ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 25-05-2022
ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 59/2022 ಕಲಂ 78(3) ಕೆ.ಪಿ ಎಕ್ಟ್ 1963: ಇಂದು ದಿನಾಂಕ.24/05/2022 ರಂದು 12-00 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜ್ಞಾಪನ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 24/05/2022 ರಂದು 9-15 ಎಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾರೋ ಒಬ್ಬನು ಯಾದಗಿರಿ ನಗರದ ಮೈಲಾಪೂರ ಬೇಸ್ ಕ್ರಾಸ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಹೋಗಿ 10-30 ಎಎಂಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಅವರು ತನ್ನ ಹೆಸರು ಶಿವರಾಜ ತಂದೆ ಅಮೃತ ಹಡಪದ ವಃ 28 ಜಾಃ ಹಡಪದ ಉಃ ವ್ಯಾಪಾರ ಸಾಃಸವಿತಾ ಕಾಲೋನಿ ಯಾದಗಿರಿ ಅಂತಾ ತಿಳಿಸಿದ್ದು ನಂತರ ಆತನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) 650/-ರೂ. ನಗದು ಹಣ 2) ಒಂದು ಮಟಕಾ ಚೀಟಿ ಅಂ.ಕಿ.00-00, 3) ಒಂದು ಬಾಲ ಪೆನ್ ಅಂ.ಕಿ.00-00 ಸಿಕ್ಕಿದ್ದು ಸದರಿ ಮುದ್ದೆಮಾಲನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ.24/05/2022 ರಂದು 10-30 ಎಎಂ ದಿಂದ 11-30 ಎಎಂ ದವರೆಗೆ ಸ್ಥಳದಲ್ಲಿ ಲ್ಯಾಪಟಾಪದಲ್ಲಿ ಗಣಕೀಕರಣ ಮಾಡಿ ಮುಗಿಸಿದ್ದು ನಂತರ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿಪಂಚನಾಮೆಯನ್ನು ಮುಗಿಸಿಕೊಂಡು ಮರಳಿ ಠಾಣೆಗೆ 12-00 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿರವರಿಗೆ ಜ್ಞಾಪನಾ ಪತ್ರದೊಂದಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ.. ಅಂತಾ ಕೊಟ್ಟ ಜ್ಞಾಪನದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.59/2022 ಕಲಂ. 78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಭೀ.ಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 47/2022 ಕಲಂ15(ಎ), 32(3) ಕೆ.ಇ ಎಕ್ಟ್: ಇಂದು ದಿನಾಂಕ:24/05/2022 ರಂದು 11ಎ.ಎಮ್.ಕ್ಕೆ ಆರೋಪಿತನು ದಿಗ್ಗಿ ಗ್ರಾಮದಲ್ಲಿನ ತನ್ನ ದಿನಸಿ ಅಂಗಡಿಯ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿ ಸಮಯದಲ್ಲಿ ಆರೋಪಿತನಿಂದ ಸಿಕ್ಕ ಅಂದಾಜು 526.95/- ರೂ ಕಿಮ್ಮತ್ತಿನ 1.350 ಲೀಟರ್ ಮದ್ಯವನ್ನು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 86/2022 ಕಲಂ 279, 337, 338 ಐ.ಪಿ.ಸಿ: ಇಂದು ದಿನಾಂಕ 24/05/2022 ರಂದು ಮುಂಜಾನೆ 11-15 ಗಂಟೆಗೆ ಫಿಯರ್ಾದಿ ಶ್ರೀಮತಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಿನ್ನೆ ದಿನಾಂಕ 23/05/2022 ರಂದು ತಮ್ಮ ಸಂಬಂಧಿಕರ ಊರಾದ ದೇವದುರ್ಗಕ್ಕೆ ಹೋಗುವ ತನ್ನ ಸೊಸೆ ನಾಜೀಯಾ ಇವಳೊಂದಿಗೆ ಶಹಾಪೂರ ಬಸ್ ನಿಲ್ದಾಣಕ್ಕೆ ಬಂದು ದೇವದುರ್ಗಕ್ಕೆ ಹೊಗುವ ಬಸ್ ನಂ ಕೆಎ-38-ಎಫ್-0384 ರಲ್ಲಿ ಹೋಗುತಿದ್ದಾಗ, ಮಧ್ಯಾಹ್ನ 12-30 ಗಂಟೆಗೆ ದೇವದುರ್ಗ ಕ್ರಾಸ್ನಿಂದ ಅಂದಾಜು 1 ಕಿ.ಮೀ ಅಂತರದಲ್ಲಿ ದೇವದುರ್ಗ ಕಡೆಗೆ ಹೋಗುತಿದ್ದಾಗ ಬಸ್ಸಿನ್ ಮುಂದುಗಡೆ ಹೋಗುತಿದ್ದ ಲಾರಿ ನಂ. ಕೆಎ-04-ಡಿ- 2925 ರ ಹಿಂದೆ ಹಾಕಿ ಓವರಟೆಕ್ ಮಾಡಲು ಹೋದಾಗ, ಬಸ್ ಚಾಲಕನ ನಿರ್ಲಕ್ಷತನದಿಂದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಮಾಡಿ ಏಕಾ-ಏಕಿ ಬ್ರೇಕ್ ಹಾಕಿದ್ದರಿಂದ ಬಸ್ನಲ್ಲಿ ಕುಳಿತಿದ್ದ ಫಿಯರ್ಾದಿಗೆ ಮತ್ತು ಕಂಡಕ್ಟರ್ ಮತ್ತು ಕೆಲವು ಜನ ಪ್ರಯಾಣಿಕರಿಗೆ ಭಾರಿ ಹಾಗೂ ಸಾಧಾ ಪ್ರಮಾಣದ ಗಾಯಗಳಾಗಿರುತ್ತವೆ ಸದರಿ ಅಪಘಾತಕ್ಕೆ ಕೆ.ಕೆ.ಆರ್.ಟಿ.ಸಿ ಬಸ್ ನಂ ಕೆಎ-38-ಎಫ್-0384 ರ ಚಾಲಕ ಶಾಂತಲಿಂಗಪ್ಪ ಸಾಃ ಶಿರವಾಳ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 86/2022 ಕಲಂ 279, 337, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 30/2022 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್: : ಇಂದು ದಿನಾಂಕ 24/05/2022 ರಂದು ಸಾಯಂಕಾಲ ಸಮಯ 6-15 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀ ಬಸವರಾಜ ತಂದೆ ಶಿವಣ್ಣಗೌಡ ಪಾಟೀಲ್ ವಯ;68 ವರ್ಷ, ಜಾ;ಲಿಂಗಾಯತ್, ಉ;ವಕೀಲರು, ಸಾ;ಮುದ್ನಾಳ ಲೇಔಟ್ ಯಾದಗಿರಿ ರವರು ಖುದ್ದಾಗಿ ಠಾಣೆಗೆ ಹಾಜರಾಗಿ ದಿನಾಂಕ 21/04/2022 ರಂದು ರಾತ್ರಿ 7-30 ಪಿ.ಎಂ.ಕ್ಕೆ ಜರುಗಿದ ರಸ್ತೆ ಅಪಘಾತದ ಘಟನೆ ಬಗ್ಗೆ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ದೂರನ್ನು ಹಾಜರುಪಡಿಸಿದ್ದು, ಪಿಯರ್ಾದಿಯ ಅಜರ್ಿ ದೂರಿನ ಸಾರಾಂಶವೇನೆಂದರೆ ನಾನು ಈ ಮೂಲಕ ಲಿಖಿತ ದೂರು ಸಲ್ಲಿಸುವುದೇನೆಂದರೆ ದಿನಾಂಕ 21/05/2022 ರಂದು ಸಾಯಂಕಾಲ 7-30 ಪಿ.ಎಂ.ಕ್ಕೆ ನಾನು ಮತ್ತು ನನ್ನ ಮೊಮ್ಮಗಳಾದ ಧೃತಿ ತಂದೆ ಶರತಶ್ಚಂದ್ರ ಪಾಟೀಲ್ ಇಬ್ಬರು ಸೇರಿಕೊಂಡು ಯಾದಗಿರಿಯ ಆದೀಶ್ವರ್ ಶೋರೂಂ ಮುಂದಿನ ಶಾಸ್ತ್ರಿ ವೃತ್ತ-ಕೋಟರ್ು ಮುಖ್ಯ ರಸ್ತೆಯ ಬದಿಯಲ್ಲಿ ನಡೆದುಕೊಂಡು ಮುದ್ನಾಳ ಲೇಔಟ್ ಕಡೆಗೆ ಹೊರಟಿದ್ದಾಗ ನಾನು ನೋಡು ನೋಡುತ್ತಿದ್ದಂತೆ ಒಬ್ಬ ಮೊಟಾರು ಸೈಕಲ್ ಸವಾರನು ಕೋಟರ್ು ರಸ್ತೆ ಕಡೆಯಿಂದ ಶಾಸ್ತ್ರೀ ವೃತ್ತದ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮಿಬ್ಬರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ. ಸದರಿ ಅಪಘಾತದಲ್ಲಿ ನನಗೆ ಎಡಹುಬ್ಬಿಗೆ ರಕ್ತಗಾಯ, ಬೆನ್ನಿಗೆ, ಸೊಂಟಕ್ಕೆ ಗುಪ್ತಗಾಯವಾಗಿರುತ್ತವೆ. ನನ್ನ ಮೊಮ್ಮಗಳಿಗೆ ನೋಡಲು ಆಕೆಗೆ ಬಾಯಿಗೆ ಭಾರೀ ರಕ್ತಗಾಯವಾಗಿ ಹಲ್ಲುಗಳು ಮುರಿದಿರುತ್ತವೆ ಮತ್ತು ಎಡಗಡೆ ತೊಡೆಗೆ ಭಾರೀ ಗುಪ್ತಗಾಯವಾಗಿದ್ದು, ನಮಗೆ ಅಪಘಾತಪಡಿಸಿದ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದು ಅದರ ನಂಬರ ನೋಡಲಾಗಿ ಕೆಎ-33, 3194 ಅಂತಾ ಕಂಡಿದ್ದು ಅದರ ಸಿರೀಜ್ ಸ್ಪಷ್ಟವಾಗಿ ಕಂಡು ಬಂದಿರುವುದಿಲ್ಲ, ಮೋಟಾರು ಸೈಕಲ್ ಸವಾರನು ಗಡಿಬಿಡಿ ಮಾಡುತ್ತಾ ತನ್ನ ಮೋಟಾರು ಸೈಕಲ್ ಸಮೇತ ಓಡಿ ಹೋಗಿರುತ್ತಾನೆ. ಮೋಟಾರು ಸೈಕಲ್ ಮತ್ತು ಅದರ ಸವಾರನನ್ನು ಮತ್ತೆ ನೋಡಿದರೆ ಗುತರ್ಿಸುತ್ತೇನೆ. ಇದೇ ರಸ್ತೆ ಮಾರ್ಗವಾಗಿ ಹೊರಟಿದ್ದ ನಮಗೆ ಪರಿಚಯ ಇರುವ ಶ್ರೀ ಶರಣಪ್ಪಗೌಡ ತಂದೆ ಶಿವರಾಜಪ್ಪ ಪಾಟೀಲ್ ಸಾ;ಯಾದಗಿರಿ ಮತ್ತು ವಿಶ್ವನಾಥ ತಂದೆ ಗಿರಿಯಪ್ಪ ಅಪ್ಪಣ್ಣನವರ್ ಸಾ;ಯಡ್ಡಳ್ಳಿ ಇವರುಗಳು ಬಂದು ವಿಚಾರಿಸಿರುತ್ತಾರೆ. ಅವರುಗಳು ನನಗೆ ಮತ್ತು ನನ್ನ ಮೊಮ್ಮಗಳಿಗೆ ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಯಾದಗಿರಿಯ ಪ್ಲಾಜಾ ಹಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ಹೀಗಿದ್ದು ದಿನಾಂಕ 21/05/2022 ರಂದು ಪ್ಲಾಜಾ ಹಲ್ಲಿನ ಆಸ್ಪತ್ರೆಗೆ ಸಂಚಾರಿ ಪೊಲಿಸರು ಬಂದು ವಿಚಾರಿಸಿದ್ದು, ನಾವು ನಮಗೆ ಅಪಘಾತ ಪಡಿಸಿದ ಮೊಟಾರು ಸೈಕಲ್ ಮತ್ತು ಅದರ ಸವಾರನ ಪೂರ್ಣ ವಿಳಾಸವನ್ನು ಘಟನಾ ಸ್ಥಳದಲ್ಲಿನ ಅಕ್ಕಪಕ್ಕದವರಿಗೆ ವಿಚಾರಿಸಿ ನಂತರ ಕೇಸು ಕೊಡುವುದಾಗಿ ತಿಳಿಸಿದ್ದು ಇರುತ್ತದೆ ಮತ್ತು ಘಟನೆಯ ನಂತರ ನಾನು 2-3 ದಿವಸಗಳ ಕಾಲ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಕಾರಣ ಪೊಲೀಸ್ ಠಾಣೆಗೆ ಬಂದು ದೂರು ನೀಡುವುದು ಆಗಿರುವುದಿಲ್ಲ ಆದ್ದರಿಂದ ನಮಗೆ ಅಪಘಾತಪಡಿಸಿದ ಮೋಟಾರು ಸೈಕಲ್ ಕೆಎ-33, 3194 ನೇದ್ದರ ಸವಾರ ಮತ್ತು ಅದರ ಚಾಲಕನ ವಿವರ ನಮಗೆ ಇಲ್ಲಿಯವರೆಗೆ ಲಭ್ಯವಾಗದ ಕಾರಣ ಆತನನ್ನು ಪತ್ತೆ ಹಚ್ಚಿ, ಆತನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಬಗ್ಗೆ ಇಂದು ತಡವಾಗಿ ದಿನಾಂಕ 24/05/2022 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಮಾನ್ಯರವರು ಮುಂದಿನ ಕಾನೂನು ಕ್ರಮ ಜರುಗಿಸಿರಿ ಅಂತಾ ಕನ್ನಡದಲ್ಲಿ ಟೈಪ್ ಮಾಡಿದ ಪಿಯರ್ಾದಿಯ ಅಜರ್ಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 30/2022 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 81/2022 ಕಲಂ: 143, 147, 148, 323, 324, 307, 504, 506 ಸಂಗಡ 149 ಐಪಿಸಿ: ಇಂದು ದಿನಾಂಕಃ 24/05/2022 ರಂದು 12:30 ಪಿ.ಎಮ್ ಕ್ಕೆ ಠಾಣೆಯಲ್ಲಿರುವಾಗ ಶ್ರೀ ನಿಂಗಪ್ಪ ತಂ. ಬೀರಪ್ಪ ಕೋಡೆಸೂರು ವಯಸ್ಸು: 60 ವರ್ಷ ಉದ್ಯೋಗ ಒಕ್ಕಲುತನ ಜಾತಿ ಕುರುಬರ್ ಸಾ|| ದೇವತ್ಕಲ್ ತಾ|| ಸುರಪುರ ಜಿ|| ಯಾದಗಿರಿಇವರು ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ದಿನಾಂಕ:23.05.2022 ರಂದು ನಾನು ಬೆಳಿಗ್ಗೆ 9:30 ರ ಸುಮಾರಿಗೆ ನನ್ನ ತೋಟಕ್ಕೆ ಹೊರಟಾಗ ನಮ್ಮ ಊರಿನ ಬಸ್ಸ್ ನಿಲ್ದಾನದ ಹತ್ತಿರ ಕಾಂಗ್ರೆಸ್ ಕಚೇರಿ ಇದ್ದು ಅಲ್ಲಿಗೆ ಹೋಗಿ ಕುಳಿತು ಚಹಾ ಕುಡಿಯಬೇಕೆಂದಾಗ ಸುಖಾ ಸುಮ್ಮನೆ ರಾಜಕೀಯ ವೈಷಮ್ಯದಿಂದ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ನಮ್ಮ ಊರಿನ ನಮ್ಮ ಜನಾಂಗದವರಾದ 1. ಯಲ್ಲಪ್ಪ ತಂ. ಭೀಮಣ್ಣ ಕುರುಕುಂದಿ 2. ಮಲ್ಲಪ್ಪ ತಂದೆ ಭೀಮಣ್ಣ ದಂಡಿನ್ 3. ದೇವರಾಜ ತಂದೆ ಯಲ್ಲಪ್ಪ ಕುರುಕುಂದಿ 4. ನಾಗಪ್ಪ ತಂ. ಭೀಮಣ್ಣ ಕುರುಕುಂದಿ 5. ಮಲ್ಲಪ್ಪ ತಂ. ಭೀಮಣ್ಣ ಕುರುಕುಂದಿ 6. ಕಾಶಿದೇವ ತಂ. ನಾಗಪ್ಪ ಕುರುಕುಂದಿ 7. ದೇವೀಂದ್ರಪ್ಪ ತಂ. ಧರ್ಮಣ್ಣ ರಾಜಾಪುರ 8. ಲಕ್ಷ್ಮಣ ತಂ. ದುರ್ಗಪ್ಪ ಕುರುಕುಂದಿ 9. ವೆಂಕಟೇಶ ತಂ. ಅಪ್ಪಣ್ಣ ಟಣಕೇದಾರ 10. ಶರಣಪ್ಪ ತಂ. ನಿಂಗಪ್ಪ ನಾಯ್ಕೋಡಿ 11. ಹಣಮಂತ್ರಾಯ ತಂ. ಭೀಮಣ್ಣ ನಾಯ್ಕೋಡಿ 12. ಆನಂದ ರಾವ್ ತಂ. ಪರಮಣ್ಣ ನಾಯ್ಕೋಡಿ 13. ಮಲ್ಲಪ್ಪ ತಂ. ಭೀಮಣ್ಣ ಕುರುಕುಂದಿ 14. ಶಿವರಾಜ ತಂ. ಹಣಮಂತ್ರಾಯ ಪೂಜಾರಿ ಸಾ|| ಕವಡಿಮಟ್ಟಿ 15. ಮಾನಪ್ಪ ತಂ. ನಿಂಗಪ್ಪ ಲಾಠಿ ಸಾ|| ಮಂಜಲಾಪುರ 16. ಹೊನ್ನಪ್ಪ ತಂ. ಆಮನಿಂಗಪ್ಪ ಅಬ್ಬಲಿ ಸಾ|| ಮಂಜಲಾಪುರ 17. ಸೋಮಣ್ಣ ತಂ. ಭೊಮಣ್ಣ ಲಾಠಿ ಸಾ|| ಮಂಜಲಾಪುರ ಹಾಗೂ ಇನ್ನಿತರ ಸಂಗಡಿಗರು ಕೂಡಿಕೊಂಡು, ಎಲ್ಲಾ ಜನರು ಅಕ್ರಮ ಕೂಟ ರಚಿಸಿಕೊಂಡು ಕೈ ಯಲ್ಲಿ ಮಚ್ಚು, ರಾಡು, ಬಡಿಗೆ ಹಿಡಿದುಕೊಂಡು ಬಂದವರೆ ಏನಲೇ ಸೂಳೇಮಗನೆ ನಮ್ಮ ವಿರುದ್ಧ ರಾಜಕೀಯ ಮಾಡುತ್ತೀಯಾ ಎಂದು ಅವಾಚ್ಯವಾಗಿ ಬೈಯುತ್ತಾ ಚೀರಾಡುತ್ತಾ ಸೂಳೆಮಗನ ಸಿಕ್ಕಾ ಮೂಗಿಸಿ ಬಿಡಮ್ ಎಂದು ಕೇಕೆ ಹಾಕುತ್ತಾ ನನ್ನ ಅಂಗಿಯನನು ಹರೆದು ಅವರಲ್ಲಿಯ ಯಲ್ಲಪ್ಪ ಇತನು ನನ್ನನ್ನು ಕೊಲೆಮಾಡುವ ಉದ್ದೇಶದಿಂದ ಮಚ್ಚಿನಿಂದ ನನ್ನ ತಲೆಯ ಹಿಂಭಾಗದಿಂದ ಎಡಭಾಗಕ್ಕೆ ಹೊಡೆದಿರುವದರಿಂದ ತಲೆಯ ಹಿಂಭಾಗವು ಬಾತಿದೆ. ಮಲ್ಲಪ್ಪ ದಂಡಿನ್ ಇತನು ರಾಡಿನಿಂದ ಎಡಗೈಯ ಮುಂಗೈಗೆ ಹೊಡೆದನು ಉಳಿದವರೆಲ್ಲರೂ ನನಗೆ ಹಿಗ್ಗಾಮುಗ್ಗಾ ಬಡಿಗೆ ಮತ್ತು ರಾಡುಗಳಿಂದ ಹೊಡೆದು ನೆಲಕ್ಕೆ ಹಾಕಿ ಹೊಡೆದು ಗುಪ್ತಗಾಯ ಮಾಡಿದ್ದಾರೆ. ಆಗ ಅಲ್ಲಿಯೇ ಇದ್ದ ರಾಮಣ್ಣ ತಂ. ಭೀಮಪ್ಪ ತಳವಾರ, ಮಾಣಪ್ಪ ತಂ. ಭೀಮಪ್ಪ ತಳವಾರ, ನಂದಪ್ಪ ತಂ. ಹಣಮಂತ್ರಾಯ ಮೇಟಿ ಸಾ|| ಎಲ್ಲರೂ ದೇವತ್ಕಲ್ ಇವರುಗಳು ನನ್ನ ಮೇಲೆ ನಡೆಸುತ್ತಿರುವ ದಾಳಿಯನ್ನು ತಡೆದು ನನ್ನನ್ನು ಈ ಮೇಲೆ ತೋರಿಸಿದ ಗೂಂಢಾಗಳಿಂದ ಜಗಳವನ್ನು ಆಗ ಅವರು ಇವತ್ತು ಊಳಿದಿ ಸೂಳೆಮಗನೆ ಇನ್ನೋಮ್ಮೆ ನಮ್ಮ ತಂಟೆಗೆ ಬಂದರೆ ಜೀವ ಹೊಡೆಯದೆ ಬೀಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿ ಹೋದರು. ನಂತರ ಗಾಯಗೊಂಡ ನನ್ನನ್ನು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸುರಪುರ ಸಕರ್ಾರಿ ಆಸಪತ್ರೆ ಬಂದು ಸೇರಿಕೆಮಾಡು ಉಪಚಾರ ಪಡಿಸಿ ನಂತರ ವೈದ್ಯರ ಸಲಹೆ ಅಂತೆ ಹೆಚ್ಚಿನ ಉಪಚಾರ ಕುರಿತು ಯಾದಗಿರಿಗೆ ಸ್ಕ್ಯಾನಿಂಗ್ ಮಾಡಲು ಕಳಿಸಿದರು. ಆದ್ದರಿಂದ ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದಿರುತ್ತದೆ. ನನ್ನ ಮೇಲೆ ನಡೆದ ಹಲ್ಲೆಯ ವಿಡಿಯೋ ಚಿತ್ರಕರಣವಿದ್ದು ಅದರ ದಾಖಲೆಯೂ ಈ ಅಜರ್ಿಯೊಂದಿಗೆ ಲಗತ್ತಿಸಲಾಗಿದೆ. ಕಾರಣ ಮೇಲ್ಕಾಣಿಸಿದ ಹದಿನೇಳು(17) ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತೇನೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 82/2022 ಕಲಂ: 143, 147, 148, 323, 324, 307, 504, 506 ಸಂಗಡ 149 ಐಪಿಸಿ: ಇಂದು ದಿನಾಂಕಃ 24/05/2022 ರಂದು 5:30 ಪಿ.ಎಮ್ ಕ್ಕೆ ಠಾಣೆಯಲ್ಲಿರುವಾಗ ಶ್ರೀ ರಾಮಣ್ಣ ತಂದೆ ದೊಡ್ಡಪ್ಪ ಕುರುಕುಂದಿ, ವಯಸ್ಸು, 34 ವರ್ಷ ಜಾ|| ಕುರುಬರ ಉದ್ಯೋಗ|| ಒಕ್ಕಲುತನ ಸಾ|| ದೇವತ್ಕಲ್ ತಾ|| ಸುರಪುರ ಜಿ|| ಯಾದಗಿರಿ ಇವರು ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ದಿನಾಂಕ:23-05-2022 ರಂದು ಬೆಳಿಗ್ಗೆ 8:30 ರ ಸುಮಾರಿಗೆ ನಾನು, ನನ್ನ ಚಿಕ್ಕಪ್ಪನಾದ ಯಲ್ಲಪ್ಪ ಕುರುಕುಂದಿ ರವರ ಮನೆಯಲ್ಲಿ ನಾನು ನನ್ನ ಚಿಕ್ಕಪ್ಪ ಮತ್ತು ಮಲ್ಲಪ್ಪ ತಂದೆ ಭೀಮಣ್ಣ ಕುರುಕುಂದಿ ಕುಳಿತುಕೊಂಡಾಗ ನಮ್ಮೂರಿನ 1) ಭೀಮರಾಯ ತಂದೆ ನಾಗಪ್ಪ ಮೂಲಿಮನಿ, 2) ಲಿಂಗರಾಜ ತಂದೆ ನಾಗಪ್ಪ ಮೂಲಿಮನಿ, 3) ನಿಂಗಣ್ಣ ತಂದೆ ಭೀರಪ್ಪ ಕೊಡೆಸೂರ, 4) ಪ್ರಕಾಶ ತಂದೆ ಬಸವರಾಜ ಕೊಡೆಸೂರ, 5) ಭೀರಪ್ಪ ತಂದೆ ರಾಯಪ್ಪ ಕೊಡೆಸೂರ, 6) ನರಸಪ್ಪ ತಂದೆ ಶಿವಪ್ಪ ಒಡ್ಡೊಡಗಿ, 7) ನಿಂಗಣ್ಣ ತಂದೆ ಮಲ್ಲಪ್ಪ ಪುಕ್ಕನವರ, 8) ದೇವಪ್ಪ ತಂದೆ ನಾಗಪ್ಪ ಮೂಲಿಮನಿ, 9) ಮಲ್ಲಪ್ಪ ತಂದೆ ಮಲ್ಲಪ್ಪ ಕುರುಕುಂದಿ, 10) ರಾಯಪ್ಪ ತಂದೆ ಮಲ್ಲಣ್ಣ ಕೊಡೆಸೂರ, 11) ನಾಗರಾಜ ತಂದೆ ತಿಪ್ಪಣ್ಣ ಬಾಯಿಹೊಲ, 12) ಬಸಣ್ಣ ತಂದೆ ನಾಗಪ್ಪ ಬಜಿ, 13) ದೇವಪ್ಪ ತಂದೆ ನಾಗಪ್ಪ ಬಜಿ, 14) ಅನೀಲ್ ತಂದೆ ನರಸಪ್ಪ ಒಡ್ಡೊಡಗಿ, 15) ತಿರುಪತಿ ತಂದೆ ಮಲ್ಲಿಕಾಜರ್ುನ್ ಟಣಕೇದಾರ, 16) ಮಾಳಪ್ಪ ತಂದೆ ಭೀಮಣ್ಣ ಮೂಲಿಮನಿ, 17) ಸಿದ್ದಪ್ಪ ತಂದೆ ನಾಗಪ್ಪ ಮೂಲಿಮನಿ ಇವರೆಲ್ಲರೂ ಕುಡಿಕೊಂಡು ನಮ್ಮ ಚಿಕ್ಕಪ್ಪನವರಾದ ಶ್ರೀ ಯಲ್ಲಪ್ಪ ತಂದೆ ಭೀಮಣ್ಣ ಕುರುಕುಂದಿ ರವರನ್ನು ಕೊಲೆ ಮಾಡುವ ಉದ್ದೇಶವಿಟ್ಟುಕೊಂಡು ಅಕ್ರಮ ಕೂಟ ರಚಿಸಿಕೊಂಡು ಮಾತುಕತೆ ನಡೆಸಿ ಕೊಲೆ ಮಾಡಲು ಬೇಕಾಗುವ ಕೊಡಲಿ, ರಾಡು, ಚಾಕು, ಬಡಿಗೆ ಇತ್ಯಾದಿ ಮಾರಾಕಾಸ್ತ್ರಗಳನ್ನು ಕೈಯಲ್ಲಿಡಿದುಕೊಮಡು ನಮ್ಮ ಚಿಕ್ಕಪ್ಪನ ಮನೆಗೆ ಬಂದು ''ಎಲೇ ಸೂಳೆ ಮಗನ್ಯಾ ಯಲ್ಯಾ, ಇಂದು ನಿನ್ನ ಆಯುಷ್ಯ ಮುಗಿತು ಬೋಸಡಿ ಮಗನ್ಯಾ, ಎಷ್ಟು ಉರಿತಲೆ ರಾಜಕೀಯದಾಗ ಎಂದು ಕೂಗಾಡಲು ಅಲ್ಲಿ ಕೂತಿದ್ದ ನಾನು ನನ್ನ ಚಿಕ್ಕಪ್ಪನಿಗೆ ಏಕೇ ಬೈಯುತ್ತಿದ್ದಿರಿ ಎಮದು ಕೇಳಲು ಭೀಮರಾಯ ತಂದೆ ನಾಗಪ್ಪ ಮೂಲಿಮನಿ ಈತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ಚಿಕ್ಕಪ್ಪ ಕುತ್ತಿಗೆಗೆ ಜೋರಾಗಿ ಬಿಸಿದನು, ಆಗ ನನ್ನ ಚಿಕ್ಕಪ್ಪನು ಲಬಕ್ಕೆ ಕುಳಿತಾಗ ಕೊಡಲಿ ಏಟು ಅಲ್ಲಿಂದ ಜಾರಿ ಟೇಬಲನ ಮೇಲೆ ಬಿದ್ದಿತು. ಆಗ ನಾನು ಮತ್ತು ಮಲ್ಲಪ್ಪ ತಂದೆ ಭೀಮಣ್ಣ ಕುರುಕುಂದಿ ಜಗಳ ಬಿಡಿಸಲು ಹೋದಾಗ ಲಿಂಗರಾಜ ತಂದೆ ನಾಗಪ್ಪ ಮೂಲಿಮನಿ ತನ್ನ ಕೈಯಲ್ಲಿದ್ದ ಚಾಕುವಿನಿಂದ ನನ್ನ ಚಿಕ್ಕಪ್ಪನಿಗೆ ತಿವಿಯಲು ಹೋದಾಗ ನಾನು ಅವನನ್ನು ಜೋರಾಗಿ ತಳ್ಳಿದ್ದರಿಂದ ಅವನ ಏಟು ಕೈತಪ್ಪಿ ಕುಚರ್ಿಗೆ ಬಿದ್ದಿತು. ಇದೇ ಸಂದರ್ಭದಲ್ಲಿ ನಿಂಗಣ್ಣ ತಂದೆ ಭೀರಪ್ಪ ಕೊಡೆಸೂರ ಇವನು ದೊಡ್ಡದಾದ ಬಡಿಗೆಯಿಮದ ನನ್ನ ಬೆನ್ನಿಗೆ ಹೊಡೆದನು. ಮತ್ತು ಭೀರಪ್ಪ ತಂದೆ ರಾಯಪ್ಪ ಈತನು ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ಹೊಟ್ಟೆಯ ಭಾಗಕ್ಕೆ ಹೊಡೆದನು ಮತ್ತು ನಿಂಗಣ್ಣ ತಂದೆ ಮಲ್ಲಪ್ಪ ಪುಕ್ಕನವರ ಈತನು ತನ್ನ ಕೈಯಲ್ಲಿದ್ದ ಕೊಡಲಿಯ ಕಾವಿನಿಂದ (ಬಡಿಗೆ) ಮಲ್ಲಪ್ಪ ಕುರುಕುಂದಿಯವರಿಗೆ ಹೊಡೆದನು. ಆಗ ನಾನು ಭಯದಿಂದ ಚಿರಾಡಲು ದೇವಪ್ಪ ತಂದೆ ನಾಗಪ್ಪ ಮೂಲಿಮನಿ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಮೊಳಕಾಲಿನ ಕೆಳಗೆ ಹೊಡೆದನು. ನರಸಪ್ಪ ತಂದೆ ಶಿವಪ್ಪ ಒಡ್ಡೋಡಗಿ ಈತನು ತನ್ನ ಕಯಯಲ್ಲಿದ್ದ ಬಡಿಗೆಯಿಮದ ಮಲ್ಲಪ್ಪ ಕುರುಕುಂದಿ ರವರ ಮೊಳಕಾಲಿನ ಕೆಳಗಡೆ ಹೊಡೆದನು. ಉಳಿದವರು ''ಬಿಡಬೇಡಿ ಈ ಮೂವರನ್ನು ಖಲಾಸ ಮಾಡ್ರಿ ಈ ಸೂಳೇ ಮಕ್ಕಳನ್ನು ಎನ್ನುತ್ತಾ ತಮ್ಮ ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದರು. ಆಗ ಭಯದಿಂದ ನಾವೆಲ್ಲರೂ ಚೀರಾಡಲು ನಮ್ಮೂರಿನ ದೇವಪ್ಪ ತಂದೆ ಬಸಪ್ಪ ತಳವಾರ ಮತ್ತು ಮಾಳಪ್ಪ ತಂದೆ ಭೀರಪ್ಪ ಬಬಲಾದಿ ಇವರು ಬಂದು ಜಗಳ ಬಿಡಿಸಿಕೊಂಡು ಹೋಗುವಾಗ ಅವರು ಲೇ ಉಳುಕೊಂಡಿ ಲೇ ಯಲ್ಯಾ. ನಿನ್ನ ಜೀವ ನಮ್ಮ ಕೈಯಲ್ಲಿದೆ. ಮುಂದೆ ನೀನು ರಾಜಕಿ ಮಾಡುವಿಯಂತೆ ನೋಡ್ತಿವಿ ನಾವು ಎನ್ನುತ್ತಾ ತಮ್ಮ ಕೈಯಲ್ಲಿದ್ದ ಕೊಡಲಿ, ರಾಡು, ಚಾಕು, ಬಡಿಗೆ ಇತ್ಯಾದಿ ಮಾರಾಕಾಸ್ತ್ರಗಳನ್ನು ತೆಗೆದುಕೊಂಡು ಹೋದರು. ಆಗ ನಾವು ಅಂಜಿಕೊಂಡು, ಭಯಪಟ್ಟು ನಮ್ಮ ಚಿಕ್ಕಪ್ಪನನ್ನು ಮನೆಯಲ್ಲಿಯೇ ಕೂಡಿ ಹಾಕಿ ಬೀಗ ಹಾಕಿದೇವು. ನಾನು ಮತ್ತು ಮಲ್ಲಪ್ಪ ಕುರುಕುಂದಿಯವರು ಸುರಪುರ ಸಾರ್ವಜನಿಕ ಆಸ್ಪತ್ರೆಗೆ ಬಂದೇವು. ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಯದಗಿರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದು ಇರುತ್ತದೆ. ಅಲ್ಲಿಂದ ಚಿಕಿತ್ಸೆ ಪಡೆದು ಬಂದು ಈ ದೂರು ಅಜರ್ಿ ಸಲ್ಲಿಸುತ್ತಿರುವೇವು. ಆದ ಕಾರಣ ದೂರು ಅಜರ್ಿ ಸಲ್ಲಿಸಲು ವಿಳಂಭವಾಗಿರುತ್ತದೆ. ಆದ್ದರಿಂದ ದಯಾಳುಗಳಾದ ತಾವುಗಳು ನಮಗೆ ಅವಚ್ಯ ಶಬ್ದಗಳಿಂದ ಬೈದು, ಮಾರಣಾಂತಿಕವಾಗಿ ಹಲ್ಲೆ ಮಾಡಿ, ಕೊಲೆ ಮಾಡಲು ಪ್ರಯತ್ನಿಸಿ, ಪ್ರಾಣ ಬೆದರಿಕೆ ಹಾಕಿದ ಮೇಲ್ಕಂಡ 17 ಜನರ ಮೇಲೆ ಸೂಕ್ತ ಕಾನೂನು ಕ್ರಮ ಕಯಗೊಂಡು ನಮಗೆ ನ್ಯಾಯ ಮತ್ತು ರಕ್ಷಣೆ ಒದಗಿಸಬೇಕೆಂದು ಮಾನ್ಯರವರಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ಒಂದು ವೇಳೆ ಈ ನನ್ನ ದೂರಿಗೆ ಸರಿಯಾಗಿ ಸ್ಪಂದಿಸದಿದ್ದರೆ ನನ್ನ ಹಾಗೂ ನನ್ನ ಚಿಕ್ಕಪ್ಪನಿಗೆ ಇವರಿಂದ ಪ್ರಾಣ ಹಾನಿ ಉಂಟಾಗುವ ಸಂಭವ ಹೆಚ್ಚಿರುತ್ತದೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
ಕೊಡೆಕಲ್ಲ ಪೊಲೀಸ್ ಠಾಣೆ:-
ಗುನ್ನೆ ನಂ: 41/2022 ಕಲಂ: 354, 323, 504, 506 ಐಪಿಸಿ: ಇಂದು ದಿನಾಂಕ:24.05.2022 ರಂದು 2:00 ಪಿಎಮ್ಕ್ಕೆ ಪಿಯರ್ಾದಿ ಶ್ರೀಮತಿ ಅಂಜುಳಾ ಗಂಡ ಆದಪ್ಪ ದಂಡಾಗೋಳ ವ:23 ವರ್ಷ ಜಾ:ಹಿಂದೂ ಬೇಡರ ಉ:ಕೂಲಿಕೆಲಸ ಸಾ:ಕೊಡೆಕಲ್ಲ ತಾ:ಹುಣಸಗಿ ಜಿ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ನನ್ನ ತವರೂರು ಬರದೇವನಾಳ ಗ್ರಾಮ ಇದ್ದು, ನನಗೆ ಸುಮಾರು 8 ವರ್ಷಗಳ ಹಿಂದೆ ಕೊಡೆಕಲ್ಲ ಗ್ರಾಮದ ಆದಪ್ಪ ತಂದೆ ಮೇಲಪ್ಪ ದಂಡಾಗೋಳ ಇವರೊಂದಿಗೆ ಮದುವೆಮಾಡಿಕೊಟ್ಟಿದ್ದು, ಸದ್ಯ ನಾನು ಕೊಡೆಕಲ್ಲದಲ್ಲಿ ಗಂಡ, ಮಕ್ಕಳೊಂದಿಗೆ ಕೂಲಿಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನನಗೆ ದೀಪಾ, ರವಿ, ಪ್ರಿಯಾಂಕ ಅಂತಾ ಮೂರು ಜನ ಮಕ್ಕಳು ಇದ್ದು, ನನ್ನ ಗಂಡನು ಕೂಲಿ ಕೆಲಸಮಾಡಿಕೊಂಡಿರುತ್ತಾನೆ. ನನ್ನ ಗಂಡನ ಅಣ್ಣನಾದ ಬಸವರಾಜ ತಂದೆ ಮೇಲಪ್ಪ ಈತನು ನಮ್ಮ ಮನೆಯ ನಡುವೆ ಗೋಡೆ ಕಟ್ಟುವ ವಿಚಾರವಾಗಿ ನಮ್ಮೊಂದಿಗೆ ಆಗಾಗ ಬಾಯಿ ಮಾತಿನ ಜಗಳ ಮಾಡುತ್ತಾ ಬಂದಿರುತ್ತಾನೆ. ನಮ್ಮ ಭಾವನಾಗಬೇಕಾಗಿದ್ದರಿಂದ ನಾವು ಇಲ್ಲಿಯವರೆಗೆ ಯಾವುದೇ ಕೇಸು ಕಚೇರಿ ಅಂತಾ ಕೇಸು ಮಾಡಿರುವುದಿಲ್ಲಾ.
ಹೀಗಿದ್ದು ನಿನ್ನೆ ದಿನಾಂಕ:23.05.2022 ರಂದು ನಮ್ಮೂರಲ್ಲಿ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರೆ ನಡೆಯುತ್ತಿದ್ದು, ಸದರಿ ಜಾತ್ರೆ ಆದ ನಂತರ ಒಂದು ವರ್ಷಗಳ ಅವಧಿಯ ವರೆಗೆ ಯಾವುದೇ ಕಟ್ಟಡ ಮಾಡಲು ಬರುವುದಿಲ್ಲ ಅಂತಾ ಹಿರಿಯರು ತಿಳಿಸಿದ್ದರಿಂದ, ನಮ್ಮ ಮನೆಯ ಪಡಸಾಲೆಯಲ್ಲಿ ನನ್ನ ಗಂಡನ ಹಾಗೂ ನನ್ನ ಗಂಡನ ಅಣ್ಣ ಬಸವರಾಜ ಇವರಿಬ್ಬರ ಮನೆಗಳ ನಡುವೆ ಇರುವ ಮನೆಯ ಪಡಸಾಲೆಯಲ್ಲಿ ಗೋಡೆ ಕಟ್ಟುವ ನಿಮಿತ್ಯ ನನ್ನ ಗಂಡನು ಪೂಜೆಯನ್ನು ಮಾಡಿದ್ದು ಇರುತ್ತದೆ. ನಂತರ ಗ್ರಾಮದೇವತೆ ಜಾತ್ರೆಗೆ ರಾತ್ರಿ 10:00 ಗಂಟೆಯ ಸುಮಾರಿಗೆ ನಾನು, ನನ್ನ ಗಂಡ & ಮಕ್ಕಳೊಂದಿಗೆ ಗ್ರಾಮದೇವತೆ ಜಾತ್ರೆಗೆ ಹೋಗಿ ಜಾತ್ರೆಯನ್ನು ಮುಗಿಸಿಕೊಂಡು ಇಂದು ದಿನಾಂಕ:24.05.2022 ರಂದು ಮುಂಜಾನೆ 07:00 ಗಂಟೆಯ ಸುಮಾರಿಗೆ ಮರಳಿ ನಮ್ಮ ಮನೆಗೆ ಬಂದಾಗ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ನಿಂತಿದ್ದ ನನ್ನ ಗಂಡನ ಅಣ್ಣನಾದ ಬಸವರಾಜ ತಂದೆ ಮೇಲಪ್ಪ ದಂಡಾಗೋಳ ವ:32 ವರ್ಷ ಉ:ಕೂಲಿಕೆಲಸ ಈತನು ನನ್ನ ಗಂಡನಿಗೆ ಲೇ ಬೋಸುಡೀ ಮಗನೇ ಆದ್ಯಾ ನಮ್ಮ ಇಬ್ಬರ ನಡುವೆ ಇರುವ ಮನೆಯ ಮುಂದಿನ ಪಡೆಸಾಲೆಯಲ್ಲಿ ಗೋಡೆ ಕಟ್ಟಲು ಪೂಜೆ ಏಕೆ ಮಾಡಿದ್ದೀಯಾ ಅದರಲ್ಲಿ ಏನೂ ಕಟ್ಟಲು ಬಿಡುವುದಿಲ್ಲಾ ಅಂತಾ ಅಂದವನೇ ಕಟ್ಟೆಯ ಮೇಲೆ ನಿಂತ ನನ್ನ ಗಂಡನನ್ನು ಕೆಳಕ್ಕೆ ಕೆಡವಿ ಹೆಡಕಿನ ಮೇಲೆ ಕಾಲು ಇಟ್ಟು ಕೈಯಿಂದ ಡುಬ್ಬದ ಮೇಲೆ ಹಾಗೂ ಬಲಗೈ ಮೊಣಕೈ ಮೇಲೆ ಹೊಡೆದು ಗುಪ್ತಗಾಯಪಡಿಸಿದ್ದು ಮತ್ತು ಕಾಲಿನಿಂದ ಸೊಂಟದಮೇಲೆ, ಮೊಣಕಾಲಿನ ಮೇಲೆ ಒದ್ದು ತೆರಚಿದ ಗಾಯಪಡಿಸಿದ್ದು, ಆಗ ನನ್ನ ಗಂಡ ಆದಪ್ಪ ಈತನು ನನಗೆ ಉಳಿಸರಪ್ಪೋ ಅಂತಾ ಚೀರಾಡುತ್ತಿದ್ದಾಗ ನಾನು ನನ್ನ ಗಂಡನನ್ನು ನೋಡಿ ಬಿಡಿಸಿಕೊಳ್ಳಲು ಹೋದಾಗ ನನ್ನ ಗಂಡನ ಅಣ್ಣ ಬಸವರಾಜ ಈತನು ನನಗೆ ಲೇ ಸೂಳಿ, ರಂಡೀ, ಬೋಸೂಡಿ ನಿಂದೂ ಬಾಳ ಆಗಿದೆ ಅಂತಾ ಅಂದವನೇ ಕೈಯಿಂದ ನನ್ನ ಡುಬ್ಬದ ಮೇಲೆ ಹೊಡೆದು ಒಳಪೆಟ್ಟುಮಾಡಿದ್ದು, ನನ್ನ ತಲೆ ಕೂದಲನ್ನು ಹಿಡಿದು ನೆಲಕ್ಕೆ ಕೆಡವಿಹಾಕಿ ಸೀರೆ ಸೆರಗನ್ನು ಹಿಡಿದು ಎಳೆದಾಡಿ ಮಾನಭಂಗಪಡಿಸಲು ಪ್ರಯತ್ನಿಸಿದ್ದು ಆಗ ಜಗಳವನ್ನು ಕೇಳಿ ನಮ್ಮ ಮನೆಯ ಪಕ್ಕದ ಮನೆಯ ನಮ್ಮ ಸಂಬಂಧಿಗಳಾದ 1) ಭೀಮಣ್ಣ ತಂದೆ ಲವಕೆಪ್ಪ ದಂಡಾಗೋಳ, 2)ಮುದಕಪ್ಪ ತಂದೆ ಲವಕೆಪ್ಪ ದಂಡಾಗೋಳ, 3)ನೀಲಮ್ಮ ಗಂಡ ಮುದಕಪ್ಪ ದಂಡಾಗೋಳ, 4)ಶಂಕ್ರಮ್ಮ ಗಂಡ ಬಸಪ್ಪ ಬಿಲ್ಲರ ಹಾಗೂ ಅದೇ ವೇಳೆಗೆ ನಮ್ಮ ಮನೆಯ ಮುಂದೆ ಸಿಸಿ ರಸ್ತೆಯ ಮೇಲೆ ಹೊರಟಿದ್ದ 5) ದೂಳಪ್ಪ ತಂದೆ ಬಸಪ್ಪ ಗೆದ್ದಲಮರಿ, 6) ಮಾಳಪ್ಪ ತಂದೆ ದೂಳಪ್ಪ ಹುಲ್ಲಿಕೇರಿ ಇವರೆಲ್ಲರೂ ಬಂದು ನೋಡಿ ಅವನ ಕೈಯಿಂದ ನಮ್ಮನ್ನು ಬಿಡಿಸಿಕೊಂಡಿದ್ದು, ಅವನು ನಮಗೆ ಸೂಳೇ ಮಕ್ಕಳೇ ಇವತ್ತು ನನ್ನ ಕೈಯಲ್ಲಿ ಉಳಿದುಕೊಂಡಿರೀ ಇನ್ನೊಂದು ಸಲ ಸಿಕ್ಕಾಗ ನಿಮಗೆ ಜೀವಂತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು, ನಂತರ ನಾವು ನಮ್ಮ ಮನೆಯಲ್ಲಿ ವಿಚಾರಮಾಡಿ ಠಾಣೆಗೆ ಬಂದು ದೂರು ಕೊಡುತ್ತಿದ್ದು, ಈ ಘಟನೆಯಲ್ಲಿ ನನಗೆ ಮತ್ತು ನನ್ನ ಗಂಡ ಆದಪ್ಪ ರವರಿಗೆ ಮೈ, ಕೈಗಳಿಗೆ ಒಳಪೆಟ್ಟಾಗಿದ್ದು, ತೆರಚಿದ ಗಾಯಗಳಾಗಿದ್ದು ನಮ್ಮನ್ನು ಉಪಚಾರಕ್ಕಾಗಿ ಆಸ್ಪತ್ರೆಗೆ ಕಳುಹಿಸಬೇಕು. ನಮಗೆ ಅವಾಚ್ಛ ಶಬ್ಧಗಳಿಂದ ಬೈದು, ಹೊಡೆ ಬಡೆ ಮಾಡಿ, ಮಾನಭಂಗ ಪಡಿಸಲು ಪ್ರಯತ್ನಿಸಿ, ಜೀವದ ಬೆದರಿಕೆ ಹಾಕಿದ ಬಸವರಾಜ ತಂದೆ ಮೇಲಪ್ಪ ದಂಡಾಗೋಳ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಪಿಯರ್ಾದಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:41/2022 ಕಲಂ:354, 323, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.
ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 74/2022, ಕಲಂ, 323,326, 504.506. ಸಂ.34 ಐ ಪಿ ಸಿ: ದಿನಾಂಕ: 24-05-2022 ರಂದು ಮದ್ಯಾಹ್ನ 02-00 ಗಂಟೆಗೆ ಜನಾರ್ಧನರೆಡ್ಡಿ ಹೆಚ್.ಸಿ-193 ರವರು ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಪಡೆದುಕೊಂಡ ಬಂದ ದೂರು ಹಾಜರುಪಡಿಸಿದ ಸಾರಂಶವೆನೆಂದರೆ ದಿನಾಂಕ: 23-05-2022 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಪಿಯರ್ಾಧಿದಾರನು ಮನೆಯಲ್ಲಿರುವಾಗ ಆರೋಪಿತರು ಆತನಿಗೆ ಮನೆಯಿಂದ ಹಾಜಿರ್ ಮುಕನವರ ಹೊಲಕ್ಕೆ ಕರೆದುಕೊಂಡು ಹೋಗಿ ಅಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಪಿಯರ್ಾಧಿದಾರನಿಗೆ ಲೇ ಸೂಳೆ ಮಗನೆ ನಮ್ಮ ತಂಗಿ ಸಂಗಡ ಯಾಕೆ ಮಾತಾಡುತಿ ರಂಡಿ ಮಗನೆ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ಭಾರಿ ರಕ್ತಗಾಯ ಮಾಡಿ ಕೈಇಂದ ಹೊಡೆದು ಲೆ ಸೂಳೆ ಮಗನೆ ಇನ್ನೊಂದು ಸಲ ನಮ್ಮ ತಂಗಿಯ ಜೋತೆ ಮಾತಡಿದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 87/2022. ಕಲಂ. 279. 337. 338. ಐ.ಪಿ.ಸಿ. ಇಂದು ದಿನಾಂಕ: 24/05/2022 ರಂದು 18-00 ಗಂಟೆಗೆ ಪಿಯರ್ಾದಿ ಶ್ರೀ ಬಾಷಾ ತಂದೆ ಖಾಜಾಸಾಬ ಕಂಬಾರ ವ|| 50 ಜಾ|| ಮುಸ್ಲಿಂ ಉ|| ಕೂಲಿ ಸಾ|| ಕರಣಿಗಿ ತಾ|| ಶಹಾಪೂರ -9535984543 ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶವೆನೆಂದರೆ. ದಿನಾಂಕ 22/05/2022 ರಂದು ಶಹಾಪೂರದಲ್ಲಿ ಕೆಲಸವಿದ್ದ ಪ್ರಯುಕ್ತವಾಗಿ ನಾನು ಮತ್ತು ನನ್ನ ಹೆಂಡತಿಯಾದ ಬೆಗಂ ಗಂಡ ಬಾಷಾ ಕಂಬಾರ, ಮತ್ತು ನಮ್ಮೂರ ದೇವಿಂದ್ರಮ್ಮ ಗಂಡ ಶರಣಪ್ಪ ದೊಡ್ಡಮನಿ, ಎಲ್ಲರು ಕೂಡಿ ಶಹಾಪೂರಕ್ಕೆ ಮದ್ಯಾಹ್ನ ಬಂದು ಶಹಾಪೂರದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಿಗೆ ನಾನು ಮತ್ತು ನನ್ನ ಹೆಂಡತಿ ಬೆಗಂ ನಮ್ಮೂರ ದೇವಿಂದ್ರಮ್ಮ ಎಲ್ಲರು ಕೂಡಿಕೊಂಡು ಶಹಾಪೂರ ನಗರದ ಸುರಪೂರ-ಕಲಬುರಿಗಿ ಮುಖ್ಯ ರಸ್ತೆಯ ಮೇಲೆ ದರ್ಶನಾಪೂರ ಆಸ್ಪತ್ರೆಯ ಮುಂದೆ ಸರಕಾರಿ ಪದವಿ ಪೂರ್ವ ಕಾಲೇಜ ಕಡೆಯಿಂದ ದರ್ಶನಾಪೂರ ಆಸ್ಪತ್ರೆಯ ಕಡೆಗೆ ರಸ್ತೆ ದಾಟಿ ಹೋಗುತ್ತಿರುವಾಗ ಹಳೆ ಬಸ್ ನಿಲ್ದಾಣದ ಕಡೆಯಿಂದ ಸಾಯಂಕಾಲ 7-00 ಗಂಟೆಯ ಸುಮಾರಿಗ ಒಂದು ಮೋಟರ್ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಹೆಂಡತಿ ಬೆಗಂಳಿಗೆ ಮತ್ತು ದೇವಿಂದ್ರಮ್ಮಳಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿದ್ದು ಇರುತ್ತದೆ. ಸದರಿ ಸದರಿ ಅಪಘಾತದಲ್ಲಿ ನನ್ನ ಹೆಂಡತಿ ಬೆಗಂಳಿಗೆ ಬಲಗಡೆ ತಲೆಗೆ ಭಾರಿ ರಕ್ತಗಾಯವಾಗಿ ಬಲಗಡೆ ಕಿವಿಯಿಂದ ರಕ್ತ ಬಂದಿರುತ್ತದೆ. ದೇವಿಂದ್ರಮ್ಮ ಗಂಡ ಶರಣಪ್ಪ ದೊಡ್ಡಮನಿ, ಇವಳಿಗೆ ನೋಡಲಾಗಿ ಬಲಗಾಲ ಮೊಳಕಾಲಿಗೆ ಗುಪ್ತಗಾಯವಾಗಿರುತ್ತದೆ. ಸದರಿ ಅಪಘಾತವನ್ನು ನೋಡಿ ಅಲ್ಲೆ ಹೋರಟಿದ್ದ ನಮ್ಮೂರ ಸೋಪಣ್ಣ ತಂದೆ ಚಂದಪ್ಪ ದೊಡ್ಡಮನಿ, ಮಲ್ಲಿಕಾಜರ್ುನ್ ತಂದೆ ಚಂದ್ರಾಯ ಕೊರಬಾರ ಇವರು ಬಂದು ನಮಗೆ ನೊಡಿ ವಿಚಾರಿಸಿದ್ದು ಇರುತ್ತದೆ. ಸದರಿ ಅಪಘಾತಮಾಡಿದ ಮೋಟರ್ ಸೈಕಲ್ ನೋಡಲಾಗಿ ಅದರ ನಂ ಕೆಎ-33 ಎಕ್ಸ್-4854 ನೇದು ಇದ್ದು ಅದರ ಚಾಲಕನಿಗೆ ಹೆಸರು ವಿಚಾರಿಸಲಾಗಿ ತನ್ನ ಹೆಸರು ನಾಗರಾಜ ತಂದೆ ಭೀಮರಾಯ ಜೇವಗರ್ಿಕರ್ ಸಾ|| ಮಡಿವಾಳೇಶ್ವರ ನಗರ ಶಹಾಪುರ. ಅಂತ ತಿಳಿಸಿದನು. ಸದರಿಯವನಿಗೆ ಎಡಗಡೆ ಕಣ್ಣಿಗೆ ಗುಪ್ತಗಾಯವಾಗಿದ್ದು ಎಡಗಡೆ ಎದೆಗೆ ಗುಪ್ತಗಾಯ ಎಡಗಾಲ ತೋಡಿಗೆ ಗುಪ್ತಗಾಯವಾಗಿರುತ್ತದೆ. ಆಗ ನಾನು ಮತ್ತು ಸೋಪಣ್ಣ, ಮಲ್ಲಿಕಾಜರ್ುನ್ ಎಲ್ಲರು ಕೂಡಿ ನನ್ನ ಹೆಂಡತಿ ಬೆಗಂಳಿಗೆ ಮತ್ತು ದೇವಿಂದ್ರಮ್ಮಳಿಗೆ ಉಪಚಾರ ಕುರಿತು ಅಲ್ಲೆ ಹೋರಟಿದ್ದ ಒಂದು ಆಟೋ ನಿಲ್ಲೀಸಿ ಅದರಲ್ಲಿ ಕರೆದುಕೊಂಡು ಬಂದು ಶಹಾಪೂರದ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ನನ್ನ ಹೆಂಡತಿ ಬೆಗಂಳಿಗೆ ಉಪಚಾರ ಮಾಡಿದ ವೈಧ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾನು ಮತ್ತು ಮಲ್ಲಿಕಾಜರ್ುನ ಇಬ್ಬರು ಕೂಡಿ ಬೆಗಂಳಿಗೆ ಒಂದು ಅಂಬುಲೇನ್ಸದಲ್ಲಿ ಕರೆದುಕೊಂಡು ಹೋಗಿ ಕಲಬುರಗಿಯ ಕ್ಯೂಪಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದರಿಂದ ಉಪಚಾರ ಪರೆಯುತ್ತಿದ್ದು ಇರುತ್ತದೆ. ನನ್ನ ಹೆಂಡತಿ ಬೆಗಂಳಿಗೆ ಉಪಚಾರ ಮಾಡಿಸುವುದು ಅವಶ್ಯಕವಾಗಿದ್ದರಿಂದ ಉಪಚಾರಮಾಡಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರುನಿಡಿದ್ದು ಇರುತ್ತದೆ. ಸದರಿ ಅಪಘಾತವು ಶಹಾಪುರ ನಗರದ ದಶನಾಪೂರ ಆಸ್ಪತ್ರೆಯ ಮುಂದೆ ಸಾಯಂಕಾಲ 7-00 ಗಂಟೆಯ ಸುಮಾರಿಗ ಜರುಗಿರುತ್ತದೆ.
. ಕಾರಣ ನನ್ನ ಹೆಂಡತಿ ಬೆಗಂಳಿಗೆ ಮತ್ತು ನಮ್ಮೂರ ದೇವಿಂದ್ರಮ್ಮಳಿಗೆ ಅಪಘಾತಮಾಡಿದ ಮೋಟರ್ ಸೈಕಲ್ ನಂ ಕೆಎ-33 ಎಕ್ಸ್-4854 ನೇದ್ದರ ಚಾಲಕನಾದ ನಾಗರಾಜ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 87/2022 ಕಲಂ: 279, 337, 338, ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 84/2022 ಕಲಂ: 32, 34 ಕೆಇ ಆಕ್ಟ್: ಇಂದು ದಿನಾಂಕ 24.05.2022 ರಂದು ಸಂಜೆ 5.30 ಗಂಟೆಗೆ ಆರೋಪಿತನು ಅಕ್ರಮವಾಗಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಪೌಚ್ಗಳನ್ನು ಚಿನ್ನಕಾರ ಗ್ರಾಮದ ಆರೋಪಿತನ ಅಂಗಡಿಯ ಮುಂದೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ತನ್ನ ವಶದಲ್ಲಿದ್ದ ಒಟ್ಟು 3,372.48=00 ರೂ ಬೆಲೆಯ ಮುದ್ದೆ ಮಾಲನ್ನು ಮತ್ತು ಆರೋಪಿತನಿಂದ ನಗದು ಹಣ 350/- ರೂ ಒಟ್ಟು 3,724.48 ಕಿಮ್ಮತ್ತಿನ ಮುದ್ದೆ ಮಾಲನ್ನು ಪಿ.ಎಸ್.ಐ ರವರು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು ಕೈಕೊಂಡು ಮರಳಿ ಠಾಣೆಗೆ ಬಂದು ಆರೋಪಿತನ ವಿರುದ್ಧ ಕಾನೂನು ಕ್ರಮಕ್ಕಾಗಿ ವರದಿ ನೀಡಿದ್ದು ಆ ಬಗ್ಗೆ ಠಾಣಾ ಗುನ್ನೆ ನಂ: 84/2022 ಕಲಂ: 32, 34 ಕೆಇ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 72/2022 ಕಲಂ: 279, 338 ಐಪಿಸಿ: ಇಂದು ದಿನಾಂಕ:24/05/2022 ರಂದು 7-45 ಪಿಎಮ್ ಕ್ಕೆ ಶ್ರೀಮತಿ ಲಕ್ಷ್ಮೀ ಗಂಡ ಅಂಬ್ರೇಶ ಹೆಬ್ಬಾಳ, ವ:29, ಜಾ:ಕಬ್ಬಲಿಗ, ಉ:ಕೂಲಿ ಸಾ:ಗುಂಡಲಗೇರಾ ತಾ:ಸುರಪೂರ ಹಾ:ವ:ಗಾಂಧಿನಗರ ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನ್ನ ಗಂಡನಾದ ಅಂಬ್ರೇಶನು ಯಾದಗಿರಿಯಲ್ಲಿ ಬಾಡಿಗೆ ಕಾರ ಚಲಾಯಿಸಿಕೊಂಡಿರುತ್ತಾನೆ. ಆದ್ದರಿಂದ ನಾವು ಯಾದಗಿರಿಯ ಗಾಂಧಿನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಲ್ಲಿಯೇ ವಾಸವಾಗಿರುತ್ತೇವೆ. ಹೀಗಿದ್ದು ದಿನಾಂಕ:20/05/2022 ರಂದು ನಾಯ್ಕಲ್ ಗ್ರಾಮದಲ್ಲಿ ನಮ್ಮ ಸಂಬಂಧಿಕರ ಮದುವೆ ಇದ್ದ ಪ್ರಯುಕ್ತ ನನ್ನ ಗಂಡನಾದ ಅಂಬ್ರೇಶ ತಂದೆ ಬಸಣ್ಣ ಹೆಬ್ಬಾಳ ಈತನು ಸದರಿ ಮದುವೆಗೆ ಹೋಗಿ ಬರುತ್ತೇನೆ ಎಂದು ಮೋಟರ್ ಸೈಕಲ್ ನಂ. ಕೆಎ 33 ಎಲ್ 5020 ನೇದರ ಮೇಲೆ ಹೋದನು. ನಾನು ಮನೆಯಲ್ಲಿದ್ದೇನು. ದಿನಾಂಕ:20/05/2022 ರಂದು ರಾತ್ರಿ 10 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ತಂಗಿ ಗಂಡನಾದ ಧಮರ್ೆಶ ತಂದೆ ಮಲ್ಲಪ್ಪ ಗಗ್ಗರಿ ಸಾ:ಟಿ. ವಡಗೇರಾ ಈತನು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಾನು ಮತ್ತು ನಮ್ಮೂರ ಹಣಮಂತರೆಡ್ಡಿ ಬಿರೆದಾರ ಇಬ್ಬರೂ ಶಹಾಪೂರದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಯಾದಗಿರಿಗೆ ಬರುತ್ತಿದ್ದಾಗ 9-30 ಪಿಎಮ್ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ಗುರುಸಣಗಿ ಕ್ರಾಸಿನ ಆರ್.ವ್ಹಿ ಪೆಟ್ರೋಲ್ ಪಂಪ ಸಮೀಪ ಹೋಗುತ್ತಿದ್ದಾಗ ನಿನ್ನ ಗಂಡನು ಮೋಟರ್ ಸೈಕಲ್ ಮೇಲೆ ಹೋಗುತ್ತಿದ್ದವನಿಗೆ ಎದುರುಗಡೆಯಿಂದ ಲಾರಿ ಬಂದು ಡಿಕ್ಕಿಪಡಿಸಿದ್ದರಿಂದ ಭಾರಿ ಗಾಯಗೊಂಡಿರುತ್ತಾನೆ. 108 ಅಂಬ್ಯುಲೇನ್ಸದಲ್ಲಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ತರುತ್ತಿದ್ದೇವೆ ಎಂದು ಹೇಳಿದನು. ಆಗ ಗಾಬರಿಯಾದ ನಾನು ನೇರವಾಗಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ಹೋಗಿ ನನ್ನ ಗಂಡನಿಗೆ ನೋಡಿದೆನು. ನನ್ನ ಗಂಡನಿಗೆ ಅಪಘಾತದಲ್ಲಿ ಮೂಗಿನ ತುದಿಯಿಂದ ಬಲ ಕಪಾಳಕ್ಕೆ ಹರಿದ ರಕ್ತಗಾಯ, ಬಲಕಣ್ಣಿಗೆ ಮತ್ತು ಹಣೆಗೆ ರಕ್ತಗಾಯ ಹಾಗೂ ಬಲಗೈ ರಟ್ಟೆಗೆ ಭಾರಿ ಒಳಪೆಟ್ಟಾಗಿತ್ತು. ಅಪಘಾತದ ಬಗ್ಗೆ ಅಲ್ಲಿಯೇ ಇದ್ದ ನನ್ನ ತಂಗಿ ಗಂಡನಾದ ಧಮರ್ೇಶನಿಗೆ ವಿಚಾರಿಸಿದಾಗ ಅವನು ಹೇಳಿದ್ದೇನಂದರೆ ನಾನು ಮತ್ತು ನಮ್ಮೂರ ಹಣಮಂತರೆಡ್ಡಿ ಬಿರೆದಾರ ಇಬ್ಬರೂ ಶಹಾಪೂರಕ್ಕೆ ಹೋಗಿ ಅಲ್ಲಿ ನಮ್ಮ ಕೆಲಸ ಮುಗಿಸಿಕೊಂಡು ಮರಳಿ ನಮ್ಮ ಮೋಟರ್ ಸೈಕಲ್ ಮೇಲೆ ಯಾದಗಿರಿಗೆ ಬರುತ್ತಿದ್ದಾಗ 9-30 ಪಿಎಮ್ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ಗುರುಸಣಗಿ ಕ್ರಾಸಿನ ಆರ್.ವ್ಹಿ ಪೆಟ್ರೋಲ್ ಪಂಪ ಸಮೀಪ ಹೋಗುತ್ತಿದ್ದಾಗ ನಿನ್ನ ಗಂಡನು ಮೋಟರ್ ಸೈಕಲ್ ನಂ. ಕೆಎ 33 ಎಲ್ 5020 ನೇದರ ಮೇಲೆ ನಮ್ಮ ಮುಂದೆ ಹೋಗುತ್ತಿದ್ದವನಿಗೆ ಎದುರುಗಡೆಯಿಂದ ಲಾರಿ ನಂ. ಕೆಎ 32 ಎ 5753 ನೇದನ್ನು ಅದರ ಚಾಲಕನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಿನ್ನ ಗಂಡನಿಗೆ ಡಿಕ್ಕಿಪಡಿಸಿದನು. ನಾವು ಹೋಗಿ ಗಾಯಾಳುವಿಗೆ ನೋಡಿದಾಗ ಮೂಗಿನ ತುದಿಯಿಂದ ಬಲ ಕಪಾಳಕ್ಕೆ ಹರಿದ ರಕ್ತಗಾಯ, ಬಲಕಣ್ಣಿಗೆ ಮತ್ತು ಹಣೆಗೆ ರಕ್ತಗಾಯ ಹಾಗೂ ಬಲಗೈ ರಟ್ಟೆಗೆ ಭಾರಿ ಒಳಪೆಟ್ಟಾಗಿತ್ತು. ಅಲ್ಲಿಯೇ ಲಾರಿ ನಿಲ್ಲಿಸಿದ್ದ ಚಾಲಕನಿಗೆ ಹೆಸರು ವಿಳಾಸ ಕೇಳಿದಾಗ ಅವನು ತನ್ನ ಹೆಸರು ಬಸವರಾಜ ತಂದೆ ಮಲ್ಲಪ್ಪ ಸಾ:ಗಂಜ ಏರಿಯಾ ಯಾದಗಿರಿ ಎಂದು ಹೇಳಿದನು. ನಂತರ ನಾವು ನಿನಗೆ ಅಪಘಾತದ ವಿಷಯ ತಿಳಿಸಿದೆವು. ಅಷ್ಟರಲ್ಲಿ ಅಂಬ್ರೇಶ ಕಾರ ಚಲಾಯಿಸುತ್ತಿದ್ದ ಕಾರಿನ ಮಾಲಿಕ ಗೌತಮ ತಂದೆ ನಿಂಗಪ್ಪನು ಕೂಡಾ ಅಪಘಾತದ ಸಂಗತಿ ಕೇಳಿ ಸ್ಥಳಕ್ಕೆ ಬಂದಿದ್ದು, ಎಲ್ಲರೂ ಸೇರಿ ನಿನ್ನ ಗಂಡನಿಗೆ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಎಂದು ಹೇಳಿದನು. ವೈದ್ಯಾಧಿಕಾರಿಗಳು ನನ್ನ ಗಂಡನಿಗೆ ಅಲ್ಲಿಂದ ತಕ್ಷಣ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರಿಂದ ತಕ್ಷಣ ನಾವು ನನ್ನ ಗಂಡನಿಗೆ ಕಲಬುರಗಿಯ ಎ.ಎಸ್.ಎಮ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಇಲ್ಲಿನ ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದ್ದರಿಂದ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾನು ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡುತ್ತೇವೆ ಎಂದು ಹೇಳಿರುತ್ತೇನೆ. ಈಗ ನಮ್ಮ ಹಿರಿಯರಿಗೆ ವಿಚಾರಿಸಿದಾಗ ಅವರು ಹೋಗಿ ಪೊಲೀಸ್ ಕೇಸ ಮಾಡಿರಿ ಎಂದು ಹೇಳಿರುತ್ತಾರೆ. ಕಾರಣ ನಮ್ಮ ಹಿರಿಯರಿಗೆ ವಿಚಾರಿಸಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನನ್ನ ಗಂಡನಿಗೆ ಅಪಘಾತಪಡಿಸಿ, ಗಂಭಿರ ಸ್ವರೂಪದ ಗಾಯಪಡಿಸಿದ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 72/2022 ಕಲಂ: 279, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 73/2022 ಕಲಂ: 78(3) ಕೆ.ಪಿ.ಆಕ್ಟ್ 1963: ಇಂದು ದಿನಾಂಕ:24/05/2022 ರಂದು 10-50 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ರವರು ಜಪ್ತಿ ಪಂಚನಾಮೆ, ಮುದ್ದೆಮಾಲು ಮತ್ತು ಒಬ್ಬ ಆರೋಪಿತನಿಗೆ ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ:24/05/2022 ರಂದು ಸಮಯ ರಾತ್ರಿ 8-10 ಗಂಟೆ ಸುಮಾರಿಗೆ ನಾನು ಮತ್ತು ಸಿಬ್ಬಂದಿಯವರಾದ ತಾಯಪ್ಪ ಹೆಚ್.ಸಿ 79, ಮಹೇಂದ್ರ ಪಿಸಿ 254, ಸಾಬರೆಡ್ಡಿ ಪಿಸಿ 290 ಮತ್ತು ವೇಣುಗೋಪಾಲ ಪಿಸಿ 36ಎಲ್ಲರೂ ವಡಗೇರಾ ಠಾಣೆಯಲ್ಲಿದ್ದಾಗ ಟಿ. ವಡಗೇರಾ ಗ್ರಾಮದ ಹನುಮಾನ ದೇವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ರಾತ್ರಿ ಕಲ್ಯಾಣ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ನನಗೆ ಖಚಿತ ಮಾಹಿತಿ ಬಂದಿದ್ದರಿಂದ ಇಬ್ಬರು ಪಂಚರನ್ನು 8-15 ಪಿಎಮ್ ಕ್ಕೆ ಬರ ಮಾಡಿಕೊಂಡು ಸದರಿ ಪಂಚರು ಮತ್ತು ಸಿಬ್ಬಂದಿಯವರಿಗೆ ಮಾಹಿತಿ ತಿಳಿಸಿ, 8-30 ಪಿಎಮ್ ಕ್ಕೆ ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದರಲ್ಲಿ ಪಂಚರು ಮತ್ತು ಸಿಬ್ಬಂದಿಯವರಿಗೆ ಕರೆದುಕೊಂಡು ಹೊರಟು ಸಮಯ 9-10 ಪಿಎಮ್ಕ್ಕೆ ಟಿ. ವಡಗೇರಾ ಗ್ರಾಮದ ಹನುಮಾನ ದೇವರ ಗುಡಿಯಿಂದ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಹನುಮಾನ ದೇವಸ್ಥಾನವನ್ನು ಮರೆಯಾಗಿ ನಿಂತು ನೋಡಲಾಗಿ ಹನುಮಾನ ದೇವಸ್ಥಾನ ಮುಂದಗಡೆ ಸಾರ್ವಜನಿಕ ಕಟ್ಟೆಯ ಮೇಲೆ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ರಾತ್ರಿ ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಬರೆಸಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದು ಮಟಕಾ ನಂಬಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 9-20 ಪಿಎಮ್ಕ್ಕೆ ಪಂಚರ ಸಮಕ್ಷಮದಲ್ಲಿ ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು, ಸದರಿಯವನಿಗೆ ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ಅಮೀರಪಟೇಲ್ ತಂದೆ ಖಾಜಾಪಟೇಲ್ ವಠಾರ, ವ:50, ಜಾ:ಮುಸ್ಲಿಂ, ಉ:ಕೂಲಿ ಸಾ:ಟಿ. ವಡಗೇರಾ ತಾ:ವಡಗೇರಾ ಅಂತಾ ತಿಳಿಸಿದ್ದು, ಸದರಿಯವನು ತನ್ನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ ಇದ್ದ 1) ಮಟಕಾ ನಂಬರಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 3240/- ರೂ., 3) ಒಂದು ಬಾಲ ಪೆನ್ನ ಅ.ಕಿ.00=00 ಇವುಗಳನ್ನು ಹಾಜರಪಡಿಸಿದ್ದು, ಆತನು ಹಾಜರುಪಡಿಸಿದ್ದ ಹಣವು ಮಟಕಾ ಬರೆದುಕೊಟ್ಟಿದ್ದರಿಂದ ಬಂದಿದ್ದು ಅಂತಾ ತಿಳಿಸಿದನು. ಸದರಿ ಮುದ್ದೆಮಾಲನ್ನು ಜಪ್ತಿಪಡಿಸಿಕೊಂಡು ಆರೋಪಿತನಿಗೆ ವಶಕ್ಕೆ ಪಡೆದುಕೊಂಡು ಜಪ್ತಿ ಪಂಚನಾಮೆ ಜರುಗಿಸಿ, ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜರುಪಡಿಸಿದ್ದು ಇರುತ್ತದೆ. ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 73/2022 ಕಲಂ:78 (3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 84/2022 ಕಲಂ: 143, 147, 148, 323, 324, 307, 326, 395,504,506 ಸಂಗಡ 149 ಐಪಿಸಿ: ಯುನೈಟೆಡ್ ಆಸ್ಪತ್ರೆ ಕಲಬುರಗಿಯಿಂದ ಎಮ್.ಎಲ್.ಸಿ ವಸೂಲಾದ ಮೇರೆಗೆ ಎಮ್.ಎಲ್.ಸಿ ವಿಚಾರಣೆ ಕುರಿತು ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ಇಂದು ದಿನಾಂಕ 24/05/2022 ರಂದು 11.00 ಎಎಂ ಕ್ಕೆ ಹೋಗಿ ಅಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ರಾಮನಗೌಡ @ ಬಸನಗೌಡ ತಂದೆ ಸಂಗನಗೌಡ ಪಾಟೀಲ್ ವ|| 28ವರ್ಷ ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಅಗತೀರ್ಥ ಇವರಿಗೆ ವಿಚಾರಿಸಿ ಅವರ ಹೇಳಿಕೆ ಪಡೆದುಕೊಂಡಿದ್ದು, ಗಾಯಾಳು ಹೇಳಿಕೆ ನೀಡಿದ್ದೇನೆಂದರೆ, ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದೇನೆ. ನಮ್ಮ ಚಿಕ್ಕಪ್ಪನಾದ ಬಾಬುಗೌಡ @ ಸಾಹೇಬಗೌಡ ತಂದೆ ಬಸವಂತ್ರಾಯಗೌಡ ಪಾಟೀಲ್ ರವರ ಏಳ್ಗೆಯನ್ನು ಸಹಿಸದೇ ಅವರ ಮೇಲೆ ಮತ್ತು ನನ್ನ ಮೇಲೆ ನಮ್ಮೂರ ಮಲ್ಲನಗೌಡ ಢವಳಗಿ ಹಾಗೂ ಇತರರು ಕೂಡಿ ವಿನಾಕಾರಣ ದ್ವೇಷ ಸಾಧಿಸುತ್ತಾ ಬಂದಿದ್ದಾರೆ. ನಮ್ಮ ಕಾರಿಗೆ ನಮ್ಮೂರ ಸುಭಾಷಗೌಡ ತಂದೆ ಮಲ್ಲಗೌಡ ಬಿರಾದಾರ ವ|| 30 ಜಾ|| ಕುರುಬರ ಈತನು ಚಾಲಕನಾಗಿ ಕೆಲಸ ಮಾಡುತ್ತಿದ್ದು ಅವನ ಮೇಲೆಯೂ ದ್ವೇಷ ಸಾಧಿಸುತ್ತಾ ಬಂದಿರುತ್ತಾರೆ. ನಮ್ಮೂರ ಮಲ್ಲನಗೌಡ ಮತ್ತು ಚಿದಾನಂದ ಪೂಜಾರಿ ಇವರು ನನಗೆ, ನಮ್ಮ ಚಿಕ್ಕಪ್ಪನಾದ ಬಾಬುಗೌಡರಿಗೆ ಮತ್ತು ಕಾರಿನ ಚಾಲಕನಾದ ಸುಭಾಸನಿಗೆ ಕೊಲೆ ಮಾಡಬೇಕೆಂದು ಬಹಳ ದಿನಗಳಿಂದ ಹೊಂಚು ಹಾಕಿದ್ದರು. ಹೀಗಿದ್ದು ದಿನಾಂಕ 22/05/2022 ರಂದು ಮುಂಜಾನೆ 10.00 ಗಂಟೆಯ ಸುಮಾರಿಗೆ ನಮ್ಮ ಚಿಕ್ಕಪ್ಪನವರಾದ ಬಾಬುಗೌಡರು ನನಗೆ ಮತ್ತು ಕಾರಿನ ಚಾಲಕನಾದ ಸುಭಾಸನಿಗೆ ಕರೆದು ಇವತ್ತು ಯಕ್ತಾಪೂರ, ಮುದನೂರ, ಶಖಾಪೂರ, ಇಸಾಂಪೂರ, ಯಡ್ಡಳ್ಳಿ ಗ್ರಾಮಗಳಲ್ಲಿ ಮದುವೆ ಕಾರ್ಯಕ್ರಮಗಳು ಇವೆ ಹೋಗೋಣ ನಡೆಯಿರಿ ಅಂತಾ ಹೇಳಿ ಕಾರಿನಲ್ಲಿ ಕರೆದುಕೊಂಡು ಹೊರಟರು. ಮೊದಲು ಯಕ್ತಾಪೂರ ಮದುವೆಗೆ ಹೋದೆವು. ಅಲ್ಲಿಂದ ಶಖಾಪೂರ ಮದುವೆಗೆ ಹೋದೆವು. ಅಲ್ಲಿಂದ ಮುದನೂರಿನಲ್ಲಿ ಮದುವೆಗೆ ಹೋಗಿ ಮದುವೆ ಮುಗಿಸಿ ಅಲ್ಲಿಂದ ಇಸಾಂಪೂರ ಮದುವೆಗೆ ಹೋಗಲು ಕಾರಿನಲ್ಲಿ ಕುಳಿತೆವು. ನಮ್ಮ ಸಂಬಂಧಿಕರಾದ ಮುದನೂರ ಗ್ರಾಮದ ಸಿದ್ದನಗೌಡ ಪಡೆಕನೂರ ಮತ್ತು ಭೀಮನಗೌಡ ಪೋತರೆಡ್ಡಿ ಇಬ್ಬರೂ ಇಸಾಂಪೂರ ಮದುವೆಗೆ ಬರುತ್ತೇವೆ ಅಂತಾ ಹೇಳಿದ್ದರಿಂದ ಅವರಿಗೂ ನಮ್ಮೊಂದಿಗೆ ಕಾರಿನಲ್ಲಿ ಕರೆದುಕೊಂಡು ಮುದನೂರಿನಿಂದ ಇಸಾಂಪೂರ ಮದುವೆಗೆ ಹೊರಟೆವು. ನಾವು ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ಅಗತೀರ್ಥ ಕ್ರಾಸಿನಲ್ಲಿ ಹೋಗುತ್ತಿದ್ದಾಗ ಎದುರಿಗೆ ಹುಣಸಗಿ ಕಡೆಯಿಂದ 8-10 ಜನರು 8 ಸೈಕಲ್ ಮೋಟಾರನಲ್ಲಿ ಮತ್ತು 7-8 ಜನರು 3 ಕಾರುಗಳಲ್ಲಿ ಬಂದು ನಮ್ಮ ಕಾರಿಗೆ ಅಡ್ಡಗಟ್ಟಿದರು. ಕಾರುಗಳು ಅಂದ್ರೆ ಒಂದು ಸೋಮನಗೌಡರ ಸಫಾರಿ ಕಾರು, ಮಲ್ಲನಗೌಡನ ಎಸ್. ಕ್ರಾಸ್ ಕಾರು ಮತ್ತು ರಮೇಶನ ಎಸ್.ಕ್ರಾಸ್ ಕಾರು ಇದ್ದವು. ಮೂರೂ ಕಾರುಗಳಲ್ಲಿ ಅವರು ಬಡಿಗೆ, ಮಚ್ಚು, ಕಬ್ಬಿಣದ ರಾಡುಗಳು ಹಾಕಿಕೊಂಡು ಬಂದಿದ್ದು, ಕಾರು ಮತ್ತು ಸೈಕಲ್ ಮೋಟಾರಗಳ ಮೇಲೆ ಬಂದು ಎಲ್ಲರೂ ಕೆಳಗೆ ಇಳಿದು ತಮ್ಮ ಕೈಗಳಲ್ಲಿ ಕಾರಿನಲ್ಲಿದ್ದ ಬಡಿಗೆ, ರಾಡು, ಮಚ್ಚುಗಳನ್ನು ಹಿಡಿದುಕೊಂಡು ನಮ್ಮ ಕಾರಿನ ಹತ್ತಿರ ಬಂದು ಇವತ್ತು ನಮಗೆ ಬೇಕಾದ ಬೇಟೆಗಳು ಮೂರೂ ಒಮ್ಮೆಲೇ ಸಿಕ್ಕಿವೆ ಹೊಡೆದು ಹಾಕಿ ಬಿಡೋಣ ಅನ್ನುತ್ತಾ ನಮ್ಮ ಕಾರಿಗೆ 1) ಮಲ್ಲನಗೌಡ ಢವಳಗಿ, 2) ಮಂಜುನಾಥ ಚಟ್ಟರಕಿ, 3) ಸಿದ್ದನಗೌಡ ಢವಳಗಿ, 4) ವಿಜಯರೆಡ್ಡಿ ಚಟ್ಟರಕಿ, 5) ಸೋಮನಗೌಡ ಪಾಟೀಲ್, 6) ರಮೇಶ ಬಿರಾದಾರ, 7) ಚಿದಾನಂದ ಪೂಜಾರಿ, 8) ಸಂಗಣ್ಣ ಪೂಜಾರಿ, 9) ಸಿದ್ದನಗೌಡ ಬಿರಾದಾರ, 10) ಶರಣಗೌಡ ಮಾ|| ಪಾ|| ಸಾ| ಅಗ್ನಿ 11) ರಮೇಶ ಬಾವೂರ, 12) ಮಹಾಂತಗೌಡ ಆಲಾಳ, 13) ರಾಮನಗೌಡ ಹೊಸಮನಿ, 14) ರೆಡ್ಡೆಪ್ಪ ಪೂಜಾರಿ, 15) ಗುರೆಡ್ಡಿ ಹೊಸಮನಿ, 16) ಭೀಮನಗೌಡ ಹೊಸಮನಿ, 17) ಮಂಜುನಾಥ ಬೆಕಿನಾಳ, 18) ಮಲ್ಲಪ್ಪ ಪೂಜಾರಿ ಹಾಗೂ ಇತರರು ಸಾ|| ಅಗತೀರ್ಥ ಇವರೆಲ್ಲರೂ ನಮ್ಮ ಕಾರಿಗೆ ಸುತ್ತುವರೆದು ಏನರೆಲೇ ಬಾಬ್ಯಾ, ರಾಮ್ಯಾ, ಸುಬ್ಯಾ ಸೂಳೆ ಮಕ್ಕಳೆ ನೀವು ಮೂವರು ಇವತ್ತು ನಮ್ಮ ಕೈಯಿಂದ ತಪ್ಪಿಸಿಕೊಳ್ಳಲು ಆಗಲ್ಲ ಮಕ್ಕಳೆ ನೀವು ಕಾರಿನಿಂದ ಹೊರಗೆ ಬತರ್ಿರ್ಯಾ ಏನು ನಾವೇ ಗ್ಲಾಸ್ ಒಡೆದು ಹೊರಗ ಎಳೆಯೋಣ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಮ್ಮ ಚಿಕ್ಕಪ್ಪನಾದ ಬಾಬುಗೌಡ, ನಾನು ಮತ್ತು ನಮ್ಮ ಕಾರಿನ ಚಾಲಕನಾದ ಸುಭಾಸ ಮೂರೂ ಜನರು ಕಾರಿನಿಂದ ಕೆಳಗೆ ಇಳಿದು ಯಾಕರೆಪ್ಪಾ ನಾವೇನು ಮಾಡೀವಿ, ನಮಗ ಇಷ್ಟು ಯಾಕ ಬೆನ್ನು ಹತ್ತೀರಿ ಅಂತಾ ಕೇಳಿದಾಗ ಮಲ್ಲನಗೌಡನು ಎಲೇ ಬಾಬ್ಯಾ ಈ ಊರಾಗ ನಮ್ಮದು ನಡೀಬೇಕು ಅಂದ್ರ ನಿನಗೆ ಮತ್ತು ರಾಮ್ಯಾಗ ಮರ್ಡರ್ ಮಾಡಿದೀವಿ ಅಂದ್ರ ಪೂತರ್ಿ ಊರ ನಮ್ಮ ಕೈಯಲ್ಲಿ ಇರತಾದ ಮಕ್ಕಳೆ ಇವತ್ತು ನಿಮಗೆ ಬಿಡಲ್ಲ ಅನ್ನುತ್ತಾ ಮಲ್ಲನಗೌಡ ಢವಳಗಿ ಈತನು ತನ್ನ ಕೈಯಲ್ಲಿದ್ದ ಮಚ್ಚಿನಿಂದ ನಮ್ಮ ಚಿಕ್ಕಪ್ಪನ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು, ಮಂಜುನಾಥ ಚಟ್ಟರಕಿ ಈತನು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಮಚ್ಚಿನಿಂದ ನಮ್ಮ ಚಿಕ್ಕಪ್ಪನಾದ ಬಾಬುಗೌಡನ ಕುತ್ತಿಗೆಗೆ ಹೊಡೆದಾಗ ಬಾಬುಗೌಡರು ತಪ್ಪಿಸಿಕೊಂಡರು. ಆಗ ವಿಜಯರೆಡ್ಡಿ ಚಟ್ಟರಕಿ ಮತ್ತು ಸಿದ್ದನಗೌಡ ಢವಳಗಿ ಇವರು ಬಾಬುಗೌಡರಿಗೆ ರಾಡಿನಿಂದ ಬೆನ್ನಿಗೆ, ಬಲಗಾಲಿಗೆ ಹೊಡೆದು ಗುಪ್ತಗಾಯ ಮಾಡಿ ಎಡಗೈಗೆ ಹೊಡೆಯುತ್ತಿದ್ದಾಗ ಕೈ ಅಡ್ಡ ತಂದಾಗ ಬಾಬುಗೌಡರ ಎಡಗೈ ಕಿರು ಬೆರಳಿಗೆ ರಾಡಿನ ಏಟು ಬಿದ್ದು ಬೆರಳಿನ ಎಲುಬು ಮುರಿದಿದೆ. ಆಗ ಅವರು ಹೊಡೆಯುತ್ತಿದ್ದುದರಿಂದ ಬಾಬುಗೌಡರು ನೆಲಕ್ಕೆ ಬಿದಿದ್ದು ವಿಜಯರೆಡ್ಡಿ ಮತ್ತು ಮಂಜುನಾಥ ಇವರು ಬಾಬುಗೌಡರ ಕೊರಳಲ್ಲಿದ್ದ 9 ತೊಲಿ(90 ಗ್ರಾಂ) ಬಂಗಾರದ ಚೈನ್ ಕಿತ್ತುಕೊಂಡರು ಮತ್ತು ರಮೇಶ ಬಿರಾದಾರ ಇವರು ತಮ್ಮ ಕೈಯಲ್ಲಿದ್ದ ಮಚ್ಚಿನಿಂದ ನನ್ನ ತಲೆಗೆ ಹೊಡೆದು ಭಾರೀ ರಕ್ತಗಾಯ ಮಾಡಿದ್ದು ಸೋಮನಗೌಡನು ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ಬೆನ್ನಿಗೆ ಮತ್ತು ಎಡಗೈ ಭುಜಕ್ಕೆ ಹೊಡೆದು ಗುಪ್ತಗಾಯ ಮಾಡಿದನು ಮತ್ತು ಸುಭಾಷಗೌಡನಿಗೆ ಕೊಲೆ ಮಾಡುವ ಉದ್ದೇಶದಿಂದ ಚಿದಾನಂದ ಪೂಜಾರಿ ಮತ್ತು ಸಂಗಣ್ಣ ಪೂಜಾರಿ ಇವರು ಮಚ್ಚಿನಿಂದ ಸುಭಾಸನ ತಲೆಗೆ ಹೊಡೆದು ಭಾರೀ ರಕ್ತಗಾಯ ಮತ್ತು ಗುಪ್ತಗಾಯ ಮಾಡಿದರು. ನಮಗೆ ಹೊಡೆಯುತ್ತಿದ್ದಾಗ ಜಗಳ ಬಿಡಿಸಲು ಬಂದ ಅಮಲಿಹಾಳ ಗ್ರಾಮದ ನಾಗರಾಜ ತಂದೆ ಶಾಂತಗೌಡ ಚೌದ್ರಿ ಇವರಿಗೆ ಶರಣಗೌಡ ಅಗ್ನಿ ಮತ್ತು ಸಿದ್ದನಗೌಡ ಬಿರಾದಾರ ಇವರು ರಾಡಿನಿಂದ ತಲೆಯ ಹಿಂಭಾಗದಲ್ಲಿ ಹೊಡೆದು ಭಾರೀ ಗುಪ್ತಗಾಯ ಮಾಡಿದರು. ಅವರು ಹೊಡೆಯುತ್ತಿದ್ದುದರಿಂದ ನಾವೆಲ್ಲರೂ ಸತ್ತೆವೆಪ್ಪೋ ಅಂತಾ ನೆಲಕ್ಕೆ ಬಿದ್ದಾಗ ಮಲ್ಲಪ್ಪ ಪೂಜಾರಿ, ಗುರೆಡ್ಡಿ ಹೊಸಮನಿ, ಮಹಾಂತಗೌಡ ಆಲಾಳ, ರಾಮನಗೌಎ ಹೊಸಮನಿ, ರೆಡ್ಡಪ್ಪ ಪೂಜಾರಿ ಮತ್ತು ಮಂಜುನಾಥ ಬೆಕಿನಾಳ ಇವರು ಕಾಲಿನಿಂದ ಒದೆಯುತ್ತಾಬಡಿಗೆಯಿಂದ, ರಾಡಿನಿಂದ ಹೊಡೆಯುತ್ತಿದ್ದಾಗ ಸಿದ್ದನಗೌಡ ಮುದನೂರ, ಭೀಮನಗೌಡ ಮುದನೂರ, ಗುರುನಾಥರೆಡ್ಡಿ ಇಸಾಂಪೂರ, ಮೌನೇಶ ಇಸಾಂಪೂರ ಇವರು ಬಂದು ಜಗಳ ಬಿಡಿಸಲು ಪ್ರಯತ್ನ ಮಾಡಿದರೂ ನಮಗೆ ಹೊಡೆಯುತ್ತಾ ಇದ್ದರು. ನಮಗೆ ಹೊಡೆಯುವಾಗ ವಿಜಯರೆಡ್ಡಿ ಈತನ ರಾಡಿನ ಏಟು ಗುರುನಾಥರೆಡ್ಡಿ ಇವರ ಬಲಗೈಗೆ ಬಿದ್ದು ಗುಪ್ತಗಾಯವಾಗಿದ್ದು ನಾವೆಲ್ಲರೂ ಅವರು ಹೊಡೆಯುತ್ತಿರುವ ಏಟು ತಾಳದೇ ಸತ್ತೆವೆಪ್ಪೋ ಅಂತಾ ಚೀರುತ್ತಿದ್ದಾಗ ಮಲ್ಲನಗೌಡ ಮತ್ತು ರಮೇಶ ಬಿರಾದಾರ ಇವರು ಸತ್ತೆವೆಪ್ಪೋ ಅಂತೀರ್ಯಾ ಸೂಳೆ ಮಕ್ಕಳೆ ನಿಮಗೆ ಈಗ ಮರ್ಡರ್ ಮಾಡಿಯೇ ಬಿಡುತ್ತೇವೆ ಅಂತಾ ಅನ್ನುತ್ತಾ ನಮಗೆ ಹೊಡೆಯುತ್ತಿದ್ದಾಗ ಕೆಂಭಾವಿ ಠಾಣೆಯ ಪಿ.ಎಸ್.ಐ ರವರು ತಮ್ಮ ಜೀಪಿನಲ್ಲಿ ಪೋಲೀಸರಿಗೆ ಕರೆದುಕೊಂಡು ಜೀಪ ಸೈರನ್ ಹಾರ್ನ ಮಾಡುತ್ತಾ ನಮಗೆ ಹೊಡೆಯುತ್ತಿರುವ ಜಾಗಕ್ಕೆ ಬಂದರು. ಪೊಲೀಸ್ ಜೀಪ ಬಂದ ತಕ್ಷಣ ನಮಗೆ ಹೊಡೆಯುವುದು ಬಿಟ್ಟು ಈ ಸಲ ಉಳಿದೀರಿ ಮಕ್ಕಳೆ ಇನ್ನೊಮ್ಮೆ ಸಿಕ್ಕರೆ ನಿಮಗೆ ಕೊಲೆ ಮಾಡದೇ ಬಿಡುವುದಿಲ್ಲ. ನಾವು 3ವರ್ಷದ ಹಿಂದೆನೇ ಒಂದು ಮರ್ಡರ್ ಮಾಡಿ ದಕ್ಕಿಸಿಕೊಂಡೀವಿ ನಿಮಗ ಮೂರೂ ಜನರಿಗೂ ಹೊಡೆದು ಹಾಕ್ತೀವಿ ಅನ್ನುತ್ತಾ ಅಲ್ಲಿಂದ ಓಡಿ ಹೋದರು. ಆಗ ನಮಗೆ ಭಾರೀ ಗಾಯಗಳಾಗಿದ್ದರಿಂದ ಸಿದ್ದನಗೌಡ ಮುದನೂರ ಮತ್ತು ಪೊಲೀಸರು ಕಾರಿನಲ್ಲಿ ಹಾಕಿಕೊಂಡು ಕೆಂಭಾವಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಉಪಚಾರಕ್ಕಾಗಿ ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದು ನಮಗೆ ಜಾಸ್ತಿ ಗಾಯಗಳಾಗಿದ್ದರಿಂದ ನಾವು 2 ದಿನ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಇವತ್ತು ಸ್ವಲ್ಪ ಚೇತರಿಸಿಕೊಂಡಿದ್ದು ಇರುತ್ತದೆ. ಹಳೆಯ ದ್ವೇಷದಿಂದ ನನಗೆ, ನಮ್ಮ ಚಿಕ್ಕಪ್ಪನಾದ ಬಾಬುಗೌಡನಿಗೆ ಮತ್ತು ನಮ್ಮ ಕಾರಿನ ಚಾಲಕನಾದ ಸುಭಾಸನಿಗೆ ಕೊಲೆ ಮಡುವ ಉದ್ದೇಶದಿಂದ ಕಾರು ಅಡ್ಡಗಟ್ಟಿ ನಿಲ್ಲಿಸಿ ಬಡಿಗೆ, ರಾಡು, ಮಚ್ಚಿನಿಂದ ಹೊಡೆದು ಭಾರೀ ರಕ್ತಗಾಯ ಹಾಗೂ ಗುಪ್ತಗಾಯ ಮಾಡಿದ್ದು ಅಲ್ಲದೇ ನಮ್ಮ ಚಿಕ್ಕಪ್ಪನ ಬೆರಳು ಮುರಿದು ಅವರ ಕೊರಳಲ್ಲಿದ್ದ ಬಂಗಾರದ ಚೈನ್ ಕಸಿದುಕೊಂಡಿದ್ದು ಜಗಳ ಬಿಡಿಸಲು ಬಂದ ನಾಗರಾಜನಿಗೂ ಹೊಡೆದು ಭಾರೀ ಗುಪ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದ ಮಲ್ಲನಗೌಡ ಮತ್ತು ಇತರರ ಮೇಲೆ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ 5.30 ಪಿಎಂ ಕ್ಕೆ ಬಂದು ಸದರಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 84/2022 ಕಲಂ 143, 147, 148, 323, 324, 307, 326, 395, 504, 506 ಸಂ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 60/2021 ಕಲಂ 15(ಎ), 32(3) ಕೆ,ಇ ಆಕ್ಟ್: ಇಂದು ದಿನಾಂಕ: 24.05.2022 ರಂದು ಸಾಯಂಕಾಲ 5 ಗಂಟೆಗೆ ಆರೋಪಿತನು ಕರಿಬೆಟ್ಟ ಕ್ರಾಸ ಹತ್ತಿರದ ತನ್ನ ಪವನ ದಾಬಾ ಎದರುಗಡೆ ಸಾರ್ವಜನಿಕ ಸ್ಥಳದಲ್ಲಿ ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅನಧೀಕೃತವಾಗಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿ ಸಮಯದಲ್ಲಿ ಆರೋಪಿತನಿಂದ ಸಿಕ್ಕ ಅಂದಾಜು 1944=00 ರೂ ಕಿಮ್ಮತ್ತಿನ ಮದ್ಯವನ್ನು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಅದೆ.
ಕೊಡೆಕಲ್ಲ ಪೊಲೀಸ್ ಠಾಣೆ:-
ಗುನ್ನೆ ನಂ: 43/2022 ಕಲಂ. 323, 324, 504, 506 ಐಪಿಸಿ: ದಿನಾಂಕ:24/05/2022 ರಂದು ರಾತ್ರಿ 9.00 ಗಂಟೆಯ ಸುಮಾರಿಗೆ ಗಾಯಾಳು ಬಂದಗೀಸಾಬ ಈತನು ಆರೋಪಿತನ ಮನೆಯ ಮುಂದೆ ಹಾಯ್ದು ತನ್ನ ಮನೆಗೆ ಹೊರಟಾಗ, ಆರೋಪಿತನು ಏ ಮಗನೆ ಕಾಶ್ಯಾ ನೀನ್ಯಾಕ ಹುಸೇನಸಾಬ ಈತನ ಹೊಲವನ್ನು ಖರಿದಿ ಕೊಟ್ಟಾಗ ಹೋಗಿದಿ, ಇಲ್ಲದ ಕಾರಬಾರ ಮಾಡಿತಿಯೇನು ಮಗನೇ ಅಂತಾ ಬೈದಾಡಿದಾಗ, ಗಾಯಾಳು ಇಲ್ಲ ಮಾವ ಅವರು ಕರೆದರು ನಾನು ಹೋಗಿ ಹೀಗೆಲ್ಲ ಬೈದಾಡುವದು ಸರಿ ಅಲ್ಲ ಅಂತಾ ಅಂದಿದ್ದಕ್ಕೆ ಆರೋಪಿತನು ನನಗೆ ಎದುರು ಮಾತಾಡುತ್ತಿಯೇನು ಅಂತಾ ಗಾಯಾಳುವಿನ ತೆಕ್ಕೆ ಕುಸ್ತಿಗೆ ಬಿದ್ದು, ಕೈಯಿಂದ ಹೊಡೆದಿದ್ದು, ನಂತರ ತಮ್ಮ ಮನೆಯಲ್ಲಿದ್ದ ಕಬ್ಬಿಣದ ಪೈಪ್ ತೆಗೆದುಕೊಂಡು ಬಂದು ಗಾಯಾಳುಗಿನ ತಲೆಗೆ & ಬೆನ್ನಿಗೆ ಹೊಡೆದಾಗ, ತಲೆಗೆ ಒಳಪೆಟ್ಟಾಗಿ ಗಾಯಾಳು ಕಾಶಿಂಸಾಬ ಈತನು ಚೀರಾಡುತ್ತಾ ಕೆಳಗೆ ಬಿದ್ದಿದ್ದು, ಫಿರ್ಯಾದಿ ಓಡಿ ಬಂದಿದ್ದು, ಗಾಯಾಳುವಿನ ಪಕ್ಕದ ಮನೆಯ ಸೈಯದಸಾಬ ಕೊಳೂರ ಈತನು ಸಹ ಬಂದಿದ್ದು, ಇಬ್ಬರೂ ಕೂಡಿ ಜಗಳ ಬಿಡಿಸಿದರು. ಆರೋಪಿತನು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಅಲ್ಲದೆ ನಿನ್ನ ಗಂಡನು ಬಹಳ ಕಾರಾಬಾರ ಮಾಡುತ್ತಿದ್ದಾನೆ ಇನ್ನೊಂದು ಸಲ ಈ ರೀತಿ ಕಾರಬಾರ ಮಾಡಿದರೆ ಅವನಿಗೆ ಜೀವಂತ ಬಿಡುವದಿಲ್ಲ ಅಂತಾ ಜಿವದ ಬೆದರಿಕೆ ಹಾಕುತ್ತಾ ಮನೆಯೊಳಗೆ ಹೋದ ಬಗ್ಗೆ ಅಪರಾಧ.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 85/2022 ಕಲಂ: 143, 147, 148, 323, 324, 307, 395,504,506 ಸಂಗಡ 149 ಐಪಿಸಿ: ಇಂದು ದಿ:24/05/2022 ರಂದು 5.45 ಪಿಎಮ್ಕ್ಕೆ ಠಾಣೆಯ ಶಿವಲಿಂಗಪ್ಪ ಹೆಚ್ಸಿ 185 ರವರು ತಾಳಿಕೋಟಿಯ ಆಸ್ಪತ್ರೆಯಿಂದ ಗಾಯಾಳು ರಮೇಶ ತಂದೆ ಚಂದಪ್ಪಗೌಡ ಬಿರಾದಾರ ವಯಾ:39 ಜಾ: ಕುರುಬರು ಉ: ವ್ಯಾಪಾರ ಸಾ: ಅಗತೀರ್ಥ ತಾ: ಹುಣಸಗಿ ಇವರು ಕೊಟ್ಟ ಅಜರ್ಿಯನ್ನು ಸ್ವೀಕರಿಸಿಕೊಂಡು ತಂದು ಹಾಜರು ಪಡಿಸಿದ್ದರ ಸಾರಾಂಶವೆನೆಂದರೇ ಈ ಹಿಂದೆ ನಮಗೂ ಹಾಗೂ ನಮ್ಮೂರ ಬಾಬುಗೌಡ@ ಸಾಹೇಬಗೌಡ ತಂದೆ ಬಸವಂತ್ರಾಯಗೌಡ ಪಾಟೀಲ್ ಇವರ ಮದ್ಯೆ ಗಲಾಟೆಯಾಗಿ ನಾವು ಸದರಿಯವರ ಮೇಲೆ ಕೇಸು ಮಾಡಿದಾಗಿನಿಂದಲೂ ಸದರಿಯವನು ನಮ್ಮ ಮೇಲೆ ಹಗೆತನ ಸಾಧಿಸುತ್ತಿದ್ದನು. ಅಲ್ಲದೇ ಸದರಿಯವನು ನನಗೆ ಕೊಲೆ ಮಾಡಬೇಕೆಂದು ಸಂಚು ರೂಪಿಸಿದ್ದನು. ಅಲ್ಲದೇ ಅಗ್ನಿ ಗ್ರಾಮ ಪಂಚಾಯತಿಯ ಒಬ್ಬ ಸದಸ್ಯ ಮೃತ ಪಟ್ಟಿದ್ದು ಆ ವ್ಯಕ್ತಿ ಬಾಬುಗೌಡ ಇವರ ಬೆಂಬಲಿತ ವ್ಯಕ್ತಿಯಾಗಿದ್ದು. ಕಾರಣ ಆ ಸ್ಥಾನಕ್ಕೆ ಬಾಬುಗೌಡ ಇವರು ಮೃತನ ಹೆಂಡತಿಗೆ ನಾಮಿನೇಶನ್ ಮಾಡಿಸಿದ್ದು ನಾವು ಸಹ ನಮ್ಮ ಬೆಂಬಲಿತ ವ್ಯಕ್ತಿಯಾದ ಸಿದ್ದಪ್ಪ ದೊಡಮನಿ ಈತನಿಗೆ ಚುನಾವಣೆಗೆ ನಿಲ್ಲಿಸಿದ್ದು ಅಂದಿನಿಂದಲೂ ಸಹ ಬಾಬುಗೌಡ ನನ್ನ ಮೇಲೆ ಹಗೆತನ ಸಾಧಿಸುತ್ತಾ ಬಂದಿದ್ದನು. ಹೀಗಿದ್ದು ದಿನಾಂಕ:19/05/2022 ರಂದು ಚುನಾವಣೆ ಜರುಗಿದ್ದು ದಿ:22/05/2022 ರಂದು ಚುನಾವಣಾ ಮತ ಏಣಿಕೆ ಇದ್ದುದ್ದರಿಂದ ಬೆಳಿಗ್ಗೆ 6.00 ಗಂಟೆಗೆ ನಮ್ಮ ಆಭ್ಯಥರ್ಿಯೊಂದಿಗೆ ಇತರರು ಸೇರಿ ಹುಣಸಗಿಗೆ ಹೋಗಿದ್ದು. ಚುನಾವಣೆಯ ಮತ ಏಣಿಕೆ ಆಗಿ ನಮ್ಮ ಬೆಂಬಲಿತ ಸಿದ್ದಪ್ಪ ದೊಡಮನಿ ಈತನು ವಿಜಯ ಸಾಧಿಸಿದ್ದು ಬಾಬುಗೌಡ ಇವರ ಬೆಂಬಲಿತ ಆಭ್ಯಥರ್ಿ ಸೋತಿದ್ದು ಇರುತ್ತದೆ. ನಂತರ ನಾನು ಹಾಗೂ ಇತರೇ ನಮ್ಮೂರ ಜನರು ಹಾಗೂ ಗೆದ್ದ ಆಭ್ಯಥರ್ಿ ಸಿದ್ದಪ್ಪ ದೊಡಮನಿ ಎಲ್ಲರೂ ಕೂಡಿ ಅಂದಾಜು 12.45 ಪಿಎಮ್ ಸುಮಾರಿಗೆ ನಾವೇಲ್ಲರೂ ನಮ್ಮೂರ ಕ್ರಾಸ್ಗೆ ಬಂದು ಕ್ರಾಸನಲ್ಲಿರುವ ದೇವರ ಮೂತರ್ಿಗೆ ಹಾರ ಹಾಕುತ್ತಿದ್ದಾಗ ಅದೇ ವೇಳೆಗೆ ನಮ್ಮ ಮೇಲೆ ಹಗೆತನ ಸಾಧಿಸುತ್ತಿದ್ದ ಬಾಬುಗೌಡ @ ಸಾಹೇಬಗೌಡ ಪಾಟೀಲ್ ಈತನು ಮುದನೂರ ಕಡೆಯಿಂದ 5-6 ಮೋಟಾರ ಸೈಕಲ್ನಲ್ಲಿ ಹಾಗೂ 6-7 ಜನರನ್ನು ಕಾರಿನಲ್ಲಿ ಕರೆದುಕೊಂಡು ನಮ್ಮಲ್ಲಿಗೆ ಬಂದಿದ್ದು ಅವರು ಕಾರನಲ್ಲಿ ಬಡಿಗೆ, ಕಬ್ಬಿಣದ ರಾಡು ಹಾಗೂ ಕಲ್ಲುಗಳನ್ನು ಹಾಕಿಕೊಂಡು ಬಂದಿದ್ದು ನಂತರ ಎಲ್ಲರೂ ಕಾರು ಹಾಗೂ ಮೋಟಾರು ಸಡೈಕಲ್ಗಳನ್ನು ನಿಲ್ಲಿಸಿ ನಮ್ಮ ಹತ್ತಿರ ಬಂದವರೇ ಇದು ಸರಿಯಾದ ಸಮಯ ಇಲ್ಲಿಯೇ ಎಲ್ಲರನ್ನು ಹೊಡೆದು ಹಾಕಿಬೀಡೋಣ ಅನ್ನುತ್ತಾ ನಮ್ಮ ಸುತ್ತಲು 1) ಬಾಬುಗೌಡ @ ಸಾಹೇಬಗೌಡ ತಂದೆ ಬಸವಂತ್ರಾಯಗೌಡ ಪಾಟೀಲ್ 2) ಸಿದ್ದನಗೌಡ ತಂದೆ ಸಂಗನಗೌಡ ಪಾಟೀಲ್ 3) ಮಲ್ಲನಗೌಡ ತಂದೆ ಶಾಂತಗೌಡ ಪಾಟೀಲ್ 4) ರಾಮನಗೌಡ@ ಬಸನಗೌಡ ತಂದೆ ಸಂಗನಗೌಡ ಪಾಟೀಲ್ 5)ಸುಭಾಸ ತಂದೆ ಮಲ್ಲಪ್ಪ ಮುಂದಿನಮನಿ 6) ಮಧುಗೌಡ ತಂದೆ ಬಾಬುಗೌಡ ಪಾಟೀಲ್ 7) ಸಂಗನಗೌಡ ತಂದೆ ಬಸವಂತ್ರಾಯಗೌಡ ಪಾಟೀಲ್ 8) ಚಂದ್ರಶೇಖರ ತಂದೆ ಮಲ್ಲಪ್ಪ ಬಳಗನೂರ 9) ಮಲ್ಲಪ್ಪಗೌಡ ತಂದೆ ಕೆಂಚಪ್ಪಗೌಡ
ಮುಂದಿನಮನಿ 10) ಭೀಮನಗೌಡ ತಂದೆ ಬಸನಗೌಡ ಬಿರಾದಾರ 11)ಹಣಮಂತ್ರಾಯಗೌಡ ನರಕಲ್ದಿನ್ನಿ 12) ಸೋಮಶೇಖರ ತಂದೆ ಹಣಮಂತ್ರಾಯ ನರಕಲ್ದಿನ್ನಿ 13) ಭೀಮರಾಯ ತಂದೆ ಅಮರಪ್ಪ ಪೂಜಾರಿ ಎಲ್ಲರೂ ಸಾ: ಅಗತೀರ್ಥ ಮತ್ತು 14) ಜಗನ್ನಾಥ ತಂದೆ ಚಂದ್ರಕಾಂತ ಮನ್ನೂರು 15)ಸಿದ್ದಲಿಂಗಯ್ಯ ತಂದೆ ಶಾಂತಯ್ಯ ಹೀರೇಮಠ ಎಲ್ಲರೂ ಸಾ: ಅಗ್ನಿ ಹಾಗೂ 16)ಭೀಮನಗೌಡ ಪೋತರೆಡ್ಡಿ 17) ಸಿದ್ದನಗೌಡ ಪಡೇಕನೂರ ಇಬ್ಬರೂ ಸಾ: ಮುದನೂರ ಬಿ 18) ಗುರುನಾಥರೆಡ್ಡಿ ಸಾ: ಇಸಾಂಪೂರ 19) ರಾಜು ತಂದೆ ಶಾಂತಗೌಡ ಚೌಧರಿ ಸಾ: ಅಮಲಿಹಾಳ ಹಾಗೂ ಇತರರು ಇವರೆಲ್ಲರೂ ನಮಗೆ ಸುತ್ತುವರೆದು ಏನಲೇ ರಮೇಶ ಸೂಳೇ ಮಗನೇ ನೀನು ಇವತ್ತು ನಮ್ಮ ಕೈಯಿಂದ ಪಾರಾಗಲು ಅಗಲ್ಲ ಮಗನೇ ಇವತ್ತ ನಿನ್ನ ತಿಂಡಿ ಏನದ ತೀರಿಸಿಕೋ ಸೂಳೇ ಮಗನೇ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಏನು ಮಾಡಿದ್ದೇನೆ ನನಗೂ ಹಾಗೂ ನಮ್ಮ ಜನಾಂಗಕ್ಕೆ ಯಾಕೇ ಬೆನ್ನು ಹತ್ತಿದಿ ಅಂತ ಕೇಳಿದಾಗ ಬಾಬುಗೌಡ ಈತನು ಎಲೇ ಮಗನೇ ಸದ್ಯ ಊರಲ್ಲಿ ನನ್ನದೂ ಏನು ನಡೆಯದಂತೆ ಮಾಡಿದ್ದಿರೀ ಇವತ್ತ ನಿನಗೆ ಬಿಡಲ್ಲಾ ಅನ್ನುತ್ತಾ ಬಾಬುಗೌಡ ಈತನು ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತ ಗಾಯ ಮಾಡಿದ್ದು ಸಿದ್ದನಗೌಡ ಪಾಟೀಲ್ ಈತನು ಸಹ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬಲಭುಜಕ್ಕೆ ಹೊಡೆದು ಗುಪ್ತಗಾಯ ಪಡಿಸಿದನು. ಅಷ್ಟರಲ್ಲಿ ಅವರಲ್ಲಿಯಾ ಮಧುಗೌಡ ತಂದೆ ಬಾಬುಗೌಡ ಪಾಟೀಲ್ ಈತನು ಸಹ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ತೆಗೆದುಕೊಂಡು ಕೊಲೆ ಮಾಡುವ ಉದ್ದೇಶದಿಂದ ನನ್ನ ತಲೆಗೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಿದ್ದು ಆ ಏಟು ನನ್ನ ಬಲಭುಜಕ್ಕೆ ಬಡೆದು ಗುಪ್ತಗಾಯವಾಗಿದ್ದು ಇರುತ್ತದೆ. ನಂತರ ಎಲ್ಲರೂ ಕೂಡಿ ನನಗೆ ಎತ್ತಿ ನೆಲಕ್ಕೆ ಒಗೆದು ಕೈಯಿಂದ ಹೊಡೆಯುತ್ತಾ ಕಾಲಿನಿಂದ ಒದೆಯುತ್ತಿದ್ದಾಗ ಅವರಲ್ಲಿಯಾ ರಾಮನಗೌಡ ಪಾಟೀಲ್ ಹಾಗೂ ಸುಭಾಶ ಮುಂದಿನಮನಿ ಇವರು ನನ್ನ ಕೊರಳಲ್ಲಿದ್ದ ನಾಲ್ಕು ತೊಲಿ ಬಂಗಾರದ ಚೈನ ಕಿತ್ತಿಕೊಂಡರು. ಭೀಮನಗೌಡ ಪೋತರೆಡ್ಡಿ ಹಾಗೂ ಸಿದ್ದನಗೌಡ ಪಡೆಕೆನೂರ ಇವರು ತಮ್ಮ ಕೈಯಲ್ಲಿದ್ದ ಕಲ್ಲಿನಿಂದ ಹೊಟ್ಟೆಗೆ ಗುದ್ದಿ ಗುಪ್ತಗಾಯ ಪಡಿಸಿದರು. ನಂತರ ನಾನು ಅವರು ಹೊಡೆಯುತ್ತಿರುವ ಏಟು ತಾಳದೇ ಸತ್ತೆವೆಪ್ಪೋ ಅಂತಾ ಚೀರುತ್ತಿದ್ದಾಗ ಕೆಂಭಾವಿ ಕಡೆಯಿಂದ ಪರಶುರಾಮ ಬಡಿಗೇರಾ, ಭೀಮಪ್ಪ ದೊಡಮನಿ, ಪರಶುರಾಮ ದೊಡಮನಿ, ಚಿದಾನಂದ ಪೂಜಾರಿ ಹಾಗೂ ಭೀಮನಗೌಡ ಹೊಸಮನಿ ಇವರೆಲ್ಲರೂ ಬಿಡಿಸಿಕೊಳ್ಳಲು ಬಂದಾಗ ನನಗೆ ಹೊಡೆಯುತ್ತಿದ್ದವರೆಲ್ಲರೂ ಸತ್ತೆವೆಪ್ಪೋ ಅಂತೀಯ್ಯಾ ಸೂಳೆ ಮಗನೇ ನಿನಗೆ ಈಗ ಮರ್ಡರ್ ಮಾಡಿಯೇ ಬಿಡುತ್ತೇವೆ ಅಂತಾ ಅನ್ನುತ್ತಾ ತಕ್ಷಣ ನನಗೆ ಹೊಡೆಯುವುದು ಬಿಟ್ಟು ಈ ಸಲ ಉಳಿದೀದಿ ಮಗನೇ ಇನ್ನೊಮ್ಮೆ ಸಿಕ್ಕರೆ ನಿನಗೆ ಕೊಲೆ ಮಾಡದೇ ಬಿಡುವುದಿಲ್ಲ ಅಂತಾ ಅನ್ನುತ್ತಾ ಅಲ್ಲಿಂದ ಓಡಿ ಹೋದರು. ಆಗ ನನಗೆ ಭಾರೀ ಗಾಯಗಳಾಗಿದ್ದರಿಂದ ನನಗೆ ಬಿಡಿಸಲು ಬಂದಾ ಚಿದಾನಂದ ಪೂಜಾರಿ ಹಾಗೂ ಇತರರು ಸೇರಿ ನನಗೆ ಕಾರಿನಲ್ಲಿ ಹಾಕಿಕೊಂಡು ಹುಣಸಗಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಉಪಚಾರಕ್ಕಾಗಿ ತಾಳಿಕೋಟಿಯ ಖಾಸಗಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿದ್ದು ಇರುತ್ತದೆ. ಹಳೆಯ ದ್ವೇಷದಿಂದ ನನಗೆ ಕೊಲೆ ಮಡುವ ಉದ್ದೇಶದಿಂದ ಸುತ್ತುಗಟ್ಟಿ ನಿಂತು ಬಡಿಗೆ, ರಾಡು, ಕಲ್ಲಿನಿಂದ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯ ಮಾಡಿದ್ದು ಅಲ್ಲದೇ ನನ್ನ ಕೊರಳಲ್ಲಿದ್ದ ಬಂಗಾರದ ಚೈನ್ ಕಸಿದುಕೊಂಡು ಜೀವದ ಭಯ ಹಾಕಿದ ಬಾಬುಗೌಡ @ ಸಾಹೇಬಗೌಡ ತಂದೆ ಬಸವಂತ್ರಾಯಗೌಡ ಪಾಟೀಲ್ ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಅಜರ್ಿಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 85/2022 ಕಲಂ 143, 147, 148, 323, 324, 307, 395, 504, 506 ಸಂ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.