ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 26-04-2022


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 52/2022 ಕಲಂ 287, 304(ಎ) ಐಪಿಸಿ : ದೂರಿನ ಸಾರಾಂಶವೇನೆಂದರೆ, ಇಂದು ದಿನಾಂಕ 25.04.2022 ರಂದು ರಾತ್ರಿ 9 ಗಂಟೆಗೆ ಮಲ್ಲಪ್ಪ ತಂದೆ ಸಾಬಣ್ಣ ಔರದಿ, ವ|| 50 ವರ್ಷ, ಜಾ|| ತಳವಾರ, ಉ|| ಕೂಲಿಕೆಲಸ, ಸಾ|| ಗೂಡೂರು (ಎಸ್.ಎ) ಗ್ರಾಮ, ತಾ|| ಜೇವಗರ್ಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿದರು. ದೂರಿನ ಸಾರಾಂಶವೇನೆಂದರೆ, ಕಳೆದ 2 ವರ್ಷಗಳಿಂದ ನನ್ನತಮ್ಮನ ಮಗನಾದ ಮೌನೇಶ ತಂದೆ ಬಸವರಾಜ ಔರದಿ, ವ|| 22 ವರ್ಷ ಈತನು ಸಿ.ಎಸ್ ಪಾಟೀಲ್ ಸಿರವಾಳ ಇವರ ಹತ್ತಿರ ಕೂಲಿಕೆಲಸ ಮಾಡುತ್ತಿದ್ದ. ಹೀಗಿದ್ದು ಇಂದು ದಿನಾಂಕ 25.05.2022 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ರಾಯಣ್ಣ ತಂದೆ ಮೈಲಾರಿ ಈತನು ನಮ್ಮ ಮನೆಗೆ ಬಂದು ನನಗೆ ಮತ್ತು ನನ್ನ ತಮ್ಮನ ಹೆಂಡತಿಯಾದ ಶ್ರೀದೇವಿಗೆ ತಿಳಿಸಿದ್ದೇನೆಂದರೆ, ಮೌನೇಶ ಯಾದಗಿರಿ ತಾಲ್ಲೂಕಿನ ಕಣೇಕಲ್ ಸೀಮೆಯಲ್ಲಿ ಟ್ರ್ಯಾಕ್ಟರ್ ಎಕ್ಸಿಡೆಂಟಾಗಿ ಸೈದಾಪೂರ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಅವನ ಸಂಗಡ ಕೆಲಸ ಮಾಡುವ ಹುಡುಗನೊಬ್ಬವ ಫೋನ್ ಮಾಡಿದ್ದಾನೆಂದು ತಿಳಿಸಿದರು. ಕೂಡಲೇ ನಾನು ಮತ್ತು ನನ್ನತಮ್ಮನ ಹೆಂಡತಿ ಹಾಗೂ ನೆಂಟರಿಷ್ಟರು ಕೂಡಿ ಸೈದಾಪೂರ ಸರಕಾರಿ ಆಸ್ಪತ್ರೆಗೆ ಬಂದು ಮೌನೇಶನ ಮೃತದೇಹ ನೋಡಿದೆವು. ಮೌನೇಶನ ಮುಖಕ್ಕೆ, ತೆಲೆಗೆ ಭಾರಿ ಪೆಟ್ಟುಗಳಾಗಿ ಹೆಣವಾಗಿದ್ದ. ಘಟನೆಯ ಬಗ್ಗೆ ಮೌನೇಶನಿಗೆ ಆಸ್ಪತ್ರೆಗೆ ಕರೆತಂದ ಮಲ್ಲಣ್ಣಗೌಡ ತಂದೆ ಸಿದ್ದಣ್ಣಗೌಡ ಬಿರದಾರ, ನಾಗಣ್ಣಗೌಡ ತಂದೆ ಬಸಣ್ಣಗೌಡ ಬಿರದಾರ ಸಿರವಾಳ ಗ್ರಾಮ ಇವರಿಗೆ ವಿಚಾರಿಸಿದೆವು. ಅವರಿಂದ ಗೊತ್ತಾಗಿದ್ದೇನೆಂದರೆ, ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಣೇಕಲ್ ಗ್ರಾಮ ಸೀಮಾಂತರದ ಲಕ್ಷ್ಮಾರೆಡ್ಡಿ ಗುತ್ತೇದಾರ ಎಂಬುವವರ ಜಮೀನುನಲ್ಲಿ ಟ್ರ್ಯಾಕ್ಟರ್ ಇಂಜನ್ ವಾಹನ ಸಂಖ್ಯೆ ಕೆಎ-33-ಟಿ-3970 ನೇದ್ದಕ್ಕೆ ಜೋಡಿಸಿದ ಟ್ರೈಲರ್ ವಾಹನ ಸಂಖ್ಯೆ ಕೆಎ-33-ಟಿ-3971 ನೇದ್ದರಲ್ಲಿ ಮೊರಂ ತುಂಬಿದ ಟ್ರ್ಯಾಕ್ಟರನ್ನು ದಿಬ್ಬಿಗೆ ಏರಿಸುವ ಕಾಲಕ್ಕೆ ಟ್ರ್ಯಾಕ್ಟರ್ ಇಂಜನ್ ಮೇಲಕ್ಕೆ ಎದ್ದು ಮೌನೇಶನ ಮೇಲೆ ಬಿದ್ದಿದ್ದರಿಂದ ಮೌನೇಶನಿಗೆ ಪೆಟ್ಟುಗಳಾಗಿದ್ದವು. ನಾವು ಅಲ್ಲೇ ಇದ್ದ ಟಿಪ್ಪರ ವಾಹನದಲ್ಲಿ ಮೌನೇಶನಿಗೆ ಹಾಕಿಕೊಂಡು ಸೈದಾಪೂರ ಸರಕಾರಿ ಆಸ್ಪತ್ರೆಗೆ ಉಪಚಾರಕ್ಕೆ ಅಂತಾ ಕರೆತಂದಿದ್ದೆವು. ಮೌನೇಶನಿಗೆ ವೈದ್ಯಾಧಿಕಾರಿಗಳು ಪರೀಕ್ಷೆ ಮಾಡಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು ಎಂದು ಗೊತ್ತಾಯಿತು. ಕಣೇಕಲ್ ಗ್ರಾಮ ಸೀಮಾಂತರದ ಲಕ್ಷ್ಮಾರೆಡ್ಡಿ ಗುತ್ತೇದಾರ ಇವರ ಜಮೀನುನಲ್ಲಿನ ಮೊರಂ ಟ್ರ್ಯಾಕ್ಟರ್ ವಾಹನದಲ್ಲಿ ಸಾಗಿಸುವ ಕಾಲಕ್ಕೆ ನನ್ನತಮ್ಮನ ಮಗ ಮೌನೇಶ ವಾಹನ ನಿರ್ಲಕ್ಷ್ಯ ಮತ್ತು ದುಡುಕಿನಿಂದ ಚಲಾಯಿಸಿದ್ದರಿಂದ ಟ್ರ್ಯಾಕ್ಟರ್ ಇಂಜನ್ ಮೇಲಕ್ಕೆ ಎದ್ದು ನನ್ನತಮ್ಮನ ಮಗನಿಗೆ ಬಡೆದು ಗಾಯಗೊಂಡಿರುತ್ತಾನೆ. ಸದರಿ ಗಾಯಗಳ ನೋವನುಭವಿಸಿ ನನ್ನತಮ್ಮನ ಮಗ ಮೌನೇಶ ತಂದೆ ಬಸವರಾಜ ಈತನು ಇಂದು ದಿನಾಂಕ 25.04.2022 ರಂದು ಮಧ್ಯಾಹ್ನ 1.50 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ಕಾರಣ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಕೋರಿದೆ.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 23/2022 ಕಲಂ 279, 338, 304(ಎ) ಐಪಿಸಿ : ದಿನಾಂಕ 25/04/2022 ರಂದು ಬೆಳಿಗ್ಗೆ ಸಮಯ 6-15 ಎ.ಎಂ.ಕ್ಕೆ ಯಾದಗಿರಿ ಜಿಜಿಎಚ್ ಆಸ್ಪತ್ರೆಯಿಂದ ರಸ್ತೆ ಅಪಘಾತದ ಬಗ್ಗೆ ಎಮ್.ಎಲ್.ಸಿ ಇರುತ್ತದೆ ಅಂತಾ ಪೋನ್ ಮೂಲಕ ತಿಳಿಸಿದ್ದು, ವಿಚಾರಣೆಗೆ ಯಾದಗಿರಿ ಜಿಜಿಎಚ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ರಾಮು ಈತನಿಗೆ ವಿಚಾರಿಸಲಾಗಿ ಗಾಯಾಳು ಪ್ರಜ್ಞಾವಸ್ಥೆಯಲ್ಲಿ ಇರದ ಕಾರಣ, ಆಸ್ಪತ್ರೆಯಲ್ಲಿದ್ದ ಈ ಕೇಸಿನಲ್ಲಿ ಮೃತನ ಪತ್ನಿಯಾದ ಪಿಯರ್ಾದಿ ಶ್ರೀಮತಿ ಮಾರೆಮ್ಮ ಗಂಡ ದುರ್ಗಪ್ಪ ಸಿಂದೋಳಿ ವಯ;35 ವರ್ಷ, ಜಾ;ಪ.ಜಾತಿ (ಪೋತರಾಜ), ಉ;ಕೂಲಿ, ಸಾ;ಶಶಿಧರ ಕಾಲನಿ, ಯಾದಗಿರಿ ರವರು ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನನ್ನ ಗಂಡನಾದ ದುರ್ಗಪ್ಪ ಈತನು ಕೂಲಿ ಕೆಲಸ ಮಾಡಿಕೊಂಡು ಅದರೊಂದಿಗೆ ನಮ್ಮ ಹಂದಿಗಳನ್ನು ಕಾಯುತ್ತಾ ಬಂದಿರುತ್ತಾನೆ, ನಮ್ಮ ಸಂಬಂಧಿಕರಾದ ಮಂಜ ಕೊರವರ ಸಾ;ಸುರಪುರ ಇವರ ಮಗನಾದ ರಾಮು ಈತನನ್ನು ನಮ್ಮಲ್ಲಿಯೇ ಇರಲು ಬಿಟ್ಟಿರುತ್ತಾರೆ, ರಾಮು ಈತನು ನನ್ನ ಗಂಡನೊಂದಿಗೆ ಆಗಾಗ ರಾತ್ರಿ ಹೊತ್ತು ಹಂದಿಗಳನ್ನು ನೋಡಿಕೊಂಡು ಬರಲು ಸಂಗಡ ಹೋಗಿ ಬರುವುದು ಮಾಡುತ್ತಾನೆ. ನಿನ್ನೆ ದಿನಾಂಕ 24/04/2022 ರಂದು ರಾತ್ರಿ 10 ಗಂಟೆ ಸುಮಾರಿಗೆ ಊಟವಾದ ಬಳಿಕ ನನ್ನ ಗಂಡ ದುರ್ಗಪ್ಪ ಈತನು ತಮ್ಮ ಸಂಗಡ ರಾಮು ಈತನಿಗೆ ಕರೆದುಕೊಂಡು ಹಂದಿಗಳನ್ನು ನೋಡಿಕೊಂಡು ಬರುತ್ತೇನೆಂದು ನನಗೆ ಹೇಳಿ ನಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಇಬಿ-5472 ನೇದ್ದರ ಮೇಲೆ ಇಬ್ಬರು ಹೋಗಿದ್ದು ಇರುತ್ತದೆ. ಇಂದು ದಿನಾಂಕ 25/04/2022 ರಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ರಾಮು ತಂದೆ ಮಂಜ ಕೊರವರ ಈತನು ಪೋನ್ ಮಾಡಿ ನನಗೆ ತಿಳಿಸಿದ್ದೆನೆಂದರೆ ನಾನು ಮತ್ತು ನಿನ್ನ ಗಂಡ ದುರ್ಗಪ್ಪ ಇಬ್ಬರು ಸೇರಿಕೊಂಡು ಹಂದಿಗಳನ್ನು ನೋಡಿಕೊಂಡು ಮರಳಿ ಮನೆಗೆ ಬರುತ್ತಿದ್ದಾಗ ಮೋಟಾರು ಸೈಕಲನ್ನು ನಿನ್ನ ಗಂಡನು ಹೊಸ ಬಸ್ ನಿಲ್ದಾಣದ ಕಡೆಯಿಂದ ಹೊಸಳ್ಳಿ ಕ್ರಾಸ್ ಕಡೆಗೆ ನಡೆಸಿಕೊಂಡು ಬರುತ್ತಿದ್ದಾಗ ಮಾರ್ಗ ಮದ್ಯೆ ಯಾದಗಿರಿ ನಗರದ ಹೋಲಸ್ಟನ್ ಆಸ್ಪತ್ರೆ ಹತ್ತಿರ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುವಾಗ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಮುಖ್ಯ ರಸ್ತೆಯ ಡಿವೇಡರ್ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ, ಈ ಅಪಘಾತದಲ್ಲಿ ನಾವಿಬ್ಬರು ಮೋಟಾರು ಸೈಕಲ್ ಮೇಲಿಂದ ಪುಟಿದು ರಸ್ತೆಗೆ ಬಿದ್ದಾಗ ಸದರಿ ಅಪಘಾತದಲ್ಲಿ ನನಗೆ ತಲೆಗೆ ಭಾರೀ ಗುಪ್ತಗಾಯವಾಗಿ ಮುಖಕ್ಕೆ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯ ಆಗಿರುತ್ತವೆ, ನಾನು ಎದ್ದು ಸುಧಾರಿಸಿಕೊಂಡು ನಿನ್ನ ಗಂಡನಿಗೆ ನೋಡಲು ಆತನಿಗೆ ತಲೆಗೆ, ಹಣೆಗೆ ಭಾರೀ ಗುಪ್ತಗಾಯವಾಗಿ, ಹಣೆಗೆ ತರಚಿದ ಗಾಯ, ಬಲಗಾಲಿನ ಬೆರಳುಗಳಿಗೆ ಭಾರೀ ರಕ್ತಗಾವಾಗಿರುತ್ತವೆ, ಮೂಗಿನ ಹತ್ತಿರ ಕೈಹಿಡಿದು ನೋಡಲಾಗಿ ಉಸಿರಾಟ ನಿಂತಿದ್ದು, ರಸ್ತೆ ಅಪಘಾತದಲ್ಲಾದ ಗಾಯಗಳ ಪೆಟ್ಟಿನಿಂದ ಇಲ್ಲಿಯೇ ಮೃತಪಟ್ಟಿರುತ್ತಾನೆ, ಈ ಘಟನೆಯು ಇಂದು ದಿನಾಂಕ 25/04/2022 ರಂದು ಬೆಳಿಗ್ಗೆ ಅಂದಾಜು ಸಮಯ 4-30 ಎ.ಎಂ.ಕ್ಕೆ ಜರುಗಿರುತ್ತದೆ. ನೀವುಗಳು ಕೂಡಲೇ ಘಟನಾ ಸ್ಥಳಕ್ಕೆ ಬರ್ರೀ ಅಂತಾ ತಿಳಿಸಿದಾಗ ನನಗೆ ಗಾಬರಿಯಾಗಿ ನನ್ನ ಗಂಡನ ತಮ್ಮ ಮೈದುನನಾದ ಬಾಲಪ್ಪ ಮತ್ತು ನಮ್ಮ ಸಂಬಂದಿಕರಾದ ಲಾರೆನ್ಸ್ ತಂದೆ ಶೋಕಮುಂಗಲೋರ ಹಾಗೂ ದುರ್ಗಪ್ಪ ತಂದೆ ಯಲ್ಲಪ್ಪ ಸಿಂದೋಳಿ ಇವರಿಗೆ ಘಟನೆಯ ಬಗ್ಗೆ ವಿವರವಾಗಿ ತಿಳಿಸಿ ನಡೀರಿ ಹೋಗೋಣ ಅಂದಾಗ ಎಲ್ಲರೂ ಸೇರಿಕೊಂಡು ಒಂದು ಖಾಸಗಿ ಆಟೋದಲ್ಲಿ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನನಗೆ ಈ ಮೇಲೆ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ, ಘಟನಾ ಸ್ಥಳಕ್ಕೆ ಅಂಬುಲೆನ್ಸ್ ಬಂದಿದ್ದು ಆಗ ಗಾಯಾಳು ರಾಮು ಈತನಿಗೆ ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕಳಿಸಿ, ನಾವುಗಳು ಆಟೋದಲ್ಲಿ ನನ್ನ ಗಂಡನ ಮೃತದೇಹವನ್ನು ಯಾದಗಿರಿ ಸಕರ್ಾರಿ ಆಸ್ಪತ್ರೆಯ ಶವಗಾರ ಕೋಣೆಗೆ ತಂದು ಹಾಕಿರುತ್ತೇವೆ. ಈ ಘಟನೆ ಬಗ್ಗೆ ರಾಮು ಇವರ ಮನೆಗೆ ಪೋನ್ ಮಾಡಿ ವಿಷಯ ತಿಳಿಸಿ ಯಾದಗಿರಿಗೆ ಬರಲು ಹೇಳಿರುತ್ತೇವೆ, ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ನಾನು ಮತ್ತು ನನ್ನ ಗಂಡನ ತಮ್ಮನಾದ ಬಾಲಪ್ಪ ಇಬ್ಬರು ನನ್ನ ಗಂಡ ದುರ್ಗಪ್ಪ ಈತನ ಮೃತದೇಹವನ್ನು ಗುತರ್ಿಸಿರುತ್ತೇವೆ. ಹೀಗಿದ್ದು ಇಂದು ದಿನಾಂಕ 25/04/2022 ರಂದು ಬೆಳಿಗ್ಗೆ ಸಮಯ 4-30 ಎ.ಎಂ.ದ ಸುಮಾರಿಗೆ ಯಾದಗಿರಿ ನಗರದ ಮುಖ್ಯ ರಸ್ತೆಯ ಹೋಲಸ್ಟನ್ ಆಸ್ಪತ್ರೆಯ ಹತ್ತಿರ ನನ್ನ ಗಂಡ ದುರ್ಗಪ್ಪ ಹಾಗು ರಾಮು ಇವರು ನಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಇಬಿ-5472 ನೇದ್ದರ ಮೇಲೆ ಮನೆಗೆ ಬರುವಾಗ ನನ್ನ ಗಂಡ ದುರ್ಗಪ್ಪನು ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಡಿವೇಡರಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಈ ಅಪಘಾತದಲ್ಲಿ ಮೋಟಾರು ಸೈಕಲ್ ನಡೆಸುತ್ತಿದ್ದ ನನ್ನ ಗಂಡನಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೋಟಾರು ಸೈಕಲ್ ಹಿಂಬದಿ ಕುಳಿತಿದ್ದ ರಾಮು ಈತನಿಗೆ ತಲೆಗೆ ಭಾರೀ ಗುಪ್ತಗಾಯ ಹಾಗು ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು, ಅಪಘಾತಪಡಿಸಿದ ನನ್ನ ಗಂಡ ಮೃತನಾದ ದುರ್ಗಪ್ಪನ ಮೇಲೆ ಮುಂದಿನ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಪಿಯರ್ಾದಿ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 7-45 ಎ.ಎಂ.ಕ್ಕೆ ಬಂದು ಪಿಯರ್ಾದಿಯ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 23/2022 ಕಲಂ 279, 338, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 59/2022 ಕಲಂ 143,147,148, 323, 324, 504, 506 ಸಂ 149 ಐ.ಪಿ.ಸಿ : ದಿನಾಂಕ:24.04.2022 ರಂದು ರಾತ್ರಿ 8.30 ಗಂಟೆಯ ಪಿರ್ಯಾಧಿ ಮತ್ತು ಪಿರ್ಯಾಧಿಯ ಗಂಡ ಮತ್ತು ಪಿರ್ಯಾಧಿ ಮಗ ಗೋಪಾಲಪೂರ ಗ್ರಾಮದ ಮಾರೆಮ್ಮ ದೇವಸ್ಥಾನದ ಮುಂದೆ ಕುಳಿತ್ತಿದ್ದಾಗ ಆರೋಪಿತರು ಗುಂಪುಕಟ್ಟಿಕೊಂಡು ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈ ಮತ್ತು ಬಡಿಗೆಗಳಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾಧಿ ವಗೈರೆ ಸಾರಾಂಶ ಇರುತ್ತದೆ.


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 60/2022 ಕಲಂ: 341, 323, 324 504, 506 ಸಂಗಡ 34 ಐಪಿಸಿ. : ನಿನ್ನೆ ದಿನಾಂಕ 24.04.2022 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ಫಿರ್ಯಾದಿಯು ತಿಪ್ಪಣ್ಣ ಈತನ ಹೊಟೇಲ್ನಲ್ಲಿ ಕುಂತಿದ್ದಾಗ ಆರೋಪಿ ಮಹಾದೇವಪ್ಪ ಈತನು ಫಿರ್ಯಾದಿಯಲ್ಲಿಗೆ ಹೋಗಿ ಆತನೊಂದಿಗೆ ಹೊಲದ ವಿಚಾರವಾಗಿ ಜಗಳ ತೆಗಿದಿದ್ದು ಆಗ ಫಿರ್ಯಾದಿಯು ಬೆಳಿಗ್ಗೆ ಮಾತನಾಡೋಣ ಇವಾಗ ಮನೆಗೆ ಹೋಗು ಅಂತಾ ಹೇಳಿ ತನ್ನ ಮನೆಗೆ ಹೋಗುತ್ತಿದ್ದಾಗ ಆರೋಪಿತನು ಫಿರ್ಯಾದಿಗೆ ತಡೆದು ನಿಲ್ಲಿಸಿ ಕೈಯಿಂದ ಹೊಡೆ-ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದು ಆಗ ಉಳಿದ ಗಾಯಾಳುದಾರರಾದ ಮಾಣೀಕೆಮ್ಮ ಮತ್ತು ಸುನಿತಾ ಇವರು ಬಿಡಿಸಲು ನಡುವೆ ಬಂದಾಗ ಉಳಿದ ಆರೋಪಿತರಾದ ಸಾಬರಡ್ಡಿ ಮತ್ತು ಸಾಬವ್ವ ಇವರು ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿ ಸಾಧಾ ಸ್ವರೂಪದ ರಕ್ತಗಾಯಗೊಳಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ತನ್ನ ಮನೆಯಲ್ಲಿ ವಿಚಾರ ಮಾಡಿದ ನಂತರ ತಡವಾಗಿ ಇಂದು ಚಿಕಿತ್ಸೆ ಕುರಿತು ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಆ ಬಗ್ಗೆ ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂ: 60/2022 ಕಲಂ: 341, 323, 324 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 62/2022 ಕಲಂ: 323, 354, 504, 506 ಸಂ. 34 ಐಪಿಸಿ : ಇಂದು ದಿನಾಂಕಃ 25/04/2022 ರಂದು 01:00 ಪಿ.ಎಂ ಕ್ಕೆ ಪಿಯರ್ಾದಿದಾರರಾದ ಶ್ರೀಮತಿ ಸಾವಿತ್ರಿ ಗಂಡ ಭೀಮಣ್ಣ ಜಂತಲೇಯರ ವ|| 24 ವರ್ಷ ಜಾ|| ಬೇಡರು ಉ|| ಹೊಲಮನೆ ಗೆಲಸ ಸಾ|| ದೇವರಗೋನಾಲ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ ಸಾರಂಶವೆನೆಂದರೆ, ನನಗೆ ಒಬ್ಬ ಗಂಡು ಮಗನಾದ ಅಮೋಘವರ್ಷ ವ|| 06 ವರ್ಷ, ಒಬ್ಬಳು ಹೆಣ್ಣುಮಗಳಾದ ಸಂಜನಾ ವ|| 04 ವರ್ಷ ಹಿಗೆ ಇಬ್ಬರು ಮಕ್ಕಳಿರುತ್ತಾರೆ. 2021 ನೇ ಸಾಲಿನಲ್ಲಿ ನಾನು, ನನ್ನ ಗಂಡ ಭೀಮಣ್ಣ ಆತನ ಮನೆಯವರ ಮೇಲೆ ವರದಕ್ಷಣೆ ಕಿರುಕುಳ ಕೇಸ್ ಮಾಡಿಸಿದ್ದು ಇರುತ್ತದೆ. ಮುಂದೆ ನನ್ನ ಗಂಡ ಮತ್ತು ಆತನ ಮನೆಯವರು ನಿನಗೆ ಸರಿಯಾರಿ ನೊಡಿಕೊಳ್ಳುತ್ತೇವೆ ಈ ಕೇಸ್ ರಾಜಿಯಾಗು ಅಂತಾ ಕೇಳಿಕೊಂಡಿದ್ದರಿಂದ ನಾನು ದಿನಾಂಕ:21/04/2022 ರಂದು ನಾನು ಮಾಡಿಸಿದ ವರದಕ್ಷಣೆ ಕಿರುಕುಳ ಕೇಸ್ನ್ನು ರಾಜಿ ಮಾಡಿಕೊಂಡ ನಂತರ ಆ ದಿನ ದೇವರಗೋನಾಲ ಗ್ರಾಮದ ನನ್ನ ತಂದೆ-ತಾಯಿ ಮನಗೆ ಹೊಗಿದ್ದು ಮರುದಿನ ದಿನಾಂಕ:23/04/2022 ರಂದು ನನ್ನ ಗಂಡನು ನನಗೆ ಕರೆಯಲಿಕೆ ಬಂದಿದ್ದು, ನಾನು ಮತ್ತು ನನ್ನ ಮಕ್ಕಳು ಮತ್ತು ಗಂಡ ಎಲ್ಲರು ಅದೇ ಊರಾದ ನನ್ನ ಗಂಡನ ಮನೆಗೆ ಅಂದಾಜು ಮದ್ಯಾಹ್ನ 12:00 ಗಂಟೆಗೆ ಹೊದೆವು. ಮನೆಯಲ್ಲಿ ಮಾವನಾದ ಸಿದ್ದಪ್ಪ ತಂದೆ ಹಣಮಂತ್ರಾಯ, ಅತ್ತೆಯಾದ ಸಿದ್ದಮ್ಮ ಗಂಡ ಸಿದ್ದಪ್ಪ ಇಬ್ಬರು ಮನೆಯಲ್ಲಿದ್ದರು. ನಾನು ನಮ್ಮ ಅತ್ತೆಗೆ ನನಗೆ ಒಂದು ರೂಮ್ ಬಿಟ್ಟುಕೊಡರಿ ನಾನು ಮತ್ತು ನನ್ನ ಗಂಡ ಇಬ್ಬರು ಆ ರೂಮ್ಲ್ಲಿ ವಾಸಮಾಡುತ್ತೇವೆ ಅಂತಾ ಅಂದಿದಕ್ಕೆ ನನ್ನ ಅತ್ತೆ ಮಾವ ಇಬ್ಬರು ನಾವು ಎಲ್ಲರು ಕೂಡಿ ಇರುತ್ತೆವೆ ನೀನು ನಮ್ಮ ಜೊತೆಯಲ್ಲಿಯೇ ಇರಬೇಕು ಇಲ್ಲಂದರ ನಿನ್ನ ಜೀವ ಸಹಿತ ಬಿಡುವುದಿಲ್ಲ ಹೊಡೆದು ಹಾಕುತ್ತೆವೆ ಸೂಳೆ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ಯಾಕೆ ಈ ರೀತಿ ಬೈಯುತ್ತಿರಿ ಅಂತಾ ಅಂದಿದಕ್ಕೆ ನನ್ನ ಗಂಡ ಅವರಿ ಬೈಯಲಿಕೆ ಅಧಿಕಾರ ಇದೆ ನೀನು ಏನು ಕೇಳುತಿ ಸೂಳೆ ಅಂತಾ ಅಂದು ನನ್ನ ಕೈ ತಿರುವಿ ಕೂದಲು ಹಿಡಿದು ಕೈಯಿಂದ ಬೆನ್ನಿಗೆ ಹೊಟ್ಟೆಗೆ ಎದೆಗೆ ಹೊಡೆದು ಅವಮಾನ ಮಾಡುತ್ತಿದ್ದಾಗ ಬಾಯಿ ಮಾತಿನ ಜಗಳ ಕೇಳಿ ಬಂದ ನನ್ನ ತಂದೆ ರಂಗಪ್ಪ, ತಾಯಿ ಸಿದ್ದಮ್ಮ ಇಬ್ಬರು ಕೂಡಿ ಬಂದು ಜಗಳವನ್ನು ನೋಡಿ ಬಿಡಿಸಿಕೊಂಡರು. ನನಗೆ ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ನಾನು ಆಸ್ಪತ್ರೆಗೆ ತೊರಿಸಿಕೊಂಡಿರುವುದಿಲ್ಲ. ನಂತರ ನಾನು ನನ್ನ ತಂದೆ-ತಾಯಿಯೊಂದಿಗೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೆನೆ. ಕಾರಣ ನನಗೆ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು, ಕೂದಲು ಹಿಡಿದು ಎಳೆದಾಡಿ ಅವಮಾನ ಮಾಡಿದ ಮೇಲೆ ಹೇಳಿದ 03 ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ನೀಡಿದ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 62/2022 ಕಲಂ: 323, 354, 504, 506 ಸಂ. 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 54/2022 ಕಲಂ: 143, 147, 504, 341, 323, 506 ಸಂ 149 ಐಪಿಸಿ : ದಿನಾಂಕ:25/04/2022 ರಂದು 8-15 ಪಿಎಮ್ ಕ್ಕೆ ಶ್ರೀಮತಿ ಮಲ್ಲಮ್ಮ ಗಂಡ ಬೂದೆಪ್ಪ ಅಗಸಿಮುಂದಲೋರ, ವ:38, ಜಾ:ಕುರುಬರ, ಉ:ಕೂಲಿ ಸಾ:ಕದರಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ನನ್ನ ಗಂಡ ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನ್ನ ಗಂಡ ಬೂದೆಪ್ಪ ಈತನ ಹೆಸರಿನಲ್ಲಿ ರೋಟ್ನಡಗಿ ಸೀಮಾಂತರದಲ್ಲಿ ಸವರ್ೆ ನಂ. 152/1 ರಲ್ಲಿ 3 ಎಕರೆ 21 ಗುಂಟೆ ಜಮೀನು ಇರುತ್ತದೆ. ಸದರಿ ಜಮೀನು ನಾವು ಉಪಭೋಗಿಸುತ್ತಾ ಬರುತ್ತಿದ್ದೇವೆ. ಆದರೆ ನಮ್ಮ ಅಣ್ಣ ತಮ್ಮಕೀಯವರಾದ ಸಂಗಪ್ಪ ತಂದೆ ಮಲ್ಲಪ್ಪ ಮತ್ತು ಸಂಗಡಿಗರಿಗೆ ಸವರ್ೆ ನಂ. 152/2 ರಲ್ಲಿ ಅವರ ಭಾಗಕ್ಕೆ ಜಮೀನು ಬಂದಿರುತ್ತದೆ. ಆದರೆ ಅವರು ನಮಗೆ ಸವರ್ೆ ನಂ. 152/1 ರ ಹಿಸ್ಸಾ ಬೇಕು ನೀವು ನಮ್ಮ 152/2 ರ ಜಮೀನು ಹಿಸ್ಸಾಕ್ಕೆ ಹೋಗಬೇಕು ಎಂದು ಸುಮಾರು ದಿವಸಗಳಿಂದ ತಕರಾರು ಮಾಡುತ್ತಾ ಬಂದಿರುತ್ತಾರೆ. ಹೀಗಿದ್ದು ಮೊನ್ನೆ ದಿನಾಂಕ:25/04/2022 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡ ಬೂದೆಪ್ಪ ಇಬ್ಬರೂ ಊರಲ್ಲಿ ನಮ್ಮ ಹೊಲಕ್ಕೆ ಗಳೆ ಹೊಡೆಯುವವರಿಗೆ ಹೇಳಿ ಮರಳಿ ಮನೆಗೆ ಬರುತ್ತಿದ್ದಾಗ ನಮ್ಮೂರ ಹಣಮಪ್ಪನ ದೇವಸ್ಥಾನದ ಹತ್ತಿರ 1) ಸಂಗಪ್ಪ ತಂದೆ ಮಲ್ಲಪ್ಪ ಅಗಸಿಮುಂದಲೋರ, 2) ನಾಗಮ್ಮ ಗಂಡ ಬೀರಪ್ಪ ಯಲ್ಹೇರಿ, 3) ಲಕ್ಷ್ಮೀ ಗಂಡ ಚಂದ್ರಾಮ ಯಲ್ಹೇರಿ, 4) ಮಲಗೊಂಡಪ್ಪ ತಂದೆ ಶಿವರಾಯಪ್ಪ ಯಲ್ಹೇರಿ, 5) ಮಲ್ಲಪ್ಪ ತಂದೆ ಮಲಗೊಂಡಪ್ಪ ಯಲ್ಹೇರಿ, 6) ಸಣ್ಣ ಮಾರ್ತಂಡಪ್ಪ ತಂದೆ ಬನ್ನಪ್ಪ ಯಲ್ಹೇರಿ, 7) ಅನ್ನಮ್ಮ ಗಂಡ ಸಂಗಪ್ಪ ಅಗಸಿಮುಂದಲೋರ, 8) ಭಾಗ್ಯಮ್ಮ ತಂದೆ ಭೀಮಪ್ಪ ಯಲ್ಹೇರಿ, 9) ಭೀಮಪ್ಪ ತಂದೆ ಹೊನ್ನಪ್ಪ ಮದರಕಲ್ ಎಲ್ಲರೂ ಸಾ:ಕದರಾಪೂರ ಇವರೆಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಬಂದವರೆ ನನಗೆ ಮತ್ತು ನನ್ನ ಗಂಡನಿಗೆ ತಡೆದು ನಿಲ್ಲಿಸಿದವರೆ ಲೇ ಭೊಸುಡಿ ಮಕ್ಕಳೆ ನೀವು ನಮ್ಮ ಹಿಸ್ಸಾದ ಹೊಲ ನಮಗೆ ಬಿಡ್ರಿ ಅಂದ್ರೆ ಬಿಡುತ್ತಿಲ್ಲ ಮಕ್ಕಳೆ ನಿಮ್ಮ ಸೊಕ್ಕು ಜಾಸ್ತಿಯಾಗಿದೆ ಇವತ್ತು ನಿಮಗೆ ಒಂದು ಗತಿ ಕಾಣಿಸುತ್ತೇವೆ ಎಂದು ಜಗಳ ತೆಗೆದವರೆ ನನಗೆ ಅನ್ನಮ್ಮ, ಭಾಗ್ಯಮ್ಮ ಇಬ್ಬರೂ ಹಿಡಿದುಕೊಂಡಾಗ ನಾಗಮ್ಮ ಮತ್ತು ಲಕ್ಷ್ಮೀ ಇಬ್ಬರೂ ಬಂದು ಕೈ ಮುಷ್ಟಿ ಮಾಡಿ, ಎದೆ, ಬೆನ್ನಿಗೆ, ಮುಖಕ್ಕೆ ಹೊಡೆದು ಒಳಪೆಟ್ಟು ಮಾಡಿದರು. ನನ್ನ ಗಂಡನಿಗೆ ಭೀಮಪ್ಪ ಮತ್ತು ಸಣ್ಣ ಸೇರಿ ಬಂದು ಕೈ ಮುಷ್ಠಿ ಮಾಡಿ ಎದೆ, ಬೆನ್ನಿಗೆ ಹೊಡೆದು ನೆಲಕ್ಕೆ ಕೆಡವಿ ಕಾಲಿನಿಂದ ಪಕ್ಕೆಗಳಿಗೆ ಒದ್ದಿರುತ್ತಾರೆ. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮೂರ ಭೀಮಪ್ಪ ತಂದೆ ಹಣಮಂತ ಖಂಡಪ್ಪನೋರ ಮತ್ತು ಮರೆಪ್ಪ ತಂದೆ ಹಣಮಂತ ಅಣಗೇರಿ ಇವರು ಬಂದು ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಸೂಳೆ ಮಕ್ಕಳೆ ನಿಮಗೆ ಇನ್ನೊಂದು ಸಲ ಸಿಕ್ಕರೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ನಾವು ಅಲ್ಲಿಂದ ನಮ್ಮ ಹಿರಿಯರಿಗೆ ಹೋಗಿ ವಿಚಾರಿಸಿದಾಗ ಅವರು ಇಬ್ಬರೂ ಅಣ್ಣತಮ್ಮಕೀಯವರಿದ್ದಿರಿ ರಾಜಿ ಸಂಧಾನ ಮಾಡಿಕೊಳ್ಳಿ ಎಂದು ಸಲಹೆ ಕೊಟ್ಟರು. ಆಗ ನಾವು ಅವರಿಗೆ ರಾಜಿ ಸಂಧಾನಕ್ಕೆ ಕರೆದರೆ ಅವರು ಬರಲಿಲ್ಲ. ನಂತರ ನಮ್ಮ ಹಿರಿಯರಿಗೆ ವಿಚಾರಿಸಿದಾಗ ಅವರು ಠಾಣೆಗೆ ಹೋಗಿ ದೂರು ಕೊಡಿ ಎಂದು ಹೇಳಿದ್ದರಿಂದ ಈಗ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಹೊಲದ ಹಿಸ್ಸಾವನ್ನು ಬದಲಾಯಿಸಿಕೊಳ್ಳವುದಕ್ಕೆ ಒಪ್ಪಲಾರದಕ್ಕೆ ನಮಗೆ ತಡೆದು ನಿಲ್ಲಿಸಿ, ಅವಾಚ್ಯ ಬೈದು ಕೈಯಿಂದ ಹೊಡೆಬಡೆ ಮಾಡಿ, ಜೀವ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 54/2022 ಕಲಂ: 143, 147, 504, 341, 323, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 57/2022, ಕಲಂ, 143,147,148,323,324,354, 504.506.ಸಂ.149 ಐ ಪಿ ಸಿ : ದಿನಾಂಕ: 25-04-2022 ರಂದು ಸಾಯಂಕಾಲ 06-30 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ, ಕಾಳಪ್ಪ ತಂದೆ ಸಂಜೀವಪ್ಪ ಈತನು ತೀರಿಕೊಂಡಿದ್ದರಿಂದ ಮಣ್ಣಿಗೆ ಅಂತಾ ದಿನಾಂಕ: 25-04-2022 ರಂದು ಸಾಯಂಕಾಲ 04-50 ಗಂಟೆಗೆ ಬೀಮಣ್ಣ ತಂದೆ ಸಂಜೀವಪ್ಪ ಇವರ ಹೊಲದ ಜಾಲಿ ಗಿಡದ ಕೆಳಗೆ ಕುಳಿತುಕೊಂಡಿರುವಾಗ ಆರೋಪಿತರೆಲ್ಲರು ಸೇರಿಕೊಂಡು ಬಂದು ಲೇ ಸೂಳೆ ಮಕ್ಕಳೆ ನಿಮ್ಮದು ಊರಲ್ಲಿ ಸಿಕ್ಕು ಬಹಳ ಆಗಿದೆ ಎಷ್ಟು ದಿನ ಕೊರ್ಟನಲ್ಲಿ ಕೇಸು ನಡೆಸುತ್ತಿರಿ ಅಂತಾ ಅವಾಚ್ಯವಾಗಿ ಬೈದು ಕಲ್ಲಿನಿಮದ ಮತ್ತು ಕಟ್ಟಿಗೆಯಿಂದ ಹೊಡೆದು ಗುಪ್ತಗಾಯ & ರಕ್ತಗಾಯ ಮಾಡಿದ್ದು ಸೀರೆ ಹಿಡಿದು ಎಳದಾಡಿ ಕೂದಲು ಹಿಡಿದು ಎಳದಾಡಿ ಅವಮಾನ ಮಾಡಿ ಇನ್ನೊಂದು ಸಲ ನಮ್ಮ ಹೊಲದ ತಂಟೆಗಾನಾದರು ಬಂದರೆ ನಿಮಗೆ ಊರಲ್ಲಿ ಜೀವ ಸಹಿತ ಇರಲು ಬಿಡುವದಿಲ್ಲ ಮಕ್ಕಳೆ ಅಂತಾ ಜೀವ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ

ಇತ್ತೀಚಿನ ನವೀಕರಣ​ : 26-04-2022 10:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080