ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 26-06-2022
ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 97/2022, ಕಲಂ, 341, 323, 324, 504.506. ಸಂ. 34 ಐ ಪಿ ಸಿ: ಇಂದು ದಿನಾಂಕ: 25-06-2022 ರಂದು ಸಾಯಂಕಾಲ 06-30 ಗಂಟೆಗೆ. ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 25-06-2022 ರಂದು ಮಧ್ಯಾಹ್ನ 12-00 ಗಂಟೆಗೆ ನಮ್ಮ ಬಿಳು ಬಿದ್ದ ಹೊಲದಲ್ಲಿ ಆರೋಪಿತರೆಲ್ಲರು ಸೇರಿ ಬಿಳುಬಿದ್ದ ಹೊಲವನ್ನು ಜೆ.ಸಿ. ಬಿ ಯಿಂದ ಸ್ವಚ್ಚ ಮಾಡುತ್ತಿರುವಾಗ ಆಗ ನಾನು ನಮ್ಮ ತಂದೆ ಹೋಗಿ ಈ ಹೊಲದಲ್ಲಿ ನಮಗೂ ಕೂಡ ಪಾಲು ಬರುತ್ತದೆ ಅಂತಾ ಹೇಳಿದಾಗ ಅವರು ನಮ್ಮ ತಂದೆಗೆ ಅವರು ನೂಕಿಸಿಕೊಟ್ಟು ಕೆಳಗೆ ಬಿಳಿಸಿದ್ದು ಆಗ ನಾನು ಯಾಕೆ ಹೊಡೆಯುತ್ತಿರಿ ಅಂತಾ ಕೇಳಿದ್ದಕ್ಕೆ ನನಗೆ ಕೊಡಲಿ ಕಾವನಿಂದ ಕೈಗೆ ಹೊಡೆದು ಗುಪ್ತಗಾಯ ಮಾಡಿ ಇನ್ನೊಂದು ಸಲ ಈ ಹೊಲದ ತಂಟೆಗೆ ಬಂದರೆ ನಿಮಗೆ ಜೀವ ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ
ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 106/2021 ಕಲಂ: 143, 147, 148, 323, 326, 504, 506ಸಂಗಡ 149 ಐಪಿಸಿ: ಇಂದು ದಿನಾಂಕ 24.06.2022 ರಂದು ರಾತ್ರಿ 8:30 ಗಂಟೆಗೆ ಆರೋಪಿತರೆಲ್ಲಾರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ, ಕಟ್ಟಿಗೆ, ಕೊಡಲಿ, ಬಡಿಗೆ ಹಿಡಿದುಕೊಂಡು ಕುಡಿದ ನಶೆಯಲ್ಲಿ ಬಂದು ಅವಾಚ್ಯ ಶಬ್ದಗಳಿಂದ ಬೈದು ವಿನಾಕಾರಣ ಫಿರ್ಯಾದಿಯ ತಂದೆಯೊಂದಿಗೆ ಜಗಳ ತೆಗೆದು ಫಿರ್ಯಾದಿಯ ತಂದೆಯ ತಲೆಗೆ ಕೊಡಲಿಯಿಂದ ತಲೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು ಅಲ್ಲದೇ ಬಿಡಿಸಲು ನಡುವೆ ಹೋದ ಫಿರ್ಯಾದಿಗೆ ಕೈಯಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಒದ್ದಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ತಡಮಾಗಿ ಠಾಣೆಗೆ ಬಂದು ನೀಡಿದ ಗಣಕೀಕೃತ ದೂರು ಅಜರ್ಿಯ ಸಾರಾಂಶದ ಮೆಲಿಂದ ನಾನು ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 106/2021 ಕಲಂ: 143, 147, 148, 323, 326, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 107/2022 ಕಲಂ 341, 323, 504, 506 ಐಪಿಸಿ:ಸದರಿ ಪ್ರಕರಣದಲ್ಲಿ ಪಿರ್ಯಾದಿಯು ತಮ್ಮ ಮನೆಯ ಕಡೆಗೆ ಹೋಗುತ್ತಿರುವಾಗ ಆರೋಪಿತನು ಪಿರ್ಯಾಧಿಗೆ ತಡೆದು ನಿಲ್ಲಿಸಿ ಸೂಳ್ಯಾ ಮಗನ್ಯಾ ನಮ್ಮ ಲಚ್ಯಾನಿಗೆ ನೀನು ಸುಳ್ಳದೊಂದು ಬೆಳೆ ಆಳಗಿದೆ ಅಂತಾ ಹೇಳುತ್ತಿದಿ ರಂಡಿ ಮಗನ್ಯಾ ಅಂತಾ ಅಂದು ಕೈಯಿಂದ ಪಿರ್ಯಾದಿಯ ಕಪ್ಪಾಳಕ್ಕೆ ಹೊಡೆದನು ಪಿರ್ಯಾಧಿಯ ತೆಕ್ಕಿಗೆ ಬಿದ್ದು ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾಧಿ ವಗೈರೆ ಸಾರಾಂಶ ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 104/2022 ಕಲಂ: 78 () ಕೆ.ಪಿ. ಕಾಯ್ದೆ : ಇಂದು ದಿನಾಂಕ: 25/06/2022 ರಂದು 1:30 ಪಿ.ಎಮ್ ಕ್ಕೆ ನಾನು ಠಾಣೆಯ ಎಸ್.ಹೆಚ್.ಡಿ. ಕರ್ತತ್ಯದಲ್ಲಿದ್ದಾಗ ಶ್ರೀ ಸುನೀಲ್ ಮೂಲಿಮನಿ ಪಿ.ಐ ಸಾಹೇಬರು ಒಬ್ಬ ಆರೋಪಿ, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ: 25/06/2022 ರಂದು 11 ಎ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಸುರಪೂರ ನಗರದ ಹಳೆ ಬಸ್ ನಿಲ್ದಾಣದ ಹತ್ತಿರ ಇರುವ ವಾಲ್ಮಿಕಿ ವೃತ್ತದ ಮುಂದುಗಡೆ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಹೊನ್ನಪ್ಪ ಸಿಪಿಸಿ-427 ಹಾಗೂ 2) ಹುಸೇನ್ ಸಿಪಿಸಿ-236 ಇವರಿಗೆ ವಿಷಯ ತಿಳಿಸಿ, ಹೊನ್ನಪ್ಪ ಸಿಪಿಸಿ-427 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೊನ್ನಪ್ಪ ಪಿಸಿ ರವರು ಇಬ್ಬರು ಪಂಚರಾದ 1) ಶ್ರೀ ಭೀಮಣ್ಣ ತಂದೆ ರಾಮಣ್ಣ ಹೆಳವರ್ ವ|| 25 ವರ್ಷ ಜಾ|| ಹೆಳವರ್ ಉ|| ಕೂಲಿ ಕೆಲಸ ಸಾ|| ಸತ್ಯಂಪೇಠ ಸುರಪೂರ, 2) ಶ್ರೀ ಮಲ್ಲಪ್ಪ ತಂದೆ ಪಿಡ್ಡಪ್ಪ ಹಳಿಸಗರ್ ವ|| 45 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಮಾಚಗುಂಡಾಳ ತಾ|| ಸುರಪೂರ ಇವರನ್ನು 11:30 ಎ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು, ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 11:45 ಎ.ಎಮ್ ಕ್ಕೆ ಠಾಣೆಯ ಜೀಪ್ ನಂ. ಕೆಎ-33 ಜಿ-0238 ನೇದ್ದರಲ್ಲಿ ಹೊರಟು 12:00 ಪಿ.ಎಮ್ ಕ್ಕೆ ಸುರಪೂರ ನಗರದ ಹಳೆ ಬಸ್ ನಿಲ್ದಾಣದ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಹಳೆ ಬಸ್ ನಿಲ್ದಾಣದ ಹತ್ತಿರ ಇರುವ ವಾಲ್ಮಿಕಿ ವೃತ್ತದ ಮುಂದುವಗಡೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 12:05 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಮರೆಣ್ಣಗೌಡ ತಂದೆ ದೇವಿಂದ್ರಪ್ಪಗೌಡ ಮಾಲಿಪಾಟೀಲ್ ವ|| 60 ವರ್ಷ ಜಾ|| ಕಬ್ಬಲಿಗ ಉ|| ಮೆಕ್ಯಾನಿಕ್ ಸಾ|| ಜಾಲಗಾರ ಓಣಿ ಸುರಪೂರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 2110=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು, ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 12:05 ಪಿ.ಎಮ್ ದಿಂದ 01:05 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು, ಸದರಿ ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ವರದಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂ 104/2022 ಕಲಂ: 78 (3) ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 112/2022 ಕಲಂ: 317 ಐಪಿಸಿ: ಇಂದು ದಿನಾಂಕ: 25/06/2022 ರಂದು 04-30 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀಮತಿ ತ್ರೀವೆಣಿ ಗಂಡ ಶಂಕರಪ್ಪ ವಯಾ: 50 ವರ್ಷ ಜಾ: ಲಿಂಗಾಯತ ಉ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಬೀವೃದ್ದಿ ಇಲಾಖೆ ಶಹಾಪೂರದಲ್ಲಿ ಮಹಿಳಾ ಮೇಲ್ವಿಚಾರಕರು ಸಾ: ಶಹಾಪೂರ ಇದ್ದು ಈ ಮೂಲಕ ಮಾನ್ಯರವರಲ್ಲಿ ಅಜರ್ಿ ಸಲ್ಲಿಸುವುದೇನಂದರೆ ಇಂದು ದಿನಾಂಕ: 25/06/2022 ರಂದು ಮದ್ಯಾಹ್ನ 02.00 ಗಂಟೆ ಸುಮಾರಿಗೆ ನನಗೆ ಮಾಹಿತಿ ಬಂದಿದ್ದೆನೆಂದರೆ ಶಹಾಪೂರ ನಗರದ ಹೊಸ ಬಸ್ ನಿಲ್ದಾಣದ ಒಳಗಡೆ ಶೌಚಾಲಯದ ಖುಚರ್ಿ ಹತ್ತಿರ (ಸಾರ್ವಜನಿಕ ಸ್ಥಳದಲ್ಲಿ) ಒಂದು ಹೆಣ್ಣು ಕೂಸು ಯಾರು ಬಿಟ್ಟು ಹೋಗಿದ್ದಾರೆ ಅಂತಾ ತಿಳಿಸಿದ ಕೂಡಲೇ ನಾನು ಮತ್ತು ಸಿಬ್ಬಂದಿಯಾದ ನಾಗರಾಜ ತಂದೆ ಬಾಗಪ್ಪ ವಯಾ: 24 ಉ: ಎಪ.ಡಿ.ಎ(ಶಿಶು ಅಭೀವೃದ್ದಿ ಯೋಜನಾಧಿಕಾರಿಗಳ ಕಛೇರಿ) ಶಹಾಪೂರ ಇಬ್ಬರೂ ಕೂಡಿ ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಅಲ್ಲಿ ಒಂದು ಹೆಣ್ಣು ಮಗು ಇದ್ದು, ಅದು ಅಂದಾಜು 45 ದಿನದ ಹೆಣ್ಣು ಮಗು ಇದ್ದು ಅದರ ವಾರಸುದುದಾರರು ಬಸ್ ನಿಲ್ದಾಣದಲ್ಲಿ ಕುಸಿನ ಬಗ್ಗೆ ವಿಚಾರಿಸಲಾಗಿ ಯಾವುದೆ ಮಾಹಿತಿ ದೊರೆತಿರುವುದಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ಇಬ್ಬರು ಕೂಡಿ ಠಾಣೆಗೆ ಬಂದು ಸದರಿ 45 ದಿನದ ಹೆಣ್ಣು ಮಗುವನ್ನು ತಾಯಿಯು ತನ್ನ ತಾಯಿತನವನ್ನು ಮರೆಮಾಚುವ ಉದ್ದೇಶದಿಂಧ ಸಂಪೂರ್ಣವಾಗಿ ತೊರೆದು ಬಿಡುವುದಕ್ಕಾಗಿ ಶಹಾಪೂರ ನಗರದ ಹೊಸ ಬಸ್ ನಿಲ್ದಾಣದಲ್ಲಿ ಅಂದಾಜು ಮದ್ಯಾಹ್ನ 01-00 ಗಂಟೆಯಿಂದ 01-30 ಗಂಟೆ ಮದ್ಯದ ಅವಧಿಯಲ್ಲಿ ಬಿಟ್ಟು ಹೋಗಿದ್ದು ಇರುತ್ತದೆ. ಕಾರಣ ಸದರಿ ಹೆಣ್ಣು ಮಗುವಿನ ತಾಯಿಯನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:112/2022 ಕಲಂ: 317 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 113/2022 ಕಲಂ 87 ಕೆ.ಪಿ ಆಕ್ಟ: ಇಂದು ದಿನಾಂಕ 25/06/2022 ರಂದು, ರಾತ್ರಿ 23-45 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ರಾಹುಲ್ ಪವಾಡೆ ಪಿ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ರವರು, 11 ಜನರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 25/06/2022 ರಂದು, ರಾತ್ರಿ 20-30 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ, ಶಹಾಪೂರದ ಬಾಪುಗೌಡ ನಗರದ ಪಬ್ಲಿಕ್ ಗಾರ್ಡನ್ ಮುಂದೆ ಇರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ಕೆಲವು ಜನರು ಲೈಟಿನ ಬೆಳಕಿನಲ್ಲಿ ಜೂಜಾಟ ಆಡುತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ, ಫಿಯರ್ಾದಿಯವರು ಪೊಲೀಸ್ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಶ್ರೀ ಬಾಬು ಹೆಚ್.ಸಿ 162, ನಾರಾಯಣ ಹೆಚ್.ಸಿ 49, ಮಂಜುನಾಥ ಪಿ.ಸಿ 73, ಧರ್ಮರಾಜ ಪಿ.ಸಿ 45, ಭೀಮನಗೌಡ ಪಿ.ಸಿ 402, ಸಿದ್ರಾಮಯ್ಯ ಪಿ.ಸಿ 258 ಮತ್ತು ಜೀಪ್ ಚಾಲಕ ರುದ್ರಗೌಡ ಎ.ಪಿ.ಸಿ 34 ರವರಿಗೆ ವಿಷಯ ತಿ ಭೀಮನಗೌಡ ಪಿ.ಸಿ 402 ರವರ ಮುಖಾಂತರ ಇಬ್ಬರೂ ಪಂಚರನ್ನು ಠಾಣೆಗೆ ಬರಮಾಡಿಕೊಂಡು, ಪಂಚರಿಗೆ ವಿಷಯ ತಿಳಿಸಿ, ರಾತ್ರಿ 21-10 ಗಂಟೆಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-0316 ನೇದ್ದರಲ್ಲಿ ಸ್ಥಳಕ್ಕೆ ಹೋಗಿ ರಾತ್ರಿ 21-30 ಗಂಟೆಗೆ ಜೂಜಾಟ ಆಡುತಿದ್ದವರ ಮೇಲೆ ದಾಳಿ ಮಾಡಿ ಜೂಜಾಟ ಆಡುತಿದ್ದ 11 ಜನರನ್ನು ಹಿಡಿದು ಅವರಿಂದ ನಗದು ಹಣ 1,20,600=00 ರೂಪಾಯಿ ಮತ್ತು ಜೂಜಾಟಕ್ಕೆ ಬಳಸಿದ 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ರಾತ್ರಿ 21-40 ಗಂಟೆಯಿಂದ 23-00 ಗಂಟೆಯ ವರೆಗೆ ದೇವಸ್ಥಾನದ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡಿದ್ದು ಸದರಿ 11 ಜನರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿಯರ್ಾದಿಯವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 113/2022 ಕಲಂ 87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.