Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 24-12-2022ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 168/2022 ಕಲಂ 279,337,338,304(ಎ) ಐಪಿಸಿಮತ್ತು 187 ಐ.ಎಮ್.ವಿಆಕ್ಟ್: ಇಂದು ದಿನಾಂಕಃ 23-12-2022 ರಂದು 7-15 ಎ.ಎಮ್ ಕ್ಕೆ ಶ್ರೀಮತಿ ಲಕ್ಷ್ಮೀಗಂಡಜಟ್ಟೆಪ್ಪ ಬಂಟನೂರ, ಸಾಃ ದೇವರಗೋನಾಲ ಇವರುಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕಃ 22/12/2022 ರಂದುರಾತ್ರಿ 9-00 ಗಂಟೆಯ ಸುಮಾರಿಗೆ ನನ್ನಕಿರಿಯ ಮಗನಾದ ವೆಂಕಟೇಶಇತನು ಹಿರಿಯ ಮಗನಾದ ಮಾಳಪ್ಪನಿಗೆ ತಿಳಿಸಿದ್ದೆನೆಂದರೆ ನಮ್ಮೂರಲ್ಲಿ ವನವಾಸಿ ಕಲ್ಯಾಣ ಸಂಘದ ವತಿಯಿಂದಕ್ರಿಡಾತರಬೇತಿ ಪಡೆಯಲುಉತ್ತರಕನ್ನಡಜಿಲ್ಲೆ ಶಿರಸಿಯಿಂದ ನಮ್ಮ ಸ್ನೇಹಿತನು ಬರುತ್ತಿದ್ದು, ಅವರಿಗೆ ಸುರಪೂರ ಬಸ್ ನಿಲ್ದಾಣದಿಂದಕರೆದುಕೊಂಡು ಬರೋಣಾಅಂತ ಹೇಳಿ ನಮ್ಮಅಟೋರಿಕ್ಷಾ ನಂಬರ ಕೆ.ಎ 33 ಎ 8374 ನೇದ್ದರಲ್ಲಿ ಹೋದರು. ನಂತರರಾತ್ರಿ 10-45 ಗಂಟೆಯ ಸುಮಾರಿಗೆ ನನ್ನ ಮಗನಾದ ಮಾಳಪ್ಪನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ಸುರಪೂರದಿಂದ ಮರಳಿ ದೇವರಗೋನಾಲ ಗ್ರಾಮಕ್ಕೆಅಟೋರಿಕ್ಷಾ ನಡೆಸಿಕೊಂಡು ಬರುತ್ತಿರುವಾಗ ಈಗ್ಗೆ 10-30 ಪಿ.ಎಮ್ ಸುಮಾರಿಗೆದೇವರಗೋನಾಲ ಸಿಮಾಂತರದ ಸಿದ್ದಾರ್ಥ ಶಾಲೆಯ ಸಮೀಪ ಎದುರಿನಿಂದಕಬ್ಬಿನ ಲೋಡಇರುವಟ್ರ್ಯಾಕ್ಟರ ಚಾಲಕನು ತನ್ನಟ್ರ್ಯಾಕ್ಟರಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮಅಟೋರಿಕ್ಷಾಕ್ಕೆ ಡಿಕ್ಕಿಪಡಿಸಿದರಿಂದ ತಮ್ಮ ವೆಂಕಟೇಶನಿಗೆ ಮತ್ತು ನಾರಾಯಣತಂದೆ ಕೃಷ್ಣ ಮರಾಠಿ ವಯಃ 18 ವರ್ಷಇಬ್ಬರಿಗೆ ಭಾರಿಗಾಯಗಳಾಗಿ ಒದ್ದಾಡಿ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ನನಗೆ ಮತ್ತು ನಮ್ಮೂರಿನಯಲ್ಲಪ್ಪತಂದೆ ನಿಂಗಪ್ಪದೇವದುರ್ಗಇಬ್ಬರಿಗೆ ಗಾಯಗಳಾಗಿರುತ್ತವೆ ಅಂತ ತಿಳಿಸಿದನು. ಆಗ ಗಾಬರಿಯಾಗಿ ನಾನು ಮತ್ತು ನಮ್ಮಅಣ್ಣ-ತಮ್ಮಕೀಯ ಹಣಮಂತರಾಯ ಪೂಜಾರಿ, ಈಶ್ವರಪ್ಪ ಹಿಪ್ಪರಗಿಎಲ್ಲರೂ ಸ್ಥಳಕ್ಕೆ ಹೋಗಿ ನೋಡಲಾಗಿ ಸಂಗತಿ ನಿಜವಿದ್ದು, ನನ್ನ ಮಗ ವೆಂಕಟೇಶ ಹಾಗು ನಾರಾಯಣಇಬ್ಬರಿಗೆ ಭಾರಿಗಾಯಗಳಾಗಿ ಮೃತಪಟ್ಟಿದ್ದರು. ನನ್ನ ಮಗ ಮಾಳಪ್ಪನಿಗೆ ಮತ್ತು ನಮ್ಮೂರಿನಯಲ್ಲಪ್ಪದೇವದುರ್ಗ ಸಾದಾ ಹಾಗು ಭಾರಿ ಸವರೂಪದ ಗಾಯಗಳಾಗಿರುತ್ತವೆ. ಅಪಘಾತ ಪಡಿಸಿದ ಟ್ರ್ಯಾಕ್ಟರ ಸ್ಥಳದಲ್ಲೆ ನಿಂತಿದ್ದುಅದರ ನಂಬರ ನೋಡಲಾಗಿಎಮ್.ಹೆಚ್ 29 ಬಿ.ಸಿ 8053 ಅದರಟ್ರ್ಯಾಲಿ ನಂಬರಎಮ್.ಹೆಚ್ 29 ಆರ್ 8032 ಇರುತ್ತದೆ. ಅಪಘಾತಪಡಿಸಿದ ಬಳಿಕ ಟ್ರ್ಯಾಕ್ಟರ ಚಾಲಕನು ಓಡಿ ಹೋಗಿದ್ದು, ಆತನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಮುಂದೆ ನೋಡಿದ್ದಲ್ಲಿಟ್ರ್ಯಾಕ್ಟರ ಚಾಲಕನಿಗೆ ಗುರುತಿಸುವದಾಗಿ ತಿಳಿಸಿರುತ್ತಾರೆ. ಬಳಿಕ 108 ಅಂಬ್ಯೂಲೇನ್ಸ್ ವಾಹನ ಬಂದಿದ್ದರಿಂದ ನನ್ನ ಮಗ ಮಾಳಪ್ಪ ಹಾಗು ಯಲ್ಲಪ್ಪದೇವದುರ್ಗಇಬ್ಬರಿಗೆ ಹಾಕಿ ಸುರಪೂರ ಸಕರ್ಾರಿಆಸ್ಪತ್ರೆಗೆ ಕಳುಹಿಸಿ, ನಂತರಒಂದು ಖಾಸಗಿ ವಾಹನದಲ್ಲಿ ಮೃತ ವೆಂಕಟೇಶ ಹಾಗು ನಾರಾಯಣಇಬ್ಬರ ಮೃತದೇಹವನ್ನು ಹಾಕಿ ಸುರಪೂರ ಸಕರ್ಾರಿಆಸ್ಪತ್ರೆಗೆತಂದು ಶವಾಗಾರಕೋಣೆಯಲ್ಲಿ ಹಾಕಿರುತ್ತೇವೆ. ಕಾರಣಅತಿವೇಗ ಮತ್ತುಅಲಕ್ಷತನದಿಂದಟ್ರ್ಯಾಕ್ಟರ ನಡೆಸಿ ಅಪಘಾತಪಡಿಸಿ ಓಡಿ ಹೋಗಿರುವ ಚಾಲಕನ ವಿರುದ್ದ ಕಾನೂನು ಪ್ರಕಾರಕ್ರಮಜರುಗಿಸಬೇಕುಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂಬರ 168/2022 ಕಲಂ: 279, 337, 338, 304(ಎ) ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ್ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.
   
ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 177/2022 ಕಲಂ 279, 338 ಐ.ಪಿ.ಸಿ: ದಿನಾಂಕಃ 21.12.2022 ರಂದು 07.00 ಪಿ.ಎಮ್ ಕ್ಕೆ ಯಾದಗಿರ-ನಾರಾಯಣಪೇಟ ರಾಜ್ಯ ಹೆದ್ದಾರಿ ಮೇಲೆ ಪಸಪೂಲ ಗೇಟ ಹತ್ತಿರ ಆರೋಪಿತನು ಲಾರಿ ನಂಬರ ಕೆಎ-27-ಎ-1344 ನೇದ್ದನ್ನು ಅತಿವೇಗಾ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಒಮ್ಮಿಂದೊಮ್ಮೇಲ ಕಟ ಹೊಡೆದಿದ್ದರಿಂದ ಗಾಯಳು ದಿನೇಶ ತಂದೆ ಸುರೇಶ ಅಕ್ಕೇರ ಈತನು ಪುಟಿದು ಕೆಳಗೆ ಬಿದ್ದಿದ್ದರಿಂದ ಬಾರಿ ರಕ್ತಗಾಯಗಳಾಗಿರುತ್ತವೆ.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 136/2022 ಕಲಂ 78(3) ಕೆ.ಪಿ ಎಕ್ಟ್ 1963: ಇಂದು ದಿನಾಂಕ. 23/12/2022 ರಂದು 01-00 ಪಿಎಂಕ್ಕೆ ಶ್ರೀ ಚಂದ್ರಶೇಖರ ಪಿಎಸ್ಐ (ಕಾ.ಸೂ) ಯಾದಗಿರಿ ನಗರ ಪೊಲೀಸ್ ಠಾಣೆರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜ್ಞಾಪನ ಪತ್ರ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 23/12/2022 ರಂದು 11-00 ಎಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾರೋ ಒಬ್ಬನು ಯಾದಗಿರಿ ನಗರದ ಮೈಲಾಪೂರ ಬೇಸ ಕ್ರಾಸದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಅಧಿಕಾರಿ ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಠಾಣೆ ಜೀಪಿನಲ್ಲಿ ಲ್ಯಾಪಟಾಪ ತೆಗೆದುಕೊಂಡು 11-40 ಪಿಎಂಕ್ಕೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಅವರು ತನ್ನ ಹೆಸರು ಅಬ್ದುಲ್ ಫಹೀಮ್ ತಂದೆ ಅಬ್ದುಲ್ ಅಜೀಮ್ ವ: 40 ಜಾತಿ: ಮುಸ್ಲಿಂ ಉ: ಕೂಲಿಕೆಲಸ ಸಾ: ಕಾರಿಬೌಡಿ ಯಾದಗಿರಿ ಅಂತಾ ತಿಳಿಸಿದ್ದು ನಂತರ ಆತನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) 485-00 ನಗದು ಹಣ 2) 1 ಮಟಕಾ ಚೀಟಿ ಅಂ.ಕಿ.00-00, 3) ಒಂದು ಬಾಲ ಪೆನ್ ಅಂ.ಕಿ.00-00 ಸಿಕ್ಕಿದ್ದು ಸದರಿ ಮುದ್ದೆಮಾಲನ್ನು  ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 23/12/2022 ರಂದು 11-40 ಎಎಂ ದಿಂದ 12-40 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟಾಪದಲ್ಲಿ ಗಣಕೀಕರಣ ಮಾಡಿ ಮುಗಿಸಿ ಪಂಚರ ಸಹಿ ಮಾಡಿಸಿ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿಪಂಚನಾಮೆಯನ್ನು ಮುಗಿಸಿಕೊಂಡು ನಗರ ಠಾಣೆಗೆ 01-00 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿರವರಿಗೆ  ಒಪ್ಪಿಸಿ, ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ, ಅಂತಾ ಕೊಟ್ಟ ಜ್ಞಾಪನದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.136/2022 ಕಲಂ.78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 100/2022 ಕಲಂ 87 ಕೆಪಿ ಯ್ಯಾಕ್ಟ: ಇಂದು ದಿನಾಂಕ:23/12/2022 ರಂದು 03.00 ಪಿ.ಎಮ್.ಕ್ಕೆ ಫಿಯರ್ಾದಿ ಠಾಣೆಯಲ್ಲಿದ್ದಾಗ ಮದ್ರಕಿಸೀಮಾಂತರದಲ್ಲಿನ ಗೌಡಪ್ಪಗೌಡ ಪಾಟೀಲ್ಇವರ ಹೊಲದಲ್ಲಿ ಕೆಲವು ಜನರುದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿಅಂದರ ಬಾಹರಅಂತಇಸ್ಪೇಟಜೂಜಾಟಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ 04.10 ಪಿ.ಎಮ್ ಕ್ಕೆ ದಾಳಿ ಮಾಡಿದಾಗ 09 ಜನರು ಸಿಕ್ಕಿದ್ದು ಸದರಿಆರೋಪಿತರಿಂದ ಹಾಗು ಕಣದಲ್ಲಿಂದ ನಗದುಒಟ್ಟು ಹಣ 3700/- ರೂ, 52 ಇಸ್ಪೇಟ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕುರಿತು ವರದಿ ಸಲ್ಲಿಸಿರುತ್ತಾರೆ.
 

Last Updated: 24-12-2022 12:19 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080