ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 24-09-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 108/2022 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ. 23/09/2022 ರಂದು 5-40 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾ.ಸು)ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವರದಿ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 23/09/2022 ರಂದು 3-00 ಪಿಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಯಾದಗಿರಿ-ಹೊಸಳ್ಳಿ ರಸ್ತೆಯ ವಿಜಯಸ್ವಾಮಿ ಇತನ ಅಂಗಡಿಯ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಮಡಿವಾಳಪ್ಪ ಪಿಸಿ-105, ವಿನೋದ ಪಿಸಿ-88 ರವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಸ್ಥಳಕ್ಕೆ ಹೋಗಿ 4-20 ಪಿಎಂಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಆರೋಪಿತನು ತನ್ನ ಹೆಸರು ಅನೀಲ ತಂದೆ ಹಣಮಂತ ಮಾನೆ ವ; 42 ಜಾ; ಬೇಡರು ಉ; ಕೂಲಿಕೆಲಸ ಸಾ; ಮುಷ್ಟೂರು ತಾ; ಜಿ; ಯಾದಗಿರಿ ಹಾ.ವ; ಸಹರಾ ಕಾಲೋನಿ ಯಾದಗಿರಿ ಅಂತಾ ತಿಳಿಸಿದನು. ನಂತರ ಅವನಿಗೆ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) ನಗದು ಹಣ 620/- 2) ಒಂದು ಮಟಕಾ ಅಂಕಿಬರೆದ ಚಿಟಿ ಅ.ಕಿ.00=00 3) ಒಂದು ಬಾಲಪೆನ್ ಅ.ಕಿ.00=00, ಸಿಕ್ಕಿದ್ದು, ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 23/09/2022 ರಂದು 4-20 ಪಿಎಂ ದಿಂದ 5-20 ಪಿಎಂ ದವರೆಗೆ ಮಾಡಿ ಮುಗಿಸಿದ್ದು ನಂತರ ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತ ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ 5-40 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾದಿಕಾರಿರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿತರ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ ಅಂತಾ ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.108/2022 ಕಲಂ. 78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ. 111/2022 ಕಲಂ: 87 ಕೆ.ಪಿ ಎಕ್ಟ್ : ಇಂದು ದಿನಾಂಕ:23/09/2022 ರಂದು 3-45 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ:23/09/2022 ರಂದು 3-30 ಪಿಎಮ್ ಕ್ಕೆ ನಾನು ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ಕೊಂಕಲ್ ಗ್ರಾಮದ ಬೀಟ್ ಸಿಬ್ಬಂದಿ ಶ್ರೀ ತಾಯಪ್ಪ ಹೆಚ್.ಸಿ 79 ರವರು ನನಗೆ ಮಾಹಿತಿ ನಿಡಿದ್ದೇನಂದರೆ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ ಸಂ. 09 ರಲ್ಲಿ ಬರುವ ಕೊಂಕಲ್-ತುಮಕೂರು ರೋಡ ಪಕ್ಕ ಗಾಳಿ ಮರಗಮ್ಮ ದೇವಿ ದೇವಸ್ಥಾನದ ಸಮೀಪ ಖಾಲಿ ಸ್ಥಳದಲ್ಲಿ ಯಾರೋ ಕೆಲವರು ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದರಿಂದ ಸದರಿ ಜೂಜುಕೋರರ ಮೇಲೆ ದಾಳಿ ಮಾಡಿ ಜಪ್ತಿ ಪಂಚನಾಮೆ ಜರುಗಿಸಬೇಕಾಗಿರುತ್ತದೆ. ಆದ್ದರಿಂದ ಸರಕಾರಿ ತಫರ್ೆಯಿಂದ ಪ್ರಕರಣ ದಾಖಲಿಸಲು ನಿಮಗೆ ಈ ದೂರು ಸಲ್ಲಿಸುತ್ತಿದ್ದು, ನೀವು ಈ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪ್ರ. ವ. ವರದಿಯನ್ನು ಸಲ್ಲಿಸಲು ಈ ಮೂಲಕ ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 111/2022 ಕಲಂ:87 ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 35/2022 ಕಲಂ: 143, 147, 148, 323, 324, 504, 506, ಸಂಗಡ 149 ಐಪಿಸಿ : ಇಂದು ದಿನಾಂಕ : 23/09/2022 ರಂದು 2:30 ಪಿ.ಎಂ ಕ್ಕೆ ಶ್ರೀಮತಿ ಜಯಶ್ರೀ ಗಂಡ ದೋಡ್ಡದೀರಪ್ಪ ರಾಠೊಡ ಸಾ: ಮಾರನಾಳ ತಾಂಡಾ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆನೆಂದರೆ ನನ್ನ ತವರು ಮನೆ ಜಂಗಿರಾಂಪೂರ ತಾಂಡಾ ಇದ್ದು ನನಗೆ ಈಗ ಸುಮಾರು 19 ವರ್ಷಗಳ ಹಿಂದೆ ಮಾರನಾಳ ತಾಂಡಾದ ದೋಡ್ಡದೀರಪ್ಪ ಈತನೊಂದಿಗೆ ಮದುವೆಯಾಗಿದ್ದು ಇರುತ್ತದೆ. ನನ್ನ ಗಂಡನ ತಂದೆಗೆ ಮೂರು ಜನ ಅಣ್ಣ ತಮ್ಮಂದಿರಿದ್ದು ಮೊದಲನೇಯವನು ರಾಮಪ್ಪ, ಎರಡನೇಯವನು ಲಚ್ಚಪ್ಪ ಹಾಗೂ ಕೊನೆಯವನು ನನ್ನ ಗಂಡನ ತಂದೆ ಸೂರಪ್ಪ ರವರು ಇರುತ್ತಾರೆ. ನಾವು ಈಗ ಸುಮಾರು 25 ವರ್ಷಗಳ ಹಿಂದೆ ನನ್ನ ಗಂಡನ ದೊಡ್ಡಪ್ಪ ರಾಮಪ್ಪ ರವರ ಹೆಸರಿನಲ್ಲಿ ಇರುವ ಯರಕಿಹಾಳ ಸೀಮಾಂತರದ ಹೊಲ ಸವರ್ೆ ನಂ 30 ರಲ್ಲಿಯ 1 ಎಕರೆ 1 ಗುಂಟೆ ಜಮೀನನ್ನು ನಾವು ಖರಿಧಿಮಾಡಿದ್ದೇವು ನಾವು ಖರಿದಿ ಮಾಡುವ ಕಾಲಕ್ಕೆ ನಮ್ಮ ತಾಂಡಾದ ಸೂರಪ್ಪ ತಂದೆ ರಾಮಜಿ, ಲಚ್ಚಪ್ಪ ತಂದೆ ಲಾಲಸಿಂಗ್, ಶೇಖರಪ್ಪ ತಂದೆ ಜಗನಪ್ಪ , ಸಣ್ಣರಾಮಪ್ಪ ತಂದೆ ತುಳಜಪ್ಪ ರವರ ಸಮಕ್ಷಮದಲ್ಲಿ ಹೊಲವನ್ನು ವ್ಯಾಪಾರ ಮಾಡಿಕೊಂಡಿದ್ದೇವು, ಅದನ್ನು ನಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಿಲ್ಲಾ ಆ ಹೊಲವನ್ನು ನನ್ನ ಗಂಡನ ದೊಡ್ಡಪ್ಪನವರ ಕಡೆಯಿಂದ ಖರಿದಿ ಮಾಡಿಕೊಂಡಿದ್ದರಿಂದ ಮುಂದೆ ಖರಿದಿ ಹಾಕಿಸಿಕೊಂಡರಾಯಿತು ಅಂತಾ ಸುಮ್ಮನಿದ್ದು, ಹೊಲವನ್ನು ನಾವೆ ಉಳಿಮೆ ಮಾಡಿಕೊಂಡು ಬಂದಿದ್ದೆವು. ನನ್ನ ಗಂಡನ ತಂದೆ ನಮ್ಮ ಮಾವ ಸೂರಪ್ಪ ರವರು ಈಗ ಸುಮಾರು 13 ವರ್ಷಗಳ ಹಿಂದೆಯೆ ಮರಣಹೊಂದಿದ್ದು ಅವರ ಮರಣ ಹೊಂದಿದ ನಂತರ ನಾವು ನಮ್ಮ ಹೊಲವನ್ನು ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವು. ಈಗ ನಾವು ಖರಿದಿ ಮಾಡಿದ ಹೊಲವನ್ನು ನಮ್ಮ ಹೆಸರಿಗೆ ಮಾಡಿಕೊಳ್ಳಲು ಸಹಿ ಮಾಡಕೊಡರಿ ಅಂತಾ ನಾವು ನಮ್ಮ ಮಾವ ರಾಮಪ್ಪ ರವರಿಗೆ ಕೇಳಿದರೆ ಅವರು ಮತ್ತು ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಕೂಡಿ ಹೊಲ ನಮ್ಮ ಹೆಸರಿಗೆ ಇರುತ್ತದೆ ನಾವು ಹೊಲವನ್ನು ನಿಮಗೆ ಬಿಟ್ಟುಕೊಡುವದಿಲ್ಲ ಅಂತಾ ಅನ್ನುತ್ತಿದ್ದರು ಆಗ ನಾನು ಮತ್ತು ನನ್ನ ಗಂಡ ದೊಡ್ಡದೀರಪ್ಪ ರವರು ಕೂಡಿ ಹೊಲದ ನ್ಯಾಯ ಪಂಚಾಯಿತಿ ಮಾಡಿಸುವ ಸಲುವಾಗಿ ದಿನಾಂಕ 16/09/2022 ರಂದು ಮುಂಜಾನೆ 10:00 ಗಂಟೆಗೆ ನಮ್ಮ ತಾಂಡಾದ ದೈವದ ಮಂದಿಯಾದ ರಾಮುನಾಯಕ , ರೇವಣಪ್ಪ ತಂದೆ ಗೀಗಪ್ಪ, ಶಾಂತಿಲಾಲ ತಂದೆ ದೇವಲಪ್ಪ, ದೇವಲಪ್ಪ ತಂದೆ ರಾಮಪ್ಪ ಹಾಗೂ ಇತರರು ಕೂಡಿ ನಮ್ಮ ತಾಂಡಾದ ಸೇವಾಲಲ ಕಟ್ಟೆಯ ಹತ್ತಿರ ನ್ಯಾಯ ಪಂಚಾಯಿತಿಗೆ ಕೂಡಿಸಿದ್ದು ಎಲ್ಲರು ಕೂಡಿ 11:00 ಗಂಟೆಯ ವರೆಗೆ ನ್ಯಾಯಪಂಚಾಯಿತಿ ಮಾಡಿದ್ದು ಅವರ ಮಾತಿಗೆ ನಮಗೆ ಹೊಲ ಕೊಟ್ಟಂತಹ ರಾಮಪ್ಪ ಹಾಗೂ ಅವರ ಮನೆಯವರು ಹೊಲವನ್ನು ನಮ್ಮ ಹೆಸರಿಗೆ ಬಿಟ್ಟುಕೊಡುವದಕ್ಕೆ ಒಪ್ಪಲಿಲ್ಲ ನಂತರ ನಾವು ಆಯಿತು ನಾವು ಕೊರ್ಟನಿಂದ ನಮ್ಮ ಹೊಲವನ್ನು ಮಾಡಿಸಿಕೊಳ್ಳುತ್ತೇವೆ ಅಂತಾ ಹೇಳಿ ನಾನು ಹಾಗೂ ನನ್ನ ಗಂಡ ದೊಡ್ಡದೀರಪ್ಪ ತಂದೆ ಸೂರಪ್ಪ ರಾಠೋಡ ವ:38 ವರ್ಷ ಉ:ಕೂಲಿ ಕೆಲಸ ಜಾ:ಹಿಂದು ಲಂಬಾಣಿ ಸಾ: ಮಾರನಾಳ ತಾಂಡಾ ಇಬ್ಬರು ಕೂಡಿ ಸೇವಾಲಾಲ ಕಟ್ಟೆಯಿಂದ 11:30 ಎ.ಎಂ ಸುಮಾರಿಗೆ ನಮ್ಮ ಮನೆಗೆ ಹೋಗುತ್ತಿದ್ದಾಗ ಆಗ ಅಲ್ಲಿಗೆ ಬಂದ ನಮ್ಮ ತಾಂಡಾದ 1)ಶೀವುಕುಮಾರ ತಂದೆ ತಿರುಪತಿ ರಾಠೋಡ, 2) ಲಾಲಸಿಂಗ್ ತಂದೆ ತಿರುಪತಿ ರಾಠೋಡ, 3) ತಿರುಪತಿ ತಂದೆ ರಾಮಪ್ಪ ರಾಠೋಡ, 4),ಲೋಕೆಶ ತಂದೆ ರಾಮಪ್ಪ ರಾಠೋಡ 5) ಲಕ್ಷಿಂಬಾಯಿ ಗಂಡ ತಿರುಪತಿ ರಾಠೋಡ 6) ಚಾಂದಿಬಾಯಿ ಗಂಡ ಲೋಕೇಶ ರಾಠೊಡ ಮತ್ತು 7) ರಾಮಪ್ಪ ತಂದೆ ಲಾಲಸಿಂಗ್ ರಾಠೊಡ ರವರು ತಮ್ಮ ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ಏಕೊದ್ದೇಶದಿಂದ ಅಲ್ಲಿಗೆ ಬಂದು ಅವರಲ್ಲಿಯ ಶಿವುಕುಮಾರ ಈತನು ನನ್ನ ಗಂಡ ದೊಡ್ಡದೀರಪ್ಪನಿಗೆ ಬೋಸುಡಿ ಮಗನ್ಯಾ ಹೊಲ ನಮ್ಮ ತಾತನ ಹೆಸರಿನಲ್ಲಿ ಇದೆ ಆ ಹೊಲವನ್ನು ನಾವು ನಿಮಗೆ ಯಾಕೆ ಬಿಟ್ಟುಕೊಡಬೇಕು ಅಂತಾ ಅಂದನು ಆಗ ನನ್ನ ಗಂಡ ದೊಡ್ಡದೀರಪ್ಪನು ಹೊಲವನ್ನು ನಮ್ಮ ತಂದೆಯವರು ಈ ಹಿಂದೆಯ ತಾಂಡಾದವರ ಸಮಕ್ಷಮದಲ್ಲಿ ಖರಿಧಿಮಾಡಿದ್ದು ಆ ಹೊಲವನ್ನು ಸುಮಾರು 25 ವರ್ಷಗಳಿಂದ ಇಲ್ಲಿಯವರೆಗೆ ನಾವು ಸಾಗುವಳಿ ಮಾಡಿಕೊಂಡು ಬಂದಿರುತ್ತೇವೆ ಅಂತಾ ಅಂದನು ಆಗ ಅವರಲ್ಲಿಯ ತಿರುಪತಿ ಈತನು ನನ್ನ ಗಂಡನಿಗೆ ರಂಡಿ ಮಗನೆ ಹೊಲವನ್ನು ನಮ್ಮ ತಂದೆಯವರು ನಿಮಗೆ ಸಾಗುವಳಿ ಮಾಡಲು ಅಷ್ಟೆ ಕೊಟ್ಟಿರುವದು ಹೊಲವನ್ನು ಮಾರಿರುವದಿಲ್ಲ ಅಂತಾ ಅಂದನು, ಆಗ ನನ್ನ ಗಂಡ ದೊಡ್ಡದೀರಪ್ಪನು ತಿರುಪತಿಗೆ ಸರಿಯಾಗಿ ಮಾತಡಪಾ ಅಂತಾ ಅಂದನು, ಆವಾಗ ಶಿವಕುಮಾರ ಈತನು ನನ್ನ ಗಂಡ ದೊಡ್ಡದೀರಪ್ಪನಿಗೆ ಬೋಸುಡಿ ಮಗನ್ಯಾ ನಮ್ಮ ಹೊಲದ ತಂಟೆಗೆ ಬಂದು ಮತ್ತ ನಮ್ಮ ತಂದೆಗೆನೆ ಸೀದಾ ಮಾತಡಪ ಅಂತಾ ಅಂತಿಯಾ ಅಂತಾ ತನ್ನ ಕೈಯಲ್ಲಿಯೆ ಬಡಿಗೆಯಿಂದ ನನ್ನ ಗಂಡನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದ್ದು ಹಾಗೂ ಎಡಗಾಲ ಮೊಳಕಾಲ ಕೆಳಗೆ ಹೊಡೆದು ರಕ್ತಗಾಯ ಮಾಡಿದನು ಆಗ ಅವರಲ್ಲಿಯ ಲಾಲಸಿಂಗ ಈತನು ನನ್ನ ಗಂಡನ ತೆಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ನನ್ನ ಗಂಡನ ಕಪಾಳಕ್ಕೆ ಹೊಡೆದು ಕೈಬೆರಳನ್ನು ನನ್ನ ಗಂಡನ ಎಡಗಡೆ ಕಣ್ಣಿನ ಒಳಗಡೆ ಚುಚ್ಚಿದ್ದು ಇದರಿಂದ ನನ್ನ ಗಂಡನ ಎಡಗಡೆ ಕಣ್ಣಿಗೆ ನೋವಾಗಿರುತ್ತದೆ ನಂತರ ನಾನು ಬಿಡಿಸಿಕೊಳ್ಳಲು ಹೋದಾಗ ಅಲ್ಲಿಯೇ ಇದ್ದ ಲಕ್ಷಿಂಬಾಯಿ ರವರು ಬಂದು ನನಗೆ ಬಿಡಿಸಿಕೊಳ್ಳಲು ಹೋಗುತ್ತಿಯಾ ಅಂತಾ ನನಗೆ ಹಿಡಿದುಕೊಂಡು ನನ್ನ ತೆಕ್ಕೆಕುಸ್ತಿಗೆ ಬಿದ್ದು ಕೈ ಮುಷ್ಠಿ ಮಾಡಿ ನನ್ನ ಎಡಗಡೆ ಕಣ್ಣಿಗೆ ಹೊಡೆದು ಒಳಪೆಟ್ಟು ಮಾಡಿದ್ದು ನಂತರ ಅವರಲ್ಲಿ ಚಾಂದಿಬಾಯಿ ಇವಳು ನನ್ನನ್ನು ಧರಧರ ಎಳೆದು ಮೊಳಕಾಲಿಗೆ ಕಾಲಿನಿಂದ ಒದ್ದು ನನ್ನ ಕೂದಲು ಹಿಡಿದು ಎಳೆದಾಡಿದಳು ಆಗ ನಾನು ಮತ್ತು ನನ್ನ ಗಂಡ ಚೀರಾಡಹತ್ತಿದೇವು ಆಗ ಅಲ್ಲಿಯೇ ಇದ್ದ ತಿರುಪತಿ ತಂದೆ ಶಂಕ್ರಪ್ಪ, ರಮೇಶ ತಂದೆ ಕಾಳಪ್ಪ ನಾರಾಯಣ ತಂದೆ ಬಾಳರಾಮ ರವರು ಬಂದು ನಮಗೆ ಹೊಡೆಯುವದನ್ನು ಬಿಡಿಸಿಕೊಂಡಿದ್ದು ನಂತರ ಅವರಲ್ಲಿಯ ಲೊಕೇಶ ತಂದೆ ರಾಮಪ್ಪ ರಾಠೋಡ ಹಾಗೂ ರಾಮಪ್ಪ ತಂದೆ ಲಾಲಸಿಂಗ ರಾಠೋಡ ರವರು ನನಗೆ ಮತ್ತು ನನ್ನ ಗಂಡನಿಗೆ ಬೋಸುಡಿ ಮಕ್ಕಳ್ಯಾ ಇನ್ನೊಮ್ಮ ಹೊಲದ ತಂಟೆಗೆ ಬಂದರೆ ನಿಮಗೆ ಜಿವ ಸಹಿತ ಬಿಡುವದಿಲ್ಲ ಅಂತ ಜೀವ ಭಯಹಾಕಿ ಹೋದರು ನಂತರ ನಾನು ಹಾಗೂ ನನ್ನ ಗಂಡ ದೊಡ್ಡದೀರಪ್ಪ ರವರು ಜಗಳದಲ್ಲಿ ಆದ ಗಾಯಪೆಟ್ಟಿಗೆ ಉಪಚಾರ ಕುರಿತು ಲಿಂಗಸೂರ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆಯಾದೇವು ನಂತರ ದಿನಾಂಕ 17/09/2022 ರಂದು ನಾರಾಯಣಪೂರ ಪೊಲೀಸ್ ಠಾಣೆಯ ಬಾಬು ಎ.ಎಸ್.ಐ ರವರು ಲಿಂಗಸೂರ ಸರಕಾರಿ ಆಸ್ಪತ್ರೆಗೆ ಬಂದು ನನಗೆ ಹಾಗೂ ನನ್ನ ಗಂಡನಿಗೆ ಘಟನೆಯ ಬಗ್ಗೆ ವಿಚಾರಿಸಿದ್ದು ನಾವು ಬಾಬು ಎ.ಎಸ್.ಐ ಸಾಹೇಬರ ಮುಂದೆ ನಾವು ಹೊಲದ ವಿಷಯದ ಸಂಬಂದ ನಮ್ಮ ಅಣ್ಣ ತಮ್ಮಂದಿರೊಂದಿಗೆ ಜಗಳ ಮಾಡಿಕೊಂಡಿದ್ದು ಈ ಬಗ್ಗೆ ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿಕೊಂಡು ನಂತರ ಠಾಣೆಗೆ ಬಂದು ಪಿಯರ್ಾದಿ ಕೊಡುತ್ತೇವೆ ಅಂತಾ ಅವರ ಮುಂದೆ ಹೇಳಿಕೆ ನೀಡಿದ್ದೇವು ನಂತರ ನಮ್ಮ ಜಗಳದ ಬಗ್ಗೆ ನಮ್ಮ ಹಿರಿಯರೊಂದಿಗೆ ವಿಚಾರಮಾಡಿಕೊಂಡು ಇಂದು ತಡವಾಗಿ ಬಂದು ಪಿಯರ್ಾದಿ ಸಲ್ಲಿಸಿದ್ದು ನನಗೆ ಮತ್ತು ನನ್ನ ಗಂಡನಿಗೆ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ 7 ಜನರ ಮೇಲೆ ಕೇಸು ಮಾಡಲು ಪಿಯರ್ಾದಿ ಅಜರ್ಿ ಇರುತ್ತದೆ . ಅಂತಾ ಪಿಯರ್ಾದಿಯ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ: 35/2022 ಕಲಂ: 143, 147, 148, 323, 324, 504, 506, ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 73/2022 ಕಲಂ78 (3) ಕೆ.ಪಿ ಯಾಕ್ಟ : ದಿನಾಂಕ:23/09/2022 ರಂದು 15.15 ಪಿ.ಎಮ್ ಕ್ಕೆ, ಶ್ರೀ. ಚಿದಾನಂದ ಸೌದಿ ಪಿಎಸ್ಐ (ಕಾ.ಸು) ಹುಣಸಗಿ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಿಹಾಳ ಗ್ರಾಮದ ಶ್ರೀ ಹನುಮಾನದ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:73/2022 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ. ನಂತರ ಪಿಎಸ್ಐ ಸಾಹೇಬರು ರವರು 18.00 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 1050/- ರೂ.ಗಳು, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ 18.10 ಪಿ.ಎಮ್ ಕ್ಕೆ ಆದೇಶ ನೀಡಿದ್ದು,್ದ ಇರುತ್ತದೆ.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 74/2022 ಮಹಿಳೆ ಕಾಣೆಯಾದ ಬಗ್ಗೆ : ದಿನಾಂಕ:20/09/2022 ರಂದು ಮದ್ಯಾಹ್ನ 12.30 ಗಂಟೆಯ ಸುಮಾರಿಗೆ ಫಿರ್ಯಾದಿಯ ಮೊಮ್ಮಗಳಾದ ಶ್ರೀಮತಿ. ರೇಣುಕಾ ಗಂಡ ಭೂಮಣ್ಣ ದೊಡ್ಡಮನಿ ವಯಾ-20 ವರ್ಷ ಜಾ:ಕುರುಬರ ಉ:ಮನೆ ಕೆಲಸ ಸಾ:ವಜ್ಜಲ ತಾ:ಹುಣಸಗಿ ಇವಳು ಹೊರಕಡಿಗೆ ಹೋಗಿ ಬರುವುದಾಗಿ ಹೇಳಿ ತೆಂಬಿಗೆ ತೆಗೆದುಕೊಂಡು ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಸದರಿ ಶ್ರೀಮತಿ. ರೇಣುಕಾ ಇವಳಿಗೆ ಅಂದಿನಿಂದ ಇಲ್ಲಿಯವರೆಗೆ ಹುಡುಕಾಡಿದ್ದು ಸಿಕ್ಕಿರುವದಿಲ್ಲ. ಫಿರ್ಯಾದಿಯು ತನ್ನ ಮೊಮ್ಮಗಳಾದ ಶ್ರೀಮತಿ. ರೇಣುಕಾ ಇವಳಿಗೆ ಎಲ್ಲಾ ಕಡೆ ಹುಡುಕಾಡಿ ಠಾಣೆಗೆ ಬರಲು ತಡವಾಗಿದ್ದು ಇರುತ್ತದೆ. ನನ್ನ ಮೊಮ್ಮಗಳಾದ ಶ್ರೀಮತಿ ರೇಣುಕಾ ಇವಳಿಗೆ ಪತ್ತೆ ಹಚ್ಚಿ ಕೊಡಬೇಕು ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ:77/2022 ಕಲಂ 87 ಕೆಪಿ ಯ್ಯಾಕ್ಟ : ಇಂದು ದಿನಾಂಕ 23/09/2022 ರಂದು 3 ಪಿ.ಎಮ್.ಕ್ಕೆ ಫಿಯರ್ಾದಿ ಠಾಣೆಯಲ್ಲಿದ್ದಾಗ ಅರಳಹಳ್ಳಿ ಕ್ರಾಸ್ ಹತ್ತಿರಇರುವ ಮಲ್ಲಪ್ಪ ಪಡದಳ್ಳಿ ಇವರ ಹೊಲದಲ್ಲಿನ ಸಾರ್ವಜನಿಕಖುಲ್ಲಾಜಾಗದಲ್ಲಿಕೆಲವು ಜನರುದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿಅಂದರ ಬಾಹರಅಂತಇಸ್ಪೇಟಜೂಜಾಟಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ 4.10 ಪಿ.ಎಮ್ ಕ್ಕೆ ದಾಳಿ ಮಾಡಿದಾಗ 07 ಜನಆರೋಪಿತರು ಸಿಕ್ಕಿದ್ದು ಹಾಗು ಕಣದಲ್ಲಿಂದ ನಗದುಒಟ್ಟು ಹಣ11200/- ರೂ, 52 ಇಸ್ಪೇಟ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕುರಿತು ವರದಿ ಸಲ್ಲಿಸಿರುತ್ತಾರೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 165/2022 ಕಲಂ 78 (3) ಕೆ.ಪಿ ಆಕ್ಟ್ : ಇಂದು ದಿನಾಂಕ 23.09.2022 ರಂದು 1700 ಗಂಟೆಗೆ ಶ್ರೀ ಬಾಬುರವ ಪಿ.ಎಸ್.ಐ. ಶಹಾಪೂರ ಠಾಣೆ ರವರು ಠಾಣೆಗೆ ಹಾಜರಾಗಿ ಕೊಟ್ಟ ವರಧಿ ಸಾರಾಂಶವೇನಂದರೆ ಇಂದು ದಿನಾಂಕ 23/09/2022 ರಂದು 14-30 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಚೆಟ್ನಳ್ಳಿ ಗ್ರಾಮದ ಕೋಟಿ ಬಸವೇಶ್ವರ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯ ಸಿಬ್ಬಂದಿಯವರಾದ ಶ್ರೀ ವಿಠೋಬ ಎ ಎಸ್ ಐ. ಕಾಶಿನಾಥ ಹೆಚ್.ಸಿ.48. ಸುನೀಲ ಪಿಸಿ 221 ರವರಿಗೆ ಮಾಹಿತಿ ವಿಷಯ ತಿಳಿಸಿ. ಅವರಲ್ಲಿ ಸುನೀಲ ಪಿಸಿ 221 ರವರಿಗೆ 14-35 ಗಂಟೆಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ಕಳಿಸಿದ್ದರಿಂದ ಸದರಿಯವರು ಇಬ್ಬರೂ ಪಂಚರಾದ 1] ಶ್ರೀ ದೇವರಾಜ ತಂದೆ ಭೀಮರಡ್ಡಿ ಗುರಸುಣಗಿ ವ|| 26 ಜಾ|| ಲಿಂಗಾಯತ ರಡ್ಡಿ ಉ|| ಒಕ್ಕಲುತನ ಸಾ|| ಚೆಟ್ನಳ್ಳಿ ತಾ|| ಶಹಾಪೂರ. 2] ಶ್ರೀ ಮಂಜು ತಂದೆ ನಾಗಪ್ಪ ಕೋಚರ್ಾ ವ|| 28 ಜಾ|| ಪ ಜಾತಿ ಉ|| ವ್ಯಾಪಾರ ಸಾ|| ಬಸವೇಶ್ವರ ನಗರ ಶಹಾಪೂರ. ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ 14-40 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಮೇಲ್ಕಂಡ ಬಾತ್ಮಿಯ ವಿಷಯ ತಿಳಿಸಿ ದಾಳಿ ಕುರಿತು ಹೋಗುವುದಿದೆ ತಾವು ನಮ್ಮ ಜೊತೆಯಲ್ಲಿ ಬಂದು ಜಪ್ತಿ ಪಂಚನಾಮೆಯ ಪಂಚರಾಗಿ ಸಹಕರಿಸಬೇಕು ಅಂತಾ ಕೇಳಿಕೊಂಡ ಮೇರೆಗೆ ಪಂಚರಾಗಿ ನಮ್ಮ ಜೊತೆಯಲ್ಲಿ ಬರಲು ಒಪ್ಪಿಕೊಂಡರು. ಮೇಲಾಧಿಕಾರಿಗಳ ಮಾರ್ಗದಶನದಲ್ಲಿ ಸದರಿಯವನ ಮೇಲೆ ದಾಳಿ ಮಾಡಲು ನಾನು ಪಂಚರು ಹಾಗು ಸಿಬ್ಬಂದಿಯವರು ಒಂದು ಖಾಸಗಿ ವಾಹನದಲ್ಲಿ ಕುಳಿತುಕೊಂಡು ಠಾಣೆಯಿಂದ 14-45 ಗಂಟೆಗೆ ಹೊರಟು ಚೆಟ್ನಳ್ಳಿ ಗ್ರಾಮದ ಬಸವೇಶ್ವರ ಗುಡಿಯ ಹತ್ತಿರ ಸ್ವಲ್ಪ ದೂರದಲ್ಲಿ 15-15 ಗಂಟೆಗೆ ಹೋಗಿ ವಾಹನ ನಿಲ್ಲಿಸಿ. ವಾಹನದಿಂದ ಈ ಮೇಲ್ಕಂಡ ನಾವೆಲ್ಲರು ಕೆಳಗೆ ಇಳಿದು ಗ್ರಾಮದ ಕೋಟಿ ಬಸವೇಶ್ವರ ದೇವಸ್ಥಾನದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನಿಗಾಮಾಡಿ ನೋಡಲಾಗಿ ಬಸವೇಶ್ವರ ದೇವಸ್ಥಾನದ ಮುಂದಿನ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ 1 ರೂ ಆಡಿದರೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಸಾರ್ವಜನಿಕರಿಗೆ ಕೂಗಿ, ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದನು. ಆಗ ನಾವೆಲ್ಲರೂ ಸದರಿಯವನು ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಂಡು 15-20 ಗಂಟೆಗೆ ನಾವೆಲ್ಲರೂ ದಾಳಿ ಮಾಡಿದಾಗ. ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದವನು ಸಿಕ್ಕಿಬಿದ್ದಿದ್ದು. ಮಟಕಾ ಅಂಕಿ ಸಂಖ್ಯೆಗಳನ್ನು ಬರೆಯಿಸಲು ಬಂದ ಜನರು ಓಡಿ ಹೋಗಿರುತ್ತಾರೆ. ಆಗ ನಾನು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಈಶ್ವರ ತಂದೆ ಶಂಕರೆಪ್ಪ ಚೆನ್ನಾರಡ್ಡಿ ವ|| 60 ಜಾ|| ಲಿಂಗಾಯತ ರಡ್ಡಿ ಉ|| ಮಟಕಾ ನಂಬರ ಬರೆದುಕೊಳ್ಳುವದು ಸಾ|| ಚೆಟ್ನಳ್ಳಿ ತಾ|| ಶಹಾಪೂರ ಅಂತ ಹೇಳಿದನು. ಈತನ ಹತ್ತಿರ 1) ನಗದು ಹಣ 3100=00 ರೂಪಾಯಿ ಇದ್ದು 2) ಒಂದು ಮಟಕಾ ನಂಬರ ಬರೆದುಕೊಂಡಿದ್ದ ಚೀಟಿ ಇರುತ್ತದೆ ಅ.ಕಿ 00-00. 3) ಒಂದು ಬಾಲ್ ಪೆನ್ ಸಿಕ್ಕಿದು,್ದ ಅ.ಕಿ 00-00 ಸದರಿಯವನಿಗೆ ವಿಚಾರಣೆ ಮಾಡಲಾಗಿ, ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ನಂಬರಗಳು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಇರುತ್ತವೆ ಅಂತಾ ಹೇಳಿ ಹಾಜರ ಪಡಿಸಿದನು. ಅಲ್ಲದೇ ತನ್ನ ಮಗನಾದ ಮಲ್ಲಣ್ಣ ತಂದೆ ಈಶ್ವರ ಚೆನ್ನರಡ್ಡಿ ಈತನು ಸಹ ನಮ್ಮೂರಿನಲ್ಲಿ ಹಾಗು ನಮ್ಮ ಊರಿನ ಪಕ್ಕದ ನಾಲವಾಡಗಿ ಗ್ರಾಮದಲ್ಲಿ ಮಟಕಾ ನಂಬರ ಬರೆದುಕೊಳ್ಳುತ್ತಿದ್ದು ನಾನು ಹಾಗು ನಮ್ಮ ಮಗ ಮಲ್ಲಣ್ಣ ಇಬ್ಬರೂ ಮಟಕಾ ನಂಬರ ಬರೆದುಕೊಂಡ ಹಣವನ್ನು ಬುಕ್ಕಿಯಾದ ರಾಜು ಜೇವಗರ್ಿ ಇವರಿಗೆ ಕೊಡುತ್ತೇವೆ ಅಂತ ತಿಳಿಸಿದ್ದು ನಂತರ ಆತನಿಂದ ಪಡೆದ ಮುದ್ದೆಮಾಲುಗಳನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಪುರಾವೆ ಕುರಿತು ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು 15-20 ರಿಂದ 16-20 ಗಂಟೆಯವರೆಗೆ ಜಪ್ತಿ ಪಂಚನಾಮೆಮಾಡಿಕೊಂಡು ನಂತರ ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದು ಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 17-00 ಗಂಟೆಗೆ ಬಂದು ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಒಬ್ಬ ಆರೋಪಿಯನ್ನು ಹಾಜರು ಪಡಿಸಿ ಒಂದು ವರದಿಯನ್ನು ತಯಾರಿಸಿ ಈಶ್ವರ ತಂದೆ ಶಂಕರೆಪ್ಪ ಚೆನ್ನಾರಡ್ಡಿ ಹಾಗು ಅವರ ಮಗ ಮಲ್ಲಣ್ಣ ತಂದೆ ಈಶ್ವರ ಚೆನ್ನರಡ್ಡಿ ಹಾಗು ಬುಕ್ಕಿ ರಾಜು ಸಾ|| ಜೇವಗರ್ಿ ಇವರ ವಿರುದ್ದ ಮುಂದಿನ ಕ್ರಮಕೈಕೊಳ್ಳಲು ವರದಿ ಸಲ್ಲಿಸಿದ್ದು ಸದರಿ ವರಧಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂಬರ 165/2022 ಕಲಂ 78[3] ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕ್ಯಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 25-09-2022 01:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080