Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 25-11-2022

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 59/2022 ಕಲಂ 279, 337,338 ಐಪಿಸಿ : ಇಂದು ದಿನಾಂಕ 24/11/2022 ರಂದು ಬೆಳಿಗ್ಗೆ 11-00 ಎ.ಎಂ.ಕ್ಕೆ ಪಿಯರ್ಾದಿ ಶ್ರೀ ಮಲ್ಲನಗೌಡ ತಂದೆ ಬಸರಾಜಪ್ಪಗೌಡ ಪೊಲೀಸ ಪಾಟೀಲ್ ವಯ;35 ವರ್ಷ, ಜಾ;ಲಿಂಗಾಯತ, ಉ;ಒಕ್ಕಲುತನ, ಸಾ; ಓರುಂಚಾ, ತಾ;ಜಿ;ಯಾದಗಿರಿ ರವರು ಖುದ್ದಾಗಿ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದು, ಸದರಿ ಅಜರ್ಿಯ ಸಾರಾಂಶದವೆನೆಂದರೆ, ನಿನ್ನೆ ದಿನಾಂಕ 23/11/2022 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ನಮ್ಮ ಅಣ್ಣನಾದ ನಿಂಗಣ್ಣಗೌಡ ಈತನು ಯಾದಗಿರಿಗೆ ಹೋಗಿ ಸಂತೆ ಮಾಡಿಕೊಂಡು ಬರುತ್ತೇನೆ ಅಂತಾ ಹೋಗಿದ್ದನು. ನಂತರ ಸಾಯಂಕಾಲ 6-40 ಗಂಟೆಯ ಸುಮಾರಿಗೆ ನನ್ನ ಅಣ್ಣನಾದ ನಿಂಗಣ್ಣಗೌಡ ಈತನು ನನಗೆ ಪೋನ ಮಾಡಿ ತಿಳಿಸಿದ್ದೇನೆಂದರೆ, ಯಾದಗಿರಿಯಲ್ಲಿ ನಾನು ಸಂತೆ ಮಾಡಿಕೊಂಡು ಮರಳಿ ನಮ್ಮೂರಿಗೆ ಬರಬೇಕು ಅಂತಾ ಹತ್ತಿಕುಣಿ ಕ್ರಾಸ ಹತ್ತಿರ ನಿಂತಾಗ ನಮ್ಮೂರಿನ ಮಹಾದೇವಪ್ಪ ತಂದೆ ಮಲ್ಲಣ್ಣಗೌಡ ಪೊಲೀಸ ಪಾಟೀಲ್ ಈತನ ಅಟೋ ಬಂತು ಅದರಲ್ಲಿ ಹತ್ತಿ ನಾನು ಹಿಂದಿನ ಸೀಟಿನ ಬಲಭಾಗದಲ್ಲಿ ಕುಳಿತುಕೊಂಡೆನು. ನನ್ನಂತೆಯೇ ನಮ್ಮೂರಿನ ದೇವಿಂದ್ರಪ್ಪ ತಂದೆ ಭಿಕ್ಷಪ್ಪ ಮಡ್ನಾಳ ಮತ್ತು ಆತನ ಮಗಳಾದ ಭಾರತಿ ಮಡ್ನಾಳ ಇವರು ಕೂಡಾ ಅದೇ ಅಟೋದಲ್ಲಿ ಕಳಿತುಕೊಂಡರು. ಆ ಅಟೋ ನಂ ಕೆಎ-33 ಬಿ-1074 ಇರ್ದುರುತ್ತದೆ. ಆಗ ಅಟೋ ಚಾಲಕನು ತನ್ನ ಅಟೋವನ್ನು ಚಾಲು ಮಾಡಿಕೊಂಡು ನಮ್ಮೂರಿನ ಕಡೆಗೆ ಓಡಿಸಿಕೊಂಡು ಹೋಗುತ್ತಿದ್ದನು. ಮಾರ್ಗ ಮದ್ಯ ಬಂದಳ್ಳಿ ಗ್ರಾಮ ದಾಟಿದ ನಂತರ ಅಟೋ ಚಾಲಕನು ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಹೋಗುತ್ತಿದ್ದನು. ಬಂದಳ್ಳಿ ಗ್ರಾಮದ ಕರೆಯ ಒಡ್ಡಿನ ಹತ್ತಿರ ರೋಡಿನ ಮೇಲೆ ಹೋಗುತ್ತೀರುವಾಗ ಅದೇ ವೇಳೆಗೆ ಎದುರುಗಡೆಯಿಂದ ಒಂದು ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲ್ನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ಅಟೋದ ಬಲಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದನು. ಆಗ ಅಟೋ ಮತ್ತು ಮೋಟಾರು ಸೈಕಲ್ ಎರಡು ರೋಡಿನ ಮೇಲೆ ಪಲ್ಟಿಯಾಗಿ ಬಿದ್ದವು. ಈ ಅಪಘಾತದಲ್ಲಿ ನನ್ನ ಬಲಗಾಲ ಮೋಣಕಾಲ ಕೇಳಗೆ ಮತ್ತು ತೊಡೆಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿರುತ್ತದೆ. ಮತ್ತು ಬೆರಳುಗಳಿಗೆ ತರಚಿದ ಗಾಯವಾಗಿರುತ್ತವೆ. ನನ್ನಂತಯೇ ನನ್ನ ಬಾಜು ಅಟೋದಲ್ಲಿ ಕುಳಿತ ದೇವಿಂದ್ರಪ್ಪ ತಂದೆ ಭಿಕ್ಷಪ್ಪ ಮಡ್ನಾಳ ಈತನಿಗೆ ಮೂಗಿಗೆ ಭಾರಿ ರಕ್ತಗಾಯ, ಬಲಗೈ ಭುಜದ ಹತ್ತಿರ ಮುರಿದಿರುತ್ತದೆ. ಹಣೆಗೆ, ಬಲಗೈ ಮತ್ತು ಎಡಗೈಗೆ ತರಚಿದ ಗಾಯವಾಗಿರುತ್ತದೆ ಹಾಗೂ ಬಲಗಾಲಿಗೆ ತರಚಿದ ಗಾಯವಾಗಿರುತ್ತವೆ. ಹಾಗೂ ಭಾರತಿ ತಂದೆ ದೇವಿಂದ್ರಪ್ಪ ಮಡ್ನಾಳ ಈವಳ ಎರಡು ಕೈಗಳ ಬೆರಳುಗಳಿಗೆ ಮತ್ತು ಮೊಣಕಾಲಿಗೆ ತರಚಿದ ಗಾಯವಾಗಿರುತ್ತದೆ. ಅಟೋ ಚಾಲಕನಾದ ಮಹಾದೇವಪ್ಪ ಈತನಿಗೆ ಯಾವದೇ ಗಾಯಗಳು ಆಗಿರುವದಿಲ್ಲ. ಮೋಟಾರು ಸೈಕಲ್ ನಂ ನಂ ಕೆಎ-33 ಎಕ್ಸ-2219 ನೇದ್ದರ ಸವಾರನಾದ ದೇವಿಂದ್ರ ತಂದೆ ಬಸಲಿಂಗಪ್ಪ ಬಿರಾಳ ಈತನಿಗೆ ಸಣ್ಣಪುಟ್ಟ ಗಾಯಗಳು ಆಗಿರುತ್ತದೆ. ಈ ಅಪಘಾತವು ಸಾಯಂಕಾಲ 6-30 ಗಂಟೆಗೆ ಬಂದಳ್ಳಿ ಯಡ್ಡಳ್ಳಿ ರೋಡಿನಲ್ಲಿ ಬರುವ ಕರೆಯ ಹತ್ತಿರ ರೋಡಿನ ಮೇಲೆ ಜರಗಿರುತ್ತದೆ. ಈ ಅಪಘಾತವು ಅಟೋ ಚಾಲಕ ಮಹಾದೇವಪ್ಪ ಮತ್ತು ಮೋಟಾರು ಸೈಕಲ್ ಸವಾರ ದೇವಿಂದ್ರ ಇವರ ನಿರ್ಲಕ್ಷ್ಯತನದಿಂದ ನಡೆದಿರುತ್ತದೆ. ಆದ್ದರಿಂದ ನೀನು ಬೇಗನೆ ಸ್ಥಳಕ್ಕೆ ಬಾ ಅಂತಾ ಹೇಳಿದ್ದರಿಂದ ಆಗ ನಾನು ಮತ್ತು ನಮ್ಮೂರಿನವರಾದ ಸಾಬಣ್ಣ ತಂದೆ ಹಣಮಂತ ಸೋಸಳೇರ, ಮಲ್ಲಣ್ಣಗೌಡ ತಂದೆ ಭಿಕ್ಷಪ್ಪಗೌಡ ಪೊಲೀಸ ಪಾಟೀಲ್ ಮೂವರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಈ ಮೇಲಿನಂತೆ ಘಟನೆ ನಡೆದು ಎಲ್ಲರಿಗೂ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದ ಗಾಯಗಳು ಆಗಿದ್ದವು. ನಂತರ ನಾವು ಮೂರು ಜನ ಕೂಡಿಕೊಂಡು ಅಂಬುಲೇನ್ಸ ಸ್ಥಳಕ್ಕೆ ಕರೆಸಿ ಅಪಘಾತದಲ್ಲಿ ಗಾಯ ಹೊಂದಿದ್ದ ಎಲ್ಲರನ್ನು ಅದರಲ್ಲಿ ಹಾಕಿಕೊಂಡು ಉಪಚಾರಕ್ಕಾಗಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ನನ್ನ ಅಣ್ಣನಾದ ನಿಂಗಣ್ಣಗೌಡ ಮತ್ತು ದೇವಿಂದ್ರಪ್ಪ ಇವರಿಬ್ಬರನ್ನು ಕಲಬುರಗಿಯಲ್ಲಿರುವ ಯುನೆಟೆಡ್ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿರುತ್ತೇವೆ. ನನ್ನ ಅಣ್ಣನು ಅಪಘಾತದಲ್ಲಿ ಭಾರಿ ಗಾಯ ಹೊಂದಿದ್ದರಿಂದ ಅವನಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸುವ ಕುರಿತು ಕಲಬುರಗಿ ಯನೆಟೆಡ್ ಆಸ್ಪತ್ರೆಗೆ ಉಪಚಾರಕ್ಕಾಗಿ ಸೇರಿಕೆ ಮಾಡಿ ತಡವಾಗಿ ಇಂದು ದಿನಾಂಕ 24-11-2022 ರಂದು ಬೆಳಗ್ಗೆ 11 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಕೊಟ್ಟಿರುತ್ತೇನೆ. ಆಟೋ ನಂ: ಕೆಎ-33 ಬಿ-1074 ನೇದ್ದರ ಚಾಲಕ ಮಹಾದೇವಪ್ಪ ತಂದೆ ಮಲ್ಲನಗೌಡ ಪೊಲೀಸ್ ಪಾಟೀಲ್ ಸಾ: ಓರುಂಚಾ ಮತ್ತು ಮೋಟಾರು ಸೈಕಲ್ ನಂ ಕೆಎ-33 ಎಕ್ಸ್-2219 ನೇದ್ದರ ಸವಾರ ದೇವಿಂದ್ರ ತಂದೆ ಬಸಲಿಂಗಪ್ಪ ಬಿರಾಳ ಸಾ: ವಾಲ್ಮೀಕಿ ನಗರ ಮಶಮ್ಮ ದೇವಸ್ಥಾನ ಯಾದಗಿರಿ ಇಬ್ಬರು ತಮ್ಮ ವಾಹನಗಳನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಅಪಘಾತವಾಗಿದ್ದು ಸದರಿಯವವರ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿಯ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 59/2022 ಕಲಂ 279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 162/2022 ಕಲಂ. 302, 201 ಸಂಗಡ 34 ಐ.ಪಿ.ಸಿ: ಇಂದು ದಿನಾಂಕ: 24-11-2022 ರಂದು ಮದ್ಯಾಹ್ನ 03-00 ಗಂಟೆಗೆ ಪಿರ್ಯಾಧಿದಾರನಾದ ಶ್ರೀ ಸಾಬಣ್ಣ ತಂದೆ ಯಲ್ಲಪ್ಪ ಸೊಂಡೇರ್, ವಯಸ್ಸು 55 ವರ್ಷ, ಜಾತಿ:ಎಸ್.ಸಿ(ಮಾದಿಗ) ಉ:ಒಕ್ಕಲುತನ, ಸಾ||ರಾಮಸಮುದ್ರ ತಾ.ಜಿ.ಯಾದಗಿರಿ ಈತನು ಠಾಣೆಗ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ:06/09/2022 ರಂದು ನನ್ನ ಮಗ ಮಲ್ಲಪ್ಪ ಈತನು ಮೃತಪಟ್ಟ ಬಗ್ಗೆ ಮತ್ತು ನನ್ನ ಮಗ ಸಾವಿನಲ್ಲಿ ನನಗೆ ಸಂಶಯವಿರುತ್ತದೆ ಎಂದು ನಾನು ದಿನಾಂಕ:07/09/2022 ರಂದು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಾನು ನೀಡಿದ ದೂರಿನ ಸಾರಾಂಶದ ಮೇಲಿಂದ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್.ನಂ: 17/2022 ಕಲಂ:174(ಸಿ) ಸಿ.ಆರ್.ಪಿ.ಸಿ. ರಲ್ಲಿ ಕೇಸು ದಾಖಲಾಗಿರುತ್ತದೆ. ನಾನು ದೂರು ಕೊಟ್ಟ ನಂತರ ನನ್ನ ಅಣ್ಣನ ಮಗನಾದ ಶಶಿಕುಮಾರ ತಂದೆ ನಾಗಲಿಂಗಪ್ಪ ಸೋಂಡೆರ ಈತನು ನನಗೆ ತಿಳಿಸಿದ್ದೇನೆಂದರೆ, ದಿನಾಂಕ:06/09/2022 ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ನನಗೆ ಕೆಲಸ ಇರುವದರಿಂದ ನಮ್ಮ ಹೊಲದಿಂದ ಕಾಲುದಾರಿಯ ಮುಖಾಂತರ ನಮ್ಮೂರಿಗೆ ಮಲ್ಲಿಕಾಜರ್ುನ ಆಶನಾಳರವರ ಹೊಲದ ಕಡೆಯಿಂದ ನಡೆದುಕೊಂಡು ಹೋಗುವಾಗ ಮಲ್ಲಪ್ಪನು ಊಟಕ್ಕೆ ಬಂದಾಗ ಆತನ ಎತ್ತುಗಳು ಮಲ್ಲಿಕಾಜರ್ುನರವರ ಹೊಲದಲ್ಲಿ ಹತ್ತಿಹೊಲದಲ್ಲಿ ಮೇಯಲು ಹೋಗಿದ್ದರಿಂದ ಮಲ್ಲಿಕಾಜರ್ುನ ಮತ್ತು ಜ್ಯೋತಿಲರ್ಿಂಗ, ದೇವಪ್ಪ ಮತ್ತು ಲಕ್ಷ್ಮೀ ಇವರೆಲ್ಲರು ಸೇರಿಕೊಂಡು ನಮ್ಮ ಮಲ್ಲಪ್ಪನೊಂದಿಗೆ ಬಾಯಿಮಾಡುತ್ತಾ ಮಗನೇ ಎತ್ತುಗಳನ್ನು ನಮ್ಮ ಹೊಲದಲ್ಲಿ ಮೇಯಿಸಿ ಹಾಳುಮಾಡಿದಿ, ಇನ್ನೊಮ್ಮೆ ನಮ್ಮ ಹೊಲದಲ್ಲಿ ಮೇಯಿಸಿದರೆ ನಿನಗೆ ಖಲಾಸ್ ಮಾಡಿ ಹೊಂಡದಲ್ಲಿ ಹಾಕಿ ಸಾಯಿಸ್ತಿವಿ ಎಂದು ಬೈಯ್ಯುತ್ತಿದ್ದಾಗ ಮಲ್ಲಪ್ಪನು ನಾನು ಎತ್ತುಬಿಟ್ಟಿಲ್ಲ, ಬೇಕಂತ ನಿಮ್ಮ ಹತ್ತಿಹೊಲದಲ್ಲಿ ಮೇಯಿಸಿಲ್ಲ ಎಂದು ಅವರೊಂದಿಗೆ ವಾದ ಮಾಡುತ್ತಾ ಒಬ್ಬರಿಗೊಬ್ಬರು ಬೈದಾಡುಕೊಳ್ಳುತ್ತಿದ್ದರು. ಎತ್ತು ಮೇಯಿಸುವ ವಿಷಯದಲ್ಲಿ ಸಣ್ಣಪುಟ್ಟ ಜಗಳವಾಡುತ್ತಿರಬಹುದೆಂದು ತಿಳಿದು ನಾನು ನಮ್ಮೂರಿಗೆ ಹೋದೆನು, ಜಗಳದಲ್ಲಿ ಮಲ್ಲಿಕಾಜರ್ುನ ಮತ್ತು ಜ್ಯೋತಿಲರ್ಿಂಗ, ದೇವಪ್ಪ ಮತ್ತು ಲಕ್ಷ್ಮೀ ಇವರೆಲ್ಲರು ಸೇರಿಕೊಂಡು ಮಲ್ಲಪ್ಪನಿಗೆ ಏನಾದರೂ ಮಾಡಿರಬಹುದೆಂದು ತನಗೆ ಸಂಶಯವಿದ್ದ ಬಗ್ಗೆ ತಿಳಿಸಿದ್ದನು. ಇಂದು ತಾವು ನನಗೆ ಪೊಲೀಸ್ ಠಾಣೆಗೆ ಕರೆಯಿಸಿ ನನ್ನ ಮಗನು ನೀರಿನಲ್ಲಿ ಬೀಳುವುದಕ್ಕಿಂತ ಮುಂಚೆ ಉಸಿರುಗಟ್ಟಿ ಮೃತಪಟ್ಟ ಬಗ್ಗೆ ವೈದ್ಯಾಧಿಕಾರಿಗಳು ಅಭಿಪ್ರಾಯ ವರದಿ ನೀಡಿದ ಬಗ್ಗೆ ನನಗೆ ಗೊತ್ತಾಗಿದ್ದು, ನನ್ನ ಮಗನು ಉಸಿರುಗಟ್ಟಿ ಮೃತಪಟ್ಟ ಬಗ್ಗೆ ನನಗೆ ಖಚಿತವಾಗಿರುತ್ತದೆ. ನಮ್ಮ ಹೊಲದ ಸಮೀಪದಲ್ಲಿ ಮಲ್ಲಿಕಾಜರ್ುನ ತಂದೆ ಮಲ್ಲಪ್ಪ ಹುಚ್ಚಮಲ್ಲಯ್ಯನೋರ್ ಸಾ||ಆಶನಾಳ ಈತನ ಹೊಲ ಇದ್ದು, ನಾವು ನಮ್ಮ ಎತ್ತುಗಳನ್ನು ಅವರ ಪಕ್ಕದ ಹೊಲದಲ್ಲಿ ಮೇಯಿಸುತ್ತಿರುವಾಗ ಅವರ ಹೊಲಕ್ಕೆ ಎತ್ತುಗಳು ಹೋದಾಗ, ಅವರ ಹೊಲದ ಪಕ್ಕದಲ್ಲಿರುವ ಕಾಲುದಾರಿಯಲ್ಲಿ ನಾವು ಎತ್ತುಗಳನ್ನು ಹೊಡೆದುಕೊಂಡು ಹೋಗುವಾಗ ಈ ಮೊದಲಿನಿಂದಲೂ ಮಲ್ಲಿಕಾಜರ್ುನನು ನಮ್ಮೊಂದಿಗೆ ತಕರಾರು ಮಾಡುತ್ತಾ ನಮ್ಮ ಮೇಲೆ ದ್ವೇಷ ಸಾಧಿಸುತ್ತಾ ಬಂದಿರುತ್ತಾನೆ. ದಿನಾಂಕ:06/09/2022 ರಂದು 4:30 ಪಿ.ಎಮ್. ಸುಮಾರಿಗೆ ನನ್ನ ಮಗ ಮಲ್ಲಪ್ಪನು ನಮ್ಮ ಎತ್ತುಗಳನ್ನು ಮೇಯಿಸಲು ಮಲ್ಲಿಕಾಜರ್ುನ ತಂದೆ ಮಲ್ಲಪ್ಪ ಹುಚ್ಚಮಲ್ಲಯ್ಯನೋರ್ ಸಾ||ಆಶನಾಳ ಇವರ ಹೊಲದ ಹತ್ತಿರ ಹೋಗಿ ಎತ್ತುಗಳನ್ನು ಅಲ್ಲಿಯೇ ಬಿಟ್ಟು ಮಧ್ಯಾಹ್ನ ಊಟಕ್ಕೆ ಹೊಲಕ್ಕೆ ಬಂದಿದ್ದಾಗ ನಮ್ಮ ಎತ್ತುಗಳು ಮಲ್ಲಿಕಾಜರ್ುನರವರ ಹತ್ತಿಹೊಲವನ್ನು ಮೇಯ್ದಿದಕ್ಕೆ 1)ಮಲ್ಲಿಕಾಜರ್ುನ ತಂದೆ ಮಲ್ಲಪ್ಪ ಹುಚ್ಚಮಲ್ಲಯ್ಯನೋರ್ 2)ಜ್ಯೋತಿಲರ್ಿಂಗ ತಂದೆ ಮಲ್ಲಿಕಾಜರ್ುನ, 3)ದೇವಪ್ಪ ತಂದೆ ನರಸಪ್ಪ ಮತ್ತು 4)ಲಕ್ಷ್ಮೀ ಗಂಡ ಮಲ್ಲಿಕಾಜರ್ುನ ಎಲ್ಲರು ಸಾ||ಆಶನಾಳ ಇವರೆಲ್ಲರು ಸೇರಿಕೊಂಡು ನನ್ನ ಮಗ ಮಲ್ಲಪ್ಪನೊಂದಿಗೆ ಜಗಳತೆಗೆದು ಹೊಡೆಬಡೆಮಾಡಿ ನೆಲಕ್ಕೆ ಹಾಕಿ ಯಾವುದರಿಂದಲೋ ಉಸಿರುಗಟ್ಟಿಸಿ ಕೊಲೆಮಾಡಿರಬಹುದೆಂದು ನನಗೆ ಸಂಶಯವಿದ್ದು, ನನ್ನ ಮಗನಿಗೆ ಕೊಲೆಮಾಡಿದ್ದನ್ನು ಮರೆಮಾಚಲು ಅವರು ಮಲ್ಲಪ್ಪನ ಮೃತದೇಹವನ್ನು ಅವರ ಹೊಲದಲ್ಲಿರುವ ಕೃಷಿಹೊಂಡಾದ ನೀರಿನಲ್ಲಿ ಹಾಕಿರಬಹುದೆಂದು ಸಹ ನನಗೆ ಸಂಶಯವಿರುತ್ತದೆ. ಕಾರಣ ಈ ಬಗ್ಗೆ ತಾವುಗಳು ಸೂಕ್ತ ಕಾನೂನು ಕ್ರಮ ಜರುಗಿಸಿ ನನ್ನ ಮಗನ ಸಾವಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಈ ಅಜರ್ಿಯ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಅಂತಾ ನೀಡಿದ ಪಿಯರ್ಾಧಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

.
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 127/2022 ಕಲಂ 379 ಐಪಿಸಿ:ಇಂದು ದಿನಾಂಕ 24.11.2022 ರಂದು ಸಾಯಂಕಾಲ 5.00 ಗಂಟೆಗೆ ಪ್ರಕಾಶ ತಂದೆ ಸಾಬಣ್ಣ ಜೇಗರ ವಯ|| 36 ವರ್ಷ, ಜಾ|| ಕುರುಬರ ಉ|| ಒಕ್ಕಲುತನ ಸಾ|| ಸೈದಾಪೂರ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರು ಸಾರಾಂಶವೇನೆಂದೆರೆ ನಮ್ಮದು ರಾಚನಳ್ಳಿ ಸೀಮಾಂತರದ ಸವರ್ೇ ನಂಬರ 108/2 ರಲ್ಲಿ ಪಿತ್ರಾಜರ್ಿತವಾಗಿ ಬಂದ 3 ಎಕರೆ 23 ಗುಂಟೆ ಜಮೀನುಯಿದ್ದು, ಸದರಿ ಜಮೀನುದಲ್ಲಿ ನನ್ನ ತಂದೆ ಸಾಬಣ್ಣ ತಂದೆ ಬಸವರಾಜಪ್ಪ ಇವರು 2021 ನೇ ಸಾಲಿನಲ್ಲಿ ಸರಕಾರದ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರವೆಲ್ ಹಾಕಿಸಿ ದಿನಾಂಕ 30.10.2021 ರಂದು ಸದರಿ ಬೋರವೆಲಗೆ ಕರೆಂಟ್ ಟಿಸಿ ಕೂಡಿಸಿದ್ದರು. ನಾನು ದಿನಾಂಕ 04.09.2022 ರಂದು ಮಧ್ಯಾಹ್ನ 12 ಗಂಟೆಯವರೆಗೆ ನಮ್ಮ ಜಮೀನುದಲ್ಲಿ ಕೆಲಸ ಮಾಡಿಕೊಂಡು ಮನೆಗೆ ಹೋಗಿದ್ದು ಅಲ್ಲಿಯವರೆಗೆ ನಮ್ಮ ಹೊಲದಲ್ಲಿ ಕರೆಂಟ್ ಟಿಸಿ ಇತ್ತು. ನಾನು ಮರಳಿ ದಿನಾಂಕ 06.09.2022 ರಂದು ಬೆಳಿಗ್ಗೆ 8.00 ಗಂಟೆಗೆ ಜಮೀನುಗೆ ಹೋದಾಗ ನನ್ನ ಜಮೀನುದಲ್ಲಿ ಕರೆಂಟ್ ಕಂಬಕ್ಕೆ ಕೂಡಿಸಿದ್ದ ಟಿಸಿ ಬಾಕ್ಸ್ ಒಡೆದು ಕೆಳಗೆ ಬಿದ್ದಿದ್ದು ಅದರಲ್ಲಿನ ಕರೆಂಟ್ ಕ್ವಾಯಿಲಗಳು ಮತ್ತು ಸವರ್ಿಸ ವೈರ ಕಳ್ಳತನವಾಗಿದ್ದು ಕಂಡುಬಂದಿರುತ್ತದೆ. ಸದರಿ ಘಟನೆ ಬಗ್ಗೆ ನಮ್ಮ ಸುತ್ತಮುತ್ತಲಿನ ಜಮೀನುದವರಿಗೆ ತಿಳಿಸಿ ವಿಚಾರಣೆ ಮಾಡಿದ್ದು ಯಾರಿಗೂ ಸದರಿ ಟಿಸಿ ಯಾರು ಕಳ್ಳತನ ಮಾಡಿದ್ದಾರೆ ಅಂತ ಮಾಹಿತಿ ಗೊತ್ತಾಗಿರುವದಿಲ್ಲ. ನಂತರ ನಾನು ಸದರಿ ಘಟನೆ ಬಗ್ಗೆ ಎಲ್ಲಾ ಕಡೆಗೂ ಹುಡುಕಾಡಿ ವಿಚಾರಣೆ ಮಾಡಿದ್ದು, ಎಲ್ಲಿಯೂ ನನ್ನ ಕರೆಂಟ್ ಟಿ.ಸಿ ಕ್ವಾಯಿಲ್ ಮತ್ತು ಸವರ್ಿಸ್ ವೈರ ಕಳ್ಳತನವಾಗಿದ್ದು ಪತ್ತೆಯಾಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ಯಾರೋ ಕಳ್ಳರು ನನ್ನ ಜಮೀನುದಲ್ಲಿನ ಅಂದಾಜು ಕಿಮ್ಮತ್ತು 35,000/-ರೂಪಾಯಿ ಮೌಲ್ಯದ ಕರೆಂಟ್ ಟಿಸಿ ಮತ್ತು ಸವರ್ಿಸ ವೈರ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ನೀಡಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದೆೆ. ಅಂತಾ ನೀಡಿದ ಗಣಕೀಕೃತ ದೂರು ಸಾರಾಂಶದ ಮೇಲಿಂದ ಸೈದಾಪೂರ ಪೊಲಿಸ್ ಠಾಣೆ ಗುನ್ನೆ ನಂಬರ 127/2022 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ:87/2022 ಕಲಂ:279, 337, 338, 304(ಎ) ಐಪಿಸಿ:ದಿನಾಂಕ:23/11/2022 ರಂದು ಮೃತನು ತನ್ನ ಕಾರ ನಂ:ಕೆಎ-01 ಎಹೆಚ್-1326 ನೇದ್ದನ್ನು ತೆಗೆದುಕೊಂಡು ಅದರಲ್ಲಿ ಫಿರ್ಯಾದಿಗೆ ಕೂಡಿಸಿಕೊಂಡು ಹುಣಸಗಿಯಿಂದ ಮಾಳನೂರಿಗೆ ಹೊರಟಾಗ ರಾತ್ರಿ 11.30 ಗಂಟೆಯ ಸುಮಾರಿಗೆ ಹುಣಸಗಿ-ತಾಳಿಕೋಟಿ ರಸ್ತೆಯ ಮೇಲೆ ಮಾಳನೂರ ಸಮೀಪ ಇರುವ ಯುಕೆಪಿ ಮೇನ್ ಕೆನಾಲ ಬ್ರಿಡ್ಜ್ ಹತ್ತಿರ ಮೃತನು ತಾನು ಚಲಾಯಿಸುವ ಕಾರನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಎದರುಗಡೆಯಿಂದ ನಾಯಿ ಅಡ್ಡ ಬಂದಿದ್ದರಿಂದ ಅದಕ್ಕೆ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಯುಕೆಪಿ ಕೆನಾಲ ಬ್ರಿಡ್ಜ್ ಎಡಗಡೆ ಗೋಡೆಗೆ ಜೋರಾಗಿ ಡಿಕ್ಕಿ ಕೊಟ್ಟಿದ್ದರಿಂದ ಆರೋಪಿತನಿಗೆ (ಕಾರ್ ಚಾಲಕ) ಮುಖಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಫಿರ್ಯಾದಿಗೆ ಎಡತಲೆಗೆ ರಕ್ತಗಾಯ, ಗದ್ದಕ್ಕೆ ಭಾರಿ ಮತ್ತು ಸಾದಾ ರಕ್ತಗಾಯವಾಗಿದ್ದು, ಅಲ್ಲದೆ ಎಡತೊಡೆಗೆ, ಎಡಬುಜಕ್ಕೆ ಭಾರಿ ಒಳಪೆಟ್ಟಾದ ಬಗ್ಗೆ ಅಪರಾಧ.

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 160/2022 ಕಲಂ 279, 337, 338 ಐಪಿಸಿ ಮತ್ತು ಕಲಂ: 304(ಎ) ಐಪಿಸಿ ನೇದ್ದನ್ನು ಅಳವಡಿಸಲಾಗಿದೆ: ದಿನಾಂಕ 03.11.2022 ರಂದು ಸಮಯ ಬೆಳಿಗ್ಗೆ 9:30 ಗಂಟೆಯ ಸುಮಾರಿಗೆ ಗಾಯಾಳು ಮಂಜುನಾಥನು ತನ್ನ ಮೋಟಾರು ಸೈಕಲ್ ನಂಬರ ಕೆಎ-33-ಎಲ್-2870 ರ ಮೇಲೆ ಭಾಗರಡ್ಡಿಯವರನ್ನು ಕೂಡಿಕೊಂಡು ಕಮಾಲನಗರ ಬುರ್ಜ ತಾಂಡಾದ ಕಡೆಯಿಂದ ತಮ್ಮ ಮೋಟಾರು ಸೈಕಲ್ನ್ನು ಅತಿವೇಗ ಮತ್ತು ಅಲಕ್ಷನತದಿಂದ ಚಲಾಯಿಸಿಕೊಂಡು ಹೋಗಿದ್ದು ಅದೇ ರೀತಿ ಗಾಯಾಳು ಭೀಮಶಪ್ಪ ವ|| 28 ವರ್ಷ ಇತನು ಮೋಟಾರು ಸೈಕಲ್ ನಂಬರ ಎಪಿ-09-ಸಿ.ಕೆ-6773 ನೇದ್ದನ್ನು ಯಂಪಾಡ ತಾಂಡಾದ ಕಡೆಯಿಂದ ಕಮಾಲನಗರ ಬುರ್ಜ ತಾಂಡಾದ ಕಡೆಗೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿದ್ದು ಎರಡೂ ಮೋಟಾರು ಸೈಕಲ್ಗಳ ಚಾಲಕರು ತಮ್ಮ-ತಮ್ಮ ವಾಹನಗಳನ್ನು ನಿಂತ್ರಿಸಲು ಸಾಧ್ಯವಾಗದೇ ಪರಸ್ಪರ ಮುಖಾ-ಮುಖಿಯಾಗಿ ಅಪಘಾತ ಪಡಿಸಿದ್ದರಿಂದ ಎರಡು ಮೋಟಾರು ಸೈಕಲ್ಗಳು ಜಖಂಗೊಂಡು ಗಾಯಾಳು ಭಾಗರಡ್ಡಿ ಇವರಿಗೆ ಭಾರಿ ಹಾಗು ಸಾಧಾ ಸ್ವರೂಪದ ಗಾಯಗಳಾಗಿದ್ದು ಉಳಿದ ಮೂರು ಜನ ಗಾಯಾಳುದಾರರಿಗೆ ಸಾಧಾ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಆ ಬಗ್ಗೆ ದಿನಾಂಕ 04.11.2022 ರಂದು ಫಿರ್ಯಾಧಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಶ್ರೀ ಶಿವಲಿಂಗಪ್ಪ ಪಿ.ಎಸ್.ಐ ರವರು ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ: 160/2022 ಕಲಂ 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. ನಂತರ ಗಾಯಾಳು ಭಾಗರಡ್ಡಿ ಗುನ್ನೆ ಇತನು ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕ 24.11.2022 ರಂದು ಮಧ್ಯಾಹ್ನ 2:35 ಗಂಟೆಗೆ ಮೃತಪಟ್ಟಿದ್ದು ಆ ಬಗ್ಗೆ ಮೃತನ ತಮ್ಮನಾದ ಫಿರ್ಯಾದಿಯು ನೀಡಿದ ಪುರವಣಿ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ: 304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಳ್ಳುವಂತೆ ಮಾನ್ಯ ನ್ಯಾಯಾಲಯಕ್ಕೆ ಪತ್ರದ ಮುಖಾಂತರ ನಿವೇದಿಸಿಕೊಂಡಿದ್ದು ಇರುತ್ತದೆ.

Last Updated: 25-11-2022 04:46 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080