೆ ದ್ವಾರಕನಾಥ ಪಾಸಮೇಲ್, 5. ರಮೇಶ ತಂದೆ ನಾರಾಯಣರಾವ ಪಾಸ್ಮೇಲ್, ಸಾಃ ಬೋವಿವಾಡ ಯಾದಗಿರ ರವರಿಗೂ ಮತ್ತು ನಮಗೂ ಹೀಗ್ಗೆ 2012 ರಿಂದ ನಮ್ಮ ಮನೆಯ ಪಕ್ಕದಲ್ಲಿರುವ ಮನೆ ನಂ. 1-11-2 ನೇದ್ದಕ್ಕೆ ಸಂಭಂಧಿಸಿದಂತೆ ಶರಣಮ್ಮ ಗಂಡ ಶಿವರುದ್ರಪ್ಪ ಜಾಡರ ರವರಿಗೆ ಮನೆ ಬಿಡುವಂತೆ ತಕರಾರು ಇದ್ದು ಶರಣಮ್ಮ ಇವಳಿಗೆ ಮನೆ ಬಿಟ್ಟರೆ ಆ ಮನೆಯನ್ನು ತಾವು ಕಬ್ಜೆ ಮಾಡಿಕೊಳ್ಳುವ ಉದ್ದೇಸ ಇರುತ್ತದೆ. ಈ ಬಗ್ಗೆ ನಾನು ನನ್ನ ಹೆಂಡತಿ ಶಾಂತಾಬಾಯಿ ಗಂಡ ನಾಗಪ್ಪ ಪಾಸಮೇಲ್ ಇವಳ ಹೆಸರಿನಲ್ಲಿ ಮಾನ್ಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ದಾವೆ ಸಂ.287/2012 ಇದ್ದು ಮಾನ್ಯ ನ್ಯಾಯಾಲಯದಿಂದ ಡಿಕ್ರಿ ಪ್ರಕಾರ ಸದರಿ ಮನೆಯ ಕಬ್ಜೆ ಕೊಡಿರೆಂದು ಇ.ಪಿ.ನಂ.10/16 ಪ್ರಕಾರ ಹಾಕಿದ್ದೇವು. ಸದರಿ ಇ.ಪಿ. ಪ್ರಕಾರ ಸದರಿ ಮನೆಯು 2016 ರಲ್ಲಿ ನನ್ನ ಹೆಂಡತಿ ಶಾಂತಾಬಾಯಿ ಗಂಡ ನಾಗಪ್ಪ ಪಾಸಮೇಲ್ ಇವರಿಗೆ ಕೋಟರ್ಿನಿಂದ ಬೇಲಿಫ್ ಕಬ್ಜೆ ಕೊಡಿಸಿದ್ದು ಇರುತ್ತದೆ. ಆಗಿನಿಂದ ನಾವೆ ಕಬ್ಜೆಯಲ್ಲಿದ್ದಿರುತ್ತೇವೆ. ನನ್ನ ಹೆಂಡತಿ ದಿನಾಂಕ.10/05/2021 ರಂದು ಮೃತಪಟ್ಟಿರುತ್ತಾಳೆ. ಈಗ ಈ ಮೇಲಿನ ನಮ್ಮ ಅಣ್ಣತಮಕಿಯವರು ಈ ಮನೆ ನಮಗೆ ಸೇರಬೇಕಾಗಿರುತ್ತದೆ ನೀವು ಇಲ್ಲಿ ಹೇಗೆ ವಾಸಮಾಡುತ್ತಿರಿ ನೋಡಿಕೊಳ್ಳುತ್ತೇವೆ ಅಂತಾ ನಮ್ಮ ಜೊತೆ ತಕರಾರು ಮಾಡುತ್ತಾ ಬಂದಿರುತ್ತಾರೆ. ಹೀಗಿದ್ದು ದಿನಾಂಕ.16/06/2021 ರಂದು ರಾತ್ರಿ 9-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅರುಣಕುಮಾರ ತಂ. ನಾಗಪ್ಪ ಪಾಸಮೇಲ್, ವೇಂಕಟೇಶ ತಂ. ನಾಗಪ್ಪ ಪಾಸಮೇಲ್, ರವರು ಮನೆಯಲ್ಲಿರುವಾಗ 1. ವಿನೋದಕುಮಾರ ತಂ. ನಾರಾಯಣರಾವ ಪಾಸಮೇಲ್, 2. ಅಮೀತ ತಂ. ವಿನೋದಕುಮಾರ ಪಾಸಮೇಲ್, 3. ದ್ವಾರಕನಾಥ ತಂ. ನಾರಾಯಣರಾವ ಪಾಸಮೆಲ್, 4, ಸೋನು ತಂ. ದ್ವಾರಕನಾಥ ಪಾಸಮೇಲ್, 5. ರಮೇಶ ತಂ. ನಾರಾಯಣರಾವ ಪಾಸ್ಮೇಲ್, ಸಾಃ ಬೋವಿವಾಡ ಯಾದಗಿರ ರವರು ಸಮಾನ ಉದ್ದೇಶದಿಂದ ಗುಂಪು ಕಟ್ಟಿಕೊಂಡು ಎಲ್ಲರೂ ಕೂಡಿಕೊಂಡು ನಮ್ಮ ಮನೆಯ ಮುಂದೆ ಏ ಸೂಳೀ ಮಗನೇ ನಾಗ್ಯಾ ಹೊರಗೆ ಬಾರಲೇ ಅಂತಾ ಬೈಯುತ್ತಿರುವಾಗ ನಾವು ಹೊರಗಡೆ ಬಂದು ನೋಡಲಾಗಿ ಸದರಿಯವರು ಕೂಡಿಕೊಂಡು ನಮ್ಮ ಮನಗೆಯ ಮುಮದೆ ಬಂದಿದ್ದು ಆಗ ಸದರಿಯವರು ಏ ಭೋಸಡಿ ಮಕ್ಕಳೇ ಶರಣಮ್ಮ ಗಂಡ ಶಿವರುದ್ರಪ್ಪ ಜಾಡರ ರವರಿಗೆ ಮನೆ ಬಿಟ್ಟು ಕೊಡುವಂತೆ ಹೇಳಿದರೂ ಕೂಡ ಅವಳ ವಿರುದ್ದ ಕೋಟರ್ಿಗೆ ಹೋಗಿದ್ದಿರಿ ಅಂತಾ ತಕರಾರು ಮಾಡಿ ಅವಳಿಗೆ ಮನೆ ಬಿಟ್ಟು ಬಿಡಿರಿ ಇಲ್ಲವಾದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕುತ್ತಿದ್ದು ಆಗ ನಾನು ಯಾಕೆ ಬೈಯುತ್ತಿರಿ ಅಂತಾ ಅಂದಿದ್ದಕ್ಕೆ ಆಗ ವಿನೋದಕುಮಾರ ಈತನು ಕೈಯಿಂದ ನನ್ನ ಕಪಾಳಕ್ಕೆ ಹೊಡೆದನು. ಆಗ ನಾನು ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಹೋಗಬೇಕೆಂದಾಗ ನನಗೆ ತಡೆದು ನಿಲ್ಲಿಸಿ ಅಮೀತ ಈತನು ಕಾಲಿನಿಂದ ಬೆನ್ನಿಗೆ ಒದ್ದನು. ಮತ್ತು ನನ್ನ ಮಕ್ಕಳು ಜಗಳಾ ಬಿಡಿಸಲು ಬಂದಾಗ ಅರುಣಕುಮಾರ ಈತನಿಗೆ ದ್ವಾರಕನಾಥ ಈತನು ಕಾಲಿನಿಂದ ಹೊಟ್ಟೆಗೆ ಒದ್ದನು. ಆಗ ಸೋನು ಮತ್ತು ರಮೇಶ ಇಬ್ಬರೂ ಕೂಡಿಕೊಂಡು ನನ್ನ ಮಗ ವೇಂಕಟೇಶ ಈತನಿಗೆ ಜಗಳಾ ಬಿಡಿಸಲು ಬರುತ್ತಿರಿ ಬೋಸಡಿ ಮಕ್ಕಳೆ ಅಂತಾ ನೆಲಕ್ಕೆ ಹಾಕಿ ಕಾಲಿನಿಂದ ಒದ್ದು ಇವತ್ತು ಇವರಿಗೆ ಜೀವ ಸಹಿತ ಬಿಡಬಾರದು ಅಂತಾ ಜೀವದ ಬೆದರಿಕೆ ಹಾಕುತ್ತಿರುವಾಗ ಸದರಿ ಜಗಳವನ್ನು ಶಂಕರ ತಂ.ಭೀಮಶಪ್ಪ ಗುಂಜನೂರ ರವರು ಬಂದು ಜಗಳಾ ಬಿಡಿಸಿದ್ದು ಇರುತ್ತದೆ. ನಮಗೆ ಅಷ್ಟೇನು ಪೆಟ್ಟಾಗಿಲ್ಲದ್ದರಿಂದ ಆಸ್ಪತ್ರೆಗೆ ತೋರಿಸಿರುವುದಿಲ್ಲಾ. ಮತ್ತು ಈ ವಿಷಯದ ಬಗ್ಗೆ ನಾವು ಇರಲೀ ಬಿಡು ಅಂತಾ ಸುಮ್ಮನಿದ್ದರೂ ಕೂಡಾ ಮತ್ತೆ ಮತ್ತೆ ನಮ್ಮ ತಂಟೆಗೆ ಬರುತ್ತಿದ್ದರಿಂದ ಈಗ ನಾನು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಈ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟು ಹೆಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 92/2021 ಕಲಂ. 143, 341, 323, 504, 506, ಸಂ. 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 


ಸೈದಾಪೂರ ಪೊಲೀಸ ಠಾಣೆ
ಗುನ್ನೆ ನಂ: 130/2021 ಕಲಂ 309 ಐಪಿಸಿ : ಇಂದು ದಿನಾಂಕ: 23-08-2021 ರಂದು ಮದ್ಯಾಹ್ನ 03-00 ಗಂಟೆಗೆ ಶ್ರೀ ಮೋಹನರೆಡ್ಡಿ ಹೆಚ್.ಸಿ-151 ರವರು ಪಿಯರ್ಾಧಿ ಹಾಜರುಪಡಿಸಿದ ಸಾರಂಶವೆನೆಂದರೆ ದಿನಾಂಕ: 23-08-2021 ರಂದು ಮದ್ಯಾಹ್ನ 02-45 ಗಂಟೆಗೆ ನಾನು ಠಾಣಾ ಎಸ್,ಹೆಚ್.ಡಿ ಕರ್ತವ್ಯದಲ್ಲಿರುವಾಗ ಆರೋಪಿತನು ಠಾಣಾ ಆವರಣದಲ್ಲಿ ನನ್ನ ಹೆಂಡತಿಯನ್ನು ನನ್ನ ಜೊತೆ ಕಳುಹಿಸದಿದ್ದರೆ ಕ್ರೀಮಿನಾಷಕ ಔಷಧ ಸೇವನೆ ಮಾಡುತ್ತೇನೆ ಅಂತಾ ಹೊದರಾಡುತ್ತ ಕ್ರಮಿನಾಷಕ ಔಷಧ ಸೇವನೆ ಮಾಡಿ ಆತ್ನ ಹತ್ಯೆಗೆ ಪ್ರಯತ್ನ ಮಾಡಿರುತ್ತಾನೆ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾಧಿ ಸಾರಂಶ.

 

ಸೈದಾಪೂರ ಪೊಲೀಸ ಠಾಣೆ
ಗುನ್ನೆ ನಂ : 131/2021 ಕಲಂ.353, 354, 504, 506 ಸಂಗಡ 34 ಐಪಿಸಿ : ದಿನಾಂಕ: 23-08-2021 ರಂದು 05-30 ಪಿ.ಎಮ್.ಕ್ಕೆ ಶ್ರೀಮತಿ ಮಾಳಮ್ಮ ಇವರು ಪಿಯರ್ಾಧಿ ಹಾಜರುಪಡಿಸಿದ ಸಾರಂಶವೆನೆಂದರೆ ನಾನು ಮಾಳಮ್ಮ ಮಪಿಸಿ-99 ಸೈದಾಪೂರ ಪೊಲೀಸ್ ಠಾಣೆ ಇದ್ದು ದಿನಾಂಕ: 23-08-2021 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ಸೈದಾಪೂರ ಪೊಲೀಸ್ ಠಾಣಾ ಗುನ್ನೆ ನಂ.113/2021 ಕಲಂ. ಮಹಿಳೆ ಕಾಣೆ ನೇದ್ದರಲ್ಲಿಯ ಪತ್ತೆಯಾದ ಮಹಿಳೆಯನ್ನು ಶ್ರೀ ಭೀಮರಾಯ ಪಿ.ಎಸ್.ಐ (ಕಾ.ಸು) ಮತ್ತು ರಾಘವೇಂದ್ರ ಹೆಚ್.ಸಿ-44, ಮತ್ತು ನಾನು ಎಲ್ಲರು ಕೂಡಿ ವಚನಶ್ರೀಯನ್ನು ಠಾಣೆಗೆ ಕರೆದುಕೊಂಡು ಬಂದಿದ್ದು ನಂತರ ಕಾಣೆಯಾದ ಮಹಿಳೆಯಾದ ವಚನಶ್ರೀ ಗೆ ಆಕೆಯ ತಂದೆ ಶಾಂತಯ್ಯ ಮತ್ತು ತಾಯಿ ಈರಮ್ಮ ಹಾಗೂ ಆಕೆಯ ಗಂಡ ಸುರೇಶ ಇವರ ಸಮಕ್ಷಮದಲ್ಲಿ ವಚನಶ್ರೀ ಈಕೆಗೆ ಠಾಣೆಯಲ್ಲಿ ವಿಚಾರಣೆ ಮಾಡಿದ್ದು ವಿಚಾರಣೆ ಕಾಲಕ್ಕೆ ವಚನಶ್ರೀ ಈಕೆಯು ತಂದೆ ತಾಯಿ ಮತ್ತು ಗಂಡನ ಸಂಗಡ ಹೋಗುವದಿಲ್ಲ ನನ್ನ ಸ್ವ ಇಚ್ಚೆಯಂತೆ ಬದಕನ್ನು ನಡೆಸಲು ಮನಸಾರೆ ಒಪ್ಪಿಕೊಂಡಿರುತ್ತೇನೆ ಮತ್ತು ನಾನು ನನ್ನ ತಂದೆ ತಾಯಿ ಮತ್ತು ನನ್ನ ಗಂಡನ ಸಂಗಡ ಹೋಗಲು ನನಗೆ ಇಷ್ಟವಿಲ್ಲ ನನ್ನ ವೈಯಕ್ತಿಕ ಜೀವನವನ್ನು ನೆಮ್ಮದಿಯಿಂದ ನಡೆಸಲು ಮತ್ತು ನನ್ನ ವಿದ್ಯಭ್ಯಾಸದ ದೃಷ್ಟಿಯಿಂದ ದಿನಾಂಕ: 23-07-2021 ರಂದು ನಾನು ಕಲಬುರಗಿಗೆ ಹೋಗಿರುತ್ತೇನೆ ಈಗ ನಾನು ನನ್ನ ತಂದೆ ತಾಯಿ ಮತ್ತು ನನ್ನ ಗಂಡನ ಸಂಗಡ ಹೋಗದೆ ನನ್ನ ಪಾಡಿಗೆ ನಾನು ಹೋಗುತ್ತೇನೆ ಹೇಳಿದಾಗ ಆಕೆಯನ್ನು ನಾನು ಮತ್ತು ಶ್ರೀ ಹಣಮಂತ್ರಾಯ ಪಿ.ಎಸ್.ಐ(ಅ.ವಿ), ಭೀಮರಾಯ ಎ.ಎಸ್.ಐ ರವರು ಆಕೆಯನ್ನು ಮಹಿಳಾ ಸ್ವಾಂತಾನ ಕೇಂದ್ರ ಯಾದಗಿರಿಗೆ ಕರೆದುಕೊಂಡು ಹೋಗಬೇಕಂತ ಠಾಣೆಯ ಮುಂದೆ ಜೀಪನಲ್ಲಿ ಕೂಡಿಸಿದಾಗ ಮದ್ಯಾಹ್ನ 03-00 ಗಂಟೆಗೆ ಆಕೆಯ ಸಂಬಂದಿಕರಾದ 1) ಶಾಂತಯ್ಯ ತಂದೆ ನೂರಂದಯ್ಯ ಹಿರೇಮಠ, ವ|| 45 ವರ್ಷ ಜಾ|| ಜಂಗಮ ಉ|| ಒಕ್ಕಲುತನ ಸಾ|| ಯಡಗಾ ತಾ|| ಸೇಡಂ 2) ಈರಮ್ಮ ಗಂಡ ಶಾಂತಯ್ಯ ವ|| 38 ವರ್ಷ ಜಾ|| ಜಂಗಮ ಉ|| ಮನೆಕೆಲಸ ಸಾ|| ಯಡಗಾ ತಾ|| ಸೇಡಂ 3) ನಾಗಯ್ಯಸ್ವಾಮಿ ತಂದೆ ಶಂಕ್ರಯ್ಯಸ್ವಾಮಿ ವ|| 48 ವರ್ಷ ಉ|| ಒಕ್ಕಲುತನ ಸಾ|| ರುಸ್ತಂಪೂರ ತಾ|| ಸೇಡಂ ಇವರೆಲ್ಲರು ಏಕಾ ಎಕಿ ಜೀಪ್ ಗೆ ಅಡ್ಡ ಬಂದು ಜೀಪ್ ಮುಂದಕ್ಕೆ ಹೋಗದಂತೆ ಅಡ್ಡ ಬಿದ್ದು ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಆಗ ನಾನು ಮತ್ತು ಪೊಲೀಸರು ಅವರಿಗೆ ಸರಿ ಅಂತಾ ಅಂದಾಗ ಅವರೆಲ್ಲರು ನಮಗೆ ಹೇ ನಮ್ಮ ಮಗಳಿಗೆ ಎಲ್ಲಿಗೆ ಕಳಸುತ್ತಿರಿ ಮುಂದಕ್ಕೆ ಬಿಡುವದಿಲ್ಲ ಅಂತಾ ಅಂದು ನನ್ನ ಜೋತೆ ಜಗಳ ತೆಗೆದು ಹೇ ಸೂಳೆ ಮಕ್ಕಳೆ ನಮ್ಮ ಮಗಳಿಗೆ ನಮಗೆ ಒಪ್ಪಿಸಿರಿ ಬೇರೆ ಕಡೆ ಯಾಕೆ ಕರೆದುಕೊಂಡು ಹೋಗುತ್ತಿರಿ ಅಂತಾ ಬೈದರು. ಆಗ ಇರಲಿ ಸರಿ ಅಂತಾ ಅಂದಾಗ ಈರಮ್ಮ ಈಕೆಯು ನನ್ನ ಸಂಗಡ ಜಗಳಕ್ಕೆ ಬಿದ್ದು ಮೈಮೇಲಿನ ಬಟ್ಟೆ ಹರಿದಳು ನಾಗಯ್ಯಸ್ವಾಮಿ ಮತ್ತು ಶಾಂತಯ್ಯ ಇವರು ನನ್ನ ಮೈಮೇಲಿನ ವೇಲು ಹಿಡಿದು ಎಳದಾಡಿ ಬಟ್ಟೆ ಹರಿದು ಅವಮಾನ ಮಾಡಿದರು ಮತ್ತು ನೀವು ಆಕೆಗೆ ಬೇರೆ ಕಡೆ ಹೆಂಗ ಕರೆದುಕೊಂಡು ಹೋಗುತ್ತಿರಿ ನಾವು ನೋಡುತ್ತೇವೆ ಮತ್ತು ನೀವು ಹೇಂಗ ನೌಕರಿ ಮಾಡುತ್ತಿರಿ ನೋಡುತ್ತೇವೆ ಮಕ್ಕಳೆ ಅಂತಾ ಬೆದರಿಕೆ ಹಾಕಿ ಆಕೆಗೆ ಬೇರೆ ಕಡೆ ಕಳುಹಿಸಿದರೆ ನಿಮಗೆ ಬಿಡಿವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ.ಅಂತಾ ಪಿಯರ್ಾಧಿ ಸಾರಾಂಶ ಇರುತ್ತದೆ.

 

ಯಾದಗಿರ ಸಂಚಾರಿ ಪೊಲೀಸ ಠಾಣೆ
ಗುನ್ನೆ ನಂ :: 45/2021 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 23/08/2021 ರಂದು ಸಮಯ 9 ಪಿ.ಎಂ.ದ ಸುಮಾರಿಗೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮುಂಡರಗಿಯ ನೂರ್ ರೈಸ್ ಮಿಲ್ ಹತ್ತಿರ, ಈ ಕೇಸಿನ ಪಿಯರ್ಾದಿ ಗಾಯಾಳು ಜಗಪ್ಪ ಮತ್ತು ಮೋಟಾರು ಸೈಕಲ್ ಸವಾರ ಮಲ್ಲಿಕಾಜರ್ುನ ಇಬ್ಬರು ಕೂಡಿಕೊಂಡು ಮೋಟಾರು ಸೈಕಲ್ ನಂಬರ ಕೆಎ-33, ಯು-7568 ನೇದ್ದರ ಮೇಲೆ ಯಾದಗಿರಿಯಿಂದ ಕೊಟಗೆರಾ ಗ್ರಾಮಕ್ಕೆ ಹೊರಟಿದ್ದಾಗ ಮೊಟಾರು ಸೈಕಲನ್ನು ಮಲ್ಲಿಕಾಜರ್ುನ ಈತನು ನಡೆಸಿಕೊಂಡು ಹೋಗುತ್ತಿದ್ದಾಗ ಯಾವುದೋ ಒಂದು ಕ್ರೂಜರ್ ಜೀಪ್ ನಂಬರ ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ, ಕ್ರೂಜರ್ ಜೀಪ್ ಚಾಲಕನು ತನ್ನ ವಾಹನವನ್ನು ಮುಂಡರಗಿ ಕಡೆಯಿಂದ ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರು ಸೈಕಲ್ ನೇದ್ದಕ್ಕೆ ನೇರವಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು ಇರುತ್ತದೆ ಈ ಅಪಘಾತದಲ್ಲಿ ಮೋಟಾರು ಸೈಕಲ್ ಮೇಲಿದ್ದ ಇಬ್ಬರಿಗೂ ಭಾರೀ ಗುಪ್ತಗಾಯ ಮತ್ತು ರಕ್ತಗಾಯ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತದೆ. ಈ ಅಪಘಾತದ ನಂತರ ಕ್ರೂಜರ್ ಚಾಲಕನು ತನ್ನ ವಾಹನ ಸಮೇತ ಘಟನಾ ಸ್ಥಳಕ್ಕೆ ಓಡಿ ಹೋಗಿರುತ್ತಾನೆ ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 45/2021 ಕಲಂ 279, 337, 338 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 24-08-2021 04:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080