ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 25-10-2021

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ. 165/2021 ಕಲಂ: 279, 337, ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ : ದಿನಾಂಕ 24.10.2021 ರಂದು ಫಿಯರ್ಾದಿಯು ತನ್ನ ಬೋಲೇರೋ ಪಿಕಾಪ ಮಾಕ್ಸ ಟ್ರಕ ವಾಹನ ನಂ: ಕೆಎ-33-ಬಿ-0275 ನೇದ್ದನ್ನು ತೆಗೆದುಕೊಂಡು ಯಾದಗಿರಯಿಂದ ಗುರುಮಠಕಲ್ ಕಡೆಗೆ ಬರುತ್ತಿರುವಾಗ ಸದರಿ ವಾಹನಕ್ಕೆ ಎದುರುಗಡೆ ಗುರುಮಠಕಲ್ ಕಡೆಯಿಂದ ಆಶೋಕ ಲೈಲೆಂಡ ಕಂಟೇನರ ಲಾರಿ ನಂಬರ ಒಊ-23-ಂಗ-9100 ನೇದ್ದರ ಚಾಲಕನು ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಡಿಕ್ಕಿ ಪಡಿಸಿ ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಈಡಿ ಹೋಗಿದ್ದು ಇದರಿಂದ ಫಿಯರ್ಾದಿ ವಾಹನವು ಪಲ್ಟಿಯಾಗಿ ಪೂತರ್ಿ ಡ್ಯಾಮೇಜಾಗಿದ್ದು ಫಿಯರ್ಾದಿಗೆ ಸಾದ ಸ್ವರೂದ ಗಾಯಗಳಾದ ಬಗ್ಗೆ ಫಿಯರ್ಾದಿ ವಗೈರೆ ಇರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 235/2021 ಕಲಂ 279,338 ಐ.ಪಿ.ಸಿ. : ಇಂದು ದಿನಾಂಕ:24-10-2021 ರಂದು 3:00 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ಮಹ್ಮದ ಶೌಕತ್ ತಂದೆ ಮಹ್ಮದ ಇಸ್ಮಾಯಿಲ್ ಖುರೇಷಿ ವಯ: 38 ವರ್ಷ ಜಾ: ಮುಸ್ಲೀಂ ಉ: ಹೊಟೇಲ್ ಕೆಲಸ ಸಾ: ಖುರೇಷಿಮೊಹಲ್ಲಾ ಸುರಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಏನಂದರೆ, ನಾನು ದಿನಾಂಕ : 23-10-2021 ರಂದು ಜೇವಗರ್ಿಗೆ ನಮ್ಮ ಬೀಗರ ಮನೆಗೆ ಹೋಗಿ ಸಾಯಂಕಾಲ ಮರಳಿ ಶಹಾಪುರಕ್ಕೆ ಬಂದೆನು ಇಲ್ಲಿ ಶಹಾಪುರ ಬಸ್ ನಿಲ್ದಾಣದಲ್ಲಿ ನಮ್ಮೂರ ನನ್ನ ಓಣಿಯ ಮಹ್ಮದ ಮಕ್ತುಮ್ ಸಾಬ ತಂದೆ ಸೈಯದ ಹುಸೇನ್ ಈತನು ನಿಂತಿದ್ದನು. ಆತನಿಗೆ ಬೇಟಿಯಾದಾಗ ಹೇಗೂ ತಡವಾಗಿದೆ ಇಲ್ಲೆ ಶಹಾಪುರದಲ್ಲಿ ಊಟ ಮಾಡಿ ಸುರಪುರಕ್ಕೆ ಹೋಗೋಣವೆಂದು ಮಾತನಾಡಿಕೊಂಡು ಶಹಾಪುರ ನಗರದ ಚಾಂದ್ ಪ್ಯಾಲೇಸ ಎದುರಿನ ದಾಬಾ ಹೊಟೇಲಕ್ಕೆ ಆಟೋದಲ್ಲಿ ಹೋಗಿ ಊಟ ಮಾಡಿ ಮರಳಿ ಬಸ್ ನಿಲ್ದಾಣಕ್ಕೆ ಹೋಗಲು ನಡೆದುಕೊಂಡು ಹೊರಟಿದ್ದೆವು. ಹೀಗೆ ಹೊರಟಾಗ ರಾತ್ರಿ 9:30 ಪಿ.ಎಮ್.ಕ್ಕೆ ಸಹರಾ ಶೋರೂಮ್ ದಾಟಿ 100 ಮೀಟರ ಅಂತರದಲ್ಲಿ ಹೊರಟಾಗ ನಮ್ಮ ಹಿಂದಿನಿಂದ ಒಂದು ಮೊಟಾರ ಸೈಕಲ್ ಸವಾರನು ತನ್ನ ಮೊಟಾರ ಸೈಕಲ್ ನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೊರಟಿದ್ದ ಮಹ್ಮದ ಮಕ್ತುಮ್ ಸಾಬ ತಂದೆ ಸೈಯದ ಹುಸೇನ ಖುರೇಷಿ ರವರಿಗೆ ಡಿಕ್ಕಿ ಪಡಿಸಿದನು. ಅದರಿಂದ ಮಹ್ಮದ ಮಕ್ತುಮ್ ಸಾಬನು ಕೆಳಗೆ ಬಿದ್ದನು ಆತನಿಗೆ ಬಲಗೈ ಭುಜಕ್ಕೆ ಭಾರೀ ಒಳಪಟೆಟ್ಟಾಗಿದೆ. ಮತ್ತು ಎಡಗಾಲ ಮುಂಗಾಲಿಗೆ ಭಾರಿಗಾಯವಾಗಿ ಮುರಿದಿದೆ. ಆಗ ಅಲ್ಲೇ ಹೊರಟಿದ್ದ ಶಹಾಪುರದ ನಯಿಮ್ ಆಫಗಾನ ತಂದೆ ಇನಾಯತ ರಹೆಮಾನ್ ಅಫಘಾನ ಎಂಬುವವರು ಬಂದರು. ನಾನು ಮತ್ತು ಆತನು ಇಬ್ಬರು ಕೂಡಿ ಮಕ್ತುಮ್ ಸಾಬನನ್ನು ಎಬ್ಬಿಸಿದೆವು. ಅಫಘಾತ ಪಡಿಸಿದ ಮೊಟಾರ ಸೈಕಲ್ ಸವಾರನಿಗೂ ಕೂಡಾ ಮುಖಕ್ಕೆ ಗಾಯವಾಗಿವೆ. ಆತನ ಹೆಸರು ಕೇಳಲಾಗಿ ಹಣಮಂತ ತಂದೆ ರಂಗಪ್ಪ ಸಾ: ಸಿಂಧನೂರ ಅಂತಾ ಗೊತ್ತಾಯಿತು. ಮೊಟಾರ ಸೈಕಲ್ ನಂಬರ ನೋಡಲಾಗಿ ಕೆ.ಎ.32-ಇಎನ್-5347 ಇದ್ದು ಅಫಘಾವಾದ ಸ್ಥಳದಲ್ಲೆ ಇರುತ್ತದೆ. ಗಾಯಾಳುಗಳನ್ನು ನಾನು ಮತ್ತು ನಯೀಮ ಆಫಘಾನ ಇಬ್ಬರೂ ಕೂಡಿ ಶಹಾಪುರದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಜಯದೇವ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ ಆತನ ಸಂಭಂದಿಕರು ಅಲ್ಲಿಗೆ ಬಂದಿರುತ್ತಾರೆ ಆದ್ದರಿಂದ ನಾನು ಇಂದು ದಿನಾಂಕ: 24-10-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ದಿನಾಂಕ:23-10-2021 ರಂದು 9:30 ಪಿ.ಎಮ್.ಕ್ಕೆ ಚಾಂದ್ ಪ್ಯಾಲೇಸ ಕಡೆಯಿಂದ ಹೊಸ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೊರಟಿದ್ದ ಮಹ್ಮದ ಮಕ್ತುಮ್ ಸಾಬ ರವರಿಗೆ ಹಿಂದಿನಿಂದ ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿಪಡಿಸಿ ಭಾರಿ ಗಾಯ ಮಾಡಿದ ಮೊಟಾರ ಸೈಕಲ್ ನಂ. ಕೆ.ಎ.32-ಇಎನ್-5347 ನೇದ್ದರ ಸವಾರ ಹಣಮಂತ ತಂದೆ ರಂಗಪ್ಪ ಸಾ: ಸಿಂಧನೂರ ರವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 235/2021 ಕಲಂ. 279, 338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

 


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 167/2021 ಕಲಂ. ಮಹಿಳೆ ಕಾಣೆ : ಇಂದು ದಿನಾಂಕ:24/10/2021 ರಂದು 03:00 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀಮತಿ ಮಾನಮ್ಮ ಗಂಡ ಗುರುಪಾದ ತಳ್ಳೇರ ವಯಾ|| 45 ಜಾ|| ಉಪ್ಪಾರ ಉ|| ಕೂಲಿ ತಾ|| ಸುರಪುರ ಇದ್ದು ಫಿಯರ್ಾದಿ ಸಾರಾಂಸವೆನೆಂದರೆ, ನಗೆ ಒಟ್ಟು 03 ಜನ ಹೆಣ್ಣುಮಕ್ಕಳಿದ್ದು ಇಬ್ಬರಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಇನ್ನೂ ಒಬ್ಬಳ ಮದುವೆ ಮಾಡಿರುವದಿಲ್ಲ. ನನ್ನ ಗಂಡನಾದ ಗುರುಪಾದ ಈತನು ಸುಮಾರು 10 ವರ್ಷಗಳಿಂದ ಮೃತಪಟ್ಟಿರುತ್ತಾನೆ. ನನ್ನ ಹಿರಿಯ ಮಗಳಾದ ಬಸಮ್ಮ ಇವಳಿಗೆ ಹೆಬ್ಬಾಳ (ಬಿ) ಗ್ರಾಮದ ನನ್ನ ತಮ್ಮನಾದ ಆನಂದ ಈತನಿಗೆ ಮದುವೆ ಮಾಡಿಕೊಟ್ಟಿದ್ದು ಹಾಗೂ 2ನೇಯವಳಾದ ನಾಗರತ್ನ ಇವಳಿಗೂ ಕೂಡ ನನ್ನ ಇನ್ನೊಬ್ಬ ತಮ್ಮನಾದ ಮುಕ್ಕಣ್ಣ ಈತನಿಗೆ ಸುಮಾರು 4 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ ಸುಮಾರು 1 ವರ್ಷದವರೆಗೆ ನಾಗರತ್ನ ಇವಳು ಗಂಡನ ಮನೆಯಲ್ಲಿ ಚೆನ್ನಾಗಿದ್ದವಳು ನಂತರ ಈಗ್ಗೆ 3 ವರ್ಷಗಳಿಂದ ತವರು ಮನೆಯಲ್ಲಿಯೇ ಬಂದು ವಾಸವಾಗಿರುತ್ತಾಳೆ. ನಾವು ಆಕಗೆ ಗಂಡನ ಮನೆಗೆ ಹೋಗಿ ಇರು ಇಲ್ಲಿ ಇರುವದು ಸರಿ ಅಲ್ಲ ಅಂತ ಹೇಳಿದರೂ ಕೂಡ ನಾನು ತವರುಮನೆಯಲ್ಲಿಯೇ ಇರುತ್ತೇನೆ ಅಂತ ಹೇಳಿ ನಮ್ಮ ಮನೆಯಲ್ಲಿಯೇ ವಾಸವಾಗಿದ್ದಳು. ಆಕೆಯ ಗಂಡನಾದ ಮುಕ್ಕಣ್ಣ ಈತನು ಆಗಾಗ ನಮ್ಮೂರಿಗೆ ಬಂದು ಹೋಗುವದು ಮಾಡುತ್ತಿದ್ದನು. ಹಿಗಿದ್ದು, ದಿನಾಂಕ:22/10/2021 ರಂದು ರಾತ್ರಿ 10.30 ಗಂಟೆಗೆ ಮನೆಯಲ್ಲಿ ನಾನು, ನನ್ನ ಅತ್ತೆ ಶಿವಮ್ಮ, ಮಕ್ಕಳಾದ ನಾಗರತ್ನ ಹಾಗೂ ಅಶ್ವಿನಿ ಎಲ್ಲರು ಊಟ ಮಾಡಿ ಮಲಗಿಕೊಂಡೆವು. ನಂತರ ಬೆಳಿಗ್ಗೆ 4 ಗಂಟೆ ಸುಮಾರಿಗೆ ನಾನು ಎದ್ದು ನೋಡಲಾಗಿ ನನ್ನ ಮಗಳಾದ ನಾಗರತ್ನ ಇವಳು ಮನೆಯಲ್ಲಿ ಕಾಣಲಿಲ್ಲ. ಆಗ ನಾವೆಲ್ಲರು ಮನೆಯ ಸುತ್ತಮುತ್ತಾ ಹುಡುಕಾಡಿದರು ಸಿಗಲಿಲ್ಲ. ನಂತರ ನಾನು ಗಾಭರಿಯಾಗಿ ನಮ್ಮ ಸಂಬಂದಿಕರ ಮನೆಗೆ ಪೊನ್ ಮತ್ತು ಸುತ್ತ ಮುತ್ತಲಿನ ಊರುಗಳಾದ ಹಂದ್ರಾಳ, ಬಾಚಿಮಟ್ಟಿ, ಆಲ್ದಾಳ, ರುಕ್ಮಾಪುರ ಇನ್ನೂ ಮುಂತಾದ ಊರುಗಳಲ್ಲಿ ಹೂಡುಕಾಡಿದರು ನನ್ನ ಮಗಳು ನಾಗರತ್ನ ಇವಳು ಸಿಕ್ಕಿರುವದಿಲ್ಲ. ಕಾರಣ ನಾನು ಮನೆಯಲ್ಲಿ ವಿಚಾರ ಮಾಡಿ ಹುಡಕಾಡಿ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ. 167/2021 ಕಲಂ: ಮಹಿಳೆ ಕಾಣೆ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಹುಣಸಗಿ ಪೊಲೀಸ ಠಾಣೆ
78/2021 ಕಲಂ. 279, 337 338 ಐಪಿಸಿ : ದಿ:23/10/2021 ರಂದು ಫಿರ್ಯಾದಿ ಹಾಗೂ ಇನ್ನೊಬ್ಬ ಗಾಯಾಳು ಕೂಡಿ ಆರೋಪಿತನ ಶಿಪ್ಟಡಿಜರ್ ಕಾರ್ ನಂ: ಕೆಎ-28 ಡಿ-6652 ನೇದ್ದನ್ನು ಬಾಡಿಗೆ ತೆಗೆದುಕೊಂಡು ಸಿಂದಗಿಯಿಂದ ಲಿಂಗಸೂಗುರಿಗೆ ಹೊರಟಾಗ ಆರೋಪಿತನು ರಾತ್ರಿ 11.30 ಗಂಟೆಯ ಸುಮಾರಿಗೆ ತನ್ನ ಕಾರನ್ನು ಹುಣಸಗಿ ದಾಟಿದ ಮೇಲೆ ಹುಣಸಗಿ-ಕಕ್ಕೇರಾ ರೋಡಿನ ಮೇಲೆ ಎಸ್.ಕೆ ಸ್ಕೂಲ್ ದಾಟಿ ಹೊರಟಾಗ ರಸ್ತೆಯ ತಿರುವಿಗೆ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ರಸ್ತೆಯ ಪೂಲಿನ ಹತ್ತಿರ ನಯಂತ್ರಣ ತಪ್ಪಿ ರಸ್ತೆಯ ಬಲಗಡೆ ಪೂಲಿಗೆ ಡಿಕ್ಕಿ ಕೊಟ್ಟು ಪೂಲಿನ ಕೆಳಗೆ ಕಾರ್ ಪಲ್ಟಿ ಮಾಡಿದ್ದರಿಂದ ಫಿರ್ಯಾದಿ & ಇನ್ನೊಬ್ಬ ಗಾಳುವಿಗೆ ಭಾರಿ & ಸಾದಾ ರಕ್ತಗಾಯಗಳಾದ ಬಗ್ಗೆ ಅಪರಾಧ.

ಇತ್ತೀಚಿನ ನವೀಕರಣ​ : 25-10-2021 10:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080