ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 25-04-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 55/2022 ಕಲಂ.143, 147, 148 323,324, 504, 506 ಸಂಗಡ 149 ಐ.ಪಿ.ಸಿ. : ಇಂದು ದಿನಾಂಕ: 24/04/2022 ರಂದು ಮದ್ಯಾಹ್ನ 12:30 ಗಂಟೆಗೆ ಸುಮಾರಿಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಎಮ್.ಎಲ್.ಸಿ ಇದೆ ಅಂತ ಪೋನ ಮೂಲಕ ತಿಳಿಸಿದ ಮೇರೆಗೆ ನಾನು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಮಲ್ಲಪ್ಪ ತಂದೆ ಖಂಡಪ್ಪ ಹಂಪಿನ ವಯ:-34 ಜಾತಿ: ಕಬ್ಬಲಿಗ ಉ: ಒಕ್ಕಲತನ ಸಾ: ಮೈಲಾಪುರ ತಾ:ಜಿ: ಯಾದಗಿರಿ ಈತನಿಗೆ ಘಟನೆ ಬಗ್ಗೆ ವಿಚಾರಿಸಿದ್ದು ಆತನು ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರನ್ನು ಹಾಜರುಪಡಿಸಿದ್ದು ಸದರಿ ದೂರಿನ ಸಾರಂಶವೆನೆಂದರೆ, ನಾನು ನಮ್ಮ ಊರಾದ ಮೈಲಾಪುರ ಗ್ರಾಮದಲ್ಲಿ ನಮ್ಮ ಚಿಕ್ಕಮ್ಮನ ಹೆಸರಿನಲ್ಲಿ ಇರುವ ಮನೆ ನಂ:2/46/1 ಮತ್ತು ಮಾನ್ಯ ನ್ಯಾಯಲಯದ ತಡೆಯಾಜ್ಞೆ ಇದ್ದ ಕೇಸ ನಂ 114/2020 ನೇದ್ದರ ಆದೇಶದಂತೆ ಕಟ್ಟಡ ತಡೆಯಾಜ್ಞೆ ಇರುತ್ತದೆ. ಇಂದು ದಿನಾಂಕ :24-04-2022 ರಂದು ಮುಂಜಾನೆ 11:00 ಗಂಟೆಯ ಸುಮಾರಿಗೆ ಭಾನುವಾರ ಇದ್ದರಿಂದ ನಮ್ಮ ಮನೆಯ ದೇವರಾದ ಬನ್ನಿ ಮಹಾಕಾಳಿ ದೇವರ ದರ್ಶನಕ್ಕೆ ಹೋಗಿ ಬರುವಾಗ ನಮ್ಮ ಚಿಕ್ಕಮ್ಮನ ಜಾಗದಲ್ಲಿ ಕೊರ್ಟ ತಡೆ ಆದೇಶವಿದ್ದರು ನಮ್ಮ ಅಣ್ಣತಮ್ಮಂದಿರಾದ ಮಲ್ಲಪ್ಪ ತಂದೆ ನಿಂಗಪ್ಪ ಹಂಪಿನ, ನಿಂಗಪ್ಪ ತಂದೆ ಮಲ್ಲಪ್ಪ, ಮಲ್ಲಿಕಾಜರ್ುನ ತಂದೆ ಮಲ್ಲಪ್ಪ ಸಾಬಮ್ಮ ಗಂಡ ಮಲ್ಲಿಕಾಜರ್ುನ, ಮತ್ತು ಹಣಮಂತಿ ಗಂಡ ಮಲ್ಲಪ್ಪ ಹಂಪಿನ ಸಾ: ಎಲ್ಲರು ಮೈಲಾಪುರ ಇವರ ನಡುವೆ ಮತ್ತು ನಮ್ಮ ನಡುವೆ ಸುಮಾರು ವರ್ಷಗಳಿಂದ ಮನೆಯ ವಿಷಯಕ್ಕೆ ಆಗಾಗ ಜಗಳ ನಡೆಯುತ್ತ ಊರಿನ ಹಿರಿಯ ಸಮ್ಮುಖದಲ್ಲಿ ಪಂಚಾಯಿತಿ ಮಾಡಿ ಸುಮ್ಮನಿದ್ದೆವು ಕಟ್ಟಡ ಕಟ್ಟುವುದನ್ನು ನೋಡಿ ನಾನು ನಮ್ಮ ಅಣ್ಣನ ಮಗ ನಿಂಗಪ್ಪ ತಂದೆ ಮಲ್ಲಪ್ಪ ಹಂಪಿನ ಇತನಿಗೆ ನೀವು ಏಕೆ ಮನೆ ಕಟ್ಟತ್ತಾ ಇದ್ದರಿ ಅಂತ ಕೇಳಿದೆ ಆಗ ಸಾಬಮ್ಮ ಗಂಡ ಮಲ್ಲಿಕಾಜರ್ುನ, ಇವಳು ಮನೆ ಕಟ್ಟುವ ಹಿಟ್ಟಂಗಿಯನ್ನು ತೆಗೆದುಕೊಂಡು ನನಗೆ ಎಡ ಕಣ್ಣಿಗೆ ಹೊಡೆದಳು ನಿಂಗಪ್ಪ ತಂದೆ ಮಲ್ಲಪ್ಪ,ಇತನು ಬಲಗಾಲಿನ ಮೊಣಕಾಳಿಗೆ ಹಿಟ್ಟಂಗಿಯಿಂದ ಹೊಡೆದನು ಮಲ್ಲಿಕಾಜರ್ುನ ತಂದೆ ಮಲ್ಲಪ್ಪ ಹಂಪಿನ, ಮತ್ತು ಹಣಮಂತಿ ಗಂಡ ಮಲ್ಲಪ್ಪ ಹಂಪಿನ ಮಲ್ಲಪ್ಪ ತಂದೆ ನಿಂಗಪ್ಪ ಮೂರು ಜನ ಬಂದು ಕೈಯಿಂದ ,ಕಟ್ಟಿಗೆಯಿಂದ ಮತ್ತು ಹಿಟ್ಟಂಗಿಯಿಂದ ಎಡಭಾಗ ಮುಡ್ಡಿಗೆ ಮತ್ತು ಬೆನ್ನಿಗೆ ಹೊಡೆದು ಗುಪ್ತಗಾಯ ಪಡೆಸಿರುತ್ತಾರೆ. ಆಗ ಇದನ್ನು ನೋಡಿ ನನ್ನ ಅಣ್ಣ ಮಲ್ಲೇಶಪ್ಪ ತಂದೆ ಮಲ್ಲಪ್ಪ ಹಂಪಿನ ಮತ್ತು ನನ್ನ ಅಣ್ಣನ ಮಗ ಮಲ್ಲಿಕಾಜರ್ುನ ತಂದೆ ಶರಣಪ್ಪ ಹಂಪಿನ ಇಬ್ಬರು ಬಂದು ನನಗೆ ಹೊಡೆಯುವುದನು ಬಿಡಿಸಿ ನನ್ನನು ಆಗ ಅವರು ಲೇ ಬೋಸಡಿ ಮಗನೇ ಮತ್ತು ಅವಚ್ಯವಾಗಿ ಬೈಯುತ್ತ 1] ಸಾಬಮ್ಮ ಗಂಡ ಮಲ್ಲಿಕಾಜರ್ುನ 2] ನಿಂಗಪ್ಪ ತಂದೆ ಮಲ್ಲಪ್ಪ 3] ಮಲ್ಲಿಕಾಜರ್ುನ ತಂದೆ ಮಲ್ಲಪ್ಪ 4] ಹಣಮಂತಿ ಗಂಡ ಮಲ್ಲಪ್ಪ ಹಂಪಿನ ಮತ್ತು 5] ಮಲ್ಲಪ್ಪ ತಂದೆ ನಿಂಗಪ್ಪ ಹಂಪಿನ ಇವರು ಎಲ್ಲರು ಚೀರಾಡುತ್ತಾ ಇವನದು ಬಹಳ ಆಗಿದೆ ಇವತ್ತು ಖಲಾಸ ಮಾಡಿರ್ರಿ ಅಂತ ಜೀವ ಬೆದರಿಕೆ ಹಾಕಿ ಇರುತ್ತರೆ ನನಗೆ ಜಗಳದಲ್ಲಿ ಗಾಯಗಳು ಆಗಿದ್ದರಿಂದ ನನ್ನ ಅಣ್ಣ ಮತ್ತು ನನ್ನ ಅಣ್ಣನ ಮಗ ಒಂದು ಗಾಡಿಯಲ್ಲಿ ಕರೆದುಕೊಂಡು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ತಂದು ಸೇರಿಕೆ ಮಾಡಿರುತ್ತಾರೆ, ಈ ಮೇಲೆ ನಮೂದಿಸಿದ ಆರೋಪಿತರು ಎಲ್ಲರು ಸೇರಿ ನನ್ನ ಮೇಲೆ ಹಲ್ಲೆ ಮಾಡಿ ನನಗೆ ಜೀವ ಬೆದರಿಕೆ ಹಾಕಿದ್ದವರು ವಿರುದ್ಧ ಕ್ರಮ ಕೈಗೊಳ್ಳವಂತೆ ಮಾನ್ಯರವರಲ್ಲಿ ವಿನಂತಿ ಅಂತ ದೂರನ್ನು ಪಡೆದುಕೊಂಡು ಮರಳಿ ಠಾಣೆಗೆ ಸಮಯ 01:30 ಪಿ.ಎಮ್ಕ್ಕೆ ಬಂದು ಸದರಿ ದೂರಿನ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ:55/2022 ಕಲಂ 143, 147, 148, 323, 324, 504, 506 ಸಂಗಡ 149 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 56/2022, ಕಲಂ, 143,147,323,324,354, 504.506. ಸಂ.149 ಐ ಪಿ ಸಿ : ಇಂದು ದಿನಾಂಕ: 24-04-2022 ರಂದು ಮದ್ಯಾಹ್ನ 02-15 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಎಮ್.ಎಲ್ ಸಿ ಇದೆ ಅಂತಾ ಪೊನ್ ಮೂಲಕ ತಿಳಿಸಿದ ಮೇರೆಗೆ ನಾನು ಆಸ್ಪತ್ರೆಗೆ ಭೆಟಿ ನೀಡಿ ಅಲ್ಲಿ ಗಾಯಾಳುಗಳನ್ನು ವಿಚಾರಿಸಿ ಅವರಲ್ಲಿ ಮಲ್ಲಪ್ಪ ನಿಂಗಪ್ಪ ಈತನು ಹೇಳಿಕೆ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ಇಂದು ದಿನಾಂಕ: 24-04-2022 ರಂದು ಬೆಳಿಗ್ಗೆ 11-00 ಗಂಟೆಗೆ ಮನೆ ಕಟ್ಟುತ್ತಿರುವಾಗ ಆರೋಪಿತರೆಲ್ಲರು ಸೇರಿಕೊಂಡು ಗುಂಪು ಕಟ್ಟಿಕೊಂಡು ಬಂದು ಲೇ ಸೂಳೆ ಮಕ್ಕಳೆ ನಿಮಗೆ ಎಷ್ಟು ಸಲ ಹೇಳಬೇಕು ಇಲ್ಲಿ ಮನೆ ಕಟ್ಟ ಬೇಡರಿ ಅಂತಾ ಅಂದು ಕೈಯಿಂದ ಮತ್ತು ಇಟ್ಟಿಗೆಯಿಮದ ಹೊಡೆ ಬಡೆ ಮಾಡಿ ಕೂದಲು ಹಿಡಿದು ಎಳದಾಡಿ ನೆಲಕ್ಕೆ ಬಿಳಿಸಿ ಮನ ಬಂದಂತೆ ಕಾಲಿನೀದಮ ಒದ್ದು ಇನ್ನೊಂದು ಸಲ ನಮ್ಮ ಜಾಗದ ತಮಟೆಗೇನಾದರು ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.


ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 41/2022 ಕಲಂ 87 ಕೆಪಿ ಯ್ಯಾಕ್ಟ : ಇಂದು ದಿನಾಂಕ 24/04/2022 ರಂದು 4 ಪಿ.ಎಮ್.ಕ್ಕೆ ಫಿಯರ್ಾದಿ ಠಾಣೆಯಲ್ಲಿದ್ದಾಗ ದಿಗ್ಗಿ ಸಿಮಾಂತರದ ಪತ್ತನ ಹಳ್ಳದ ಹತ್ತಿರಸಾರ್ವಜನಿಕಖುಲ್ಲಾಜಾಗದಲ್ಲಿ ಕೆಲವು ಜನರುದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿಅಂದರ ಬಾಹರಅಂತಇಸ್ಪೇಟಜೂಜಾಟಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ 5 ಪಿ.ಎಮ್ ಕ್ಕೆ ದಾಳಿ ಮಾಡಿದಾಗ 03 ಜನಆರೋಪಿತರು ಸಿಕ್ಕಿದ್ದು ಇಬ್ಬರುಆರೋಪಿತರುಓಡಿಹೊಗಿದ್ದು ಹಾಗು ಕಣದಲ್ಲಿಂದ ನಗದುಒಟ್ಟು ಹಣ 6340/- ರೂ, 52 ಇಸ್ಪೇಟ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕುರಿತು ವರದಿ ಸಲ್ಲಿಸಿರುತ್ತಾರೆ.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 30/2022 ಕಲಂ.379 ಐಪಿಸಿ:ದಿನಾಂಕ:19/04/2022 ರಂದು ಬೆಳಿಗ್ಗೆ ಪಿಯರ್ಾದಿದಾರರು ಹೊಲಕ್ಕೆ ಹೋಗಿ ಸಾಯಂಕಾಲ 4:00 ಗಂಟೆಯ ಸುಮಾರಿಗೆ ಹೊಲದಿಂದ ಮನೆಗೆ ಬರುವಾಗ ಬಲಶೆಟ್ಟಿಹಾಳದಿಂದ ಕಕ್ಕೇರಾಕ್ಕೆ ಹೋಗುವ ರಸ್ತೆಗೆ ಇರುವ ತಿಮ್ಮಣ್ಣ ಗ್ಯಾರೇಜ್ ಹತ್ತಿರ ರಸ್ತೆಯ ಪಕ್ಕದಲ್ಲಿ ತನ್ನ ಮೋಟರ್ ಸೈಕಲ್ ನಂ:ಕೆಎ-33 ಡಬ್ಲೂ-2655 ನೇದ್ದನ್ನು ನಿಲ್ಲಿಸಿ ತಿಮ್ಮಣ್ಣನ ಮನೆಯಲ್ಲಿ ಹೋಗಿ ಮಾತನಾಡಿ ಚಹಾ ಕುಡಿದು 5:00 ಗಂಟೆಗೆ ತಿಮ್ಮಣ್ಣನ ಮನೆಯಿಂದ ಹೊರಗೆ ಬಂದು ತನ್ನ ಮೋಟರ್ ಸೈಕಲನ್ನು ನೋಡಿದಾಗ ಅಲ್ಲಿ ಇರಲಿಲ್ಲ. ತಮ್ಮ ಹುಡುಗರು ಯಾರಾದರೂ ಬಂದು ತೆಗೆದುಕೊಂಡು ಹೋಗರಬೇಕು ಅಂತಾ ತಮ್ಮ ಮನೆಗೆ ಬಂದು ಕೇಳಿದಾಗ ತಮ್ಮ ಹುಡುಗರು ಸಹ ತಾವು ಮೋಟರ್ ಸೈಕಲನ್ನು ತಂದಿಲ್ಲ ಅಂತಾ ತಿಳಿಸಿದಾಗ ಪಿಯರ್ಾದಿದಾರರು ಅಂದಿನಿಂದ ಇಲ್ಲಿಯವರೆಗೆ ತನ್ನ ಮೋಟರ್ ಸೈಕಲನ್ನು ಹುಡುಕಾಡಿದ್ದು ಸಿಕ್ಕಿರುವುದಿಲ್ಲ. ದಿನಾಂಕ:19/04/2022 ರಂದು ಸಾಯಂಕಾಲ 4:00 ಗಂಟೆಯಿಂದ 5:00 ಗಂಟೆಯ ಮದ್ಯದ ಅವಧಿಯಲ್ಲಿ ತನ್ನ ಮೋಟರ್ ಸೈಕಲ್ ನಂ:ಕೆಎ-33 ಡಬ್ಲೂ-2655 ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಮೋಟರ್ ಸೈಕಲನ್ನು ಪತ್ತೆ ಹಚ್ಚಿ ಕಾಯ್ದೆಸಿರಿ ಕ್ರಮ ಕೈಕೊಳ್ಳಬೇಕು ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 63/2022. ಕಲಂ 143,147,148,323,324,307,504,506, ಸಂ 149 ಐಪಿಸಿ : ಇಂದು ದಿನಾಂಕ 24/04/2022 ರಂದು 21-00 ಗಂಟೆಗೆ ಪಿಯರ್ಾದಿ ಶ್ರೀಮತಿ, ತಾಯಮ್ಮ ಗಂಡ ಮಲ್ಲಪ್ಪ ಘಂಟಿ ವ|| 58 ಜಾ|| ಹರಿಜನ ಉ|| ಮನೆಕೆಲಸ ಸಾ|| ಹತ್ತಿಗುಡೂರ. 9901782151 ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನಾವು ಗ್ರಾಮದಲ್ಲಿ ಬೆಳೆಯುವದನ್ನು ಸಹಿದ ನಮ್ಮ ಅಣ್ಣ ತಮಕಿಯ ಮೌನೇಶ ತಂದೆ ಶಂಕ್ರೇಪ್ಪ ಘಂಟಿ ಈತನು ನಮ್ಮೊಂದಿಗೆ ಆಗಾಗ ತಕರಾರು ಮಾಡುತ್ತಿದ್ದು ನಾವು ಹೋಗಲಿ ಅಂತ ಸುಮ್ಮನಾಗಿದ್ದೆವು. ಹೀಗಿದ್ದು ನಾನು ನಮ್ಮ ಎರಡು ಆಡುಗಳನ್ನು ಮರೆಮ್ಮ ಗುಡಿಯ ಹಿಂದೆ ಇರುವ ಖುಲ್ಲಾ ಜಾಗದಲ್ಲಿ ಕಟ್ಟಿತ್ತಿದ್ದೆವು. ದಿನನಿತ್ಯದಂತೆ ದಿನಾಂಕ 22/04/2022 ರಂದು ಸಾಯಂಕಾಲ ಸುಮಾರಿಗೆ ನಾನು ನಮ್ಮ ಎರಡು ಆಡುಗಳನ್ನು ಕಟ್ಟಬೆಕೆಂದು ಮರೆಮ್ಮ ಗುಡಿಯ ಹಿಂದೆ ಇರುವ ಖುಲ್ಲಾ ಜಾಗದಲ್ಲಿ ಹೋದಾಗ ನಮ್ಮ ಅಣ್ಣ-ತಮಕಿಯ ಮೌನೇಶ ತಂದೆ ಶಂಕ್ರೇಪ್ಪ ಘಂಟಿ ಈತನು ತನ್ನ ಟಾಟಾ ಎ.ಸಿ.ಇ ವಾಹನ ನಿಲ್ಲಿಸಿದನು. ಆಗ ನಾನು ಸ್ವಲ್ಪ ನಿನ್ನ ವಾಹನ ಹಿಂದೆ ನಿಲ್ಲಿಸು ಅಂತ ಹೇಳಿದೆನು ಆಗ ಮೌನೇಶನು ನನ್ನೊಂದಿಗೆ ಬಾಯಿ ಮಾತಿನ ತಕರಾರು ಆಗಿದು ಇರುತ್ತದೆ. ಆಗ ನಾನು ಹೋಗಲಿ ಅಂತ ಸುಮ್ಮನಾಗಿದ್ದೆನು. ನಂತರ ಅದೆ ದಿನ ದಿನಾಂಕ 22/04/2022 ರಂದು ರಾತ್ರಿ 7-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳಾದ. ಬಸಮ್ಮ ತಂದೆ ಮಲ್ಲಪ್ಪ ಘಂಟಿ, ನಿಂಗಪ್ಪ ತಂದೆ ಮಲ್ಲಪ್ಪ ಘಂಟಿ, ಮರೆಪ್ಪ ತಂದೆ ಮಲ್ಲಪ್ಪ ಘಂಟಿ, ನಾವೆಲ್ಲರು ನಮ್ಮ ಮನೆಯ ಮುಂದೆ ನಿತ್ತಾಗ ನಮ್ಮ ಅಣ್ಣತಮಕಿಯ 1] ಶೇಖಪ್ಪ ತಂದೆ ಶಂಕ್ರೇಪ್ಪ ಘಂಟಿ 2] ಮೌನೇಶ ತಂದೆ ಶಂಕ್ರೇಪ್ಪ ಘಂಟಿ, 3] ಶಂಕ್ರೇಪ್ಪ ತಂದೆ ಮುದಕಪ್ಪ ಘಂಟಿ 4] ಹಣಮಂತ ತಂದೆ ಶಂಕ್ರೇಪ್ಪ ಘಂಟಿ 5] ನಾಗಮ್ಮ ಗಂಡ ಶಂಕ್ರೇಪ್ಪ ಘಂಟಿ 6] ಸಾವಿತ್ರಿ ಗಂಡ ಮೌನೇಶ ಘಂಟಿ, ಇವರೆಲ್ಲರು ಕೂಡಿಕೊಂಡು ಅವರಲ್ಲಿ ಶೇಖಪ್ಪನ ಕೈಯಲ್ಲಿ ಕೊಡ್ಲಿ ಇದ್ದು ಮೌನೇಶ, ಶಂಕ್ರೇಪ್ಪ ಇವರ ಕೈಯಲ್ಲಿ ಬಡಿಗೆ ಹೀಡಿದುಕೊಂಡಿದ್ದು ಎಲ್ಲರು ಬಂದವರೆ ಲೇ ತಾಯಿ ಸೂಳಿ ಸಾಯಂಕಾಲ ನೀನು ನಮ್ಮೊಂದಿಗೆ ಜಗಳ ತೆಗೆದಿದ್ದಿ ಬಾರಲೇ ಅಂತ ಅಂದರು ಆಗ ಮರೆಪ್ಪನು ನನ್ನ ತಾಯಿ ಯಾಕ ಜಗಳತೆಗಿತಾಳ ನಿವೆ ಜಗಳ ತೆಗೆದಿರುತ್ತಿರಿ ಅಂತ ಅಂದಾಗ ಶಂಕ್ರೇಪ್ಪನು ಮರ್ಯಾ ನಿನ್ನದು ಬಹಳವಾಗಿದೆ ನಮ್ಮ ಊರಿನಲ್ಲಿ ನಮಗೆ ಎದರು ನಿಲ್ಲುವರು ಯಾರು ಇಲ್ಲಾ ? ನೀವು ಜೀವಂತ ಇದ್ದರೆ ತಾನೇ ನಮಗೆ ಎದುರು ನಿಲ್ಲುವುದು, ನಿಮ್ಮನ್ನು ಈ ದಿನ ಜೀವ ಸಹಿತ ಉಳಿಸುವುದಿಲ್ಲಾ ಅಂತ ಅಂದು ಕೋಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕೊಡ್ಲಿಯಿಂದ ಮರೆಪ್ಪನ ತಲೆಗೆ ಹೋಡೆದು ಭಾರಿ ರಕ್ತಗಾಯ ಮಾಡಿ ಕೋಲೆ ಮಾಡಲು ಪ್ರಯತ್ನಿಸಿರುತ್ತಾನೆ. ಮೌನೇಶನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಮರೆಪ್ಪನ ಬಲಗೈ ಮೋಳಕೈ ಕೆಳಗೆ, ಬಲಗೈ ಬೆರಳುಗಳಿಗೆ ಹೋಡೆದು ಗುಪ್ತಗಾಯ ಮಾಡಿ ಕೋಲೆ ಮಾಡಲು ಪ್ರತ್ನಿಸಿರುತ್ತಾನೆ. ಮರೆಪ್ಪನಿಗೆ ಹೋಡೆಯುವದನ್ನು ಬಿಡಿಸಿಕೊಳ್ಳಲು ನಿಂಗಪ್ಪನು ಹೋದಾಗ ಮೌನೇಶನು ತನ್ನ ಕೈಯಲ್ಲಿದ್ದ ಅದೆ ಬಡಿಗೆಯಿಂದ ನಿಂಗಪ್ಪನ ತಲೆಗೆ ಹೋಡೆದನು. ಶಂಕ್ರೇಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನಿಂಗಪ್ಪನಿಗೆ ಹಿಂದಿನ ಬಲಗಡೆ ಟೊಂಕಕ್ಕೆ, ಎಡಗೈ ಹಸ್ತದ ಕಿಲಿನ ಮೇಲೆ, ಹೊಡೆದು ಗುಪ್ತಗಾಯ ಮಾಡಿದನು,. ಶಂಕ್ರೇಪ್ಪನು ಅದೆ ಬಡಿಗೆಯಿಂದ ನಿಂಗಪ್ಪನ ಬಲಗೈ ಹಸ್ತದ ಮೇಲೆ ಹೊಡೆದ್ದಿದ್ದರಿಂದ ತರಚಿದ ಗಾಯ ವಾಗಿದ್ದು ಇರುತ್ತದೆ. ಹಣಮಂತನು ತನ್ನ ಕೈಯಿಂದ ನಿಂಗಪ್ಪನ ಕುತ್ತಿಗೆಗೆ ಹೋಡೆದು ಗುಪ್ತಗಾಯ ಮಾಡಿದನು. ಆಗ ನಾಗಮ್ಮಳು ತನ್ನ ಕೈಯಿಂದ ನಿಂಗಪ್ಪನ ಕುತ್ತಿಗೆಗೆ ಚೂರಿದಳು. ಸಾವಿತ್ರಿಯು ತನ್ನ ಕೈಯಿಂದ ನಿಂಗಪ್ಪನ ಮುಖಕ್ಕೆ ಚೂರಿದಳು. ನಾಗಮ್ಮಳು ನನಗೆ ಕೂದಲು ಹಿಡಿದು ಜಗ್ಗಾಡಿದಳು, ಸಾವಿತ್ರಿಯು ಬಸಮ್ಮಳಿಗೆ ಎಡಗಣ್ಣಿನ ಹತ್ತಿರ ಹೊಡೆದಳು. ಆಗ ಅಲ್ಲಿಗೆ ಬಂದ ನನ್ನ ಮಗ ಚಂದ್ರಕಾಂತ ತಂದೆ ಮಲ್ಲಪ್ಪ ಘಂಟಿ. ಅಲ್ಲೆ ಹೋರಟಿದ್ದ ಹುಸನಪ್ಪ ತಂದೆ ಮಾನಪ್ಪ ಟಣಕೆದಾರ, ಗುರಪ್ಪ ತಂದೆ ಮಹಾದೇವಪ್ಪ ಟಣಕೆದಾರ. ನಾವೆಲ್ಲರು ಜಗಳವನ್ನು ನೋಡಿ ಬಿಡಿಸಿಕೊಂಡರು ಆಗ ಈ ಮೇಲ್ಕಂಡ 6 ಜನರು ಇವತ್ತು ಉಳಿದುಕೊಂಡಿರಿ ಮಕ್ಕಳೆ ಇಲ್ಲಾ ಅಂದರೆ ನಿಮ್ಮ ಜೀವ ಸಹಿತ ಬಿಡುತ್ತಿರಲಿಲ್ಲಾ ಅಂತ ಜೀವದ ಭಯ ಹಾಕಿದು ಹೋದರು, ಸದರಿ ಜಗಳವು ನಮ್ಮ ಮನೆಯ ಮುಂದೆ ರಾತ್ರಿ 7-00 ಗಂಟೆಯ ಸುಮಾರಿಗೆ ವಿದ್ಯೂತ್ ಕಂಬದ ಲೈಟಿನ ಬೇಳಕಿನಲ್ಲಿ ಜರುಗಿರುತ್ತದೆ. ನಂತರ ನಾನು ಮತ್ತು ನನ್ನ ಮಗಳು ಬಸಮ್ಮ, ನನ್ನ ಮಗ ಚಂದ್ರಕಾಂತ, ನಮ್ಮೂರ ಹುಸನಪ್ಪ, ಗುರಪ್ಪ ನಾವೆಲ್ಲರು. ಮರೆಪ್ಪನಿಗೆ. ಮತ್ತು ನಿಂಗಪ್ಪನಿಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ಶಹಾಪೂರದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದೆವು. ಮರೆಪ್ಪನಿಗೆ ಮತ್ತು ನಿಂಗಪ್ಪನಿಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಒಂದು ಅಂಬುಲೇನ್ಸದಲ್ಲಿ ನಾನು ಮತ್ತು ನನ್ನ ಮಗಳು ಬಸ್ಸಮ್ಮ, ನನ್ನ ಮಗ ಚಂದ್ರಕಾಂತ, ಹುಸನಪ್ಪ. ಎಲ್ಲರು ಕೂಡಿ ಮರೆಪ್ಪನಿಗೆ, ನಿಂಗಪ್ಪನಿಗೆ ಒಂದು ಅಂಬುಲೇನ್ಸದಲ್ಲಿ ಕರೆದುಕೊಂಡು ಹೋಗಿ ಕಲಬರಗಿಯ ಎ.ಎಸ್.ಎಂ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಕುರಿತು ಸೇರಿಕೆಮಾಡಿದ್ದು ಇರುತ್ತದೆ. ನನಗೆ ಮತ್ತು ಬಸಮ್ಮಳಿಗೆ ಸಣ್ಣ ಪುಟ್ಟ ಗುಪ್ತಗಾಯವಾಗಿದ್ದರಿಂದ ಉಪಚಾರ ಮಾಡಿಸಿಕೊಂಡಿರುವುದಿಲ್ಲಾ. ನಾನು ಆಸ್ಪತೆಗೆ ತೋರಿಸಿಕೊಳ್ಳುವುದಿಲ್ಲ. ನನ್ನ ಮಕ್ಕಳಿಗೆ ಉಪಚಾರ ಮಾಡಿಸುವದು ಅವಶ್ಕಕವಾಗಿದ್ದರಿಂದ ಉಪಚಾರ ಮಾಡಿಸಿ ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ. ಕಾರಣ ನನಗೆ ಮತ್ತು ನನ್ನ ಮಕ್ಕಳಿಗೆ ಹೊಡೆ ಬಡೆಮಾಡಿ ಕೊಲೆ ಮಾಡಲು ಪ್ರಯತ್ನಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲು ಅಜರ್ಿ ಸಲ್ಲಿಸಿದ್ದು. ಸದರಿ ಅಜರ್ಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 63/2022 ಕಲಂ 143,147,148,323,324,307,504,506, ಸಂ 149 ಐ,ಪಿ,ಸಿ, ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 25-04-2022 05:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080