ಅಭಿಪ್ರಾಯ / ಸಲಹೆಗಳು

                                          ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25-05-2021

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ :- 71/2021 ಕಲಂ 269, 270, 188 ಐಪಿಸಿ ಮತ್ತು 51 ಡಿಜಸ್ಟರ ಮ್ಯಾನೆಜಮೆಂಟ ಆ್ಯಕ್ಟ 2005 : ಇಂದು ದಿನಾಂಕ 24/05/2021 ರಂದು ಬೆಳಿಗ್ಗೆ 11-30 ಗಂಟೆಗೆ ಶ್ರೀ ಸುರೇಶಕುಮಾರ ಪಿ.ಎಸ್.ಐ(ಕಾ.ಸು) ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ವರದಿ, ಒಬ್ಬ ಆರೋಪಿ ಮತ್ತು ಕ್ರೂಜರ ತಂದು ಹಾಜರಪಡಿಸಿದ್ದು, ವರದಿ ಸಾರಾಂಶವೆನೆಂದರೆ ಈ ಮೂಲಕ ನಾನು ಸುರೇಶಕುಮಾರ ಪಿ.ಎಸ.ಐ(ಕಾ.ಸು) ಆದ ನಾನು ಈ ಮೂಲಕ ಸರಕಾರಿ ತಪರ್ೆ ವರದಿ ನೀಡುತ್ತಿರುವುದೆನೆಂದರೆ ಇಂದು ದಿನಾಂಕ 24/05/2021 ರಂದು ಮುಂಜಾನೆ 10-30 ಗಂಟೆಗೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೋವಿಡ್-19 ಸೊಂಕು ಹರಡುತ್ತಿದ್ದುದ್ದರಿಂದ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ್ದು, ಪೆಟ್ರೋಲಿಂಗ್ ಕರ್ತವ್ಯ ಕುರಿತು ನಾನು ಮತ್ತು ನಮ್ಮ ಜೀಪ ಚಾಲಕನಾದ ಭೀಮರಾಯ ಸಿಪಿಸಿ-33 ರವರು ಇಬ್ಬರೂ ಎಂ.ಹೊಸಳ್ಳಿ ಗ್ರಾಮದ ಹತ್ತಿರ ಇದ್ದಾಗ ಯಾದಗಿರಿ ನಗರ ಕಡೆಯಿಂದ ಒಂದು ಕ್ರೂಜರ ವಾಹನ ನಂ ಕೆ.ಎ-33-ಎಮ್-5953 ನೆದ್ದನ್ನು ಬರುತ್ತಿದ್ದುದ್ದನ್ನು ಕೈ ಮಾಡಿ ನಿಲ್ಲಿಸಿ ಪರಿಶೀಲಿಸಿದಾಗ ಸದರಿ ವಾಹನದಲ್ಲಿ ಸುಮಾರು 10-15 ಜನರು ಪ್ರಯಾಣಿಕರು ಕುಳಿತಿದ್ದು, ಸದರಿ ವಾಹನದ ಚಾಲಕನಾದ ಮಹಿಬೂಬ ತಂದೆ ರಹಿಮಾನ ಸಾಃ ನಾಯ್ಕಲ್ ಇತನಿಗೆ ಲಾಕ್ ಡೌನ್ ಇದ್ದಿದ್ದು ಗೋತ್ತಿದ್ದರು ಸಹಿತ ತನ್ನ ವಾಹನದಲ್ಲಿ 10-15 ಪ್ರಯಾಣಿಕರನ್ನು ಕೂಡಿಸಿಕೊಂಡು ಮಾನ್ಯ ಜಿಲ್ಲಾಧಿಕಾರಿಗಳ ಆಧೇಶವನ್ನು ಉಲ್ಲಂಘನೆ ಮಾತನಾಡಿದ್ದು ಅಲ್ಲದೇ ಸದರಿ ವಾಹನ ಚಾಲಕ ಮತ್ತು ಪ್ರಯಾಣಿಕರು ಯಾವುದೇ ಮಾಸ್ಕ ಧರಿಸದೇ ಮತ್ತು ಸಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಸೊಂಕು ಹರಡುತ್ತದೆ ಅಂತಾ ಗೋತ್ತಿದ್ದರೂ ಕೂಡಾ ನಿರ್ಲಕ್ಷ ವಹಿಸಿದ್ದರಿಂದ ವಾಹನ ಮತ್ತು ವಾಹನ ಚಾಲಕನನ್ನು ನನ್ನ ವಶಕ್ಕೆ ಪಡೆದುಕೊಂಡಿದ್ದು, ಪ್ರಯಾಣಿಕರಿಗೆ ತಮ್ಮ ತಮ್ಮ ಊರಿಗೆ ಹೋಗಿ ಕೊವಿಡ್ ಪರೀಕ್ಷೆ ಮಾಡಿಕೊಳ್ಳಲು ಸೂಚಿಸಿದ್ದು ಇರುತ್ತದೆ, ಈ ಘಟನೆಗೆ ವಾಹನ ಚಾಲಕ ಮತ್ತು ವಾಹನ ಮಾಲೀಕನಾದ ದಾವೂದ್ ತಂದೆ ಗುಲಾಮ ರಸೂಲ ಇವರು ಕೊವಿಡ್ ಸೊಂಕು ಹರಡುವದರ ಬಗ್ಗೆ ನಿರ್ಲಕ್ಷ ವಹಿಸಿದ್ದರಿಂದ ಮತ್ತು ಜಿಲ್ಲಾಧಿಕಾರಿಯವರ ಆಧೇಶ ಉಲ್ಲಂಘನೆ ಮಾಡಿದ್ದರಿಂದ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ. ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 71/2021 ಕಲಂ 269, 270, 188 ಐಪಿಸಿ ಮತ್ತು 51 ಡಿಜಸ್ಟರ ಮ್ಯಾನೆಜಮೆಂಟ ಆ್ಯಕ್ಟ 2005 ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಇರುತ್ತದೆ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ :-. 72/2021 ಕಲಂ 269, 270, 188 ಐಪಿಸಿ ಮತ್ತು 51 ಡಿಜಸ್ಟರ ಮ್ಯಾನೆಜಮೆಂಟ ಆ್ಯಕ್ಟ 2005: ಇಂದು ದಿನಾಂಕ 24/05/2021 ರಂದು ಮಧ್ಯಾಹ್ನ 2-30 ಗಂಟೆಗೆ ಶ್ರೀ ಭೀಮಪ್ಪ ಕಾನಾಗಡ್ಡಾ ಎ.ಎಸ್.ಐ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ವರದಿ, ಒಬ್ಬ ಆರೋಪಿ ಮತ್ತು ಕ್ರೂಜರ ತಂದು ಹಾಜರಪಡಿಸಿದ್ದು, ವರದಿ ಸಾರಾಂಶವೆನೆಂದರೆ ಈ ಮೂಲಕ ನಾನು ಭೀಮಪ್ಪ ಕಾನಾಗಡ್ಡಾ ಎ.ಎಸ.ಐ ಆದ ನಾನು ಈ ಮೂಲಕ ಸರಕಾರಿ ತಪರ್ೆ ವರದಿ ನೀಡುತ್ತಿರುವುದೆನೆಂದರೆ ಇಂದು ದಿನಾಂಕ 24/05/2021 ರಂದು ಮಧ್ಯಾಹ್ನ 1-30 ಗಂಟೆಗೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೋವಿಡ್-19 ಸೊಂಕು ಹರಡುತ್ತಿದ್ದುದ್ದರಿಂದ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ್ದು, ಪೆಟ್ರೋಲಿಂಗ್ ಕರ್ತವ್ಯ ಕುರಿತು ನಾನು ಮತ್ತು ನಮ್ಮ ಜೀಪ ಚಾಲಕನಾದ ಪ್ರಭುಗೌಡ ಸಿಪಿಸಿ-361 ರವರು ಇಬ್ಬರೂ ಮುಂಡರಗಿ ಗ್ರಾಮದ ಹತ್ತಿರ ಇದ್ದಾಗ ಯಾದಗಿರಿ ನಗರ ಕಡೆಯಿಂದ ಒಂದು ಕ್ರೂಜರ ವಾಹನ ನಂ ಕೆ.ಎ-36-ಎನ್-5244 ನೆದ್ದನ್ನು ಬರುತ್ತಿದ್ದುದ್ದನ್ನು ಕೈ ಮಾಡಿ ನಿಲ್ಲಿಸಿ ಪರಿಶೀಲಿಸಿದಾಗ ಸದರಿ ವಾಹನದಲ್ಲಿ ಸುಮಾರು 08-10 ಜನರು ಪ್ರಯಾಣಿಕರು ಕುಳಿತಿದ್ದು, ಸದರಿ ವಾಹನದ ಚಾಲಕನಾದ ಮಹೇಶ ತಂದೆ ಸೋಮನಾಥ ಸಾಃ ಯಾದಗಿರಿ ಇತನಿಗೆ ಲಾಕ್ ಡೌನ್ ಇದ್ದಿದ್ದು ಗೋತ್ತಿದ್ದರು ಸಹಿತ ತನ್ನ ವಾಹನದಲ್ಲಿ 08-10 ಜನ ಪ್ರಯಾಣಿಕರನ್ನು ಕೂಡಿಸಿಕೊಂಡು ಮಾನ್ಯ ಜಿಲ್ಲಾಧಿಕಾರಿಗಳ ಆಧೇಶವನ್ನು ಉಲ್ಲಂಘನೆ ಮಾತನಾಡಿದ್ದು ಅಲ್ಲದೇ ಸದರಿ ವಾಹನ ಚಾಲಕ ಮತ್ತು ಪ್ರಯಾಣಿಕರು ಯಾವುದೇ ಮಾಸ್ಕ ಧರಿಸದೇ ಮತ್ತು ಸಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಸೊಂಕು ಹರಡುತ್ತದೆ ಅಂತಾ ಗೋತ್ತಿದ್ದರೂ ಕೂಡಾ ನಿರ್ಲಕ್ಷ ವಹಿಸಿದ್ದರಿಂದ ವಾಹನ ಮತ್ತು ವಾಹನ ಚಾಲಕನನ್ನು ನನ್ನ ವಶಕ್ಕೆ ಪಡೆದುಕೊಂಡಿದ್ದು, ಪ್ರಯಾಣಿಕರಿಗೆ ತಮ್ಮ ತಮ್ಮ ಊರಿಗೆ ಹೋಗಿ ಕೊವಿಡ್ ಪರೀಕ್ಷೆ ಮಾಡಿಕೊಳ್ಳಲು ಸೂಚಿಸಿದ್ದು ಇರುತ್ತದೆ, ಈ ಘಟನೆಗೆ ವಾಹನ ಚಾಲಕ ಮತ್ತು ವಾಹನ ಮಾಲೀಕನಾದ ಹಣಮಂತ ತಂದೆ ತಿಪ್ಪಣ್ಣ ಕ್ವಾಲೇರ ಸಾಃ ಕೊಯಿಲೂರ ಇವರು ಕೊವಿಡ್ ಸೊಂಕು ಹರಡುವದರ ಬಗ್ಗೆ ನಿರ್ಲಕ್ಷ ವಹಿಸಿದ್ದರಿಂದ ಮತ್ತು ಜಿಲ್ಲಾಧಿಕಾರಿಯವರ ಆಧೇಶ ಉಲ್ಲಂಘನೆ ಮಾಡಿದ್ದರಿಂದ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ. ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 72/2021 ಕಲಂ 269, 270, 188 ಐಪಿಸಿ ಮತ್ತು 51 ಡಿಜಸ್ಟರ ಮ್ಯಾನೆಜಮೆಂಟ ಆ್ಯಕ್ಟ 2005 ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಶಹಾಪೂರ ಪೊಲೀಸ್ ಠಾಣೆ:- 110/2021 ಕಲಂ 279, 338 ಐ.ಪಿ.ಸಿ : ಇಂದು ದಿನಾಂಕ 24/05/2021 ರಂದು, ಮುಂಜಾನೆ 11-30 ಗಂಟೆಗೆ ಫಿಯರ್ಾದಿ ಶ್ರೀ ಸಾಹೇಬಗೌಡ ತಂದೆ ಬಸನಗೌಡ ಹೊಸಗೌಡ್ರು, ವಯಸ್ಸು 43 ವರ್ಷ ಜಾತಿ ಲಿಂಗಾಯತ, ಉಃ ಗುತ್ತೆದಾರ ಕೆಲಸ ಸಾಃ ಬಸವೇಶ್ವರನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನನ್ನ ಖಾಸಾ ತಮ್ಮನಾದ ಭೀಮನಗೌಡ ತಂದೆ ಬಸನಗೌಡ ಹೊಸಗೌಡ್ರು ವಯಸ್ಸು 36 ವರ್ಷ ಇವರು ವಡಗೇರಾ ತಾಲೂಕಿನಲ್ಲಿ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ದಲ್ಲಿ ಒಂದು ವರ್ಷದಿಂದ ಮ್ಯಾನೇಜರ್ ಅಂತಾ ಕೆಲಸ ಮಾಡಿಕೊಂಡಿದ್ದರು, ದಿನಾಲು ಶಹಾಪೂರದಿಂದ ವಡಗೇರಾಕ್ಕೆ ತನ್ನ ಮೋಟರ್ ಸೈಕಲ್ ಮೇಲೆ ಹೋಗಿ ಬರುವುದು ಮಾಡುತಿದ್ದರು. ಹೀಗಿರುವಾಗ ದಿನಾಂಕ 21/05/2021 ರಂದು, ಎಂದಿನಂತೆ ಮುಂಜಾನೆ 9-00 ಗಂಟೆಯ ಸುಮಾರಿಗೆ ಮನೆಯಿಂದ ತನ್ನ ಮೋಟರ್ ಸೈಕಲ್ ನಂಬರ ಕೆಎ-33-ಆರ್-2377 ನೇದ್ದರ ಮೇಲೆ ವಡಗೇರಾ ಕ್ಕೆ ಹೋಗಿದ್ದರು, ನಂತರ ಮದ್ಯಾಹ್ನ 3-15 ಗಂಟೆಯ ಸುಮಾರಿಗೆ ಹಳಿಸಗರ ಗ್ರಾಮದ ದೇವಿಂದ್ರ ಚಿಕ್ಕನಳ್ಳಿ ಇವರು ಫೋನ್ ಮಾಡಿ ನನ್ನ ಕೆಲಸದ ನಿಮಿತ್ಯ ನಾನು ಯಾದಗಿರಿಗೆ ಹೋಗಿದ್ದು, ಮರಳಿ ಊರಿಗೆ ಬರುತಿದ್ದಾಗ ದೋರನಳ್ಳಿ ಗ್ರಾಮದ ಹತ್ತಿರ ನಿನ್ನ ತಮ್ಮ ಭೀಮನಗೌಡ ಇವರು ಮೋಟರ್ ಸೈಕಲ್ ಚಲಾಯಿಸಿಕೊಂಡು ಶಹಾಪೂರ ಕಡೆಗೆ ನಡೆದಿದ್ದರು, ನಾನು ಅವರ ಹಿಂದಿನಿಂದ ಅಂದಾಜು 30- 40 ಫೀಟ್ ಅಂತರದಲ್ಲಿ ಮೋಟರ್ ಸೈಕಲ್ ಚಲಾಯಿಸಿಕೊಂಡು ಹೊರಟಿದ್ದೇನು. ದೋರನಳ್ಳಿ ಗ್ರಾಮದ ಯು.ಕೆ.ಪಿ ಕ್ಯಾಂಪ್ ಹತ್ತಿರ ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಹೋಗುತಿದ್ದಾಗ ಎದರುಗಡೆಯಿಂದ ಅಂದರೆ ಶಹಾಪೂರ ಕಡೆಯಿಂದ ಒಂದು ಕಾರ್ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ನಿಮ್ಮ ತಮ್ಮ ಭೀಮನಗೌಡ ಇವರು ರೋಡಿನ ಎಡಬದಿಗೆ ಬದಿಗೆ ಚಲಾಯಿಸಿಕೊಂಡು ಹೊರಟಿದ್ದ ಮೋಟರ್ ಸೈಕಲ್ಗೆ ಜೋರಾಗಿ ಡಿಕ್ಕಿ ಮಾಡಿದ್ದರಿಂದ ನಿನ್ನ ತಮ್ಮ ಮೋಟರ್ ಸೈಕಲ್ದಿಂದ ಹಾರಿ ಕೆಳಗಡೆ ಬಿದ್ದಿದ್ದು, ನಾನು ಹೋಗಿ ನೋಡಲಾಗಿ ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ ರಕ್ತ ಬರುತಿತ್ತು ಮತ್ತು ಬಲಗಾಲ ಮೊಳಕಾಲ ಕೆಳಗೆ ಎಲಬು ಮುರಿದು ಭಾರೀ ರಕ್ತಗಾಯವಾಗಿದ್ದು ನಿನ್ನ ತಮ್ಮನಿಗೆ ಮಾತನಾಡಿಸಿದ್ದು ಮಾತನಾಡಿರುವುದಿಲ್ಲ. ಅಪಘಾತ ಪಡಿಸಿದ ಕಾರ್ ನಂಬರ ಕೆಎ-41-ಸಿ-7532 ಇದ್ದು ಸದರಿ ಕಾರ್ ಚಾಲಕನ ಹೆಸರು ವಿಳಾಸ ವಿಚಾರಿಸಿದ್ದು ಭೀಮರಡ್ಡಿ ತಂದೆ ಶರಣಪ್ಪ ಯಾಳವಾರ ವಯಸ್ಸು, 22 ವರ್ಷ, ಸಾಃ ಬೆನಕನಹಳ್ಳಿ ತಾಃ ಶಹಾಪೂರ ಅಂತ ಹೇಳಿದ್ದು ಅಂಬುಲೆನ್ಸಗೆ ಫೋನ್ ಮಾಡಿದ್ದು, ಸ್ಥಳಕ್ಕೆ ಬಂದ ನಂತರ ಅದರಲ್ಲಿ ನಿಮ್ಮ ತಮ್ಮನವರನ್ನು ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತೇನೆ ನೀವು ಆಸ್ಪತ್ರೆಗೆ ಬನ್ನಿ ಅಂತ ತಿಳಿಸಿದ ಮೆರೆಗೆ, ಸ್ವಲ್ಪ ಸಮಯದಲ್ಲಿ ನಾನು ಶಹಾಪೂರ ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ, ನನ್ನ ತಮ್ಮ ಭೀಮನಗೌಡನು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಿದ್ದು, ನನ್ನ ತಮ್ಮನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿದ್ದು ಮತ್ತು ಬಲಗಾಲ ಮೊಳಕಾಲ ಎಲಬು ಮುರಿದು ಭಾರಿ ರಕ್ತಗಾವಾಗಿತ್ತು ಮಾತನಾಡಿಸಿದರು ಮಾತನಾಡಿರುವುದಿಲ್ಲ. ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಮುಂದಕ್ಕೆ ಹೋಗಲು ತಿಳಿಸಿದ ಮೇರೆಗೆ, ನಾನು ಭೀಮನಗೌಡನಿಗೆ ಅಂಬುಲೆನ್ಸದಲ್ಲಿ ಕರೆದುಕೊಂಡು ಕಲಬುರಗಿಗೆ ಹೋಗಿ, ಕಲಬುರಗಿಯ ವಾತ್ಸಲ್ಯ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇನೆ ಇಲ್ಲಿಯವರೆಗೆ ನನ್ನ ತಮ್ಮನವರು ಮಾತನಾಡಿರುವುದಿಲ್ಲ ಬೆಹೋಶ್ ಇರುತ್ತಾರೆ. ನನ್ನ ತಮ್ಮನಿಗೆ ಉಪಚಾರದ ಅವಶ್ಯಕತೆ ಇರುವುದರಿಂದ ಕಲಬುರಗಿಗೆ ಹೋಗಿ ನನ್ನ ತಮ್ಮನನ್ನು ಉಪಚಾರ ಕುರಿತು ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಯೋಗಕ್ಷೆಮದ ಬಗ್ಗೆ ನಿಗಾವಹಿಸಿಕೊಂಡು ಬರಲು ತಡವಾಗಿರುತ್ತದೆ. ಕಾರಣ ನನ್ನ ತಮ್ಮನಿಗೆ ಡಿಕ್ಕಿ ಪಡಿಸಿದ ಕಾರ್ ನಂಬರ ಕೆಎ-41-ಸಿ-7532 ರ ಚಾಲಕನಾದ ಭೀಮರಡ್ಡಿ ತಂದೆ ಶರಣಪ್ಪ ಯಾಳವಾರ ವಯಸ್ಸು, 22 ವರ್ಷ, ಜಾತಿ ಕಬ್ಬಲಿಗ, ಉಃ ಕಾರ ಚಾಲಕ, ಸಾಃ ಬೆನಕನಹಳ್ಳಿ ತಾಃ ಶಹಾಪೂರ ಜಿಃ ಯಾದಗಿರಿ ಇವರ ವಿರುದ್ಧ ಕ್ರಮ ಕೈಕೊಳ್ಳಲು ವಿನಂತಿ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 110/2021 ಕಲಂ 279, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:- 70/2021 ಕಲಂ: 32, 34 ಕೆಇ ಆಕ್ಟ್ : ಇಂದು ದಿನಾಂಕ 24.05.2021 ರಂದು ಬೆಳಿಗ್ಗೆ 11:30 ಗಂಟೆಗೆ ಆರೋಪಿತನು ಅಕ್ರಮವಾಗಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೇ ವಿವಿಧ ನಮೂನೆಯ ಮದ್ಯದ ಪೌಚ್ಗಳನ್ನು ಗುರುಮಠಕಲ್ ಪಟ್ಟಣದ ಶರಣು ಹೊಟೇಲ್ ಹತ್ತಿರ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದು ಆತನ ವಶದಲ್ಲಿದ್ದ ವಿವಿಧ ನಮೂನೆಯ ಮಧ್ಯದ ಬಾಟಲಿಗಳು, ನಗದು ಹಣ ಸೇರಿ ಹೀಗೆ ಒಟ್ಟು 2855=43 ರೂ ಬೆಲೆಯ ಮುದ್ದೆ ಮಾಲನ್ನು ಪಿ.ಎಸ್.ಐ ರವರು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು ಕೈಕೊಂಡು ಮರಳಿ ಠಾಣೆಗೆ ಬಂದು ಆರೋಪಿತನ ವಿರುದ್ಧ ಕಾನೂನು ಕ್ರಮಕ್ಕಾಗಿ ವರದಿ ನೀಡಿದ್ದು ಆ ಬಗ್ಗೆ ಠಾಣಾ ಗುನ್ನೆ ನಂ: 70/2021 ಕಲಂ: 32, 34 ಕೆಇ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ:- 72/2021 ಕಲಂ: 279, 337,338 ಐ.ಪಿ.ಸಿ : ಇಂದು ದಿನಾಂಕ 24.05.2021 ರಂದು 2100 ಗಂಟೆಗೆ ಫಿಯರ್ಾದಿ ಅಜರ್ಿದಾರರಾದ ಯಲ್ಲಪ್ಪ ತಂದೆ ನಿಂಗಣ್ಣ ಬಬಲಾದಿ ವ|| 25 ಜಾ|| ಕುರಬರ ಉ|| ಚಾಲಕ ಸಾ|| ಮಹಲರೋಜಾ ತಾ|| ಶಹಾಪೂರ ಆದ ನಾನು ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನಂದರೆ, ನಮ್ಮ ತಂದೆಯವರಾದ ನಿಂಗಣ್ಣ ತಂದೆ ಸಿದ್ದಪ್ಪ ಬಬಲಾದಿ ವ|| 50 ವರ್ಷ ಇವರು ಪರಸನಳ್ಳಿ ಗ್ರಾಮದ ನಮ್ಮ ಸಂಬಂದಿಕರಲ್ಲಿ ಹಣ ತೆಗೆದುಕೊಂಡಿದ್ದು ಇರುತ್ತದೆ. ಹೀಗಿದ್ದು ದಿನಾಂಕ 09.05.2021 ರಂದು ಬೆಳಿಗ್ಗೆ 11 ಗಂಟೆಗೆ ನಮ್ಮ ತಂದೆಯವರು ನಮ್ಮೂರಿನಿಂದ ಪರಸನಳ್ಳಿಗೆ ಹೋಗಿ ಹಣ ಕೊಟ್ಟು ಬರುತ್ತೇನೆ ಅಂತ ಹೇಳಿ ನಮ್ಮ ಮೋಟರ ಸೈಕಲ ನಂಬರ ಕೆಎ-33 ವಾಯ್-6364 ನೇದ್ದನ್ನು ತೆಗೆದುಕೊಂಡು ನಮ್ಮೂರ ದುರ್ಗಪ್ಪ ತಂದೆ ಮಾನಪ್ಪ ಬಡಿಗೇರ ಇವರನ್ನು ಕರೆದಕೊಂಡು ಹೋಗಿದ್ದು ಇರುತ್ತದೆ. ನಂತರ ಅಂದೇ ದಿನಾಂಕ 09.05.2021 ರಂದು ಸಾಯಂಕಾಲ 05.30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರ ದುರ್ಗಪ್ಪ ಬಡಿಗೇರ ಇವರು ನನಗೆ ಪೋನ ಮಾಡಿ ತಿಳಿಸಿದ್ದೇನೆಂದರೆ ತಾನು ನಮ್ಮ ಮೋಟರ ಸೈಕಲ ನಡೆಸುತ್ತಿದ್ದು ಹಿಂದೆ ನಮ್ಮ ತಂದೆಯವರಾದ ನಿಂಗಣ್ಣ ಇವರು ಕುಳಿತಿದ್ದು ನಾವಿಬ್ಬರೂ ಮರಳಿ ಮಹಲರೋಜಾಕ್ಕೆ ಬರುವ ಕುರಿತು ಪರಸನಳ್ಳಿ ಬಸ್ಸನಿಲ್ದಾಣ ದಾಟಿ ಬ್ರಿಜ್ ಮೇಲೆ ಬರುತ್ತಿದ್ದಾಗ ತಾನು ನಡೆಸುವ ಮೋಟರ ಸೈಕಲ ಸ್ಕಿಡ್ಡಾಗಿ ಬಿದ್ದಿದ್ದು ನಮ್ಮ ತಂದೆಯವರಿಗೆ ಬಹಾಳ ಗಾಯಗಳಾಗಿರುತ್ತವೆ ಅಂತ ತಿಳಿಸಿದಾಗ ಕೂಡಲೇ ನಾನು ಪರಸನಳ್ಳಿ ಹತ್ತಿರ ಬಂದು ನೋಡಲು ನಮ್ಮ ತಂದೆಯವರು ಪರಸನಳ್ಳಿ ಬಸ್ಸನಿಲ್ದಾಣದಲ್ಲಿದ್ದು ವಿಚಾರಿಸಲು ನಾನು ಕುಳಿತು ಹೊರಟ ಮೋಟರ ಸೈಕಲ ನಂಬರ ಕೆಎ-33 ವಾಯ್-6364 ನೇದ್ದರ ಚಾಲಕನಾದ ದುರ್ಗಪ್ಪ ತಂದೆ ಮಾನಪ್ಪ ಬಡಿಗೇರ ಈತನು ನಮ್ಮ ಮೋಟರ ಸೈಕಲನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಬ್ರಿಜ್ ಮೇಲೆ ಒಮ್ಮಲೆ ಬಲಭಾಗಕ್ಕೆ ಕಟ್ ಮಾಡಿದಾಗ ನಮ್ಮ ಮೋಟರ ಸೈಕಲ ಸ್ಕಿಡ್ಡಾಗಿ ಬಿದ್ದು ನಾವಿಬ್ಬರೂ ಮೋಟರ ಸೈಕಲ ಸಮೇತ ಕೆಳಗೆ ಬಿದ್ದಿದ್ದು ನನಗೆ ಸದರಿ ಅಪಘಾತದಲ್ಲಿ ತಲೆಯ ಮೇಲೆ ಭಾರೀ ರಕ್ತಗಾಯವಾಗಿ ಎದೆಗೆ ಭಾರೀ ಒಳಪೆಟ್ಟು ಆಗಿರುತ್ತದೆ. ಆದರೆ ನಮ್ಮ ಮೋಟರ್ ಸೈಕಲ ಚಾಲಕ ದುರ್ಗಪ್ಪ ಬಡಿಗೇರ ಈತನಿಗೆ ಯಾವದೇ ಗಾಯಗಳಾಗಿರುವದಿಲ್ಲ ಅಂತ ನಮ್ಮ ತಂದೆಯವರು ನನಗೆ ತಿಳಿಸಿದ್ದು ಇರುತ್ತದೆ. ನಮ್ಮ ತಂದೆಯವರಿಗೆ ನೋಡಲಾಗಿ ತಲೆಯಿಂದ ರಕ್ತಸ್ರಾವವಾಗುತ್ತಿದ್ದರಿಂದ ಅವರನ್ನು ನಾನು ಹಾಗು ನಮ್ಮ ಸಂಬಂದಿಯವರಾದ ಬಸವರಾಜ ತಂದೆ ಸಾಯಬಣ್ಣ ನಾಯ್ಕೋಡಿ ಸಾ|| ಪರಸನಳ್ಳಿ ಇಬ್ಬರೂ ಕೂಡಿಕೊಂಡು ಹೆಚ್ಚಿನ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಕಲಬುಗರ್ಿಯ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಲ್ಲಿಯವರೆಗೆ ಉಪಚಾರ ಪಡೆಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನಮ್ಮ ತಂದೆಯವರಿಗೆ ಅಪಘಾತಪಡಿಸಿದ ಮೋಟರ್ ಸೈಕಲ ನಂಬರ ಕೆಎ- 33 ವಾಯ್-6364 ನೇದ್ದರ ಚಾಲಕ ದುರ್ಗಪ್ಪ ತಂದೆ ಮಾನಪ್ಪ ಬಡಿಗೇರ ಸಾ|| ಮಹಲರೋಜಾ ಈತನ ಅತೀವೇಗ ಹಾಗು ಅಲಕ್ಷತನದ ಚಾಲನಯೇ ಕಾರಣವಿದ್ದು ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 72/2021 ಕಲಂ 279.337.338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 25-05-2021 10:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080