ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 24-12-2021

ಯಾದಗಿರ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 167/2021 ಕಲಂ.379 ಐ.ಪಿ.ಸಿ. : ಇಂದು ದಿನಾಂಕ 23/12/2021 ರಂದು ಬೆಳಗ್ಗೆ 10:00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಮಾಳಪ್ಪ ತಂದೆ ರಾಮಲಿಂಗಪ್ಪ ಸಾ:ಯಾದಗಿರ ಒಂದು ಗಣಕ ಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ಕೊಟ್ಟಿದ್ದೆನೆಂದರೆ ನಾನು ಮಾಳಪ್ಪ ತಂದೆ ರಾಮಲಿಂಗಪ್ಪ ಸಾ:1/27,ಅಲ್ಲಿಪೂರ ತಾ:ಜಿ:ಯಾದಗಿರ ನಾನು ಯಾದಗಿರಿ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಚಾಲಕ ಅಂತ ಸುಮಾರು ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುತ್ತೇನೆ. ಹೀಗಿರುವಾಗ ಹಿಗಿದ್ದು ದಿನಾಂಕ:17-12-2021 ರಂದು ನಾನು ನನ್ನ ಸಂಬಂಧಿಕರಾದ ಶ್ರೀ ಮಲ್ಲಪ್ಪ ತಂದೆ ಸಿದ್ರಾಮಪ್ಪ ಬೋಳಾರ ಸಾ:ಮನೆ ನಂ.5/97,ಹತ್ತಿಕುಣಿ ತಾ:ಜಿ: ಯಾದಗಿರ ರವರ ಮನೆಗೆ ರಾತ್ರಿ 9:00 ಗಂಟೆಗೆ ನಮ್ಮ ಬಿಗರ ಊರಿಗೆ ಹೊಗಿದ್ದು ಸದರಿ ಗ್ರಾಮಕ್ಕೆ ನನ್ನ ಸ್ವಂತ ಮೊಟಾರ ಸೈಕಲ್ ನಂ.ಕೆ.ಎ-33-ಇಎ-4888.ನೆದ್ದನು ತೆಗೆದುಕೊಂಡು ಹೊಗಿದ್ದೆನು ಅಂದು ತಡ ರಾತ್ರಿ ಆಗಿದ್ದರಿಂದ ನಾನು ನನ್ನ ಮೋಟರ ಸೈಕಲಿಗೆ ಹ್ಯಾಂಡಲ್ ಲಾಕ್ ಮಾಡಿ ನಮ್ಮ ಸಂಭಂದಿಕರ ಮನೆಯ ಮುಂದುಗಡೆ ನೀಲ್ಲಿಸಿ ಅವರ ಮನೆಯಲ್ಲಿ ಮಲಗಿಕೊಂಡು ಮರುದಿವಸ ಬೆಳಗ್ಗೆ ಎದ್ದು ಯಾದಗಿರಿಗೆ ಬರಬೆಕೇಂದು ನೊಡಲಾಗಿ ನಾನು ನೀಲ್ಲಿಸಿದ ಸ್ಥಳದಲ್ಲಿ ಇಲ್ಲದೆ ಇರುವುದು ಕಂಡು ಗಾಭರಿಯಿಂದ ಅಕ್ಕಪಕ್ಕದ ಮನೆಯವರಿಗೆ ವಿಚಾರಿಸಲಾಗಿ ಎಲ್ಲಿಯು ಸಿಕ್ಕಿರುವದಿಲ್ಲ.ಹಾಗೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಿದರು ಸಿಕ್ಕಿರುವದಿಲ್ಲ.ಮನೆಯ ಮುಂದೆ ನಿಲ್ಲಿಸಿ ನನ್ನ ಮೊಟರ್ ಸೈಕಲನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಕಾರಣ ದಯಾಳುಗಳಾದ ತಾವು ನನ್ನ ಮೊಟರ ಸೈಕಲ್ ನಂ.ಕೆ.ಎ.-33-ಇಎ-4888.ನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿದ್ದರು ಹುಡುಕಿಕೊಟ್ಟು ತಪಿತಸ್ಥರ ವಿರುದ್ದ ಕಾನೂನು ರೀತಿ ಕ್ರಮಕೈಕೊಳ್ಳಲು ಕೊರಲಾಗಿದೆ. ನಾನು ನಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಿ ಮತ್ತು ನಮ್ಮ ಮನೆಯ ಹಿರಿಯರ ಹತ್ತಿರ ಚಚರ್ೆ ಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ.ಅಂತಾ ಒಂದು ಗಣಕ ಯಂತ್ರದಲ್ಲಿ ಟೈಪ್ ಮಾಡಿದ ಅಜರ್ಿ ನೀಡಿದ್ದು ಅದರ ಸಾರಾಂಶದ ಮೇಲೀಂದ ಠಾಣೆ ಗುನ್ನೆ ನಂ.167/2021 ಕಲಂ.379 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಯಾದಗಿರಿ ಸಂಚಾರಿ ಪೊಲೀಸ ಠಾಣೆ
ಗುನ್ನೆ ನಂ: 68/2021 ಕಲಂ 279 ಐಪಿಸಿ : ಇಂದು ದಿನಾಂಕ 23/12/2021 ರಂದು 5-45 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀ ವಿನಯ್ ತಂದೆ ಶರಣಪ್ಪ ಹೂಗಾರ ವಯ;22 ವರ್ಷ, ಜಾ;ಹೂಗಾರ, ಉ;ಎನ್.ವಿ.ಎಮ್. ಹೊಟೆಲ್ನಲ್ಲಿ ರೆಸೆಪೆಕ್ಷನ್ ಕೆಲಸ, ಸಾ;ಲಕ್ಷ್ಮೀ ನಗರ,ಶಹಾಪುರ ರವರು ಖುದ್ದಾಗಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಪಿಯರ್ಾದಿ ದೂರನ್ನು ನೀಡಿದ್ದರ ಸಾರಾಂಶವೇನೆಂದರೆ ನಾನು ಯಾದಗಿರಿಯ ಎನ್.ವಿ.ಎಮ್. ಹೊಟೆಲನಲ್ಲಿ ಸುಮಾರು 4-5 ತಿಂಗಳಿನಿಂದ ಕೆಲಸ ಮಾಡಿಕೊಂಡು ಬಂದಿರುತ್ತೇನೆ. ಹೀಗಿದ್ದು ಇಂದು ದಿನಾಂಕ 23/12/2021 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಮ್ಮ ಹೊಟೆಲನಲ್ಲಿ ಮ್ಯಾನೇಜರ್ ಅಂತಾ ಕೆಲಸ ಮಾಡುವ ಪ್ರತಾಪ ತಂದೆ ಪಂಪಯ್ಯ ಇವರು ನನಗೆ ಕರೆದು ನಾವಿಬ್ಬರು ನಮ್ಮ ಮಾಲೀಕರ ಮೋಟಾರು ಸೈಕಲ್ ಸ್ಕ್ಯೂಟಿ ನಂ. ಕೆಎ-33, ಯು-9290 ನೇದ್ದರ ಮೇಲೆ ರೇಲ್ವೇ ಸ್ಟೇಷನ್ ಹತ್ತಿರ ಹೋಗಿ ತರಕಾರಿ ತೆಗೆದುಕೊಂಡು ಬರೋಣವೆಂದು ತಿಳಿಸಿದಾಗ ಆಯಿತು ನಡೀರಿ ಹೋಗೋಣವೆಂದು ಇಬ್ಬರು ಕೂಡಿಕೊಂಡು ಮೋಟಾರು ಸೈಕಲ್ ಸ್ಕ್ಯೂಟಿ ಮೇಲೆ ಹೊರಟೆವು ಮೊಟಾರು ಸೈಕಲನ್ನು ಪ್ರತಾಪ ಇವರು ನಡೆಸಿಕೊಂಡು ಹೊರಟಿದ್ದಾಗ ಮಾರ್ಗ ಮದ್ಯೆ ಯಾದಗಿರಿ ನಗರದ ಲಾಲ್ ಬಹೂದ್ದೂರ್ ಶಾಸ್ತ್ರಿ -ರೇಲ್ವೇ ಸ್ಟೇಷನ್ ಮುಖ್ಯ ರಸ್ತೆಯ ಫಾರೆಸ್ಟ್ ಆಪೀಸ್ ಮುಂದೆ ಮೋಟಾರು ಸೈಕಲನ್ನು ಪ್ರತಾಪ ಈತನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊರಟಿದ್ದಾಗ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಮಾಡಿ ರಸ್ತೆಯ ಡಿವೈಡರ್ಗೆ ಹೋಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ನಾವಿಬ್ಬರು ಮೋಟಾರು ಸೈಕಲ್ ಮೇಲಿಂದ ಕೆಳಗೆ ಬಿದ್ದಾಗ ಸಣ್ಣ-ಪುಟ್ಟ ತರಚಿದ ಗಾಯಗಳಾಗಿದ್ದು ಇರುತ್ತದೆ. ಈ ಅಪಘಾತದಲ್ಲಿ ನಮ್ಮ ಮೊಟಾರು ಸೈಕಲ್ ಸ್ಕ್ಯೂಟಿ ನೇದ್ದು ಡ್ಯಾಮೇಜ್ ಆಗಿರುತ್ತದೆ. ಈ ಅಪಘಾತವು ಇಂದು ದಿನಾಂಕ 23/12/2021 ರಂದು ಸಾಯಂಕಾಲ 5-15 ಪಿ.ಎಂ.ಕ್ಕೆ ಜರುಗಿರುತ್ತದೆ. ಅಪಘಾತದ ನಂತರ ನಾನು ಈ ವಿಷಯವನ್ನು ನಮ್ಮ ಮಾಲೀಕರಾದ ಮಹೇಶ ಪಾಟೀಲ್ ಇವರಿಗೆ ಪೋನ್ ಮಾಡಿ ತಿಳಿಸಿದಾಗ ಕೇಸು ಮಾಡಲು ತಿಳಿಸಿರುತ್ತಾರೆ ಮತ್ತು ನಮ್ಮ ಹೊಟೆಲನಲ್ಲಿ ಕೆಲಸ ಮಾಡುವ ಗುರುರಾಜ ತಂದೆ ಕಲ್ಯಾಣಪ್ಪ ಪಟ್ಟಣಶೆಟ್ಟಿ ಇವರಿಗೆ ಘಟನಾ ಸ್ಥಳಕ್ಕೆ ಕಳಿಸುವುದಾಗಿ ತಿಳಿಸಿದರು. ಸ್ವಲ್ಪ ಸಮಯದ ನಂತರ ಗುರುರಾಜ ಇವರು ಬಂದಾಗ ನಾನು ಪೊಲಿಸ್ ಠಾಣೆಗೆ ಬಂದು ಈ ದೂರನ್ನು ಕೊಡುತ್ತಿದ್ದು ಇಂದು ದಿನಾಂಕ 23/12/2021 ರಂದು ಸಾಯಂಕಾಲ 5-15 ಪಿ.ಎಂ.ಕ್ಕೆ ಗಂಟೆ ಸುಮಾರಿಗೆ ನಮ್ಮ ಮೋಟಾರು ಸೈಕಲ್ ಸ್ಕ್ಯೂಟಿ ನಂ. ಕೆಎ-33, ಯು-9290 ನೇದ್ದರ ಸವಾರ ಪ್ರತಾಪ ಈತನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಸ್ಕಿಡ್ ಮಾಡಿ ಅಪಘಾತ ಮಾಡಿದ್ದರಿಂದ ಈತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಮತ್ತು ನನಗೆ ಮತ್ತು ಮೋಟಾರು ಸೈಕಲ್ ಸವಾರ ಪ್ರತಾಪ ಈತನಿಗೆ ಹೆಚ್ಚಿನ ಗಾಯ, ವಗೈರೆ ಆಗದೇ ಇದ್ದುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ ಅಂತಾ ವಿನಂತಿ ಅಂತಾ ಕೊಟ್ಟ ಪಿಯರ್ಾದಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 68/2021 ಕಲಂ 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


.

ಯಾದಗಿರ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ: 69/2021 ಕಲಂ 279, 338 ಐಪಿಸಿ : ಇಂದು ದಿನಾಂಕ 23/12/2021 ರಂದು ಸಮಯ 5-30 ಪಿ.ಎಂ.ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ರಸ್ತೆ ಅಪಘಾತದ ಎಮ್.ಎಲ್.ಸಿ ಇರುತ್ತದೆ ಅಂತಾ ಪೋನ್ ಮಾಡಿ ತಿಳಿಸಿದ್ದರಿಂದ ವಿಚಾರಣೆ ಕುರಿತು ಆಸ್ಪತ್ರೆಗೆ ತೆರಳಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುವಿನ ವಿಚಾರಣೆ ನಂತರ, ಗಾಯಾಳು ಗಾಯದ ಬಾಧೆಯಲ್ಲಿರುವುದರಿಂದ, ಆಸ್ಪತ್ರೆಯಲ್ಲಿ ಹಾಜರಿದ್ದ ಗಾಯಾಳು ಗ್ಯಾನಪ್ಪ ಇವರ ತಮ್ಮನಾದ ಪಿಯರ್ಾದಿ ಶ್ರೀ ರವಿ ತಂದೆ ಹಣಮಂತ ಮಂಜುಳಕರ್ ವಯ;25 ವರ್ಷ, ಜಾ;ಬೋವಿ ವಡ್ಡರ, ಉ;ಕೂಲಿ ಕೆಲಸ, ಸಾ;ಅಂಬೇಡ್ಕರ್ ನಗರ, ಯಾದಗಿರಿರವರು ಘಟನೆ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನನ್ನ ತಂದೆ-ತಾಯಿಯವರಿಗೆ ಒಟ್ಟು 5 ಜನ ಗಂಡು ಮಕ್ಕಳು, ಒಬ್ಬರು ಹೆಣ್ಣು ಮಕ್ಕಳಿರುತ್ತೇವೆ. ನಾವೆಲ್ಲರೂ ಎಲ್ಲರೂ ಕೂಲಿ ಕೆಲಸ ಮಾಡಿಕೊಂಡು ಯಾದಗಿರಿಯಲ್ಲಿಯೇ ವಾಸವಾಗಿರುತ್ತೇವೆ. ಇಂದು ನಾವೆಲ್ಲರೂ ಎಂದಿನಂತೆ ನಮ್ಮ ನಮ್ಮ ಕೂಲಿ ಕೆಲಸಕ್ಕೆ ಹೋಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 23/12/2021 ಸಾಯಂಕಾಲ 5-30 ಪಿ.ಎಂ.ದ ಸುಮಾರಿಗೆ ನಾನು ಮತ್ತು ನನ್ನ ಅಣ್ಣನಾದ ಆಂಜನೇಯ ಇಬ್ಬರೂ ಯಾದಗಿರಿಯ ಗಾಂಧಿನಗರದಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಒಣಿಯಯವರಾದ ಶ್ರೀ ಮಲ್ಲೇಶ್ ತಂದೆ ಹಣಮಂತ ಮಕ್ಕಳ್ ಇವರು ನನ್ನ ಮೊಬೈಲ್ ನಂಬರಿಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ ನಾನು ನನ್ನ ಕೆಲಸದ ಮೇಲೆ ಯಾದಗಿರಿ ಹಳೆ ಬಸ್ ನಿಲ್ದಾಣದ ಹಳೆ ಐಬಿ ಮುಂದೆ ನಿಂತಿದ್ದಾಗ ನಾನು ನೋಡು ನೋಡುತ್ತಿದ್ದಂತೆ ಒಂದು ಸಕರ್ಾರಿ ಬಸ್ ನಂಬರ ಕೆಎ-38, ಎಫ್-0394 ನೇದ್ದರ ಚಾಲಕನು ಶಹಾಪುರ ರಸ್ತೆ ಕಡೆಯಿಂದ ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ಯಾದಗಿರಿಯ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದ ಕಡೆಗೆ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡಾಗ ಅದೇ ಸಮಯಕ್ಕೆ ನಿಮ್ಮ ಅಣ್ಣನಾದ ಗ್ಯಾನಪ್ಪ ಈತನು ತನ್ನ ಮೊಟಾರು ಸೈಕಲ್ ನೇದ್ದನ್ನು ಹಳೆ ಬಸ್ ನಿಲ್ದಾಣದ ಕಡೆಯಿಂದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದ ಕಡೆಗೆ ನಡೆಸಿಕೊಂಡು ಹೋಗುತ್ತಿದ್ದಾಗ ಬಸ್ ಚಾಲಕನು ಮೋಟಾರು ಸೈಕಲ್ ನೇದ್ದಕ್ಕೆ ಹಿಂದಿನಿಂದ ಹೋಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು ಇರುತ್ತದೆ ಅಪಘಾತಪಡಿಸಿದ ನಂತರ ಬಸ್ ಚಾಲಕನು ಬಸ್ಸನ್ನು ಅದೇ ವೇಗದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದ ಕಡೆಗೆ ನಡೆಸಿಕೊಂಡು ಹೋಗಿರುತ್ತಾನೆ. ನಾನು ಓಡೋಡಿ ನಿಮ್ಮ ಅಣ್ಣನ ಹತ್ತಿರ ಬಂದು ನೋಡಲಾಗಿ ಸದರಿ ಅಪಘಾತದಲ್ಲಿ ನಿಮ್ಮ ಅಣ್ಣ ಗ್ಯಾನಪ್ಪನಿಗೆ ಬಾಯಿಗೆ ಭಾರೀ ರಕ್ತಗಾಯವಾಗಿ ಹಲ್ಲುಗಳು ಮುರಿದಿರುತ್ತವೆ, ತುಟಿಗೆ ರಕ್ತಗಾಯ ಮತ್ತು ಎದೆಯ ಎಡಭಾಗಕ್ಕೆ ಭಾರೀ ಒಳಪೆಟ್ಟಾಗಿರುತ್ತದೆ. ನಿಮ್ಮ ಅಣ್ಣ ಗ್ಯಾನಪ್ಪನ ಮೊಟಾರು ಸೈಕಲ್ ನಂಬರ ಕೆಎ-33, ಎಕ್ಸ್-1936 ನೇದ್ದು ಇರುತ್ತದೆ. ಈ ಅಪಘಾತವು ಇಂದು ದಿನಾಂಕ 23/12/2021 ರಂದು 5-15 ಪಿ.ಎಂ.ಕ್ಕೆ ಜರುಗಿರುತ್ತದೆ. ನೀವು ಕೂಡಲೇ ಘಟನಾ ಸ್ಥಳಕ್ಕೆ ಬರ್ರೀ ಅಂದಾಗ ನಾನು ನನಗೆ ಬಂದ ಮಾಹಿತಿಯನ್ನು ನನ್ನ ಜೊತೆಯಲ್ಲಿದ್ದ ನನ್ನ ಅಣ್ಣ ಆಂಜನೇಯ ಈತನಿಗೆ ತಿಳಿಸಿ ಇಬ್ಬರು ಸೇರಿಕೊಂಡು ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನಮಗೆ ಈ ಮೇಲೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಒಂದು ಆಟೋದಲ್ಲಿ ನಾನು ಮತ್ತು ನನ್ನ ಅಣ್ಣ ಆಂಜನೇಯ ಹಾಗೂ ಮಲ್ಲೇಶ್ ಎಲ್ಲರೂ ಸೇರಿಕೊಂಡು ಗ್ಯಾನಪ್ಪನಿಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯೆ ನನ್ನ ಅಣ್ಣನಿಗೆ ಅಪಘಾತ ಪಡಿಸಿದ ಬಸ್ ನಂಬರ ಕೆಎ-38, ಎಫ್-0394 ನೇದ್ದರ ಬಸ್ ಚಾಲಕನು ಶಾಸ್ತ್ರಿ ಸರ್ಕಲ್ ಮುಂದೆ ಹೋಗಿ ಡಿವೈಡರ್ಗೆ ಡಿಕ್ಕಿಹೊಡೆದು ನಿಲ್ಲಿಸಿದ್ದನ್ನು ಕಂಡು ಆಗ ನಾವುಗಳು ಆಟೋ ನಿಲ್ಲಿಸಿ ಅಲ್ಲಿ ಹೋಗಿ ನೋಡಲಾಗಿ ಘಟನಾ ಸ್ಥಳದಲ್ಲಿ ಬಸ್ ಚಾಲಕನಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಅಬ್ದುಲ್ ಅಜೀಜ್ ತಂದೆ ಶೇಕ್ ಇಸ್ಮಾಯಿಲ್ ಶೇಕ್ ವಯ;54 ವರ್ಷ, ಜಾ;ಮುಸ್ಲಿಂ, ಉ;ಬಸ್ ಚಾಲಕ, ಸಾ;ಸೈದಾಪುರ ಅಂತಾ ತಿಳಿಸಿರುತ್ತಾನೆ. ಆಗ ಘಟನಾ ಸ್ಥಳದಲ್ಲಿದ್ದ ಬಸ್ ಕಂಡಕ್ಟರ್ ಈತನಿಗೆ ಘಟನೆ ಹೇಗಾಯಿತು ಅಂತಾ ನಾವು ವಿಚಾರಿಸಿದಾಗ ಬಸ್ ಬ್ರೇಕ್ ಫೇಲಾಗಿರುತ್ತದೆ ಅಂತಾ ತಿಳಿಸಿರುತ್ತಾನೆ. ನಾವು ಗ್ಯಾನಪ್ಪನಿಗೆ ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಹೀಗಿದ್ದು ಇಂದು ದಿನಾಂಕ 23/12/2021 ರಂದು ಸಾಯಂಕಾಲ 5-15 ಪಿ.ಎಂ.ದ ಸುಮಾರಿಗೆ ಯಾದಗಿರಿ ನಗರದ ಶಹಾಪುರ-ಯಾದಗಿರಿ ಮುಖ್ಯ ರಸ್ತೆಯ ಯಾದಗಿರಿ ನಗರದ ಹಳೆ ಐಬಿ ಹತ್ತಿರದ ಮುಂದಿನ ಮುಖ್ಯ ರಸ್ತೆಯ ಮೇಲೆ ನನ್ನ ಅಣ್ಣನ ಮೋಟಾರು ಸೈಕಲ್ ನಂಬರ ಕೆಎ-33, ಎಕ್ಸ್-1936 ನೇದ್ದಕ್ಕೆ ಸಕರ್ಾರಿ ಬಸ್ ನಂಬರ ಕೆಎ-38, ಎಫ್-0394 ನೇದ್ದರ ಚಾಲಕನು ಬಸನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಮೋಟಾರು ಸೈಕಲ್ ನೇದ್ದಕ್ಕೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದ್ದರಿಂದ ಘಟನೆ ಜರುಗಿದ್ದು, ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಪಿಯರ್ಾದು ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 7-15 ಪಿ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 69/2021 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಇತ್ತೀಚಿನ ನವೀಕರಣ​ : 24-12-2021 10:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080