ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 26-03-2022


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ.42/2022 ಕಲಂ 279, 304(ಎ) ಐ.ಪಿ.ಸಿ : ಇಂದು ದಿನಾಂಕ: 25/03/2022 ರಂದು ಬೆಳಿಗ್ಗೆ 4.30 ಎ.ಎಂ.ಕ್ಕೆ ಶ್ರೀ ರಾಮನಾಥ ತಂ/ ವಿಶ್ವನಾಥ ನಾಯಕ, ಸಾ|| ಮನೆ ನಂಬರ 4-11-9, ಹಮರ್ದ ಸ್ಕೂಲ್ ಹತ್ತಿರ, ಬೇರೂನ್ ಕಿಲ್ಲಾ ರಾಯಚೂರು, ಆರ್.ಎಲ್.ನಾಯಕ ಕ್ವಾರ್ಟಸ್ ಸುರಪುರ ರವರು ಇಂದು ಠಾಣೆಗೆ ಹಾಜರಾಗಿ ಒಂದು ಗಣಕೀಕರಿಸಿದ ದೂರು ಅಜರ್ಿಯನ್ನು ಸಲ್ಲಿಸಿದ್ದು, ಸದರಿ ಫಿಯರ್ಾದಿ ಸಾರಾಂಶ ಏನೆಂದರೆ, ನನ್ನ ಅಳಿಯ ಪ್ರಶಾಂತ ತಂ/ ರಾಜಶೇಖರ ದಳವಾಯಿ ಈತನು ರಾಯಚೂರಿನಿಂದ ಸುರಪುರಕ್ಕೆ ಬರುತ್ತಿದ್ದು, ಬೆಳಿಗ್ಗೆ 3.00 ಎ.ಎಂ. ಆದರೂ ಬರದಿದ್ದಾಗ, ನಾನು ನನ್ನ ಅಳಿಯನ ನಂಬರಿಗೆ ಫೋನ್ ಮಾಡಿದಾಗ ಆ ಕಡೆಯಿಂದ ಗುರಣ್ಣ ತಂ/ ಸಾಯಬಣ್ಣ ಮಡಿವಾಳ ಎನ್ನುವವರು ಕಾಲ್ ರಿಸಿವ್ ಮಾಡಿ ತಿಳಿಸಿದ್ದೇನೆಂದರೆ, ನಾನು ಕೆಲಸ ನಿಮಿತ್ಯ ಇಂದು ದಿನಾಂಕ: 25/03/2022 ರಂದು 1.00 ಎ.ಎಂ. ಸುಮಾರಿಗೆ ರಾಯಚೂರಿಗೆ ಹೊರಟಿದ್ದಾಗ ಶಹಾಪೂರ-ದೇವದುರ್ಗ ರಸ್ತೆಯಲ್ಲಿರುವ ಸಾವೂರ ಕ್ರಾಸ್ ದಾಟಿ ಅಂದಾಜು 1. ಕಿ.ಮೀ ಅಂತರದಲ್ಲಿ ರೋಡಿನ ಮೇಲೆ ನನ್ನ ಮುಂದೆ ಹೊರಟಿದ್ದ ಒಂದು ಈಚರ್ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಾ ಮುಂದಿನಿಂದ ಅಂದರೆ ದೇವದುರ್ಗ ಕಡೆಯಿಂದ ಬರುತ್ತಿದ್ದ ಒಂದು ಮಾರುತಿ ಓಮಿನಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಈಚರ್ ವಾಹನವು ರಸ್ತೆಯಿಂದ ಕೆಳಗೆ ಹೋಗಿ ಬಿದ್ದಿದ್ದು, ಓಮಿನಿ ಕಾರ್ ರಸ್ತೆಯಲ್ಲಿ ನಿಂತಿರುತ್ತದೆ ನಾನು ಹತ್ತಿರ ಹೋಗಿ ನೋಡಲಾಗಿ ಕಾರಿನಲ್ಲಿದ್ದ ವ್ಯಕ್ತಿಗೆ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈಚರ್ ವಾಹನದ ನಂಬರ ನೋಡಲಾಗಿ ಸದರಿ ವಾಹನ ನಂಬರ ಎಪಿ-21 ಟಿಬಿ-0141 ಅಂತಾ ಇದ್ದು, ಅಲ್ಲಿಯೇ ಇದ್ದ ವಾಹನ ಚಾಲಕನ ಹೆಸರು ಮತ್ತು ವಿಳಾಸದ ಬಗ್ಗೆ ವಿಚಾರಿಸಲಾಗಿ ತನ್ನ ಹೆಸರು ಕೆ.ಈರಣ್ಣ ತಂ/ ಕೆ.ನರಸಣ್ಣ ಸಾ|| ಎಮ್ಮಿಗನೂರ, ಜಿ|| ಕನರ್ೂಲ್ ಅಂತಾ ಹೇಳಿದನು. ಮಾರುತಿ ಓಮಿನಿ ವಾಹನದ ನಂಬರ ಕೆಎ-20 ಎಂ.ಬಿ-477 ಅಂತಾ ಇರುತ್ತದೆ ಅಂತಾ ತಿಳಿಸಿದಾಗ ನಾನು ಶಹಾಪೂರಕ್ಕೆ ಬರುವಾಗ ಮಾರ್ಗ ಮಧ್ಯದಲ್ಲಿರುವ ಘಟನೆ ಸ್ಥಳಕ್ಕೆ ಬಂದು ನೋಡಲಾಗಿ ಘಟನೆ ಸ್ಥಳದಲ್ಲಿ ಅಪಘಾತಕ್ಕೀಡಾದ ವಾಹನಗಳಿದ್ದವು. ನಂತರ ಶಹಾಪೂರ ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಮರ್ಚರಿ ಕೋಣೆಯಲ್ಲಿದ್ದ ಮೃತ ದೇಹವನ್ನು ನೋಡಲಾಗಿ ಮೇಲ್ಕಾಣಿಸಿದಂತೆ ಗಾಯಗಳಾಗಿ ನನ್ನ ಅಳಿಯ ಪ್ರಶಾಂತ ದಳವಾಯಿ ಈತನು ಮೃತಪಟ್ಟಿದ್ದನು.
ಕಾರಣ ಅಪಘಾತಪಡಿಸಿ ನನ್ನ ಅಳಿಯ ಪ್ರಶಾಂತ ತಂ/ ರಾಜಶೇಖರ ದಳವಾಯಿ, ಈತನ ಸಾವಿಗೆ ಕಾರಣನಾದ ಎಪಿ-21 ಟಿಬಿ-0141 ನೇದ್ದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.42/2022 ಕಲಂ 279, 304(ಎ) ಐಪಿಸಿ ಸಂಗಡ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 22/2022 279, 337, 338, ಐಪಿಸಿ:ದಿನಾಂಕ:20/03/2022 ರಂದು ಗಾಯಾಳು ನಾಗಪ್ಪನು ವಜ್ಜಲ ಗ್ರಾಮದಿಂದ ಹುಣಸಗಿಗೆ ಹೋಗಲು ವಜ್ಜಲದಿಂದ ಹುಣಸಗಿ ಕಡೆಗೆ ನಡೆದುಕೊಂಡು ಹೊರಟಾಗ ಬೆಳಿಗ್ಗೆ 8.30 ಗಂಟೆಯ ಸುಮಾರಿಗೆ ಆರೋಪಿತನು ತನ್ನ ಮೋಟಾರ್ ಸೈಕಲ್ ನಂ: ಕೆಎ-33 ಇಎ-8971 ನೇದ್ದರ ಮೇಲೆ ವಜ್ಜಲದಿಂದ ಹುಣಸಗಿಗೆ ಕಡೆಗೆ ಹೋಗಲು ಹೊರಟಿದ್ದು, ಸದರಿ ಮೋಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಗಾಯಾಳುವಿಗೆ ಹಿಂದಿನಿಂದ ಜೋರಾಗಿ ಡಿಕ್ಕಿ ಕೊಟ್ಟಿದ್ದರಿಂದ ಗಾಯಾಳು ರೋಡಿನ ಮೇಲೆ ಕೆಳಗಡೆ ಬಿದ್ದು, ಬಲಗಾಲ ತೊಡೆಯ ಹತ್ತಿರ ಕಾಲು ಮುರಿದಿದ್ದು, ಕೈಕಾಲುಗಳಿಗೆ ತರಚಿದ ರಕ್ತಗಾಯಗಳಾಗಿದ್ದು, ಆರೋಪಿತನು & ಪ್ರತ್ಯಕ್ಷ ಸಾಕ್ಷಿದಾರನಾದ ಯಮನಪ್ಪ ತಂದೆ ನಿಂಗಪ್ಪ ಚಲವಾದಿ ಇವರು ಕುಡಿಕೊಂಡು ಗಾಯಾಳುವಿಗೆ ಸರಕಾರಿ ಆಸ್ಪತ್ರೆ ಹುಣಸಗಿಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು, ನಂತರ ಹೆಚ್ಚಿನ ಉಪಚಾರ ಕುರಿತು ಬಾಗಲಕೊಟೆಯ ಕಟ್ಟಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು, ಫಿರ್ಯಾದಿಯು ಗಾಯಾಳುವಿಗೆ ಇಲ್ಲಿಯವರೆಗೆ ಇಲಾಜು ಮಾಡಿಸಿ ಇಂದು ಠಾಣೆಗೆ ತಡವಾಗಿ ಬಂದು ಟೈಪ್ ಮಾಡಿದ ಅಜರ್ಿ ನೀಡಿದ್ದರ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.

 


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 21/2022 279, 337, 338, ಐಪಿಸಿ : ದಿನಾಂಕ:23/03/2022 ರಂದು ಗಾಯಾಳು & ಆರೋಪಿತನು ಕೂಡಿಕೊಂಡು ಕಕ್ಕೇರಾ ಸೊಸಾಯಿಟಿಗೆ ಹೋಗಿ ಬರುವುದಾಗಿ ಫಿರ್ಯಾದಿಗೆ ತಿಳಿಸಿ, ಬೆಳಿಗ್ಗೆ 8.30 ಗಂಟೆಯ ಸುಮಾರಿಗೆ ಕುಪ್ಪಿ ಗ್ರಾಮದಿಂದ ಮೋಟಾರ ಸೈಕಲ್ ನಂ:ಕೆಎ-33 ಎಕ್ಸ್-8466 ನೇದ್ದರ ಮೇಲೆ ಹೊರಟು ಬಲಶೆಟ್ಟಿಹಾಳ-ಕಕ್ಕೇರಾ ರೊಡಿನ ಮೇಲೆ ಕಾಮನಟಗಿ ಸೀಮಾಂತರದ ಹಣಮನಾಳ ಕ್ರಾಸ್ ಸಮೀಪ ಹೊರಟಾಗ ಆರೋಪಿತನಾದ ದೊಡ್ಡಪ್ಪ ಶಿವಪ್ಪ ಈತನು ಮೋಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಜಂಪಿಗೆ ಒಮ್ಮೆಲೆ ಕಟ್ ಹೊಡೆದಿದ್ದರಿಂದ ಹಿಂದೆ ಕುಳಿತ ಗಾಯಾಳು ನಾನಾಗೌಡ ಈತನು ಮೋಟಾರ ಸೈಕಲ್ ಮೇಲಿಂದ ಕೆಳಗೆ ರೋಡಿನ ಮೇಲೆ ಬಿದ್ದು, ತಲೆಗೆ & ಹಣೆಗೆ ಭಾರಿ ರಕ್ತಗಾಯಗಳಾಗಿ ಬೇವುಸಾಗಿದ್ದು ಇರುತ್ತದೆ. ನಂತರ 108 ವಾಹನದಲ್ಲಿ ಗಾಯಾಳುದಾರನಿಗೆ ಹುಣಸಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಇಲಾಜು ಮಾಡಿಸಿ ಹೆಚ್ಚಿನ ಉಪಚಾರ ಕುರಿತು ಅಂದೆ ವಿಜಯಪೂರದ ಸಂಜೀವಿನಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿ ಇಲಾಜು ಮಾಡಿಸಿ ಫಿರ್ಯಾದಿಯು ಇಂದು ಠಾಣೆಗೆ ತಡವಾಗಿ ಬಂದು ಟೈಪ್ ಮಾಡಿದ ದೂರು ಅಜರ್ಿ ನೀಡಿದ್ದರ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.

 

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 41/2022 ಕಲಂ. 457. 380 ಐಪಿಸಿ : ಇಂದು ದಿನಾಂಕ. 25.03.2022 ರಂದು ಮಧ್ಯಾಹ್ನ 1-30 ಗಂಟೆಗೆ ಸಂದೀಪಕುಮಾರ ತಂದೆ ಅಭಯಕುಮಾರ ದೋಖಾ ಸಾ|| ಸೈದಾಪುರ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಬಂದು ದೂರು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ಯಾರೋ ಕಳ್ಳರು ದಿನಾಂಕ 25.03.2022 ರ ರಾತ್ರಿ ವೇಳೆ ನಮ್ಮ ಮೆಡಿಕಲ ಶೆಟರ ಬೀಗ ಮುರಿದು ಅಕ್ರಮ ಪ್ರವೇಶ ಮಾಡಿ ಮೆಡಿಕಲ ಒಳಗಿದ್ದ ಸಿ.ಸಿ ಟಿ.ವಿ ಡಿ.ವಿ.ಆರ್ ಜೊತೆಗೆ ವೈ.ಫೈ ರೂಟರ್ ಅ.ಕಿ.10,000/- ರೂ. ಹಾಗೂ ಗಲ್ಲಾ ಪೆಟ್ಟಿಗೆ ಚಾವಿ ಮುರಿದು ಅದರಲ್ಲಿದ್ದ ನಗದು ಹಣ 25,000/- ರೂ. ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಘಟನೆಯು ದಿನಾಂಕ 24.03.2022 ರ ರಾತ್ರಿ 10-30 ಗಂಟೆಯಿಂದ ದಿನಾಂಕ 25.03.2022 ರ ಬೆಳಿಗ್ಗೆ 8 ಗಂಟೆಯವರೆಗಿನ ಮಧ್ಯದ ಅವಧಿಯಲ್ಲಿ ನಡೆದಿದ್ದು, ಯಾರೋ ಕಳ್ಳರು ನಮ್ಮ ಅರಿಹಂತ ಮೆಡಿಕಲ್ ಶಾಪ ಶೆಟರ ಬೀಗ ಮುರಿದು ಒಟ್ಟು ರೂಪಾಯಿ 35,000/- ಕಿಮ್ಮತ್ತಿನ ಸಿ.ಸಿ ಟಿ.ವಿ ಡಿ.ವಿ.ಆರ್ ಜೊತೆಗೆ ವೈ.ಫೈ ರೂಟರ್ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿಯವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ನೀಡಿದ ದೂರು ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 41/2022 ಕಲಂ. 457, 380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 40/2022 ಕಲಂ 279, 338 ಐಪಿಸಿ : ಇಂದು ದಿನಾಂಕ 25.03.2022 ರಂದು ಬೆಳಿಗ್ಗೆ 11.30 ಗಂಟೆಗೆ ರಾಘವೇಂದ್ರ ಸಿ.ಹೆಚ್.ಸಿ-44 ಸೈದಾಪೂರ ಠಾಣೆ ರವರು ರಾಯಚೂರು ಬಾಲಂಕು ಆಸ್ಪತೆಯಲ್ಲಿ ಉಪಚಾರ ಪಡೆಯುತ್ತಿದ್ದ ಫೈಜಲ್ ಹುಸೇನ ಕಡೇಚೂರು ಗ್ರಾಮ ಈತನ ಹೆಂಡತಿಯಾದ ಚಾಂದಬೀ ಗಂಡ ಫೈಜಲ್ ಹುಸೇನ ತಾನಿ, ವ|| 32 ವರ್ಷ, ಜಾ|| ಮುಸ್ಲಿಂ, ಉ|| ಕೂಲಿಕೆಲಸ, ಸಾ|| ಕಡೇಚೂರು ಗ್ರಾಮ ಇವರ ಹೇಳಿಕೆದೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ನನಗೆ ನೀಡಿದರು. ದೂರಿನ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 24.03.2022 ರಂದು ಬೆಳಿಗ್ಗೆ ನನ್ನಗಂಡ ಫೈಜಲ್ ಹುಸೇನ, ನಮ್ಮೂರಿನ ಮೌಲಾಲಿ ತಂದೆ ಖಾಸಿಂಸಾಬ ಇಬ್ಬರೂ ಕೂಡಿ ಕೂಲಿಕೆಲಸಕ್ಕೆ ಅಂತಾ ಮೋಟಾರ್ ಸೈಕಲ್ ಮೇಲೆ ಹೋಗಿದ್ದರು.
ಹೀಗಿದ್ದು ನಿನ್ನೆ ಮಧ್ಯಾಹ್ನ 3.30 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನತಮ್ಮ ಅಲಿಹಸನ ನಮ್ಮ ಮನೆಗೆ ಬಂದು ನನ್ನಗಂಡ ಮತ್ತು ಮೌಲಾಲಿ ಇಬ್ಬರೂ ಮೋಟಾರ್ ಸೈಕಲ್ ಮೇಲೆ ಕಡೇಚೂರು ಕಡೆಗೆ ಬರುವಾಗ ಶೆಟ್ಟಿಹಳ್ಳಿ ಕ್ರಾಸ ಸಮೀಪ ಕಾರ್ ಗುದ್ದಿದ್ದರಿಂದ ಕೆಳಗಡೆ ಬಿದ್ದು ಗಾಯಗೊಂಡಿದ್ದ ವಿಷಯ ತನಗೆ ಯಾರೋ ಫೋನ್ ಮುಖಾಂತರ ತಿಳಿಸಿದ ವಿಷಯ ನನಗೆ ಹೇಳಿದ. ನಂತರ ನಾನು, ನನ್ನತಮ್ಮ ಇಬ್ಬರೂ ಮೋಟಾರ್ ಸೈಕಲ್ ಮೇಲೆ ಶೆಟ್ಟಿಹಳ್ಳಿ ಕ್ರಾಸ್ ಕಡೆಗೆ ಹೋಗುವಾಗ ನನ್ನತಮ್ಮನ ಮೊಬೈಲ್ ಫೋನಿಗೆ ಯಾರೋ ಫೋನ್ಮಾಡಿ ಅಂಬುಲೆನ್ಸ್ ವಾಹನದಲ್ಲಿ ನನ್ನಗಂಡನಿಗೆ ಮತ್ತು ಮೌಲಾಲಿಗೆ ಹಾಕಿಕೊಂಡು ರಾಯಚೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಅಂತಾ ತಿಳಿಸಿದ್ದರಿಂದ ನಾವು ಮೋಟಾರ್ ಸೈಕಲ್ ಮೇಲೆ ಇಲ್ಲಿಗೆ ಅಂದರೆ ರಾಯಚೂರು ಬಾಲಂಕು ಆಸ್ಪತ್ರೆಗೆ ನಿನ್ನೆ ಸಾಯಂಕಾಲ ಬಂದಿದ್ದೆವು.
ಬಾಲಂಕು ಆಸ್ಪತ್ರೆಯಲ್ಲಿದ್ದ ನನ್ನಗಂಡನ ಎಡಗಾಲು ಮೊಳಕಾಲು ಕೆಳಗಡೆ ಭಾರಿಪೆಟ್ಟಾಗಿ ಎಲುಬು ಮುರಿದಂತಾಗಿದೆ ಅಲ್ಲದೆ ಹಣೆಗೆ, ಪಕ್ಕೆಲುಬುಗಳಿಗೆ ಪೆಟ್ಟುಗಳಾಗಿವೆ. ಮೌಲಾಲಿಗೆ ತೆಲೆಗೆ ಮತ್ತು ಕೈಗಳಿಗೆ, ಕಾಲಿಗೆ ಭಾರಿ ಪೆಟ್ಟುಗಳಾಗಿ ಬೇವಸಾಗಿದ್ದಾನೆ. ಯಂಗಾಯ್ತು ಅಂತಾ ನಾನು ಮತ್ತು ನನ್ನತಮ್ಮ ಇಬ್ಬರೂ ಕೂಡಿ ನನ್ನಗಂಡನಿಗೆ ನಿನ್ನೆ ವಿಚಾರಿಸಿದಾಗ ತಿಳಿಸಿದ್ದೇನೆಂದರೆ, ಶೆಟ್ಟಿಹಳ್ಳಿ ಶ್ರೀಧರರೆಡ್ಡಿ ಪ್ಲಾಂಟನಲ್ಲಿ ಸಿಮೆಂಟ್ ಲೋಡ ಇಳಿಸಿ ನಾನು ಮತ್ತು ಮೌಲಾಲಿ ಇಬ್ಬರೂ ಮೋಟಾರ್ ಸೈಕಲ್ ಮೇಲೆ ಊರಿಗೆ ಬರಬೇಕಂತಾ ಪ್ಲಾಂಟ ಕಡೆಯಿಂದ ರಾಯಚೂರು-ಯಾದಗಿರಿ ಮುಖ್ಯ ರಸ್ತೆಗೆ ಹತ್ತುವ ಕಾಲಕ್ಕೆ ಶ್ರೀಧರರೆಡ್ಡಿ ತನ್ನ ಕಾರ್ ವೇಗವಾಗಿ ಓಡಿಸಿಕೊಂಡು ಬಂದು ಒಮ್ಮೇಲೆ ಪ್ಲಾಂಟ ಕಡೆಗೆ ಬರುವ ದಾರಿಗೆ ಕಾರ್ ತಿರುಗಿದ್ದರಿಂದ ನಾನು ನಡೆಸುತ್ತಿರುವ ಮೌಲಾಲಿ ಮೋಟಾರ್ ಸೈಕಲ್ ಸಂಖ್ಯೆ ಕೆಎ-33-ಕೆ-1013 ವಾಹನಕ್ಕೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗುದ್ದಿಬಿಟ್ಟ ಅಂತಾ ತಿಳಿಸಿದ. ಕಾರಣ ಕಾರ್ ವಾಹನದ ಸಂಖ್ಯೆ ಕೆಎ-33-ಎಂ-9540 ವಾಹನ ಚಾಲಕನಾದ ಶ್ರೀಧರರೆಡ್ಡಿ ಶೆಟ್ಟಿಹಳ್ಳಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ ಅಂತಾ ಆಪಾದನೆ.


.

ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ:37/2022 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ.25/03/2022 ರಂದು 6-30 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾ.ಸು)ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವರದಿ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 25/03/2022 ರಂದು 3-30 ಪಿಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಮೈಲಾಪೂರಬೇಸ್ ಕ್ರಾಸಿನಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಇಬ್ಬರು ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ವಿಠೋಬಾ ಎ.ಎಸ್.ಐ ಹಾಗೂ ನಮ್ಮ ಸಿಬ್ಬಂದಿಯವರಾದ ಅಬ್ದುಲ ಬಾಷಾ ಪಿಸಿ-237, ರವೀಂದ್ರ ಪಿಸಿ-168 ರವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಹೋಗಿ 5-00 ಪಿಎಂಕ್ಕೆ ದಾಳಿ ಮಾಡಿ ಆರೋಪಿತರಿಗೆ ಹಿಡಿದು ವಿಚಾರಿಸಲು ಅವರು ತನ್ನ ಹೆಸರು 1 ಜಾವೇದ ತಂ. ಅಬ್ದುಲ್ಹಸನ ನಾಲ್ವಾರ ವಃ29 ಜಾಃ ಮುಸ್ಲಿಂ ಉಃ ಟೇಲರ 2. ಮಧು ತಂದೆ ಮಲ್ಲಯ್ಯ ಮುಂಡರಗಿ ವಃ 26 ಜಾಃ ಕಬ್ಬಲಿಗ ಉಃ ಚಾಲಕ ಸಾಃ ಇಬ್ಬರು ಮೈಲಾಪೂರ ಬೇಸ್ ಯಾದಗಿರಿ ಅಂತಾ ತಿಳಿಸಿದ್ದು ನಂತರ ಪಿ.ಎಸ್.ಐ ಆತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ 1) ನಗದು ಹಣ 780/- 2) ಒಂದು ಮಟಕಾ ಅಂಕಿಬರೆದ ಚಿಟಿ ಅ.ಕಿ.00=00 3) ಒಂದು ಬಾಲಪೆನ್ ಅ.ಕಿ.00=00, ಸಿಕ್ಕಿದ್ದು ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ.25/03/2022 ರಂದು 5-00 ಪಿಎಂ ದಿಂದ 6-00 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟಾಪದಲ್ಲಿ ಗಣಕೀಕರಣ ಮಾಡಿ ಮುಗಿಸಿದ್ದು ನಂತರ ವರದಿ, ಜಪ್ತಿಪಂಚನಾಮೆ, ಆರೋಪಿತರೊಂದಿಗೆ ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ 6-30 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾದಿಕಾರಿರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿತರ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.37/2022 ಕಲಂ. 78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 39/2022 ಕಲಂ:279, 338, ಐಪಿಸಿ : ದಿನಾಂಕ:24/03/2022 ರಂದು ಕಲಬುರಗಿಯ ಯುನೈಟೆಡ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು 5-30 ಪಿಎಮ್ ಕ್ಕೆ ಎ.ಎಸ್.ಐ ನಂದಗೋಪಾಲ ರವರಿಗೆ ವಿಚಾರಣೆ ಕುರಿತು ಕಳುಹಿಸಿದ್ದು, ಸದರಿಯವರು ಯುನೈಟೆಡ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ನಿಂಗಮ್ಮ ಗಂಡ ಚಂದಪ್ಪ ಅಲ್ಲೂರು ಸಾ:ಹತ್ತಿಕುಣಿ ಇವರ ಎಮ್.ಎಲ್.ಸಿ ಸ್ವಿಕೃತ ಮಾಡಿಕೊಂಡು ಸದರಿಯವರಿಗೆ ವಿಚಾರಿಸಿ, ಹೇಳಿಕೆ ಪಡೆದುಕೊಂಡು ಇಂದು ದಿನಾಂಕ:25/03/2022 ರಂದು 4-30 ಪಿಎಮ್ ಕ್ಕೆ ಹಾಜರಪಡಿಸಿದ್ದು, ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶವೇನಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ದಿನಾಂಕ: 22/03/2022 ರಂದು ಮುಂಜಾನೆ ವಡಗೇರಾ ತಾಲ್ಲೂಕಿನ ಕೊಂಕಲ್ ಗ್ರಾಮಕ್ಕೆ ಹತ್ತಿ ಬಿಡಿಸುವ ಕೂಲಿ ಕೆಲಸಕ್ಕೆ ನಾನು ಮತ್ತು ನಮ್ಮೂರ 1) ಬಸಮ್ಮ ಗಂಡ ಮಹಾದೇವಪ್ಪ ಅಲ್ಲೂರು, 2) ಗೌರಮ್ಮ ಗಂಡ ಮಹಾದೇವಪ್ಪ ಅಲ್ಲೂರು, 3) ಕಸ್ತೂರಮ್ಮ ಗಂಡ ಮಹಾದೇವಪ್ಪ ಅಲ್ಲೂರು ಎಲ್ಲರೂ ಸೇರಿಕೊಂಡು ನಮ್ಮೂರಿನ ಹಣಮಂತ ತಂದೆ ನಿಂಗಪ್ಪ ಜುಬರೇನೋರ ಇವರ ಟಂ-ಟಂ ಆಟೋ ನಂ: ಕೆಎ-33/7341 ರಲ್ಲಿ ಹೋಗಿದು, ಸಾಯಂಕಾಲ ಕೂಲಿ ಕೆಲಸ ಮುಗಿಸಿಕೊಂಡು ಮರಳಿ ಅದೇ ಟಂ-ಟಂ ಆಟೋದಲ್ಲಿ ಎಲ್ಲಾರು ಕುಳಿತುಕೊಂಡಿದ್ದು ಗೌರಮ್ಮ ಗಂಡ ಮಹಾದೇವಪ್ಪ ಅಲ್ಲೂರು ಹಾಗೂ ಬಸಮ್ಮ ಗಂಡ ಮಹಾದೇವಪ್ಪ ಅಲ್ಲೂರು ಮತ್ತು ನಾನು ನಡುವಿನ ಸೀಟಿನ ಬಲಗಡೆ ಭಾಗದ ಕೊನೆಯಲ್ಲಿ ಆಟೋ ಒಳಗಡೆ ಕುಳಿತಿದ್ದೆವು. ಟಂ-ಟಂ ಆಟೋವನ್ನು ಹಣಮಂತನ್ನು ನಡೆಸಿಕೊಂಡು ವಡಗೇರಾ-ಯಾದಗಿರಿ ಮಾರ್ಗವಾಗಿ ನಮ್ಮೂರಿಗೆ ಹೋಗುತ್ತಿದ್ದಾಗ ಗಡ್ಡೆಸೂಗೂರು ದಾಟಿದ ನಂತರ 6:00 ಪಿ.ಎಮ್. ಸುಮಾರಿಗೆ ಹುಲಕಲ್ ಬ್ರೀಡ್ಜ್ ಹತ್ತಿರ ನಮ್ಮ ಟಂ-ಟಂ ಚಾಲಕನು ತನ್ನ ಟಂ-ಟಂ ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ನೋಡು ನೋಡುತ್ತಲೇ ನಮ್ಮ ಟಂ-ಟಂ ಆಟೋ ಒಮ್ಮಲೇ ಬ್ರೇಕ್ ಹಾಕಿ ಬಲಕ್ಕೆ ಕಟ್ ಹೊಡೆದು ಟಂ-ಟಂ ಗಾಡಿಯ ರಸ್ತೆಯ ಮಧ್ಯದಲ್ಲಿ ಬಿದ್ದು ಬಿಟ್ಟಿತ್ತು ಸದರಿ ಅಪಘಾತದಲ್ಲಿ ನನಗೆ ಬಲಗಡೆ ರಟ್ಟೆಗೆ ಭಾರಿ ಒಳಪೆಟ್ಟು ಮತ್ತು ನನ್ನ ಬಲಗಡೆ ಸೊಂಟಕ್ಕೆ ಭಾರಿ ಒಳಪೆಟ್ಟಾಗಿ ಗುಪ್ತವಾಯವಾಗಿತ್ತು. ಟಂ-ಟಂ ಆಟೋದಲ್ಲಿ ಕುಳಿತಿದ್ದ ಗೌರಮ್ಮ ಗಂಡ ಮಹಾದೇವಪ್ಪ ಅಲ್ಲೂರು ಇವಳಿಗೆ ನೋಡಲಾಗಿ ಬಲಗಾಲಿಗೆ ಮೊಳಕಾಲಿಗೆ ತರಚಿದೆ ಗಾಯವಾಗಿತ್ತು ಹಾಗೂ ಇನ್ನುಳಿದವರಿಗೆ ಯಾವುದೇ ಗಾಯಗಳು ಆಗಿರಲಿಲ್ಲ ನಂತರ ಟಂ-ಟಂ ಆಟೋ ಚಾಲಕ ಹಣಮಂತ ಈತನು 108 ಅಂಬುಲೆನ್ಸ್ಗೆ ಫೋನ್ ಮಾಡಿದ್ದು, ಸ್ವಲ್ಪ ಸಮಯದ ನಂತರ ಬಂದ ಅಂಬುಲೆನ್ಸ್ನಲ್ಲಿ ನಮಗೆಲ್ಲಾ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ಅಲ್ಲಿನ ವೈಧ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಬೇರೆ ಕಡೆ ತೋರಿಸಲು ಹೇಳಿದಾಗ ನಾವು ಅಲ್ಲಿಂದ ಕಲಬುರಗಿಯ ಯುನೈಟೆಡ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆಯಾದಾಗ ಅಲ್ಲಿನ ವೈಧ್ಯಾಧಿಕಾರಿಗಳು ಆರ.ಟಿ.ಎ ಎಮ್.ಎಲ್.ಸಿ ಮಾಡಿದ್ದು ಇರುತ್ತದೆ. ಸದರಿ ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದ ವಡಗೇರಾ ಪೋಲಿಸರಿಗೆ ನಾನು ದೂರು ಅಜರ್ಿಯನ್ನು ಸಲ್ಲಿಸಿರುತ್ತೇನೆ. ಕಾರಣ ಟಂ-ಟಂ ನಂಬರ:ಕೆಎ 33/ 7341 ನೇದ್ದರ ಚಾಲಕನಾದ ಹಣಮಂತ ತಂದೆ ನಿಂಗಪ್ಪ ಜುಬರೇನೋರ ಈತನು ತನ್ನ ಟಂ-ಟಂನ್ನು ಅತಿವೇಗ ಮತ್ತು ನಿಷ್ಕಾಳಜಿತದಿಂದ ಚಲಾಯಿಸಿ ಒಮ್ಮಲೇ ಬ್ರೇಕ್ ಹಾಕಿ ಬಲಕ್ಕೆ ಕಟ್ ಹೊಡೆದು ನನಗೆ ಅಪಘಾತಪಡಿಸಿದ ಚಾಲಕನ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ. 39/2022 ಕಲಂ:279, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡೇನು.

 

ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 15/2022 ಕಲಂ: 279, 338, 283 ಐಪಿಸಿ : ಇಂದು ದಿನಾಂಕ 25/03/2022 ರಂದು ಮುಜಾನೆ 9:00 ಎ.ಎಂ ಕ್ಕೆ ಕುಮಾರೇಶ್ವರ ಆಸ್ಪತ್ರೆ ಬಾಗಲಕೋಟದಿಂದ ಎಂ.ಎಲ್.ಸಿ ವಸೂಲಾದ ಮೇರೆಗೆ ನಾನು 9:30 ಎ.ಎಂ ಎಂ.ಎಲ್.ಸಿ ವಿಚಾರಣೆ ಕುರಿತು ಠಾಣೆಯಿಂದ ಬಿಟ್ಟು 2:30 ಪಿ.ಎಂ ಕ್ಕೆ ಕುಮಾರೇಶ್ವರ ಆಸ್ಪತ್ರೆ ಬಾಗಲಕೋಟಕ್ಕೆ ಬೇಟಿನೀಡಿ ಆಸ್ಪತ್ರೆಯಲ್ಲಿ ಇದ್ದ ಗಾಯಾಳುವಿನ ತಂದೆ ಗೋಪಿಲಾಲ @ ಗೋಪಾಲ ತಂದೆ ಖೇಮಪ್ಪ ಚವ್ಹಾಣ ಈತನಿಗೆ ಘಟನೆಯ ಬಗ್ಗೆ ವಿಚಾರಿಸಿದ್ದು ಸದರಿಯವನು ತಾನು ಪಿಯರ್ಾದಿ ಅಜರ್ಿಯನ್ನು ಟೈಪುಮಾಡಿಸಿಕೊಡುವದಾಗಿ ಹೇಳಿ ಪಿಯರ್ಾದಿ ಅಜರ್ಿಯನ್ನು 4:00 ಪಿ.ಎಂಕ್ಕೆ ಕುಮಾರೇಶ್ವರ ಆಸ್ಪತ್ರೆ ಬಾಗಲಕೋಟದಲ್ಲಿ ಪಡೆದುಕೊಂಡು 9:00 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದಿದ್ದು ಪಿಯರ್ಾದಿ ಅಜರ್ಿಯ ಸಾರಾಂಶವೆನೆಂದರೆ ನನಗೆ ಇಬ್ಬರು ಗಂಡು ಮಕ್ಕಳಿದ್ದು ಹಾಗೂ ಒಬ್ಬ ಹೆಣ್ಣುಮಗಳು ಇರುತ್ತಾಳೆ ಹೆಣ್ಣು ಮಗಳನ್ನು ಮದುವೆ ಮಾಡಿಕೊಟ್ಟಿದ್ದು ಇಬ್ಬರು ಗಂಡು ಮಕ್ಕಳದ್ದು ಮದುವೆಯಾಗಿರುವದಿಲ್ಲ. ನನ್ನ ಹಿರಿಯ ಮಗ ಅಪ್ಪು ಈತನು ಹುಣಸಗಿ ಕಾಲೇಜಿನಲ್ಲಿ ಬಿ.ಎ. ವ್ಯಾಸಂಗ ಮಾಡುತ್ತಿದ್ದು ನನ್ನ ಕಿರಿಯ ಮಗ ಸಾಗರ ಈತನು ಕೊಡೆಕಲ್ಲ ಮೂರಾಜರ್ಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಕಲಿಯುತ್ತಿದ್ದಾನೆ. ನಾನು ಹಾಗೂ ನನ್ನ ಹೆಂಡತಿ ಛಾಯಮ್ಮ ಇಬ್ಬರು ಈಗ ಐದು ತಿಂಗಳಹಿಂದೆ ದುಡಿಯಲು ಮಹಾರಾಷ್ಟ್ರಕ್ಕೆ ಹೋಗಿದ್ದು ನನ್ನ ಮಗ ಅಪ್ಪು ತನ್ನ ಅಜ್ಜಿಯೊಂದಿಗೆ ನಮ್ಮ ತಾಂಡಾದಲ್ಲಿ ಇದ್ದು ನನ್ನ ಕಿರಿಯ ಮಗ ಸಾಗರ ಈತನು ಮೂರಾಜರ್ಿ ವಸತಿ ನಿಲಯದಲ್ಲಿ ಇರುತ್ತಾನೆ. ನಿನ್ನೆ ದಿನಾಂಕ 24/03/2022 ರಂದು 8:00 ಗಂಟೆಯ ಸುಮಾರಿಗೆ ನಾನು ಹಾಗೂ ನನ್ನ ಹೆಂಡತಿ ಮಹಾರಾಷ್ಟ್ರದಲ್ಲಿ ಇದ್ದಾಗ ನಮ್ಮ ತಾಂಡಾದ ನಮ್ಮ ಅಣ್ಣತಮ್ಮಕೀಯ ಶಾಂತಪ್ಪ ತಂದೆ ಬಾಲಚಂದ್ರ ಚವ್ಹಾಣ ಈತನು ನಮಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ದಿನಾಂಕ 24/03/2022 ರಂದು ರಾತ್ರಿ 7:30 ಗಂಟೆಯ ಸುಮಾರಿಗೆ ನಾನು ಹಾಗೂ ನಮ್ಮ ತಾಂಡಾದ ಥಾವರಪ್ಪ ತಂದೆ ಶಿವಪ್ಪ ಚವ್ಹಾಣ ಇಬ್ಬರು ಕೂಡಿ ನಮ್ಮ ಕೆಲಸದ ನಿಮಿತ್ಯ ನಮ್ಮ ಮೋಟರ ಸೈಕಲ್ ಮೇಲೆ ನಾರಾಯಣಪೂರಕ್ಕೆ ಹೋಗುತ್ತಿದ್ದಾಗ ನಮ್ಮ ಮುಂದೆ ನಿಮ್ಮ ಮಗ ಅಪ್ಪು ಈತನು ತನ್ನ ಮೋಟರ ಸೈಕಲ್ ಮೇಲೆ ತನ್ನ ಮೋಟರ ಸೈಕಲ್ನ್ನು ಅತೀ ವೇಗವಾಗಿ ಹಾಗೂ ನಿರ್ಲಕ್ಷತನದಿಂದ ನಡೆಯಿಸಿ ಕೊಂಡು ಹೋಗುತ್ತಿದ್ದನು ಸಮಯ ರಾತ್ರಿ 7:30 ಗಂಟೆಯ ಸುಮಾರಿಗೆ ಹುಣಸಗಿ ನಾರಾಯಣಪೂರ ಮುಖ್ಯ ರಸ್ತೆಯ ಮೇಲೆ ಬಸರಗೀಡದ ತಾಂಡಾಕ್ಕೆ ಹೋಗುವ ಹೊಸ ರೋಡಿನ ಹತ್ತಿರ ನಿಲ್ಲಿಸಿದ ಒಂದು ಟ್ರಾಕ್ಟರ ಟ್ರೇಲರಗೆ ಹೋಗಿ ತನ್ನ ಮೋಟರ ಸೈಕಲ್ನ್ನು ಗುದ್ದಿಸಿ ಕೆಳಗೆ ಬಿದ್ದನು ಆಗ ಹಿಂದೆ ಹೋಗುತ್ತಿದ್ದ ನಾನು ಹಾಗೂ ನಮ್ಮತಾಂಡಾದ ಥಾವರಪ್ಪ ಇಬ್ಬರು ಕೂಡಿ ಹೋಗಿ ನೋಡಲಾಗಿ ನಿಮ್ಮ ಮಗ ಅಪ್ಪುವಿಗೆ ತಲೆಗೆ ಮತ್ತು ಎಡಗಾಲ ಮೋಳಕಾಲಿಗೆ ರಕ್ತಗಾಯವಾಗಿ ಬಿದ್ದಿದ್ದು ನಂತರ ನಾನು ಅಪ್ಪು ನಡೆಯಿಸುತ್ತಿದ್ದ ಮೋಟರ ಸೈಕಲ್ ನಂಬರ ನೋಡಲಾಗಿ ಅದರ ನಂಬರ ಕೆ.ಎ. 33 ವಾಯ್ 9086 ಇತ್ತು ನಂತರ ರಸ್ತೆಯ ಮೇಲೆ ನಿಲ್ಲಿಸಿದ ಟ್ರ್ಯಾಕ್ಟರ ಟ್ರೇಲರ ನಂ ನೋಡಲಾಗಿ ಅದರ ನಂಬರ ಎಂ.ಹೆಚ್-23 ಕ್ಯೂ-2470 ಇತ್ತು ಟ್ರ್ಯಾಕ್ಟರ ಟ್ರೇಲರ ಮಾಲಿಕನು ತನ್ನ ಟ್ರ್ಯಾಕ್ಟರ ಟ್ರಾಲಿಗೆ ಯಾವುದೆ ಇಂಡಿಕೇಟರ ಹಾಗೂ ಸೂಚನಾ ಫಲಕಗಳನ್ನು ಹಾಕದೆ ರಾತ್ರಿ ಸಮಯದಲ್ಲಿ ಸಾರ್ವಜಿನಿಕರು ತಿರುಗಾಡುವ ಮುಖ್ಯ ರಸ್ತೆಯ ನಿಷ್ಕಾಳಜಿತನದಿಂದ ತನ್ನ ಟ್ರ್ಯಾಕ್ಟರ ಟ್ರೇಲರನ್ನು ನಿಲ್ಲಿಸಿದ್ದರಿಂದ ಅಫಘಾತವಾಗಿರುತ್ತದೆ ನಾವು ನಿಮ್ಮ ಮಗ ಅಪ್ಪುವನ್ನು ಉಪಚಾರ ಕುರಿತು ಕುಮಾರೇಶ್ವರ ಆಸ್ಪತ್ರೆ ಬಾಗಲಕೋಟಿಗೆ ಕರೆದುಕೊಂಡು ಹೋಗುತ್ತಿದ್ದೇವು ನೀವು ಅಲ್ಲಿಗೆ ಬರಿ ಅಂತಾ ನಮಗೆ ತಿಳಿಸಿದರು. ನಂತರ ನಾನು ಹಾಗೂ ನನ್ನ ಹೆಂಡತಿ ಛಾಯಮ್ಮ ಇಬ್ಬರುಕೂಡಿ ಇಂದು ಮುಂಜಾನೆ 10:00 ಗಂಟೆಗೆ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ಬಂದಿದ್ದು ಅಲ್ಲಿ ನನ್ನ ಮಗ ಅಪ್ಪು ಈತನು ಬೆಡ್ಡ ಮೇಲೆ ಮಲಗಿಕೊಂಡಿದ್ದನು ನಾನು ಹಾಗೂ ನನ್ನ ಹೆಂಡತಿ ಇಬ್ಬರು ನನ್ನ ಮಗ ಅಪ್ಪುವಿಗೆ ನೋಡಲಾಗಿ ಅವನಿಗೆ ತಲೆಯ ಮೇಲೆ ಮತ್ತು ಎಡಗಾಲ ಮೋಳಕಾಲ ಹತ್ತಿರ ರಕ್ತಗಾಯವಾಗಿ ನನ್ನ ಮಗ ಅಪ್ಪು ಮಾತನಾಡಲಿಲ್ಲ ನನ್ನ ಮಗನೊಂದಿಗೆ ಆಸ್ಪತ್ರೆಯಲ್ಲಿ ನಮ್ಮ ಅಣ್ಣ ಶಾಂತಪ್ಪ ಹಾಗೂ ಥಾವರಪ್ಪ ಇದ್ದರು. ನನ್ನ ಮಗನು ನಿನ್ನೆ ದಿನಾಂಕ 24/03/2022 ರಂದು 7:30 ಪಿ.ಎಂ ಸುಮಾರಿಗೆ ಹುಣಸಗಿ ನಾರಾಯಣಪೂರ ಮುಖ್ಯ ರಸ್ತೆಯ ಮೇಲೆ ಬಸರಗೀಡದ ತಾಂಡಾಕ್ಕೆ ಹೋಗುವ ಹೊಸ ರೋಡಿನ ಹತ್ತಿರ ಟ್ರ್ಯಾಕ್ಟರ ಟ್ರಾಲಿ ಮಾಲಿಕನು ತನ್ನ ಟ್ರಾಲಿಗೆ ರಾತ್ರಿ ಸಮಯದಲ್ಲಿ ನಿಲ್ಲಿಸಬೇಕಾದರೆ ಯಾವುದೆ ಇಂಡಿಕೆಟರ ಹಾಗೂ ಸೂಚನಾ ಫಲಕಗಳನ್ನು ಹಾಕದೆ ನಿರ್ಲಕ್ಷತನದಿಂದ ಟ್ರಾಲಿಯನ್ನು ನಿಲ್ಲಿಸಿದ್ದರಿಂದ ನನ್ನ ಮಗನು ತನ್ನ ಮೋಟರ ಸೈಕಲ್ನ್ನು ಅದಕ್ಕೆ ಹೋಗಿ ಗುದ್ದಿಸಿ ಅಫಘಾತವಾಗಿದ್ದು ಕಾರಣ ತಾವು ಕಾನೂನು ಕ್ರಮಜರುಗಿಸಬೆಕು ಅಂತಾ ಗಣಕಯಂತ್ರದಲ್ಲಿ ಟೈಪು ಮಾಡಿಸಿಕೊಟ್ಟ ಅಜರ್ಿ ಇರುತ್ತದೆ. ಅಂತಾ ನೀಡಿದ ಪಿಯರ್ಾದಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 15/2022 ಕಲಂ 279, 338, 283 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 44/2022 ಕಲಂ 78 (3) ಕೆಪಿ ಆಕ್ಟ್ : ಇಂದು ದಿನಾಂಕ 25.03.2022 ರಂದು ಸಂಜೆ 06:30 ಪಿಎಮ್ಕ್ಕೆ ಸ.ತೆ.ಫಿರ್ಯಾದಿ ಶ್ಯಾಮಸುಂದರ ಪಿಎಸ್ಐ (ಅ.ವಿ)ಶಹಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು ಮೂಲಜಪ್ತಿ ಪಂಚನಾಮೆಯೋಂದಿಗೆ ಹಾಗೂ ಒಬ್ಬ ಆರೋಪಿತನನ್ನು ತಂದು ಹಾಜರುಪಡಿಸಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ ನಾನು ಶ್ಯಾಮಸುಂದರ ಪಿ.ಎಸ್.ಐ (ಅ.ವಿ) ಶಹಾಪೂರ ಪೊಲೀಸ ಠಾಣೆ ಈ ಮೂಲಕ ನಿಮಗೆ ಸೂಚಿಸುವುದೇನಂದರೆ ಇಂದು ದಿನಾಂಕ: 25/03/2022 ರಂದು ಮಧ್ಯಾಹ್ನ 3.50 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ನಗರದ ಬಸವೇಶ್ವರ ವೃತ್ತದ ಹತ್ತಿರ ಇರುವ ವೆಂಕಟೇಶ್ವರ ಭವನ ಹೋಟೆಲ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಮಾನ್ಯ ಪಿ.ಐ ಸಾಹೇಬರು ಶಹಾಪೂರ ಠಾಣೆ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ ಶ್ರೀ ಬಾಬು ಹೆಚ್.ಸಿ-162, ಶ್ರೀ ರಾಮಪ್ಪ ಹೆಚ್.ಸಿ-168 ರವರನ್ನು ಕರೆದು ಸದರಿ ವಿಷಯವನ್ನು ತಿಳಿಸಿ, ದಾಳಿಗಾಗಿ ಇಬ್ಬರ ಪಂಚರನ್ನು ಕರೆಯಿಸಲು ತಿಳಿಸಿದ್ದರಿಂದ ಪಂಚರಾದ 1) ಶ್ರೀ ರಾಜು ತಂದೆ ಹುಲಗಪ್ಪ ಸುರಪೂರಕರ್ ವಯ:28 ಉ: ಕೂಲಿಕೆಲಸ ಜಾ: ಪ.ಜಾ (ಮಾದಿಗ) ಸಾ: ಹಳಿಪೇಠ ಶಹಾಪೂರ ತಾ: ಶಹಾಪೂರ ಮತ್ತು 2) ಅಂಬ್ಲಪ್ಪ ತಂದೆ ಭೀಮರಾಯ ಹೆನಗುಂಟಿ ವಯ: 30 ಜಾ: ಪ,ಜಾತಿ (ಮಾದಿಗ) ಉ: ಕೂಲಿ ಕೆಲಸ ಸಾ: ಹಳಿಪೇಠ ಶಹಾಪೂರ ತಾ: ಶಹಾಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯ ತಿಳಿಸಿ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಬಾಬು ಹೆಚ್.ಸಿ-162, ರಾಮಪ್ಪ ಹೆಚ್.ಸಿ-168 ರವರೊಂದಿಗೆ ಠಾಣೆಯಿಂದ 4.15 ಪಿ.ಎಮ್.ಕ್ಕೆ ಒಂದು ಖಾಸಗಿ ವಾಹನದಲ್ಲಿ ಹೊರಟು 4.20 ಪಿ.ಎಮ್.ಕ್ಕೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಜನರನ್ನು ಕೂಗಿ ಕರೆಯುತ್ತಾ ಬರ್ರಿ ಬರ್ರಿ ಇದು ದೈವಲೀಲೆಯ ಆಟ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕೂಗಿ ಕರೆಯುತ್ತಾ ನಂಬರ ಬರೆದುಕೊಂಡು ಚೀಟಿ ಬರೆದು ಕೊಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರು ಕೂಡಿ 4.30 ಪಿ.ಎಮ್.ಕ್ಕೆ ದಾಳಿ ಮಾಡಿದ್ದು ಮಟಕಾ ನಂಬರ ಬರೆಯಿಸಲು ಬಂದಿದ್ದ ಜನರು ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಆತ ತನ್ನ ಹೆಸರು ಸಿದ್ದಪ್ಪ ತಂದೆ ಮರೆಪ್ಪ ಕಂದಳ್ಳಿ ವಯ: 29 ಉ: ಬೇಕಾರ ಜಾ: ಪ.ಜಾತಿ(ಮಾದಿಗ) ಸಾ: ಮನೆ ನಂ: 55/159 ಕಂಟಿ ಯಲ್ಲಮ್ಮನ ಗುಡಿಯ ಹತ್ತಿರ ಶಹಾಪೂರ ಅಂತಾ ತಿಳಿಸಿದ್ದು ಸದರಿಯವನಿಗೆ ನೀನು ಮಟಕಾ ನಂಬರ ಬರೆದು ಯಾರಿಗೆ ಕೋಡುತ್ತಿ ಅಂತಾ ವಿಚಾರಿಸಲಾಗಿ ಆತನು ಪರಷುರಾಮ ಮೋ.ನಂ: 9591318595 ಈತನಿಗೆ ನೀಡುತ್ತೇನೆ ಅಂತಾ ತಿಳಿಸಿದನು. ನಂತರ ಆತನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ 1) 1730-00 ರೂ. ನಗದು ಹಣ 2) ಒಂದು ಮಟಕಾ ನಂಬರ ಬರೆದ ಚೀಟಿ ಅ.ಕಿ.00=00 ಮತ್ತು 3) ಒಂದು ಬಾಲ್ ಪೆನ್ ಅ.ಕಿ. 00=00 ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ನಾನು ಜಪ್ತಿ ಪಂಚನಾಮೆಯನ್ನು 4.30 ಪಿ.ಎಮ್.ದಿಂದ 5.30 ಪಿ.ಎಮ್.ನ ವರೆಗೆ ಸ್ಥಳದಲ್ಲೆ ಕುಳಿತು ಪಂಚನಾಮೆಯನ್ನು ಬರೆದು ಮುಗಿಸಿ ಒಬ್ಬ ಆರೋಪಿ ಮತ್ತು ಮುದ್ದೇಮಾಲನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಮರಳಿ ಠಾಣೆಗೆ 5.45 ಪಿ.ಎಮ್.ಕ್ಕೆ ಬಂದು ವರದಿ ತಯಾರಿಸಿ 6.30 ಪಿ.ಎಮ್ ಕ್ಕೆ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿತ್ತುದ್ದು ಇರುತ್ತದೆ ಮೂಲ ಜಪ್ತಿ ಪಂಚನಾಮೆ ಈ ಕೂಡಾ ಲಗತ್ತಿಡಲಾಗಿದೆ. ಅಂತಾ ವರದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 44/2022 ಕಲಂ 78(111) ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

ಇತ್ತೀಚಿನ ನವೀಕರಣ​ : 27-03-2022 05:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080