ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 25-07-2022
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 88/2022 ಕಲಂ 143, 147, 323, 498(ಎ), 504, 506 ಸಂಗಡ 149 ಐಪಿಸಿ: ಇಂದು ದಿನಾಂಕ 24.07.2022 ರಂದು ಬೆಳಿಗ್ಗೆ 11 ಗಂಟೆಗೆ ಮಾಲಾಶ್ರೀ ಗಂಡ ಶಿವರಾಮರೆಡ್ಡಿ ಯಂಕಾರೆಡ್ಡಿ, ವ|| 35 ವರ್ಷ, ಜಾ|| ಲಿಂಗಾಯತ, ಉ|| ಹೊಲಮನೆಕೆಲಸ, ಸಾ|| ಬೆಳಗುಂದಿ ಗ್ರಾಮ, ಹಾ||ವ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ತನ್ನಗಂಡ ಹಾಗೂ ಅತ್ತೆ, ಮಾವ ಮತ್ತು ಗಂಡನ ಸಂಬಂಧಿಕರು ತನ್ನಮೇಲೆ ದೈಹಿಕ ಹಲ್ಲೇ ಮಾಡಿದ್ದಲ್ಲದೆ ಮಾನಸಿಕ ಹಿಂಸೆ ನೀಡಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ವಗೈರೆ ಆಪಾದನೆ.
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 89/2022 ಕಲಂ 341, 323, 324, 504, 506 ಐಪಿಸಿ: ಇಂದು ದಿನಾಂಕ 24.07.2022 ರಂದು ರಾತ್ರಿ 1.00 ಗಂಟೆಗೆ ಆರೋಪಿತನು ಫಿಯರ್ಾದಿಗೆ ಸಂಬಂಧಿಸಿದ ಜಮೀನು ಸವರ್ೇ ನಂಬರ 319/2 ರ ಆಸ್ತಿ ಪಾಲಿನ ಸಂಬಂಧ ಫಿಯರ್ಾದಿ ಮನೆಗೆ ಹೋಗಿ ಬಾಗಿಲು ಬಡಿದು ಮನೆಯಿಂದ ಹೊರಗೆ ಕರೆದು ಫಿಯರ್ಾದಿಗೆ ಮತ್ತು ಆತನ ಹೆಂಡತಿಗೆ ಅವಾಚ್ಯವಾಗಿ ಬೈದು, ಕೈಯಿಂದ, ಕಟ್ಟಿಗೆಯಿಂದ ಹೊಡೆಬಡೆ ಮಾಡಿ, ತಪ್ಪಿಸಿಕೊಳ್ಳದಂತೆ ಅಡ್ಡಗಟ್ಟಿ ನಿಂತು ಜೀವ ಬೆದರಿಕೆ ಹಾಕಿದ್ದು, ಆರೋಪಿತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಇರುತ್ತದೆ.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 98/2022 ಕಲಂ: 504, 341, 324 ಸಂ 34 ಐಪಿಸಿ: ದಿನಾಂಕ:23/07/2022 ರಂದು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಕಮಲಿಬಾಯಿ ಸಾ:ಗುಂಡಳ್ಳಿ ಇವರ ಎಮ್.ಎಲ್.ಸಿ ಆಗಿದ್ದು, ಹಿರಿಯರಿಗೆ ವಿಚಾರಿಸಿ ನಂತರ ದೂರು ಕೊಡುವುದಾಗಿ ಹೇಳಿದ್ದರು. ಹೀಗಿದ್ದು ಇಂದು ದಿನಾಂಕ:24/07/2022 ರಂದು 12 ಪಿಎಮ್ ಕ್ಕೆ ಸದರಿ ಕಮಲಿಬಾಯಿ ಗಂಡ ರಾಚು ರಾಠೋಡ ಸಾ:ಗುಂಡಳ್ಳಿ ತಾಂಡಾ ಇವರು ಕಲಬುರಗಿ (ಜಿಮ್ಸ್) ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದು, ಅಲ್ಲಿಯೇ ದೂರು ಕೊಡುವುದಾಗಿ ಫೋನ ಮೂಲಕ ತಿಳಿಸಿದ್ದರಿಂದ ನಾನು ಸದರಿ ದಾಖಲ ಮಾಡಿಕೊಳ್ಳಲು 2-30 ಪಿಎಮ್ ಕ್ಕೆ ಕಲಬುರಗಿ (ಜಿಮ್ಸ್) ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಕಮಲಿಬಾಯಿ ಸಾ:ಗುಂಡಳ್ಳಿ ಇವರಿಗೆ ವಿಚಾರಿಸಿದಾಗ ಅವರು ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಮ್ಮ ಮತ್ತು ದೇವರಾಜ ತಂದೆ ಬದ್ದು ರಾಠೋಡ ಇಬ್ಬರ ಮನೆ ಒಂದೆ ಲೈನಿಗೆ ಇದ್ದು, ಸದರಿ ಮನೆಗಳ ಮುಂದೆ ತಿರುಗಾಡಲು ರೋಡ ಇರುತ್ತದೆ. ಆದರೆ ಆ ರೋಡಿನ ಮೇಲೆ ದೇವರಾಜನು ಎತ್ತು ಬಂಡಿ ಕಟ್ಟುತ್ತಿದ್ದರಿಂದ ನಮಗೆ ತಿರುಗಾಡಲು ತೊಂದರೆ ಆಗುತ್ತಿತ್ತು. ಆಗ ನಾವು ಅವರಿಗೆ ರೋಡಿನ ಮೇಲೆ ಎತ್ತು ಬಂಡಿ ಕಟ್ಟಬೇಡವೆಂದು ಹೇಳಿದರೆ ಅವರು ಕೇಳದೆ ನಮ್ಮೊಂದಿಗೆ ಜಗಳಕ್ಕೆ ಬರುತ್ತಿದ್ದರು. ಹೀಗಿದ್ದು ದಿನಾಂಕ:23/07/2022 ರಂದು ಬೆಳಗ್ಗೆ 11:30 ಗಂಟೆ ಸುಮಾರಿಗೆ ನಾನು ಹೊರಗಡೆ ಹೋಗಿ ಮರಳಿ ಮನೆಗೆ ಬರುತ್ತಿದ್ದಾಗ ದೇವರಾಜ ಈತನು ಪುನಃ ತನ್ನ ಮನೆ ಮುಂದಿನ ರೋಡಿನ ಮೇಲೆ ಎತ್ತು ಬಂಡಿ ಕಟ್ಟಿ ಕುಳ್ಳ ಕಟ್ಟಿಗೆ ಹಾಕಿದ್ದರಿಂದ ಅಲ್ಲಿಂದ ನನ್ನ ಮನೆಗೆ ಹೋಗಲು ಅಡಚಣೆ ಆಗಿತ್ತು. ಆಗ ನಾನು ಅಲ್ಲಿಯೇ ಇದ್ದ ದೇವರಾಜನಿಗೆ ರೋಡಿನ ಮೇಲೆ ಎತ್ತು ಬಂಡಿ ಕಟ್ಟಿ, ಕುಳ್ಳ-ಕಟ್ಟಿಗೆ ಹಾಕಬೇಡ ಎಂದರು ಮತ್ತೆ ಕುಳ್ಳ-ಕಟ್ಟಿಗೆ ಹಾಕಿ ಎತ್ತು ಬಂಡಿ ಕಟ್ಟಿದ್ದಿ, ನಾವು ಹೇಗೆ ತಿರುಗಾಡಬೇಕು ಎಂದು ಹೇಳಿದ್ದಕ್ಕೆ ಸಿಟ್ಟಿಗೆ ಎದ್ದ 1) ದೇವರಾಜ ತಂದೆ ಬದ್ದು ರಾಠೋಡ ಮತ್ತು ಅವನ ಹೆಂಡತಿ 2) ಮಂಗಿಬಾಯಿ ಗಂಡ ದೇವರಾಜ ರಾಠೋಡ ಇಬ್ಬರೂ ಸಾ:ಗುಂಡಳ್ಳಿ ತಾಂಡಾ ಇವರಿಬ್ಬರೂ ಸೇರಿಕೊಂಡು ಬಂದವರೆ ನನಗೆ ಈ ಸೂಳಿ ಯಾವಾಗ ನೋಡಿದರೆ ನಮಗೆ ರೋಡಿಗೆ ಅದು ಹಾಕಬ್ಯಾಡರಿ, ಇದು ಕಟ್ಟಬ್ಯಾಡರಿ ಎಂದು ಹೇಳುತ್ತಾಳೆ ಇವಳ ಸೊಕ್ಕು ಬಹಳ ಆಗಿದೆ. ಇವಳ ಸೊಕ್ಕು ಮುರಿಯಬೇಕು ಎಂದು ಜಗಳ ತೆಗೆದವರೆ ನನಗೆ ತಡೆದು ನಿಲ್ಲಿಸಿದವರೆ ದೇವರಾಜನು ಅಲ್ಲಿಯೇ ಬಿದ್ದ ಕಟ್ಟಿಗೆ ತೆಗೆದುಕೊಂಡು ನನ್ನ ಎಡಗೈ ಮೊಳಕೈ ಕೆಳಗೆ ಹೊಡೆದು ಗುಪ್ತಗಾಯ ಮಾಡಿದನು. ಮಂಗಿಬಾಯಿ ಇವಳು ಬಂದು ನನ್ನ ತಲೆ ಮೇಲಿನ ಕೂದಲೂ ಹಿಡಿದು ಜಗ್ಗಿ ಕೆಳಗೆ ಬಿಳಿಸಿದಳು. ಆಗ ಜಗಳವನ್ನು ಅಲ್ಲಿಯೇ ಇದ್ದ ನನ್ನ ಗಂಡ ರಾಚು ತಂದೆ ನರಸಿಂಗ ರಾಠೋಡ ಮತ್ತು ನಮ್ಮ ತಾಂಡಾದ ತಿಪ್ಪಣ್ಣ ತಂದೆ ಗಂಗಾರಾಮ ರಾಠೋಡ, ಪುನಿಬಾಯಿ ಗಂಡ ಮಾನಸಿಂಗ ಚವ್ಹಾಣ ಇವರೆಲ್ಲರೂ ಬಂದು ಜಗಳ ಬಿಡಿಸಿರುತ್ತಾರೆ. ಆಗ ನಾನು ಅಲ್ಲಿಂದ ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ. ಆಗ ಅಲ್ಲಿನ ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿರುತ್ತಾರೆ. ಸದರಿ ಎಮ್.ಎಲ್.ಸಿ ಯನ್ನು ವಡಗೇರಾ ಠಾಣೆ ಪೊಲೀಸರು ವಿಚಾರಣೆ ಮಾಡಿರುತ್ತಾರೆ. ನನಗೆ ಆರೋಗ್ಯದ ಮುಂದಿನ ಸೌಲಭ್ಯಕ್ಕೆ ಕಲಬುರಗಿ (ಜಿಮ್ಸ್) ಆಸ್ಪತ್ರೆಗೆ ಬಂದಿರುತ್ತೆನೆ. ನಮ್ಮ ಹಿರಿಯರು ಹೇಳಿದಂತೆ ಪೊಲೀಸ್ ಕೇಸ್ ಮಾಡಲು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನನಗೆ ಬೈದು ಹೊಡೆದು ತೊಂದರೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರನ್ನು ಸ್ವಿಕೃತ ಮಾಡಿಕೊಂಡು 5-30 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 98/2022 ಕಲಂ: 504, 341, 324 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 88/2022 ಕಲಂ. 15(ಎ), 32(3) ಕೆ.ಇ ಆಕ್ಟ್: ಇಂದು ದಿನಾಂಕ:24/07/2022 ರಂದು 4-30 ಪಿ.ಎಮ್.ಕ್ಕೆ ಆರೋಪಿತನು ಯಾದಗಿರಿ ನಗರದ ಮುದ್ನಾಳಕ್ರಾಸದ ಹತ್ತಿರ ಹಣಮಂತ ವಡ್ಡರ ಇತನ ಹೊಟೇಲ ಹಿಂದುಗಡೆ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿ ಸಮಯದಲ್ಲಿ ಸ್ಥಳದಲ್ಲಿ ಸಿಕ್ಕ ಅಂದಾಜು 526/- ರೂ ಕಿಮ್ಮತ್ತಿನ 1.350 ಲೀಟರ್ ಮದ್ಯವನ್ನು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ
ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 122/2022 ಕಲಂ: 323, 324, 504, 506 ಸಂ 34 ಐಪಿಸಿ: ಇಂದು ದಿನಾಂಕ 24/07/2022 ರಂದು 1.30 ಪಿ.ಎಮ್ ಕ್ಕೆ ಅಜರ್ಿದಾರರಾದ ಶ್ರೀಮತಿ ಶಿವಬಾಯಿ ಗಂಡ ಮಡಿವಾಳಪ್ಪ ತಳವಾರ ವ|| 40 ಜಾ|| ಕಬ್ಬಲಿಗ ಉ|| ಹೊಲಮನೆಕೆಲಸ ಸಾ|| ಯಕ್ತಾಪೂರ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ನನ್ನೊಂದಿಗೆ ಮತ್ತು ನನ್ನ ಗಂಡನೊಂದಿಗೆ ನಮ್ಮ ಸಂಬಂಧಿಕರಾದ ಶರಣಮ್ಮ ತಂದೆ ಚನ್ನಬಸಪ್ಪ ತಳವಾರ ಇವಳು ಮತ್ತು ಇತರರು ಹೊಲದ ವಿಷಯದಲ್ಲಿ ಬಹಳ ದಿನಗಳಿಂದ ಸಣ್ಣ ಪುಟ್ಟ ವಿಷಯದಲ್ಲಿ ಜಗಳ ಮಾಡುತ್ತಾ ಬಂದಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 24/07/2022 ರಂದು ಮುಂಜಾನೆ 8.00 ಗಂಟೆಗೆ ನನ್ನ ಗಂಡನಾದ ಮಡಿವಾಳಪ್ಪ ತಂದೆ ಚನ್ನಬಸಪ್ಪ ತಳವಾರ ವ|| 50ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಯಕ್ತಾಪೂರ ಈತನು ನಮ್ಮ ಹೊಲಕ್ಕೆ ಕೆಲಸಕ್ಕೆಂದು ಹೋಗಿದ್ದನು. ನಂತರ 9.30 ಗಂಟೆಯ ಸುಮಾರಿಗೆ ನನ್ನ ಗಂಡನಾದ ಮಡಿವಾಳಪ್ಪನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ಇವತ್ತು ನಾನು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ 1) ಶರಣಮ್ಮ ತಂದೆ ಚನ್ನಬಸಪ್ಪ ತಳವಾರ, 2) ಮಡಿವಾಳಮ್ಮ ಗಂಡ ಗೊಲ್ಲಾಳಪ್ಪ ವಾಲಿಕಾರ, 3) ಬಸಪ್ಪ ತಂದೆ ಭೀಮಣ್ಣ ತಳವಾರ ಇವರು ಮೂರು ಜನರು ಕೂಡಿ ಕೈಯಲ್ಲಿ ಬಡಿಗೆ ಕಲ್ಲು ಹಿಡಿದುಕೊಂಡು ಬಂದವರೆ ಈ ಹೊಲ ನಮ್ಮದು ಇದೆ ಇಲ್ಲಿಗೆ ಬರಬೇಡ ಅಂದರೂ ಏಕೆ ಬರುತ್ತಿಯಾ ಅಂದವರೆ ಬಸಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು, ಮಡಿವಾಳಮ್ಮ ಇವಳು ನನ್ನ ಕಪಾಳಕ್ಕೆ ಕೈಯಿಂದ ಹೊಡೆದಳು, ಬಸಪ್ಪನು ಬಡಿಗೆಯಿಂದ ಹೊಡೆದಾಗ ನಾನು ನೆಲಕ್ಕೆ ಬಿದ್ದಿದ್ದು ಆಗ ಶರಣಮ್ಮಳು ತನ್ನ ಕೈಯಲ್ಲಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ತಲೆಗೆ ಹೊಡೆದಿದ್ದು ನನ್ನ ತಲೆಯ ಮುಂದಿನ ಭಾಗದಲ್ಲಿ ಗಾಯವಾಗಿ ರಕ್ತ ಸುರಿಯುತ್ತಿದ್ದು ನನಗೆ ಹೊಡೆಯುತ್ತಿದ್ದಾಗ ಕಾಶಿನಾಥ ತಂದೆ ಮಹಾದೇವಪ್ಪ ನಾಯ್ಕೋಡಿ ಮತ್ತು ಕುಮಾರಸ್ವಾಮಿ ತಂದೆ ಮಲ್ಲಯ್ಯಸ್ವಾಮಿ ಹಿರೇಮಠ ಇವರು ಬಂದು ಜಗಳ ಬಿಡಿಸಿಕೊಂಡಿದ್ದು ಇಲ್ಲದಿದ್ದರೆ ನನಗೆ ಇನ್ನೂ ಹೊಡೆಯುತ್ತಿದ್ದರು. ಅವರು ನನಗೆ ಹೊಡೆಯುವುದು ಬಿಟ್ಟು ಎಲೇ ಮಡ್ಯಾ ಸೂಳೆ ಮಗನೇ ಇನ್ನೊಮ್ಮೆ ಹೊಲದ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಹೊಡೆದು ಹಾಕುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ನನಗೆ ಗಾಯವಾಗಿದ್ದರಿಂದ ನನಗೆ ಮನೆಯ ಕಡೆಗೆ ಬರಲು ಕಷ್ಟವಾಗುತ್ತಿದೆ ನೀನು ಹೊಲಕ್ಕೆ ಬಾ ಅಂದಾಗ ನಾನು ಮತ್ತು ನಮ್ಮ ಮೈದುನನಾದ ವಾಸು ಇಬ್ಬರೂ ಕೂಡಿ ನನ್ನ ಗಂಡನಿಗೆ ಕರೆದುಕೊಂಡು ಬರಲು ಹೊಲಕ್ಕೆ ಹೋಗುತ್ತಿದ್ದಾಗ ನನ್ನ ಗಂಡನು ರಕ್ತಗಾಯ ಮಾಡಿಕೊಂಡು ನಡುಗುತ್ತಾ ಅವರು ಹೊಡೆದ ಭಯದಿಂದ ಮನೆಯ ಕಡೆಗೆ ಬರುತ್ತಿದ್ದಾಗ ತಕ್ಷಣ ಅವನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕೆಂಭಾವಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಉಪಚಾರ ಕುರಿತು ನನ್ನ ಗಂಡನಾದ ಮಡಿವಾಳಪ್ಪನಿಗೆ ಕಲಬುರಗಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ. ಕಾರಣ ಹೊಲದ ವಿಷಯದಲ್ಲಿ ನನ್ನ ಗಂಡನಾದ ಮಡಿವಾಳಪ್ಪನೊಂದಿಗೆ ಜಗಳ ತೆಗೆದು ಕೈಯಿಂದ, ಬಡಿಗೆಯಿಂದ, ಕಲ್ಲಿನಿಂದ ಹೊಡೆದು ತಲೆಗೆ ರಕ್ತಗಾಯ, ಬೆನ್ನಿಗೆ ಗುಪ್ತಗಾಯ ಮಾಡಿ, ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ ಶರಣಮ್ಮ, ಮಡಿವಾಳಮ್ಮ ಮತ್ತು ಬಸಪ್ಪ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 122/2022 ಕಲಂ 323, 324, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 50/2022 ಕಲಂ: 273, 328 ಐಪಿಸಿ ಮತ್ತು ಕಲಂ: 32, 34 ಕೆಇ ಯಾಕ್ಟ: ಇಂದು ದಿನಾಂಕ: 24/07/2022 ರಂದು 07.40 ಪಿಎಮ್ ಕ್ಕೆ ಆರೋಪಿತನು ವನದುರ್ಗ ಗ್ರಾಮದ ನಿಂಗಯ್ಯ ಮುತ್ತ್ಯಾನ ಗುಡಿಯ ಹಿಂದೆ ರೋಡಿನ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಳ್ಳಬಟ್ಟಿ ಸರಾಯಿಯು ಮಾನವ ಜೀವಕ್ಕೆ ಹಾನಿಕಾರಕ ಅಂತಾ ಗೊತ್ತಿದ್ದು, ಕೂಡ ಕಳ್ಳ ಬಟ್ಟಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಕೊಂಡು 07.40 ಪಿಎಂಕ್ಕೆ ದಾಳಿ ಮಾಡಿ ಆರೋಪಿತನಿಂದ 6 ಲೀಟರ್ ಕಳ್ಳಭಟ್ಟಿ ಸರಾಯಿ ಹಾಗು ಒಂದು ಸ್ಟೀಲಿನ ಚರಿಗೆಯನ್ನು ಪಂಚರ ಸಮಕ್ಷಮ 07.40 ಪಿಎಮ್ ದಿಂದ 08.40 ಪಿ.ಎಮ್ ವರೆಗೆ ಜಪ್ತಿಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡು ಪಿ.ಎಸ್.ಐ ರವರು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರ ಮೇರೆಗೆ ಠಾಣೆ ಗುನ್ನೆ ನಂ: 50/2022 ಕಲಂ: 273, 328 ಐಪಿಸಿ ಮತ್ತು ಕಲಂ: 32, 34 ಕೆಇ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 51/2022 ಕಲಂ 379 ಐಪಿಸಿ ಮತ್ತು 44(1) ಕೆಎಮ್ಎಮ್ಸಿ ರೂಲ್ 1994: ಇಂದು ದಿನಾಂಕ: 24/07/2022 ರಂದು 09.15 ಪಿ.ಎಮ್ ಕ್ಕೆ ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ ಹೊಸಕೇರಾ ಕಡೆಯಿಂದ ಗೋಗಿ ಕೆ ಕಡೆಗೆ ಒಂದು ಟ್ರ್ಯಾಕ್ಟರ್ದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ ಅಂತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಸಿಬ್ಬಂದಿ ಹಾಗು ಪಂಚರೊಂದಿಗೆ ಗೋಗಿ ಕೆ ಗ್ರಾಮದ ಸಿಂದಗಿ ಶಹಾಪೂರ ರೋಡಿನ ಹೊಸಕೇರಾ ಕ್ರಾಸ ಹತ್ತಿರ ಹೋಗಿ ನಿಂತಾಗ 9.30 ಪಿ.ಎಮ್ ಕ್ಕೆ ಹೊಸಕೇರಾ ಕಡೆಯಿಂದ ಒಂದು ಮರಳು ತುಂಬಿದ ಟ್ರ್ಯಾಕ್ಟರ್ ಬಂದಿದ್ದು, ಸದರಿ ಮರಳಿನ ಬಗ್ಗೆ ಅದರ ಚಾಲಕನಿಗೆ ಮರಳನ್ನು ಸಕರ್ಾರಕ್ಕೆ ರಾಜಧನ(ರಾಯಲ್ಟಿ)ವನ್ನು ಕಟ್ಟದೇ ಕೃಷ್ಣಾ ನದಿಯಲ್ಲಿ ಕಳ್ಳತನದಿಂದ ಮರಳು ಲೋಡ ಮಾಡಿಕೊಂಡು ಅಕ್ರಮವಾಗಿ ಸಾಗಿಸಿದ್ದು ಇರುತ್ತದೆ ಅಂತಾ ತಿಳಿಸಿದ್ದರಿಂದ ಸದರಿಯವನಿಗೆ ಹೆಸರು ವಿಳಾಸ ವಿಚಾರಿಸಲಾಗಿ ಸದರಿಯವನು ಟ್ರ್ಯಾಕ್ಟರ್ ದಿಂದ ಇಳಿದು ಕತ್ತಲಲ್ಲಿ ಓಡಿ ಹೋದನು. ನಂತರ ಸದರಿ ಮರಳು ತುಂದ ಟ್ರ್ಯಾಕ್ಟರ್ ಪಂಚರ ಸಮಕ್ಷಮ 9.30 ಪಿ.ಎಮ್. ದಿಂದ 10.30 ಪಿ.ಎಮ್. ವರೆಗೆ ಜಪ್ತಿ ಪಂಚನಾಮೆ ಕೈಕೊಂಡು ಸದರಿ ಟ್ರ್ಯಾಕ್ಟರನ್ನು ಖಾಸಗಿ ಚಾಲಕನ ಸಹಾಯದಿಂದ ಠಾಣೆಗೆ ತಂದು 11.00 ಪಿಎಮ್ ಕ್ಕೆ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದರಿಂದ ಗೋಗಿ ಠಾಣೆ ಗುನ್ನೆ ನಂ: 51/2022 ಕಲಂ 379 ಐಪಿಸಿ ಮತ್ತು 44(1) ಕೆಎಮ್.ಎಮ್.ಸಿ ರೂಲ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.