ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 26-10-2022

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 180/2022 ಕಲಂ 279 338 ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ್.: ಇಂದು ದಿನಾಂಕ 25/10/2022 ರಂದು, ಸಾಯಂಕಾಲ 19-30 ಗಂಟೆಗೆ ಫಿಯರ್ಾದಿ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 23/10/2022 ರಂದು, ಸಾಯಂಕಾಲದ ಸುಮಾರಿಗೆ ಹೊತಪೇಠ ಗ್ರಾಮದಿಂದ ಫಿಯರ್ಾದಿ ಮತ್ತು ಆತನ ಅಣ್ಣನ ಮಗ ರೋಹಿತ್ ತಂದೆ ಮನೋಹರ ರಾಠೋಡ್ ವಯಸ್ಸು 16 ವರ್ಷ ಇಬ್ಬರೂ ಕೂಡಿ ವೈಯಕ್ತಿಕ ಕೆಲಸದ ಸಂಬಂಧ ಬಿರಾಳ ಗ್ರಾಮಕ್ಕೆ ಹೋಗುವ ಸಂಬಂಧ ಶಹಾಪೂರಕ್ಕೆ ಬಂದು, ಶಹಾಪೂರದ ವಾಲ್ಮೀಕಿ ಚೌಕ ಹತ್ತಿರ ನಿಂತಿದ್ದ ಒಂದು ಆಟೋ ನಂ ಕೆಎ-32-ಡಿ-8642 ನೇದ್ದನ್ನು ಬಾಡಿಗೆ ಮಾಡಿಕೊಂಡು ಜೇವಗರ್ಿ ತಾಲೂಕಿನ ಬಿರಾಳ ಗ್ರಾಮಕ್ಕೆ ಹೊರಟೆವು. ಆಟೋ ಚಾಲಕನು ಮಡ್ನಾಳ ಮಾರ್ಗವಾಗಿ ಹೋಗುತಿದ್ದಾಗ, ಮಡ್ನಾಳ ಗ್ರಾಮ ದಾಟಿದ ನಂತರ ಮಡ್ನಾಳ ಸಿಮಾಂತರದ ಆಂದ್ರ ಕ್ಯಾಂಪ್ ಅಂದಾಜು ಅರ್ಧ ಕಿ.ಮಿ ಮುಂದೆ ಇರುವಾಗ ಸಾಯಂಕಾಲ 5-15 ಗಂಟೆಯ ಸುಮಾರಿಗೆ ಆಟೋ ಚಾಲಕನು ತನ್ನ ಆಟೋವನ್ನು ಅತಿವೇಗದಿಂದ ಚಲಾಯಿಸಿ ರೋಡಿನ ಬಲಬದಿಗೆ ಆಟೋ ಪಲ್ಟಿ ಮಾಡಿದರಿಂದ ಫಿಯರ್ಾದಿಗೆ ಸಣ್ಣ-ಪುಟ್ಟ ತರಚಿದ ಗಾಯವಾಗಿದ್ದು, ತನ್ನ ಅಣ್ಣನ ಮಗ ರೋಹಿತ್ನಿಗೆ ಎಡಗಾಲ ತೊಡೆಯ ಎಲಬು ಮುರಿದು ಭಾರಿ ರಕ್ತಗಾಯವಾಗಿರುತ್ತದೆ, ಗುಪ್ತಾಂಗಕ್ಕೆ ಮತ್ತು ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ. ಆಟೋ ಚಾಲಕನು ಆಟೋ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ . ಆದ್ದರಿಂದ ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 180/2022 ಕಲಂ 279, 338 ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 181/2022 ಕಲಂ, 379 ಐ.ಪಿ.ಸಿ: ಇಂದು ದಿನಾಂಕ 25/10/2022 ರಂದು, ರಾತ್ರಿ 8-45 ಪಿಎಂ ಕ್ಕೆ ಫಿರ್ಯಾದಿ ಠಾಣೆಗೆ ಫೀರ್ಯಾದಿ ನನ್ನದೊಂದು ಸ್ಪ್ಲೆಂಡರ ಪ್ಲಸ್ ಮೋಟರ್ ಸೈಕಲ್ ನಂ ಕೆಎ-33- ವಿ-6637 ಅ.ಕಿ 25,000=00 ರೂಪಾಯಿ ಕಿಮ್ಮತ್ತಿನದು ಇರುತ್ತದೆ. ಸದರಿ ಮೋಟರ ಸೈಕಲ್ ನಾನು ನನ್ನ ಕೆಲಸಕ್ಕೆ ಉಪಯೋಗ ಮಾಡಿಕೊಂಡಿರುತ್ತೇನೆ. ಹಿಗಿದ್ದು ದಿನಾಂಕ: 06/04/2022 ರಂದು ಮುಂಜಾನೆ 10-00 ಎ,ಎಂ ಕ್ಕೆ ಪ್ರತಿ ನಿತ್ಯದಂತೆ ನಾನು ನನ್ನ ಸ್ಪ್ಲೆಂಡರ ಪ್ಲಸ್ ಮೋಟಾರ ಸೈಕಲ ಮೇಲೆ ನಾನು ಗುತ್ತಿಪೇಠ ಶಹಾಪೂರದಲ್ಲಿರುವ ನನ್ನ ಆಪೀಸಿಗೆ ಹೋಗಿ ಮದ್ಯಾಹ್ನದ ವರೆಗೆ ಆಫಿಸನಲ್ಲಿ ಕೆಲಸ ಮಾಡಿ ಮದ್ಯಾಹ್ನ 2-30 ಪಿ.ಎಂ ಸುಮಾರಿಗೆ ನಾನು ಮತ್ತು ನನ್ನ ಗೆಳೆಯ ಬಾಲಾಜಿ ತಂದೆ ಇಂದ್ರಕರಣ ಹಜಾರೆ ಸಾ: ಆನೆಗುಂದಿ ಓಣಿ ಶಹಾಪೂರ ತಾ: ಶಹಾಪೂರ ಜಿ:ಯಾದಗಿರ ಇಬ್ಬರೂ ಕೂಡಿಕೊಂಡು ಮೈಲಾರಲಿಂಗೇಶ್ವರ ಲಿಂಗಾಯತ ಖಾನಾವಳಿಯಲ್ಲಿ ಊಟಕ್ಕೆ ಹೋಗುವ ನಿಮಿತ್ಯ ನನ್ನ ಮೋಟಾರ ಸೈಕಲ ಮೇಲೆ ಹೊರಟು ಮೋಟಾರ ಸೈಕಲನ್ನು ಶಹಾಪೂರ ನಗರದ ಸಿ,ಪಿ,ಎಸ್, ಮೈದಾನದಲ್ಲಿರುವ ಬಾಲಕಿಯರ ಪದವಿ ಪೂರ್ವ ಕಾಲೇಜು ಕಂಪೌಂಡ ಮುಂದುಗಡೆ ನಿಲ್ಲಿಸಿ ಕೀಲಿ ಹಾಕಿಕೊಂಡು ಇಬ್ಬರೂ ಕೂಡಿ ಖಾನಾವಳಿಗೆ ಊಟಕ್ಕೆ ಹೋದೆವು. ಹೋಗಿ ಊಟ ಮುಗಿಸಿಕೊಂಡು ನಂತರ ಮದ್ಯಾಹ್ನ 3-00 ಪಿ,ಎಂ ಕ್ಕೆ ಮರಳಿ ಸಿ,ಪಿ,ಎಸ್ ಮೈದಾನದಲ್ಲಿ ಬಂದು ನನ್ನ ಮೋಟಾರ ಸೈಕಲ ನೋಡಲಾಗಿ ಅಲ್ಲಿ ನನ್ನ ಮೋಟಾರ ಸೈಕಲ ಇರಲಿಲ್ಲ. ಆಗ ನಾನು ಮತ್ತು ನನ್ನ ಗೆಳೆಯ ಬಾಲಾಜಿ ಇಬ್ಬರೂ ಕೂಡಿ ಮೈದಾನದ ಸುತ್ತ ಮುತ್ತ ಹುಡುಕಾಡಿದರು ನನ್ನ ಮೋಟಾರ ಸೈಕಲ ಎಲ್ಲಿ ಕಾಣಲಿಲ್ಲ. ಆಗ ನಾನು ಗಾಬರಿಯಾಗಿ ಇಬ್ಬರೂ ಕೂಡಿ ಶಹಾಪೂರದ ಹಳೆ ಬಸ್ ನಿಲ್ದಾಣ, ಬಸವೇಶ್ವರ ವೃತ್ತ ಹಾಗೂ ಕೆ,ಇ,ಬಿ ಕಡೆ ಹುಡುಕಾಡಿದರು. ನನ್ನ ಮೋಟಾರ ಸೈಕಲ ಸಿಗಲಿಲ್ಲ. ನಂತರ ಶಹಾಪೂರ ನಗರದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಹೋಗಿ ಹುಡುಕಾಡಲಾಗಿ ಎಲ್ಲಿ ನನ್ನ ಮೋಟಾರ ಸೈಕಲ ಸಿಗಲಿಲ್ಲ. ಈ ಬಗ್ಗೆ ನಾನು ನಮ್ಮ ಹಿರಿಯರಲ್ಲಿ ವಿಚಾರ ಮಾಡಿಕೊಂಡು ಇಂದು ದಿನಾಂಕ: 25/10/2022 ರಂದು ತಡವಾಗಿ ಠಾಣೆಗೆ ಹಾಜರಾಗಿ ಕಳುವಾದ ಮೋಟರ್ ಸೈಕಲ್ ಬಗ್ಗೆ ದೂರು ಸಲ್ಲಿಸುತಿದ್ದೇನೆ. ಕಾರಣ ದಿನಾಂಕ: 06/04/2022 ರಂದು ಮದ್ಯಾಹ್ನ 2-30 ಪಿ,ಎಂ ದಿಂದ 3-00 ಪಿ,ಎಂ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ಶಹಾಪೂರ ನಗರದ ಸಿ,ಪಿ,ಎಸ್, ಮೈದಾನದಲ್ಲಿರುವ ಬಾಲಕಿಯರ ಪದವಿ ಪೂರ್ವ ಕಾಲೇಜು ಕಂಪೌಂಡ ಮುಂದುಗಡೆ ನಿಲ್ಲಿಸಿದ ನನ್ನ ಮೋಟಾರ ಸೈಕಲ ನಂ: ಕೆಎ-33 ವಿ-6637 (ಚೆಸ್ಸಿ ನಂಬರಃ-ಒಃಐಊಂಖಔ70ಊಊಊ19668 & ಇಂಜಿನ್ ನಂಬರ ಊಂ110ಂಉಊಊಊ19547) ಅಂದಾಜು ಕಿಮ್ಮತ 25,000=00 ರೂಪಾಯಿ ಕಿಮ್ಮತ್ತಿನ ಮೋಟಾರ ಸೈಕಲ್ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಹುಡಕಾಡಿದ್ದು ಸಿಕ್ಕಿರುವುದಿಲ್ಲ. ಕಾರಣ ಕಳುವಾದ ಮೋಟರ ಸೈಕಲ್ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿ ಕೊಡಲು ವಿನಂತಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 181/2022 ಕಲಂ: 379 ಐಪಿಸಿ ರಿತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 26-10-2022 11:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080