ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 24-11-2021

ಯಾದಗಿರಿ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 157/2021 ಕಲಂ: ಮುಷ್ಯ ಕಾಣೆ : ಇಂದು ದಿನಾಂಕ:-23/11/2021 ರಂದು ಸಮಯ ಸಂಜೆ 5:30 ಗಂಟೆಗೆ ಫಿಯರ್ಾದಿದಾರಳಾದ ಶ್ರೀಮತಿ ಗೀತಾ ಗಂಡ ದೇವಿಂದ್ರಯ್ಯ ಸ್ವಾಮಿ ವಯಾ|| 45 ವರ್ಷ ಜಾತಿ|| ಜಂಗಮ ಉ|| ಮನೆ ಕೆಲಸ ಸಾ|| ಬಂದಳ್ಳಿ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಬಂದು ಕಂಪ್ಯೂಟರ್ನಲ್ಲಿ ಕನ್ನಡದಲ್ಲಿ ಟೈಪ್ ಮಾಡಿಸಿದ ಅಜರ್ಿ ತಂದು ಸಲ್ಲಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನಾನು ಶ್ರೀಮತಿ ಗೀತಾ ಗಂಡ ದೇವಿಂದ್ರಯ್ಯ ಸ್ವಾಮಿ ವಯಾ|| 45 ವರ್ಷ ಜಾತಿ|| ಜಂಗಮ ಉ|| ಮನೆ ಕೆಲಸ ಸಾ|| ಬಂದಳ್ಳಿ ತಾ|| ಜಿ|| ಯಾದಗಿರಿ ಆಗಿದ್ದು ಈ ಮೂಲಕ ದೂರು ಸಲ್ಲಿಸುವದೆನೆಂದರೆ ನನ್ನ ಪತಿಯಾದ ಶ್ರೀ ದೇವಿಂದ್ರಯ್ಯ ಸ್ವಾಮಿ ತಂದೆ ಶರಣಯ್ಯ ಸ್ವಾಮಿ ವಯಾ|| 56 ವರ್ಷ ಜಾತಿ|| ಜಂಗಮ ನಾವಿಬ್ಬರೂ ಸುಮಾರೂ 25-30 ವರ್ಷಗಳ ಹಿಂದೆ ಮದುವೆ ಯಾಗಿದ್ದು ನಮಗೆ ವಿದ್ಯಾಶ್ರೀ ಅಂತಾ ಹೆಣ್ಣು ಮಗಳಿದ್ದು ಬೆಂಗಳೂರಿನಲ್ಲಿ ಖಾಸಗಿ ಕೆಲಸ ಮಾಡಿಕೊಂಡಿರುತ್ತಾಳೆ. ವಿಶ್ವೆಶ್ವರಯ್ಯ ಸ್ವಾಮಿ ಅಂತಾ ಒಬ್ಬ ಗಂಡು ಮಗನಿದ್ದು ನಾನು ನನ್ನ ಗಂಡ ಮತ್ತು ನನ್ನ ಮಗ ಮೂವರು ಬಂದಳ್ಳಿ ಗ್ರಾಮದಲ್ಲಿ ವಾಸವಾಗಿರುತ್ತೆವೆ. ಹೀಗಿರುವಾಗ 29/10/2021 ರಂದು ಮುಂಜಾನೆ 09:00 ಸುಮಾರಿಗೆ ನಾನು ಮತ್ತು ನನ್ನ ಗಂಡನಾದ ದೇವಿಂದ್ರಯ್ಯ ಸ್ವಾಮಿ ಮಾತನಾಡುತ್ತ ಕುಳಿತಾಗ ಯಾವದೋ ವಿಷಯಕ್ಕೆ ನನಗೆ ಬೈದರು ಅದಕ್ಕೆ ನನಗೂ ಕೋಪ ಬಂದು ಸುಮ್ಮನೆ ಇರಿ ಯಾಕೆ ಕಿರಿಕಿರಿ ಮಾಡಿತ್ತೀರಿ ಅಂದೆ ಹೀಗೆ ನಮ್ಮ ನಡುವೆ ಸಂಸಾರಿಕವಾಗಿ ಬಾಯಿ ಮಾತಿನ ಜಗಳವಾಯಿತು ಮತ್ತೆ ಸಮಾಧಾನ ಮಾಡಿದಾಗ ಉಪಹಾರ ಮಾಡಿಕೊಂಡು ಮದ್ಯಾಹ್ನ 12:00 ಸುಮಾರಿಗೆ ನನ್ನ ಪತಿ ಉಟ್ಟ ಬಟ್ಟೆಯಲಿ ಹೊರಗೆ ಹೋದವರು ಸಾಯಂಕಾಲ ವಾದರು ಮನೆಗೆ ಬರದ ಕಾರಣ ನಾನು ಮತ್ತು ನನ್ನ ಮಗನಾದ ವಿಶ್ವೆಶ್ವರಯ್ಯ ಕೂಡಿಕೊಂಡು ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವದಿಲ್ಲಾ ನಂತರ ನಮ್ಮ ಸುತ್ತ ಮುತ್ತಲ ಗ್ರಾಮಗಳಾದ ಯಡ್ಡಳ್ಳಿ, ಹತ್ತಿಕುಣಿ ಮತ್ತು ಯಾದಗಿರಿಯಲ್ಲಿ ಹಾಗೂ ನಮ್ಮ ಸಂಬಂದಿಕರಲ್ಲಿಯೂ ವಿಚಾರಿಸಿ ನೋಡಲಾಗಿ ನಮಗೆ ಸಿಕ್ಕಿರುವದಿಲ್ಲಾ ನಂತರ ಬೆಂಗಳೂರಿನಲ್ಲಿ ವಾಸಿಸುತ್ತಿರುವ ನನ್ನ ಮಗಳಿಗೆ ಹೇಳಲಾಗಿ ಅವಳು ಕೂಡ ಬೆಂಗಳೂರಿನಲ್ಲಿ ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಲುಂಗಿ ಮತ್ತು ಬಿಳಿ ಬಣ್ಣದ ಚೆಕ್ಸ ಶರ್ಟ ಹುಟ್ಟುಕೊಂಡಿದ್ದು. ದೇಹ ಚಹರೆ ತೆಳ್ಳನೆಯ ದೇಹ, ಚಹರೆ ಸೊಟ್ಟಾದ ಉದ್ದನೆಯ ಮುಖ, ಉದ್ದನೆಯ ಮೂಗು, ಕಪ್ಪು ಬಿಳಿಪು ಕೂದಲು, ಎತ್ತರ 5'5, ಕುರುಚಲು ಗಡ್ಡ ಹೀಗೆ ಚಹೆರೆ ಇದ್ದು ದೆಹದ ಬಲ ಭಾಗ ಪ್ಯಾರಲೆಸ್ (ಲಕ್ವಾ) ಆಗಿ ಸ್ವಾಧೀನ ಕಳೆದುಕೊಂಡಿರುತ್ತದೆ. ನಮ್ಮ ಸುತ್ತಮುತ್ತಲ ಗ್ರಾಮಗಳು ಮತ್ತು ನಮ್ಮ ಸಮಬಂದಿಕರಲ್ಲಿ ವಿಚಾರಿಸಿ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಆದ್ದರಿಂದ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೇನೆ. ಆದ್ದರಿಂದ ನನ್ನ ಪತಿಯನ್ನು ಹುಡುಕಿ ಕೊಡಬೇಕಾಗಿ ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೆನೆ ಅಂತಾ ಅಜರ್ಿ ಸಾರಾಂಶದ ಮೇಲೆ ಠಾಣ ಗುನ್ನೆ ನಂ. 157/2021 ನೆದ್ದರಲ್ಲಿ ಮನುಷ್ಯ ಕಾಣೆಯಾದ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 185/2021 ಕಲಂ 279, 338 ಐ.ಪಿ.ಸಿ : ಫಿಯರ್ಾಧಿಯ ತಂಗಿ ಮಗನು ದಂತಾಪೂರ ಕ್ರಾಸ ಹತ್ತಿರ ಗುರುಮಠಕಲ್ ದಿಂದ ನಾರಾಯಣಪೇಟ ಕಡೆಗೆ ಹೋಗುವ ರಸ್ತೆಯ ಮೇಲೆ ದಾಟುತ್ತಿರುವಾಗ ಆರೋಪಿತನು ತನ್ನ ಮೋಟರ ಸೈಕಲ ಇಂಜನ ನಂಬರ ಊಂ11ಇಘಒ9ಃ03900 ಮತ್ತು ಅದರ ಚೆಸ್ಸಿ ನಂಬರ ಒಃಐಊಂಘ132ಒ9ಃ64317 ಅತಿವೇಗ ಹಾಗು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿಯರ್ಾದಿಯ ತಂಗಿಯ ಮಗನಿಗೆ ಡಿಕ್ಕಿ ಪಡಿಸಿದ್ದರಿಂದ ತೆಲೆಯ ಹಿಂಬಾಗಕ್ಕೆ ಬಾರಿ ಗುಪ್ತಗಾಯ ಹಾಗೂ ಎಡಗೈಗೆ ತೆರೆಚಿಗ ಗಾಯಗಳಾಗಿದ್ದು ಉಪಚಾರಕ್ಕಾಗಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ ಅಂತಾ ಫಿಯರ್ಾದಿ ವಗೈರೆ.

 

ಸೈದಾಪೂರ ಪೊಲೀಸ ಠಾಣೆ
168/2021 ಕಲಂ. 279, 337, 338 ಐಪಿಸಿ & 187 ಐಎಮ್.ವಿ. ಅಕ್ಟ್ : ದಿನಾಂಕ: 23-11-2021 ರಂದು ಬೆಳಗ್ಗೆ 11-00 ಗಂಟೆಗೆ ಪಿಯರ್ಾಧಿ ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 22-11-2021 ರಂದು ಸಾಂಯಂಕಾಲ 06-00 ಗಂಟೆಗೆ ಸೈದಾಪೂರಕ್ಕೆ ಹೋಗಿ ಅಲ್ಲಿ ನಮ್ಮ ಮನೆಗೆ ಹೋಗಿದ್ದು ಸಾಯಂಕಾಲ 07-30 ಗಂಟೆ ಸುಮಾರಿಗೆ ನಮ್ಮ ಅಣ್ಣನ ಮಗ ಆದಿ ತಂದೆ ಮಲ್ಲಪ್ಪ ಮಹಾಮನಿ ವ|| 12 ವರ್ಷ ಜಾ|| ಲಿಂಗಾಯತ್ ಉ|| ವಿಧ್ಯಾಥರ್ಿ ಈತನು ನಮ್ಮ ಅಂಗಡಿಗೆ ಹೋಗಿ ಬರೋಣ ಅಂತಾ ಹೇಳಿದ್ದರಿಂದ ಆಗ ನಾನು ನಮ್ಮ ಅಣ್ಣನ ಮಗ ಆದಿ ಸೇರಿ ಮನೆಯಿಂದ ಸರಕಾರಿ ಆಸ್ಪತ್ರೆಯ ಎದರುಗಡೆ ಇರುವ ನಮ್ಮ ಅಂಗಡಿಗೆ ರೋಡಿನ ಮೇಲೆ ಇಬ್ಬರು ನಡೆದುಕೊಂಡು ಹೋಗುತ್ತಿರುವಾಗ ಸೈದಾಪೂರ ಊರೊಳಗಿನಿಂದ ಆಟೋ ಚಾಲಕನು ತಾನು ನಡೆಸುವ ಆಟೋವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರೋಡಿನ ಪಕ್ಕದಲ್ಲಿ ನಡೆದುಕೊಂಡು ಹೋಗುವ ನಮ್ಮ ಆದಿಗೆ ಡಿಕ್ಕಿ ಪಡಿಸಿ ಆಟೋ ಬಿಟ್ಟು ಓಡಿ ಹೋದನು ಅವನ ಹೆಸರು ವಿಳಾಸ ಗೋತ್ತಿರುವದಿಲ್ಲ ಅಪಘಾತದಲ್ಲಿ ನಮ್ಮ ಆದಿಗೆ ತಲೆಗೆ ಭಾರಿ ರಕ್ತಗಾಯವಾಗಿ ರಕ್ತ ಸೋರುತಿತ್ತು, ಬಲಗಾಲಿನ ಅಂಗಾಲಿಗೆ ತರಚಿದಗಾಯವಾಗಿತ್ತು, ಆಗ ಸಮಯ ರಾತ್ರಿ 07-40 ಗಂಟೆ ಆಗಿತ್ತು, ಆಟೋ ಪರಿಶೀಲಿಸಿ ನೋಡಲಾಗಿ ಅದರ ನಂ. ಕೆಎ-36. 7481 ಅಂತಾ ಇರುತ್ತದೆ, ಅಪಘಾತವಾದದನ್ನು ನೋಡಿ ನಮ್ಮ ಅಣ್ಣ ಮಲ್ಲಪ್ಪ ಮತ್ತು ಅಲ್ಲಿ ಹಣ್ಣು ಮಾರುವ ಬಸಲಿಂಗಪ್ಪ ಕೂಡ್ಲೂರ ಇವರು ಬಂದರು ಆಗ ಎಲ್ಲರು ಸೇರಿ ಸರಕಾರಿ ಆಸ್ಪತ್ರೆ ಸೈದಾಪೂರಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಬಾಲಂಕು ಆಸ್ಪತ್ರೆ ರಾಯಚೂರಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆಕಾರಣ ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತಪಡಿಸಿದ ಆಟೋ ನಂ. ಕೆಎ-36. 7481 ನೇದ್ದರ ಚಾಲಕನ ಮೇಲೆ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ, ಕೇಸು ಮಾಡುವದರ ಬಗ್ಗೆ ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ತಡವಾಗಿ ಬಂದಿರುತ್ತೇನೆ.

 


ಸೈದಾಪೂರ ಪೊಲೀಸ ಠಾಣೆ
ಗುನ್ನೆ ನಂ: 169/2021 ಕಲಂ 87 ಕೆ.ಪಿ ಕಾಯ್ದೆ : ದಿನಾಂಕ: 23-11-2021 ರಂದು 07-00 ಪಿಎಮ್ ಕ್ಕೆ ಪಿ..ಐ ಸಾಹೇಬರು ಠಾಣೆಗೆ ಹಾಜರಾಗಿ ಸಾಯಂಕಾಲ 05-00 ಗಂಟೆಗೆ ಕಡೆಚೂರ ಕೆ.ಐ.ಎ.ಡಿ.ಬಿ ಪ್ರದೆಶದ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪೆಟ ಜೂಜಾಟದ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ 6 ಜನ ಆರೋಪಿತರನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.169/2021 ಕಲಂ.87 ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 24-11-2021 10:11 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080