ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 25-08-2021

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 195/2021 ಕಲಂ 78 (3) ಕೆಪಿ ಆಕ್ಟ್ : ಮಾನ್ಯರೆ, ಇಂದು ದಿನಾಂಕ: 24-08-2021 ರಂದು 6:15 ಪಿ.ಎಮ್.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ಚೆನ್ನಯ್ಯ ಎಸ್. ಹಿರೇಮಠ ಪಿ.ಐ ಶಹಾಪುರ ರವರು ಒಂದು ಜಾಪನ ಪತ್ರದೊಂದಿಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಹಾಜರು ಪಡಿಸಿದ್ದು ಅದರ ಸಾರಾಂಶವೇನಂದರೆ, ಇಂದು ದಿನಾಂಕ: 24-08-2021 ರಂದು 5:00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಹತ್ತಿಗುಡೂರ ಗ್ರಾಮದ ಯಾರೋ ಒಬ್ಬ ಸಾರ್ವಜನಿರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ. ಅಂತಾ ಮಾಹಿತಿ ಖಚಿತ ಬಂದಿದ್ದು ಸದರಿ ಅಪರಾಧವು ಅಸಂಜ್ಞೇಯವಾಗಿದ್ದರಿಂದ ಈ ಬಗ್ಗೆ ಠಾಣೆ ಎನ್.ಸಿ. ನಂ 49/2021 ನೇದ್ದನ್ನು ದಾಖಲಿಸಿದ್ದು ಇದೆ ಮತ್ತು ಕಲಂ 78(3) ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ದಾಳಿಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಕೊಡೆದುಕೊಂಡು ಪರವಾನಿಗೆ ಪತ್ರ ಈ ಕೂಡಾ ಲಗತ್ತಿಸಿದ್ದು ಇದೆ ಆದ್ದರಿಂದ ಸದರಿ ಮಟಕಾ ಜೂಜಾಟ ನಡೆಸುವ ವ್ಯಕ್ತಿಯ ವಿರುದ್ಧ ಸಕರ್ಾರಿ ತಫರ್ೆ ಫಿರ್ಯಾದಿ ನೀಡುತ್ತಿದ್ದು ಆರೋಪಿತನ ಮೇಲೆ ಕಲಂ. 78 (3) ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ಕೊಡಲು ಈ ಮೂಲಕ ಸೂಚಿಸಲಾಗಿದೆ ಅಂತಾ ಇದ್ದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 195/2021 ಕಲಂ 78 (3) ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು. ನಂತರ ದಾಳಿಗೆ ಹೋಗಿ ದಾಳಿಮಾಡಿ ಒಬ್ಬಬ್ಬಾರೋಪಿ 1020/- ನಗದು ಹಣ, ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಅ.ಕಿ.00 ಗಳನ್ನು ವಶಪಡಿಸಿಕೊಂಡು ಬಂದು ಜಪ್ತಿ ಪಂಚನಾಮೆಯೊಂದಿಗೆ ವರದಿ ನೀಡಿದ್ದು ಇದೆ.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 137/2021 ಕಲಂ: 318 ಐಪಿಸಿ : ಸುಮಾರು 5-6 ತಿಂಗಳ ನವಜಾತ ಹೆಣ್ಣು ಶಿಶು ಯಾರೋ ಮಹಿಳೆ ಅಥವಾ ಪುರುಷನು ಮೃತ ಈ ಹೆಣ್ಣು ಜನಜಾತ ಶಿಶುವಿನ ಜನನವನ್ನು ಮರೆಮಾಚುವ (ಮುಚ್ಚಿಡುವ) ಸಲುವಾಗಿ ನಿನ್ನೆ ದಿನಾಂಕ 23.08.2021 ರ ರಾತ್ರಿ 10:00 ಗಂಟೆಯಿಂದ ಇಂದು ದಿನಾಂಕ 24.08.2021 ರ ಬೆಳಿಗ್ಗೆ 10:30 ಗಂಟೆಯ ನಡುವಿನ ಅವಧಿಯಲ್ಲಿ ಮೃತ ಹೆಣ್ಣು ನವಜಾತ ಶಿಶುವನ್ನು ಸರಕಾರಿ ರುದ್ರ ಭೂಮಿಯಲ್ಲಿ ವಿಸರ್ಜನೆ ಮಾಡಿದ್ದು ಇರುತ್ತದೆ. ಆದ್ದರಿಂದ ಆ ಅನಾಥ ಹೆಣ್ಣು ನವಜಾತ ಶಿಶುವಿನ ತಂದೆ-ತಾಯಿಯನ್ನು ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಬಾಯಿ ಮಾತಿನ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 137/2021 ಕಲಂ:318 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ : 82/2021 ಕಲಂ, 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 24/08/2021 ರಂದು 04.50 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಅಯ್ಯಪ್ಪ ಪಿಎಸ್ಐ ಗೋಗಿ ಠಾಣೆ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 24/08/2021 ರಂದು ಗೋಗಿ ಕೆ ಗ್ರಾಮದ ಸರಕಾರಿ ಆಸ್ಪತ್ರೆ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ಮಾನಪ್ಪ ತಂದೆ ಈರಪ್ಪ ತಳವಾರ ವಯಾ:28 ವರ್ಷ ಉ: ಒಕ್ಕಲುತನ ಜಾ; ಕಬ್ಬಲಿಗ ಸಾ: ಗೋಗಿ (ಕೆ) ತಾ: ಶಹಾಪೂರ ಜಿ: ಯಾದಗಿರಿ. ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 03.35 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 5300/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 82/2021 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಗೋಗಿ ಪೊಲೀಸ ಠಾಣೆ
ಗುನ್ನೆ ನಂ : 83/2021 ಕಲಂ, 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 24/08/2021 ರಂದು 05.15 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಸೋಮಲಿಂಗಪ್ಪ ಪಿಎಸ್ಐ (ತನಿಖೆ) ಗೋಗಿ ಠಾಣೆ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 24/08/2021 ರಂದು ಗೋಗಿ ಕೆ ಗ್ರಾಮದ ಚಂದಾಹುಸೆನಿ ದಗರ್ಾದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ಸೋಪಿಲಾಲ ತಂದೆ ಇಮಾಮಸಾಬ ಮುಜಾವರ ವಯಾ: 50 ಉ: ಕೂಲಿ ಜಾ; ಮುಸ್ಲೀಂ ಸಾ: ಗೋಗಿ ಕೆ ತಾ: ಶಹಾಪೂರ ಜಿ: ಯಾದಗಿರಿ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 04.05 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 6310/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 83/2021 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಸೈದಾಪೂರ ಪೊಲೀಸ ಠಾಣೆ
ಗುನ್ನೆ ನಂ : 132/2021 ಕಲಂ. 279, 337, 338 ಐಪಿಸಿ : ಇಂದು ದಿನಾಂಕ. 24.08.2021 ರಂದು ಬೆಳಿಗ್ಗೆ 09.00 ಗಂಟೆಗೆ ಶ್ರೀ ಶ್ರೀನಾಥ ತಂದೆ ರಮೇಶ ವಯ||30 ವರ್ಷ, ಜಾ|| ಎಸ್.ಸಿ. ಚಲುವಾದಿ ಉ|| ವೈ.ಟಿ.ಪಿ.ಎಸ್. ಇಂಜಿನಿಯರ ಸಾ|| 4-5-104 ಮಂಗಳವಾರ ಪೇಟ್ ರಾಯಚೂರ ಇವರು ಠಾಣೆಗೆ ಬಂದು ನೀಡಿದ ದೂರು ಸಾರಾಂಶವೇನೆಂದರೆ, ದಿನಾಂಕ. 18.08.2021 ರಂದು ರಾತ್ರಿ 12-30 ಗಂಟೆ ಸುಮಾರಿಗೆ ಸೈದಾಪೂರ ಕರಿಬೆಟ್ಟ ಕ್ರಾಸ ಹತ್ತಿರ ಕಾರನ್ನು ನಡೆಸುತ್ತಿದ್ದ ಶ್ರೀಕಾಂತನು ಕಾರ ನಂ. ಕೆ.ಎ-36, ಪಿ-4190 ನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿದ್ದರಿಂದ ಎನ್.ಹೆಚ್-150 ಹೈವೆ ಮೇಲೆ ಸ್ಕಿಡ ಆಗಿ ರೋಡಿನ ಪಕ್ಕದಲ್ಲಿ ಬಿದ್ದಿದ್ದರಿಂದ ಅಪಘಾತದಲ್ಲಿ ಕಾರನಲ್ಲಿದ್ದ ನನಗೆ ಎಡಭುಜದ ಹತ್ತಿರದ ಮೂಳೆಗೆ ಒಳಪೆಟ್ಟಾಗಿದ್ದು, ವೈಜನಾಥ ಇವರಿಗೆ ಕುತ್ತಿಗೆ ಹಿಂದುಗಡೆ ಬೆನ್ನುಮೂಳೆಗೆ ಭಾರಿ ಒಳಪೆಟ್ಟಾಗಿದ್ದು, ಕೆಳತುಟಿಗೆ ರಕ್ತಗಾಯವಾಗಿರುತ್ತದೆ. ಕಾರ ನಡೆಸುತ್ತಿದ್ದ ಶ್ರೀಕಾಂತನಿಗೆ ಯಾವ ಗಾಯ ಆಗಿರುವದಿಲ್ಲ.. ಸದರಿ ಕಾರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

 

ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ: 131/2021 ಕಲಂ:295 ಐಪಿಸಿ : ಇಂದು ದಿನಾಂಕ:24/08/2021 ರಂದು 9 ಪಿ.ಎಂಕ್ಕೆ ಪಿಯರ್ಾದಿ ಶ್ರೀ ಮಾನಪ್ಪ ತಂದೆ ಸೋಮಪ್ಪ ಕಟ್ಟಿಮನಿ ಸಾ|| ಝಂಡದ ಕೇರಾ ಸುರಪುರ ಇವರು ಠಾಣೆಗೆ ಹಾಜರಾಗಿ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನಂದರೆ, ಸುಮಾರು 2006-07 ರಲ್ಲಿ ಬದ್ದನ ಕಲ್ಲಿನ ಮೂತರ್ಿಯನ್ನು ಗುಡ್ಡದ ಗವಿಯಲ್ಲಿ ಪ್ರತಿಷ್ಠಪನೆ ಮಾಡಿರುತ್ತೇವೆ. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ತೋಂದರೆ ಮತ್ತು ಕಳಂಕವಾಗುವ ಘಟನೆಗಳು ಆಗಿರುವುದಿಲ್ಲ. ಸುಮಾರು 8 ದಿವಸಗಳಿಂದ ದಿನಾಂಕ:22/08/2021 ರಂದು ಸಂಜೆ 5:30 ರ ಮದ್ಯದ ಅವದಿಯಲ್ಲಿ ಯಾರೋ ದುಷ್ಕಮರ್ಿಗಳು ಸುರಪುರ ಗವಿ ಬುದ್ದ ವಿಹಾರದಲ್ಲಿದ್ದ ಮಾಹಾತ್ಮ ಗೌತಮ ಬುದ್ದರ ಕಲ್ಲಿನ ಮೂತರ್ಿಯನ್ನು ಒಡೆದು ಹಾಕಿ ಹೊಗಿರುತ್ತಾರೆ ಅದನ್ನು ಶ್ರೀ ಮಹೇಶಕುಮಾರ ತಂದೆ ಬಸವಲಿಂಗಪ್ಪ ಸುಂಗಲಕರ್ ಇವರು ದಿನಾಂಕ:22/08/2021 ರಂದು ಸಂಜೆ 5:30 ಗಂಟೆಗೆ ಬುದ್ದ ವಿಹಾರದ ಕಡೆಗೆ ಹೊಗಿದ್ದಾಗ ಮೂತರ್ಿ ನೋಡಿ ನಮಗೆ ಬಂದು ಹೇಳಿರುತ್ತಾರೆ. ಆಗ ನಾವು ಹೊಗಿ ಮೂತರ್ಿ ಒಡೆದು ಹಾಕಿರುವುದುನ್ನು ನೋಡಿರುತ್ತೇವೆ ನಾವು ಖಾಸಗಿ ಸವರ್ೆ ನಂ.31 ರ ಹೆಸರಲ್ಲಿ ಸರಕಾರಿ ಭೂಮಿ ಮಾರಾಟ ಮಾಡುವುದನ್ನು ಜಿಲ್ಲಾ ಆಡಳಿತ ಮತ್ತು ತಾಲ್ಲೂಕ ಆಡಳಿತಕ್ಕೆ ಮನವಿ ಸಲ್ಲಿಸುತ್ತಾ ಬಂದಿರುತ್ತೇವೆ ಆ ಒಂದು ಸೇಡಿಗಾಗಿ ಸವರ್ೇ ನಂ. 31 ರ ಮಾಲಿಕರೇ ಮಾಡಿರಬುಹುದು, ಇಲ್ಲಾ ಬುದ್ದವಿಹಾರಕ್ಕೆ ಸಂಬಂದಿಸಿದ ಜಾಗದಲ್ಲಿ ಬಂದು ಮದ್ಯ ಸೇವನೆ ಮಾಡುವವರು, ಜೂಜಾಟ ಆಡುವವರು ಮಾಹಾತ್ಮ ಗೌತಮ ಬುದ್ದರ ಕಲ್ಲಿನ ಮೂತರ್ಿ ಒಡೆದು ಹಾಕಿರಬಹುದು. ಸದರಿ ಮೂತರ್ಿಯನ್ನು ಒಡೆದವರು ಯಾರೆಂಬುದು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.131/2021 ಕಲಂ: 295 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಇತ್ತೀಚಿನ ನವೀಕರಣ​ : 25-08-2021 05:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080