ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 25-10-2022

ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 140/2022 ಕಲಂ: 279, 337 338 ಐಪಿಸಿ: ಇಂದು ದಿನಾಂಕ. 24/10/2022 ರಂದು 3-00 ಪಿಎಂಕ್ಕೆ ಸರಕಾರಿಆಸ್ಪತ್ರೆಯಿಂದ ಗಾಯಾಳು ಎಂ.ಎಲ್.ಸಿ.ಮಾಹಿತಿ ಮೇರೆಗೆಆಸ್ಪತ್ರೆಗೆ 3-15 ಪಿಎಂಕ್ಕೆ ಬೇಟಿ ನೀಡಿಉಪಚಾರ ಹೊಂದುತ್ತಿದ್ದ ಗಾಯಾಳು ಪಿರ್ಯಾದಿ ಶ್ರೀಮತಿ ಅಂಬ್ರಮ್ಮಗಂಡ ದಿ. ಮಲ್ಲೇಶಪ್ಪಕಿರಗಿ ಸಾಃ ಹೊಸಳ್ಳಿ ಕ್ರಾಸ್ಯಾದಗಿರಿರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಾನು ಮೇಲಿನ ವಿಳಾಸದವಳಿದ್ದು ಮನೆಕೆಲಸ ಮಾಡಿಕೊಂಡುಉಪಜೀವನ ಸಾಗಿಸುತ್ತೇನೆ. ಹೀಗಿದ್ದು ದಿನಾಂಕ. 21/10/2022 ರಂದು ನನ್ನಗಂಡನತಂಗಿಯಗಂಡನಾದಅಂಬ್ರೇಶಗುಮ್ಮ ಸಾಃ ರಂಗಂಪೇಠ ಸುರಪುರಈತನು ಹೃದಯಾಘಾತದಿಂದತೀರಿಕೊಂಡಿದ್ದರಿಂದಆತನಅಂತ್ಯ ಸಂಸ್ಕಾರಕುರಿತು ನಾನು ಮತ್ತು ನನ್ನ ಮಗ ಮಹೇಶ ಕೂಡಿಕೊಂಡುರಂಗಂಪೇಠಕ್ಕೆ ಬಂದಿದ್ದೇವು. ಸಾಯಂಕಾಲ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಅವರ ಮನೆಯಲ್ಲಿಯೇಇದ್ದೇವು ನಂತರ ದಿನಾಂಕ. 22/10/2022 ರಂದುಅಂತ್ಯ ಸಂಸ್ಕಾರ ಮಾಡಿದ ಸ್ಥಳದ ಮೇಲೆ ಕಡ್ಲಿಕಾಳು ಹಾಕುವ ಕಾರ್ಯಕ್ರಮ ಮುಗಿಸಿ ರಾತ್ರಿ ಮನೆಯಲ್ಲಿ ಮಲಗಿಕೊಂಡೆವು. ಅಂಬ್ರೇಶಗುಮ್ಮಈತನುತೀರಿಕೊಂಡ ನಂತರ ದಿನಾಂಕ. 23/10/2022 ರಂದು ಮೂರು ದಿವಸ ಆಗುತ್ತಿದ್ದರಿಂದ ಮೃತನ ಹೆಂಡತಿಯುತನ್ನ ಮನೆಯಲ್ಲಿ ಮಲಗಬಾರದುಯಾವುದಾದರೂಒಂದುದೇವಸ್ಥಾನದಲ್ಲಿ ಮಲಗಬೇಕು ಎಂಬುವ ಹಿಂದೂ ಸಂಪ್ರ್ರದಾಯಇದ್ದುದ್ದರಿಂದಊರಲ್ಲಿಇರುವ ಬಸವನ ಗುಡಿಯಲ್ಲಿ ಮಲಗಿದರಾಯಿತುಅಂತಾ ಮೃತನ ಹೆಂಡತಿ ಶರಣಮ್ಮಗಂಡಅಂಬ್ರೇಶಗುಮ್ಮಾ ಮತ್ತು ಅವಳ ಜೊತೆಗೆ ನಾನು ಇಬ್ಬರೂಕೂಡಿಕೊಂಡುದೇವಸ್ಥಾನದಲ್ಲಿ ಮಲಗಿದರಾಯಿತುಅಂತಾ ನಮ್ಮ ಅಳಿಯ ಬಸ್ಸಪ್ಪತಂದೆಅಂಬ್ರೇಶಗುಮ್ಮಾಈತನ ಮೋಟಾರ ಸೈಕಲ್ ಮೇಲೆ ತನ್ನತಾಯಿ ಶರಣಮ್ಮ ಕುಳಿತುಕೊಂಡಳು ಮತ್ತು ನಮ್ಮ ಅಳಿಯ ವಿರೇಶತಂದೆ ಶರಣಪ್ಪಗುಮ್ಮಾಈತನು ಹೊಸ ಸ್ಕೂಟಿಇದ್ದು ಸ್ಕೂಟಿ ನಂಬರಇನ್ನೂ ಬಂದಿರುವುದಿಲ್ಲಾ ಸದರಿ ಸ್ಕೂಟಿ ಮೇಲೆ ನಾನು ಕುಳಿತುಕೊಂಡೆನು ದೇವಸ್ಥಾನದಲ್ಲಿ ಮಲಗಿಕೊಳ್ಳಲು ಮನೆಯಿಂದ ದಿನಾಂಕ: 23/10/2022 ರಂದುರಾತ್ರಿ 9-15 ಗಂಟೆ ಸುಮಾರಿಗೆ ಹೋರಟೆವು ವೀರೇಶಈತನು ಸ್ಕೂಟಿ ನಡೆಸುತ್ತಿದ್ದು ನಾನು ಸ್ಕೂಟಿ ಹಿಂದೆ ಕುಳಿತಿದ್ದೆನು. ನಮ್ಮ ಮುಂದೆ ಶರಣಮ್ಮ ಮತ್ತುಆಕೆಯ ಮಗ ಬಸ್ಸಪ್ಪಇಬ್ಬರೂ ಮೋ.ಸೈಕಲ್ ಮೇಲೆ ಹೊರಟಿದ್ದುಅವರ ಹಿಂದೆ ನಾನು ಮತ್ತು ವೀರೇಶಕೂಡಿಕೊಂಡು ಸ್ಕೂಟಿ ಮೇಲೆ ಹೊರಟಿದ್ದುರಂಗಂಪೇಠ ಹಳೇ ಎಸ್.ಬಿ.ಐ ರೋಡಿನಕಡೆಗೆೆ ಹೋಗುವ ರಸ್ತೆಯ ಮೇಲೆ ಹೋಗುತ್ತಿರುವಾಗ ವೀರೇಶಈತನು ಸ್ಕೂಟಿಯನ್ನುಅತೀವೇಗ ಮತ್ತು ನಿಷ್ಕಾಳಜಿತನದಿಂದ ಓಡಿಕೊಂಡು ಹೋಗುತ್ತಿದ್ದಾಗ ನಾನು ಅವನಿಗೆ ನಿಧಾನವಾಗಿಓಡಿಸುವಂತೆ ಹೇಳಿದರೂ ಸಹ ಅದೇ ವೇಗದಲ್ಲಿ ಹೋಗಿ ಮುಂದೆರೋಡಿನ ಹಂಸ ಇದ್ದದ್ದನ್ನು ಲೆಕ್ಕಿಸದೆತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಜಗನ್ನಾಥಆಯಿಲ್ ಮಿಲ್ ಹತ್ತಿರಎಡಗಡೆ ಮೂಲೆಯ ಬಲಗಡೆ ಸೈಡಿನಲ್ಲಿರೋಡಿನ ಮೇಲೆ 9-30 ಪಿಎಮಕ್ಕೆ ಅಪಘಾತಕ್ಕಿಡು ಮಾಡಿದನು. ಇದರಿಂದಅಪಘಾತದಲ್ಲಿ ನನಗೆ ಬಲಗಾಲು ತೊಡೆಯಿಂದ ಪಾದದರೆಗೆ ಬಾರಿರಕ್ತಗಾಯ ಮತ್ತುತರಚಿದರಕ್ತಗಾಯವಾಗಿದ್ದು ವಿರೇಶಈತನಿಗೆಕೂಡಾಎಡಗೈಗೆಗುಪ್ತಗಾಯವಾಗಿದ್ದುಇರುತ್ತದೆ. ನಮ್ಮ ಮುಂದೆ ಹೊರಟಿದ್ದ ಶರಣಮ್ಮ ಮತ್ತು ಬಸ್ಸಪ್ಪಇಬ್ಬರೂ ಮರಳಿ ಬಂದು ನಮಗೆ ಎಬ್ಬಿಸಿ ನಮ್ಮ ಮನೆಗೆ ಕರೆದುಕೊಂಡು ಬಂದುಅಪಘಾತವಾದ ಬಗ್ಗೆ ನನ್ನಅಣ್ಣ ಶರಣಪ್ಪತಂದೆ ದಿ. ವೀರಭದ್ರಪ್ಪಗುಮ್ಮಾಇವರಿಗೆ ವಿಷಯ ತಿಳಿಸಿದೆವು. ನಂತರ ನಮಗೆ ಎಂ.ಎಲ್.ಸಿ. ಕೇಸು ಅಂತಾಗೊತ್ತಾಗದೆಇದ್ದುದ್ದರಿಂದ ಖಾಸಗಿ ಉಪಚಾರ ಪಡೆದುಕೊಂಡುಇಂದು ದಿನಾಂಕ. 24/10/2022 ರಂದು 2-30 ಪಿಎಂಕ್ಕೆ ತಡವಾಗಿ ಸುರಪುರ ಸಕರ್ಾರಿಆಸ್ಪತ್ರೆಗೆ ಬಂದು ಸೇರಿಕೆಅಗಿದ್ದುಇರುತ್ತದೆ. ಕಾರಣ ಹೊಸ ಸ್ಕೂಟಿ ಚೆಸ್ಸಿ ನಂ. ಒಆ626ಂಏ4ಘಿಓ1ಊ49544, ಇಂಜಿನ್ ನಂ. ಃಏ4ಊಓ1747881 ನೇದ್ದರ ಸವಾರನಾದ ವಿರೇಶತಂದೆ ಶರಣಪ್ಪಗುಮ್ಮಾಈತನು ಸ್ಕೂಟಿಯನ್ನುಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ಅಪಘಾತಮಾಡಿದ್ದರಿಂದ ನನಗೆ ಈ ಮೇಲಿನಂತೆ ಬಾರೀರಕ್ತಗಾಯ ಮತ್ತು ತರಚಿದಗಾಯಗಳಾಗಿದ್ದು ಸದರಿಯವನ ಮೇಲೆ ಸೂಕ್ತ ಕಾನೂನು ಪ್ರಕಾರಕ್ರಮಜರುಗಿಸಬೆಕೆಂದುಕೊಟ್ಟ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 4-30 ಪಿಎಂಕ್ಕೆ ಬಂದು ಪಿರ್ಯಾದಿ ಹೇಳಿಕೆಯ ಸಾರಾಂಶದ ಮೇಲಿಂದಠಾಣೆಗುನ್ನೆ ನಂ.140/2022 ಕಲಂ. 279,337,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 78/2022 ಕಲಂ.380 ಐಪಿಸಿ: ದಿನಾಂಕ:12/10/2022 ರಂದು ರಾತ್ರಿ ವೇಳೆಯಲ್ಲಿ ಚಂದನ ಪಿಲ್ಲಿಂಗ್ ಸ್ಟೇಶನ್ ಪೆಟ್ರೋಲ್ ಪಂಪದ ಕೀಲಿಯನ್ನು ಪಿರ್ಯಾದಿಯ ಅಳಿಯನಾದ ಮದನಗೋಪಾಲ ಇತನು ರಾತ್ರಿ 10.00 ಗಂಟೆಗೆ ಹಾಕಿ ಪಿರ್ಯಾದಿಯ ಮನೆಗೆ ಬಂದು ಕೀಲಿ ಕೊಟ್ಟು ತಮ್ಮ ಮನೆಗೆ ಹೋಗಿದ್ದು, ಆರೋಪಿತನಿಗೆ ಮೊದಲಿಂದಲೂ ಪೆಟ್ರೋಲ್ ಪಂಪದ ಕೀಲಿ ಇಡುವ ಸ್ಥಳ ಗೋತ್ತಿದ್ದು ಮತ್ತು ಸದರಿ ಪೆಟ್ರೋಲ್ ಪಂಪದಲ್ಲಿ ಹಣ ಇಡುವ ಡ್ರಾ ದ ಕೀಲಿಯನ್ನು ಇಡುವ ಸ್ಥಳವನ್ನು ನೋಡಿದ್ದು ಅಲ್ಲದೇ ಆಗ್ಗಾಗ ಸದರಿ ಪೆಟ್ರೊಲ್ ಪಂಪದಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದು, ದಿ:12/10/2022 ರಂದು ರಾತ್ರಿಯ ವೇಳೆಯಲ್ಲಿ ಪಿರ್ಯಾದಿಯ ಪಕ್ಕದಲ್ಲಿ ಮಲಗಿದಂತೆ ಮಾಡಿ ಸದರಿ ಪೆಟ್ರೋಲ್ ಪಂಪದ ಕೀಲಿಯನ್ನು ಆರೋಪಿತನಾದ ಹಣಮಂತ ತಂದೆ ಗಂಗಪ್ಪ ವಡ್ಡೊಡಗಿ ಸಾ: ಬಲಶೆಟ್ಟಿಹಾಳ ಕಳ್ಳತನದಿಂದ ತೆಗೆದುಕೊಂಡು ಹೋಗಿ ಪೆಟ್ರೋಲ್ ಪಂಪದ ಕ್ಯಾಶ್ ಡ್ರಾ ದಲ್ಲಿ ಇಟ್ಟ 82,000/- ರೂ.ಗಳನ್ನು ಕಳ್ಳತನ ಮಾಡಿಕೊಂಡು ಕ್ಯಾಶ ಡ್ರಾ ಕ್ಕೆ ಮತ್ತೆ ಕೀಲಿಯನ್ನು ಹಾಕಿ ಪೆಟ್ರೋಲ್ ಪಂಪ್ ಗೆ ಕೀಲಿ ಹಾಕಿ ಸದರಿ ಕೀಲಿಯನ್ನು ಪಿರ್ಯಾದಿಯ ಕಾಲಿನ ಹತ್ತಿರ ತಂದು ಇಟ್ಟು ಅದೇ ರಾತ್ರಿಯಲ್ಲಿ ಆರೋಪಿತನು ಒಂದು ಆಟೋ ಚಾಲಕನಿಗೆ ತನ್ನ ತಮ್ಮನಿಗೆ ಅಪಘಾತವಾಗಿ ಅಂತಾ ಹೇಳಿ 500 ರೂ ಕೊಟ್ಟು ಆಟೋದಲ್ಲಿ ಹುಣಸಗಿ ಗೆ ಹೋಗಿ ಅಲ್ಲಿಂದ ಬೇರಕಡೆಗೆ ಹೋದ ಬಗ್ಗೆ ದೂರು.

ಇತ್ತೀಚಿನ ನವೀಕರಣ​ : 25-10-2022 11:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080