ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/03/2021

ಸೈದಾಪೂರ ಪೊಲೀಸ ಠಾಣೆ:- 47/2021 ಕಲಂ. 279,337,338 ಐಪಿಸಿ ಸಂಗಡ 304(ಎ) ಐಪಿಸಿ : ಇಂದು ದಿನಾಂಕ. 24.03.2021 ರಂದು ಬೆಳಿಗ್ಗೆ 9.00 ಗಂಟೆಗೆ ಶ್ರೀ ಭೀಮಶಪ್ಪ ತಂದೆ ಭೀಮಶಪ್ಪ ವಯ|| 21 ವರ್ಷ ಜಾ|| ಕೊರವರ ಉ|| ವಿದ್ಯಾಥರ್ಿ ಸಾ|| ಮಾದ್ವಾರ ತಾ|| ಗುರುಮಠಕಲ್ ಜಿ|| ಯಾದಗಿರಿ ಇವರು ಠಾಣೆಗೆ ಬಂದು ನೀಡಿದ ಹೇಳಿಕೆ ಸಾರಾಂಶವೇನೆಂದರೆ, ಕೂಡ್ಲೂರ ಗ್ರಾಮದ ಕಾಶಪ್ಪ ತಂದೆ ನರಸಪ್ಪ ಕೊರವರ ಇವರ ಮಗಳಾದ ನರಸಮ್ಮ ಇವಳನ್ನು ನನ್ನ ಅಣ್ಣ ಅಂಜಪ್ಪ ತಂದೆ ಭೀಮಶಪ್ಪನಿಗೆ ಮದುವೆ ಮಾಡಿಕೊಟ್ಟಿದ್ದು, ಲಕ್ಷ್ಮೀ ಗಂಡ ಕಾಶಪ್ಪ ಕೊರವರ ಇವಳು ನನಗೆ ಅತ್ತೆಯಾಗಬೇಕು.ದಿನಾಂಕ 22.03.2021 ರಂದು ಬೆಳಿಗ್ಗೆ 11-45ಗಂಟೆಗೆ ಕೂಡ್ಲೂರ ಗ್ರಾಮದ ಅಡವಿ ಸಿದ್ದೇಶ್ವರ ದೇವಸ್ಥಾನ ಎದುರುಗಡೆ ರೋಡಿನ ಮೇಲೆ ಅಟೋ ನಂಬರ ಕೆ.ಎ-33, ಬಿ-1514 ನೇದ್ದರ ಚಾಲಕನು ತನ್ನ ಅಟೊವನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿ ಡಿಕ್ಕಿಪಡಿಸಿದ್ದರಿಂದ ನನ್ನ ಅತ್ತೆ ಲಕ್ಷ್ಮೀ ತಲೆಯ ನೆತ್ತಿಯ ಮೇಲೆ ಭಾರಿ ರಕ್ತಗಾಯವಾಗಿ, ಬಲಗಡೆ ಕಿವಿಯಿಂದ ರಕ್ತ ಸೋರಿಕೆಯಾಗಿದ್ದು, ಮಾತನಾಡಿಸಿದರೆ ಮಾತನಾಡಿರಲಿಲ್ಲ. ನನ್ನ ಅತ್ತೆ ಮಗಳು ಬನ್ನಮ್ಮಳಿಗೆ ಎರಡೂ ಕೈಗಳ ಮೊಳಕೈಗೆ ಮತ್ತು ಬಲಗಾಲ ಮೊಳಕಾಲಿಗೆ ರಕ್ತಗಾಯವಾಗಿ,ಸೊಂಟಕ್ಕೆ ಒಳಪೆಟ್ಟಾಗಿದ್ದು. ಅಟೋ ನಂಬರ ಕೆ.ಎ-33, ಬಿ-1514 ನೇದ್ದರ ಚಾಲಕ ಆಂಜನೇಯ ತಂದೆ ಸಿದ್ದಪ್ಪ ವಯ|| 28 ವರ್ಷ, ಜಾ|| ಮಡಿವಾಳ ಉ|| ಅಟೋ ಚಾಲಕ ಸಾ|| ಸೈದಾಪೂರ ಈತನ ಮೇಲೆ ನನ್ನ ಮಾವ ಕಾಶಪ್ಪ ಇವರು ಕೊಟ್ಟ ಫಿಯರ್ಾದಿ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 47/2021 ಕಲಂ. 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿರುವುದು ನನಗೆ ಗೊತ್ತಿರುತ್ತದೆ. ನನ್ನ ಅತ್ತೆ ಲಕ್ಷ್ಮೀ ಗಂಡ ಕಾಶಪ್ಪ ಕೊರವರ ಕೂಡ್ಲೂರ ಗ್ರಾಮ ಇವಳಿಗೆ ಹೆಚ್ಚಿನ ಉಪಚಾರ ಕುರಿತು ವಿಮ್ಸ್ ಆಸ್ಪತ್ರೆ, ಬಳ್ಳಾರಿಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿದ್ದೇವು. ಇಂದು ದಿನಾಂಕ 24.03.2021 ರಂದು ಬಳ್ಳಾರಿಯಿಂದ ನನ್ನ ಮಾವ ಕಾಶಪ್ಪ ಇವರು ನನಗೆ ಫೋನ ಮಾಡಿ ನನ್ನ ಅತ್ತೆ ಅಟೋ ಡಿಕ್ಕಿಯಿಂದಾಗಿ ತಲೆಗೆ ಆದ ಭಾರಿ ರಕ್ತಗಾಯದಿಂದಾಗಿ ಉಪಚಾರ ಫಲಿಸದೆ ಇಂದು ಬೆಳಿಗ್ಗೆ 07.30 ಗಂಟೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುತ್ತಾಳೆ ಅಂತ ತಿಳಿಸಿರುತ್ತಾನೆ. ಸದ್ಯ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತ ಸಾರಾಂಶ ಇರುತ್ತದೆ.


ವಡಗೇರಾ ಪೊಲೀಸ್ ಠಾಣೆ:- 38/2021 ಕಲಂ: 295 ಐಪಿಸಿ : ದಿನಾಂಕ: 24/03/2021 ರಂದು 10 ಎಎಮ್ ಕ್ಕೆ ಶ್ರೀ ಭೀಮರಾಯ ತಂದೆ ಚಂದಪ್ಪ ಸುಂಗಲಕರ್, ವ:40, ಜಾ:ಹೊಲೆಯ (ಎಸ್.ಸಿ), ಉ:ಒಕ್ಕಲುತನ ಸಾ:ನಾಯ್ಕಲ್ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ನಾಯ್ಕಲ್ ಗ್ರಾಮದಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ಗ್ರಾಮದಲ್ಲಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಡಾ:ಬಾಬಾ ಸಾಹೇಬ ಅಂಬೇಡ್ಕರ ರವರ ವೃತ್ತ ಇದ್ದು, ಸದರಿ ವೃತ್ತದಲ್ಲಿ ಸುಮಾರು 8-10 ವರ್ಷಗಳ ಹಿಂದೆ ಡಾ:ಬಾಬಾ ಸಾಹೇಬ ಅಂಬೇಡ್ಕರ ರವರ ಭಾವಚಿತ್ರವುಳ್ಳ ನಾಮಫಲಕವನ್ನು ಪ್ರತಿಷ್ಠಾಪನೆ ಮಾಡಿರುತ್ತೇವೆ. ಹೀಗಿದ್ದು ಇಂದು ದಿನಾಂಕ: 24/03/2021 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರ ಶರಣಬಸಪ್ಪ ತಂದೆ ಲಕ್ಷ್ಮಣ ಚತುವರ್ೇದಿ ಈತನು ಬಂದು ನನಗೆ ಹೇಳಿದ್ದೇನಂದರೆ ದಿನಾಂಕ: 23/03/2021 ರ ಮತ್ತು ದಿನಾಂಕ: 24/03/2021 ರ ರಾತ್ರಿ ವೇಳೆಯಲ್ಲಿ ಯಾರೋ ಕಿಡಿಗೇಡಿಗಳು ಡಾ:ಬಾಬಾ ಸಾಹೇಬ ಅಂಬೇಡ್ಕರ ರವರ ಭಾವಚಿತ್ರವುಳ್ಳ ನಾಮಫಲಕಕ್ಕೆ ಸೆಗಣಿಯನ್ನು ಎರಚಿ ಅವಮಾನ ಮಾಡಿರುತ್ತಾರೆ ಎಂದು ಹೇಳಿದನು. ಆಗ ನಾನು ಮತ್ತು ಸದರಿ ಶರಣಬಸಪ್ಪ ಇಬ್ಬರೂ ಕೂಡಿ ಡಾ:ಬಾಬಾ ಸಾಹೇಬ ಅಂಬೇಡ್ಕರ ವೃತ್ತಕ್ಕೆ ಬಂದು ನೋಡಿದೆವು. ರಾತ್ರಿ ವೇಳೆಯಲ್ಲಿ ಯಾರೋ ಕಿಡಿಗೇಡಿಗಳು ಡಾ:ಬಾಬಾ ಸಾಹೇಬ ಅಂಬೇಡ್ಕರ ರವರ ಭಾವಚಿತ್ರವುಳ್ಳ ನಾಮಫಲಕಕ್ಕೆ ಸೆಗಣಿಯನ್ನು ಎರಚಿ ಅವಮಾನ ಮಾಡಿದ್ದರು. ಊರಲ್ಲಿ ಇದೆಲ್ಲ ಸುದ್ದಿ ಹಬ್ಬಿ ನಮ್ಮೂರ ಮರಳಸಿದ್ದಪ್ಪ ಭರಳ್ಳಿ, ಮರೆಪ್ಪ ಕಣಜಿಕರ, ಸೈದಪ್ಪ ಕಣಜಿಕರ, ಮಲ್ಲಿಕಾಜರ್ುನ ಅನಕಸೂಗೂರು, ಮಲ್ಲಪ್ಪ ಕಣಜಿಕರ(ಹತ್ತಿಕುಣಿ), ಸದಾನಂದ ಬದ್ದೇಳ್ಳಿ, ಶರಣಪ್ಪ ಕಣಜಿಕರ, ಚಂದ್ರಶೇಖರ ಕಣಜಿಕರ, ಭೀಮರಾಯ ತುಮಕೂರು, ವಿಶ್ವನಾಥ ಬಡಿಗೇರ, ನಾಗರಾಜ ಕಣಜಿಕರ, ಅಶೋಕ ಕಣಜಿಕರ, ಮಲ್ಲಪ್ಪ ಸಕ್ಪಾಲ, ಮರಿಲಿಂಗ ಭಂಢಾರಿ, ರಮೇಶ ನಾಯ್ಡು, ನಾಗರಾಜ ಭೈರಳ್ಳಿ ಮತ್ತು ಇತರರು ಬಂದು ನೋಡಿರುತ್ತಾರೆ. ಕಾರಣ ಯಾರೋ ಕಿಡಿಗೇಡಿಗಳು ಸಂವಿಧಾನ ಶಿಲ್ಪಿ ಡಾ:ಬಾಬಾ ಸಾಹೇಬ ಅಂಬೇಡ್ಕರವರ ಭಾವಚಿತ್ರವುಳ್ಳ ನಾಮಫಲಕಕ್ಕೆ ಈ ಹಿಂದೆ ಎರಡು ಸಲ ಇದೆ ರೀತಿ ಸೆಗಣಿಯನ್ನು ಎರಚಿ ಅವಮಾನಗೊಳೊಸಿರುತ್ತಾರೆ. ಇಡಿ ವಿಶ್ವವೆ ಗೌರವದಿಂದ ಪೂಜಿಸುವ ಡಾ:ಬಾಬಾ ಸಾಹೇಬ ಅಂಬೇಡ್ಕರ ರವರ ಭಾವಚಿತ್ರವುಳ್ಳ ನಾಮಫಲಕಕ್ಕೆ ಕಿಡಿಗೆಡಿಗಳು ಸೆಗಣಿ ಎರಚಿ ನಮ್ಮ ಭಾವನೆಗಳಿಗೆ ಧಕ್ಕೆಯನ್ನು ತಂದಿರುತ್ತಾರೆ. ಆದ್ದರಿಂದ ದಿನಾಂಕ:23-24/03/2021 ರ ರಾತ್ರಿ ವೇಳೆಯಲ್ಲಿ ಡಾ:ಬಾಬಾ ಸಾಹೇಬರ ಭಾವಚಿತ್ರಕ್ಕೆ ಅವಮಾನ ಮಾಡಿದವರನ್ನು ಪತ್ತೆ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಮಾನ್ಯರವರಲ್ಲಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 38/2021 ಕಲಂ: 295 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ್ ಪೊಲೀಸ್ ಠಾಣೆ:- 43/2021 ಕಲಂ 379 ಐಪಿಸಿ : ಇಂದು ದಿನಾಂಕ 24.03.2021 ರಂದು ಸಮಯ ಮಧ್ಯಾಹ್ನ 4:00 ಗಂಟೆಗೆ ದಾಳಿಯ ಕಾಲಕ್ಕೆ ಓಡಿ ಹೋದ ಆರೋಪಿತನು ಟ್ರ್ಯಾಕ್ಟರ ನಂಬರ ಕೆಎ-33-ಟಿಎ-8483 ನೇದ್ದರ ಟ್ರ್ಯಾಲಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಸದರಿ ಮರಳನ್ನು ಸಾಗಿಸುತ್ತಿದ್ದಾಗ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಸದರಿ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಟ್ರ್ಯಾಕ್ಟರ ಚಾಲಕ ಮತ್ತು ಸಂಬಂಧಪಟ್ಟ ಮಲೀಕರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 43/2021 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:- 44/2021 ಕಲಂ 419 ಐಪಿಸಿ : ದಿನಾಂಕ 21.03.2021 ರಂದು ರಾತ್ರಿ 9:27 ಗಂಟೆಗೆ ಮೊಬೈಲ್ ನಂಬರ 9606615459 ನೇದ್ದರಿಂದ ಯಾರೋ ಅಪರಿಚಿತ ವ್ಯಕ್ತಿ ಫಿರ್ಯಾದಿದಾರರ ಮೊಬೈಲ್ ನಂಬರ 9972455403 ನೇದ್ದಕ್ಕೆ ಕರೆ ಮಾಡಿ ತಾನು ಎ.ಸಿ.ಬಿ ಅಧಿಕಾರಿಯಂತೆ ನಟಿಸಿ ತಾನು ಎ.ಸಿ.ಬಿ ಅಧಿಕಾರಿಯೆಂದು ಮಾತನಾಡಿದ್ದು ಅಲ್ಲದೇ ಹೆಸರಿದ್ದು ಅಲ್ಲದೇ ದಿನಾಂಕ 22.03.2021 ರಂದು ಬೆಳಿಗ್ಗೆ 7:40 ಗಂಟೆಗೆ ಫೋನ್ ಮಾಡಿ ಫಿರ್ಯಾದಿಗೆ ಕಚೇರಿಗೆ ಹೋಗದೇ ರಜೆಯ ಮೇಲೆ ಹೋಗುವಂತೆ ಹೆದರಿಸಿದ್ದು ಆ ಬಗ್ಗೆ ಫಿರ್ಯಾದಿಯು ತಮ್ಮ ಮೇಲಾಧಿಕಾರಿಗಳೊಂದಿಗೆ ಚಚರ್ಿಸಿದ ನಂತರ ತಮಗೆ ಬಂದಿದ್ದ ಕರೆಯು ಸುಳ್ಳು ಕರೆಯೆಂದು ಖಚಿತಪಡಿಸಿಕೊಂಡ ನಂತರ ತಡವಾಗಿ ಇಂದು ದಿನಾಂಕ 24.03.2021 ರಂದು ಸಂಜೆ 7:30 ಗಂಟೆಗೆ ಠಾಣೆಗೆ ಬಂದು ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂಬರ 44/2021 ಕಲಂ 419 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಭೀಗುಡಿ ಪೊಲೀಸ್ ಠಾಣೆ:- 24/2021 ಕಲಂ 279, 338, 304(ಎ) ಐಪಿಸಿ ಸಂ 187 ಐಎಮ್ವಿ ಯಾಕ್ಟ : ದಿನಾಂಕ: 24/03/2021 ರಂದು 10.10 ಎ.ಎಮ್. ಸುಮಾರಿಗೆ ಮೃತ ಸೋಪಣ್ಣ ಹಾಗು ಗಾಯಾಳು ಮಾಳಪ್ಪ ಇಬ್ಬರು ಕೂಡಿ ಸಂಗಣ್ಣ ಬಡಕಲ್ ಇವರ ಹೊಲದಲ್ಲಿ ಜೋಳದ ರಾಶಿ ಮಾಡಿಜೋಳ ಮತ್ತು ಜೋಳದ ಹೊಟ್ಟನ್ನು ಟ್ರ್ಯಾಕ್ಟರ್ ಟ್ರೈಲಿಯಲ್ಲಿ ಹಾಕಿ ನಂತರ ರೋಡಿನ ಮೇಲೆ ಮಾತನಾಡುತ್ತ ನಿಂತಾಗ ಮುಡಬೂಳ ಗ್ರಾಮದ ಮಲ್ಲಿಕಾಜರ್ುನ ತಂದೆ ಸೋಮರಾಯ ಬಿಚಗತ್ತಿ ಈತನು ತನ್ನ ಟ್ರ್ಯಾಕ್ಟರ್ ಸ್ವರಾಜ್ ನಂಬರ ಇರುವುದಿಲ್ಲ. ಟ್ರ್ಯಾಲಿ ನಂ: ಕೆಎ:33 ಟಿ:6584 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡಿಸಿಕೊಂಡು ವೇಗದಲ್ಲಿ ರೋಡಿನ ಬಾಜು ಮುಡಬೂಳ ಅಣಬಿ ರೋಡಿನ ರಂಗನಗೌಡ ಚನ್ನಪಟ್ಟಣ ಇವರ ಹೊಲದ ಹತ್ತಿರ ಟ್ರ್ಯಾಕ್ಟರ್ ವೇಗದಲ್ಲಿ ಬಂದು ಸೋಪನಾಥ ಮತ್ತು ಮಾಳಪ್ಪ ಕೊಂಗಂಡಿಯವರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಟ್ರ್ಯಾಕ್ಟರ್ ಟ್ರೈಲಿಯ ಹಿಂದಿನ ಗಾಲಿ ಮೈಮೇಲೆ ಹಾಯ್ದು ಹೋಗಿದ್ದು ಇರುತ್ತದೆ. ಮಾಳಪ್ಪ ಈತನಿಗೂ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದ್ದರಿಂದ ಟ್ರ್ಯಾಕ್ಟರ್ ಇಂಜೀನಿನ ಮುಂದಿನ ಭಾಗ ಹೊಟ್ಟೆಯ ಕೆಳಗೆ ಗೆಜ್ಜೆಯಭಾಗಕ್ಕೆ ಗಾಯವಾಗಿದೆ. ಸೋಪನಾಥ ಈತನಿಗೆ ಬಲವಾದ ಒಳಪೆಟ್ಟು ಆಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಟ್ರ್ಯಾಕ್ಟರ್ ಚಾಲಕ ಓಡಿ ಹೋಗಿದ್ದು ಅಂತ ವಗೈರೆ ದೂರು.


ಭೀಗುಡಿ ಪೊಲೀಸ್ ಠಾಣೆ:-. 03/2021 ಕಲಂ 174 ಸಿ.ಆರ್.ಪಿಸಿ : ಮೃತನ ಹೆಸರಿನಲ್ಲಿ ಶಿರವಾಳ ಸೀಮಾಂತರ ಸವರ್ೆ ನಂ:392/1 ರಲ್ಲಿ 3 ಎಕರೆ 27 ಗುಂಟೆ ಹೊಲವಿದ್ದು ಸದರಿ ಹೊಲದಲ್ಲಿ ಹತ್ತಿ ಹಾಗು ಮೆಣಸಿನಕಾಯಿ ಬೆಳೆ ಮಾಡಿದ್ದು, ಮಳೆ ಹೆಚ್ಚಾಗಿದ್ದರಿಂದ ಬೆಳೆ ನಷ್ಟವಾಗಿರುತ್ತದೆ. ಅಲ್ದೆ ಸದರಿ ಹೊಲದ ಸಾಗುವಳಿಗಾಗಿ ಮತ್ತು ಸಂಸಾರಕ್ಕಾಗಿ ದೋರನಳ್ಳಿ ಕೆ.ಜಿ.ಬಿ ಬ್ಯಾಂಕಿನಲ್ಲಿ 1,50000/- ರೂ ಹಾಗು ದೋರನಳ್ಳಿಯ ವಿ.ಎಸ್.ಎಸ್.ಎನ್ ಸೊಸೈಟಿಯಲ್ಲಿ 20,000 ರೂ ಸಾಲ ಹಾಗೂ ಖಾಸಗಿಯಾಗಿ 5-6 ಲಕ್ಷ ರೂ ಸಾಲ ಮಾಡಿರುತ್ತಾನೆ. ಮಳೆ ಹೆಚ್ಚಾಗಿ ಮೊದಲಿನ ಹತ್ತಿ ಬೆಳೆ ಹಾಳಾಗಿದ್ದು, ಅಲ್ಲದೆ ಮೆಣಸಿನ ಬೆಳೆ ಸಹ ಹಾಳಾಗಿರುತ್ತದೆ. ಮಾಡಿದ ಸಾಲ ತೀರಿಸಲಾಗದೇ, ಸಾಲದ ಬಾದೆ ತಾಳಲಾರದೇ ಮೃತನು ದಿನಾಂಕ 23/03/2021 ರಂದು ರಾತ್ರಿ ಶಿರವಾಳ ಸೀಮಾಂತರದ ತನ್ನ ಹೊಲಕ್ಕೆ ಹೋಗಿ ಅಂದಾಜು 11.30 ಪಿ.ಎಮ್.ಸುಮಾರಿಗೆ ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಮೃತಪಟ್ಟಿದ್ದು ಇಂದು ದಿನಾಂಕ:24/03/2021 ರಂದು 7ಎ.ಎಮ್. ಸುಮಾರಿಗೆ ಮೃತನ ಪಕ್ಕದ ಹೊಲದವರು ನೋಡಿ ಫಿಯರ್ಾದಿಗೆ ವಿಷಯ ತಿಳಿಸಿರುತ್ತಾರೆ. ಸದರಿಯವನ ಸಾವಿನ ವಿಷಯದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ವಗೈರೆ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ:03/2021 ಕಲಂ 174 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ:- 64/2021 ಕಲಂ 87 ಕೆ.ಪಿ ಆಕ್ಟ್ : ಇಂದು ದಿನಾಂಕ 24/03/2021 ರಂದು, ರಾತ್ರಿ 21-30 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು, ಒಂದು ಕನ್ನಡದಲ್ಲಿ ಟೈಪ್ ಮಾಡಿದ ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ: 24/03/2021 ಸಾಯಂಕಾಲ 19-30 ಗಂಟೆಯ ಸುಮಾರಿಗೆ ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ, ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕನ್ಯಾಕೊಳ್ಳುರ ಗ್ರಾಮದ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಲೈಟಿನ ಬೆಳಕಿನಲ್ಲಿ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಖಚಿತ ಪಡಿಸಿಕೊಂಡು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ, ಠಾಣೆಯ ಎನ್.ಸಿ ನಂಬರ 19/2021 ಕಲಂ 87 ಕೆ.ಪಿ ಆಕ್ಟ್ ಅಡಿಯಲ್ಲಿ ನೋಂದಣಿ ಮಾಡಿಕೊಂಡು, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಪತ್ರ ಬರೆದು ವಿನಂತಿಸಿಕೊಂಡ ಮೆರೆಗೆ, ಮಾನ್ಯ ನ್ಯಾಯಾಲಯವು ಇಂದು ರಾತ್ರಿ 21-18 ಗಂಟೆಗೆ ಅನುಮತಿ ನೀಡಿರುತ್ತಾರೆ. ಕಾರಣ ಜೂಜಾಟ ಆಡುತ್ತಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ವಿನಂತಿ ಅಂತ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 64/2021 ಕಲಂ 87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ. ನಂತರ ದಾಳಿ ಮಾಡಿ ಜೂಜಾಟ ಆಡುತಿದ್ದ 4 ಜನ ಆರೋಪಿತರನ್ನು ಹಿಡಿದು ಅವರಿಂದ ನಗದು ಹಣ 51300=00 ರೂಪಾಯಿಗಳನ್ನು ಹಾಗೂ ಜೂಜಾಟಕ್ಕೆ ಬಳಸಿದ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿರುತ್ತದೆ.


ಶಹಾಪೂರ ಪೊಲೀಸ್ ಠಾಣೆ:- 65/2021 ಕಲಂ 279, 338 ಐ.ಪಿ.ಸಿ : ಇಂದು ದಿನಾಂಕ 24/03/2021 ರಂದು ರಾತ್ರಿ 22-00 ಗಂಟೆಗೆ ಫಿಯರ್ಾದಿ ಶ್ರೀ ಸೈಯದ ಅಹ್ಮದ ತಂದೆ ಲಾಲನಸಾಬ ಜಕ್ಮಿ, ವಯಸ್ಸು 60 ವರ್ಷ, ಜಾತಿ ಮುಸ್ಲಿಂ, ಉಃ ಒಕ್ಕಲುತನ, ಸಾಃ ಹಳಿಸಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ. ದಿನಾಂಕ 15/03/2021 ರಂದು ಸಾಯಂಕಾಲದ ಸುಮಾರಿಗೆ ಮನೆಯಿಂದ ನಾನು ಮತ್ತು ನನ್ನ ಮೊಮ್ಮಗ ಸೈಯದ ಅಬ್ರಾರ್ ತಂದೆ ಸೈಯದ ಮುತರ್ುಜಾ ಬನ್ನಿಗಿಡ ವಯ 7 ವರ್ಷ ಈತನೊಂದಿಗೆ ನಡೆದುಕೊಂಡು ಅಗ್ನಿಶಾಮಕ ಠಾಣೆಯ ಹತ್ತಿರ ಇರುವ ಖಾಲೇ ಪೀರ ದಗರ್ಾಕ್ಕೆ ಹೋಗಿ ಸ್ವಲ್ಪ ಸಮಯ ಅಲ್ಲಿಯೇ ಕುಳಿತುಕೊಂಡು ಸಾಯಂಕಾಲ 17-30 ಗಂಟೆಯ ಸುಮಾರಿಗೆ ಮರಳಿ ಮನೆಯ ಕಡೆಗೆ ನಡೆದುಕೊಂಡು ಶಹಾಪೂರ-ಯಾದಗಿರಿ ಮುಖ್ಯೆ ರಸ್ತೆಯ ಮೇಲೆ ಹಳಿ ಸಗರ ಏರಿಯಾದ ಅಗ್ನಿಶಾಮಕ ಠಾಣೆಯ ಹತ್ತಿರ ಇರುವ ಗೋಗಿ ಇಂಜಿನಿಯರಿಂಗ್ ವಕ್ಸ್ ಗ್ಯಾರೇಜ್ ಮುಂದುಗಡೆಯಿಂದ ಹೋಗುತಿದ್ದಾಗ ಹಿಂದಿನಿಂದ ಆಂದರೆ ಶಹಾಪೂರ ಕಡೆಯಿಂದ ಒಂದು ಮಾರುತಿ ಸ್ವೀಪ್ಟ್ ಕಾರ ವಾಹನ ನೇದ್ದರ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ನನ್ನ ಮೊಮ್ಮಗ ಸೈಯದ ಅಬ್ರಾರ್ನಿಗೆ ಜೋರಾಗಿ ಡಿಕ್ಕಿ ಹೊಡೆದರಿಂದ ನನ್ನ ಮೊಮ್ಮಗ ಹಾರಿ ರೋಡಿನ ಮೇಲೆ ಉರಳಿಕೊಂಡು ಬಿದ್ದನು. ಅಪಘಾತವಾಗಿದ್ದನ್ನು ನೋಡಿ ರಸ್ತೆಯ ಮೇಲೆ ಹೋಗುತಿದ್ದ ಹಳಿಸಗರ ಏರಿಯಾದ ಗೋಪಾಲ ಸುರಪೂರಕರ ಮತ್ತು ಆನಂದ ಕೊನೇರ ಇವರು ಸ್ಥಳಕ್ಕೆ ಬಂದು ಅಪಘಾತವಾಗಿದ್ದನ್ನು ನೋಡಿ ನನ್ನ ಮೊಮ್ಮಗನಿಗೆ ಎಬ್ಬಿಸಲು ಸಹಾಯ ಮಾಡಿದರು.
ನಾವೆಲ್ಲರೂ ನೋಡಲಾಗಿ ಸೈಯದ ಅಬ್ರಾರ್ ಈತನಿಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯ ಮತ್ತು ಬಲಕಪಾಳಿಗೆ ಬಲ ಕಿವಿಯ ಹತ್ತಿರ ಕಟ್ಟಾದ ರಕ್ತಗಾಯ, ಬಲ ಭುಜದ ಎಲಬು ಮುರಿದು ಭಾರಿ ಗುಪ್ತಗಾಯ, ಬಲಭುಜದ ಕೆಳಗಡೆ ರಕ್ತಗಾಯವಾಗಿರುತ್ತದೆ. ಅಪಘಾತ ಪಡಿಸಿದ ವಾಹನ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಮಲ್ಲಪ್ಪ ತಂದೆ ಹಣಮಂತ ಲಿಂಗದಳ್ಳಿ ವಯ 42 ವರ್ಷ ಜಾತಿ ಕಬ್ಬಲಿಗ ಸಾಃ ಹಳಿಸಗರ ಶಹಾಪೂರ ಅಂತಾ ಹೇಳಿದನು. ಸದರಿ ಕಾರ ನಂಬರ ನೋಡಲಾಗಿ ಕೆಎ 36-ಎಮ್-9565 ಇದ್ದು, ಸದರಿ ವಾಹನದ ಮುಂಭಾಗ ಎಡಭಾಗದಲ್ಲಿ ಸ್ವಲ್ಪ ಜಖಂಗೊಂಡಿರುತ್ತದೆ. ಗಾಯಗೊಂಡ ಸೈಯದ ಅಬ್ರಾರ್ ಈತನಿಗೆ ಒಂದು ಆಟೋದಲ್ಲಿ ಕೂಡಿಸಿಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿ ಅಪಘಾತವಾದ ವಿಷಯವನ್ನು ನನ್ನ ಮಗಳಿಗೆ ತಿಳಿಸಿದ ಮೇರೆಗೆ, ನನ್ನ ಮಗಳು ರಶೀದಾ ಬೇಗಂ ಶಹಾಪೂರ ಸರಕಾರಿ ಆಸ್ಪತ್ರೆ ಬಂದಿರುತ್ತಾರೆ. ಸೈಯದ ಅಬ್ರಾರ್ ಈತನಿಗೆ ವೈದ್ಯಾಧಿಕಾರಿಗಳು ಉಪಚಾರ ಮಾಡಿದ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಅಂಬುಲೇನ್ಸ ವಾಹನದಲ್ಲಿ ಕರೆದುಕೊಂಡು ಕಲಬುರಗಿಗೆ ಹೋಗಿ, ಅದೆ ದಿನ ಮನೂರ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ. ನಾನು ಮತ್ತು ನನ್ನ ಮಗಳು ಆಸ್ಪತ್ರೆಯಲ್ಲಿಯೇ ಉಳಿದುಕೊಂಡು ನನ್ನ ಮೊಮ್ಮಗನ ಯೋಕ್ಷೇಮ ನೋಡಿಕೊಂಡು ಅವನ ಆರೋಗ್ಯದಲ್ಲಿ ಸ್ವಲ್ಪ ಗುಣಮುಖನಾಗಿದ್ದರಿಂದ ನಾನು ತಡವಾಗಿ ಈ ದಿನ ಠಾಣೆಗೆ ಹಾಜರಾಗಿ ದೂರು ಸಲ್ಲಿಸುತಿದ್ದೆನೆ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ನನ್ನ ಮೊಮ್ಮಗ ಸೈಯದ ಅಬ್ರಾರ್ ಈತನಿಗೆ ಅಪಘಾತ ಪಡಿಸಿದ ಮಾರುತಿ ಸ್ವೀಪ್ಟ್ ಕಾರ ನಂಬರ ಕೆಎ-36-ಎಮ್-9565 ನೇದ್ದರ ಚಾಲಕನಾದ ಮಲ್ಲಪ್ಪ ತಂದೆ ಹಣಮಂತ ಸಾಃ ಹಳಿಸಗರ ಈತನ ವಿರುದ್ದ ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 65/2021 ಕಲಂ 279, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಗೋಗಿ ಪೊಲೀಸ್ ಠಾಣೆ:- 26/2021 279, 338, 304(ಎ) ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ್ : ಇಂದು ದಿನಾಂಕ: 24/03/2021 ರಂದು 7-35 ಪಿಎಮ್ ಕ್ಕೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಪೋನ್ ಮುಖಾಂತರ ಆರ್.ಟಿ.ಎ ಡೆತ್ ಎಮ್.ಎಲ್.ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ 8-00 ಪಿಎಮ್ ಕ್ಕೆ ಬೇಟಿ ನೀಡಿ ಡೆತ್ ಎಮ್.ಎಲ್.ಸಿ ವಸೂಲು ಮಾಡಿಕೊಂಡು ಅಜರ್ಿದಾರಳಾದ ಶ್ರೀಮತಿ ಮಲ್ಲಮ್ಮ ಗಂಡ ಬಸಪ್ಪ ಹಿರೇಕುರುಬರ ಸಾ|| ಅಲ್ಲಾಪೂರ ತಾ|| ಯಡ್ರಾಮಿ ಇವರು ನೀಡಿದ ಲಿಖಿತ ಅಜರ್ಿ ಪಡೆದುಕೊಂಡು ಮರಳಿ 9-15 ಪಿಎಮ್ ಕ್ಕೆ ಠಾಣೆಗೆ ಬಂದಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 24/03/2021 ರಂದು 12-00 ಗಂಟೆ ಸುಮಾರಿಗೆ ಮೃತ ಬಸಪ್ಪ ತಂದೆ ಮಲ್ಲಪ್ಪ ಹಿರೇಕುರುಬರ ಈತನು ಗುಂಡುಗುತರ್ಿ ಗ್ರಾಮಕ್ಕೆ ತನ್ನ ಚಿಕ್ಕಮ್ಮಳ ಹತ್ತಿರ ಹೋಗಿ ಬರುತ್ತೇನೆ ಅಂತಾ ಹೇಳಿ ತನ್ನ ಪ್ಯಾಶನ್ ಪ್ರೋ ಸೈಕಲ್ ಮೋಟಾರ್ ನಂ: ಕೆಎ-32 ಇಡಿ-4115 ನೇದ್ದನ್ನು ತೆಗೆದುಕೊಂಡು ಶಹಾಪೂರ ಕಡೆಗೆ ಹೋಗುವಾಗ ಶಹಾಪೂರ ಸಿಂದಗಿ ಮುಖ್ಯ ರಸ್ತೆಯ ಚಾಮನಾಳ ದಾಟಿ ಬ್ರೀಡ್ಜ ಸಮೀಪ ರೋಡಿನ ಮೇಲೆ, ಸಾಯಂಕಾಲ 5-00 ಗಂಟೆ ಸುಮಾರಿಗೆ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಸೈಕಲ್ ಮೋಟಾರಕ್ಕೆ ಡಿಕ್ಕಿ ಪಡಿಸಿ ಓಡಿ ಹೋಗಿದ್ದು, ಇದರಿಂದ ಬಸಪ್ಪ ಈತನಿಗೆ ಎಡಗಾಲ ಹೆಬ್ಬೆರಳಿಗೆ ಭಾರೀ ರಕ್ತಗಾಯ, ಮೂಗಿಗೆ ಭಾರೀ ರಕ್ತಗಾಯ, ಬಲಮೆಲಕಿಗೆ ರಕ್ತಗಾಯ, ಬಲಭುಜಕ್ಕೆ ಅಂಗೈ ಅಂಗಲದಷ್ಟು ತರಚಿದ ಗಾಯ, ಎಡಗೈ ಮುಂಗೈಗೆ ತರಚಿದ ರಕ್ತಗಾಯ, ಎಡಗಾಲ ಮೊಳಕಾಲಿಗೆ ರಕ್ತಗಾಯ, ಬಲಗೈಗೆ ತರಚಿದ ಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿದ್ದು, ಕಾರಣ ನನ್ನ ಗಂಡನಿಗೆ ಅಪಘಾತ ಪಡಿಸಿ ಓಡಿ ಹೋದ ವಾಹನ ಮತ್ತು ಚಾಲಕನ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿ ಸಾರಾಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: 26/2021 ಕಲಂ: 279, 338, 304(ಎ) ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಇತ್ತೀಚಿನ ನವೀಕರಣ​ : 25-03-2021 10:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080