ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 26-07-2022


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ:59/2022 ಕಲಂ:279, 304(ಎ) ಐಪಿಸಿ: ದಿನಾಂಕ:25/07/2022 ರಂದು ಮೃತನು ಗುಳಬಾಳ ಗ್ರಾಮಕ್ಕೆ ತನ್ನ ಹೆಂಡತಿ ಹತ್ತಿರ ಹೋಗಲು ತನ್ನ ಹಿರೋ ಹೋಂಡಾ ಸಿಡಿ ಡೀಲಕ್ಸ್ ಮೋಟಾರ್ ಸೈಕಲ್ ನಂ: ಸಿಟಿಎಮ್ 3108 ನೇದ್ದರ ಮೇಲೆ ಸಾಯಂಕಾಲ 6.00 ಗಂಟೆಯ ಸುಮಾರಿಗೆ ತಮ್ಮೂರಿನಿಂದ ಹೊರಟು, ಹುಣಸಗಿ-ತಾಳಿಕೋಟಿ ರಸ್ತೆಯ ಮೇಲೆ ಹುಣಸಗಿಯ ಸ್ಪಂದನ ಗ್ಯಾಸ್ ಗೋದಾಮ ಸಮೀಪ ರಸ್ತೆಯ ಮೇಲೆ ತಾನು ಚಲಾಯಿಸುವ ಮೊಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆಯ ಮೇಲೆ ಬಿದ್ದಿದ್ದು, ತಲೆಗೆ ಭಾರಿ ಒಳಪೆಟ್ಟಾಗಿ ಕಿವಿಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಫಿರ್ಯಾದಿಗೆ ವಿಷಯ ತಿಳಿದು ಹುಣಸಗಿಗೆ ಬಂದು ಮೃತನ ಶವವನ್ನು ನೋಡಿ ನಂತರ ಠಾಣೆಗೆ ಬಂದು ಹೇಳಿಕೆ ದೂರು ನೀಡಿದ್ದರ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 113/2022 ಕಲಂ. 279,338 ಐಪಿಸಿ:ದಿನಾಂಕ 24-07-2022 ರಂದು ರಾತ್ರಿ 9 ಗಂಟೆ ಸುಮಾರಿಗೆ ಮಲ್ಹಾರ ತಾಂಡಾದ ಆರೋಪಿ ರಮೇಶ ತಂದೆ ಗೋಪಾಲ ರಾಠೋಡ ಇತನು ತನ್ನ ಮೋಟಾರ ಸೈಕಲ್ ನಂ: ಕೆ.ಎ-33/ಎಕ್ಸ-4405 ನೆದ್ದರ ಮೇಲೆ ಗಾಯಾಳು ಸಂಜು ಹಾಗೂ ಲಿಂಗೇರಿ ತಾಂಡಾದ ಗೋವಿಂದ ತಂದೆ ಸೀತ್ಯಾ ಚವ್ಹಾಣ ಇವರನ್ನು ಕೂಡಿಸಿಕೊಂಡು ಲಿಂಗೇರಿ ತಾಂಡಾದಿಂದ ಚಂತನಳ್ಳಿ ತಾಂಡಾದ ಕಡೆಗೆ ಹೊರಟಾಗ ಮೈಲಾಪೂರ ಕ್ರಾಸ ದಾಟಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಒಮ್ಮೇಲೆ ಸ್ಕೀಡ್ ಮಾಡಿ ಅಪಘಾತ ಮಾಡಿದಾಗ ಈ ಅಪಘಾತದಲ್ಲಿ ಫಿರ್ಯಾಧೀ ಅಣ್ಣನಾದ ಸಂಜು ತಂದೆ ಭೀಮಾ ಚವ್ಹಾಣ ವಯಾ: 30 ಉ: ಒಕ್ಕಲುತನ ಜಾ: ಲಂಬಾಣಿ ಸಾ: ಲಿಂಗೇರಿ ತಾಂಡಾ ಇತನು ಭಾರಿ ಗಾಯಹೊಂದಿದ್ದು ಇರುತ್ತದೆ ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಫಿರ್ಯಾಧಿ ಸಾರಾಂಶವಿರುತ್ತದೆ.


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 120/2022 ಕಲಂ: 78() ಕೆ.ಪಿ. ಆಕ್ಟ್: ಇಂದು ದಿನಾಂಕ 25.07.2022 ರಂದು ಮಧ್ಯಾಹ್ನ 2:10 ಗಂಟೆಗೆ ಗುರುಮಟಕಲ್ ಪಟ್ಟಣದ ಶರಣು ಹೊಟೇಲ್ ಹತ್ತಿರ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ ಸಾಹೇಬರು ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಸಮಯ ಮಧ್ಯಾಹ್ನ 2:30 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವರ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 1065/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ದಿನಾಂಕ 25.07.2022 ರಂದು ಸಮಯ ಮಧ್ಯಾಹ್ನ 3:45 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಠಾಣೆ ಗುನ್ನೆ ನಂಬರ 120/2022 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 131/2022 ಕಲಂ: 78 (3) ಕೆಪಿ ಆಕ್ಟ್: ಇಂದು ದಿನಾಂಕ:25/07/2022 ರಂದು 06-30 ಪಿ.ಎಮ್ ಸರಕಾರಿ ತಪರ್ೆ ಪಿರ್ಯಾದಿ ಶ್ರೀ ಶ್ರೀನಿವಾಸ್ ವಿ ಅಲ್ಲಾಪೂರ ಪಿ.ಐ ಶಹಾಪೂರ ಪೊಲೀಸ ಠಾಣೆ ರವರು ಠಾಣೆಗೆ ಬಂದು ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ:25/07/2022 ರಂದು 04.00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಮಚಿಗಾರಗಡ್ಡಿಯ ಹನುಮಾನ ಗುಡಿ ಮುಂದುಗಡೆ ರಸ್ತೆ ಮೇಲೆ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಂದ 7730=00 ರೂಗಳು ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟಿ ಅ.ಕಿ.00=00 ಮತ್ತು ಒಂದು ಬಾಲ್ ಪೆನ್ ಅ.ಕಿ. 00=00 ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ 04.40 ಪಿ.ಎಮ್ ದಿಂದ 05:40 ಪಿ.ಎಮ್. ದವರೆಗೆ ಸ್ಥಳದಲ್ಲೆ ಕುಳಿತು ಪಂಚನಾಮೆಯನ್ನು ಕೈಕೊಂಡು ಠಾಣೆಗೆ ಬಂದು ವರದಿ ತಯ್ಯಾರಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು ಇರುತ್ತದೆ ಸದರಿ ವರದಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 131/2022 ಕಲಂ: 78(3) ಕೆ.ಪಿ ಯಾಕ್ಟ ಅಡಿಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 132/2022 ಕಲಂ 78 (3) ಕೆ.ಪಿ ಆಕ್ಟ್ : ಇಂದು ದಿನಾಂಕ 25/07/2022 ರಂದು, 19-30 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಶಾಮಸುಂದರ ಪಿ.ಎಸ್.ಐ. ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ 25/07/2022 ರಂದು, ಮಧ್ಯಾಹ್ನ 16-10 ಗಂಟೆಗೆ ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ, ಶಹಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಶಹಾಪೂರ ನಗರದ ಸಿ,ಬಿ, ಕಮಾನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾನೆ ಅಂತಾ ಖಚಿತ ಮಾಹಿತಿ ಬಂದಿರುತ್ತದೆ. ಆಗ ನಾನು ಪೊಲೀಸ್ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಬಾಬು ಹೆಚ್.ಸಿ.162. ಶರಣಪ್ಪ ಹೆಚ್.ಸಿ.164. ಭೀಮನಗೌಡ.ಪಿ.ಸಿ.402. ಧರ್ಮರಾಜ ಪಿ.ಸಿ.45. ರವರಿಗೆ ಮೇಲ್ಕಂಡ ಬಾತ್ಮಿಯ ವಿಷಯ ತಿಳಿಸಿ, ದಾಳಿ ಕುರಿತು ಹೋಗುವ ಸಂಬಂಧ ಠಾಣೆಯಲ್ಲಿ ಹಾಜರಿರಲು ತಿಳಿಸಿ, 16-20 ಗಂಟೆಗೆ ಭೀಮನಗೌಡ ಪಿ.ಸಿ.402. ರವರಿಗೆ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಕಳುಹಿಸಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ವ್ಯಕ್ತಿಗಳನ್ನು ಕರೆದುಕೊಂಡು ಬಂದು ನನ್ನ ಮುಂದೆ 16-30 ಗಂಟೆಗೆ ಹಾಜರ ಪಡಿಸಿದ್ದು, ನಾನು ಸದರಿ ಇಬ್ಬರೂ ವ್ಯಕ್ತಿಗಳ ಹೆಸರು ವಿಳಾಸ ವಿಚಾರಿಸಲು 1) ಶ್ರೀ ಸೋಮರಾಯ ತಂದೆ ಸಂಗಪ್ಪ ಅಣಬಿ ವ|| 50 ಜಾ|| ಪ.ಜಾತಿ ಉ|| ಕೂಲಿ ಸಾ|| ದಿಗ್ಗಿ ಅಗಿಸಿ ಶಹಾಪೂರ 2) ಶ್ರೀ ರೇವಣಸಿದ್ದಯ್ಯ ತಂದೆ ನಾಗಯ್ಯ ಡೆಂಗಿಮಠ ವ|| 44 ಜಾ|| ಜಂಗಮ ಉ|| ಒಕ್ಕಲುತನ ಸಾ|| ಜಾಲಗಾರ ಓಣಿ ಶಹಾಪೂರ ತಾಃ ಶಹಾಪೂರ ಜಿಃ ಯಾದಗಿರಿ. ಅಂತಾ ಹೇಳಿದ್ದು, ಸದರಿಯವರಿಗೆ ಮೇಲ್ಕಂಡ ಬಾತ್ಮಿಯ ವಿಷಯ ತಿಳಿಸಿ ದಾಳಿ ಕುರಿತು ಹೋಗುವುದಿದೆ ತಾವು ನಮ್ಮ ಜೊತೆಯಲ್ಲಿ ಬಂದು ಜಪ್ತಿ ಪಂಚನಾಮೆಯ ಪಂಚರಾಗಿ ಸಹಕರಿಸಬೇಕು ಅಂತಾ ಕೇಳಿಕೊಂಡ ಮೇರೆಗೆ ಪಂಚರಾಗಿ ನಮ್ಮ ಜೊತೆಯಲ್ಲಿ ಬರಲು ಒಪ್ಪಿಕೊಂಡರು.
ಮೇಲಾಧೀಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ಕುರಿತು ನಾನು ಮತ್ತು ಮೇಲ್ಕಂಡ ಪೊಲೀಸ್ ಸಿಬ್ಬಂದಿಯವರು ಹಾಗೂ ಪಂಚರು ಠಾಣೆಯ ಜೀಪ ನಂ ಕೆಎ-33 ಜಿ-0162. ನೇದ್ದರಲ್ಲಿ ಠಾಣೆಯಿಂದ 16-40 ಗಂಟೆಗೆ ಹೊರಟೇವು. ನೇರವಾಗಿ ಸಿ.ಬಿ ಕಮಾನ ಹತ್ತಿರ ಸ್ವಲ್ಪ ದೂರಲ್ಲಿ ಸಾಯಂಕಾಲ 16-50 ಗಂಟೆಗೆ ಹೋಗಿ ಜೀಪ್ ನಿಲ್ಲಿಸಿ ಅಲ್ಲಿಂದ ನಾವು ನಡೆದುಕೊಂಡು ಸಿ.ಬಿ ಕಮಾನ ಹತ್ತಿರ ಹೋಗಿ ನೀಗಾಮಾಡಿ ನೋಡಲಾಗಿ ಸಿ.ಬಿ ಕಮಾನ ಹತ್ತಿರ ಒಬ್ಬ ವ್ಯಕ್ತಿ ಕುಳಿತುಕೊಂಡು ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ನಂಬರ ಹತ್ತಿದವರಿಗೆ ಹಣ ಕೊಡುತ್ತೇನೆ ಮಟಕಾ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿಸಂಖೆಗಳನ್ನು ಬರೆದುಕೊಳ್ಳುತಿದ್ದನು. ಇದನ್ನು ಗಮನಿಸಿ ಸದರಿ ವ್ಯಕ್ತಿ ಮಟಕಾ ನಂಬರ ಬರೆದುಕೊಳ್ಳುತಿದ್ದ ಬಗ್ಗೆ ದೃಢಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ 17-00 ಗಂಟೆಗೆ ದಾಳಿ ಮಾಡಿದಾಗ ಮಟಕಾ ನಂಬರ ಬರೆಯಿಸಲು ಬಂದ ಜನರು ಓಡಿ ಹೋಗಿದ್ದು, ಮಟಕಾ ನಂಬರ ಬರೆದುಕೊಳ್ಳುತಿದ್ದ ವ್ಯಕ್ತಿ ದಾಳಿಯಲ್ಲಿ ನಮ್ಮ ಕೈಗೆ ಸಿಕ್ಕಿದ್ದು, ಸದರಿಯವನ ಹೆಸರು ವಿಳಾಸ ವಿಚಾರಿಸಲು ಸದ್ಗುರು ತಂದೆ ಶಿವಣ್ಣ ತಳಬಿಡಿ ವ|| 40 ಜಾ|| ಲಿಂಗಾಯತ ಉ|| ಮಟಕಾ ನಂಬರ ಬರೆದುಕೊಳ್ಳೂವುದು ಸಾ|| ಕನ್ಯಾಕೊಳ್ಳೂರ ತಾಃ ಶಹಾಪೂರ. ಜಿಃ ಯಾದಗಿರಿ ಅಂತಾ ಹೇಳಿದನು. ಈತನ ಹತ್ತಿರ 1) ನಗದು ಹಣ 1090=00 ರೂಪಾಯಿ ಇದ್ದು ಅವುಗಳನ್ನು ವಿಂಗಡನೆ ಮಾಡಿ ನೋಡಲಾಗಿ 500 ರೂಪಾಯಿ ಮುಖ ಬೆಲೆಯ 1 ನೋಟು, 50 ರೂಪಾಯಿ ಮುಖ ಬೆಲೆಯ 6 ನೋಟುಗಳು, 20 ರೂಪಾಯಿ ಮುಖ ಬೆಲೆಯ 10 ನೋಟುಗಳು, 10 ರೂಪಾಯಿ ಮುಖಬೆಲೆಯ 9 ನೋಟುಗಳು ಇದ್ದು, 2) ಒಂದು ಬಿಳಿ ಹಾಳೆ ಇದ್ದು ಅದರಲ್ಲಿ ಮಟಕಾ ನಂಬರ ಬರೆದುಕೊಂಡಿದ್ದು ಇರುತ್ತದೆ ಅ.ಕಿ 00-00. 3) ಒಂದು ಬಾಲ್ ಪೆನ್ ಸಿಕ್ಕಿದು,್ದ ಅ.ಕಿ 00-00 ಸದರಿಯವನಿಗೆ ವಿಚಾರಣೆ ಮಾಡಲಾಗಿ ಸಾರ್ವಜನಿಕರಿಂದ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ನಂಬರಗಳು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ಅಂಕಿ ಸಂಖೆಗಳನ್ನು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಇರುತ್ತವೆ ಅಂತಾ ಹೇಳಿ ಹಾಜರ ಪಡಿಸಿದನು. ಸದರಿ ಮುದ್ದೆಮಾಲುಗಳನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಪುರಾವೆ ಕುರಿತು ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೇಯು ಹನುಮಾನ ಗುಡಿಯ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆಯನ್ನು 17-00 ರಿಂದ 18-00 ಗಂಟೆಯವರೆಗೆ ಜಪ್ತಿ ಪಂಚನಾಮೆಮಾಡಿ. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದು ಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 18-30 ಗಂಟೆಗೆ ಬಂದು ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಒಬ್ಬ ಆರೋಪಿಯನ್ನು ಹಾಜರು ಪಡಿಸಿ ಒಂದು ವರದಿಯನ್ನು ತಯಾರಿಸಿ 19-30 ಗಂಟೆಗೆ ಮುಂದಿನ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿಯರ್ಾದಿಯವರ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 132/2022 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.


ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 116/2022 ಕಲಂ 379 ಐಪಿಸಿ : ಇಂದು ದಿನಾಂಕ:25/07/2022 ರಂದು ಮದ್ಯಾಹ್ನ 01:00 ಗಂಟೆಗೆ ಪಿಯರ್ಾದಿ ಮಂಜುನಾಥತಂದೆ ಬಸಣ್ಣಯಾದವ ವ|| 35 ವರ್ಷಜಾ|| ಯಾದವ ಉ|| ವ್ಯಾಪಾರ ಸಾ|| ದೇವತ್ಕಲ್ತಾ|| ಸುರಪರುಠಾಣೆಗೆ ಹಾಜರಾಗಿದೂರುಅಜರ್ಿ ಸಾರಾಂಶವೆನೆಂದರೆ, ಸುಮಾರು 12 ವರ್ಷಗಳಿಂದ ನಮ್ಮೂರದೇವತ್ಕಲ್ಗ್ರಾಮದಲ್ಲಿ ಶ್ರೀ ಮಲ್ಲಿಕಾಜರ್ುನ ಮೋಟರ್ರಿವೈಂಡಿಂಗ್ ವಕ್ರ್ಸಅಂಗಡಿಇಟ್ಟಿಕೊಂಡುಇರುತ್ತೇವೆ. ಸುಮಾರು 01 ತಿಂಗಳ ಹಿಂದೆ 23 ಮೋಟರ್ ಪಂಪಸೆಟ್ಗಳು ನಮ್ಮಅಂಗಡಿಯಲ್ಲಿರೈತರುಕೆಟ್ಟ ಮೋಟರ್ಗಳನ್ನು ರಿಪೇರಿಗೆತಂದುಇಟ್ಟಿರುತ್ತಾರೆ. ಅವುಗಳನ್ನು ನಾನು ಮತ್ತು ನನ್ನತಮ್ಮಂದಿಯರಾದ ವಿನೋದ, ನಾಗರಾಜ ಹಾಗೂ ಅಣ್ಣನಾದ ಮುತ್ತುರಾಜಎಲ್ಲರುಕೂಡಿ 10 ಮೋಟರ ಪಂಪಸೆಟ್ಗಳನ್ನು ರಿಪೇರಿ ಮಾಡಿದ್ದುಇನ್ನೂ 13 ರಿಪೇರಿ ಮಾಡುವ ಸಲುವಾಗಿ ಎಲ್ಲಾ 23 ಮೋಟರ್ ಪಂಪಸೆಟ್ಗಳು ಅಂಗಡಿಯ ಮುಂದೆಇಟ್ಟಿದ್ದುಇರುತ್ತದೆ. ಹಿಗಿದ್ದು ದಿನಾಂಕ:19/07/2022 ರಂದುರಾತ್ರಿ 10 ಗಂಟೆಗೆ ನಾನು ಮತ್ತುತಮ್ಮಂದಿಯರಾದ ವಿನೋದ, ನಾಗರಾಜ ಹಾಗೂ ಅಣ್ಣನಾದ ಮುತ್ತುರಾಜಎಲ್ಲರು ನಮ್ಮಅಂಗಡಿಯನ್ನು ಮುಚ್ಚಿಕೊಂಡು ಮನೆಗೆ ಹೊಗಿ, ಮರಳಿ ದಿನಾಂಕ:20/07/2022 ರಂದು ಮುಂಜಾನೆ 06:00 ಎ.ಎಂ ಕ್ಕೆ ಅಂಗಡಿಯ ಮುಂದೆ ನಾನು ಕಸ್ ಹೊಡೆಯಲು ಬಂದಾಗಅಂಗಡಿಯ ಮುಂದೆಇಟ್ಟಿದ್ದ ಮೋಟರ್ ಪಂಪಸೆಟ್ಗಳನ್ನು ಇರಲಿಲ್ಲ, ನಾನು ಗಾಬರಿಯಾಗಿ ನನ್ನತಮ್ಮಂದಿಯರಿಗೆ ಮತ್ತುಅಣ್ಣನಿಗೆ ಪೋನ್ ಮಾಡಿಅಂಗಡಿಗೆ ಬರಲು ಹೇಳಿದಾಗ ಅವರುಕೂಡಲೆಅಂಗಡಿ ಬಂದಿದ್ದುಅವರಿಗೆ ನಾನು ವಿಚಾರ ಮಾಡಿದಾಗಅವರಿಗೂಕೂಡಗೊತ್ತಾಗದಕಾರಣ ನಾನು ರೈತರಿಗೆ ವಿಚಾರ ಮಾಡಲಾಗಿಅವರುಕೂಡ ನಾವು ತಗೆದುಕೊಂಡು ಹೊಗಿರುವುದಿಲ್ಲ ಅಂತಾ ತಿಳಿಸಿದಾಗ, ನಾವೇಲ್ಲರು ಬೆನಕನಹಳ್ಳಿ, ಹೆಬ್ಬಾಳ, ಕಲ್ಲದೇವನಹಳ್ಳಿ, ವಜ್ಜಲ್, ಹುಣಸಗಿ, ತಾಳಿಕೋಟೆ, ದೇವಾಪೂರ, ತಿಂಥಣಿ ಮುಂತಾದಕಡೆಗೆ ಹುಡುಕಾಡಿದರೂ ನಾವು ಅಂಗಡಿಯ ಮುಂದೆಇಟ್ಟಿದ್ದರಿಪೇರಿ ಮೋಟರ್ ಪಂಪಸೆಟ್ಗಳು ಸಿಗದೆ ಇದ್ದುದರಿಂದಇಂದುತಡವಾಗಿಠಾಣೆಗೆ ಹಾಜರಾಗಿದೂರು ಸಲ್ಲಿಸುತಿದ್ದೆನೆ. ಕಾರಣ ದಿನಾಂಕ 19/07/2022 ರಂದುರಾತ್ರಿ 10:00 ಗಂಟೆಯಿಂದ ದಿನಾಂಕ:20/07/2022 ರಂದು ಮುಂಜಾನೆ 06:00 ಗಂಟೆಯ ಅವದಿಲ್ಲಿ ನಮ್ಮಅಂಗಡಿಯ ಮುಂದೆಇಟ್ಟಿದ್ದ 10 ಹೆಚ್ಪಿಯ 02 ಮೋಟರ್ ಪಂಪಸೆಟ್ಗಳು ಅ.ಕಿ 30,000/- ರೂ, 05 ಹೆಚ್ಪಿಯ-19 ಮೋಟರ್ ಪಂಪಸೆಟ್ಗಳು ಅಕಿ 1,90,000/- ರೂ, 02 ಹೆಚ್ಪಿಯ-02 ಮೋಟರ್ ಪಂಪಸೆಟ್ಗಳು ಅ.ಕಿ 20,000/- ರೂ ಹೀಗೆ ಒಟ್ಟು 23 ಮೋಟರ್ ಪಂಪಸೆಟ್ಗಳು, ಅಂದಾಜುಕಿಮ್ಮತ್ತು 2,40,000/- ರೂಪಾಯಿಕಿಮ್ಮತ್ತಿನರಿಪೇರಿಗಾಗಿಇಟ್ಟಿದ್ದ ಮೋಟರ್ ಪಂಪಸೆಟ್ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳುವಾದ ರಿಪೇರಿ ಮೋಟರ್ ಪಂಪಸೆಟ್ಗಳ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿಕೊಡಲು ವಿನಂತಿಅಂತಾಕೊಟ್ಟಅಜರ್ಿ ಸಾರಾಂಶ ಮೇಲಿಂದಠಾಣಾಗುನ್ನೆ ನಂ. 116/2022 ಕಲಂ: 379 ಐಪಿಸಿ ನೇದ್ದರಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೇನು.

ಇತ್ತೀಚಿನ ನವೀಕರಣ​ : 26-07-2022 01:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080