ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 25-06-2022


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 102/2022 ಕಲಂ. 323,324, 504, 506 ಸಂಗಡ 34 ಐಪಿಸಿ ಮತ್ತು ಕಲಂ. 3(1)(ಆರ್), 3(1)(ಎಸ್), 3(2)(ವಿ-ಎ), ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989: ಇಂದು ದಿನಾಂಕಃ 24/06/2022 ರಂದು 12-15 ಪಿ.ಎಮ್ ಕ್ಕೆ ಫಿಯರ್ಾದಿ ಶ್ರೀ ದೇವಿಂದ್ರಪ್ಪ ತಂದೆ ಹಣಮಂತ ಮೇಟಿಗೌಡ್ರು ಸಾ: ಶಾಂತಪೂರ ಇವರು ಠಾಣೆಗೆ ಹಾಜರಾಗಿ ದೂರು ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ತಾಯಿಯಾದ ಶ್ರೀಮತಿ ವಜಲಮ್ಮ ಗಂಡ ಹಣಮಂತ ಮೇಟಿಗೌಡ್ರು ವಯ: 80 ವರ್ಷ ಇವಳು ಶಾಂತಪೂರ ಗ್ರಾಮದಲ್ಲಿರುವ ನಮ್ಮ ಮನೆಯಲ್ಲಿ ಒಬ್ಬಳೇ ಇರುತ್ತಾಳೆ. ದಿನಾಂಕಃ 26/04/2022 ರಂದು 3-30 ಪಿ.ಎಮ್ ಸುಮಾರಿಗೆ ನಮ್ಮ ಮನೆಯ ಪಕ್ಕದವರಾದ ಈಡಿಗ ಜನಾಂಗದ 1) ಲಕ್ಷ್ಮೀ ಗಂಡ ಮಾನಯ್ಯ ಈಳಿಗೇರ ಹಾಗು ಆಕೆಯ ಮಗನಾದ 2) ಯಲ್ಲಯ್ಯ @ ರಡ್ಡಿ ತಂದೆ ಮಾನಯ್ಯ ಈಳಿಗೇರ ಇಬ್ಬರೂ ನಮ್ಮ ಮನೆಯ ಪಕ್ಕದಲ್ಲಿ ಅಂಗಡಿ ಹಾಕುವ ಸಲುವಾಗಿ ತಗ್ಗು ತೊಡುವಾಗ ನಮ್ಮ ಮನೆಯ ಬುನಾದಿ ಕಲ್ಲುಗಳನ್ನು ಕಿತ್ತುತ್ತಿರುವದನ್ನು ನಮ್ಮ ತಾಯಿಯವರು ನೋಡಿ, ಅವರಿಗೆ ಬುನಾದಿ ಕಲ್ಲುಗಳನ್ನು ತಗೆಯಬೇಡಿರಿ, ನಮ್ಮ ಮನೆ ಬೀಳುತ್ತದೆ ಅಂತ ಹೇಳಿದ್ದಕ್ಕೆ, ಲಕ್ಷ್ಮೀ ಇವಳು ಲೇ ಬ್ಯಾಡರ ಸಣ್ಣ ಜಾತಿಯ ಸೂಳಿ, ನಾವು ಅಂಗಡಿ ಹಾಕಲು ಒಂದೆರಡು ಕಲ್ಲು ತಗೆದರೆ ತಡಿತಿಯೇನು, ನಿನ್ನ ಸೊಕ್ಕು ಬಹಳ ಆದ, ಇವತ್ತು ನಿನ್ನ ಸೊಕ್ಕು ಮುರಿತಿವಿ ರಂಡಿ ಅನ್ನುತ್ತ ತನ್ನ ಮಗನಿಗೆ ಏನಾದರೂ ಆಗಲಿ ಹೊಡಿ ಇವಳಿಗೆ ಅಂತ ಹೇಳಿದ್ದರಿಂದ ಯಲ್ಲಯ್ಯ ಇತನು ಅಲ್ಲೆ ಬಿದ್ದಿದ್ದ ಒಂದು ಬಡಿಗೆ ತಗೆದುಕೊಂಡು ನನ್ನ ತಾಯಿಯ ತಲೆಗೆ ಹೊಡೆದಿದ್ದರಿಂದ ನನ್ನ ತಾಯಿ ನೆಲಕ್ಕೆ ಬಿದ್ದಿರುತ್ತಾಳೆ. ಆಗ ಲಕ್ಷ್ಮೀ ಇವಳು ನನ್ನ ತಾಯಿಯ ಕುದಲು ಹಿಡಿದು ಎಳೆದಾಡಿ ಹೊಡೆಯುತ್ತಿರುವಾಗ ನನ್ನ ತಾಯಿ ಚೀರಾಡುವದನ್ನು ನೋಡಿ ಅಲ್ಲೆ ನಿಂತಿದ್ದ ನಮ್ಮೂರಿನ ಆನಂದ ತಂದೆ ದೇವಿಂದ್ರಪ್ಪ ಕುಂಬಾರ ಹಾಗು ಇತರರು ಬಿಡಿಸಿ ನನ್ನ ತಾಯಿಯನ್ನು ಮನೆಗೆ ಕಳಿಸಿದ್ದು, ಆಗ ಅವರಿಬ್ಬರೂ ಜೀವದ ಬೆದರಿಕೆ ಹಾಕಿರುತ್ತಾರೆ. ನಂತರ ಸಾಯಂಕಾಲ ನನ್ನ ತಾಯಿ ಸದರಿ ವಿಷಯ ನನಗೆ ಫೋನ ಮಾಡಿ ತಿಳಿಸಿದಾಗ ನಾನು ಶಿವಮೊಗ್ಗದಿಂದ ಹೊರಟು ಮರುದಿವಸ ದಿನಾಂಕಃ 27/04/2022 ರಂದು ನಮ್ಮ ಮನೆಗೆ ಬಂದಿರುತ್ತೇನೆ. ಆಗ ನನ್ನ ತಾಯಿಗೆ ಮೇಲ್ನೋಟಕ್ಕೆ ಯಾವುದೇ ಗಾಯಗಳಾಗಿರದ ಕಾರಣ ಹಾಗು ಅಕ್ಕ-ಪಕ್ಕದ ಮನೆಯವರು ಸಣ್ಣ-ಪುಟ್ಟ ಜಗಳ ಮಾಡಿಕೊಂಡಿರಬಹುದೆಂದು ಸುಮ್ಮನಾದೇನು. ನಂತರ 3-4 ದಿನ ಬಿಟ್ಟು ನನ್ನ ತಾಯಿಯವರು ತಲೆ ಬಹಳ ನೋಯುತ್ತಿದೆ ಅಂತ ಹೇಳಿಲಾರಂಭಿಸಿದರಿಂದ ದಿನಾಂಕಃ 02/05/2022 ರಂದು ಮತ್ತು ದಿನಾಂಕಃ 06/05/2022 ರಂದು ನಾನು ನನ್ನ ತಾಯಿಯವರಿಗೆ ಲಿಂಗಸುಗೂರಿಗೆ ಕರೆದುಕೊಂಡು ಹೋಗಿ ಡಾ|| ನಾಗನಗೌಡ ಪಾಟೀಲ್ ಇವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರಿಂದ ದಿನಾಂಕ: 07/05/2022 ರಂದು ಕಣ್ವ ಆಸ್ಪತ್ರೆ ರಾಯಚೂರಿನಲ್ಲಿ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿರುತ್ತೇನೆ. ನನ್ನ ತಾಯಿಯವರಿಗೆ ನಾವು ಚಿಕಿತ್ಸೆ ಕೊಡಿಸುತ್ತಿರುವ ಚಿಂತೆಯಲ್ಲಿ ಇಷ್ಟು ದಿವಸ ನಾವು ದೂರು ಕೊಡದೇ, ನಂತರ ನಾವು ಮನೆಯಲ್ಲಿ ಚಚರ್ೆ ಮಾಡಿ ಇಂದು ತಡವಾಗಿ ದೂರು ನೀಡಿರುತ್ತೇವೆ ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 102/2022 ಕಲಂ. 323, 324, 504, 506 ಸಂಗಡ 34 ಐಪಿಸಿ ಮತ್ತು ಕಲಂ. 3(1)(ಆರ್), 3(1)(ಎಸ್), 3(2)(ವಿ-ಎ), ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 105/2022 ಕಲಂ 143 147 148 323, 324 354, 307, 504 506 ಸಂಗಡ 149 ಐಪಿಸಿ ಮತ್ತು 3(1) (ಡಿ) () (ತಿ) 3(2)(ಗಿ) ಎಸ್.ಸಿ/ಎಸ್.ಟಿ ಪಿಎ ಎಕ್ಟ್-1989: ಪ್ರಕರಣದ ಫಿಯರ್ಾದಿಯ ಮನೆಯ ಗೋಡೆಗೆ ಆರೋಪಿತರು ನೀರಿನ ಪೈಪ್ ಗಳನ್ನು ಹಾಕಿದ್ದು ಪಿರ್ಯಾಧಿಯು ಈ ಪೈಪ್ಗಳನ್ನು ತೆಗೆದುಕೊಳ್ಳಿರಿ ಅಂತಾ ಹೇಳಿದಕ್ಕೆ ಆರೋಪಿತರೆಲ್ಲರೂ ಗುಂಪುಕಟ್ಟಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಕೈಯಲ್ಲಿ ರಾಡ ಮತ್ತು ಕಟ್ಟಿಗೆಳನ್ನು ಹಿಡಿದುಕೊಂಡು ಬಂದು ಪಿರ್ಯಾಧಿಗೆ ಮತ್ತು ಪಿರ್ಯಾಧಿ ಗಂಡನಿಗೆ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ರಾಡು, ಕಟ್ಟಿಗೆ ಮತ್ತು ಕೈಯಿಂದ ಹೊಡೆ ಬಡೆ ಮಾಡಿ ಪಿರ್ಯಾಧಿಗೆ ಮಾನಭಂಗ ಪಡಿಸಲು ಜೀವ ಬೆದರಿಕೆ ಹಾಕಿ ಹೋಗಿದ್ದರ ಬಗ್ಗೆ ಪಿರ್ಯಾಧಿ ವಗೈರೆ ಸಾರಾಂಶ ಇರುತ್ತದೆ.

 


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 103/2022 ಕಲಂ: 498(ಎ), 323, 504, 506 ಸಂಗಡ 149 ಐಪಿಸಿ: ಇಂದು ದಿನಾಂಕ:24/06/2022 ರಂದು 08:30 ಪಿ.ಎಂ. ಕ್ಕೆ ಶ್ರೀಮತಿ ಫಾತಿಮಾ ಬೇಗಂ ಗಂಡ ಖಾದರಬಾಷಾ ಬಾಗವಾನ ವಯಸ್ಸು|| 28 ಜಾ|| ಮುಸ್ಲಿಂ ಉ|| ಮನೆಗೆಲಸ ಸಾ|| ಜಾಲಿಬೆಂಚಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನನಗೆ ಸುಮಾರು 10 ವರ್ಷಗಳ ಹಿಂದೆ ಸುರಪುರ ತಾಲೂಕಿನ ಚಾಲಿಬೆಂಚಿ ಗ್ರಾಮದ ಖಾದಾರಬಾಷಾ ತಂದೆ ನಬಿಸಾಬ ಬಾಗವಾನ ಈತನೊಂದಿಗೆ ಮದುವೆ ಮಾಡಿದ್ದು ಇರುತ್ತದೆ. ನಮ್ಮ ವೈವಾಹಿಕ ಜೀವನದಲ್ಲಿ ನನಗೆ ಮಕ್ಕಳು ಆಗಿರುವುದಿಲ್ಲ. ಮದುವೆಯಾದ ಒಂದು ವರ್ಷ ಮಾತ್ರ ಇಬ್ಬರು ಗಂಡ ಹೆಂಡತಿ ಚನ್ನಾಗಿ ಇದ್ದೇವು. ಈಗ ಸುಮಾರು 9 ವರ್ಷದಿಂದ ನನ್ನ ಗಂಡ ಖಾದಾರಬಾಷಾ ಮತ್ತು ಅತ್ತೆ, ಮಾವ, ಮೈದುನ, ನಗೆಣಿ ಎಲ್ಲರು ಕೂಡಿ ನಿನಗೆ ಮಕ್ಕಳು ಆಗಿರುವುದಿಲ್ಲ ಅಂತಾ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಹೊಡೆ ಬಡೆ ಮಾಡುತ್ತಿದ್ದರು. ನಾನು ಮುಂದೆ ಸರಿ ಹೋಗಬಹುದು ಅಂತಾ ತಿಳಿದು ಸುಮ್ಮನಿದ್ದೆನು. ನಾನು ಆಗಾಗ ನನ್ನ ಅಕ್ಕ ತಂಗಿಯರ ಮುಂದೆ ಹೇಳಿದಾಗ ಸಂಸಾರದಲ್ಲಿ ಇದು ಇದ್ದಿದೆ ಹೊಂದಿಕೊಂಡು ಹೋಗಬೇಕು ಅಂತಾ ಬುದ್ದಿ ಮಾತು ಹೇಳಿ ಕಳುಹಿಸುತ್ತಿದ್ದರು. ಆದರೂ ಕೂಡ ನನ್ನ ಗಂಡನ ಮನೆಯವರು ನನಗೆ ಕಿರುಕುಳ ಕೊಡುತ್ತಾ ಬಂದಿದ್ದರಿಂದ ನಾನು ಸುಮಾರು 15 ದಿನದಿಂದ ನನ್ನ ತವರೂರಾದ ಕುಳಗೇರಾ ಗ್ರಾಮದಲ್ಲಿ ಇದ್ದೇನು. ಹೀಗಿದ್ದು ದಿನಾಂಕ:23/06/2022 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಕ್ಕಂದಿರಾದ ಜರೀನಬೆಗಂ ಗಂಡ ಆದಮಸಾಬ ಬಾಗವಾನ, ಹುಸೇನಬಿ ಗಂಡ ರಾಜ ಮಹ್ಮದ ಬಾಗವಾನ, ತಂಗಿಯಾದ ಫರೀನ ಬೆಗಂ ಗಂಡ ಅಲ್ತಾಫ್ ಬಾಗವಾನ ಎಲ್ಲರು ಕೂಡಿ ಜಾಲಿಬೆಂಚಿ ಗ್ರಾಮದ ನನ್ನ ಗಂಡನ ಮನೆಗೆ ಹೋಗಿದ್ದೆವು, ಮನೆಯಲ್ಲಿ ನನ್ನ ಗಂಡನಾದ 1) ಖಾದಾರಬಾಷಾ ತಂದೆ ನಬಿಸಾಬ ಬಾಗವಾನ, ಮಾನವನಾದ 2) ನಬಿಸಾಬ ತಂದೆ ಖಾಜಾಸಾಬ ಬಾಗವಾನ, ಅತ್ತೆಯಾದ 3) ನಬೂಮಾ ಗಂಡ ನಬಿಸಾಬ ಬಾಗವಾನ, ಮೈದುನನಾದ 4) ಅಬ್ದುಲ್ ಗನಿ ತಂದೆ ನಬಿಸಾಬ ಬಾಗವಾನ, ನೆಗೆಣಿಯಾದ 5) ಸೂಫಿಯಾ ಸುಲ್ತಾನ ತಂದೆ ನಬಿಸಾಬ ಬಾಗವಾನ ಎಲ್ಲರು ಮನೆಯಲ್ಲಿ ಇದ್ದರು. ನನ್ನ ಅಕ್ಕಳಾದ ಜರೀನ ಬೇಗಂ ಇವಳು ಅವರಿಗೆ ಯಾಕೆ ನನ್ನ ತಂಗಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಡುತ್ತಿರಿ ಅಂತಾ ಅನ್ನುತ್ತಿದ್ದಾಗ ಅವರಲ್ಲಿಯ ನನ್ನ ಗಂಡನು ಈಕೆಗೆ ಮಕ್ಕಳು ಆಗಿರುವುದಿಲ್ಲ ಮತ್ತು ಆಕೆಗೆ ಅಡುಗೆ ಸರಿಯಾಗಿ ಮಾಡಲಿಕೆ ಬರಲ್ಲ ಅಂತಾ ಅನ್ನುತ್ತಾ ಏನಲೇ ಸೂಳೆ ನೀನು ನಿಮ್ಮ ಅಕ್ಕ ತಂಗಿಯರಿಗೆ ಕರೆದುಕೊಂಡು ಬಂದಿದಿಯಾ ಅಂತಾ ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಾನು ಯಾಕೆ ಈ ರೀತಿ ಬೈಯುತ್ತಿರಿ ಅಂತಾ ಕೇಳಿದ್ದಕ್ಕೆ ನನ್ನ ಗಂಡನು ನನಗೆ ಕೈಯಿಂದ ಕಪಾಳಕ್ಕೆ ಹೊಡೆದನು. ಮಾವ ನಬಿಸಾಬ ಮತ್ತು ಮೈದುನ ಅಬ್ದುಲ್ ಗನಿ ಇಬ್ಬರು ಕೂಡಿ ಏನಲೇ ಸೂಳೆ ಅವರಿಗೆ ಕರೆದುಕೊಂಡು ಬಂದರೆ ನಾವೇನು ಮಾಡೋಣ ಅಂತ ಅವಾಚ್ಯವಾಗಿ ಬೈದರು. ಅತ್ತೆಯಾದ ನಬೂಮಾ ಇವಳು ನನಗೆ ಕೂದಲು ಹಿಡಿದು ಎಳೆದಾಡಿ ಕೈಯಿಂದ ಬೆನ್ನಿಗೆ ಹೊಟ್ಟೆಗೆ ಹೊಡೆದಳು. ನೆಗೆಣಿಯಾದ ಸುಫಿಯಾ ಸುಲ್ತಾನ ಇವಳು ಕೈಯಿಂದ ಕಪಾಳಕ್ಕೆ ಹೊಡೆದಳು. ಆಗ ಅಲ್ಲೆ ಇದ್ದ ನನ್ನ ಅಕ್ಕಂದಿರಾದ ಜರಿನಬೆಗಂ ಗಂಡ ಆದಾಮಸಾಬ ಬಾಗವಾನ, ಹುಸೇನಬಿ ಗಂಡ ರಾಜ ಮಹ್ಮದ ಬಾಗವಾನ ಹಾಗೂ ತಂಗಿಯಾದ ಫರಿನ ಬೆಗಂ ಗಂಡ ಅಲ್ತಾಫ್ ಬಾಗವಾನ ಎಲ್ಲರು ಕೂಡಿ ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಆಗ ಅವರೆಲ್ಲರು ಇವರು ಬಿಡಿಸಿದಕ್ಕೆ ನಿನ್ನ ಜೀವ ಸಹಿತಾ ಬಿಟ್ಟಿವಿ ಇಲ್ಲಂದರೆ ನಿನ್ನ ಜೀವ ಸಹಿತ ಬಿಡುತ್ತಿರಲಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಮನೆಯಲ್ಲಿ ಹೋದರು. ನನಗೆ ಸಣ್ಣ ಪುಟ್ಟ ಒಳಪೆಟ್ಟಾಗಿದ್ದರಿಂದ ನಾನು ಆಸ್ಪತ್ರೆಗೆ ತೊರಿಸಿಕೊಂಡಿರುವುದಿಲ್ಲ ಮತ್ತು ನಾನು ನನ್ನ ಅಕ್ಕ ತಂಗಿಯರ ಜೊತೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತ ಬಂದು, ನನಗೆ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿದ ನನ್ನ ಗಂಡ ಮತ್ತು ಆತನ ಮನೆಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 103/2022 ಕಲಂ: 498(ಎ), 323, 504, 506 ಸಂಗಡ 149 ಐಪಿಸಿ ನೇದ್ದರ ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

 


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 89/2022 ಕಲಂ: 143, 147, 148, 504, 109, 307, 324, 323, 506 ಸಂ 149 ಐಪಿಸಿ::ದಿನಾಂಕ:23/06/2022 ರಂದು 11-30 ಪಿಎಮ್ ಕ್ಕೆ ರಾಯಚೂರು ಸದರ ಬಜಾರ ಪೊಲೀಸ್ ಠಾಣೆಯಿಂದ ಈ-ಮೇಲ್ ಮುಖಾಂತರ ಅಸಲ್ಟ್ ಎಮ್.ಎಲ್.ಸಿ ಮಾಹಿತಿ ಸ್ವಿಕೃತವಾಗಿದ್ದು, ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು ಹೊರಟು ದಿನಾಂಕ:24/06/2022 ರಂದು 2-30 ಎಎಮ್ ಕ್ಕೆ ಸದರ ಬಜಾರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಎಮ್.ಎಲ್.ಸಿ ಸ್ವಿಕೃತ ಮಾಡಿಕೊಂಡು ಅಲ್ಲಿಂದ ರಾಯಚೂರು ಸುರಕ್ಷಾ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿದ್ದ ಗಾಯಾಳು ಧರ್ಮಣ್ಣಗೌಡ ತಂದೆ ಸೋನಮಗೌಡ ಜ್ಯೋತಿರೆಡ್ಡಿ, ವ:33, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ಕೋಡಾಲ ತಾ:ವಡಗೇರಾ ಇವರು ಗಣಕಿಕೃತ ದೂರು ಅಜರ್ಿ ಸಲ್ಲಿಸಿದ್ದನ್ನು 6-30 ಎಎಮ್ ಕ್ಕೆ ಸ್ವಿಕೃತ ಮಾಡಿಕೊಂಡು 8-45 ಎಎಮ್ ಕ್ಕೆ ಮರಳಿ ಠಾಣೆಗೆ ಬಂದೆನು. ಸದರಿ ದೂರು ಅಜರ್ಿ ಸಾರಾಂಶವೇನಂದರೆ ನಮ್ಮ ಗ್ರಾಮದಲ್ಲಿರುವ ಕೋಡಾಲ ಶ್ರೀ ಗಡ್ಡೆ ಬಸವೇಶ್ವರ ಮಠದ ಆಸ್ತಿ ಜಮೀನು ಸವರ್ೆ ನಂ. 221 ವಿಸ್ತೀರ್ಣ 12 ಎಕರೆ 26 ಗುಂಟೆ ಇದ್ದು, ಸದರಿ ಜಮೀನನ್ನು ಸುಮಾರು ವರ್ಷಗಳಿಂದ ನಮ್ಮೂರ ಚನ್ನಾರೆಡ್ಡಿ ತಂದೆ ಸಿದ್ದಣ್ಣ ಕುಲಕಣರ್ಿ ಈತನು ಮಠಕ್ಕೆ ಯಾವುದೇ ರೀತಿಯ ಲೀಜು ವಗೈರೆ ಕೊಡದೆ ಅನಭೋಗಿಸುತ್ತಾ ಬರುತ್ತಿದ್ದನು. ಹೀಗಾಗಿ ಕಳೆದ ವರ್ಷ ನಾನು ಮತ್ತು ಮಲ್ಲಿಕಾಜರ್ುನ ತಂದೆ ಬಸವರಾಜಪ್ಪ ಕಡಬೂರ, ಪಂಪಾರೆಡ್ಡಿ ತಂದೆ ರಾಮರೆಡ್ಡಿ ಮಾಡಗೇರಿ, ಮರೆಪ್ಪ ಚೆಟ್ಟಿ, ಜಮಾಲ ಮತ್ತು ಇತರ ಗ್ರಾಮದ ಎಲ್ಲಾ ಪ್ರಮುಖರು ಸೇರಿ ಸದರಿ ಚನ್ನಾರೆಡ್ಡಿ ಈತನಿಗೆ ನೀನು ಮಠದ ಆಸ್ತಿ ಸುಮಾರು 10-12 ಎಕರೆ ಜಮೀನನ್ನು ಪುಕ್ಕಟ್ಟೆಯಾಗಿ ಅನುಭೋಗಿಸುತ್ತಾ ಬರುತ್ತಿದ್ದಿ, ಮಠಕ್ಕೆ ಯಾವುದೇ ಧನ ಸಹಾಯವಾಗಲಿ, ಲೀಜು ಆಗಲಿ ಕೊಡುತ್ತಿಲ್ಲ. ಇದರಿಂದ ಮಠ ಬೆಳವಣಿಯಾಗುತ್ತಿಲ್ಲ ಎಂದು ವಿಚಾರಿಸಿ, ನೀನು ಮಠದ ಆಸ್ತಿಯಾದ ಜಮೀನು ಮಠಕ್ಕೆ ಬಿಟ್ಟು ಕೊಡು ಎಂದು ಹೇಳಿದಾಗ ಸದರಿ ಚನ್ನಾರೆಡ್ಡಿ ಮತ್ತು ಅವನ ಮಕ್ಕಳ ನಾವು ಮಠದ ಆಸ್ತಿ ಜಮೀನು ಬಿಡಲ್ಲ ಮಕ್ಕಳೆ ನೀವು ಯಾರು ನಮಗೆ ಕೇಳುವವರು ಎಂದು ನಮ್ಮೊಂದಿಗೆ ಜಗಳಕ್ಕೆ ಬರುವುದು, ಮಕ್ಕಳೆ ಮಠದ ಜಮೀನಿನ ವಿಷಯದಲ್ಲಿ ನೀವು ಯಾರಾದರೂ ತಲೆ ತೂರಿಸಿದೆರೆ ನಿಮಗೆ ಒಬ್ಬೊಬ್ಬರಿಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕುತ್ತಾ ಬರುತ್ತಿದ್ದರು. ಸದರಿ ಚನ್ನಾರೆಡ್ಡಿಯು ನಮಗೆ ಒಬ್ಬೊಬ್ಬರಿಗೆ ಸಿಕ್ಕಸಿಕ್ಕಲ್ಲಿ ಜೀಪಿನಿಂದ ಗುದ್ದಿ ಖಲಾಸ ಮಾಡ್ರಿ ಈ ಮಕ್ಕಳಿಗೆ ಬಂದಿದ್ದು, ನಾನು ನೋಡಿಕೊಳ್ಳುತ್ತೇನೆ ಎಂದು ತನ್ನ ಮಕ್ಕಳಿಗೆ ನಮಗೆ ಕೊಲೆ ಮಾಡಲು ಪ್ರಚೋದನೆ ಕೊಡುತ್ತಿದ್ದನು. ನಿನ್ನೆ ದಿನಾಂಕ:23/06/2022 ರಂದು ಬೆಳಗ್ಗೆ ನಾನು ಮತ್ತು ನಮ್ಮ ಗ್ರಾಮದ ಸುರೇಶ ತಂದೆ ಆದೇಶ ಇಬ್ಬರೂ ಕೂಡಿ ಮೋಟರ್ ಸೈಕಲ್ ನಂ. ಕೆಎ 04 ಇಎಸ್ 3125 ನೇದ್ದರ ಮೇಲೆ ಹತ್ತಿ ಬೀಜ ತರಲು ಯಾದಗಿರಿಗೆ ಬಂದೆವು. ನಾವು ಯಾದಗಿರಿಯಲ್ಲಿ ಹತ್ತಿ ಬೀಜ ಖರೀದಿ ಮಾಡಿಕೊಂಡು ಮದ್ಯಾಹ್ನ 3 ಗಂಟೆ ಸಮಯದಲ್ಲಿ ಯಾದಗಿರಿಯಿಂದ ಮರಳಿ ನಮ್ಮೂರಿಗೆ ಹೊರಟೇವು. ನಾನು ಮೋಟರ್ ಸೈಕಲ್ ಚಲಾಯಿಸುತ್ತಿದ್ದು, ನನ್ನ ಹಿಂದೆ ಸುರೇಶ ಕುಂತಿದ್ದನು. ನಾವು ಯಾದಗಿರಿ ಭೀಮಾ ಬ್ರಿಜ್ಡ್ ದಾಟಿ ವಡಗೇರಾ ಕ್ರಾಸಿಗೆ ಬಂದಾಗ ಅಲ್ಲಿ ನಮ್ಮೂರ ಚನ್ನಾರೆಡ್ಡಿಯ ಮನಗನಾದ ಮಲ್ಲಿಕಾಜರ್ುನ ಮತ್ತು ಅವರ ಸಂಬಂಧಿಕ ಸಂಜೀವರೆಡ್ಡಿ ತಂದೆ ಪರ್ವತರೆಡ್ಡಿ ಇಬ್ಬರೂ ಇದ್ದು, ನಮಗೆ ನೋಡಿ ನಮ್ಮನ್ನು ಹಿಂಬಾಲಿಸಿಕೊಂಡು ನಮ್ಮ ಹಿಂದೆ ಹಿಂದೆ ಮೋಟರ್ ಸೈಕಲ್ ಮೇಲೆ ನಾವು ಬರುತ್ತಿರುವುದನ್ನು ಯಾರಿಗೋ ಫೋನಿನಲ್ಲಿ ಹೇಳುತ್ತಾ ಬರುತ್ತಿದ್ದರು. ನಾವು ಬೆಂಡೆಬೆಂಬಳ್ಳಿ ಗ್ರಾಮ ದಾಟಿದ ನಂತರ ಬೆಂಡೆಬೆಂಬಳ್ಳಿಯಿಂದ ಒಂದು ಜೀಪ ನಂ. ಕೆಎ 20 ಝಡ್ 1778 ನೇದರಲ್ಲಿ ವಿರುಪಣ್ಣಾ ತಂದೆ ಚನ್ನಾರೆಡ್ಡಿ ಕುಲಕಣರ್ಿ, ಸಿದ್ದಪ್ಪ ತಂದೆ ಮಲ್ಲಿಕಾಜರ್ುನ ಕುಲಕಣರ್ಿ ಮತ್ತು ಸಂಗಪ್ಪ ತಂದೆ ಮಲ್ಲಿಕಾಜರ್ುನ ಕುಲಕಣರ್ಿ ಈ ಮೂರು ಜನ ಇದ್ದರು, ವಿರುಪಣ್ಣ ಜೀಪ ಚಲಾಯಿಸುತ್ತಿದ್ದು, ನಮಗೆ ಹಿಂಬಾಲಿಸಿಕೊಂಡು ಬಂದರು. ಮಲ್ಲಿಕಾಜರ್ುನ ಮತ್ತು ಪರ್ವತರೆಡ್ಡಿ ಇವರು ಮೋಟರ್ ಸೈಕಲ್ ಮೇಲೆ ಸ್ವಲ್ಪ ಹಿಂದೆ ಉಳಿದು ಜೀಪ ಮುಂದೆ ಬಿಟ್ಟರು. ಬೆಂಡೆಬೆಂಬಳ್ಳಿ-ಕೊಡಾಲ ರೋಡ ಬೆಂಡೆಬೆಂಬಳ್ಳಿ ಸೀಮಾಂತರದ ಮರೆಪ್ಪ ಇವರ ಹೊಲದ ಸಮೀಪ 4-30 ಪಿಎಮ್ ಸುಮಾರಿಗೆ ನಾವು ಮೋಟರ್ ಸೈಕಲ್ ಮೇಲೆ ಹೋಗುತ್ತಿದ್ದಾಗ ನಮ್ಮ ಹಿಂದುಗಡೆ ಜೀಪನ್ನು ವಿರುಪಣ್ಣನು ವೇಗವಾಗಿ ನಮ್ಮ ಕಡೆ ಚಲಾಯಿಸಿಕೊಂಡು ಬರುತ್ತಿದ್ದಾಗ ಸುರೇಶನು ನನಗೆ ಮಾಮ ಜೀಪ ನಮ್ಮ ಹಿಂದೆ ವೇಗವಾಗಿ ಬರುತ್ತಿದೆ ಬೇಗ ನಡೆಸು ಅಂತಾ ಹೇಳಿದ. ನಾನು ನನ್ನ ಮೋಟರ್ ಸೈಕಲ್ ವೇಗವಾಗಿ ಚಲಾಯಿಸಲು ಪ್ರಯತ್ನಿಸಿದೆ. ಆದರೂ ವಿರುಪಣ್ಣ ಈತನು ಜೀಪಿನಿಂದ ನಮಗೆ ಗುದ್ದಿ ಕೊಲೆ ಮಾಡುವ ಉದ್ದೇಶದಿಂದ ಅತಿವೇಗವಾಗಿ ಚಲಾಯಿಸಿಕೊಂಡು ಬಂದು ಹಿಂದಿನಿಂದ ಬಲವಾಗಿ ಡಿಕ್ಕಿಪಡಿಸಿದನು. ನಾವು ಇಬ್ಬರೂ ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದುಬಿಟ್ಟೆವು. ಆಗ ಅದೇ ವೇಳೆಗೆ ಮಲ್ಲಿಕಾಜರ್ುನ ಮತ್ತು ಸಂಜೀವರೆಡ್ಡಿ ಕೂಡಾ ಬಂದು ಅವರಿಗೆ ಸೇರಿಕೊಂಡರು. ಹೀಗೆ 1) ಮಲ್ಲಿಕಾಜರ್ುನ ತಂದೆ ಚನ್ನಾರೆಡ್ಡಿ ಕುಲಕಣರ್ಿ, 2) ವಿರುಪಣ್ಣಾ ತಂದೆ ಚನ್ನಾರೆಡ್ಡಿ ಕುಲಕಣರ್ಿ, 3) ಸಿದ್ದಪ್ಪ ತಂದೆ ಮಲ್ಲಿಕಾಜರ್ುನ ಕುಲಕಣರ್ಿ, 4) ಸಂಗಪ್ಪ ತಂದೆ ಮಲ್ಲಿಕಾಜರ್ುನ ಕುಲಕಣರ್ಿ, 5) ಸಂಜೀವರೆಡ್ಡಿ ತಂದೆ ಪರ್ವತರೆಡ್ಡಿ ಕುಲಕಣರ್ಿ ಈ 5 ಜನರು 6) ಚನ್ನಾರೆಡ್ಡಿ ತಂದೆ ಸಿದ್ದಣ್ಣ ಕುಲಕಣರ್ಿ ಈತನ ಪ್ರಚೋದನೆಯಿಂದ ಕೈಯಲ್ಲಿ ಕಬ್ಬಿಣದ ರಾಡು ಮತ್ತು ಕಟ್ಟಿಗೆ ಹಿಡಿದುಕೊಂಡು ಬಂದವರೆ ಮಲ್ಲಿಕಾಜರ್ುನನು ನನಗೆ ಈ ಸೂಳೆ ಮಗ ಧಮ್ಯರ್ಾ ಸಿಕ್ಕಾನ ಇವತ್ತು ಖಲಾಸ ಮಾಡೆ ಬಿಡೋಣ ಎಂದು ತನ್ನ ಕೈಯಲ್ಲಿದ್ದ ರಾಡಿನಿಂದ ಕೊಲೆ ಮಾಡುವ ಉದ್ದೇಶದಿಂದ ನನ್ನ ಬಲ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ವಿರುಪಣ್ಣನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಬಲ ಕಪಾಳಕ್ಕೆ ಹೊಡೆದು ಒಳಪೆಟ್ಟು ಮಾಡಿದನು. ನನ್ನ ಹಿಂದೆ ಕುಂತಿದ್ದ ಸುರೇಶನಿಗೆ ಸಿದ್ದಪ್ಪನು ವಿರುಪಣ್ಣನ ಕೈಯಲ್ಲಿಯ ಕಟ್ಟಿಗೆ ತೆಗೆದುಕೊಂಡು ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಸಂಗಪ್ಪನು ಮಲ್ಲಿಕಾಜರ್ುನನ ಕೈಯಲ್ಲಿಯ ರಾಡು ಕಸಿದುಕೊಂಡು ಅದೇ ರಾಡಿನಿಂದ ನನ್ನ ಎಡ ಭುಜಕ್ಕೆ ಹೊಡೆದು ಒಳಪೆಟ್ಟು ಮಾಡಿದನು. ಇನ್ನು ಉಳಿದವರಾದ ಸಂಗಪ್ಪನು ಸುರೇಶನಿಗೆ ಎಡ ಪಕ್ಕೆಗೆ ಒದ್ದು ಒಳಪೆಟ್ಟು ಮಾಡಿದನು. ಪರ್ವತರೆಡ್ಡಿಯು ನನಗೆ ಕಾಲಿನಿಂದ ಸೊಂಟಕ್ಕೆ ಮತ್ತು ಬಲ ತೊಡೆಗೆ ಒದ್ದನು. ಹೀಗೆ ಎಲ್ಲರೂ ಸೇರಿ ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಿದ್ದಾಗ ಅದೇ ವೇಳೆಗೆ ನಮ್ಮೂರ ಮಲ್ಲಿಕಾಜರ್ುನ ತಂದೆ ಬಸವರಾಜಪ್ಪ ಕಡಬೂರ ಮತ್ತು ಪಂಪಾರೆಡ್ಡಿ ತಂದೆ ರಾಮರೆಡ್ಡಿ ಮಾಡಗೇರಿ ಇಬ್ಬರೂ ಬೆಂಡೆಬೆಂಬಳ್ಳಿ ಕಡೆಯಿಂದ ನಮ್ಮೂರ ಕಡೆ ತಮ್ಮ ಮೋಟರ್ ಸೈಕಲ್ ಮೇಲೆ ಬಂದಿದ್ದು, ಮರೆಪ್ಪ ಚೆಟ್ಟಿ, ಸಿದ್ದಲಿಂಗಪ್ಪ ಬನ್ನಪ್ಪನೋರ ಮತ್ತು ಚಂದ್ರಪ್ಪ ತಂದೆ ಸುಮಂತ ಇವರು ನಮ್ಮೂರ ಕಡೆಯಿಂದ ಬೆಂಡೆಬೆಂಬಳ್ಳಿಗೆ ಟಾಟಾ ಎಸ ನಲ್ಲಿ ಬಂದರು. ಎಲ್ಲರೂ ಸೇರಿ ನಮಗೆ ಹೊಡೆಯುವುದನ್ನು ಬಿಡಿಸಿದರು. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಮಕ್ಕಳೆ ಇನ್ನೊಂದು ಸಲ ಸಿಕ್ಕರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೊದರು. ಆಗ ಜಗಳ ಬಿಡಿಸಿದವರು ನಮಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ರಾಯಚೂರಿಗೆ ಕರೆದುಕೊಂಡು ಬಂದು ನನಗೆ ಸುರಕ್ಷಾ ಖಾಸಗಿ ಆಸ್ಪತ್ರೆ ಮತ್ತು ಸುರೇಶನಿಗೆ ಕಣ್ವಾ ಖಾಸಗಿ ಆಸ್ಪತ್ರೆಗಳಲ್ಲಿ ಸೇರಿಕೆ ಮಾಡಿರುತ್ತಾರೆ. ಕಾರಣ ಕೋಡಾಲ ಶ್ರೀ ಬಸವೇಶ್ವರ ಗಡ್ಡೆ ಮಠದ ಆಸ್ತಿಯಾದ ಜಮೀನನ್ನು ಮಠದ ಅಭಿವೃದ್ಧಿಗೋಸ್ಕರ ಮಠಕ್ಕೆ ಬಿಟ್ಟುಕೊಡು ಎಂದು ನಾವು ಮತ್ತು ಗ್ರಾಮದ ಪ್ರಮುಖರು ಸೇರಿ ಚನ್ನಾರೆಡ್ಡಿಗೆ ಹೇಳಿದ್ದಕ್ಕೆ ಅವರೆಲ್ಲರೂ ನಮಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಮಕ್ಕಳಿಗೆ ಹೇಳಿ ಜೀಪಿನಿಂದ ನಮಗೆ ಗುದ್ದಿಸಿ, ರಾಡು ಮತ್ತು ಕಟ್ಟಿಗೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಇದಕ್ಕೆಲ್ಲ ಚನ್ನಾರೆಡ್ಡಿ ಈತನ ಪ್ರಚೋದನೆ ಇರುತ್ತದೆ. ಆದ್ದರಿಂದ ಸದರಿ ಮೇಲ್ಕಂಡವರೆಲ್ಲರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 89/2022 ಕಲಂ: 143, 147, 148, 504, 109, 307, 324, 323, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು

 

ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 96/2022 ಕಲಂ. ಮನುಷ್ಯ ಕಾಣೆ: ದಿನಾಂಕ: 24-06-2022 ರಂದು ಸಾಯಂಕಾಲ 06-00 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ಈಗ ಸುಮಾರು 15-20 ದಿನಗಳಿಂದ ನನಗೆ ಆರಾಮ ಇಲ್ಲದ ಕಾರಣ ನನ್ನ ಗಂಡ ಸಾಬಪ್ಪ ಈತನು ನನಗೆ ನೀನು ನಿನ್ನ ತವರು ಮನೆಗೆ ಹೋಗಿ ಅಲ್ಲಿ ಇರು ನಿನಗೆ ತೋರಿಸಲು ನನ್ನಲ್ಲಿ ಹಣ ಇಲ್ಲ ಅದಕ್ಕೆ ನೀನು ನಿನ್ನ ತವರು ಮನೆಯಲ್ಲಿ ಇರು ಅಂತಾ ಹೇಳಿ ನನ್ನ ಗಂಡ ನನಗೆ ನನ್ನ ತವರು ಮನೆಗೆ ದಿನಾಂಕ: 10-06-2022 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಬಿಟ್ಟು ನಾನು ಸಾಯಂಕಾಲ ಬರುತ್ತೇನೆ ಅಂತಾ ಹೇಳಿ ಹೋದನು.
ಸಾಯಂಕಾಲ 06-00 ಗಂಟೆ ಆದರು ಕೂಡ ನನ್ನ ಗಂಡ ಬರಲಿಲ್ಲ ಆಗ ಆತನ ಮೊಬೈಲಗೆ ಪೊನ್ ಮಾಡಿದರೆ ಪೊನ್ ಸ್ವಿಚ್ ಆಪ್ ಅಂತಾ ಹೇಳಿತು ಆಗ ನಾನು ನನ್ನ ತಂದೆಗೆ ವಿಷಯ ತಿಳಿಸಿ ಇಬ್ಬರು ಊರಲ್ಲಿ ಅಲಲ್ಲಿ ನನ್ನ ಗಂಡನಿಗೆ ಹುಡುಕಾಡಿದೆವು ಎಲ್ಲಿ ಸಿಗಲಿಲ್ಲ. ಅಂದು ರಾತ್ರಿಯಾಗಿದ್ದರಿಂದ ಎಲ್ಲಾದರು ಹೋಗಿರಬಹುದು ಮತ್ತೆ ಬರಬಹುದು ಅಂತಾ ಸುಮ್ಮನಿದ್ದೆವು. ನಂತರ ಕೂಡ ಬಂದಿರುವದಿಲ್ಲ ನನ್ನ ಗಂಡ ಸಾಬಪ್ಪ ತಂದೆ ಬಸವರಾಜ ಬಾಗಲಿ ವ|| 30 ವರ್ಷ ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಕೌಳೂರ ಜಿ|| ಯಾದಗಿರಿ ಈತನು ದಿನಾಂಕ: 10-06-2022 ರಂದು ಬೆಳಿಗ್ಗೆ 11-00 ಗಂಟೆಗೆ ಕೌಳೂರ ಗ್ರಾಮದ ನಮ್ಮ ಮನೆಯಿಂದ ಕಾಣೆಯಾಗಿರುತ್ತಾನೆ. ಆತನು ಹೋಗುವ ಕಾಲಕ್ಕೆ ಬಿಳಿಯ ಬಣ್ಣದ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಹಾಕಿಕೊಂಡು ಹೋಗಿರುತ್ತಾನೆ. ಆತನು ಕನ್ನಡ ಮಾತನಾಡುತ್ತಾನೆ ಆತನ ಚಹರೆ ಸಾದಾರಣ ಕೆಂಪು ದುಂಡನೇಯ ಮುಖ ಇರುತ್ತದೆ ಸಾದಾರಣ ಮೈಕಟ್ಟು ಇರುತ್ತದೆ,


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: ಗುನ್ನೆ ನಂ: 104/2022 ಕಲಂ: 341, 323, 504, 506 ಐಪಿಸಿ.: ಇಂದು ದಿನಾಂಕ 24.06.2022 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಫಿರ್ಯಾದಿಯು ಮೊಟ್ನಳ್ಳಿ ತಾಂಡಾದ ಲಚ್ಯ ರಾಠೋಡ ಈತನ ಟ್ರ್ಯಾಕ್ಟರನ್ನು ಬಾಡಿಗೆಗೆ ತಗೊಂಡು ಹೋಗಿ ತಮ್ಮ ಹೊಲದಲ್ಲಿ ತೊಗರಿ ಬೆಳೆಯನ್ನು ಬಿತ್ತಿ ಮರಳಿ ತಮ್ಮ ಮನೆಗೆ ಬರುತ್ತಿದ್ದಾಗ ಆರೋಪಿತನು ತಡೆದು ನಿಲ್ಲಿಸಿ ಲೇ ಸೂಳೆ ಮಗನೆ ನಮ್ಮುರಲ್ಲಿ ನಮ್ಮದು ಟ್ರ್ಯಾಕ್ಟರ ಆದ ಮತ್ತೆ ಬೇರೆ ಊರಿಂದ ಟ್ರ್ಯಾಕ್ಟರ ಯಾಕ ತರಿಸಿದ ಅಂತಾ ಹೊಲಸು ಮಾತಿನಲ್ಲಿ ಬೈದಿದ್ದಕ್ಕೆ ಫೀರ್ಯಾದಿಯು ಲಚ್ಯ ರಾಠೋಡ ನಮಗೆ ಬೇಕಾದವರು ಇದ್ದಾನೆ ಅದಕ್ಕೆ ಆತನ ಟ್ರ್ಯಾಕ್ಟರ ಕರಿಸಿ ಬಿತ್ತಿನಿ ಅಂತಾ ಹೇಳೀದರೂ ಕೇಳದೇ ನನ್ನೊಂದಿಗೆ ಕುಸ್ತಿಗೆ ಬಿದ್ದು ಕೈಯಿಂದ ಹೊಡೆ-ಬಡೆ ಮಾಡಿ ನನ್ನ ಮೈ ಮೇಲಿನ ಬನಿಯನ್ ಹರಿದನು. ಆಗ ಅಲ್ಲೇ ಇದ್ದ ಲಚ್ಯ ರಾಠೋಡ ಮತ್ತು ನಮ್ಮೂರಿನ ಮುನೆಪ್ಪ ತಂದೆ ಸಾಬಣ್ಣ ಕುಂಚಟ್ಟಿ ಇವರು ಬಂದು ಆತನಿಂದ ನನಗೆ ಬಿಡಿಸಿಕೊಂಡರು. ಆಗ ಮಾಳಪ್ಪನು ಲೇ ಸೂಳೆ ಮಗನೆ ಶೇಖಪ್ಪ ಇನ್ನೊಮ್ಮೆ ಬೇರೆ ಊರಿನ ಟ್ರ್ಯಾಕ್ಟರ ತಂದು ಗಳ್ಯ ಹೊಡಸಿದ್ರೆ ನಿನಗೆ ಖಲಾಸ ಮಾಡುತ್ತಿನಿ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ನಾನು ಠಾಣಾ ಗುನ್ನೆ ನಂಬರ ಗುನ್ನೆ ನಂ: 104/2022 ಕಲಂ: 341, 323, 504, 506 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 25-06-2022 06:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080