ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 24-10-2022

ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 139/2022 ಕಲಂ: 11 (ಡಿ) ಪ್ರಾಣಿ ಹಿಂಸೆ ಪ್ರತಿಬಂಧಕಕಾಯ್ದೆ 1960, ಕಲಂ: 50 ಟ್ರಾನ್ಸಪೋರ್ಟಆಫ್ ಎನಿಮಲ್ ಆಕ್ಟ 1978, ಕಲಂ: 192(ಎ), 177 ಐಎಮ್ವಿ ಆಕ್ಟ: ಇಂದು ದಿನಾಂಕ 23/10/2022 ರಂದು ಸಾಯಂಕಾಲ 18-00 ಗಂಟೆಗೆ ಸರಕಾರಿತಫರ್ೇ ಫಿಯರ್ಾದಿ ಶ್ರೀ ಸಿದ್ದಣ್ಣ ಪಿ.ಎಸ್.ಐ ಸುರಪುರ ಪೊಲೀಸ್ಠಾಣೆ ಇವರು ಠಾಣೆಗೆ ಹಾಜರಾಗಿ, ಮೂಲ ಜಪ್ತಿ ಪಂಚನಾಮೆಯೊಂದಿಗೆ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ನಾನು ಸಿದ್ದಣ್ಣ ಪಿ.ಎಸ್.ಐ (ಅ.ವಿ) ಸುರಪೂರ ಪೊಲೀಸ್ಠಾಣೆಇದ್ದು, ಈ ವರದಿಯ ಮೂಲಕ ವಿನಂತಿಸಿಕೊಳ್ಳುವದೇನೆಂದರೆ, ಇಂದು ದಿನಾಂಕ: 23/10/2022 ರಂದು3 ಪಿ.ಎಮ್. ಸುಮಾರಿಗೆಠಾಣೆಯಲ್ಲಿದ್ದಾಗಖಚಿತವಾದ ಬಾತ್ಮಿ ಬಂದಿದ್ದೆನೆಂದರೆಒಂದು ಅಶೋಕ ಲೇಲ್ಯಾಂಡ್ ಪಿಕಪ್ ವಾಹನ ನಂ ಕೆಎ 33 ಎ 2675 ನೇದ್ದರಲ್ಲಿಇಕ್ಕಟ್ಟಾದ ಸ್ಥಳದಲ್ಲಿ ಜಾನುವಾರಗಳಿಗೆ ಹಿಂಸೆಯಾಗುವರೀತಿಯಲ್ಲಿ ದನಗಳನ್ನು ಹಾಕಿಕೊಂಡುರಂಗಂಪೇಠಕಡೆಯಿಂದ ವೆಂಕಟಾಪುರಕಡೆಗೆ ಸಾಗಾಣಿಕೆ ಮಾಡುತ್ತಿದ್ದಾರೆಅಂತ ಮಾಹಿತಿ ಬಂದ ಮೇರೆಗೆಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಹೊನ್ನಪ್ಪ ಸಿಪಿಸಿ 427 2) ಶ್ರೀ ಮಹಿಬೂಬ ಅಲಿ ಹೆಚ್ಸಿ-83 ಇಬ್ಬರಿಗೂ ವಿಷಯ ತಿಳಿಸಿ ಶ್ರೀ ಹೊನ್ನಪ್ಪ ಪಿಸಿ 427 ರವರಿಗೆಇಬ್ಬರು ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ ಮೇರೆಗೆ ಹೊನ್ನಪ್ಪ ಪಿಸಿ ರವರುಇಬ್ಬರು ಪಂಚರಾದ 1) ಶ್ರೀ ಸಚಿನಕುಮಾರತಂದೆ ನಾಗರಾಜ ನಾಯಕ ವಯಾ:22 ವರ್ಷ ಉ:ಭಜರಂಗದಳ ಕಾರ್ಯಕರ್ತಜಾತಿ: ಬೇಡರ ಸಾ|| ಮ್ಯಾಗೇರಿಓಣಿ ಸುರಪುರ 2) ಶ್ರೀ ವಿರೇಶತಂದೆ ಗೋಪಾಲ ಪ್ಯಾಪ್ಲಿ ವಯಾ:23 ವರ್ಷ ಉ:ಭಜರಂಗದಳ ಕಾರ್ಯಕರ್ತಜಾತಿ: ಬೇಡರ ಸಾ|| ಬಿಚಗತ್ಕೇರಿಓಣಿ ಸುರಪುರತಾ:ಸುರಪೂರಇವರನ್ನು 3:30 ಪಿ.ಎಂ.ಕ್ಕೆ ಠಾಣೆಗೆ ಬರಮಾಡಿಕೊಂಡು ಬಂದಿದ್ದುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡರು. ನಂತರಠಾಣೆಯ ಸಕರ್ಾರಿಜೀಪ್ ನಂ ಕೆಎ 33 ಜಿ 094 ನೇದ್ದರಲ್ಲಿ 3.40 ಪಿಎಮ್ಕ್ಕೆ ಹೊರಟು 4:00 ಪಿ.ಎಮ್.ಕ್ಕೆ ಸುರಪುರ ನಗರದಎಸ್ಬಿಐ ಬ್ಯಾಂಕ್ ಹತ್ತಿರ ಹೋಗಿ ಜೀಪ ನಿಲ್ಲಿಸಿ ನಿಂತಿದ್ದಾಗಅಲ್ಲಿಗುರುನಾಥತಂದೆ ಶಂಕ್ರೆಪ್ಪ ಶೀಲವಂತ, ಅಮರೇಶತಂದೆ ಹಣಮಂತ ನಾಯಕ, ಸಂಜುನಾಯಕತಂದೆ ವೆಂಕಟೇಶ ನಾಯಕಇವರುಕೂಡಅಲ್ಲಿಯೇಇದ್ದರು. ಸಾಯಂಕಾಲ 4.15 ಗಂಟೆಗೆರಂಗಂಪೇಠಕಡೆಯಿಂದಒಂದು ಅಶೋಕ ಲೇಲ್ಯಾಂಡ್ ಪಿಕಪ್ ವಾಹನ ನಂ ಕೆಎ 33 ಎ 2675 ನೇದ್ದು ಬಂದಿದ್ದು, ಸದರಿ ವಾಹನವನ್ನುರೋಡಿನ ಬದಿಗೆ ಹಾಕಿ ವಾಹನ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಆಸೀಫ್ ತಂದೆದಾವೂದಸಾಬ ಖುರೇಷಿ ವ||26 ವರ್ಷಜಾ|| ಮುಸ್ಲಿಂ ಉ|| ಚಾಲಕ ಸಾ|| ಕಬಾಡಗೇರಾ ಸುರಪುರಅಂತಾ ತಿಳಿಸಿದನು. ಸದರಿಯವನಿಗೆ ವಾಹನದಲ್ಲಿ ಏನು ಇವೆ ಅಂತ ಕೇಳಿದಾಗ ದನಗಳು ಇರುತ್ತವೆಅಂತ ಹೇಳಿದನು. ಈ ವಾಹನದಲ್ಲಿ ಜಾನುವಾರುಗಳನ್ನು ಸಾಗಾಣಿಕೆ ಮಾಡಲು ಸಂಬಂದಪಟ್ಟ ಪ್ರಾಧಿಕಾರದಿಂದ ಪರವಾನಿಗೆ ಪಡೆದಿದ್ದರೆ ದಾಖಲಾತಿ ಹಾಜರುಪಡಿಸುವಂತೆ ಮತ್ತು ದನಗಳನ್ನು ಎಲ್ಲಿಖರೀದಿ ಮಾಡಿದ್ದು, ಎಲ್ಲಿಗೆತೆಗೆದುಕೊಂಡು ಹೋಗುತಿದ್ದೀರಿ, ಜಾನುವಾರಗಳಿಗೆ ಸಂಬಂದಿಸಿದ ಖರೀದಿಯದಾಖಲಾತಿ ಹಾಜರುಪಡಿಸಲು ಹೇಳಿದಾಗ ಯಾವುದೇ ದಾಖಲಾತಿಗಳು ಇರುವದಿಲ್ಲ ಅಂತಾ ಹೇಳಿದನು. ಜಾನುವಾರುಗಳನ್ನು ಇಂದು ದಿನಾಂಕ: 23/10/2022 ರಂದು ವಿವಿಧ ಗ್ರಾಮಗಳ ಜನರಿಂದಖರೀದಿ ಮಾಡಿಕೊಂಡು ಬೇರೆಕಡೆಗೆ ಮಾರಾಟ ಮಾಡಲುತೆಗೆದುಕೊಂಡು ಹೋಗುತ್ತಿದ್ದೇನೆಅಂತ ಹೇಳಿದಾಗ ಸದರಿ ವಾಹನದಲ್ಲಿದ್ದ ಜಾನುವಾರುಗಳನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು 3 ಎತ್ತಗಳು 90000=00 ರೂಪಾಯಿಕಿಮ್ಮತ್ತಿನವುಇದ್ದು, ಸದರಿ ಎತ್ತುಗಳನ್ನು ಇಕ್ಕಟ್ಟಾದ ಸ್ಥಳದಲ್ಲಿ ಅವುಗಳಿಗೆ ಹಿಂಸೆಯಾಗುವರೀತಿಯಲ್ಲಿ ವಾಹನದಲ್ಲಿ ಹಾಕಿಕೊಂಡು ಸಾಗಿಸುತ್ತಿದ್ದ ಬಗ್ಗೆ ಕಂಡು ಬಂದಿರುತ್ತದೆ. ನಾವು ವಾಹನದಲ್ಲಿದ್ದ ಜಾನುವಾರಗಳನ್ನು ಪರಿಶೀಲಿಸುತ್ತಿದ್ದಾಗ ಚಾಲಕನು ಓಡಿಹೋಗಿರುತ್ತಾನೆ. ಮೇಲ್ಕಂಡ ಜಾನುವಾರುಗಳನ್ನು ಮತ್ತು ಅಶೋಕ ಲೇಲ್ಯಾಂಡ್ ಪಿಕಪ್ ವಾಹನ ನಂ ಕೆಎ 33 ಎ 2675 ಅ.ಕಿ 2 ಲಕ್ಷರೂಪಾಯಿ ವಾಹನವನ್ನು ಪಂಚರ ಸಮಕ್ಷಮ ಸಾಯಂಕಾಲ 4.30 ಗಂಟೆಯಿಂದ 5.30 ಗಂಟೆ ವರೆಗೆಜಪ್ತಿ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡು ಒಬ್ಬ ಖಾಸಗಿ ವಾಹನ ಚಾಲಕನ ಸಹಾಯದಿಂದಜಾನುವಾರು ಮತ್ತು ವಾಹನ ಸಮೇತ ಮರಳಿ ಪೊಲೀಸ್ಠಾಣೆಗೆ ಬಂದು ಠಾಣೆಯಲ್ಲಿ ಆರೋಪಿತನ ವಿರುದ್ದ ವರದಿಯನ್ನು ತಯಾರಿಸಿ ಸಾಯಂಕಾಲ 6.00 ಗಂಟೆಗೆ ಮೂಲ ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಸರಕಾರಿತಪರ್ೆ ಪಿರ್ಯಾದಿದಾರನಾಗಿ ವರದಿ ಸಲ್ಲಿಸಿದ್ದು ಮುಂದಿನ ಕ್ರಮ ಕೈಕೊಳ್ಳಲು ವಿನಂತಿಅಂತಾಕೊಟ್ಟ ವರದಿಯ ಸಾರಾಂಶದ ಮೇಲಿಂದಠಾಣೆಗುನ್ನೆ ನಂ 139/2022 ಕಲಂ 11(ಡಿ) ಪ್ರಾಣಿ ಹಿಂಸೆ ಪ್ರತಿಬಂಧಕಕಾಯ್ದೆ 1960, ಕಲಂ 50 ಟ್ರಾನ್ಸ್ಪೊಟರ್್ಆಫ್ ಎನಿಮಲ್ಆಕ್ಟ್ -1978, ಕಲಂ 192(ಎ), 177 ಐ.ಎಮ್.ವಿ ಆಕ್ಟ್ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿರುತ್ತದೆ.

ಇತ್ತೀಚಿನ ನವೀಕರಣ​ : 24-10-2022 10:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080