ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25-06-2021

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 90/2021 ಕಲಂ: 279,304(ಎ) ಐ.ಪಿ.ಸಿ : ಇಂದು ದಿನಾಂಕ 24.06.2021 ರಂದು 1.30 ಪಿ ಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀಮತಿ ಹಣಮಂತಿ ಗಂಡ ಮಲ್ಲಣ್ಣ ಹವಲ್ದಾರ ವಯಾ|| 28 ಜಾತಿ||ಬೇಡರ ಉ||ಕೂಲಿಕೆಲಸ ಸಾ: ಗೌಡಗೇರಾ ತಮ್ಮಲ್ಲಿ ಸಲ್ಲಿಸುವ ಪಿರ್ಯಾದಿ ಅಜರ್ಿ ಏನೆಂದರೆ, ನನಗೆ ದೇವಮ್ಮ ಅನ್ನುವ 8 ವರ್ಷದ ಹೆಣ್ಣು ಮಗಳು ಹಾಗು ಬಾಗಣ್ಣ ಅನ್ನುವ 6 ವರ್ಷದ ಗಂಡು ಮಗನಿದ್ದು ನಾನು ಹಾಗು ನನ್ನ ಗಂಡನಾದ ಮಲ್ಲಣ್ಣ ತಂದೆ ಯಂಕೂಬ ಹವಲ್ದಾರ ವ|| 32 ವರ್ಷ ಇಬ್ಬರೂ ಕೂಲಿಕೆಲಸ ಮಾಡಿಕೊಂಡು ಉಪಜೀವಿಸುತ್ತೇವೆ. ಹೀಗಿದ್ದು ಇಂದು ದಿನಾಂಕ 24.06.2021 ರಂದು ಬೆಳಿಗ್ಗೆ 11 ಗಂಟೆಗೆ ನನ್ನ ಗಂಡನಾದ ಮಲ್ಲಣ್ಣ ಈತನು ಬೈಲ ಸಿದ್ದಾಪೂರದಲ್ಲಿ ಕೆಲಸವಿದೆ ಹೋಗಿ ಬರುತ್ತೇನೆ ಅಂತ ಮನೆಯಲ್ಲಿ ಹೇಳಿ ಮೋಟರ್ ಸೈಕಲ ನಂಬರ ಕೆಎ-33 ಆರ್- 7906 ನೇದ್ದನ್ನು ತೆಗೆದುಕೊಂಡು ಹೋದನು. ನಂತರ ನಾನು 12.15 ಪಿಎಮ್ ಕ್ಕೆ ಮನೆಯಲ್ಲಿದ್ದಾಗ ನಮ್ಮೂರ ನಮ್ಮ ಜನಾಂಗದ ಶರಣಪ್ಪ ತಂದೆ ಭೀಮಣ್ಣ ಕಲಕೇರಿ ಈತನು ನಮ್ಮ ಮನೆಗೆ ಪೋನ ಮಾಡಿ ಮಾವಿನಮಟ್ಟಿ ಹೆಗ್ಗಣದೊಡ್ಡಿ ಮದ್ಯದ ರೋಡಿನಲ್ಲಿ ನನ್ನ ಗಂಡನ ಮೋಟರ್ ಸೈಕಲ ಅಪಘಾತವಾಗಿ ನನ್ನ ಗಂಡ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತ ತಿಳಿಸಿದಾಗ ಕೂಡಲೆ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನು ಮಾವಿನಮಟ್ಟಿ ಹೆಗ್ಗಣದೊಡ್ಡಿ ಮದ್ಯದ ರೋಡಿನಲ್ಲಿ ಸಂಗಣ್ಣ ತುಂಬಗಿ ಇವರ ಹೊಲದ ಪಕ್ಕದ ರೋಡಿನಲ್ಲಿ ತಲೆಯ ಹಿಂಬಾಗಕ್ಕೆ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟು ಬಿದ್ದಿದ್ದನು. ನಂತರ ನನ್ನ ಗಂಡನಿಗೆ ಆದ ಅಪಘಾತದ ಬಗ್ಗೆ ಅಲ್ಲಿಯೇ ಇದ್ದ ನಮ್ಮೂರ ಶರಣಪ್ಪ ಕಲಕೇರಿ ಈತನಿಗೆ ವಿಚಾರಿಸಲಾಗಿ ಅವರಿ ನನಗೆ ತಿಳಿಸಿದ್ದೇನೆಂದರೆ ನನ್ನ ಗಂಡನು ತನ್ನ ಮೋಟರ ಸೈಕಲ ತೆಗೆದುಕೊಂಡು ನಿಧಾನವಾಗಿ ಹೋಗುತ್ತಿದ್ದಾಗ ನಾನು ಸಹ ಮಾವಿನಮಟ್ಟಿ ಕಡೆಯಿಂದ ಬರುತ್ತಿದ್ದಾಗ ನನಗೆ ಹಿಂದಿಕ್ಕಿ ಒಂದು ಮೋಟರ್ ಸೈಕಲ ಚಾಲಕನು ತನ್ನ ಮೋಟರ ಸೈಕಲನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಸ್ವಲ್ಪ ದೂರದಲ್ಲಿ ಎದುರು ಬರುತ್ತಿದ್ದ ನನ್ನ ಗಂಡನ ಮೋಟರ ಸೈಕಲಗೆ ಬಲವಾಗಿ ಡಿಕ್ಕಿಪಡಿಸಿದ್ದರಿಂದ ನನ್ನ ಗಂಡನು ಮೋಟರ ಸೈಕಲದಿಂದ ಬಲವಾಗಿ ರೋಡಿನ ಮೇಲೆ ಬಿದ್ದು ತಲೆಯ ಹಿಂಭಾಗಕ್ಕೆ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತ ತಿಳಿಸಿದ್ದು ನಂತರ ನನ್ನ ಗಂಡನ ಮೋಟರ್ ಸೈಕಲಗೆ ಡಿಕ್ಕಿಪಡಿಸಿದ, ಅಲ್ಲಿಯೇ ಬಿದ್ದ ಮೋಟರ ಸೈಕಲ ನಂಬರ ನೋಡಲಾಗಿ ಕೆಎ-32 ಡಬ್ಲೂ-2291 ಅಂತ ಇದ್ದು ಅದರ ಚಾಲಕನ ಬಗ್ಗೆ ವಿಚಾರಿಸಲಾಗಿ ಅನೀಲ ತಂದೆ ಸಿದ್ದರಾಯ ಹೂಗಾರ ಸಾ|| ಮಾವಿನಮಟ್ಟಿ ಅಂತ ಗೊತ್ತಾಗಿದ್ದು ಆತನಿಗೂ ಸಹ ಕಣ್ಣಿಗೆ ಗಾಯವಾಗಿ ಆಸ್ಪತ್ರೆಗೆ ಹೋಗಿರುವದಾಗಿ ತಿಳಿದು ಬಂದಿದ್ದು ಇರುತ್ತದೆ. ಕಾರಣ ಸದರಿ ಅಪಘಾತಕ್ಕೆ ಮೋಟರ ಸೈಕಲ ನಂಬರ ಕೆಎ-32 ಡಬ್ಲೂ-2291 ನೇದ್ದರ ಚಾಲಕ ಅನೀಲ ತಂದೆ ಸಿದ್ದರಾಯ ಹೂಗಾರ ಸಾ|| ಮಾವಿನಮಟ್ಟಿ ಈತನ ಅತೀವೇಗ ಹಾಗು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 90/2021 ಕಲಂ 279, 304[ಎ] ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ : 36/2021 ಕಲಂ 279, 338 ಐಪಿಸಿ : ಇಂದು ದಿನಾಂಕ 24/06/2021 ರಂದು ಸಮಯ 12 ಪಿ.ಎಂ.ದ ಸುಮಾರಿಗೆ ಯಾದಗಿರಿ ನಗರದ ಹೊಸ ಬಸ್ ನಿಲ್ದಾಣದ ಹತ್ತಿರ ವಿಜಯಾ ಬ್ಯಾಂಕ್ ಮುಂದಿನ ಮುಖ್ಯ ರಸ್ತೆ ಮೇಲೆ ಈ ಕೇಸಿನ ಪಿಯರ್ಾದಿ ಗಾಯಾಳು ಪರಶುರಾಮ ಇವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಕೇಸಿನ ಆರೋಪಿತ ಹರೀಶ್ ಈತನು ತನ್ನ ಮೋಟಾರು ಸೈಕಲ್ ನಂ. ಕೆಎ-33, ವಾಯ್-9692 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಗಾಯಾಳುವಿಗೆ ನೇರವಾಗಿ ಡಿಕ್ಕಿಕೊಟ್ಟಿದ್ದರಿಂದ ಅಪಘಾತ ಜರುಗಿದ್ದು, ಈ ಅಪಘಾತದಲ್ಲಿ ಬಲಗಾಲಿನ ತೊಡೆಗೆ ಮತ್ತು ಬಲಗೈಗೆ ಭಾರೀ ಗುಪ್ತಗಾಯವಾಗಿ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯ ಹಾಗೂ ಹಣೆಗೆ ರಕ್ತಗಾಯವಾಗಿರುತ್ತದೆ. ಈ ಅಪಘಾತಕ್ಕೆ ಕಾರಣರಾದ ಮೋಟಾರು ಸೈಕಲ್ ಸವಾರನ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಅಂತಾ ತಡವಾಗಿ ಇಂದು ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 36/2021 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 97/2021 ಕಲಂ. 279, 337, 338, ಐಪಿಸಿ : ಇಂದು ದಿನಾಂಕ 24.06.2021 ರಂದು ಬೆಳಿಗ್ಗೆ 10.00 ಗಂಟೆಗೆ ಶ್ರೀ ಧನರಾಜ ತಂದೆ ಗೋವರ್ಧನ ರಾವ ವಯ|| 29 ವರ್ಷ ಜಾ|| ದೇವಾಸಿ ಸಾ|| ಧಾನತಾ ತಾ|| ಸಾಚೋರ ಜಿ|| ಜಾಲೂರ ರಾಜ್ಯ|| ರಾಜಸ್ಥಾನ ಇವರು ಠಾಣೆಗೆ ಬಂದು ಒಂದು ಗಣಕೀಕೃತ ದೂರು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೇನಂದರೆ, ನನ್ನ ಗೆಳೆಯ ಚೇನಸಿಂಗ ಇವನ ಬಾಲಚೇಡ, ಬದ್ದೇಪಲ್ಲಿ ಮಾರ್ಗವಾಗಿ ಮಕ್ತಲ ಕಡೆಗೆ ತನ್ನ ಟಿವಿ.ಎಸ್. ಸ್ಟಾರಸಿಟಿ ಬೈಕ ನಂ. ಟಿಎಸ.-06 ಇ.ಎ- 2625 ನೇದ್ದರ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಹೊರಟಿದ್ದಾಗ ಬಾಲಚೇಡ ನಾಗೇಶ ತಂದೆ ಬಸಣ್ಣ ಉಪ್ಪಾರ ಜಮೀನಿನ ಮಾವಿನ ತೋಟಕ್ಕೆ ಹೋಗುವ ಕ್ರಾಸ ಹತ್ತಿರ ಒಮ್ಮೆಲೆ ಬೈಕ ಸ್ಕಿಡ ಆಗಿ ಬಿದ್ದು ಅಪಘಾತ ಸಂಭವಿಸಿದ್ದು ಸದರಿಯವನಿಗೆ ಅಂಬುಲೆನ್ಸದಲ್ಲಿ ಸರಕಾರಿ ಆಸ್ಪತ್ರೆ ಸೈದಾಪೂರಕ್ಕೆ ತಂದಿದು ಹೋಗಿ ನೋಡಲಾಗಿ ಚೇನಸಿಂಗ ಈತನ ಹಣೆಗೆ ಭಾರಿ ರಕ್ತಗಾಯವಾಗಿದ್ದು, ಬಾಯಿಗೆ, ಎರಡು ಕೈಗಳಿಗೆ ಮತ್ತು ಬಲಗಾಲಿಗೆ ರಕ್ತಗಾಯ ವಾಗಿದ್ದು ಕಂಡುಬಂದಿತು. ಸದರಿಯವನಿಗೆ ಮಾತನಾಡಿಸಿದರೆ ಮಾತನಾಡಲಿಲ್ಲ. ಹೆಚ್ಚಿನ ಉಪಚಾರ ಕುರಿತು ಬಾಲಂಕು ಆಸ್ಪತ್ರೆ ರಾಯಚೂರಗೆ ತೆಗೆದುಕೊಂಡು ಹೋಗಿದ್ದು, ಅತಿವೇಗ ಮತ್ತು ಅಲಕ್ಷತನದಿಂದ ಬೈಕ ಓಡಿಸಿಕೊಂಡು ಹೋಗಿ ಬೈಕ ಸ್ಕಿಡ ಆಗಿ ಬಿದ್ದು ಗಂಭಿರ ಸ್ವರೂಪದ ಗಾಯ ಮಾಡಿಕೊಂಡ ಚೇನಸಿಂಗ ತಂದೆ ದಲಪತಸಿಂಗ ವಯ||33 ವರ್ಷ, ಜಾ|| ರಾಜಪೂತ ಉ|| ಪೈಪು ಅಂಗಡಿ ಸಾ|| ಮೇವಿಕಲ್ಲಾ ತಾ|| ಜಿ|| ಪಾಲಿ ರಾಜ್ಯ. ರಾಜಸ್ಥಾನ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 97/2021 ಕಲಂ. 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 98/2021 ಕಲಂ. 279. 337, 338 ಐಪಿಸಿ : ದಿನಾಂಕ: 24-06-2021 ರಂದು ಮದ್ಯಾಹ್ನ 01-45 ಗಂಟೆಗೆ ಪಿಯಾಧಿದಾರು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಸವೆನೆಂದರೆ ದಿನಾಂಕ: 22-06-2021 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಬಳಿಚಕ್ರ ಗ್ರಾಮದಿಂದ ಜೈಗ್ರಾಮ ಗ್ರಾಮಕ್ಕೆ ಕವಳಿ ಚೀಲಗಳನ್ನು ಬುಲೇರೋ ವಾಹನದಲ್ಲಿ ಹಾಕಿಕೊಂಡು ಅಕ್ಕಿ ಮಿಲಗೆ ಹೋಗಿ ಅಲ್ಲಿ ಕವಳಿಗಳನ್ನು ಮಿಲಗೆ ಹಾಕಿಸಿಕೊಂಡು ವಾಪಸ ಬಳಿಚಕ್ರ ಗ್ರಾಮಕ್ಕೆ ಬಳಿಚಕ್ರ-ಕಾಳಬೆಳಗುಂದಿ ರೋಡಿನ ಮೇಲೆ ಬಳಿಚಕ್ರ ಗ್ರಾಮದ ಬೋರವೆಲ್ ಹತ್ತಿರ ರಾತ್ರಿ 10-30 ಗಂಟೆಗೆ ಬುಲೇರೊ ಪಿಕಪ್ ವಾಹನದ ಇಂಜಿನ್ ನಂ. ಖಿಐಐ4ಒ83524 ಹಾಗೂ ಚೆಸ್ಸಿ ನಂ. ಒಂ1ಚಕ2ಖಿಐಏಒ6ಂ27931 ನೇದ್ದರ ವಾಹನ ಚಾಲಕನು ತಾನು ನಡೆಸುವ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ರೋಡಿನ ಪಕ್ಕದ ತಗ್ಗಿಗೆ ಹಾಕಿದ್ದರಿಂದ ವಾಹನದಲ್ಲಿ ಕುಳಿತವರಿಗೆ ಭಾರಿ ಮತ್ತು ಸಾದಾ ಸ್ವರೂಪದ ಗಾಯಗಳು ಅಗಿರುತ್ತವೆ ವಾಹನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾಧಿ ಸಾರಂಶ.

ಇತ್ತೀಚಿನ ನವೀಕರಣ​ : 25-06-2021 03:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080