ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 26-10-2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 142/2021 ಕಲಂ. 143,147,323,324,448,504,506, ಸಂಗಡ 149 ಐ.ಪಿ.ಸಿ. : ದಿನಾಂಕ 25/10/2021 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಶರಣಪ್ಪ ತಂದೆ ರಾಮಣ್ಣ ಕಲ್ಲಪ್ಪನೋರ ಸಾಃ ಹತ್ತಿಕುಣಿ ಇವರು ಠಾಣೆಗೆ ಬಂದು ಅಜರ್ಿಕೊಟ್ಟಿದ್ದು , ಸದರಿ ಅಜರ್ಿಯ ಸಾರಾಂಶದ ಏನೆಂದರೆ ದಿನಾಂಕ 24/10/2021 ರಂದು ಸಂಜೆ 5:00 ಗಂಟೆಯ ಸುಮಾರಿಗೆ ಅದೇ ಹತ್ತಿಕುಣಿ ಗ್ರಾಮದವರರಾದ 1) ಹಣಮಂತ ತಂದೆ ಈರಪ್ಪ ಗಣಪೂರ 2) ರಾಮಣ್ಣ ತಂದೆ ಈರಪ್ಪ ಗಣಪೂರ 3) ಶರಣಮ್ಮ ಗಂಡ ಈರಪ್ಪ ಗಣಪೂರ 4) ದೊಡ್ಡ ಹಣಮಂತ ತಂದೆ ಸಿದ್ದಪ್ಪ ಗಣಪೂರ 5) ಸಾಬವ್ವ ಗಂಡ ದೊಡ್ಡ ದೇವಪ್ಪ ಗಣಪೂರ ಇವರೇಲ್ಲರೂ ಸೇರಿಕೋಂಡು ನಾನು ಮತ್ತು ನನ್ನ ತಾಯಿ ಮನೆಯಲ್ಲಿರುವಾಗ ಗುಂಪು ಕೂಡಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಎಲೆ ಸೂಳೆ ಮಕ್ಕಳೆ ನಿಮಗೆ ಜೀವಸಹಿತ ಬಿಡುವುದಿಲ್ಲ ನಿಮ್ಮನ್ನು ಕಲಾಸ ಮಾಡುತ್ತೆವೆ ಅಂತಾ ಬೈದು ನನ್ನ ತಾಯಿಗೆ ಎಳೆದಾಡಿ ಹಣಮಂತ ತಂದೆ ಈರಪ್ಪ ಗಣಪೂರ ಇತನು ಕಾಲಿನಿಂದ ಒದ್ದಿರುತ್ತಾನೆ ಶರಣಮ್ಮ,ಸಾಬವ್ವ,ದೊಡ್ಡ ಹಣಮಂತ ಇವರೆಲ್ಲರೂ ಸೇರಿ ಮನೆಯಲ್ಲಿ ಅಕ್ರಮವಾಗಿ ಪ್ರವೇಶಮಾಡಿ ಮನೆಯಲ್ಲಿ ಇದ್ದ ಸಾಮಾನುಗಳ ಚಲ್ಲಪಿಲ್ಲಿ ಮಾಡಿರುತ್ತಾರೆ.ನನಗೆ ಮತ್ತು ನನ್ನ ತಾಯಿಗೆ ಗುಪ್ತ ಗಾಯಗಳಾಗಿರುತ್ತವೆ ಊರಲ್ಲಿ ಇದ್ದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಎಂದು ಜೀವದ ಭಯ ಹಾಕಿರುತ್ತಾರೆ ಮತ್ತು ನೀವು ಊರು ಖಾಲಿ ಮಾಡಬೇಕು ಎಂದು ಹೇಳಿರುತ್ತಾರೆ ನನಗೆ ಮತ್ತು ನನ್ನ ತಾಯಿಗೆ ನಿಂದಿಸಿರುತ್ತಾರೆ.ಆದ್ದರಿಂದ ಇರೆಲ್ಲರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೂಂಡು ನನಗೆ ನ್ಯಾಯ ಒದಗಿಸಿಕೊಡಬೇಕೆಂದು ವಿನಂತಿ. ಈ ಜಗಳವನ್ನು ದೊಡ್ಡ ಬಸಪ್ಪ ತಂದೆ ಹಣಮಂತ ಎಲ್ಲಪ್ಪನೋರ,ಸಣ್ಣ ಬಸಪ್ಪ ತಂದೆ ಮಲ್ಲಯ್ಯ ಕಲ್ಲಪ್ಪನೋರ ಇವರು ಬಿಡಿಸಿರುತ್ತಾರೆ ಮನೆಯಲ್ಲಿ ವಿಚಾರಣೆ ಮಾಡಿ ತಡವಾಗಿ ಇಂದು ಠಾಣೆಗೆ ಬಂದು ದೂರು ಕೊಡಲು ತಡವಾಗಿದೆ ಆದ್ದರಿಂದ ಅವನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೆಕೆಂದು ವಿನಂತಿ. ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 142/2021 ಕಲಂ 143,147,323,448,504,506 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ. 166/2021 ಕಲಂ 498(ಎ), 306 ಸಂಗಡ 34 ಐಪಿಸಿ : ಸುಮಾರಿ 11 ತಿಂಗಳ ಹಿಂದೆ ಫಿರ್ಯಾದಿಯ ಮಗಳಾದ ಲಕ್ಷ್ಮಿ ಎಂಬಾಕೆಗೆ ಎ-1 ಈತನಿಗೆ ಕೊಟ್ಟು ಮದುವೆ ಮಾಡಿದ್ದು ಅವರ ದಾಂಪತ್ಯ ಜೀವನದಲ್ಲಿ 02 ತಿಂಗಳ ಗಂಡುವಿರುತ್ತದೆ. ಆ ಮಗುವು ಜನಿಸಿದಾಗಿನಿಂದ ಮಗುವಿಗೆ ಮತ್ತು ತಾಯಿ ಲಕ್ಷ್ಮಿಗೆ ಸಾಕಷ್ಟು ಸಲ ಆಸ್ಪತ್ರೆಗೆ ತೋರಿಸಿದ ಫಿರ್ಯಾದಿಯು ಎ-1 ಮತ್ತು ಎ-2 ರವರಿಗೆ ಕರೆದು ತನ್ನಮಗಳು ಲಕ್ಷ್ಮಿಯನ್ನ ಮತ್ತು ಮಗುವನ್ನು ಕರೆದುಕೊಂಡು ಹೋಗಿ ತೋರಿಸಿಕೊಳ್ಳುವಂತೆ ಹೇಳಿದ್ದರಿಂದ ಅವರು ಬಂದು ಬಾಣತಿ ಲಕ್ಷ್ಮಿಗೆ ನಿಮ್ಮ ತಂದೆಗೆ ಮೊದಲನೆಯ ಹೆರಿಗೆ ಮಾಡಿಸಲು ಆಗೋದಿಲ್ಲ ಬಿಕಾರಿಗಳಿದ್ದಾರೆ ನಿಮ್ಮಂತ ರೋಗಿಗಳು ಬದುಕುವುದಕ್ಕಿಂದ ಸಾಯುವುದೇ ಒಳ್ಳೆಯದೆಂದು ಮಾನಸೀಕವಾಗಿ ಹಿಂಸೆ ನೀಡಿದ್ದರಿಂದ ಮನನೊಂದ ಲಕ್ಷ್ಮಿಯು ಮನೆಯಲ್ಲಿಟ್ಟಿದ್ದ ಮಾತ್ರೆಗಳನ್ನು ಹಾಗೂ ಶೇವಿಂಗ್ ಲೋಶನ್ ಸೇವಿದ್ದು ಆಕೆಗೆ ಚಿಕಿತ್ಸೆ ಕುರಿತು ನಾರಾಯಣಪೇಠ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಅಲ್ಲಿಂದ ರೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿದರು ಸಹ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 24.10.2021 ರಂದು ರಾತ್ರಿ 8:20 ಗಂಟೆಗೆ ಮೃತಪಟ್ಟಿದ್ದು ಆ ಬಗ್ಗೆ ಇಂದು ದಿನಾಂಕ 25.10.2021 ರಂದು ಫಿರ್ಯಾದಿ ಖುದ್ದಾಗಿ ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಗುನ್ನೆ ನಂ. 166/2021 ಕಲಂ 498(ಎ), 306 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 168/2021 ಕಲಂ: 143 147 148 323 324,504, 506 ಸಂಗಡ 149 ಐಪಿಸಿ : ಇಂದು ದಿನಾಂಕಃ 25/10/2021 ರಂದು 7 ಪಿ.ಎಮ್ ಕ್ಕೆ ಠಾಣೆಯಲ್ಲಿರುವಾಗ ಶ್ರೀಮತಿ ಮಾಸಾಬೀ ಗಂಡ ವಾಹೀದಸಾಬ್ ಖುರೇಶಿ ವ|| 48 ವರ್ಷ ಸಾ|| ದಖನಿ ಮೋಹಲ್ಲಾ ಸುರಪೂರ ಇವರು ಠಾಣೆಗೆ ಬಂದು ಗಣಕೀಕರಿಸಿದ ಒಂದು ದೂರು ಅಜರ್ಿ ನೀಡಿದ್ದು, ಅಜರ್ಿ ಸಾರಾಂಶವೆನೆಂದರೆ, ನನಗೆ ಮೂರು ಜನ ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳಿರುತ್ತಾಳೆ. ಗಂಡು ಮಕ್ಕಳಲ್ಲಿ ಹೀರಿಯ ಮಗನಾದ ಆರೂನ್ ಈತನು ತನ್ನ ಹೆಂಡತಿ ಮಕ್ಕಳೊಂದಿಗೆ ಕೆಂಬಾವಿಯಲ್ಲಿ ವಾಸವಾಗಿದ್ದು, ನನ್ನ ಎರಡನೇ ಮಗನಾದ ಹುಸೇನ್ ಹಾಗೂ ಕಿರಿಯ ಮಗನಾದ ಶಕೀಲ್ ಇವರು ಆಟೋ ಚಲಾಯಿಸಿಕೊಂಡು ನಮ್ಮೊಂದಿಗೆ ವಾಸವಾಗಿರುತ್ತಾರೆ. ದಿನಾಂಕ:22-10-2021 ರಂದು ರಾತ್ರಿ 7-30 ಗಂಟೆ ಸುಮಾರಿಗೆ ನನ್ನ ಕಿರಿಯ ಮಗನಾದ ಶಕೀಲ್ ಈತನು ಎಂದಿನಂತೆ ತನ್ನ ಆಟೋ ಚಲಾಯಿಸಿಕೊಂಡು ಸುರಪುರ ಪಟ್ಟಣದ ದರಬಾರ ರೋಡ ಹತ್ತಿರ ಮನೆಗೆ ಬರುತ್ತಿರುವಾಗ ನಮ್ಮ ಅಣ್ಣತಮಕಿಯವನಾದ ಮೋಸಿನ್ ತಂದೆ ದಾವಲ್ಸಾಬ್ ಖುರೇಶಿ ಹಾಗೂ ಮುಜೀಪ್ ತಂದೆ ದಾವಲಸಾಬ್ ಖುರೇಶಿ ಇಬ್ಬರು ತಮ್ಮ ಮೋಟರಸೈಕಲ್ ಮೇಲೆ ಬಂದು ಒಮ್ಮೇಲೆ ನಮ್ಮ ಆಟೋಕ್ಕೆ ಕಟ್ ಹೊಡೆದು ಮುಂದೆ ಬಂದು ಸೈಡ್ ಕೊಡದೇ ಸ್ಪೀಡಾಗಿ ಚಲಾಯಿಸಿಕೊಂಡು ಮನೆಗೆ ಬಂದ ವಿಷಯ ನನ್ನ ಮಗ ಶಕೀಲ್ ಈತನು ತಿಳಿಸಿದನು. ಆಗ ನಾನು ಮತ್ತು ಮನೆಯವರು ಮುಂಜಾನೆ ಕೇಳಿದರಾಯಿತು ಅಂತಾ ಸುಮ್ಮನಿದ್ದೇವು. ಹೀಗಿದ್ದು ದಿನಾಂಕ: 22/10/2021 ರಂದು ರಾತ್ರಿ 8 ಗಂಟೆಗೆ ಸುಮಾರಿಗೆ ನಾನು, ನನ್ನ ಗಂಡನಾದ ವಾಹಿದಸಾಬ್ ಖುರೇಶಿ ಹಾಗೂ ನನ್ನ ಮಕ್ಕಳಾದ ಹುಸೇನ್, ಶಕೀಲ್ ಎಲ್ಲರೂ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಮಾತಾನಾಡುತ್ತಾ ಕುಳಿತುಕೊಂಡಾಗ ನಮ್ಮ ಅಣತಮಕಿಯವರಾದ1) ದಾವುಲಸಾಬ್ ತಂದೆ ಹುಸೇನಸಾಬ್ ಖುರೇಶಿ 2) ಮೇರಾಜ ಗಂಡ ದಾವುಲಸಾಬ್ ಖುರೇಶಿ 3) ಮೋಸಿನ್ ತಂದೆ ದಾವುಲಸಾಬ್ ಖುರೇಶಿ 4) ಮುಜೀಪ್ ತಂದೆ ದಾವುಲಸಾಬ್ ಖುರೇಶಿ 5) ಸಬಾ ತಂದೆ ದವುಲಸಾಬ್ ಖುರೇಶಿ 6) ತಬ್ಬೊ ತಂದೆ ದಾವುಲಸಾಬ್ ಖುರೇಶಿ 7) ಮಹಿಬೂಬಸಾಬ್ ತಂದೆ ಹುಸೇನಸಾಬ್ ಖುರೇಶಿ ಹಾಗೂ 8) ಇದ್ರೀಶ ತಂದೆ ಮಹಿಬೂಬಸಾಬ್ ಖುರೇಶಿ ಇವರೆಲ್ಲರೂ ತಮ್ಮ ಕೈಯಲ್ಲಿ ಕಲ್ಲು, ಬಡಿಗೆ, ರಾಡು ಹಿಡಿದುಕೊಂಡು ಬಂದವರೇ ಎನಲೇ ಶಕೀಲ್ ಸೂಳಿ ಮಗನೇ ನಮ್ಮ ಮೋಟರ್ ಸೈಕಲ್ಗೆ ಸೈಡ್ ಕೋಡುವುದಿಲ್ಲವೇನಲೇ ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ, ನನ್ನ ಗಂಡನಾದ ವಾಹೀದಸಾಬ ಈತನು ಸುಮ್ಮನೇ ನಮಗೆ ಯಾಕೇ ಬೈಯುತ್ತಿರಿ ನಿವೇ ನಮ್ಮ ಆಟೊಕ್ಕೆ ಮೋಟರ್ ಸೈಕಲ್ ಅಡ್ಡ ತಂದು ಸೈಡ್ ಕೊಡದೇ ಕಟ್ ಹೊಡೆದುಕೊಂಡು ಸ್ಪೀಡಾಗಿ ಬಂದಿದ್ದಿರಿ ಅಂತಾ ಹೇಳುತ್ತಿರುವಾಗ ಅವರಲ್ಲಿಯ ದಾವುಲಸಾಬ ಈತನು ತನ್ನ ಕೈಯಲ್ಲಿದ್ದ ಒಂದು ರಾಡಿನಿಂದ ನನ್ನ ಗಂಡನ ತೆಲೆಯ ಹಿಂದುಗಡೆ ಹೊಡೆದು ರಕ್ತಗಾಯ ಪಡಿಸಿದನು. ಮೋಸಿನ್ ಈತನು ಒಂದು ಕಲ್ಲಿನಿಂದ ನನ್ನ ಗಂಡನ ಎಡಗಡೆ ಹಣೆಗೆ, ಎಡ ಮೆಲಕಿನ ಕೆಳಗೆ ಹೊಡೆದು ರಕ್ತ ಗಾಯಪಡಿಸಿದನು. ಮಹಿಬೂಬಸಾಬ್ ಮತ್ತು ಮುಜೀಪ್ ಇವರು ನನ್ನ ಗಂಡನಿಗೆ ನೆಲಕ್ಕೆ ಕೆಡವಿ ಕಾಲಿನಿಂದ ಹೊಟ್ಟೆಗೆ, ಬೆನ್ನಿಗೆ ಒದೆಯುತ್ತಿದ್ದಾಗ ನಾನು ಮತ್ತು ಮಕ್ಕಳಾದ ಹುಸೇನ್ ಹಾಗೂ ಶಕೀಲ್ ಮೂವರು ಬಿಡಿಸಿಕೊಳ್ಳಲು ಹೋದಾಗ ಶಕೀಲ್ ಈತನಿಗೆ ಇದ್ರೀಶ ಈತನು ಬಡಿಗೆಯಿಂದ ಕುತ್ತಿಗೆಯ ಹತ್ತಿರ ಹಾಗೂ ಬಲಗೈ ರಟ್ಟೆಗೆ ಹೊಡೆದು ತರಚಿದ ಗಾಯ ಪಡಿಸಿದನು. ಹುಸೇನ್ ಈತನಿಗೆ ಮುಜೀಪ್ ಈತನು ಕೈಯಿಂದ ಎಡಗಣ್ಣಿನ ಕೆಳಗೆ ಗುದ್ದಿ ಗುಪ್ತಗಾಯಪಡಿಸಿದನು. ನನಗೆ ಮೇರಾಜ ಈಕೆಯು ತೆಲೆಯ ಹಿಂದುಗಡೆ ಬಡಿಗೆಯಿಂದ ಹೊಡೆದು ಗುಪ್ತಗಾಯ ಪಡಿಸಿದ್ದು, ಸಬಾ ಮತ್ತು ತಬ್ಬೋ ಇಬ್ಬರು ಕೈಯಿಂದ ಹೊಟ್ಟಿಗೆ, ಬೆನ್ನಿಗೆ ಗುದ್ದಿ, ಕಾಲಿನಿಂದ ಒದ್ದರು. ಆಗ ನಾವು ಚೀರಾಡುವ ಶಬ್ದ ಕೇಳಿ ನಮ್ಮ ಪಕ್ಕದ ಮನೆಯ ಇಸ್ಮಾಯಿಲ್ ತಂದೆ ದಾವಲಸಾಬ್ ಖುರೇಶಿ, ಅಜ್ಮೀರ ತಂದೆ ಅಲ್ಲಾಸಾಬ್ ಖುರೇಶಿ, ನಬಿಲಾಲ್ ತಂದೆ ಶಮರ್ುದ್ದೀನ್ ಖುರೇಶಿ, ಇಬ್ರಾಹಿಂ ತಂದೆ ಶಮರ್ುದ್ದೀನ್ ಖುರೇಶಿ ಇವರೆಲ್ಲರು ಬಂದು ನಮಗೆ ಹೊಡೆಯುವದನ್ನು ನೊಡಿ ಬಿಡಿಸಿಕೊಂಡರು. ಆಗ ಅವರೆಲ್ಲರೂ ಹೊಡೆಯುವದನ್ನು ಬಿಟ್ಟು ಇವತ್ತು ಇವರು ಬಂದು ಬಿಡಿಸದ್ದಕ್ಕೆ ನಿಮ್ಮ ಜೀವ ಉಳಿದಿದೆ, ಇಲ್ಲದ್ದಿದ್ದರೆ ನಿಮ್ಮ ಜೀವ ಸಹಿತ ಬಿಡುತ್ತಿರಲಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೊರಟು ಹೋದರು. ನಂತರ ಗಾಯಗೊಂಡ ನಾನು ಮತ್ತು ನನ್ನ ಗಂಡ ಉಪಚಾರ ಕುರಿತು ಸುರಪೂರ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡಿದ್ದು, ಹುಸೇನ್ ಮತ್ತ ಶಕೀಲ್ ಇವರಿಗೆ ಅಷ್ಟೇನು ಗಾಯಗಳಾಗಿರದ ಕಾರಣ ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ನನ್ನ ಗಂಡನಿಗೆ ಹೆಚ್ಚಿನ ಉಪಚಾರ ಕುರಿತು ವೈಧ್ಯರ ಸಲಹೆಯಂತೆ ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ, ನಂತರ ನಾವೆಲ್ಲ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ನಮಗೆ ಅವಾಚ್ಯ ಶಬ್ದಗಳಿಂದ ಬೈದು ರಾಡು ಬಡಿಗೆ ಹಾಗೂ ಕಲ್ಲಿನಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ, ಜೀವದ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

ಶಹಾಪೂರ ಪೊಲೀಸ ಠಾಣೆ
ಗುನ್ನೆ 183/2021 ಕಲಂ285, 336, 420, ಸಂ 149 ಐ.ಪಿ.ಸಿ : ಇಂದು ದಿನಾಂಕ:- 25-04-2021 ರಂದು 11-00 ಗಂಟೆಗೆ ಶ್ರೀ ಶ್ರೀನೀವಾಸ ವಿ. ಅಲ್ಲಾಪೂರ ಪಿ ಐ ಶಹಾಪೂರ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ವರದಿ, ಜಪ್ತಿ ಪಂಚನಾಮೆ, ಮುದ್ದೇಮಾಲು, ಹಾಗು 5 ಜನ ಆರೊಪಿತರಿಗೆ ಹಾಜರುಪಡಿಸಿದ್ದವುಗಳನ್ನು ಸ್ವಿಕರಿಸಿಕೊಂಡ ಸಾರಂಶವೆನೆಂದರೆ, ಇಂದು ದಿನಾಂಕ 25/10/2021 ರಂದು ಮುಂಜಾನೆ 06-30 ಗಂಟೆಗೆ ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ, ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ದೋರನಹಳ್ಳಿ ಗ್ರಾಮದ ಸಿದ್ಧಾರೂಡ ಮಠದ ಮುಂದೆ ಇರುವ ಶಹಾಪೂರ-ಯಾದಗಿರಿ ಮುಖ್ಯೆ ರಸ್ತೆಯ ಪಕ್ಕದಲ್ಲಿ ದೋರನಹಳ್ಳಿ ಗ್ರಾಮದ ಭೀಮರಾಯ ತಂದೆ ಬಸಣ್ಣ ಗುಂಟನೂರ ಈತನು ಅಕ್ರಮವಾಗಿ ಸರಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ಕಂಟೇನರ್ ವಾಹನ ಮುಖಾಂತರ ಬಯೋ ಡಿಸೇಲ್ ತರಿಸಿಕೊಂಡು ತನ್ನ ಅಂಗಡಿಯಲ್ಲಿರುವ ಮಷೀನ್ನಲ್ಲಿ ಸಂಗ್ರಹ ಮಾಡಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಠಾಣೆಯಲ್ಲಿ ಹಾಜರಿದ್ದ ಶ್ರೀ ಶಾಮಸುಂದರ ಪಿ.ಎಸ್.ಐ, ಶರಣಪ್ಪ ಹೆಚ್.ಸಿ 164, ಭೀಮನಗೌಡ ಪಿ.ಸಿ 402, ಧರ್ಮರಾಜ ಪಿ.ಸಿ 45 ಮತ್ತು ಜೀಪ್ ಚಾಲಕ ರುದ್ರಗೌಡ ಎ.ಪಿ.ಸಿ 34 ರವರಿಗೆ ವಿಷಯ ತಿಳಿಸಿ ಭೀಮಗೌಡ ಪಿ.ಸಿ 402 ರವರಿಗೆ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರಲು ತಿಳಿಸಿದೆನು. ಭೀಮನಗೌಡ ಪಿ.ಸಿ 402 ಇವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1) ಶ್ರೀ ಸಂಗಣ್ಣ ತಂದೆ ಮಾಂತಪ್ಪ ಮಲಗೊಂಡ ವ|| 32 ವರ್ಷ, ಜಾ|| ಗಾಣಿಗ, ಉ|| ಒಕ್ಕಲುತನ, ಸಾ|| ದೋರನಳ್ಳಿ. 2) ಶ್ರೀ ಸಾಬಣ್ಣ ತಂದೆ ಕಾಮಣ್ಣ ಕಾಮಣ್ಣ ಗೋಸಿ ವ|| 32 ವರ್ಷ, ಜಾ|| ಕುರುಬರ, ಉ|| ಒಕ್ಕಲುತನ, ಸಾ|| ದೋರನಳ್ಳಿ. ಇವರನ್ನು ಮುಂಜಾನೆ 07-00 ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ನನ್ನ ಮುಂದೆ ಹಾಜರ ಪಡಿಸಿದರು. ಆಗ ನಾನು ಪಂಚರಿಗೆ ಮೇಲ್ಕಂಡ ಬಾತ್ಮಿಯ ವಿಷಯ ತಿಳಿಸಿ ಪಂಚರಾಗಿ ನಮ್ಮ ಜೊತೆಯಲ್ಲಿ ಬರಲು ತಿಳಿಸಿದ್ದು, ಸದರಿಯವರು ಪಂಚರಾಗಿ ಬರಲು ಒಪ್ಪಿಕೊಂಡ ಮೇರೆಗೆ, ಅವರಿಗೆ ನೋಟಿಸ್ ನೀಡಿ ಒಪ್ಪಿಗೆ ಪತ್ರ ಪಡೆದುಕೊಂಡಿರುತ್ತೇನೆ. ಮೇಲಾಧೀಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಠಾಣೆಯಿಂದ ನಾನು ಮತ್ತು ಮೇಲ್ಕಂಡ ಪೊಲೀಸ್ ಅಧಿಕಾರಿ/ಸಿಬ್ಬಂದಿಯವರು ಹಾಗೂ ಪಂಚರು ಎಲ್ಲರೂ ಕೂಡಿ ಠಾಣೆಯ ಜೀಪ್ ನಂ ಕೆಎ-33-ಜಿ-0316 ನೇದ್ದರಲ್ಲಿ ಮುಂಜಾನೆ 07-15 ಗಂಟೆಗೆ ಹೊರಟೇವು. ರುದ್ರಗೌಡ ಎ.ಪಿ.ಸಿ 34. ಇವರು ನನ್ನ ಆದೇಶದಂತೆ ಜೀಪ್ ಚಲಾಯಿಸಿಕೊಂಡು ಹೊರಟರು, ದೋರನಹಳ್ಳಿ ಗ್ರಾಮದ ಸಿದ್ಧಾರೂಢ ಮಠದ ಹತ್ತಿರ ಮುಂಜಾನೆ 07-30 ಗಂಟೆಗೆ ಹೋಗಿ ಜೀಪ್ನಲ್ಲಿಯೇ ಕುಳಿತುಕೊಂಡು ನಿಗಾ ಮಾಡಿ ನೋಡಲಾಗಿ, ಒಬ್ಬ ವ್ಯಕ್ತಿಯು ತನ್ನ ಅಂಗಡಿಯ ಮುಂದೆ ಒಂದು ಕಂಟೇನರ್ ವಾಹನ ನಿಲ್ಲಿಸಿಕೊಂಡು ಆ ವಾಹನದಿಂದ ಪೈಪ್ ಮುಖಾಂತರ ತನ್ನ ಅಂಗಡಿಯಲ್ಲಿರುವ ಒಂದು ಬ್ಯಾರಲ್ ಸಂಗ್ರಹ ಮಾಡಿಕೊಂಡು ಮಷೀನ್ನಲ್ಲಿ ಬಯೋ ಡಿಸೇಲ್ ಅದನ್ನು ಸಾರ್ವಜನಿಕರಿಗೆ ಇದು ಡಿಸೇಲ್ ಇದೆ ಅಂತಾ ಸುಳ್ಳು ಹೇಳಿ ಮಾರಾಟ ಮಾಡುತಿದ್ದನ್ನು ಸುಮಾರು 5 ರಿಂದ 10 ನಿಮಿಷಗಳ ವರೆಗೆ ಕಾಯ್ದು ಗಮನಿಸಿದ ನಂತರ ನಾವೆಲ್ಲರೂ ಕೂಡಿ ಅಲ್ಲಿಗೆ ಮುಂಜಾನೆ 07-40 ಗಂಟೆಗೆ ಬಯೋ ಡಿಸೇಲ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲು 1) ಭೀಮರಾಯ ತಂದೆ ಬಸಣ್ಣ ಗುಂಟನೂರ ವಯಸ್ಸು 35 ವರ್ಷ, ಜಾತಿ ಕಬ್ಬಲಿಗ, ಉಃ ಬಯೋ ಡಿಸೇಲ್ ವ್ಯಾಪಾರ ಸಾಃ ದೋರನಹಳ್ಳಿ ತಾಃ ಶಹಾಪೂರ ಅಂತಾ ಹೇಳಿದನು. ಸದರಿಯವನಿಗೆ ಬಯೋ ಡಿಸೇಲ್ ಮಾರಾಟ ಮಾಡುತಿದ್ದ ಬಗ್ಗೆ ದಾಖಲೆಗಳ ಬಗ್ಗೆ ವಿಚಾರಿಸಿದ್ದು ಯಾವುದೇ ದಾಖಲೆಗಳು ಇರುವುದಿಲ್ಲ ಅಂತಾ ಹೇಳಿದನು. ಸದರಿಯವನು ಅಕ್ರಮವಾಗಿ ಮಾರಾಟ ಮಾಡುತಿದ್ದ ಬಗ್ಗೆ ದೃಢಪಟ್ಟಿದ್ದರಿಂದ ಪಂಚರ ಸಮಕ್ಷಮದಲ್ಲಿ ಸದರಿ ಬಯೋ ಡಿಸೇಲ್ ತುಂಬಿದ ಒಂದು ಅಶೋಕ್ ಲೈಲ್ಯಾಂಡ್ ಕಂಪನಿಯ ಕಂಟೇನರ್ ಲಾರಿ ನಂ. ಒಊ-46-ಃಈ-7810 ಇದ್ದು. ಅಂ.ಕಿ 5 ಲಕ್ಷ ರೂಪಾಯಿ ಕಿಮ್ಮತ್ತಿನದು ಇರುತ್ತದೆ. ಸದರಿ ವಾಹನದಲ್ಲಿ ಒಳಗಡೆ ದೊಡ್ಡದಾದ ಪ್ಲಾಸ್ಟೀಕ್ ಪ್ಲೆಕ್ಸಿಬಲ್ ಬ್ಯಾಗ್ ಇದ್ದು ಅದರಲ್ಲಿ ಅಂದಾಜು 8000-ಲೀಟರ್ ಬಯೋ ಡಿಸೇಲ್ ಇರುತ್ತದೆ. ಅದರ ಅಂ.ಕಿ 7,20000=00 ರೂಪಾಯಿ ಆಗಬಹುದು. ಈ ಕಂಟೇನರ್ ವಾಹನದಲ್ಲಿ 4 ಜನರಿದ್ದು ಅವರ ಹೆಸರು ವಿಳಾಸ ವಿಚಾರಿಸಲು 2) ಪಾಂಡುರಂಗ ತಂದೆ ಬಾಬು ಸೋನಾವಣೆ, ವಯಸ್ಸು 39 ವರ್ಷ ಜಾತಿ ವಂಜಾರಿ, ಸಾಃ ನಾಗತಾಳ ತಾಃ ಆಷ್ಠ ಜಿಃ ಬೀಡ್ (ರಾಜ್ಯ ಮಹಾರಾಷ್ಟ) ತಾನು ಸದರಿ ವಾಹನದ ಚಾಲಕನಿರುತ್ತೇನೆ ಅಂತಾ ಹೇಳಿದನು. 3) ವೈಜಿನಾಥ ತಂದೆ ಬಾಪು ಸೋನಾವಣೆ ವಯಸ್ಸು 20 ವರ್ಷ, ಜಾತಿ ವಂಜಾರಿ ಉ|| ಕಂಟೇನರ್ ಲಾರಿಯ ಕ್ಲೀನರ್ ಸಾಃ ನಾಗತಾಳ ತಾಃ ಆಷ್ಠ ಜಿಃ ಬೀಡ್ (ರಾಜ್ಯ ಮಹಾರಾಷ್ಟ) ಕ್ಲೀನರ್ ಇರುತ್ತೇನೆ ಅಂತಾ ಹೇಳಿದನು. 4) ಆಕಾಶ ತಂದೆ ಸಂಜಯ ಕಾಳೆ ವಯಸ್ಸು 25 ವರ್ಷ, ಜಾತಿ ನಾವಿ ಸಾಃ ವಜರವಾಡ ತಾಃ ಜಲ್ ಜಿಃ ಸಾಂಗ್ಲಿ ಬಯೋ ಡಿಸೇಲ್ ವ್ಯಾಪಾರಸ್ಥ ಅಂತಾ ಹೇಳಿದನು. 5) ದೇವರಾಜ ತಂದೆ ಮಲ್ಲಣ್ಣ ಪೂಜಾರಿ, ವಯಸ್ಸು 39 ವರ್ಷ, ಜಾತಿ ಕುರುಬ, ಸಾಃ ಮಾಲಗತ್ತಿ ತಾಃ ಸುರಪೂರ ಬಯೋ ಡಿಸೇಲ್ ಮಾರಾಟಗಾರ ಅಂತ ಹೇಳಿದನು. ಸದರಿಯವರಿಗೆ ಬಯೋ ಡಿಸಲ್ ಸಾಗಾಣಿಕೆ ಮತ್ತು ಮಾರಾಟ ಮಾಡಲು ಪರವಾನಗಿ ಪತ್ರ ಹಾಜರ ಪಡಿಸಲು ಕೆಳಿದಾಗ ಸದರಿಯವರು ಯಾವದೆ ದಾಖಲೆ ಇರುರುವುದಿಲ್ಲಾ ಅಂತ ತಿಳಿಸಿದರು. ಅದೆ ಸಮಯಕ್ಕೆ ಡಿಸಲ್ ಸಿಗುತ್ತದೆ ಅಂತ ಟಂಟಂ ತೆಗೆದುಕೊಂಡು ಬಂದಿದ್ದ ಹೆಸರು ವಿಚಾರಿಸಲಾಗಿ ಭೀಮು ತಂದೆ ಹಳ್ಳೆಪ್ಪ ದಿಗ್ಗಿ ಸಾ|| ದೋರನಹಳ್ಳಿ ಅಂತ ತಿಳಿಸಿದನು. ನಂತರ ಅಂಗಡಿಯಲ್ಲಿ ಬಯೋ ಡಿಸೇಲ್ ಮಾರಾಟ ಮಾಡುವ ಒಂದು ಜಾಂಬಳಾ (ಕಣಡಿಠಿಟಜ) ಬಣ್ಣದ ಚಿಟಠಿಚಿ ಕಂಪನಿಯ ಮಷೀನ್ ಇರುತ್ತದೆ. ಮಷೀನ್ಗೆ ಕಂಟೇನರ್ ವಾಹನದಲ್ಲಿದ್ದ ಒಂದು ಪ್ಲಾಸ್ಟೀಕ್ ಪ್ಲೆಕ್ಸಿಬಲ್ ಬ್ಯಾಗ್ಗೆ ಒಂದು ಹಸೀರು ಮತ್ತು ನಾಶಿಬಣ್ಣದ ಪ್ಲಾಸ್ಟೀಕ್ ಪೈಪ್ ಅಳವಡಿಸಿಕೊಂಡು ಅದರಲ್ಲಿಂದ ಬಯೋ ಡಿಸೇಲ್ನ್ನು ಬ್ಯಾರಲ್ಗೆ ಹಾಕಿ ಬೀಳಿ ಪ್ಲಾಸ್ಟೀಕ್ ಪೈಪ ಮೂಲಕ ಮಷೀನ್ಗೆ ತೆಗೆದುಕೊಂಡು ಸಾರ್ವಜನಿಕರಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಮೇಲ್ಕಂಡ 5 ಜನರು ಬಯೋ ಡಿಸೇಲ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದು, 5 ಜನರಿಗೆ ಸುರಕ್ಷತೆಯ ಬಗ್ಗೆ ನೀವು ಏನು ಮುಂಜಾಗ್ರತೆ ಕೈಗೊಂಡಿದ್ದರಿ ಅಂತಾ ವಿಚಾರಿಸಲು ಯಾವುದೇ ಮುಂಜಾಗ್ರತೆ ಕ್ರಮ ಕೈಕೊಂಡಿಲ್ಲ ಅಂತ ತಿಳಿಸಿದರು. ನಂತರ ಪಂಚರ ಸಮಕ್ಷಮ ಸದರಿ ಕಂಟೇನರ್ ವಾಹನದಲ್ಲಿದ್ದ ಪ್ಲಾಸ್ಟೀಕ್ ಪ್ಲೆಕ್ಸಿಬಲ್ ಬ್ಯಾಗ್ನಲ್ಲಿದ್ದ ಬಯೋ ಡಿಸೇಲ್ ಮತ್ತು ಚಿಟಠಿಚಿ ಕಂಪನಿಯ ಮಷೀನ್ನಲ್ಲಿದ್ದ ಬಯೋ ಡಿಸೇಲ್ನ್ನು ಪ್ರತ್ಯಕವಾಗಿ ರಾಸಾಯನಿಕ ಪರೀಕ್ಷೆ ಕುರಿತು ಒಂದು ಲೀಟರ ಸಾಮಥ್ರ್ಯದ ಎರಡು ಪ್ಲಾಸ್ಟೀಕ ಬಾಟಲ್ದಲ್ಲಿ ಒಂದೊಂದು ಲೀಟರ್ದಷ್ಟು ಬಯೋ ಡಿಸೇಲ್ ತೆಗೆದುಕೊಂಡು ಬಿಳಿ ಬಟ್ಟೆ ಚೀಲದಲ್ಲಿ ಹಾಕಿದ ನಂತರ ಅದರ ಬಾಯಿ ಹೋಲೆದು ಅದರ ಮೇಲೆ ಖಊಕ ಅಂತ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಅದರ ಮೇಲೆ ನಾನು ಮತ್ತು ಪಂಚರು ಜಂಟಿಯಾಗಿ ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಪುರಾವೆ ಕುರಿತು ಪಂಚರ ಸಮಕ್ಷಮದಲ್ಲಿ ವಶಕ್ಕೆ ತೆಗೆದುಕೊಂಡಿರುತ್ತೇನೆ. ನಂತರ ಬಯೋ ಡಿಸೇಲ್ ತುಂಬಿರುವ ಕಂಟೇನರ್ ವಾಹನ ಒಊ-46-ಃಈ-7810 ಮತ್ತು ಬಯೋ ಡಿಸೇಲ್ ಮಾರಾಟ ಮಾಡಲು ಬಳಿಸಿದ ಒಂದು ಜಾಂಬಳಾ (ಕಣಡಿಠಿಟಜ) ಬಣ್ಣದ ಚಿಟಠಿಚಿ ಕಂಪನಿಯ ಮಷೀನ್ಕ್ಕೆ ಇರುವ ಕರಿಬಣ್ಣದ ಪೈಪ, ಒಂದು ನೀಲಿಬಣ್ಣದ ಬ್ಯಾರಲ್, ಅದರಲ್ಲಿ ಅಂದಾಜು 20 ಲೀಟರ್ ಬಯೋ ಡಿಸೇಲ್ ಅ:ಕಿ: 1800=00 ರೂ, ಒಂದು ಹಸೀರು ಮತ್ತು ನಾಸಿಬಣ್ಣದ ಪೈಪ ಹಾಗೂ ಬೀಳಿ ಬಣ್ಣದ ಪೈಪ್ನ್ನು ಸಹ ಪ್ರಕರಣದ ಮುಂದಿನ ಸಾಕ್ಷಿ ಪುರಾವೆಗಾಗಿ ಪಂಚರ ಸಮಕ್ಷಮ ನಮ್ಮ ವಶಕ್ಕೆ ತಗೆದುಕೊಂಡೆನು. ಆಪಾದಿತರು ಬಯೋ ಡಿಸೇಲ್ಗೆ ಬೆಂಕಿ ಹತ್ತಿದಲ್ಲಿ ಮಾನವ ಜೀವಕ್ಕೆ ಹಾನಿ ಅಗುತ್ತದೆ ಅಂತ ಗೊತ್ತಿದ್ದರೂ ಸಹ ಅಕ್ರಮವಾಗಿ ಸರಕಾರದಿಂದ ಪರವಾನಿಗೆ ಪಡೆಯದೆ ಹಾಗೂ ಯಾವುದೇ ಸುರಕ್ಷತೆ ಮುನ್ನೇಚ್ಚರಿಕೆಯ ಕ್ರಮಗಳನ್ನು ಪಾಲಿಸದೇ ಅತೀವ ನಿರ್ಲಕ್ಷತನ ತೋರಿಸಿ ಕಂಟೇನರ್ ವಾಹನದಲ್ಲಿದ್ದ ಬಯೋ ಡಿಸೇಲ್ನ್ನು ತಮ್ಮ ಮಷೀನ್ನಲ್ಲಿ ಮಾರಾಟ ಮಾಡಲು ಸಂಗ್ರಹ ಮಾಡಿಕೊಂಡು ಸಾರ್ವಜನಿಕರಿಗೆ ಇದು ಡಿಸೇಲ್ ಇರುತ್ತದೆ ಅಂತ ಸುಳ್ಳು ಹೇಳಿ ಮೋಸ ಮಾಡಿ ಅಕ್ರಮವಾಗಿ ಮಾರಾಟಮಾಡಲು ಸಂಹಗ್ರಹಿಸಿಟ್ಟಿರುತ್ತಾರೆ. ಸದರಿ ಪಂಚನಾಮೆಯು ಇಂದು ದಿನಾಂಕ 25/10/2021 ರಂದು ಮುಂಜಾನೆ 07-45 ರಿಂದ 09-15 ಗಂಟೆಯವರೆಗೆ ಜಪ್ತಿ ಪಂಚನಾಮೆ ಕೈಗೊಂಡಿರುತ್ತದೆ. ದಾಳಿಯಲ್ಲಿ ಸಿಕ್ಕ 5 ಜನ ಆಪಾಧಿತರು ಹಾಗೂ ಜಪ್ತಿ ಪಡಿಸಿಕೊಂಡ ಮುದ್ದೆಮಾಲಿನೊಂದಿಗೆ ಮರಳಿ ಪೊಲೀಸ್ ಠಾಣೆಗೆ 10-00 ಗಂಟೆಗೆ ಬಂದು, ಸದರಿ ಮೇಲ್ಕಂಡ ಆರೋಪಿತರ ವಿರುದ್ಧ ವರದಿಯನ್ನು ತಯಾರಿಸಿ ಕಲಂ 285, 336, 420 ಸಂಗಡ 149 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲು 5 ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಹಾಜರ ಪಡಿಸಿ ಮುಂಜಾನೆ 11-00 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದರ ಸಾರಾಂಶದ ಆದಾರದ ಮೇರೆಗೆ ಠಾಣೆ ಗುನ್ನೆ ನಂ 236/2021 ಕಲಂ: 285, 336, 420 ಜೊತೆ 149 ಐಪಿಸಿ ನೇದರಡಿಯಲ್ಲಿ ಪ್ರಕರಣದಾಖಲು ಮಾಡಿಕೊಂಡು ಮುಂದಿನ ತನೀಖೆ ಕೈಗೊಂಡೆನು

ಇತ್ತೀಚಿನ ನವೀಕರಣ​ : 26-10-2021 05:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080