Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 25-12-2022

 


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 167/2022 ಕಲಂ 279, 304(ಎ) ಐಪಿಸಿಮತ್ತು 187 ಐ.ಎಮ್.ವಿಆಕ್ಟ್: :ದಿ: 18/12/2022 ರಂದು 6-30 ಪಿ.ಎಮ್ಕ್ಕೆ ಫಿಯರ್ಾದಿ ಶ್ರೀ ಕಾಡಪ್ಪತಂದೆ ಹಣಮಂತ ಪೂಜಾರಿಸಾಃ ಲಕ್ಷ್ಮೀಪೂರಇವರುಠಾಣೆಗೆ ಹಾಜರಾಗಿಕೊಟ್ಟ ಪಿಯರ್ಾದಿ ನೀಡಿದ್ದರ ಸಾರಾಂಶವೇನೆಂದರೆ, ನನ್ನ ಅಕ್ಕಳಾದ ಹಣಮಂತಿ ಇವಳಿಗೆ ಶಹಾಪುರತಾಲೂಕಿನರಾಜಾಪುರಗ್ರಾಮದ ಹಣಮಂತ ಲಕ್ಷ್ಮೀಪುರಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದುಅವರಿಗೆಒಟ್ಟು4 ಜನ ಹೆಣ್ಣುಮಕ್ಕಳು ಇರುತ್ತಾರೆ. ಇಂದು ದಿನಾಂಕ: 18/12/2022 ರಂದು ನಮ್ಮೂರಿನಲ್ಲಿ ನಮ್ಮದೊಡ್ಡಮ್ಮ ಬಸಮ್ಮಗಂಡ ಮಲ್ಲಪ್ಪಇವರ ಮನೆ ಶಾಂತಿಇದ್ದುದರಿಂದ ನಾನು ಇಂದು ಬೆಳಿಗ್ಗೆ ರಾಜಾಪೂರಕ್ಕೆ ಹೋಗಿ ನಮ್ಮ ಅಕ್ಕ ಹಣಮಂತಿ, ಆಕೆಯ ಮಕ್ಕಳಾದ ಅಕ್ಷತಾ, ಭೂಮಿಕಾ, ಅಂಜಲಿ ಇವರನ್ನುಕರೆದುಕೊಂಡು ಬಸ್ ಮೂಲಕ ಬಂದು ಲಕ್ಷ್ಮೀಪುರಕ್ರಾಸ್ನಲ್ಲಿ ಇಳಿದಿದ್ದೆವು. ಆಗ ಮದ್ಯಾಹ್ನ 1-30 ಗಂಟೆ ಸುಮಾರಿಗೆ ನಾವು ನಮ್ಮೂರಿನಕ್ರಾಸ್ನಲ್ಲಿರೋಡಿನ ಬದಿಗೆ ನಿಂತಿದ್ದಾಗ ಸುರಪುರಕಡೆಯಿಂದಒಬ್ಬಕಾರ್ ಚಾಲಕನು ತನ್ನಕಾರನ್ನುಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದುರೋಡಿನ ಬದಿಗೆ ನಿಂತಿದ್ದ ಭೂಮಿಕಾ ಇವಳಿಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ಭೂಮಿಕಾ ಇವಳು ರಸ್ತೆಯ ಕೆಳಗೆ ಬಿದ್ದಳು. ತಕ್ಷಣ ನಾನು ಮತ್ತು ನಮ್ಮ ಅಕ್ಕ ಇಬ್ಬರು ಭೂಮಿಕಾ ಇವಳಿಗೆ ನೋಡಲಾಗಿ ಹಣೆಗೆ, ತೆಲೆಗೆ ಭಾರಿಕ್ತಗಾಯವಾಗಿ ಕಿವಿಯಿಂದರಕ್ತಸ್ರಾವಆಗುತ್ತಿದ್ದು, ಗದ್ದಕ್ಕೆರಕ್ತಗಾಯ, ಎದೆಗೆ, ಹೊಟ್ಟೆಗೆ ಬೆನ್ನಿಗೆತರಚಿದಗಾಯ ಮತ್ತು ಒಳಪೆಟ್ಟು ಆಗಿದ್ದು, ಬಲಗಾಲ ತೊಡೆಯ ಹತ್ತಿರ ಮುರಿದಂತಾಗಿರುತ್ತದೆ. ನಂತರ ಅಪಘಾತಪಡಿಸಿದ ಕಾರ್ ನಂಬರ ನೋಡಲಾಗಿ ಕೆಎ-33 ಎಮ್-6485 ಇದ್ದು, ಚಾಲಕನಿಗೂ ಗಾಯಗಳಾಗಿದ್ದರಿಂದ ಆತನಹೆಸರು ವಿಳಾಸ ವಿಚಾರಿಸಲಾಗಿ ಸುರೇಶತಂದೆದೇವಿಂದ್ರಪ್ಪ ಗುಳಿಹಾಳ ಸಾ|| ಕುಂಬಾರಪೇಠಅಂತ ತಿಳಿಸಿದನು. ನಂತರ ನಾವು ಭೂಮಿಕಾ ಮತ್ತುಕಾರ ಚಾಲಕ ಸುರೇಶಇಬ್ಬರಿಗೆ ಸುರಪುರ ಸರಕಾರಿಆಸ್ಪತ್ರೆಯಲ್ಲಿ ಸೇರಿಕೆ ಮಾಡಿಚಿಕಿತ್ಸೆ ಕೊಡಿಸಿರುತ್ತೇವೆ. ಸುರಪುರಆಸ್ಪತ್ರೆಯಲ್ಲಿ ವೈದ್ಯರುಇಬ್ಬರಿಗೂ ಪ್ರಥಮಉಪಚಾರ ಮಾಡಿದ್ದು, ಹೆಚ್ಚಿನಚಿಕಿತ್ಸೆಗಾಗಿಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರಿಂದ ಭೂಮಿಕಾ ಇವಳಿಗೆ ನಮ್ಮ ಅಕ್ಕ ಹಣಮಂತಿಇವರು ಕಲಬುರಗಿಯುನೈಟೆಡ್ಆಸ್ಪತ್ರೆಗೆಕರೆದುಕೊಂಡು ಹೋಗಿರುತ್ತಾರೆ.ಕಾರಣಅಪಘಾತಪಡಿಸಿದ ಕಾರಚಾಲಕನವಿರುದ್ದ ಕಾನೂನು ಕ್ರಮಜರುಗಿಸಬೇಕುಅಂತಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂ.167/2022 ಕಲಂ:279, 337, 338 ಐಪಿಸಿ ಪ್ರಕಾರ ಪ್ರಕರಣದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ.
 ಸದರಿ ಪ್ರಕರಣದಲ್ಲಿಯ ಗಾಯಾಳು ಕುಃ ಭೂಮಿಕಾತಂದೆ ಹಣಮಂತ ಪೂಜಾರಿ ಸಾ: ರಾಜಾಪೂರ ಇವಳು ಜೀಮ್ಸ್ಆಸ್ಪತ್ರೆ ಕಲಬುರಗಿಯಲ್ಲಿಚಿಕಿತ್ಸೆ ಪಡೆಯುತ್ತಚಿಕಿತ್ಸೆ ಫಲಕಾರಿಆಗದೇಅಪಘಾತದಲ್ಲಿಆಗಿರುವ ಭಾರಿಗಾಯಗಳ ಭಾದೆಯಿಂದ ದಿಃ 23/12/2022 ರಂದು 10-15 ಪಿ.ಎಮ್ ಕ್ಕೆ ಮೃತಪಟ್ಟಿರುವ ಬಗ್ಗೆ ಇಂದು ದಿ: 24/12/2022 ರಂದುಠಾಣೆಗೆ ಈ ಮೇಲ್ ಮುಖಾಂತರ ಎಮ್.ಎಲ್.ಸಿ ವಸೂಲಾಗಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ. 304(ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ ಅಂತ ಮಾನ್ಯರವರಲ್ಲಿ ವಿನಂತಿ.
 
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 140/2022 ಕಲಂ: 279, 338, 304(ಎ) ಐಪಿಸಿ: ದಿನಾಂಕ: 19/12/2022 ರಂದು 6-45 ಪಿಎಮ್ ಕ್ಕೆ ಶ್ರೀ ಭೀಮರಾಯ ತಂದೆ ಸೋಮಣ್ಣ ಯಲ್ಹೇರಿ, ವ:30, ಜಾ:ಉಪ್ಪಾರ, ಉ:ಕೂಲಿ ಸಾ:ಖಾನಾಪೂರ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ತಂದೆ-ತಾಯಿಗೆ ನಾವು 3 ಜನ ಗಂಡು ಮಕ್ಕಳು ಇರುತ್ತೇವೆ. ನಮ್ಮ ತಂದೆಯಾದ ಸೋಮಣ್ಣ ತಂದೆ ಮರೆಪ್ಪ ಯಲ್ಹೇರಿ ಈತನು ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ:18/12/2022 ರಂದು ಸಾಯಂಕಾ ಸಮಯದಲ್ಲಿ ನಾನು ಮನೆಯಲ್ಲಿದ್ದಾಗ ನಮ್ಮ ತಂದೆಯಾದ ಸೋಮಣ್ಣ ಈತನು ನಮ್ಮ ಮೋಟರ್ ಸೈಕಲ್ ನಂ. ಕೆಎ 33 ಎಲ್ 6649 ನೇದಕ್ಕೆ ಪೆಟ್ರೋಲ್ ಹಾಕಿಸಿಕೊಂಡು ಬರುತ್ತೇನೆ ಎಂದು ಹೇಳಿ ಮನೆಯಲ್ಲಿ ತನ್ನ ಮೋಟರ್ ಸೈಕಲ್ ಮೇಲೆ ನಮ್ಮೂರ ಸಮೀಪ ಇರುವ ಪೆಟ್ರೋಲ್ ಪಂಪಿಗೆ ಹೋದನು. ನಾನು ಮನೆಯಲ್ಲಿದ್ದೇನು. ಸಾಯಂಕಾಲ 4 ಗಂಟೆ ಸುಮಾರಿಗೆ ನಮ್ಮೂರ ಶರಣಪ್ಪ ತಂದೆ ಯಂಕಪ್ಪ ತಿಪ್ಪನಟಗಿ ಈತನು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಿಮ್ಮ ತಂದೆ ಮೋಟರ್ ಸೈಕಲ್ ಮೇಲೆ ಪೆಟ್ರೋಲ್ ಪಂಪಿಗೆ ಪೆಟ್ರೋಲ್ ಹಾಕಿಸಲು ಬರುತ್ತಿದ್ದವನಿಗೆ ಪೆಟ್ರೋಲ್ ಬಂಕ ಹತ್ತಿರ ಕಾರ ಅಪಘಾತವಾಗಿದೆ ನೀವು ಬೇಗ ಬನ್ನಿ ಎಂದು ಹೇಳಿದಾಗ ನಾನು ಮತ್ತು ಹಣಮಂತ ತಂದೆ ಮರೆಪ್ಪ ರಾಯನೋರ ಇಬ್ಬರೂ ಸೇರಿ ನಮ್ಮೂರ ಸಮೀಪ ಇರುವ ಕಿಲ್ಲನಕೇರಾ ಪೆಟ್ರೋಲ್ ಪಂಪಿಗೆ ಹೋಗಿ ನಮ್ಮ ತಂದೆಗೆ ನೋಡಿದೇವು. ಅಪಘಾತದಲ್ಲಿ ನಮ್ಮ ತಂದೆಗೆ ತಲೆಗೆ ಭಾರಿ ಒಳಪೆಟ್ಟಾಗಿ ಕಿವಿ ಮತ್ತು ಬಾಯಿಯಿಂದ ರಕ್ತಸ್ರಾವವಾಗಿತ್ತು. ಎಡಮೊಳಕಾಲಿಗೆ ರಕ್ತಗಾಯ ಮತ್ತು ಎಡ ಮೊಳಕೈಗೆ ತರಚಿದ ಗಾಯಗಳಾಗಿದ್ದವು. ಸದರಿ ಅಪಘಾತದ ಬಗ್ಗೆ ಅಲ್ಲಿಯೇ ಇದ್ದ ನಮ್ಮೂರ ಶರಣಪ್ಪನಿಗೆ ಕೇಳಿದಾಗ ಅವನು ಹೇಳಿದ್ದೇನಂದರೆ ನಾನು ಮತ್ತು ಗೋವಿಂದಪ್ಪ ಕೊಂಚೆಟ್ಟಿ ಇಬ್ಬರೂ ಯಾದಗಿರಿ-ಶಹಾಪೂರ ಮೇನ ರೋಡ ಮೇಲೆ ನಮ್ಮೂರ ಸಮೀಪ ಇರುವ ಕಿಲ್ಲನಕೇರಾ ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹೊರಗಡೆ ಬರುತ್ತಿದ್ದಾಗ ನಿಮ್ಮ ತಂದೆಯು ಖಾನಾಪೂರದಿಂದ ಪೆಟ್ರೋಲ್ ಬಂಕ ಸಮೀಪ ಬರುತ್ತಿದ್ದವನಿಗೆ ಯಾದಗಿರಿ-ಶಹಾಪೂರ ಮೇನ ರೋಡ ಸದರಿ ಪೆಟ್ರೋಲ್ ಬಂಕ ಸಮೀಪ ಯಾದಗಿರಿ ಕಡೆಯಿಂದ ಹೊರಟಿದ್ದ ಕಾರ ನಂ. ಕೆಎ 33 ಬಿ 2771 ನೇದನ್ನು ಅದರ ಚಾಲಕನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಿಮ್ಮ ತಂದೆಗೆ ಡಿಕ್ಕಿಪಡಿಸಿದ್ದರಿಂದ ನಿಮ್ಮ ತಂದೆ ಮೋಟರ್ ಸೈಕಲ್ ಸಮೇತ ಕೆಳಗಡೆ ಬಿದ್ದು ಭಾರಿ ಗಾಯಗೊಂಡಿರುತ್ತಾರೆ ಎಂದು ಹೇಳಿದನು. ನಾವು ಅಲ್ಲಿಯೇ ನಿಂತಿದ್ದ ಕಾರನ್ನು ನೋಡಿದಾಗ ಅದರ ನಂ. ಕೆಎ 33 ಬಿ 2771 ಇದ್ದು, ಕಾರಿನ ಬಳಿ ನಿಂತಿದ್ದ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ಬಸನಗೌಡ ತಂದೆ ವಿರುಪಾಕ್ಷೀ ಬಿರಾದಾರ ಸಾ:ರಾಜನಕೋಳ್ಳೂರು ಎಂದು ಹೇಳಿದನು. ಅಪಘಾತದಲ್ಲಿ ನಮ್ಮ ತಂದೆಗೆ ಭಾರಿ ಗಾಯಗಳಾಗಿದ್ದರಿಂದ ತಕ್ಷಣ ಉಪಚಾರ ಕುರಿತು 108 ಅಂಬ್ಯುಲೇನ್ಸ ಅನ್ನು ಕರೆಸಿ, ಅದರಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಉಪಚಾರ ಮಾಡಿಸಿ, ಅಲ್ಲಿಂದ ಕಲಬುರಗಿ ಯುನೈಟೆಡ್ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ಸದರಿ ಅಪಘಾತವು ಯಾದಗಿರಿ-ಶಹಾಪೂರ ಮೇನ ರೋಡ ಕಿಲ್ಲನಕೇರಾ ಪೆಟ್ರೋಲ್ ಬಂಕ ಸಮೀಪ ರೋಡಿನ ಮೇಲೆ ಸಾಯಂಕಾಲ 4 ಗಂಟೆ ಸುಮಾರಿಗೆ ಸಂಭವಿಸಿರುತ್ತದೆ. ನಮ್ಮ ತಂದೆಗೆ ಉಪಚಾರ ಮಾಡಿಸುವವರು ಯಾರೂ ಇಲ್ಲದ್ದರಿಂದ ನಾನು ಅವರಿಗೆ ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ಸೇರಿಕೆ ಮಾಡಿ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಸದರಿ ಕಾರ ನಂ. ಕೆಎ 33 ಬಿ 2771 ನೇದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 140/2022 ಕಲಂ: 279, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. ಇಂದು ದಿನಾಂಕ 24-12-2022 ರಂದು ಸಂಜೆ 7-00 ಪಿ.ಎಂ ಕ್ಕೆ ಸದರಿ ಪ್ರಕರಣದಲ್ಲಿಯ ಗಾಯಾಳು ಸೋಮಣ್ಣ ತಂದೆ ತಂದೆ ಮರೆಪ್ಪ ಯಲ್ಹೇರಿ, ವ: 55, ಜಾ:ಉಪ್ಪಾರ ಸಾ:ಖಾನಾಪೂರ ಈತನು ಮೃತಪಟ್ಟ ಬಗ್ಗೆ ಜಿಲ್ಲಾ ಸಕರ್ಾರಿ ಆಸ್ಪತ್ರೆ ಯಾದಗಿರಿಯಿಂದ ಡೆತ್ ಎಂ.ಎಲ್.ಸಿ ಸ್ವೀಕೃತವಾಗಿದ್ದರಿಂದ ಈಗಾಗಲೇ ದಾಖಲಾದ ಠಾಣಾ ಗುನ್ನೆ ನಂ. 140/2022 ಕಲಂ: 279, 338 ಐಪಿಸಿ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡು ತನಿಖೆ ಕೈಕೊಳ್ಳಲಾಗಿದೆ ಅಂತಾ ವಿನಂತಿ.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 141/2022 ಕಲಂ: 87 ಕೆ.ಪಿ ಆಕ್ಟ್ 1963: ಇಂದು ದಿನಾಂಕ:24/12/2022 ರಂದು 3-30 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ರವರು ಇಸ್ಪೀಟ್ ದಾಳಿ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ:24/12/2022 ರಂದು 1 ಪಿಎಮ್ ಕ್ಕೆ ನಾನು ಮತ್ತು ಸಿಬ್ಬಂದಿಯವರಾದ 1) ತಾಯಪ್ಪ ಹೆಚ್.ಸಿ 79 ಜೀಪ ಚಾಲಕ, 2) ಗುಂಡಪ್ಪ ಹೆಚ್.ಸಿ 37, 3) ಲಾಲ ಅಹ್ಮದ ಪಿಸಿ 367, 4) ದೇವಿಂದ್ರ ಪಿಸಿ 121 ಮತ್ತು 5) ಮಲ್ಲಿನಾಥ ಪಿಸಿ 222 ರವರೆಲ್ಲರೂ ಠಾಣೆಯಲ್ಲಿದ್ದಾಗ ನನಗೆ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಕೋನಹಳ್ಳಿ ಸೀಮಾಂತರದ ಹೊರ ವಲಯದಲ್ಲಿರುವ ಗಾಳಿ ಮರಗಮ್ಮ ದೇವಸ್ಥಾನದ ಪಕ್ಕದ ಜಾಲಿ ಗಿಡಗಳಲ್ಲಿರುವ ಸಾರ್ವಜನಿಕ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರ-ಬಾಹರ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ತಾಯಪ್ಪ ಹೆಚ್.ಸಿ 79 ರವರ ಮುಖಾಂತರ 1-10 ಪಿಎಮ್ ಕ್ಕೆ ಇಬ್ಬರೂ ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಇಸ್ಪೀಟ ಜೂಜಾಟ ದಾಳಿ ವಿಷಯ ತಿಳಿಸಿ, ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದ್ದರಲ್ಲಿ ಕೂಡಿಸಿಕೊಂಡು 1-20 ಪಿಎಮ್ ಕ್ಕೆ ವಡಗೇರಾ ಪೊಲೀಸ್ ಠಾಣೆಯಿಂದ ಹೊರಟು 1-50 ಪಿಎಮ್ ಕ್ಕೆ ಕೋನಹಳ್ಳಿ ಸೀಮಾಂತರದ ಹೊರ ವಲಯದಲ್ಲಿರುವ ಗಾಳಿ ಮರಗಮ್ಮ ದೇವಸ್ಥಾನದ ಹತ್ತಿರ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ಸದರಿ ಜಾಲಿ ಗಿಡಗಳನ್ನು ಮರೆಯಾಗಿ ನಿಂತು ನೋಡಲಾಗಿ ಸದರಿ ಸರಕಾರಿ ಜಾಲಿ ಗಿಡಗಳ ಹಿಂದೆ ಸಾರ್ವಜನಿಕ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ-ಬಾಹರ ಎನ್ನುವ ಇಸ್ಪಿಟ್ ಜೂಜಾಟವನ್ನು ಹಣ ಪಣಕ್ಕಿಟ್ಟು ಆಡುತ್ತಿದ್ದರು. ಆಗ ನಮ್ಮ ಸಮಕ್ಷಮ ಪಿ.ಎಸ್.ಐ ಸಾಹೇಬರು ಮತ್ತು ಅವರ ಸಿಬ್ಬಂದಿಯವರು 2 ಪಿಎಮ್ ಕ್ಕೆ ಒಮ್ಮೆಲೆ ಇಸ್ಪಿಟ್ ಜೂಜಾಟ ಆಡುತ್ತಿದ್ದ ಜನರ ಮೇಲೆ ದಾಳಿ ಮಾಡಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದವರನ್ನು ವಶಕ್ಕೆ ಪಡೆದುಕೊಂಡರು. ಸದರಿ ವಶಕ್ಕೆ ಪಡೆದವರನ್ನು ಪಿ.ಎಸ್.ಐ ಸಾಹೇಬರು ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವರು ತಮ್ಮ ಹೆಸರು 1) ಕಾಸಿಂ ತಂದೆ ಇಸ್ಮಾಯಿಲ್ಸಾಬ ಮ್ಯಾಳಗಿಮನಿ, ವ:39, ಜಾ:ಮುಸ್ಲಿಂ, ಉ:ಕೂಲಿ ಸಾ:ಕೋನಹಳ್ಳಿ ಅಂತಾ ಹೇಳಿದ್ದು, ಸದರಿಯವನು ತಾನು ಪಣಕ್ಕೆ ಇಟ್ಟ ನಗದು ಹಣ 1170/- ರೂ ಮತ್ತು 21 ಇಸ್ಪೀಟ್ ಎಲೆಗಳು ತನ್ನ ಕೈಯಲ್ಲಿ ಇದ್ದದ್ದನ್ನು ಹಾಜರಪಡಿಸಿದನು. 2) ಅಜ್ಮೀರ ತಂದೆ ಖತಾಲಹುಸೇನ ಮ್ಯಾಳಗಿಮನಿ, ವ:35, ಜಾ:ಮುಸ್ಲಿಂ, ಉ:ಕೂಲಿ ಸಾ:ಕೋನಹಳ್ಳಿ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 890/- ರೂ, ಹಾಜರಪಡಿಸಿದನು. 3) ನಬಿಸಾಬ ತಂದೆ ಸೈಯದ ಅಲಿ ಮ್ಯಾಳಗಿಮನಿ, ವ:28, ಜಾ:ಮುಸ್ಲಿಂ, ಉ:ಕೂಲಿ ಸಾ:ಕೋನಹಳ್ಳಿ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 830/- ರೂ, ಹಾಜರಪಡಿಸಿದನು. 4) ದುರ್ಗಪ್ಪ ತಂದೆ ಮರೆಪ್ಪ ಕರಿಗುಡ್ಡ ವ:26, ಜಾ:ಮಾದಿಗ, ಉ:ಗೌಂಡಿ ಕೆಲಸ ಸಾ:ಕೋನಹಳ್ಳಿ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 780/- ರೂ, ಹಾಜರಪಡಿಸಿದನು. ಜೂಜಾಟದ ಸ್ಥಳದಲ್ಲಿ ಎಲ್ಲರ ಮಧ್ಯೆ 31 ಇಸ್ಪಿಟ್ ಎಲೆಗಳು ಮತ್ತು -2630/- ರೂ. ಹೀಗೆ ಒಟ್ಟು 6300/- ರೂ. ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ದೊರೆತ್ತಿದ್ದು, ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆ ಚಿಟಿಯನ್ನು ಅಂಟಿಸಿ ಜಪ್ತಿ ಪಡಿಸಿಕೊಂಡೆನು. ಸದರಿ ಆರೋಪಿತರು ಮತ್ತು ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಈ ವರದಿ ಸಲ್ಲಿಸುತ್ತಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 141/2022 ಕಲಂ: 87 ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 137/2022 ಕಲಂ 379 ಐಪಿಸಿ: ಇಂದು ದಿನಾಂಕ 24.12.2022 ರಂದು ಬೆಳಿಗ್ಗೆ 11 ಗಂಟೆಗೆ ಕಾಳಪ್ಪ ಎಂ. ಬಡಿಗೇರ ಪಿ.ಐ ಸಾಹೇಬ ಸೈದಾಪೂರ ಠಾಣೆ ರವರು ಠಾಣೆಗೆ ಬಂದು ಮರಳು ಲೋಡಿದ್ದ 1. ಟಿಪ್ಪರ ವಾಹನ ನೊಂದಣೆ ಸಂಖ್ಯೆ ಕೆಎ-33-ಬಿ-3992, 2. ಟಿಪ್ಪರ ವಾಹನ ನೊಂದಣೆ ಸಂಖ್ಯೆ ಕೆಎ-33-ಬಿ-3824 ಎರಡು ವಾಹನಗಳು ಠಾಣಾ ಆವರಣದಲ್ಲಿ ನಿಲ್ಲಿಸಿ ವಾಹನಗಳ ಚಾಲಕರಿಗೆ ಮತ್ತು ವಾಹನಗಳು ನನ್ನ ತಾಬಕ್ಕೆ ಒಪ್ಪಿಸಿ ಜ್ಞಾಪನ ಪತ್ರದೊಂದಿಗೆ ಜಪ್ತಿ ಪಂಚನಾಮೆ ನೀಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿರುತ್ತಾರೆ. ಸದರಿ ಜ್ಞಾಪನಪತ್ರ ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲಿಂದ ನಾನು ಈರಣ್ಣ ಸಿ.ಹೆಚ್.ಸಿ-148 ಸೈದಾಪೂರ ಠಾಣೆ ಗುನ್ನೆ ಸಂಖ್ಯೆ 137/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆ.
 

Last Updated: 25-12-2022 11:36 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080