ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 25-09-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 140/2022 ಕಲಂ. 279, 338 ಐಪಿಸಿ & 187 ಐ.ಎಮ್.ವಿ ಕಾಯ್ದೆ : ದಿನಾಂಕ: 24-09-2022 ಮದ್ಯಾಹ್ನ 01-30 ಗಂಟೆಗೆ ಯಾದಗಿರಿ ವಿವಿಆರ್ ಮುದ್ನಾಳ ಆಸ್ಪತ್ರೆಯಿಂದ ಎಮ್ ಎಲ್ ಸಿ ಇದೆ ಅಂತಾ ತಿಳಿಸಿದ ಮೇರಗೆ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಗಾಯಾಳು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಆತನ ತಮ್ಮ ನಿಂಗಪ್ಪ ಈತನು ಪಿಯಾಧಿ ನಿಡಿದ ಸಾರಂಶವೆನೆಂದರೆ ದಿನಾಂಕ: 24-09-2022 ರಂದು ಬೆಳಿಗ್ಗೆ 08-45 ಗಂಟೆಗೆ ನಮ್ಮ ಅಣ್ಣ ಆರ್ ಹೊಸಲ್ಳಿ ಗ್ರಾಮದಿಂದ ಕಂದಕೂರ ಗ್ರಾಮದ ಕಡೆಗೆ ಹೋಗುತ್ತಿರುವಾಗ ರಾಮಸಮುದ್ರ- ಮೈಲಾಪೂರ ಮಧ್ಯ ರೋಡಿನ ಮೇಲೆ ಲಾರಿ ನಂ. ಟಿ.ಎನ್-90. 4888 ನೇದ್ದರ ಚಾಲಕನು ಅತಿವೇಗ ಮತ್ತು ನಿರ್ಲಕ್ಷತನದಿಮದ ನಡೆಸಿ ಅಪಘಾತಪಡಿಸಿದ್ದು ಅಪಘಾತದಲ್ಲಿ ಭೀರಪ್ಪನಿಗೆ ತಲೆಯ ಮುಂಭಾಗ ಮತ್ತು ಎಡ ಹಣೆಗೆ ಭಾರಿ ರಕ್ತಗಾಯವಾಗಿರುತ್ತದೆ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಪಿಯರ್ಾಧಿ.


ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 78/2022 ಕಲಂ 279, 337 ಐ.ಪಿ.ಸಿ : ಆರೋಪಿತನುದಿನಾಂಕ:21/09/2022 ರಂದುರಾತ್ರಿ 09.00 ಗಂಟೆ ಸುಮಾರಿಗೆ ಕಲಬುರಗಿಯಿಂದ ಕೆಲಸ ಮುಗಿಸಿಕೊಂಡು ಮರಳಿ ಊರಕಡೆಗೆ ಹೊರಟಾಗ ಹುಲಕಲ್(ಕೆ) ಹತ್ತಿರ ಶಹಾಪೂರ-ಕಲಬುರಗಿ ಮುಖ್ಯರಸ್ತೆಯ ಪಕ್ಕದಲ್ಲಿಯಾವುದೋಒಂದು ವಾಹನ ನಿಂತಿದ್ದುಅದೇ ಸಮಯಕ್ಕೆಆರೋಪಿತನುತನ್ನಕಾರನ್ನುಅತಿವೇಗ ಮತ್ತುಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದಕಾರ್ ಚಾಲಕನ ನಿಯಂತ್ರಣತಪ್ಪಿರಸ್ತೆಯ ಬದಿಗೆ ನಿಲ್ಲಿಸಿದ ಯಾವುದೋಒಂದು ವಾಹನದ ಹಿಂಭಾಗಕ್ಕೆಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಸದರಿಅಪಘಾತದಲ್ಲಿಆರೋಪಿತನತುಡಿಗೆ, ಎಡಗಾಲ ಮೊಳಕಾಲಿಗೆ ರಕ್ತಗಾಯಗಳಾದ ಬಗ್ಗೆ ದೂರು.

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 73/2022 ಕಲಂ 379 ಐಪಿಸಿ ಮತ್ತು 44(1) ಕೆಎಮ್ಎಮ್ಸಿ ರೂಲ್ 1994 : ಇಂದು ದಿನಾಂಕ: 24/09/2022 ರಂದು 06.15 ಪಿ.ಎಮ್ ಕ್ಕೆ ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ ಹೊಸಕೇರಾ ಕಡೆಯಿಂದ ಗೋಗಿ ಕೆ ಕಡೆಗೆ ಒಂದು ಟ್ರ್ಯಾಕ್ಟರ್ದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ ಅಂತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಸಿಬ್ಬಂದಿ ಹಾಗು ಪಂಚರೊಂದಿಗೆ ಗೋಗಿ ಕೆ ಗ್ರಾಮದ ಸಿಂದಗಿ ಶಹಾಪೂರ ರೋಡಿನ ಹೊಸಕೇರಾ ಕ್ರಾಸ ಹತ್ತಿರ ಹೋಗಿ ನಿಂತಾಗ 06.45 ಎ.ಎಮ್ ಕ್ಕೆ ಹೊಸಕೇರಾ ಕಡೆಯಿಂದ ಒಂದು ಮರಳು ತುಂಬಿದ ಟ್ರ್ಯಾಕ್ಟರ್ ಬಂದಿದ್ದು, ಸದರಿ ಮರಳಿನ ಬಗ್ಗೆ ಅದರ ಚಾಲಕನಿಗೆ ಮರಳನ್ನು ಸಕರ್ಾರಕ್ಕೆ ರಾಜಧನ(ರಾಯಲ್ಟಿ)ವನ್ನು ಕಟ್ಟದೇ ಕೃಷ್ಣಾ ನದಿಯಲ್ಲಿ ಕಳ್ಳತನದಿಂದ ಮರಳು ಲೋಡ ಮಾಡಿಕೊಂಡು ಅಕ್ರಮವಾಗಿ ಸಾಗಿಸಿದ್ದು ಇರುತ್ತದೆ ಅಂತಾ ತಿಳಿಸಿದ್ದರಿಂದ ಸದರಿಯವನಿಗೆ ಹೆಸರು ವಿಳಾಸ ವಿಚಾರಿಸಲಾಗಿ ಸದರಿಯವನು ಟ್ರ್ಯಾಕ್ಟರ್ ದಿಂದ ಇಳಿದು ಓಡಿ ಹೋಗಿದ್ದು, ನಂತರ ಸದರಿ ಮರಳು ತುಂದ ಟ್ರ್ಯಾಕ್ಟರ್ ಅನ್ನು ಖಾಸಗಿ ಚಾಲಕನ ಸಹಾಯದಿಂದ ಠಾಣೆಗೆ ತಂದು 08.25 ಎಎಮ್ ಕ್ಕೆ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದರಿಂದ ಗೋಗಿ ಠಾಣೆ ಗುನ್ನೆ ನಂ: 73/2022 ಕಲಂ 379 ಐಪಿಸಿ ಮತ್ತು 44(1) ಕೆಎಮ್.ಎಮ್.ಸಿ ರೂಲ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 166/2022 ಕಲಂ 87 ಕೆಪಿ ಆಕ್ಟ್ : ಇಂದು ದಿನಾಂಕ:24/09/2022 ರಂದು ಸಾಯಾಂಕಾಲ 06-00 ಗಂಟೆಗೆ ಪಿರ್ಯಾರಿ ಶ್ರೀ ನಾನು ರಾಹುಲ ಪವಾಡೆ ಪಿ.ಎಸ್.ಐ(ಕಾಸು) ಶಹಾಪೂರ ಪೊಲೀಸ ಠಾಣೆ ರವರು ಠಾಣೆಗ ಹಾಜರಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ ಇಂದು ದಿನಾಂಕ: 24/09/2022 ರಂದು ರಂದು 03.00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಗಂಗಾನಗರದ ಹತ್ತಿರ ಇರುವ ಅಮರ ಕಲ್ಯಾಣ ಗುಡಿ ಹತ್ತಿರ ಗುಡ್ಡದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಶ್ರೀ ಬಾಬು ಹೆಚ್.ಸಿ-162, ಶ್ರೀ ಶಂಕರಲಿಂಗ ಹೆಚ್.ಸಿ-131, ರಾಮಚಂದ್ರ ಪಿಸಿ-266, ಶ್ರೀ ಮುತ್ತಪ್ಪ ಪಿಸಿ-118, ಬಸವರಾಜ ಪಿಸಿ-346, ಹಾಗೂ ಧರ್ಮರಾಜ ಪಿಸಿ-45 ರವರನ್ನು ಕರೆದು ಸದರಿ ವಿಷಯವನ್ನು ತಿಳಿಸಿ, ಬಾಬು ಹೆಚ್.ಸಿ-162 ರವರಿಗೆ ದಾಳಿಗಾಗಿ ಇಬ್ಬರ ಪಂಚರನ್ನು ಕರೆಯಿಸಲು ತಿಳಿಸಿದ್ದರಿಂದ ಪಂಚರಾದ 1) ಶ್ರೀ ಸೋಮನಗೌಡ ತಂದೆ ಶಾಂತಗೌಡ ಕಟ್ಟಿಮನಿ ವಯಾ: 27 ವರ್ಷ ಜಾತಿ: ಕಬ್ಬಲಿಗ ಉ: ಒಕ್ಕಲುತನ ಸಾ: ಗಂಗಾನಗರ ಶಹಾಪೂರ 2) ಶ್ರೀ ಬಸವರಾಜ ತದೆ ಯಲ್ಲಪ್ಪ ಬೋವಿ ವಯಾ:26 ವರ್ಷ ಜಾತಿ: ವಡ್ಡರ ಉ: ಕೂಲಿಕೆಲಸ ಸಾ: ಹಳಿಪೇಠ ಶಹಾಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯ ತಿಳಿಸಿ ನಾನು, ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ನಂತರ ಸದರಿಯವರ ಮೇಲೆ ದಾಳಿ ಮಾಡಲು ನಾನು, ಪಂಚರು ಮತ್ತು ಸಿಬ್ಬಂದಿಯವರು ಕೂಡಿ ಒಂದು ಖಾಸಗಿ ಜೀಪಿನಲ್ಲಿ ಕುಳಿತುಕೊಂಡು, ಠಾಣೆಯಿಂದ 03.30 ಪಿ.ಎಂ ಕ್ಕೆ ಹೊರಟು ನಗರದ ಗಂಗಾನಗರಕ್ಕೆ ಹೊಂದಿಕೊಂಡು ಗುಡ್ಡದಲ್ಲಿರುವ ಅಮರ ಕಲ್ಯಾಣ ಗುಡಿ ಹತ್ತಿರ 03.40 ಪಿ.ಎಂ.ಕ್ಕೆ ಹೋಗಿ ಜೀಪ ನಿಲ್ಲಿಸಿ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಗುಡಿ ಹತ್ತಿರ ಖುಲ್ಲಾ ಜಾಗೆಯಲ್ಲಿ ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದು ಅದರಲ್ಲಿ ಒಬ್ಬ ಅಂದರ 100 ರೂ ಇನ್ನೊಬ್ಬ ಬಾಹರ 100 ರೂ. ಎಂದು ಹೇಳಿ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಸೇರಿ 03-50 ಪಿ.ಎಮ್ ಕ್ಕೆ ಒಮ್ಮೆಲೆ ದಾಳಿ ಮಾಡಿ ಹಿಡಿಯಲಾಗಿ, ದಾಳಿಯಲ್ಲಿ ಒಬ್ಬನು ಸಿಕ್ಕಿದ್ದು ಸದರಿಯವರಿಗೆ ಹೆಸರು ಮತ್ತು ವಿಳಾಸ್ ವಿಚಾರಿಸಲಾಗಿ 1) ಮೌನೇಶ ತಂದೆ ಅಬಣ್ಣ ನಾಯ್ಕೋಡಿ ವ|| 30 ವರ್ಷ ಜಾ|| ಕಬ್ಬಲಿಗ ಉ|| ಖಾಸಗಿ ಕೆಲಸ ಸಾ|| ಗಂಗಾನಗರ ಶಹಾಪೂರ ಅಂತಾ ತಿಳಿಸಿದ್ದು, ಇತನ ಅಂಗಶೋಧನ ಮಾಡಲಾಗಿ ಆತನ ಹತ್ತಿರ 6000/-ರೂಗಳು ಸಿಕ್ಕಿದ್ದು, ನಂತರ 4 ಜನರು ಓಡಿ ಹೋಗಿದ್ದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ 2) ವೆಂಕಟೇಶ ತಂದೆ ರಾಮಲಿಂಗ ನಾಯ್ಕೊಡಿ ವಯಾ: 32 ವರ್ಷ ಉ: ಒಕ್ಕಲುತನ ಸಾ: ಕೊಲುರ 3) ಮೂಬಾರಕ ತಂದೆ ಅಲಿಯಾಸ ದೈಹಿನ್ ಚೌದ್ರಿ ವಯಾ: 26 ವರ್ಷ ಉ: ಒಕ್ಕಲುತನ ಸಾ: ತಿಪನಹಳ್ಳಿ 4) ಗುಡದಪ್ಪ ಪೂಜಾರಿ ವಯಾ: 35 ವರ್ಷ ಉ: ಒಕ್ಕಲುತನ ಸಾ:ಸಲದಾಪೂರ 5) ರಾಜು ದೋರನಳ್ಳಿ ವಯಾ: 26 ವರ್ಷ ಉ: ಒಕ್ಕಲುತನ ಸಾ: ದೋರನಳ್ಳಿ ಅಂತಾ ಗೊತ್ತಾಗಿರುತ್ತದೆ, ಎಲ್ಲರ ಮುಂದಿನ ಕಣದಲ್ಲಿ 19,000/-ರೂ. ಮತ್ತು 52 ಇಸ್ಪೀಟ ಎಲೆಗಳು ಇದ್ದು ಹೀಗೆ ಒಟ್ಟು 25,000/- ರೂ. ನಗದು ಹಣ ಮತ್ತು 52 ಇಸ್ಪೀಟ ಎಲೆಗಳು ಸಿಕ್ಕಿದ್ದು, ಸದರಿ ಮುದ್ದೆಮಾಲುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ಸಿಕ್ಕ ಮುದ್ದೆಮಾಲನ್ನು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 03-50 ಪಿ.ಎಮ್ ದಿಂದ 04.50 ಪಿ.ಎಂ ವರೆಗೆ ಜಪ್ತಿ ಪಂಚನಾಮೆಯನ್ನು ಮಾಡಿ ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ 4 ಜನ ಓಡಿ ಹೋಗಿದ್ದು, ಸಿಕ್ಕ ಒಬ್ಬ ಆರೋಪಿತನೊಂದಿಗೆ ಮರಳಿ ಠಾಣೆಗೆ 05.00 ಪಿ.ಎಂ ಕ್ಕೆ ಬಂದು ದಾಳಿಯಲ್ಲಿ ಸಿಕ್ಕ ಒಬ್ಬ ಹಾಗೂ ಓಡಿ ಹೋದ 4 ಜನರ ವಿರುದ್ದ ವರದಿ ತಯ್ಯಾರಿಸಿ, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ಒಬ್ಬ ಆರೋಪಿ ಮತ್ತು ಓಡಿ ಹೋದ 4 ಜನರ ಮೇಲೆ ಮುಂದಿನ ಕ್ರಮ ಕೈಕೊಳ್ಳಲು ವರದಿ ನೀಡಿದ್ದು, ಸದರಿ ವರದಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 166/2022 ಕಲಂ: 87 ಕೆ.ಪಿ ಯಾಕ್ಟ ಅಡಿಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 36/2022 ಕಲಂ: 143, 147, 148, 323, 324, 504, 506, ಸಂಗಡ 149 ಐಪಿಸಿ : ಇಂದು ದಿನಾಂಕ : 24/09/2022 ರಂದು 1:30 ಪಿ.ಎಂ ಕ್ಕೆ ಶ್ರೀ ರಾಮಪ್ಪ ತಂದೆ ಲಾಲಸಿಂಗ್ ರಾಠೋಡ ವ:70 ವರ್ಷ ಉ:ಒಕ್ಕಲುತನ ಜಾ:ಹಿಂದು ಲಮಾಣಿ ಸಾ:ಮಾರನಾಳ ತಾಂಡಾ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆನೆಂದರೆ ನಮ್ಮ ತಂದೆ ತಾಯಿಯವರಿಗೆ ನಾವು ಮೂರು ಜನ ಗಂಡು ಮಕ್ಕಳಿದ್ದು ನಾನೆ ದೊಡ್ಡವನಿದ್ದು ನನ್ನ ಹಿಂದೆ ಲಚ್ಚಪ್ಪ ಹಾಗೂ ಕೊನೆಯವನು ಸೂರಪ್ಪನು ಇರುತ್ತಾನೆ ನನ್ನ ಹೆಸರಿನಲ್ಲಿ ಯರಕಿಹಾಳ ಸೀಮಾಂತರದ ಹೊಲ ಸವರ್ೆ ನಂ 30 ರಲ್ಲಿಯ 1 ಎಕರೆ 1 ಗುಂಟೆ ಜಮೀನು ಇರುತ್ತದೆ. ನನ್ನ ಮಕ್ಕಳು ದೇಶಕ್ಕೆ ದುಡಿಯಲು ಹೋಗಿದ್ದರಿಂದ ನನಗೆ ಹೊಲ ಮಾಡಲು ಸಾದ್ಯ ವಾಗದೆ ಇದ್ದುದರಿಂದ ನನ್ನ ಹೆಸರಿನಲ್ಲಿ ಇರುವ ಹೊಲವನ್ನು ಈಗ ಸುಮಾರು 20 ವರ್ಷ ಗಳಿಂದ ನನ್ನ ತಮ್ಮ ಸೂರಪ್ಪ ಮಕ್ಕಳಿಗೆ ಲೀಜಗೆ ಹಾಕಿದ್ದೇನು. ಈಗ ನನ್ನ ಮಕ್ಕಳು ಹಾಗೂ ನನ್ನ ಮೊಮ್ಮಳು ಹೊಲವನ್ನು ನಾವೆ ಸಾಗುವಳಿ ಮಾಡುತ್ತವೆ ಅಂತಾ ಬಂದಿದ್ದರಿಂದ ನಾನು ನನ್ನ ತಮ್ಮನ ಮಗ ದೊಡ್ಡದೀರಪ್ಪನಿಗೆ ಹೋಲವನ್ನು ನಮಗೆ ಬಿಡು ಅಂತಾ ಕೆಳಿದ್ದಕ್ಕೆ ನಮ್ಮ ತಮ್ಮ ಸೂರಪ್ಪನ ಮಗ ದೊಡ್ಡದೀರಪ್ಪನು ಇಲ್ಲಾ ನಾವು ಹೊಲವನ್ನು ಖರೀದೆ ಮಾಡಿದ್ದೇವೆ ನಾವು ಹೊಲವನ್ನು ನಿಮಗೆ ಬಿಡುವದಿಲ್ಲ ಅಂತಾ ಅಂದನು, ಆಗ ನಾನು ಈ ವಿಷಯದ ಬಗ್ಗೆ ನ್ಯಾಯ ಪಂಚಾಯಿತಿ ಮಾಡಿಸುವ ಸಲುವಾಗಿ ದಿನಾಂಕ 16/09/2022 ರಂದು ಮುಂಜಾನೆ 10:00 ಗಂಟೆಗೆ ನಮ್ಮ ತಾಂಡಾದ ದೈವದ ಮಂದಿಯಾದ ಶೇಖರ ಟಿಪಿ, ರಾಮುನಾಯಕ , ರೇವಣಪ್ಪ ತಂದೆ ಗೀಗಪ್ಪ, ಶಾಂತಿಲಾಲ ತಂದೆ ದೇವಲಪ್ಪ, ದೇವಲಪ್ಪ ತಂದೆ ರಾಮಪ್ಪ ಹಾಗೂ ಇತರರು ಕೂಡಿ ನಮ್ಮ ತಾಂಡಾದ ಸೇವಾಲಲ ಕಟ್ಟೆಯ ಹತ್ತಿರ ನ್ಯಾಯ ಪಂಚಾಯಿತಿಗೆ ಕೂಡಿಸಿದ್ದು ಎಲ್ಲರು ಕೂಡಿ 11:00 ಗಂಟೆಯ ವರೆಗೆ ನ್ಯಾಯಪಂಚಾಯಿತಿ ಮಾಡಿದ್ದು ಅವರ ಮಾತಿಗೆ ದೊಡ್ಡದೀರಪ್ಪನು ಒಪ್ಪಲಿಲ್ಲ, ಆಗ ನಾನು ದೈವದ ಮಂದಿಗೆ ಕೋರ್ಟನಿಂದ ನಾವು ಹೊಲವನ್ನು ತಗೆದುಕೊಳ್ಳುತ್ತೇವೆ ಅಂತಾ ಅಂದು ನಾನು ಮತ್ತು ನಮ್ಮ ಮನೆಯಯವು ಕೂಡಿ ನಮ್ಮ ಮನೆಗೆ ಹೋಗಬೆಕೆನ್ನುವ ಸಲುವಾಗಿ ಮಾರನಾಳ ತಾಂಡಾದ ಸೇವಲಾಲ ಕಟ್ಟೆಯ ಹತ್ತಿರ ನಿಂತಾಗ 11:30 ಗಂಟೆಯ ಸುಮಾರಿಗೆ ಅಲ್ಲಿಗೆ ಬಂದ ನಮ್ಮ ತಾಂಡಾದ 1) ದೊಡ್ಡದೀರಪ್ಪ ತಂದೆ ಸೂರಪ್ಪ ರಾಠೋಡ 2) ಜಯಶ್ರೀ ಗಂಡ ದೊಡ್ಡದೀರಪ್ಪ ರಾಠೋಡ, 3) ಜಮುನಾಬಾಯಿ ಗಂಡ ಸೂರಪ್ಪ ರಾಠೋಡ 4) ಸಣ್ಣದೀರಪ್ಪ ತಂದೆ ಸೂರಪ್ಪ ರಾಠೋಡ 5) ಬಾಬು ತಂದೆ ಪೂರಪ್ಪ ಚವ್ಹಾಣ 6) ಸೇವಲಿಬಾಯಿ ಗಂಡ ಸಣ್ಣದೀರಪ್ಪ 7) ಮೌನೇಶ ತಂದೆ ದೊಡ್ಡದೀರಪ್ಪ ರಾಠೋಡ ರವರು ತಮ್ಮ ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಏಕೊದ್ದೇಶದಿಂದ ಅಲ್ಲಿಗೆ ಬಂದು ಅವರಲ್ಲಿಯ ದೊಡ್ಡದೀರಪ್ಪ ಈತನು ನನಗೆ ಬೋಸುಡಿ ಮಗನ್ಯಾ ಹೊಲವನ್ನು ಕೊಡುತ್ತೇನೆ ಅಂತಾ ನಮ್ಮ ಅಪ್ಪನ ಹತ್ತಿರ ರೊಕ್ಕವನ್ನು ತಗೆದುಕೊಂಡು ಈಗ ಹೊಲವನ್ನು ಕೊಡುವದಿಲ್ಲ ಅಂತಾ ಅಂತಿಯಾ ಬೊಸುಡಿ ಮಗನ್ಯಾ ಹೊಲನರ ಬಿಡು ಇಲ್ಲಾ ನಮ್ಮ ರೊಕ್ಕನಾದರು ಕೋಡು ಅಂತಾ ನನ್ನೊಂದಿಗೆ ಜಗಳಕ್ಕೆ ಬಿದ್ದೇನು, ಆಗ ನನ್ನ ಮೊಮ್ಮಗ ಶಿವಕುಮಾರ ವ: 29 ವರ್ಷ ಈತನು ದೊಡ್ಡದೀರಪ್ಪನಿಗೆ ಅಲ್ಲಪಾ ಮುತ್ಯಾಗ ವಯ್ಯಸ್ಸಾಗಿದೆ ಸ್ವಲ್ಪ ಸರಿಯಾಗಿ ಮಾತಾಡು ಅಂತಾ ಅಂದನು. ಆಗ ದೊಡ್ಡದೀರಪ್ಪನು ನನಗೆ ಬೋಸುಡಿ ಮಗನ್ಯಾ ಹೊಲವನ್ನು ಕೊಡುವದಿಲ್ಲ ಅಂತಾ ಅಂತಿದಿ ಹಾಗೂ ರೊಕ್ಕನು ಕೊಡಾಂಗಿಲ್ಲ ಅಂತಾ ಮಾತಡುತ್ತಿದೆ ಅಂತಾ ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ ಎಡಗೈ ಮೊಳಕೈ ಹತ್ತಿರ ಹೊಡೆದು ರಕ್ತಗಾಯ ಮಾಡಿದನು ಆಗ ನನಗೆ ಹೊಡೆಯುವದನ್ನು ಬಿಡಿಸಿಕೊಳ್ಳಲು ಬಂದ ನನ್ನ ಮೊಮ್ಮಗ ಶಿವಕುಮಾರನಿಗೆ ಅವರಲ್ಲಿಯ ಸಣ್ಣದೀರಪ್ಪನು ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ ಮೊಮ್ಮಗ ಶಿವಕುಮಾರನ ತಲೆಗೆ ಹೊಡೆದು ಗುಪ್ತಪೆಟ್ಟು ಪಡಿಸಿದ್ದು ಇರುತ್ತದೆ ನಮಗೆ ಹೊಡೆಯುವದನ್ನು ಬಿಡಿಸಿಕೊಳ್ಳಲು ಬಂದ ನಮ್ಮ ಮನೆಯವರಾದ ತಿರುಪತಿ ವ:49 ವರ್ಷ ಈತನಿಗೆ ಅವರಲ್ಲಿಯ ಬಾಬು ತಂದೆ ಪೂರಪ್ಪ ಚವ್ಹಾಣ ಈತನು ಕೈಯಿಂದ ಕಪಾಳಕ್ಕೆ ಹೊಡೆದು ಮುಖಕ್ಕೆ ಚೂರಿ ತರುಚಿದ ಗಾಯಪಡಿಸಿದ್ದು ಇರುತ್ತದೆ ನಂತರ. ಲಾಲಸಿಂಗ ವ:21 ವರ್ಷ ಈತನಿಗೆ ಅವರಲ್ಲಿಯ ಮೌನೇಶ ತಂದೆ ದೊಡ್ಡದೀರಪ್ಪ ರಾಠೋಡ ಈತನು ಬಲಗೈ ಹೆಬ್ಬರಳಿಗೆ ಹಾಗೂ ಬಲಗೈ ಮುಂಗೈ ಕೆಳಗೆ ಬಾಯಿಯಿಂದ ಕಡಿದು ತರುಚಿದಗಾಯ ಪಡಿಸಿದ್ದು ಇರುತ್ತದೆ, ನಂತರ ಇಂದ್ರಾಬಾಯಿ ವ:40 ವರ್ಷ ಈತಳಿಗೆ ಅವರಲ್ಲಿಯ ಜಯಶ್ರೀ ಇವಳು ತನ್ನ ಕೈಯಲ್ಲಿಯ ಬಡಿಗೆಯಿಂದ ಬಲಗಾಲ ಪಾದದ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು ಇರುತ್ತದೆ ನಂತರ ನಾವು ಜಗಳವಾಡುವದನ್ನು ನೋಡಿ ಅಲ್ಲಿಯೇ ಇದ್ದ ವಿಶಾಲ ತಂದೆ ಶೇಖರ ರಾಠೋಡ, ಚಂದಪ್ಪ ತಂದೆ ಪರಶುರಾಮ, ಶೇಖರಪ್ಪ ತಂದೆ ಜಗನಪ್ಪ ರವರು ಬಂದು ನಮಗೆ ಹೊಡೆಯುವದನ್ನು ಬಿಡಿಸಿಕೊಂಡಿದ್ದು ಇರುತ್ತದೆ ನಂತರ ಹೋಗುವಾಗ ಅವರಲ್ಲಿಯ ಜಮುನಾಬಾಯಿ ಮತ್ತು ಸೇವಲಿಬಾಯಿ ರವರು ನನಗೆ ಬೋಸುಡಿ ಮಗ್ಯಾನ ಹೊಲವನ್ನು ನಮಗೆ ಬಿಟ್ಟುಕೊಡಲಿಲ್ಲ ಅಂತಾ ಅಂದರೆ ನೀನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು ನಂತರ ನಮ್ಮ ಮನೆಯವರಾದ ಇಂದ್ರಾಬಾಯಿ, ತಿರುಪತಿ, ಲಾಲಸಿಂಗ್ ರವರು ಉಪಚಾರ ಕುರಿತು ಕೊಡೆಕಲ್ಲ ಸರಕಾರಿ ದವಾಖಾನೆಗೆ ಹೋಗಿದ್ದು ನಾನು ಹಾಗೂ ನನ್ನ ಮೊಮ್ಮಗ ಶಿವಪ್ಪ ರವರು ಉಪಚಾರ ಕುರಿತು ದಿನಾಂಕ 16/09/2022 ರಂದು ಲಿಂಗಸೂರ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಕುರಿತು ಸೇರಿಕೆಯಾಗಿದ್ದು ಇರುತ್ತದೆ. ದಿನಾಂಕ 17/09/2022 ರಂದು ನಾರಾಯಣಪೂರ ಪೊಲೀಸ್ ಠಾಣೆಯ ಬಾಬು ಎ.ಎಸ್.ಐ ರವರು ಲಿಂಗಸೂರ ಸರಕಾರಿ ಆಸ್ಪತ್ರೆಗೆ ಬಂದು ನನಗೆ ಹಾಗೂ ನನ್ನ ಮೊಮ್ಮಗ ಶಿವಪ್ಪನಿಗೆ ಘಟನೆಯ ಬಗ್ಗೆ ವಿಚಾರಿಸಿದ್ದು ನಾವು ಬಾಬು ಎ.ಎಸ್.ಐ ಸಾಹೇಬರ ಮುಂದೆ ನಾವು ಹೊಲದ ವಿಷಯದ ಸಂಬಂದ ನಮ್ಮ ಅಣ್ಣ ತಮ್ಮಂದಿರೊಂದಿಗೆ ಜಗಳ ಮಾಡಿಕೊಂಡಿದ್ದು ಈ ಬಗ್ಗೆ ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿಕೊಂಡು ನಂತರ ಠಾಣೆಗೆ ಬಂದು ಪಿಯರ್ಾದಿ ಕೊಡುತ್ತೇವೆ ಅಂತಾ ಅವರ ಮುಂದೆ ಹೇಳಿಕೆ ನೀಡಿದ್ದೇವು ನಂತರ ನಮ್ಮ ಜಗಳದ ಬಗ್ಗೆ ನಮ್ಮ ಹಿರಿಯರೊಂದಿಗೆ ವಿಚಾರಮಾಡಿಕೊಂಡು ಇಂದು ತಡವಾಗಿ ಬಂದು ಪಿಯರ್ಾದಿ ಸಲ್ಲಿಸಿದ್ದು ನನಗೆ ಮತ್ತು ನಮ್ಮ ಮನೆಯವರಿಗೆ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ 7 ಜನರ ಮೇಲೆ ಕೇಸು ಮಾಡಲು ಪಿಯರ್ಾದಿ ಅಜರ್ಿ ಇರುತ್ತದೆ ಅಂತಾ ಪಿಯರ್ಾದಿಯ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ: 35/2022 ಕಲಂ: 143, 147, 148, 323, 324, 504, 506, ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 25-09-2022 01:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080