ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 24-08-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆನಂ: 127/2022 ಕಲಂ. 143,147,148,323,324,,504, 506 ಸಂಗಡ 34 ಐ.ಪಿ.ಸಿ.: ಇಂದು ದಿನಾಂಕ 23-08-2022 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಫಿರ್ಯಾಧಿ ಮತ್ತು ಆತನ ಮಗನಾದ ವೆಂಕಟೇಶ ಇಬ್ಬರೂ ತಮ್ಮ ಹೋಲದಲ್ಲಿದ್ದ ಹತ್ತಿ ಬೇಳೆಗೆ ಕ್ರಿಮೀನಾಶಕ ಎಣ್ಣೆ ಹೊಡೆಯುತ್ತಿದ್ದಾಗ ಆರೋಪಿತರು ಹಳೇ ಡ್ವಾಣದ ವಿಷಯದಲ್ಲಿ ಜಗಳಾ ತೆಗೆದು ನೀವು ನಮ್ಮ ಹೋಲ ಹಾಳು ಮಾಡಿ ನೀನು ಹೋಲದಲ್ಲಿ ಹತ್ತಿ ಬೆಳೆ ಮಾಡಿಕೊಂಡಿದ್ದಿ ಸೂಳೇ ಮಗನೇ ಮುಂದೆ ನೀನು ಹೇಗೆ ಬದುಕುತ್ತಿ ನೋಡಿಕೊಳ್ಳುತ್ತೆವೆ ಚೀನಾಲಿ ಮಗನೇ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ ಕಬ್ಬಿಣದ ಕುಂಟಿ ಪಲಗದಿಂದ ಫಿರ್ಯಾಧೀ ತೆಲೆಯ ಮುಂಬಾಗಕ್ಕೆ ಹೊಡೆದು ರಕ್ತಗಾಯ ಮಾಡಿದ್ದು ಅಲ್ಲದೇ ಎಲ್ಲರೂ ಕೂಡಿಕೊಂಡು ಕೈಯಿಂದ ಹೊಡೆದು ಕಾಲಿನಿಂದ ಒದ್ದು ನಿಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 127/2022 ಕಲಂ. 143,147,148,323,324,,504, 506 ಸಂಗಡ 34 ಐ.ಪಿ.ಸಿ. ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆನಂ: 128/2022, ಕಲಂ, 341, 323, 324, 504.506. ಸಂ. 149, ಐ ಪಿ ಸಿ : ಇಂದು ದಿನಾಂಕ: 23-08-2022 ರಂದು ಸಾಯಂಕಾಲ 04-45 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಯಾದಗಿರಿಯಿಮದ ಎಮ್.ಎಲ್.ಸಿ ಇದೆ ಅಂತಾ ತಿಳಿಸಿದ ಮೇರೆಗೆ ನಾನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೆಟಿ ನೀಡಿ ಗಾಯಾಳುವನ್ನು ವಿಚಾರಿಸಿದ್ದು ಗಾಯ ಹೇಳಿಕೆ ಪಿಯರ್ಾಧಿ ನಿಡಿದ್ದೆನೆಂದರೆ ನಾನು ದಿನಾಂಕ: 23-08-2022 ರಂದು ಮದ್ಯಾಹ್ನ 03-00 ಗಂಟೆ ಸುಮಾರಿಗೆ ನಾನು ಹೊಲದಲ್ಲಿ ಗಳೆ ಹೊಡೆಯುತ್ತಿರುವಾಗ ಆರೋಪಿತರಲ್ಲರು ಕೂಡಿಕೊಂಡು ಬಂದು ಲೆ ಸೂಳೆ ಮಗನೆ ನಿನ್ನದು ಸೊಕ್ಕು ಬಹಳ ಆಗಿದೆ ಅಂದು ಕಯಿಂದ ಹೊಡೆದು ಬಾಯಿಯಿಂದ ಗದ್ದಕ್ಕೆ ಕಚ್ಚಿ. ಕಟ್ಟಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿ ಇನ್ನೊಂದು ಸಲ ಹೊಲದ ಮ್ಯಾರಿ ತಂಟೆಗೆ ಬಮದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಮಗನೆ ಅಂತಾ ಜೀವದ ಬೇದರಿಕೆ ಹಾಇದ್ದು ಇರುತ್ತದೆ ಅಂತಾ ಪಿಯಾಧಿ ಸಾರಂಶ


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 133/2022 ಕಲಂ: 78() ಕೆ.ಪಿ. ಆಕ್ಟ್: ಇಂದು ದಿನಾಂಕ 23.08.2022 ರಂದು 01.45 ಪಿ.ಎಮ್ ಗುರುಮಠಕಲ್ ಪಟ್ಟಣದ ಎ.ಪಿ.ಎಮ್.ಸಿ ಗೇಟ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು 1/- ರೂ ಗೆ 80/- ರೂ ಮಟಕಾ ಬರೆಯಿಸಿರಿ ಅಂತಾ ಕೂಗುತ್ತ ಸಾರ್ವಜನಿಕರಿಗೆ ವಂಚಿಸಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ-ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದನ್ನು ಖಚಿತ ಬಾತ್ಮಿಯ ಮೆರೆಗೆ ಪಂಚರ ಹಾಗೂ ಸಿಬ್ಬ|ಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವನ ವಶದಲ್ಲಿದ್ದ ಈ ಮೆಲ್ಕಂಡ ಕಾಲಂ: 08 ರಲ್ಲಿಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ಸದರಿಯವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿದ ಬಗ್ಗೆ.

 

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 134/2022 ಕಲಂ: 78() ಕೆ.ಪಿ. ಆಕ್ಟ್: ಇಂದು ದಿನಾಂಕ 23.08.2022 ರಂದು 02.45 ಪಿ.ಎಮ್ ಕ್ಕೆ ಚಪ್ಪೇಟ್ಲಾ ಗ್ರಾಮದ ಬಸನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು 1/- ರೂ ಗೆ 80/- ರೂ ಮಟಕಾ ಬರೆಯಿಸಿರಿ ಅಂತಾ ಕೂಗುತ್ತ ಸಾರ್ವಜನಿಕರಿಗೆ ವಂಚಿಸಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ-ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದನ್ನು ಖಚಿತ ಬಾತ್ಮಿಯ ಮೆರೆಗೆ ಪಂಚರ ಹಾಗೂ ಸಿಬ್ಬ|ಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವನ ವಶದಲ್ಲಿದ್ದ ಈ ಮೆಲ್ಕಂಡ ಕಾಲಂ: 08 ರಲ್ಲಿಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ಸದರಿಯವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿದ ಬಗ್ಗೆ.

 

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 135/2022 ಕಲಂ: 78() ಕೆ.ಪಿ. ಆಕ್ಟ್: ಇಂದು ದಿನಾಂಕ 23.08.2022 ರಂದು 04.45 ಪಿ.ಎಮ್ ಗುರುಮಠಕಲ್ ಪಟ್ಟಣದ ಎ.ಪಿ.ಎಮ್.ಸಿ ಗೇಟ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು 1/- ರೂ ಗೆ 80/- ರೂ ಮಟಕಾ ಬರೆಯಿಸಿರಿ ಅಂತಾ ಕೂಗುತ್ತ ಸಾರ್ವಜನಿಕರಿಗೆ ವಂಚಿಸಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ-ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದನ್ನು ಖಚಿತ ಬಾತ್ಮಿಯ ಮೆರೆಗೆ ಪಂಚರ ಹಾಗೂ ಸಿಬ್ಬ|ಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವನ ವಶದಲ್ಲಿದ್ದ ಈ ಮೆಲ್ಕಂಡ ಕಾಲಂ: 08 ರಲ್ಲಿಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ಸದರಿಯವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿದ ಬಗ್ಗೆ.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 146/2022. ಕಲಂ. 279.429. ಐ.ಪಿ.ಸಿ: ಇಂದು ದಿನಾಂಕ 23/08/2022 ರಂದು 12.45 ಪಿ ಎಮ್ ಫಿಯರ್ಾದಿ ಅಜರ್ಿದಾರರಾದ ಶ್ರೀ ತಿರುಪತಿ ತಂದೆ ಮಾನಸಿಂಗ ರಾಠೋಡ ವ|| 29 ಜಾ|| ಲಮಾಣಿ ಉ|| ಕುರಿಕಾಯುವದು ಸಾ|| ಗುಂಡಳ್ಳಿ ತಾಂಡ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ ನಮ್ಮವು ಸುಮಾರು 30 ಕುರಿಗಳು ಇದ್ದು ಅವುಗಳನ್ನು ಅಲ್ಲಿ ಇಲ್ಲಿ ಮೇಯಿಸಿಕೊಂಡು ಇರುತ್ತೇವೆ. ಹೀಗಿದ್ದು ಇಂದು ದಿನಾಂಕ 23/08/2022 ರಂದು ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ನಾನು ಹಾಗು ನಮ್ಮ ಚಿಕ್ಕಪ್ಪನವರಾದ ರಾಜು ತಂದೆ ಭೋಜು ರಾಠೋಡ ಇಬ್ಬರೂ ಕೂಡಿಕೊಂಡು ನಮ್ಮ 30 ಕುರಿಗಳನ್ನು ಶಹಾಪೂರ ಯಾದಗಿರಿ ಮುಖ್ಯ ರಸ್ತೆಯ ಉಳ್ಳಕೇರಿ ಬ್ರಿಡ್ಜ ಹತ್ತಿರ ರೋಡಿನ ಪಕ್ಕದಲ್ಲಿ ಮೇಯಿಸುತ್ತಿದ್ದಾಗ ಯಾದಗಿರಿ ಕಡೆಯಿಂದ ಒಂದು ಟಾಟಾ ಮ್ಯಾಜಿಕ್ ಎಕ್ಸಪ್ರೆಸ್ಸ್ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ರೋಡಿನ ಪಕ್ಕದಲ್ಲಿ ಮೇಯುತ್ತಿದ್ದ ಕುರಿಗಳ ಮೇಲೆ ವಾಹನ ಹಾಯಿಸಿದ್ದು ಈ ಅಪಘಾತದಲ್ಲಿ ನನ್ನ ಒಂದು ಕುರಿಗೆ 15,000/- ರೂಗಳಂತೆ, ಒಟ್ಟು 1,05,000/- ರೂಪಾಯಿ ಬೆಲೆಬಾಳುವ 07 ಕುರಿಗಳು ಮೃತಪಟ್ಟಿದ್ದು ಹಾಗು 04 ಕುರಿಗಳಿಗೆ ಕಾಲು ಮುರಿದು ಅಲ್ಲಲ್ಲಿ ರಕ್ತಗಾಯಗಳಾಗಿದ್ದು ಇರುತ್ತದೆ. ನಮ್ಮ ಕುರಿಗಳಿಗೆ ಅಪಘಾತಪಡಿಸಿ ಅಲ್ಲಿಯೇ ನಿಂತಿದ್ದ ವಾಹನದ ನಂಬರ ನೋಡಲಾಗಿ ಕೆಎ-33 ಎಮ್-6877 ಅಂತ ಇದ್ದು ಅದರ ಚಾಲಕನಿಗೆ ವಿಚಾರಿಸಲಾಗಿ ಆತನು ತನ್ನ ಹೆಸರು ನಾಗರಾಜ ತಂದೆ ಸೋಪಣ್ಣ ಅಜ್ಜಾಕೊಲ್ಲಿ ಸಾ|| ನಾಗನಟಗಿ ತಾ|| ಶಹಾಪೂರ ಅಂತ ತಿಳಿಸಿದನು. ನಂತರ ನಾನು ಹಾಗು ನಮ್ಮ ಚಿಕ್ಕಪ್ಪ ರಾಜು ಹಾಗು ನನ್ನ ಕುರಿಗಳಿಗೆ ಅಪಘಾತ ಪಡಿಸಿದ ವಾಹನ ಚಾಲಕ ನಾಗರಾಜ ನಾವೂ ಮೂರು ಜನರು ಸೇರಿ ಮೃತಪಟ್ಟ 07 ಕುರಿಗಳು ಹಾಗು ಗಾಯಗೊಂಡ 04 ಕುರಿಗಳನ್ನು ಅದೇ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಪಶು ವೈದ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ ಶಹಾಪೂರ ರವರಲ್ಲಿ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಟಾಟಾ ಮ್ಯಾಜಿಕ್ ಎಕ್ಸಪ್ರೆಸ್ಸ್ ವಾಹನ ಕೆಎ-33 ಎಮ್-6877 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ 11 ಕುರಿಗಳಿಗೆ ಅಪಘಾತ ಮಾಡಿದ್ದು ಅದರಲ್ಲಿ 07 ಕುರಿಗಳು ಮೃತಪಟ್ಟು 04 ಕುರಿಗಳು ಗಾಯಗೊಂಡಿದ್ದು ಇರುತ್ತದೆ. ಕಾರಣ ನಮ್ಮ ಕುರಿಗಳಿಗೆ ಅಪಘಾತಪಡಿಸಿ 07 ಕುರಿಗಳ ಸಾವಿಗೆ ಹಾಗು 04 ಕುರಿಗಳಿಗೆ ಗಾಯಪಡಿಸಿದ ವಾಹನ ಮತ್ತು ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಇದ್ದ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 146/2022 ಕಲಂ 279,429 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 134/2022 ಕಲಂ: 279, 337, 338 ಐಪಿಸಿ: ಇಂದು ದಿನಾಂಕ 23/08/2022 ರಂದು 3.30 ಪಿಎಂ ಕ್ಕೆ ಅಜರ್ಿದಾರರಾದ ಬಸವರಾಜ ತಂದೆ ಈರಣ್ಣ ಬಂಡೊಳ್ಳಿ ವ|| 43ವರ್ಷ ಜಾ|| ಲಿಂಗಾಯತ ಉ|| ಕೂಲಿ ಸಾ|| ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ದಿನಾಂಕ 07/08/2022 ರಂದು 5.00 ಪಿಎಂ ಸುಮಾರಿಗೆ ನಾನು ಕೆಲಸವಿದ್ದ ಪ್ರಯುಕ್ತ ನನ್ನ ಮಗನಾದ ಮಲ್ಲಿಕಾಜರ್ುನ ತಂದೆ ಬಸವರಾಜ ಬಂಡೊಳ್ಳಿ ವ|| 13ವರ್ಷ ಈತನಿಗೆ ಕರೆದುಕೊಂಡು ನನ್ನ ಸೈಕಲ್ ಮೋಟಾರ ನಂ ಕೆಎ 32 ವೈ 3454 ನೇದ್ದು ತೆಗೆದುಕೊಂಡು ಕೆಂಭಾವಿಯಿಂದ ಯಕ್ತಾಪೂರ ಗ್ರಾಮಕ್ಕೆ ಹೋಗುತ್ತಿದ್ದು ಯಕ್ತಾಪೂರ ಕ್ರಾಸ್ ಹತ್ತಿರ ಆದರ್ಶ ಶಾಲೆಯ ಮುಂದೆ ಹೋಗುತ್ತಿದ್ದಾಗ 5.15 ಪಿಎಂ ಸುಮಾರಿಗೆ ಆಲಾಳ ಕಡೆಯಿಂದ ಒಂದು ಸೈಕಲ್ ಮೋಟಾರ ಚಾಲಕನು ತನ್ನ ಸೈಕಲ್ ಮೋಟಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಸೈಕಲ್ ಮೋಟಾರಗೆ ಡಿಕ್ಕಿಪಡಿಸಿದ್ದರಿಂದ ನಾನು ಮತ್ತು ನನ್ನ ಮಗನಾದ ಮಲ್ಲಿಕಾಜರ್ುನ ಇಬ್ಬರೂ ಕೆಳಗೆ ಬಿದ್ದಿದ್ದು ನನಗೆ ಬಲಗಣ್ಣಿಗೆ ರಕ್ತಗಾಯವಾಗಿದ್ದು, ಎಡಗಾಲು ಮುರಿದಿದ್ದು, ಹಾಗೂ ಮುಂದಿನ ಹಲ್ಲು ಮುರಿದಿರುತ್ತದೆ. ಹಾಗೂ ನನ್ನ ಮಗನಾದ ಮಲ್ಲಿಕಾಜರ್ುನ ಈತನಿಗೆ ಎಡಗಾಲಿನ ಮೊಣಕಾಲಿಗೆ ರಕ್ತಗಾಯವಾಗಿದ್ದು, ಮುಂದಿನ ಹಲ್ಲು ಮುರಿದಿರುತ್ತದೆ. ನಂತರ ನಮಗೆ ಡಿಕ್ಕಿಪಡಿಸಿದ ಸೈಕಲ್ ಮೋಟಾರ ನಂಬರ ನೋಡಲಾಗಿ ಬಜಾಜ್ ಡಿಸ್ಕವರಿ ಸೈಕಲ್ ಮೋಟಾರ ಇದ್ದು ಅದರ ನಂಬರ ಕೆಎ 02 ಹೆಚ್.ಜೆ 0745 ಅಂತಾ ಬರೆದಿತ್ತು. ನಂತರ ನಮಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಸೈಕಲ್ ಮೋಟಾರ ಚಾಲಕನು ಕೂಡಾ ಬಿದ್ದಿದ್ದು ಅವನ ಹೆಸರು ಕೇಳಲಾಗಿ ಮಹಾಂತೇಶ ತಂದೆ ಯಮನಪ್ಪ ತೆಗ್ಗೆಳ್ಳಿ ವ|| 35ವರ್ಷ ಜಾ|| ಕಬ್ಬಲಿಗ ಸಾ|| ಪರಸನಳ್ಳಿ ಅಂತಾ ಹೇಳಿದ್ದು ಮಹಾಂತೇಶನು ಸರಾಯಿ ಕುಡಿದ ನಶೆಯಲ್ಲಿ ಇದ್ದದ್ದು ಕಂಡು ಬಂದಿರುತ್ತದೆ. ನನಗೆ ಕಾಲು ಮುರಿದು ತೀವ್ರತರವಾದ ಗಾಯಗಳಾಗಿದ್ದರಿಂದ ಮತ್ತು ನನ್ನ ಮಗನಿಗೆ ಗಾಯಗಳಾಗಿದ್ದರಿಂದ ಕೆಂಭಾವಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ವೈದ್ಯರ ಸಲಹೆಯ ಮೇರೆಗೆ ಅರ್ಜಂಟಾಗಿ ಆ್ಯಕ್ಸಾನ್ ಆಸ್ಪತ್ರೆ ಕಲಬುರಗಿಗೆ ಹೋಗಿ ಸೇರಿಕೆಯಾಗಿ ಚಿಕಿತ್ಸೆ ಪಡೆದುಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಆದ್ದರಿಂದ ನಾನು ಮತ್ತು ನನ್ನ ಮಗನು ಕೂಡಿಕೊಂಡು ನನ್ನ ಸೈಕಲ್ ಮೋಟಾರ ನಂ ಕೆಎ ಕೆಎ 32 ವೈ 3454 ನೇದ್ದರ ಮೇಲೆ ಹೋಗುತ್ತಿದ್ದಾಗ ಎದುರಿನಿಂದ ಸೈಕಲ್ ಮೋಟಾರ ನಂ ಕೆಎ 02 ಹೆಚ್.ಜೆ 0745 ನೇದ್ದರ ಚಾಲಕನಾದ ಮಹಾಂತೇಶ ತಂದೆ ಯಮನಪ್ಪ ತೆಗ್ಗೆಳ್ಳಿ ಸಾ|| ಪರಸನಳ್ಳಿ ಈತನು ತನ್ನ ಸೈಕಲ್ ಮೋಟಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಸೈಕಲ್ ಮೋಟಾರಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನಗೆ ಮತ್ತು ನನ್ನ ಮಗನಾದ ಮಲ್ಲಿಕಾಜರ್ುನನಿಗೆ ಸಾದಾ ಮತ್ತು ಭಾರೀ ಸ್ವರೂಪದ ಗಾಯಗಳಾಗಿದ್ದು ನಮಗೆ ಗಾಯವಾಗಲು ಕಾರಣನಾದ ಸೈಕಲ್ ಮೋಟಾರ ಚಾಲಕನಾದ ಮಹಾಂತೇಶ ಈತನ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಅಂತಾ ನೀಡಿದ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 134/2022 ಕಲಂ 279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 24-08-2022 10:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080