ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26-06-2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 93/2021 ಕಲಂ 379 ಐಪಿಸಿ : ಇಂದು ದಿನಾಂಕ 25-06-2021 ರಂದು 9-30 ಎ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ದೀಪಕ ತಂದೆ ಮಾಹೇದವಪ್ಪಾ ಯಲಸತ್ತಿ ವಯಾ:26 ಉ: ಬಿಜಿನೆಸ್ ಜಾ: ಅಗಸರ ಸಾ: ವಿವೇಕಾನಂದ ನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಫಿರ್ಯಾಧಿ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನಾನು ಯಾದಗಿರಿಯ ಗಂಜ್ ಏರಿಯಾದಲ್ಲಿ ಗುರು ಪೆಟ್ರೊಲಿಯಂ ಎಂಬ ಹೆಸರಿನ ಪೆಟ್ರೋಲ್ ಬಂಕ್ ಪ್ರಾರಂಭ ಮಾಡುತ್ತಿದ್ದು ಅದರ ಕೆಲಸ ಇನ್ನೂ ಚಾಲ್ತಿಯಲ್ಲಿರುತ್ತದೆ. ಸದರಿ ಪೆಟ್ರೋಲ್ ಬಂಕ್ದಲ್ಲಿ ರಾಜು ತಂದೆ ಶ್ಯಾಮ್ ಯಲಸತ್ತಿ ಸಾ:ಯಲಸತ್ತಿ ಹಾ:ವ: ಯಾದಗಿರಿ ಇತನು ಸುಪರವೈಜರ ಅಂತಾ ಕೆಲಸ ಮಾಡುತ್ತಾನೆ. ಮತ್ತು ಸದ್ದಾಂ@ ಮಹ್ಮದ್ ಹಾಜೀ ತಂದೆ ಮೌಲಾನಾ ಇತನು ವಾಚಮೇನ್ ಕೆಲಸ ಮಾಡುತ್ತಾನೆ. ನಾನು ದಿನಾಲು ಬೆಳಗ್ಗೆ ಪೆಟ್ರೋಲ್ ಬಂಕ್ ಹೋಗಿ ರಾತ್ರಿ 8 ಗಂಟೆ ಸುಮಾರಿಗೆ ಮರಳಿ ಮನೆಗೆ ಬರುತ್ತೆನೆ. ಪೆಟ್ರೊಲಿಯಮ್ ಕಂಪನಿ ನಿಯಮದ ಪ್ರಕಾರ ನಾನು ಕಳೆದ 4-5 ತಿಂಗಳುಗಳ ಹಿಂದೆ 4 ಸಾವಿರ ಲೀಟರ್ ಡಿಸೈಲ್ ಖರೀಧಿ ಮಾಡಿದ್ದು ಇರುತ್ತದೆ. ಪೆಟ್ರೋಲ್ ಬಂಕ್ ಇನ್ನೂ ಪ್ರಾರಂಭವಾಗದ ಕಾರಣ ಡಿಸೈಲ್ ಮಾರಾಟವಾಗದೇ ಹಾಗೇ ಶಿಲ್ಕಿನಲ್ಲಿತ್ತ್ತು. ಹೀಗಿದ್ದು ದಿನಾಂಕ 23-06-2021 ರಂದು ಬೆಳಗ್ಗೆ ನಾನು ಮನೆಯಿಂದ ಎಂದಿನಂತೆ ನಮ್ಮ ಪೆಟ್ರೋಲ್ ಬಂಕಗೆ ಹೋದೇನು. ನಮ್ಮ ಬಂಕಿನಲ್ಲಿ ಕೆಲಸ ಮಾಡುವ ಸುಪರವೈಜರ್ ರಾಜು ತಂದೆ ಶ್ಯಾಮ್ ಯಲಸತ್ತಿ ಇವರು ಇದ್ದರು. ಅದರಂತೆ ಬಂಕಿನ ಆವರಣದಲ್ಲಿ ಮನೆ ಕಟ್ಟುತ್ತಿದ್ದು ಅಲ್ಲಿ ಮಲ್ಲಪ್ಪಾ ಮತ್ತು ವೆಂಕಟೇಶ ಗೌಂಡಿ ಇಬ್ಬರೂ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಕೆಲಸ ಮಾಡುತ್ತಿದ್ದ ಮಲ್ಲಪ್ಪಾ ಇತನು ಮೂತ್ರ ವಿಸರ್ಜನೆಗೆ ಹೋದಾಗ ಅವನಿಗೆ ಬಂಕ ಪಕ್ಕದಲ್ಲಿ ಡಿಸೈಲಿನ ವಾಸನೆ ಬಂದಿದ್ದು ಮತ್ತು ಅಲ್ಲಿ ಡಿಸೈಲ್ ಚಲ್ಲಾಡಿದ ಬಗ್ಗೆ ತಿಳಿಸಿದಾಗ ನಾವೇಲ್ಲರೂ ಕೂಡಲೇ ಅಲ್ಲಿಗೆ ಹೋಗಿ ನೋಡಿದೇವು ಅಲ್ಲಿ ಡಿಸೈಲ್ ಚಲ್ಲಾಡಿದ್ದು ವಾಸನೆ ಬರುತ್ತಿತ್ತು. ಆಗ ನಮಗೆ ಸಂಶಯ ಬಂದ ಕಾರಣ ಡಿಸೇಲ್ ಚಕ್ಕ ಮಾಡುವ ಪೈಪಿದಿಂದ ಟ್ಯಾಂಕಿನಲ್ಲಿದ್ದ ಡಿಸೈಲ್ ಗೇಜ್ ಚಕ್ಕ ಮಾಡಲಾಗಿ ಟ್ಯಾಂಕಿನಲ್ಲಿದ್ದ 4 ಸಾವಿರ ಲೀಟರ್ ಡಿಸೈಲ್ ಪೈಕಿ ಕೇವಲ ಎರಡು ಸಾವಿರ ಲಿಟರಿನಷ್ಟು ಡಿಸೈಲ್ ಶಿಲ್ಕಿನಲ್ಲಿದ್ದು ಇನ್ನೂಳಿದ ಸುಮಾರು ಎರಡು ಸಾವಿರ ಲೀಟರ ಡಿಸೇಜಲನ್ನು ಯಾರೋ ಕಳ್ಳರು ಡಿಸೇಲ್ ಗೇಜ್ ಚಕ್ಕ ಮಾಡುವ ಪೈಪ್ ಮುಖಾಂತರ ಕಳುವು ಮಾಡಿಕೊಂಡು ಹೋಗಿದ್ದಾರೆ ಖಚಿತವಾಯಿತು. ನಾವು ಹಾಗೂ ನಮ್ಮ ವಾಚಮೇನ್ ಜನರು ಎಲ್ಲಾ ಕಡೆಗೆ ನಮಗೆ ಸಂಶಯ ಬಂದ ಕಡೆಗೆ ಹೋಗಿ ಹುಡುಕಾಡಿದ್ದು ನಮಗೆ ಯಾವುದೇ ಮಾಹಿತಿ ಸಿಗಲಿಲ್ಲಾ. ಈ ಘಟನೆಯು ದಿನಾಂಕ 19-06-2021 ರಂದು ರಾತ್ರಿ 11 ಗಂಟೆಯಿಂದ ದಿನಾಂಕ 23-06-2021 ರಂದು ಬೆಳಗ್ಗೆ 6 ಗಂಟೆಯ ಮಧ್ಯದಲ್ಲಿ ಜರುಗಿದ್ದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಎರಡು ಸಾವಿರ ಲೀಟರ ಡಿಸೈಲಿನ ಅಂದಾಜು ಕಿಮ್ಮತ್ತು 1,90.000 (ಒಂದು ಲಕ್ಷ್ಯ ತೊಂಬತ್ತು ಸಾವಿರ) ರೂಪಾಯಿ ಆಗಬಹುದು. ಈ ಬಗ್ಗೆ ನಾವು ಮನೆಯಲ್ಲಿ ಮತ್ತು ಪೆಟ್ರೊಲಿಯಮ್ ಕಂಪನಿಯವರ ಸಂಗಡ ವಿಚಾರ ಮಾಡಿ ಈಗ ತಡವಾಗಿ ಠಾಣೆಗೆ ಬಂದಿದ್ದು ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ: 93/2021 ಕಲಂ 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 146/2021 ಕಲಂ 341, 323, 504, 506 ಸಂ 34 ಐ.ಪಿ.ಸಿ : ಇಂದು ದಿನಾಂಕ 25/06/2021 ರಂದು, ಮಧ್ಯಾಹ್ನ 15-00 ಗಂಟೆಗೆ ಫಿರ್ಯಾದಿ ಶ್ರೀ ಪರಶುರಾಮ ತಂದೆ ಮಲ್ಲಪ್ಪ ಗುಜಲೋರ, ವಯಸ್ಸು 28 ವರ್ಷ, ಜಾತಿ ಪ.ಜಾತಿ(ಮಾದಿಗ), ಉಃ ಕೂಲಿ ಕೆಲಸ, ಸಾಃ ಕೊಂಗಂಡಿ ತಾಃ ಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 22/06/2021 ರಂದು, ನಾನು ಮತ್ತು ನನ್ನ ಹೆಂಡತಿ ರೇಣುಕಮ್ಮ ನಮ್ಮ ಮನೆಯ ಅಂಗಳದಲ್ಲಿ ಮಲಗಿಕೊಂಡಿದ್ದು, ರಾತ್ರಿ 11-45 ಗಂಟೆಯ ಸುಮಾರಿಗೆ ಮೂತ್ರ ವಿಸರ್ಜನೆ ಮಾಡಲು ಎದ್ದಾಗ ನಮ್ಮೂರ ಅಳಿಯನಾದ ಪ್ರಭುಲಿಂಗ ತಂದೆ ಹಣಮಂತ ಕೆರಿಕೋಳಿ ಸಾಃ ಸಿದ್ದಾಪೂರ ಈತನು ನಮ್ಮ ಮನೆಯ ಹತ್ತಿರ ಬಂದು ನಿಂತುಕೊಂಡಿದ್ದನು ಮಾತನಾಡಿಸಿದರು ಮಾತನಾಡದೇ ಗಪ್-ಚುಪ್ ಹೋದನು. ದಿನಾಂಕ 23/06/2021 ರಂದು ಮುಂಜಾನೆಯ ಸುಮಾರಿಗೆ ಮೌನೇಶ ತಂದೆ ಕಾಶಪ್ಪ ನಂದಳ್ಳಿ ಈತನಿಗೆ ನಿಮ್ಮ ಮಾವ ಪ್ರಭುಲಿಂಗ ಈತನು ರಾತ್ರಿವೇಳೆಯಲ್ಲಿ ನಮ್ಮ ಮನೆಯ ಹತ್ತಿರ ಬಂದು ನಿಂತುಕೊಂಡಿದ್ದನು. ಮಾತನಾಡಿಸಿದರು ಮಾತನಾಡದೇ ಹಾಗೆ ಹೋಗಿರುತ್ತಾನೆ ಆ ರೀತಿ ರಾತ್ರಿವೇಳೆಯಲ್ಲಿ ಬರುವುದು ಸರಿಯಲ್ಲ ಅಂತ ಹೇಳಿದ್ದಕ್ಕೆ ಮೌನೇಶನು ನಾನು ನಮ್ಮ ಮಾವನಿಗೆ ವಿಚಾರಿಸುತ್ತೇನೆ ಅಂತ ಹೇಳಿದ್ದನು.ದಿನಾಂಕ 23/06/2021 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಚಿಕ್ಕಪ್ಪ ಶರಣಪ್ಪ ಗುಜಲೋರ ಇಬ್ಬರೂ ಕೂಡಿ ಮೌನೇಶ ನಂದಳ್ಳಿ ಇವರ ಕಿರಾಣಿ ಅಂಗಡಿಯ ಮುಂದೆ ರೋಡಿನ ಮೇಲೆ ನಡೆದುಕೊಂಡು ಹೋಗುತಿದ್ದಾಗ, ಎಸ್.ಟಿ ಜನಾಂಗದ 1) ಪ್ರಭುಲಿಂಗ ತಂದೆ ಹಣಮಂತ ಕೆರಿಕೋಳಿ ಈತನು ನನಗೆ ಅಡ್ಡಗಟ್ಟಿ ತಡೆದು ನಿಲ್ಲಿಸಿ ಏ ಬೋಸ್ಡಿ ಮಗನೇ ನಾನು ಏನು ಮಾಡಿದ್ದೇನೆ ಅಂತ ನಮ್ಮ ಅಳಿಯ ಮೌನೇಶನಿಗೆ ಹೇಳಿದ್ದಿಯಾ ಅಂತ ನನ್ನ ಜೊತೆ ತಕರಾರು ಮಾಡುತಿದ್ದಾಗ ನಮ್ಮ ಚಿಕ್ಕಪ್ಪನು ರಾತ್ರಿವೇಳೆಯಲ್ಲಿ ಮನೆಯ ಹತ್ತಿರ ಬರುವುದು ತಪ್ಪಲ್ಲವೇನು ಅಂತ ಹೇಳಿದಕ್ಕೆ ನನ್ನ ಜೊತೆಗೆ ತೆಕ್ಕೆ ಕುಸ್ತಿ ಮಾಡಿ ನನಗೆ ಕೈಯಿಂದ ತಲೆಗೆ, ಬೆನ್ನಿಗೆ ಹೊಡೆಯುತಿದ್ದಾಗ ನಮ್ಮೂರ ಸಿದ್ದಪ್ಪ ತಂದೆ ಸಿದ್ದಲಿಂಗಪ್ಪ ಕರಿಗುಡ್ಡ ಮತ್ತು ರಂಗಪ್ಪ ತಂದೆ ಸಿದ್ದಲಿಂಗಪ್ಪ ಕರಿಗುಡ್ಡ ಇವರು ಜಗಳ ಬಿಡಿಸಿಕೊಳ್ಳಲು ಬಂದಾಗ ಪ್ರಭುಲಿಂಗನ ಸಂಬಂಧಿಕರಾದ ನಮ್ಮೂರ 2) ಮೌನೇಶ ತಂದೆ ಕಾಶಪ್ಪ ನಂದಳ್ಳಿ ವಯಸ್ಸು 3) ಬಸವರಾಜ ತಂದೆ ಚಂದ್ರಾಮಪ್ಪ ನಂದಳ್ಳಿ ವಯಸ್ಸು 23 ವರ್ಷ 4) ಕಿಟ್ಟಪ್ಪ ತಂದೆ ಕಾಶಪ್ಪ ನಂದಳ್ಳಿ ವಯಸ್ಸು 25 ವರ್ಷ ಇವರೆಲ್ಲರು ಕೂಡಿಕೊಂಡು ಬಂದು, ಜಗಳ ಬಿಡಿಸಿಕೊಳ್ಳಲು ಬಂದಿದ್ದ ಸಿದ್ದಪ್ಪ ಕರಿಗುಡ್ಡನಿಗೆ ಮೌನೇಶ ನಂದಳ್ಳಿ ಮತ್ತು ಕಿಟ್ಟಪ್ಪ ನಂದಳ್ಳಿ ಇಬ್ಬರೂ ಕೂಡಿ ಕೈಯಿಂದ ಬಲಭಾಗದ ಪಕ್ಕಡಿಗೆ, ಬಲಭಾಗದ ಕುತ್ತಿಗೆ, ತಲೆಗೆ ಮತ್ತು ಬೆನ್ನಿಗೆ ಹೊಡೆದಿರುತ್ತಾರೆ. ರಂಗಪ್ಪ ಕರಿಗುಡ್ಡನಿಗೆ ಬಸವರಾಜ ನಂದಳ್ಳಿ ಈತನು ಕೈಯಿಂದ ಬಲಭಾಗದ ಎದೆಗೆ, ಹೆಡಕಿಗೆ, ಎಡಭುಜದ ಮೇಲೆ ಹೊಡೆದಿರುತ್ತಾನೆ. ಆಗ ಜೊತೆಯಲ್ಲಿದ್ದ ನನ್ನ ಚಿಕ್ಕಪ್ಪ ಶರಣಪ್ಪ ಇವರು ಜಗಳ ಬಿಡಿಸಿಕೊಂಡರು. ನಮಗೆ ಹೊಡೆ ಬಡೆ ಮಾಡಿದವರೆಲ್ಲರೂ, ನನಗೆ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಈ ಜಗಳ ಇಷ್ಟಕ್ಕೆ ಮುಗಿದಿಲ್ಲ ಇನ್ನೂ ಮುಂದೆ ಇದೆ ಅಂತಾ ಹೇಳಿ ಹೋದರು. ನಾನು ಮತ್ತು ಸಿದ್ದಪ್ಪ ಕರಿಗುಡ್ಡ, ರಂಗಪ್ಪ ಕರಿಗುಡ್ಡ ಮೂರು ಜನರು ಸಣ್ಣ-ಪುಟ್ಟಗಾಯಗಳಾಗಿದ್ದರಿಂದ ಉಪಚಾರ ಪಡೆದುಕೊಂಡಿರುವುದಿಲ್ಲ ಸದ್ಯವು ನಮಗೆ ಉಪಚಾರದ ಅವಶಕತೆ ಇರುವುದಿಲ್ಲ. ಈ ಬಗ್ಗೆ ನನ್ನ ಕುಟುಂಬದವರ ಜೊತೆ ವಿಚಾರಣೆ ಮಾಡಿ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದೇನೆ. ಈ ಜಗಳವು ದಿನಾಂಕ 23/06/2021 ರಾತ್ರಿ 8-00 ಗಂಟೆಯಿಂದ 8-15 ಗಂಟೆಯ ವರೆಗೆ ಮೌನೇಶ ಈತನ ಕಿರಾಣಿ ಅಂಗಡಿಯ ಮುಂದೆ ಆಗಿರುತ್ತದೆ. ಕಾರಣ ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿದ ಮೇಲ್ಕಂಡ 4 ಜನರ ವಿರುದ್ಧ ಕ್ರಮಗೈಗೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 146/2021 ಕಲಂ 341, 323, 504, 506 ಸಂ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 97/2021 ಕಲಂ 392, ಸಂಗಡ 34 ಐಪಿಸಿ : ನಿನ್ನೆ ದಿನಾಂಕ 24.06.2021 ರಂದು ರಾತ್ರಿ 11:30 ಗಂಟೆಯ ಸುಮಾರಿಗೆ ಕಾಲಂ: 07 ರಲ್ಲಿಯ ಆರೋಪಿತರು ಕೆಎ-32-ಇ.ಎಮ್-9737 ನೇದ್ದರ ಮೇಲೆ ಹಂದರಕಿ ಕ್ರಾಸ್ಗೆ ಬಂದು ಮೋಟಾರು ಸೈಕಲ್ನ್ನು ಅಲ್ಲಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಿ ರೋಡಿಗೆ ಬಂದು ಬ್ಯಾರಿಕೇಡ್ಗಳನ್ನು ಹಾಕಿ ಸರಕಾರಿ ನೌಕರರಂತೆ ವತರ್ಿಸಿ ಟಿಪ್ಪರ ವಾಹನ ನಂಬರ ಕೆಎ-32-ಡಿ-9312 ನೇದ್ದವರಿಗೆ ತಾವು ಆರ್.ಟಿ.ಓ ಅಧಿಕಾರಿಗಳೆಂದು ಹೇಳಿ ಸದರಿ ವಾಹನದ ಚಾಲಕನಾದ ಫಿರ್ಯಾದಿಯ ಜೇಬಿಗೆ ಕೈ ಹಾಕಿ ಜೇಬಿನಲ್ಲಿದ್ದ 320/-ರೂ ಗಳನ್ನು ಕಸಿದಿಕೊಂಡು ಆ ವಾಹನದ ಹಿಂದೆ ಇರುವ ಮತ್ತೊಂದು ಟಿಪ್ಪರನ ಚಾಲಕನಿಗೆ ಹೆದರಿಸಿ ಆತನಿಂದ 200/- ರೂಗಳನ್ನು ಪಡೆದುಕೊಂಡಿದ್ದು ಹೀಗೆ ಒಟ್ಟು 520/- ರೂ ಸುಲಿಗೆ ಮಾಡಿದ್ದ ಬಗ್ಗೆ ಫಿರ್ಯಾದಿಯು ಖುದ್ದಾಗಿ ಠಾಣೆಗೆ ಹಾಜರಾಗಿ ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 97/2021 ಕಲಂ 392, ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ8ಕೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ. 98/2021 ಕಲಂ: 6.9.11 ಅಟಜ ಒಚಿಡಿಡಿಚಿರಜ ಖಜಣಡಿಚಿಟಿಣ ಂಛಿಣ-2006 : ದಿನಾಂಕ: 25.06.2021 ರಂದು 4.00 ಪಿಎಮ ಕ್ಕೆ ಶ್ರಿಮತಿ ರಾಧ ಜಿ ಮಣ್ಣೂರು ಸಿಡಿಪಿಓ ಯಾದಗಿರಿ ರವರು ಠಾಣೆಗೆ ಹಾಜರಾಗಿ ಸಲ್ಲಿಸಿದ ಪಿರ್ಯಾಧಿ ಅಜರ್ಿಯ ಸಾರಾಂಶವೆನೆಂದರೆ ದಿನಾಂಕ:06.06.2021 ರಂದು ಆರೋಪಿ ನಂ:1,2,3 ನೇದ್ದರು ಕೂಡಿ ಗೋಪಾಳಪೂರ ಗ್ರಾಮದ ನೊಂದ ಅಪ್ರಾಪ್ತ ಬಾಕಿಯ ಮನೆಯ ಮುಂದೆ ಆರೋಪಿ ನಂ:4 ನೇದ್ದವರ ಜೊತೆಗೆ ನರಸಮ್ಮ ತಂದೆ ಲಕ್ಷ್ಮಣ್ ಲೊಂಡೆನವರ ಇವಳಿಗೆ ಬಾಲ್ಯ ವಿವಾಹ ಮಾಡಿದ್ದು ಬಗ್ಗೆ ಸ್ಥಾನಿಕ ಪರಿಶೀಲನೆ ಮಾಡಿ ಪಿರ್ಯಾಧಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:98/2021 ಕಲಂ 6, 9. 11 ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 

ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ : 43/2021 78 (3) ಕೆ.ಪಿ ಯಾಕ್ಟ : ದಿನಾಂಕ:25/06/2021 ರಂದು 13.40 ಪಿ.ಎಮ್ ಕ್ಕೆ, ಶ್ರೀ.ಬಾಪುಗೌಡ ಪಿಎಸ್ಐ ಹುಣಸಗಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು ಏನೆಂದರೆ, ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ವಜ್ಜಲ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:43/2021 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆನಂತರಪಿಎಸ್ಐ(ಕಾ.ಸು) ಹುಣಸಗಿಪೊಲೀಸ್ಠಾಣೆರವರು ಸಾಯಂಕಾಲ 15.45 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 3650/- ರೂ.ಗಳು, 2 ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಆದೇಶ ನೀಡಿದ್ದು ಇರುತ್ತದೆ. ಆರೋಪಿತ ಹೆಸರು 1) ತಿಮ್ಮಪ್ಪ ತಂದೆ ಬಸಪ್ಪ ಮ್ಯಾಗೇರಿ ವಯ-34 ಜಾ:ಮಾದರ ಉ:ಮಟಕಾ ಬರೆಯುವದು ಸಾ:ವಜ್ಜಲ ತಾ:ಹುಣಸಗಿ ಜಿ:ಯಾದಗಿರ ಅಂತಾ ಇರುತ್ತಾನೆ.

 

ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ : 44/2021 78 (3) ಕೆ.ಪಿ ಯಾಕ್ಟ : ದಿನಾಂಕ:25/06/2021 ರಂದು 15.05 ಪಿ.ಎಮ್ ಕ್ಕೆ, ಶ್ರೀ. ಮಾಣಿಕರೆಡ್ಡಿ ಎಎಸ್ಐ ಹುಣಸಗಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು ಏನೆಂದರೆ, ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮನಟಗಿ ಗ್ರಾಮದ ಗ್ರಾಮ ದೇವತೆ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:44/2021 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆನಂತರ ಮಾಣಿಕರೆಡ್ಡ್ಡಿ ಎಎಸ್ಐ ಹುಣಸಗಿ ಪೊಲೀಸ್ ಠಾಣೆ ರವರು ಸಾಯಂಕಾಲ 17.00 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 1800/- ರೂ.ಗಳು, 2 ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಆದೇಶ ನೀಡಿದ್ದು ಇರುತ್ತದೆ. ಆರೋಪಿತ ಹೆಸರು 1) ಶಂಬು ತಂದೆ ಶರಣಪ್ಪ ಮಡಿವಾಳರ ವಯಾ-40 ಜಾತಿ:ಮಡಿವಾಳರ ಸಾ:ಕಾಮನಟಗಿ ತಾ:ಹುಣಸಗಿ ಜಿ:ಯಾದಗಿರ ಅಂತಾ ಇರುತ್ತಾನೆ.

 

ಕೊಡೇಕಲ್ ಪೊಲೀಸ್ ಠಾಣೆ
ಗುನ್ನೆ ನಂ. 38/2021 ಕಲಂ: 78(3) ಕೆ.ಪಿ ಆಕ್ಟ್ : ಇಂದು ದಿನಾಂಕ:25/06/2021 ರಂದು 11:40 ಎ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ತಾವು ದಿನಾಂಕ:25.06.2021 ರಂದು ಮುಂಜಾನೆ 10:00 ಎ.ಎಮ್ಕ್ಕೆ ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಕೊಡೆಕಲ್ಲ ಬೀಟ್ ಸಿಬ್ಬಂದಿಯಾದ ಯಲ್ಲಪ್ಪ ಹೆಚ್ಸಿ-117 ರವರ ಮೂಲಕ ಕೊಡೆಕಲ್ಲ ಗ್ರಾಮದ ಬಸ್ ನಿಲ್ದಾಣದ ಎದುರುಗಡೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮುಂಬಯಿ ಮಟಕಾ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಸದರಿ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಈ-ಮೇಲ್ ಮೂಲಕ ಕಳುಹಿಸಿದ್ದು ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ ಪ್ರತಿಯು ಈ-ಮೇಲ್ ಮುಖಾಂತರ 11:35 ಎಎಂಕ್ಕೆ ಠಾಣೆಗೆ ವಸೂಲಾಗಿದ್ದು ಕಾರಣ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಕೊಡೆಕಲ್ಲ ಪೊಲೀಸ್ ಠಾಣಾ ಗುನ್ನೆ ನಂ:38/2021 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
ಅಂಬ್ರೇಶ ತಂದೆ ನಿಜಲಿಂಗಪ್ಪ ಪಡಶೆಟ್ಟಿ ವ||38 ವರ್ಷ ಉ||ಕೂಲಿಕೆಲಸ ಜಾ||ಹಿಂದೂ ಲಿಂಗಾಯತ ಸಾ|| ಕೊಡೆಕಲ್ಲ ತಾ||ಹುಣಸಗಿ ಜಿ||ಯಾದಗಿರಿ.

ಇತ್ತೀಚಿನ ನವೀಕರಣ​ : 26-06-2021 02:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080