ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 26-05-2022
ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 76/2022, ಕಲಂ: 447, 504, 506 ಸಂ.34 ಐ.ಪಿ.ಸಿ ಮತ್ತು ಖಅ 3(1) ಗಿ,ಘಿ ಚಿಟಿಜ 8(ಛ) ಅಟ್ರಾಸೀಟಿ ಆಕ್ಟ್ -1989 ಅಟ್ರಾಸಿಟಿ ಕಾಯ್ದೆ : ಇಂದು ದಿನಾಂಕ: 25-05-02-2022 ರಂದು ಸಾಯಂಕಾಲ 06:00 ಗಂಟೆಗೆ ಫಿಯರ್ಾದಿದಾರ ಶ್ರಿ ಹಣಮಂತ ತಂದೆ ನಾಗಪ್ಪ ಕೊಂಕಲ್ ವ|| 55 ವರ್ಷ ಜಾ|| ಮಾದಿಗ ಉ|| ಒಕ್ಕಲುತನ ಸಾ|| ಹೊನಗೇರಾ ತಾ|| ಜಿ|| ಯಾದಗಿರಿ ಇವರ ಕನ್ನಡದಲ್ಲಿ ಟೈಪ್ ಮಾಡಿದ ಲಿಖಿತ ದೂರು ತಂದು ಹಾಜರುಪಡೆಸಿದ್ದು ಸದರಿ ಅಜರ್ಿಯ ಸಾರಂಶವೆನಂದರೆ, ನಾನು ಸುಮಾರು ಏಳು, ಎಂಟು ವರ್ಷದಿಂದ ಸವರ್ೇ ನಂ 294 ಹೊಲವನ್ನು ಗಿರಿಜಾ ಪಾಟೀಲ್ ಗೌಡಸಾನಿ ಮತ್ತು ಅವರ ತಾಯಿಗೆ 5,00,000 ರೂಪಾಯಿಗಳನ್ನು ಕೊಟ್ಟು ಲೀಜ್ ಮಾಡುತ್ತಿದ್ದೇನೆ.ಆದರೆ ಸುಮಾರು ಮೂರು ವರ್ಷದಿಂದ ದೇವಮ್ಮ ಗಂಡ ವಿಶ್ವನಾಥರೆಡ್ಡಿ ಲೀಜ್ ಹಣವನ್ನು ನನಗೆ ಕೊಡು ಕೇಲವು ಪುಡಾರಿ ರೌಡಿಗಳ ಜೊತೆ ಕಿರುಕುಳ ಕೊಡುತ್ತಿದ್ದಳು. ಆದ್ದರಿಂದ ದಿನಾಂಕ 24-07-2021 ರಂದು ದೇವಮ್ಮ ಮತ್ತು ಕೇಲವು ಪುಡಿ ರೌಡಿಗಳ ಮೇಲೆ ಹೊಲದ ಮಾಲಿಕಳಾದ ಗಿರಿಜಾ ಪಾಟೀಲ್ ಮತ್ತು ನಾನು ಇದೇ ಕಛೇರಿಯಲ್ಲಿ ದೂರು ಕೊಟ್ಟಿದ್ದೇವು ಅದಕ್ಕಾಗಿ ದಿನಾಂಕ 31-07-2021 ರಂದು 107 ಸಿ.ಆರ್.ಪಿ.ಸಿ ಕೇಸ ದಾಖಲಾಗಿದ್ದು ಅದಾದ ನಂತರ ದಿನಾಂಕ 15-03-2022 ರಂದು ದೇವಮ್ಮ ಸಂಗಡಿಗರಾದ ಟೀನ್ಯಾ ಕೋಳಿ ತಂದೆ ಭೀಮಾಣ್ಣ ಅವನ ಮೊಮ್ಮಗ ಸಾಬರೆಡ್ಡಿ ,ಅಂಜಾ ತಂದೆ ಯಲ್ಲಪ್ಪ ತಾತಳಗೇರಿ ,ನಿಂಗ್ಯಾ ಗುಡಗುಡಿ ಸವರ್ೇ ನಂ 294ಕ್ಕೆ ಬಂದು ನನ್ನ ಮತ್ತು ನನ್ನ ತಮ್ಮನ ಮೇಲೆ ದೌರ್ಜನ್ಯ ಮಾಡಿ ಅವಚ್ಯ ಶಬ್ದಗಳಿಂದ ಬೈದು ಸವರ್ೇ ನಂ 294 ಲೀಜ್ ಮಾಡುವುದು ಬಿಟ್ಟು ಹೋಗು ನಾವು ಮಾಡುತ್ತೇವೆ ಅಂತ ದೌರ್ಜನ್ಯ ಎಸಗಿದ ಕಾರಣ ದಿನಾಂಕ 21-03-2022 ರಂದು ಪುನಾಃ ನಾನು ಮತ್ತು ಹೊಲದ ಮಾಲೀಕರಾದ ಗಿರಿಜಾ ಪಾಟೀಲ್ ಅಜರ್ಿ ಕೊಟ್ಟಾಗ ಈ ಕಚೇರಿಯಿಂದ ಕ್ರಮ ಜರಗಿಸಿದರು ಆದರು ದಿನಾಂಕ 24-05-2022 ರಂದು ದೇವಮ್ಮ ಗಂಡ ವಿಶ್ವನಾಥರೆಡ್ಡಿ, ಟೀನ್ಯಾ @ಹಣಮಂತ ತಂದೆ ಭೀಮಣ್ಣ ಕೋಳಿ, ಮೊಮ್ಮಗ ಸಾಬರೆಡ್ಡಿ , ಅಂಜ್ಯ ಎಮ್ಮೆನೋರ್ ಮತ್ತು ದೇವಮ್ಮ ಬೆಳಗ್ಗೆ ಸುಮಾರು 7:00 ಗಂಟೆಗೆ ಏಕಾಏಕಿ ಸವರ್ೇ ನಂ 294 ಕ್ಕೆ ಬಂದು ಟೀನ್ಯಾ ಅಂಜ ಮತ್ತು ಮೊಮ್ಮಗ ಸಾಬರೆಡ್ಡಿ ನನ್ನನ್ನು ಸುತ್ತುವರೆದು ಹೊಲದಲ್ಲಿ ಟ್ರ್ಯಾಕ್ಟರ ನಿಲ್ಲಿಸಿ (ಸ್ವರಾಜ ಅನ ನಂಬರಡ್) ಮಾದಿಗ ಸೂಳೆ ಮಗನೇ, ಮೂರು ವರ್ಷದಿಂದ ಹೊಲ ಬಿಡು ಅಂದ್ರೆ ಬಿಡ್ರಿಲ್ಲ, ನಿನ್ನನ್ನು ಬಿಡಲ್ಲ ಅಂತ ತಳ್ಳಿ ಸಾಬರೆಡ್ಡಿ ಟ್ರ್ಯಾಕ್ಟರ ಹತ್ತಿ ಕುಳಿತು ನಡೆಸಲು ಶುರು ಮಾಡಿದಾಗ ನಾನು ಅಡ್ಡ ಹೋಗಿ ನಿಂತರೆ ಅಂಜ್ಯ ಎಮ್ಮನೋರ ತಳ್ಳಿ, ದೇವಮ್ಮ ಎದರು ಬಂದು ನಿಂತು ಮಾದಿಗ ಮಗನೇ ಗಿರಿಜಾ ಪಾಟೀಲ್ ಮಾತು ಕೇಳಾಬಾರದು ನನ್ನ ಮಾತು ಕೇಳಬೇಕು ಹೊಲ ಬಿಒಟ್ಟು ನಡಿ ಅಂತ ಬೈದರು ಆಗ ರೋಡಿನ ಮೇಲೆ ಸುಮಾರು 15, 20 ಜನ ನಿಂತು ನೋಡುತ್ತಿದ್ದರು.ಆಗ ನಾನು ಪೊಲೀಸ್ ಠಾಣೆಗೆ ಪೋನ್ ಮಾಡಿದಾಗ ಪೊಲೀಸ್ ಬಂದು ನನ್ನನ್ನು ಅವರಿಂದ ಬಚಾವ್ ಮಾಡಿ ಕಳಿಸಿದರು.ಆದ್ದರಿಂದ ತಾವುಗಳು ದಯಾಮಾಡಿ ದೇವಮ್ಮ ಗಂಡ ವಿಶ್ವನಾಥರೆಡ್ಡಿ, ಟೀನ್ಯಾ@ಹಣಮಂತ ಕೋಳಿ, ಸಾಬರೆಡ್ಡಿ ಕೋಳಿ ಅಂಜ ಎಮ್ಮನೋರ ಇವರ ವಿರುದ್ದ ಖಅ 3(1) ಗಿ,ಘಿ ಚಿಟಿಜ 8(ಛ) ಅಟ್ರಾಸೀಟಿ ಆಕ್ಟ್ -1989 ಪ್ರಕಾರ ಮತ್ತು 447, 504, 506, ಐ.ಪಿ.ಸಿ ಪ್ರಕಾರ ಕಾನೂನು ಕ್ರಮ ಕೈಗೊಂಡು ಎಫ್.ಐ.ಆರ್. ದಾಖಲಿಸಬೇಕೆಂದು ವಿನಂತಿ. ಸದರಿ ಅಜರ್ಿಯ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ: 76/2022 ಕಲಂ: 447, 504, 506 ಸಂ.34 ಐ.ಪಿ.ಸಿ ಮತ್ತು ಖಅ 3(1) ಗಿ,ಘಿ ಚಿಟಿಜ 8(ಛ) ಅಟ್ರಾಸೀಟಿ ಆಕ್ಟ್ -1989 ಅಟ್ರಾಸಿಟಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 75/2022 ಕಲಂ.379 ಐ.ಪಿ.ಸಿ. ಕಾಯ್ದೆ.: ಇಂದು ದಿನಾಂಕ.25-05-2022 ರಂದು ಮುಂಜಾನೆ 11:00 ಗಂಟೆಗೆ ಅಜರ್ಿದಾರನಾದ ಶ್ರೀ ವಿನೊದ ಕುಮಾರ ತಂದೆ ಅಮರಪ್ಪ ಬಂಡಿವಡ್ಡರ ಸಾ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕ ಯಂತ್ರದಲ್ಲಿ ಟೈಪ ಮಾಡಿದ ಅಜರ್ಿತಂದು ಹಾಜರು ಪಡಿಸಿದ್ದು ಸದರಿ ಅಜರ್ಿ ಸಾರಂಶವೆನೆಂದರೆ,ನಾನು ವಿನೋದ ಕುಮಾರ ತಂದೆ ಅಮರಪ್ಪ ಬಂಡಿವಡ್ಡರ ವ:28 ವರ್ಷ ಜಾ:ವಡ್ಡರ ಉ:ಪವರ ಮ್ಯಾನ ಕೆಲಸ ಸಾ:ಕೆ.ಇ.ಬಿ.ವಸತಿ ಗೃಹ ಯಾದಗಿರಿ ವಿಭಾಗ ಶಾಖೆ.ಹತ್ತಿಕುಣಿ.ಮೊ.ನಂ,8951345673. ನಾನು ಸುಮಾರು ವರ್ಷಗಳಿಂದ ಯಾದಗಿರಿ ಕೆ.ಇ.ಬಿ.ವಿಭಾಗದಲ್ಲಿ ಪವರ ಮ್ಯಾನ ಅಂತಾ ಕೆಲಸ ಮಾಡುತ್ತಿದ್ದು. ಸದ್ಯ ಹತ್ತಿಕುಣಿ ಶಾಖೆಯಲ್ಲಿ ಕೆಲಸ ಮಾಡಿಕೊಂಡಿರುತ್ತೆನೆ,ನನಗೆ ಮದುವೆಯಲ್ಲಿ ನಮ್ಮ ಮಾವನವರು ಒಂದು ಮೊಟರ ಸೈಕಲ್ ಉಡುಗರೆಯಾಗಿ ನೀಡಿರುತ್ತಾರೆ ಅದರ ನಂ. ಕೆಎ-36.ಇಎಕ್ಸ್-2934 ಇದ್ದು.ಹೊಂಡಾ ಶೈನ್ ಬೈಕ್ ಇದ್ದು. ಅದರ ಬಣ್ಣ ಬೂದು ಬಣ್ಣದ್ದು ಇರುತ್ತದೆ. ಅದು ನಮ್ಮ ಮಾವನವರಾದ ದೊಡ್ಡರಮೇಶ ತಂದೆ ವೆಂಕಟೆಶ ಸಾ:ಶಾಂತಿ ನಗರ ತಾ:ಗೊಬ್ಬರು ಇವರ ಹೆಸರಿನಲ್ಲಿರುತ್ತದೆ. ನಾನು ದಿನಾಲು ಅದರ ಮೇಲೆ ಕೆಲಸಕ್ಕೆ ಹೋಗಿ ಬರುವದು ಮಾಡಿಕೊಂಡಿಕೊಂಡಿರುತ್ತೆನೆ.
ಹಿಗಿದ್ದು ದಿನಾಂಕ:21-05-2022 ರಂದು ಎಂದಿನಂತೆ ಹತ್ತಿಕುಣಿ ಶಾಖೆಗೆ ಕರ್ತವ್ಯಕ್ಕೆ ಹೊಗಿ ದಿನದ ಕರ್ತವ್ಯ ಮುಗಿಸಿಕೊಂಡು ರಾತ್ರಿ 10:00 ಗಂಟೆಯ ಸುಮಾರಿಗೆ ಕರ್ತವ್ಯ ಮುಗಿಸಿಕೊಂಡು ಮರಳಿ ಯಾದಗಿರಿಯಲ್ಲಿರುವ ಮನೆಗೆ ಬರುತ್ತಿರುವಾಗ ಬಂದಳ್ಳಿ ಗ್ರಾಮ ದಾಟಿ ಬರುವಾಗ ಎಸ್ಸಾರ ಪೆಟ್ರೊಲ್ ಪಂಪ್ ಹತ್ತಿರ ಏಕಾ ಎಕಿ ಮೊಟಾರ ಸೈಕಲ್ ಬಂದಾಗಿದ್ದು ಎಷ್ಟು ಸಾರಿ ಚಾಲು ಮಾಡಿದರು ಚಾಲು ಆಗಲಿಲ್ಲ. ತಡ ರಾತ್ರಿ ಆದ ಕಾರಣ ನಾನು ಮೊಟರ ಸೈಕಲ್ನ್ನು ರಸ್ತೆಯ ಪಕ್ಕಕ್ಕೆ ನೀಲ್ಲಿಸಿದೆನು. ಮುಂಜಾನೆ ಯಾರಾದರು ಮೆಕಾನಿಕಗೆ ಕರೆದುಕೊಂಡು ಬಂದು ರಿಪೇರಿ ಮಾಡಿಸಿಕೊಂಡು ಹೋದರಾಯಿತು ಅಂತಾ ತಿಳಿದುಕೊಂಡು ರಸ್ತೆಯ ಪಕ್ಕಕ್ಕೆ ಮೊಟಾರ ಸೈಕಲ್ನ್ನು ನೀಲ್ಲಿಸಿ ಅಲ್ಲೆ ಪಕ್ಕದ ಹೋಲದಲ್ಲಿ ಮಲಗಿಕೊಂಡೆನು.ಮುಂಜಾನೆ 05:30 ಗಂಟೆಗೆ ಎದ್ದು ನೊಡಲಾಗಿ ನಾನು ನಿಲ್ಲಿಸಿದ ಜಾಗದಲ್ಲಿ ಮೊಟಾರ ಸೈಕಲ್ ಇರಲಿಲ್ಲ, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಗಾಬರಿಗೊಂಡು ಸುತ್ತುಮುತ್ತಾ ಹುಡುಕಲಾಗಿ ಎಲ್ಲಿ ಕಾಣಿಸಲಿಲ್ಲ. ಅದೆ ಸಮಯಕ್ಕೆ ಒಂದು ಆಟೋ ಟಂ,ಟಂ, ಬಂತು ಅದನ್ನು ಹತ್ತಿಕೊಂಡು ಯಾದಗಿರಿಗೆ ಬಂದು ನಮ್ಮ ಗೆಳೆಯನಾದ ಮಹಾದೇವ ತಂದೆ ಅಮಲಪ್ಪ ಪೂಜಾರಿ ಸಾ:ಕೆ.ಇ.ಬಿ.ವಸತಿ ನಿಲಯ ಯಾದಗಿರಿ. ಅವರಿಗೆ ಮತ್ತು ನಮ್ಮ ಮಾವನಾದ ದೊಡ್ಡರಮೆಶ ತಂದೆ ವೆಂಕಟೆಶ ಸಾ:ಶಾಂತಿ ನಗರ ಗೊಬ್ಬರು ಇವರಿಗೆ ಮೊಬೈಲ್ ನಂ,8951345673 ನೆದ್ದಕ್ಕೆ ಕರೆ ಮಾಡಿ ನಡೆದ ಘಟನೆ ಬಗ್ಗೆ ವಿಚಾರಿಸಲಾಗಿ ಅವರು ಮೊದಲು ಎಲ್ಲಾ ಕಡೆ ಹುಡುಕಾಡೊಣ ನಂತರ ಪೊಲೀಸರಿಗೆ ಹೋಗಿ ದೂರು ನೀಡೊಣ ಅಂತಾ ತಿಳಿಸಿದರು.ನಂತರ ನಾವೇಲ್ಲರು ಕೂಡಿಕೊಂಡು ಎಲ್ಲಾ ಕಡೆ ಹುಡಿಕಿದರು ಸಿಕ್ಕಿರುವದಿಲ್ಲ. ಕಾರಣ ಕಳೆದು ಹೊದ ಮೊಟಾರ ಸೈಕಲ್ನ್ನು ಹುಡಿಕಿ ಕಳ್ಳತನ ಮಾಡಿಕೊಂಡು ಹೊದವರ ವಿರುದ್ದ ಸೂಕ್ತ ಕಾನೂನು ರಿತಿ ಕ್ರಮ ಕೈಕೊಳ್ಳಲು ಮಾನ್ಯರಲ್ಲಿ ವಿನಂತಿ. ಮನೆಯಲ್ಲಿ ವಿಚಾರಿಸಿಕೊಂಡು ಮತ್ತು ಸುತ್ತುಮುತ್ತಲಿನ ಏರಿಯಾದಲ್ಲಿ ಹುಡುಕಾಡಿಕೊಂಡ ಠಾಣೆ ಬಂದು ದೂರು ನೀಡಲು ತಡವಾಗಿರುತ್ತದೆ. ಅಂತಾ ನಿಡಿದ ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ,75/2022 ಕಲಂ,379 ಐ.ಪಿ.ಸಿ.ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.
ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 77/2022. ಕಲಂ. 143, 147, 148, 427, 447, 323, 324, 504, 506 ಸಂಗಡ 149 ಐ.ಪಿ.ಸಿ. ಕಾಯ್ದೆ.: ಇಂದು ದಿನಾಂಕ: 25-05-2022 ರಂದು ಸಾಯಂಕಾಲ 4:30 ಗಂಟೆಗೆ ಸುಮಾರಿಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಎಮ್.ಎಲ್.ಸಿ ಇದೆ ಅಂತ ಪೋನ ಮೂಲಕ ತಿಳಿಸಿದ ಮೇರೆಗೆ ನಾನು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಮಲ್ಲಪ್ಪ ತಂದೆ ಯಲ್ಲಪ್ಪ ಕಂದಾರ ವಯ:-65 ಜಾತಿ: ಕಬ್ಬಲಿಗ ಉ: ಒಕ್ಕಲತನ ಸಾ: ಬೆಳಗೆರಾ ತಾ:ಜಿ: ಯಾದಗಿರಿ ಈತನಿಗೆ ಘಟನೆ ಬಗ್ಗೆ ವಿಚಾರಿಸಿದ್ದು,ಆತನು ನೀಡಿದ ಹೇಳಿಕೆ ಸಾರಂಶವೆನೆಂದರೆ, ಇಂದು ದಿನಾಂಕ.25-02-2022 ರಂದು ಮುಂಜಾನೆ 11:00 ಗಂಟೆಗೆ ನಾನು ಖರಿದಿಸಿದ ಹೊಲದ ಸವರ್ೆ ನಂ,310/2 ಅ ವಿಸ್ತರ್ಿಣ 1 ಎಕರೆ 32 ಗುಂಟೆ ಕೃಷಿ ಜಮಿನೀನಲ್ಲಿ ಬದನೆಕಾಯಿ ತೊಟಕ್ಕೆ ನೀರು ಬಿಡುವಾಗ ನನ್ನ ತಮ್ಮನಾದ ಮೋನಪ್ಪ ತಂದೆ ಯಲ್ಲಪ್ಪ ಕಂದಾರ ಮತ್ತು ಆತನ ಹೆಂಡತಿಯಾದ ವಿರಭದ್ರಮ್ಮ ಗಂಡ ಮೋನಪ್ಪ ಕಂದಾರ ಮತ್ತು ಆತನ ಹೆಂಡತಿಯ ತಂದೆಯಾದ ಅಮಾತೆಪ್ಪ ತಂದೆ ಉತ್ತಪ್ಪ, ಅಮಾತೆಪ್ಪನ ಮಕ್ಕಳಾದ ಶೇಖಪ್ಪ ತಂದೆ ಅಮಾತೆಪ್ಪ, ಪ್ರಭು ತಂದೆ ಅಮಾತೆಪ್ಪ ಇವರೆಲ್ಲರೂ ಅಕ್ರಮ ಕೂಟ ರಚನೆ ಮಾಡಿಕೊಂಡು ಒಂದು ನಂ, ಪ್ಲೆಟ ಇಲ್ಲದ ಕೆಂಪು ಬಣ್ಣದ ಮಹಿಂದ್ರ ಕಂಪನಿಯ ಟ್ರ್ಯಾಕ್ಟರ ತೆಗೆದುಕೊಂಡು ಬಂದು ಹೊಲದಲ್ಲಿರುವ ಬದನೆ ತೊಟ ನಾಶ ಮಾಡಿ, ಇವರೆಲ್ಲರೂ ಸೇರಿಕೊಂಡು ಸೂಳೆ ಮಕ್ಕಳೆ, ರಂಡಿ ಮಕ್ಕಳೇ ನಮ್ಮ ವಿರುದ್ದ ಎಸ್.ಪಿ.ಯಲ್ಲಿ ಕೇಸು ನಿಡುತ್ತಿರ್ಯಾ ಅಂತಾ ಹೇಳಿದವರೆ, ಅವರಲ್ಲಿ ಅಮಾತೆಪ್ಪ ಇತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಹೊಡೆದಾಗ ನನ್ನ ಎಡಗೈಯಗೆ ಭಾರಿ ರಕ್ತ ಗಾಯವಾಗಿದ್ದು ಮತ್ತು ಬೆನ್ನಿಗೆ,ಕಾಲಿಗೆ ಭಾರಿ ಗುಪ್ತಗಾಯವಾಗಿದ್ದು,ಜಗಳ ಬಿಡಿಸಲು ಬಂದ ನನ್ನ ತಮ್ಮ ಸಾಬಣ್ಣ ತಂದೆ ಯಲ್ಲಪ್ಪ ಕಂದಾರ ಇತನಿಗೆ ಶೇಖಪ್ಪ ಇತನು ಅಲ್ಲಿಯ ಬಿದ್ದಿದ್ದ ಕಲ್ಲು ತಗೆದುಕೊಂಡು ಹೊಡೆದಿದ್ದರಿಂದ ಬಲಗೈಯಗೆ ರಕ್ತಗಾಯ ಮತ್ತು ಗುಪ್ತ ಗಾಯವಾಗಿರುತ್ತದೆ.ಇನ್ನೂಳಿದವರಾದ ಮೋನಪ್ಪ, ವಿರಭದ್ರಮ್ಮ,ಪ್ರಭು ಇವರೆಲ್ಲರೂ ಸೇರಿಕೊಂಡು ನೆಲ್ಲಕ್ಕೆ ಹಾಕಿ ಇವರದು ಬಹಳ ಆಗ್ಯಾದ ಇವರಿಗೆ ಇವತ್ತು ಜೀವ ಸಹಿತ ಬಿಡಬಾರದು ಅಂತಾ ಹೇಳಿ ನೆಲಕ್ಕೆ ಹಾಕಿ ಮನಬಂದಂತೆ ಕಾಲಿನಿಂದ ಹೊದ್ದಿದ್ದು ಇವರನ್ನು ಇವತ್ತು ಜಿವ ಸಹಿತ ಬಿಡಬಾರದು ಅಂತಾ ಚಿರಾಡುತ್ತಿರುವಾಗ ನನ್ನ ಹೆಂಡತಿ ಮಲ್ಲಮ್ಮ ಗಂಡ ಮಲ್ಲಪ್ಪ ಕಂದಾರ ಮತ್ತು ನನ್ನ ತಮ್ಮನ ಹೆಂಡತಿ ಲಕ್ಷ್ಮಿ ಗಂಡ ಹಣಮಂತ ಕಂದಾರ ಜಗಳ ಬಿಡಿಸಿದರು ನಂತರ ನನ್ನ ಹೆಂಡತಿ, ನನ್ನ ತಮ್ಮ ಸಾಬಣ್ಣ ಯಾದಗಿರಿ ಜಿ.ಜಿ.ಎಚ್ಗೆ ಬಂದೆವು ನಂತರ ಕೊರ್ಟನಲ್ಲಿದ್ದ ನನ್ನ ಮಗನಾದ ಶರಣಪ್ಪ ತಂದೆ ಮಲ್ಲಪ್ಪ ಇವರಿಗೆ ಪೊನ ಮಾಡಿ ಕರೆದೆವು ನಂತರ ನನ್ನ ಮತ್ತು ನನ್ನ ತಮ್ಮನನ್ನು ಚಿಕಿತ್ಸೆ ಕುರಿತು ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ.ಕಾರಣ ಅಕ್ರಮ ಕೂಟ ರಚನೆ ಮಾಡಿಕೊಂಡು ಬಂದು ನನ್ನ ಮೇಲೆ ಮತ್ತು ನನ್ನ ತಮ್ಮನ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನು ರಿತಿ ಕ್ರಮಕೈಗೊಳ್ಳಲು ವಿನಂತಿ. ಅಂತಾ ದೂರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಸಮಯ 6:30 ಪಿ.ಎಮ್ಕ್ಕೆ ಬಂದು ಸದರಿ ದೂರಿನ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ:76/2022 ಕಲಂ 143, 147, 148, 427, 447, 323, 324, 504, 506 ಸಂಗಡ 149 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 85/2022 ಕಲಂ: 143, 147, 148, 323, 324, 307, 395,504,506 ಸಂಗಡ 149 ಐಪಿಸಿ: ಇಂದು ದಿ:24/05/2022 ರಂದು 5.45 ಪಿಎಮ್ಕ್ಕೆ ಠಾಣೆಯ ಶಿವಲಿಂಗಪ್ಪ ಹೆಚ್ಸಿ 185 ರವರು ತಾಳಿಕೋಟಿಯ ಆಸ್ಪತ್ರೆಯಿಂದ ಗಾಯಾಳು ರಮೇಶ ತಂದೆ ಚಂದಪ್ಪಗೌಡ ಬಿರಾದಾರ ವಯಾ:39 ಜಾ: ಕುರುಬರು ಉ: ವ್ಯಾಪಾರ ಸಾ: ಅಗತೀರ್ಥ ತಾ: ಹುಣಸಗಿ ಇವರು ಕೊಟ್ಟ ಅಜರ್ಿಯನ್ನು ಸ್ವೀಕರಿಸಿಕೊಂಡು ತಂದು ಹಾಜರು ಪಡಿಸಿದ್ದರ ಸಾರಾಂಶವೆನೆಂದರೇ ಈ ಹಿಂದೆ ನಮಗೂ ಹಾಗೂ ನಮ್ಮೂರ ಬಾಬುಗೌಡ@ ಸಾಹೇಬಗೌಡ ತಂದೆ ಬಸವಂತ್ರಾಯಗೌಡ ಪಾಟೀಲ್ ಇವರ ಮದ್ಯೆ ಗಲಾಟೆಯಾಗಿ ನಾವು ಸದರಿಯವರ ಮೇಲೆ ಕೇಸು ಮಾಡಿದಾಗಿನಿಂದಲೂ ಸದರಿಯವನು ನಮ್ಮ ಮೇಲೆ ಹಗೆತನ ಸಾಧಿಸುತ್ತಿದ್ದನು. ಅಲ್ಲದೇ ಸದರಿಯವನು ನನಗೆ ಕೊಲೆ ಮಾಡಬೇಕೆಂದು ಸಂಚು ರೂಪಿಸಿದ್ದನು. ಅಲ್ಲದೇ ಅಗ್ನಿ ಗ್ರಾಮ ಪಂಚಾಯತಿಯ ಒಬ್ಬ ಸದಸ್ಯ ಮೃತ ಪಟ್ಟಿದ್ದು ಆ ವ್ಯಕ್ತಿ ಬಾಬುಗೌಡ ಇವರ ಬೆಂಬಲಿತ ವ್ಯಕ್ತಿಯಾಗಿದ್ದು. ಕಾರಣ ಆ ಸ್ಥಾನಕ್ಕೆ ಬಾಬುಗೌಡ ಇವರು ಮೃತನ ಹೆಂಡತಿಗೆ ನಾಮಿನೇಶನ್ ಮಾಡಿಸಿದ್ದು ನಾವು ಸಹ ನಮ್ಮ ಬೆಂಬಲಿತ ವ್ಯಕ್ತಿಯಾದ ಸಿದ್ದಪ್ಪ ದೊಡಮನಿ ಈತನಿಗೆ ಚುನಾವಣೆಗೆ ನಿಲ್ಲಿಸಿದ್ದು ಅಂದಿನಿಂದಲೂ ಸಹ ಬಾಬುಗೌಡ ನನ್ನ ಮೇಲೆ ಹಗೆತನ ಸಾಧಿಸುತ್ತಾ ಬಂದಿದ್ದನು. ಹೀಗಿದ್ದು ದಿನಾಂಕ:19/05/2022 ರಂದು ಚುನಾವಣೆ ಜರುಗಿದ್ದು ದಿ:22/05/2022 ರಂದು ಚುನಾವಣಾ ಮತ ಏಣಿಕೆ ಇದ್ದುದ್ದರಿಂದ ಬೆಳಿಗ್ಗೆ 6.00 ಗಂಟೆಗೆ ನಮ್ಮ ಆಭ್ಯಥರ್ಿಯೊಂದಿಗೆ ಇತರರು ಸೇರಿ ಹುಣಸಗಿಗೆ ಹೋಗಿದ್ದು. ಚುನಾವಣೆಯ ಮತ ಏಣಿಕೆ ಆಗಿ ನಮ್ಮ ಬೆಂಬಲಿತ ಸಿದ್ದಪ್ಪ ದೊಡಮನಿ ಈತನು ವಿಜಯ ಸಾಧಿಸಿದ್ದು ಬಾಬುಗೌಡ ಇವರ ಬೆಂಬಲಿತ ಆಭ್ಯಥರ್ಿ ಸೋತಿದ್ದು ಇರುತ್ತದೆ. ನಂತರ ನಾನು ಹಾಗೂ ಇತರೇ ನಮ್ಮೂರ ಜನರು ಹಾಗೂ ಗೆದ್ದ ಆಭ್ಯಥರ್ಿ ಸಿದ್ದಪ್ಪ ದೊಡಮನಿ ಎಲ್ಲರೂ ಕೂಡಿ ಅಂದಾಜು 12.45 ಪಿಎಮ್ ಸುಮಾರಿಗೆ ನಾವೇಲ್ಲರೂ ನಮ್ಮೂರ ಕ್ರಾಸ್ಗೆ ಬಂದು ಕ್ರಾಸನಲ್ಲಿರುವ ದೇವರ ಮೂತರ್ಿಗೆ ಹಾರ ಹಾಕುತ್ತಿದ್ದಾಗ ಅದೇ ವೇಳೆಗೆ ನಮ್ಮ ಮೇಲೆ ಹಗೆತನ ಸಾಧಿಸುತ್ತಿದ್ದ ಬಾಬುಗೌಡ @ ಸಾಹೇಬಗೌಡ ಪಾಟೀಲ್ ಈತನು ಮುದನೂರ ಕಡೆಯಿಂದ 5-6 ಮೋಟಾರ ಸೈಕಲ್ನಲ್ಲಿ ಹಾಗೂ 6-7 ಜನರನ್ನು ಕಾರಿನಲ್ಲಿ ಕರೆದುಕೊಂಡು ನಮ್ಮಲ್ಲಿಗೆ ಬಂದಿದ್ದು ಅವರು ಕಾರನಲ್ಲಿ ಬಡಿಗೆ, ಕಬ್ಬಿಣದ ರಾಡು ಹಾಗೂ ಕಲ್ಲುಗಳನ್ನು ಹಾಕಿಕೊಂಡು ಬಂದಿದ್ದು ನಂತರ ಎಲ್ಲರೂ ಕಾರು ಹಾಗೂ ಮೋಟಾರು ಸಡೈಕಲ್ಗಳನ್ನು ನಿಲ್ಲಿಸಿ ನಮ್ಮ ಹತ್ತಿರ ಬಂದವರೇ ಇದು ಸರಿಯಾದ ಸಮಯ ಇಲ್ಲಿಯೇ ಎಲ್ಲರನ್ನು ಹೊಡೆದು ಹಾಕಿಬೀಡೋಣ ಅನ್ನುತ್ತಾ ನಮ್ಮ ಸುತ್ತಲು 1) ಬಾಬುಗೌಡ @ ಸಾಹೇಬಗೌಡ ತಂದೆ ಬಸವಂತ್ರಾಯಗೌಡ ಪಾಟೀಲ್ 2) ಸಿದ್ದನಗೌಡ ತಂದೆ ಸಂಗನಗೌಡ ಪಾಟೀಲ್ 3) ಮಲ್ಲನಗೌಡ ತಂದೆ ಶಾಂತಗೌಡ ಪಾಟೀಲ್ 4) ರಾಮನಗೌಡ@ ಬಸನಗೌಡ ತಂದೆ ಸಂಗನಗೌಡ ಪಾಟೀಲ್ 5)ಸುಭಾಸ ತಂದೆ ಮಲ್ಲಪ್ಪ ಮುಂದಿನಮನಿ 6) ಮಧುಗೌಡ ತಂದೆ ಬಾಬುಗೌಡ ಪಾಟೀಲ್ 7) ಸಂಗನಗೌಡ ತಂದೆ ಬಸವಂತ್ರಾಯಗೌಡ ಪಾಟೀಲ್ 8) ಚಂದ್ರಶೇಖರ ತಂದೆ ಮಲ್ಲಪ್ಪ ಬಳಗನೂರ 9) ಮಲ್ಲಪ್ಪಗೌಡ ತಂದೆ ಕೆಂಚಪ್ಪಗೌಡ ಮುಂದಿನಮನಿ 10) ಭೀಮನಗೌಡ ತಂದೆ ಬಸನಗೌಡ ಬಿರಾದಾರ 11)ಹಣಮಂತ್ರಾಯಗೌಡ ನರಕಲ್ದಿನ್ನಿ 12) ಸೋಮಶೇಖರ ತಂದೆ ಹಣಮಂತ್ರಾಯ ನರಕಲ್ದಿನ್ನಿ 13) ಭೀಮರಾಯ ತಂದೆ ಅಮರಪ್ಪ ಪೂಜಾರಿ ಎಲ್ಲರೂ ಸಾ: ಅಗತೀರ್ಥ ಮತ್ತು 14) ಜಗನ್ನಾಥ ತಂದೆ ಚಂದ್ರಕಾಂತ ಮನ್ನೂರು 15)ಸಿದ್ದಲಿಂಗಯ್ಯ ತಂದೆ ಶಾಂತಯ್ಯ ಹೀರೇಮಠ ಎಲ್ಲರೂ ಸಾ: ಅಗ್ನಿ ಹಾಗೂ 16)ಭೀಮನಗೌಡ ಪೋತರೆಡ್ಡಿ 17) ಸಿದ್ದನಗೌಡ ಪಡೇಕನೂರ ಇಬ್ಬರೂ ಸಾ: ಮುದನೂರ ಬಿ 18) ಗುರುನಾಥರೆಡ್ಡಿ ಸಾ: ಇಸಾಂಪೂರ 19) ರಾಜು ತಂದೆ ಶಾಂತಗೌಡ ಚೌಧರಿ ಸಾ: ಅಮಲಿಹಾಳ ಹಾಗೂ ಇತರರು ಇವರೆಲ್ಲರೂ ನಮಗೆ ಸುತ್ತುವರೆದು ಏನಲೇ ರಮೇಶ ಸೂಳೇ ಮಗನೇ ನೀನು ಇವತ್ತು ನಮ್ಮ ಕೈಯಿಂದ ಪಾರಾಗಲು ಅಗಲ್ಲ ಮಗನೇ ಇವತ್ತ ನಿನ್ನ ತಿಂಡಿ ಏನದ ತೀರಿಸಿಕೋ ಸೂಳೇ ಮಗನೇ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಏನು ಮಾಡಿದ್ದೇನೆ ನನಗೂ ಹಾಗೂ ನಮ್ಮ ಜನಾಂಗಕ್ಕೆ ಯಾಕೇ ಬೆನ್ನು ಹತ್ತಿದಿ ಅಂತ ಕೇಳಿದಾಗ ಬಾಬುಗೌಡ ಈತನು ಎಲೇ ಮಗನೇ ಸದ್ಯ ಊರಲ್ಲಿ ನನ್ನದೂ ಏನು ನಡೆಯದಂತೆ ಮಾಡಿದ್ದಿರೀ ಇವತ್ತ ನಿನಗೆ ಬಿಡಲ್ಲಾ ಅನ್ನುತ್ತಾ ಬಾಬುಗೌಡ ಈತನು ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತ ಗಾಯ ಮಾಡಿದ್ದು ಸಿದ್ದನಗೌಡ ಪಾಟೀಲ್ ಈತನು ಸಹ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬಲಭುಜಕ್ಕೆ ಹೊಡೆದು ಗುಪ್ತಗಾಯ ಪಡಿಸಿದನು. ಅಷ್ಟರಲ್ಲಿ ಅವರಲ್ಲಿಯಾ ಮಧುಗೌಡ ತಂದೆ ಬಾಬುಗೌಡ ಪಾಟೀಲ್ ಈತನು ಸಹ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡನ್ನು ತೆಗೆದುಕೊಂಡು ಕೊಲೆ ಮಾಡುವ ಉದ್ದೇಶದಿಂದ ನನ್ನ ತಲೆಗೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಿದ್ದು ಆ ಏಟು ನನ್ನ ಬಲಭುಜಕ್ಕೆ ಬಡೆದು ಗುಪ್ತಗಾಯವಾಗಿದ್ದು ಇರುತ್ತದೆ. ನಂತರ ಎಲ್ಲರೂ ಕೂಡಿ ನನಗೆ ಎತ್ತಿ ನೆಲಕ್ಕೆ ಒಗೆದು ಕೈಯಿಂದ ಹೊಡೆಯುತ್ತಾ ಕಾಲಿನಿಂದ ಒದೆಯುತ್ತಿದ್ದಾಗ ಅವರಲ್ಲಿಯಾ ರಾಮನಗೌಡ ಪಾಟೀಲ್ ಹಾಗೂ ಸುಭಾಶ ಮುಂದಿನಮನಿ ಇವರು ನನ್ನ ಕೊರಳಲ್ಲಿದ್ದ ನಾಲ್ಕು ತೊಲಿ ಬಂಗಾರದ ಚೈನ ಕಿತ್ತಿಕೊಂಡರು. ಭೀಮನಗೌಡ ಪೋತರೆಡ್ಡಿ ಹಾಗೂ ಸಿದ್ದನಗೌಡ ಪಡೆಕೆನೂರ ಇವರು ತಮ್ಮ ಕೈಯಲ್ಲಿದ್ದ ಕಲ್ಲಿನಿಂದ ಹೊಟ್ಟೆಗೆ ಗುದ್ದಿ ಗುಪ್ತಗಾಯ ಪಡಿಸಿದರು. ನಂತರ ನಾನು ಅವರು ಹೊಡೆಯುತ್ತಿರುವ ಏಟು ತಾಳದೇ ಸತ್ತೆವೆಪ್ಪೋ ಅಂತಾ ಚೀರುತ್ತಿದ್ದಾಗ ಕೆಂಭಾವಿ ಕಡೆಯಿಂದ ಪರಶುರಾಮ ಬಡಿಗೇರಾ, ಭೀಮಪ್ಪ ದೊಡಮನಿ, ಪರಶುರಾಮ ದೊಡಮನಿ, ಚಿದಾನಂದ ಪೂಜಾರಿ ಹಾಗೂ ಭೀಮನಗೌಡ ಹೊಸಮನಿ ಇವರೆಲ್ಲರೂ ಬಿಡಿಸಿಕೊಳ್ಳಲು ಬಂದಾಗ ನನಗೆ ಹೊಡೆಯುತ್ತಿದ್ದವರೆಲ್ಲರೂ ಸತ್ತೆವೆಪ್ಪೋ ಅಂತೀಯ್ಯಾ ಸೂಳೆ ಮಗನೇ ನಿನಗೆ ಈಗ ಮರ್ಡರ್ ಮಾಡಿಯೇ ಬಿಡುತ್ತೇವೆ ಅಂತಾ ಅನ್ನುತ್ತಾ ತಕ್ಷಣ ನನಗೆ ಹೊಡೆಯುವುದು ಬಿಟ್ಟು ಈ ಸಲ ಉಳಿದೀದಿ ಮಗನೇ ಇನ್ನೊಮ್ಮೆ ಸಿಕ್ಕರೆ ನಿನಗೆ ಕೊಲೆ ಮಾಡದೇ ಬಿಡುವುದಿಲ್ಲ ಅಂತಾ ಅನ್ನುತ್ತಾ ಅಲ್ಲಿಂದ ಓಡಿ ಹೋದರು. ಆಗ ನನಗೆ ಭಾರೀ ಗಾಯಗಳಾಗಿದ್ದರಿಂದ ನನಗೆ ಬಿಡಿಸಲು ಬಂದಾ ಚಿದಾನಂದ ಪೂಜಾರಿ ಹಾಗೂ ಇತರರು ಸೇರಿ ನನಗೆ ಕಾರಿನಲ್ಲಿ ಹಾಕಿಕೊಂಡು ಹುಣಸಗಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಉಪಚಾರಕ್ಕಾಗಿ ತಾಳಿಕೋಟಿಯ ಖಾಸಗಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿದ್ದು ಇರುತ್ತದೆ. ಹಳೆಯ ದ್ವೇಷದಿಂದ ನನಗೆ ಕೊಲೆ ಮಡುವ ಉದ್ದೇಶದಿಂದ ಸುತ್ತುಗಟ್ಟಿ ನಿಂತು ಬಡಿಗೆ, ರಾಡು, ಕಲ್ಲಿನಿಂದ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯ ಮಾಡಿದ್ದು ಅಲ್ಲದೇ ನನ್ನ ಕೊರಳಲ್ಲಿದ್ದ ಬಂಗಾರದ ಚೈನ್ ಕಸಿದುಕೊಂಡು ಜೀವದ ಭಯ ಹಾಕಿದ ಬಾಬುಗೌಡ @ ಸಾಹೇಬಗೌಡ ತಂದೆ ಬಸವಂತ್ರಾಯಗೌಡ ಪಾಟೀಲ್ ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಅಜರ್ಿಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 85/2022 ಕಲಂ 143, 147, 148, 323, 324, 307, 395, 504, 506 ಸಂ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 60/2022 ಕಲಂ 379 ಐಪಿಸಿ: ಇಂದು ದಿನಾಂಕ 25/05/2022 ರಂದು ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ಫಿಯರ್ಾದಿ ಶ್ರೀ ಶಂಕರ ಪಾಟೀಲ ತಂದೆ ಪೀರಪ್ಪ ಪಾಟೀಲ ವಃ74 ಉಃನಿವೃತ್ತ ಪಿ.ಎಸ್.ಐ ಜಾಃ ಲಿಂಗಾಯತ ಸಾಃ ಲಕ್ಕಿ ನಗರ ಯಾದಗಿರಿ ಇವರು ಠಾಣೆಗೆ ಬಂದು ದೂರು ನೀಡಿದರ ಸಾರಾಂಶವೇನೆಂದರೆ, ನನ್ನ ಹಿರೋ ಹೊಂಡಾ ಸಿಡಿ 100 ಮೋಟರ್ ಸೈಕಲ್ ನಂ ಏಂ 32 ಊ 6529 ಅಂತಾ ಇದ್ದು, ಅದರ ಇಟಿರಟಿಜ ಓಠ-96ಇ10ಇ06874, ಅಊಂಖಖಖ ಓಔ-96ಇ10ಈ02166, ಅಂತಾ ಇರುತ್ತದೆ. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 15,000/-ರೂ|| ಗಳು ಈ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು ನಾನು ದಿನಾಂಕ.22/05/2022 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನನ್ನ ಮಗ ಶಿವಾನಂದ ಪಾಟೀಲ ತಂದೆ ಶಂಕರ ಪಾಟೀಲ ಈತನಿಗೆ ಆರಾಮವಿಲ್ಲದ್ದರಿಂದ ಆಸ್ಪತ್ರೆಗೆ ತೋರಿಸಲು ಸಣ್ಣ ಕೆರೆಯ ಹತ್ತಿರ ಇರುವ ಶ್ರೀ ಸಿದ್ದಿ ವಿನಾಯಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗುವ ಕುರಿತು ನನ್ನ ಮೋಟರ್ ನಂ ಏಂ 32 ಊ 6529 ನೇದ್ದನ್ನು ತೆಗೆದುಕೊಂಡು ಹೋಗಿ ಆಸ್ಪತ್ರೆಯ ಮುಂದೆ ನಿಲ್ಲಿಸಿದ್ದು ಲಾಕ್ ಕೆಟ್ಟು ಹೋಗಿದ್ದರಿಂದ ಲಾಕ ಮಾಡಿರುವುದಿಲ್ಲಾ, ನಂತರ ನನ್ನ ಮಗನಿಗೆ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರಿಂದ ರಾತ್ರಿ ನನ್ನ ಮಗನೊಂದಿಗೆ ನಾನು ಆಸ್ಪತ್ರೆಯಲ್ಲಿಯೇ ಉಳಿದುಕೊಂಡೆನು. ನಂತರ ಮರಳಿ ದಿನಾಂಕ 23/05/2022 ರಂದು ನಾನು ಬೆಳಿಗ್ಗೆ 6-30 ಗಂಟೆಯ ಸುಮಾರಿಗೆ ಮನೆಗೆ ಹೋದರಾಯಿತು ಅಂತಾ ಆಸ್ಪತ್ರೆಯಿಂದ ಹೊರಗಡೆ ಬಂದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಾನು ಮತ್ತು ನನ್ನ ಮಗ ಶಿವಾನಂದ ಪಾಟೀಲ, ರವರು ನಾನು ನಮ್ಮ ಮನೆಯ ಪಕ್ಕದಲ್ಲಿರುವ ಸೋಮಯ್ಯ ಹೀರೇಮಠ ರವರಿಗೆ ವಿಷಯ ತಿಳಿಸಿದೆವು ಅವರು ಸ್ಥಳಕ್ಕೆ ಬಂದಾಗ ನಂತರ ಎಲ್ಲರು ಕೂಡಿ ರೈಲ್ವೆ ಸ್ಟೇಷನ್ ಏರಿಯಾ, ಹಳೆಯ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ ಮತ್ತು ಇತರ ಕಡೆಗಳಲ್ಲಿ ತಿರುಗಾಡಿ ನೋಡಲಾಗಿ ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಸದರಿ ನನ್ನ ಮೋಟರ್ ಸೈಕಲ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಅಲ್ಲಿ ಅಲ್ಲಿ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ತಾವು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 60/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 84/2022 ಕಲಂ: 32, 34 ಕೆಇ ಆಕ್ಟ್: ಇಂದು ದಿನಾಂಕ 24.05.2022 ರಂದು ಸಂಜೆ 5.30 ಗಂಟೆಗೆ ಆರೋಪಿತನು ಅಕ್ರಮವಾಗಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಪೌಚ್ಗಳನ್ನು ಚಿನ್ನಕಾರ ಗ್ರಾಮದ ಆರೋಪಿತನ ಅಂಗಡಿಯ ಮುಂದೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ತನ್ನ ವಶದಲ್ಲಿದ್ದ ಒಟ್ಟು 3,372.48=00 ರೂ ಬೆಲೆಯ ಮುದ್ದೆ ಮಾಲನ್ನು ಮತ್ತು ಆರೋಪಿತನಿಂದ ನಗದು ಹಣ 350/- ರೂ ಒಟ್ಟು 3,724.48 ಕಿಮ್ಮತ್ತಿನ ಮುದ್ದೆ ಮಾಲನ್ನು ಪಿ.ಎಸ್.ಐ ರವರು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು ಕೈಕೊಂಡು ಮರಳಿ ಠಾಣೆಗೆ ಬಂದು ಆರೋಪಿತನ ವಿರುದ್ಧ ಕಾನೂನು ಕ್ರಮಕ್ಕಾಗಿ ವರದಿ ನೀಡಿದ್ದು ಆ ಬಗ್ಗೆ ಠಾಣಾ ಗುನ್ನೆ ನಂ: 84/2022 ಕಲಂ: 32, 34 ಕೆಇ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 43/2022 ಕಲಂ. 323, 324, 504, 506 ಐಪಿಸಿ: ದಿನಾಂಕ:24/05/2022 ರಂದು ರಾತ್ರಿ 9.00 ಗಂಟೆಯ ಸುಮಾರಿಗೆ ಗಾಯಾಳು ಬಂದಗೀಸಾಬ ಈತನು ಆರೋಪಿತನ ಮನೆಯ ಮುಂದೆ ಹಾಯ್ದು ತನ್ನ ಮನೆಗೆ ಹೊರಟಾಗ, ಆರೋಪಿತನು ಏ ಮಗನೆ ಕಾಶ್ಯಾ ನೀನ್ಯಾಕ ಹುಸೇನಸಾಬ ಈತನ ಹೊಲವನ್ನು ಖರಿದಿ ಕೊಟ್ಟಾಗ ಹೋಗಿದಿ, ಇಲ್ಲದ ಕಾರಬಾರ ಮಾಡಿತಿಯೇನು ಮಗನೇ ಅಂತಾ ಬೈದಾಡಿದಾಗ, ಗಾಯಾಳು ಇಲ್ಲ ಮಾವ ಅವರು ಕರೆದರು ನಾನು ಹೋಗಿ ಹೀಗೆಲ್ಲ ಬೈದಾಡುವದು ಸರಿ ಅಲ್ಲ ಅಂತಾ ಅಂದಿದ್ದಕ್ಕೆ ಆರೋಪಿತನು ನನಗೆ ಎದುರು ಮಾತಾಡುತ್ತಿಯೇನು ಅಂತಾ ಗಾಯಾಳುವಿನ ತೆಕ್ಕೆ ಕುಸ್ತಿಗೆ ಬಿದ್ದು, ಕೈಯಿಂದ ಹೊಡೆದಿದ್ದು, ನಂತರ ತಮ್ಮ ಮನೆಯಲ್ಲಿದ್ದ ಕಬ್ಬಿಣದ ಪೈಪ್ ತೆಗೆದುಕೊಂಡು ಬಂದು ಗಾಯಾಳುಗಿನ ತಲೆಗೆ & ಬೆನ್ನಿಗೆ ಹೊಡೆದಾಗ, ತಲೆಗೆ ಒಳಪೆಟ್ಟಾಗಿ ಗಾಯಾಳು ಕಾಶಿಂಸಾಬ ಈತನು ಚೀರಾಡುತ್ತಾ ಕೆಳಗೆ ಬಿದ್ದಿದ್ದು, ಫಿರ್ಯಾದಿ ಓಡಿ ಬಂದಿದ್ದು, ಗಾಯಾಳುವಿನ ಪಕ್ಕದ ಮನೆಯ ಸೈಯದಸಾಬ ಕೊಳೂರ ಈತನು ಸಹ ಬಂದಿದ್ದು, ಇಬ್ಬರೂ ಕೂಡಿ ಜಗಳ ಬಿಡಿಸಿದರು. ಆರೋಪಿತನು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಅಲ್ಲದೆ ನಿನ್ನ ಗಂಡನು ಬಹಳ ಕಾರಾಬಾರ ಮಾಡುತ್ತಿದ್ದಾನೆ ಇನ್ನೊಂದು ಸಲ ಈ ರೀತಿ ಕಾರಬಾರ ಮಾಡಿದರೆ ಅವನಿಗೆ ಜೀವಂತ ಬಿಡುವದಿಲ್ಲ ಅಂತಾ ಜಿವದ ಬೆದರಿಕೆ ಹಾಕುತ್ತಾ ಮನೆಯೊಳಗಹೋದ ಬಗ್ಗೆ ಅಪರಾಧ.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 86/2022 ಕಲಂ: 279, 337, 338 ಐಪಿಸಿ,: ಇಂದು ದಿನಾಂಕ 25.05.2022 ರಂದು 06.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಆಕಾಶ ತಂದೆ ಧನರಾಜ ಚವ್ಹಾಣ ವ|| 19ವರ್ಷ ಜಾ|| ಲಂಬಾಣಿ ಉ|| ಕೂಲಿ ಸಾ|| ಬೈಲಾಪೂರ ತಾಂಡಾ ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ಇಂದು ದಿನಾಂಕ 25/05/2022 ರಂದು ಚಾಮನಾಳ ತಾಂಡಾದಲ್ಲಿ ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮ ಇದ್ದುದರಿಂದ ನಮ್ಮ ಊರಾದ ಬೈಲಾಪೂರ ತಾಂಡಾದಿಂದ ನಾನು ಮತ್ತು ನಮ್ಮ ಮನೆಯವರು ಕೂಡಿಕೊಂಡು ನಮ್ಮ ತಾಂಡಾದ ದೇವರಾಜ ತಂದೆ ತುಳಜಾನಾಯ್ಕ ಚವ್ಹಾಣ ಇವರ ಅಟೋ ಟಂ ಟಂ ನಂ ಕೆಎ 33 5828 ನೇದ್ದರಲ್ಲಿ ಮದುವೆಗೆ ಹೋಗಿ ಚಾಮನಾಳದಲ್ಲಿ ಮದುವೆ ಮುಗಿಸಿ ಅಲ್ಲಿಂದ 2.30 ಪಿಎಂ ಕ್ಕೆ ಹೊರಟು ಕೆಂಭಾವಿ ಮುದನೂರ ಹುಣಸಗಿ ಮುಖಾಂತರ ಬೈಲಾಪೂರ ತಾಂಡಾಕ್ಕೆ ಹೋಗುತ್ತಿದ್ದೆವು. ಹೀಗಿದ್ದು ಇಂದು ದಿನಾಂಕ 25/05/2022 ರಂದು 4.00 ಪಿಎಂ ಸುಮಾರಿಗೆ ನಾವು ಅಟೋದಲ್ಲಿ ಕೆಂಭಾವಿ ಪಟ್ಟಣ ದಾಟಿ ಹುಣಸಗಿ ರಸ್ತೆ ಮೇಲೆ ಹೋಲಿಪೇಥ ಶಾಲೆಯ ಮುಂದೆ ಹೋಗುತ್ತಿದ್ದಾಗ ಹಿಂದಿನಿಂದ ವಿಜಯಲಕ್ಷ್ಮೀ ಟ್ರಾವೆಲ್ಸ್ ಬಸ್ ನಂ ಕೆಎ 51 ಎಎಫ್ 0518 ನೇದ್ದರ ಚಾಲಕನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಾವು ಹೋಗುತ್ತಿದ್ದ ಅಟೋ ನಂ ಕೆಎ 33 5828 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದು ಅಪಘಾತದಿಂದಾಗಿ ನಮ್ಮ ಅಟೋ ಪಲ್ಟಿಯಾಗಿ ರಸ್ತೆಯ ಎಡ ಮಗ್ಗುಲಿಗೆ ಬಿದ್ದಿದ್ದು ಕಾರಣ ಅಟೋದಲ್ಲಿದ್ದ ನನಗೆ ಎಡಗೈ ಮೊಳಕೈಗೆ ಹಾಗೂ ಟೊಂಕಕ್ಕೆ ಗುಪ್ತಗಾಯವಾಗಿದ್ದು, ಅಟೋದಲ್ಲಿದ್ದ ಕಮಲಾಬಾಯಿ ಗಂಡ ಭೀಮನಾಯ್ಕ ಚವ್ಹಾಣ ಇವಳಿಗೆ ತಲೆಗೆ ಹಾಗೂ ಕುತ್ತಿಗೆಯ ಹತ್ತಿರ ಗುಪ್ತಗಾಯವಾಗಿದ್ದು, ದಾನಾಬಾಯಿ ಗಂಡ ಬಾಲಚಂದ್ರ ಚವ್ಹಾಣ ಇವಳಿಗೆ ಎಡಗೈ ಮೊಳಕೈ ಹತ್ತಿರ ಭಾರೀ ಗುಪ್ತಗಾಯವಾಗಿ ಕೈ ಮುರಿದಂತೆ ಆಗಿರುತ್ತದೆ ಮತ್ತು ಬಲಭುಜಕ್ಕೆ ಗುಪ್ತಗಾಯವಾಗಿರುತ್ತದೆ. ಲಕ್ಷ್ಮೀಬಾಯಿ ಗಂಡ ಬಾಲಚಂದ್ರ ಚವ್ಹಾಣ ಇವಳಿಗೆ ತಲೆಯ ಬಲಭಾಗಕ್ಕೆ, ಬಲಭುಜಕ್ಕೆ ಹಾಗೂ ಬಲಗೈ ಹಸ್ತದ ಮೇಲೆ ರಕ್ತಗಾಯವಾಗಿರುತ್ತದೆ. ಸುನಿತಾ ತಂದೆ ದೇವರಾಜ ಚವ್ಹಾಣ ಇವಳಿಗೆ ಬಲಕಪಾಳಕ್ಕೆ ಹಾಗೂ ಎಡಗೈಗೆ ತರಚಿದ ಗಾಯವಾಗಿರುತ್ತದೆ. ಮತ್ತು ಲಲಿತಾ ಗಂಡ ತಿರುಪತಿ ಚವ್ಹಾಣ ಇವಳಿಗೆ ಎರಡೂ ಕಪಾಳಕ್ಕೆ ತರಚಿದ ಗಾಯ, ಬಲಗೈ ಮೊಳಕೈ ಹತ್ತಿರ ಹಾಗೂ ಎಡಗಾಲಿಗೆ ತರಚಿದ ಗಾಯವಾಗಿರುತ್ತದೆ. ಮತ್ತು ಲಕ್ಷ್ಮೀಬಾಯಿ ಗಂಡ ಲಕ್ಷ್ಮಣ ಚವ್ಹಾಣ ಇವಳಿಗೆ ಬಲಗಾಲಿನ ಪಾದಕ್ಕೆ, ಹಣೆಗೆ ಹಾಗೂ ಕಪಾಳಕ್ಕೆ ತರಚಿದ ಗಾಯವಾಗಿರುತ್ತದೆ. ಮತ್ತು ರೇಣುಕಾಬಾಯಿ ಗಂಡ ಧನರಾಜ ಚವ್ಹಾಣ ಇವಳಿಗೆ ತಲೆಗೆ ಹಾಗೂ ಟೊಂಕಕ್ಕೆ ಒಳಪೆಟ್ಟು ಆಗಿರುತ್ತದೆ. ರುತಿಬಾಯಿ ಗಂಡ ನಾರಾಯಣ ಚವ್ಹಾಣ ಇವಳಿಗೆ ತಲೆಗೆ ರಕ್ತಗಾಯವಾಗಿ ಎರಡೂ ಮೊಳಕೈಗಳಿಗೆ, ಹಣೆಗೆ ಹಾಗೂ ಗದ್ದಕ್ಕೆ ತರಚಿದ ರಕ್ತಗಾಯವಾಗಿರುತ್ತದೆ. ಅಲ್ಲದೇ ನಾವು ಹೋಗುತ್ತಿದ್ದ ಅಟೋದ ಚಾಲಕನಾದ ದೇವರಾಜ ತಂದೆ ತುಳಜಾನಾಯ್ಕ ಚವ್ಹಾಣ ಈತನಿಗೂ ಸಹ ತಲೆಗೆ ರಕ್ತಗಾಯವಾಗಿ, ಎಡಗಡೆ ಕಿವಿಯ ಹತ್ತಿರ ತರಚಿದ ಗಾಯವಾಗಿ ಬಲಭುಜಕ್ಕೆ ಭಾರೀ ಗುಪ್ತಗಾಯವಾಗಿರುತ್ತದೆ. ನಮಗೆ ಗಾಯಗಳಾಗಿದ್ದರಿಂದ ನಮಗೆ ಅಪಘಾತ ಮಾಡಿದ ಖಾಸಗಿ ಬಸ್ಸಿನ ಕ್ಲೀನರ್ ಆದ ಪವನ್ ತಂದೆ ಚಿಕ್ಕಣ್ಣ ಸಾ|| ಹುಣಚೆಕಟ್ಟೆ ತಾ|| ಶಿರಾ ಈತನು ಹಾಗೂ ಬಸ್ಸಿನ ಚಾಲಕನು ಕೂಡಿಕೊಂಡು ಒಂದು ಖಾಸಗಿ ವಾಹನದ ಮೂಲಕ ಸಕರ್ಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಬಂದು ಚಿಕಿತ್ಸೆ ಪಡೆದುಕೊಂಡಿದ್ದು ಗಾಯಾಳುಗಳಲ್ಲಿ ಕೆಲವರಿಗೆ ಹೆಚ್ಚಿನ ರೀತಿಯಲ್ಲಿ ಗಾಯಗಳಾಗಿದ್ದರಿಂದ ಬಾಗಲಕೋಟೆ ಆಸ್ಪತ್ರೆಗೆ ಕಳುಹಿಸಿ ನಾನು ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ನಾವು ಹುಣಸಗಿ ರಸ್ತೆಯ ಮೇಲೆ ಹೋಗುತ್ತಿದ್ದ ಅಟೋ ನಂ ಕೆಎ 33 5828 ನೇದ್ದಕ್ಕೆ ಹಿಂದಿನಿಂದ ಖಾಸಗಿ ಬಸ್ ನಂ ಕೆಎ 51 ಎಎಫ್ 0518 ನೇದ್ದರ ಚಾಲಕನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಅಟೋ ಪಲ್ಟಿಯಾಗಿ ಗಾಯಗಳಾಗಿದ್ದು ಅಪಘಾತ ಮಾಡಿದ ಬಸ್ಸಿನ ಚಾಲಕನ ಹೆಸರು ವಿಳಾಸ ತಿಳಿದುಕೊಳ್ಳಲಾಗಿ ತಿಪ್ಪಣ್ಣ ತಂದೆ ಭೀಮಜೆಟ್ಟೆಪ್ಪ ಶೇಖಸಿಂಧಿ ಸಾ|| ಡಿಗ್ಗಿ ತಾ|| ಶಹಾಪೂರ ಅಂತಾ ತಿಳಿದು ಬಂದಿದ್ದು ಅಪಘಾತಪಡಿಸಿದ ಖಾಸಗಿ ಬಸ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 86/2022 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 34/2022 78(3) ಕೆ.ಪಿ.ಆ್ಯಕ್ಟ್: ಇಂದು ದಿನಾಂಕ: 25/05/2022 ರಂದು 8.15 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಪಿಎಸ್ಐ (ಕಾ.ಸು) ರವರು ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 25/05/2022 ರಂದು ಶೆಟ್ಟಿಕೇರಾ ಗ್ರಾಮದ ಆಂಜನೇಯ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ಬಾಲಪ್ಪ ತಂದೆ ಹಣಮಂತ ಮೂಲಿಮನಿ, ವ:40ವರ್ಷ, ಜಾ:ಒಡ್ಡರ, ಉ:ಕೂಲಿ ಕೆಲಸ, ಸಾ:ಶೆಟ್ಟಿಕೇರಾ, ತಾ:ಶಹಾಪೂರ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 6.50 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 2410/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 34/2022 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ:35/2022 ಕಲಂ, 15(ಎ), 32(3) ಕೆ.ಇ ಯಾಕ್ಟ್ ಇಂದು ದಿನಾಂಕ: 25/05/2022 ರಂದು 10.30 ಪಿಎಮ್ ಕ್ಕೆ ಶ್ರೀ. ಅಯ್ಯಪ್ಪ ಪಿಎಸ್.ಐ (ಕಾ.ಸು) ಗೋಗಿ ಪೊಲೀಸ ಠಾಣೆ ರವರು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶವೆನೆಂದರೆ, ಮಹಲ್ ರೋಜಾ ಗ್ರಾಮದ ಯಲ್ಲಮ್ಮ ಕ್ರಾಸ್ ಹತ್ತಿರ ಆರೋಪಿತನು ತನ್ನ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಯಾವುದೆ ಪರವಾನಿಗೆ ಇಲ್ಲದಯೇ, ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡಲು ಅನೂಕೂಲ ಮಾಡಿಕೊಟ್ಟಿದ್ದು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರೋಂದಿಗೆ ದಾಳಿ ಮಾಡಿದ್ದು ದಾಳಿಯಲ್ಲಿ ಆರೋಪಿ ರಾಜೇಶಗೌಡ ತಂದೆ ಂಪರಮೇಶ್ವರ ತಂದೆ ರಾಮಣ್ಣ ರತ್ತಾಳ, ಸಾ:ಮಹಲ್ ರೋಜಾ, ತಾ:ಶಹಾಪೂರ ಈತನನ್ನು ವಶಕ್ಕೆ ಪಡೆದುಕೊಂಡಿದ್ದು ಸ್ಥಳದಲ್ಲಿ ದೊರೆತ ಮುದ್ದೆಮಾಲನ್ನು 8.50 ಪಿಎಮ್ ದಿಂಸ 9.50 ಪಿಎಮ್ ವರೆಗೆ ಜಪ್ತಿ ಪಡಿಸಿಕೊಂಡು ಮುದ್ದೆಮಾಲು, ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಠಾಣೆಗೆ ಬಂದು ವರದಿಯನ್ನು ಕೊಟ್ಟು ಮುಂದಿನ ಕ್ರಮ ಕುರಿತು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ನಂ: 35/2022 ಕಲಂ, 15(ಎ) 32(3) ಕೆ.ಇ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.