ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 26-11-2021

ಯಾದಗಿರ ಗ್ರಾಮೀಣ ಪೊಲೀಸ ಠಾಣೆ
?????? ??: 158/2021 ಕಲಂ: 78(3) ಕೆ.ಪಿ. ಆಕ್ಟ : ಇಂದು ದಿನಾಂಕ 25/11/2021 ರಂದು ಮದ್ಯಾಹ್ನ 12.30 ಗಂಟೆಗೆ ಠಾಣೆಯಲ್ಲಿರುವಾಗ ಮಾಹಿತಿ ಬಂದಿದ್ದೆನೆಂದರೆ ಬಸಂತಪೂರ ತಾಂಡದಲ್ಲಿ ಯಾರೊ ಒಬ್ಭ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಕೂಡಲೇ ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ಮೋನಪ್ಪ ಪಿ.ಸಿ.263,ಶ್ರೀ ಭೀಮರಾಯ ಪಿಸಿ.33 ಹಾಗೂ ಪಂಚರಾದ 1) ಭೀಮರಾಯ ತಂದೆ ಮಸ್ತೇಪ್ಪ ಬೂಸಪ್ಪನೋರ್ ವ: 43 ಜಾ: ಬೇಡರ 2) ಹಣಮಂತ ತಂದೆ ಮಲ್ಲಪ್ಪ ಕಾರಿಕಂಟಿ ವ: 53 ವರ್ಷ ಜಾ: ಬೇಡರ ಸಾ:ಇಬ್ಬರೂ ಕೊಯಿಲೂರು ತಾ:ಜಿ: ಯಾದಗಿರಿ.ಇವರಿಗೆ ದಾಳಿಯ ಮಾಹಿತಿ ತಿಳಿಸಿ ಎಲ್ಲರೊ ಸೇರಿಕೊಂಡು ಠಾಣೆಯಿಂದ 01.00 ಪಿ.ಎಮ್.ಗೆ ನಮ್ಮ ಸಕರ್ಾರಿ ಜೀಪ ನಂ.ಕೆ.ಎ.33/ ಜಿ.-0115 ನೆದ್ದರಲ್ಲಿ ಕುಳಿತುಕೊಂಡು ಹೊರಟು ಬಸಂತಪೂರ ತಾಂಡಕ್ಕೆ ತಲುಪಿ ಸಕರ್ಾರಿ ಶಾಲೆಯ ಹತ್ತಿರ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತು ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಗೆಲ್ಲಿರಿ ಅಂತಾ ಕೂಗಾಡುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಕರೆಯುತ್ತಿದ್ದನು ಮತ್ತು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನು, ಆಗ ನಾವೆಲ್ಲರೂ ಕೂಡಿ ಒಮ್ಮೆಲೆ ದಾಳಿ ಮಾಡಿ ಮದ್ಯಾಹ್ನ 1:30 ಗಂಟೆಗೆ ಅವನನ್ನು ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಅಜರ್ುನ ತಂದೆ ಸಜ್ಜನ ಚವ್ಹಾಣ ವ:38 ವರ್ಷ ಜಾ:ಲಮಾಣಿ ಉ:ಒಕ್ಕಲುತನ&ಕೂಲಿ ಕೆಲಸ ಸಾ: ಬಸಂತಪೂರ ತಾಂಡ ಅಂತಾ ತಿಳಿಸಿದನು. ಅವನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ 1) ನಗದು ಹಣ 830/ ರೂ 2) 02 ರೆಡ್ಮೀ ಮೋಬೈಲ್ಗಳು ಅವುಗಳ ಐ.ಎಮ್.ಇ.ಐ ನಂ.867974043442126,867974043442118. ಮೊಬೈಲಗಳಲ್ಲಿ ಮಟಕಾನಂಬರ ಕಳುಹಿಸಿದ ಮೇಸೇಜಗಳಿದ್ದು ಮೊಬೈಲ್ಗಳ ಅಂದಾಜು ಕಿಮ್ಮತ್ತು 4000/-ರೂ 3) ಎರಡು ಮಟಕಾ ನಂಬರ ಬರೆದ ಚೀಟಿ ಮತ್ತು 4) ಒಂದು ಬಾಲಪೆನ್. ಹಿಗೆ ಒಟ್ಟು 4830/-ರೂ ಗಳ ಕಿಮ್ಮತಿನ ಮುದ್ದೆಮಾಲಗಳು ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ನಮ್ಮ ವಶಕ್ಕೆ ಪಡೆದುಕೊಂಡೆನು, ಈ ಸವಿಸ್ತಾರವಾದ ಪಂಚನಾಮೆಯನ್ನು ಮಧ್ಯಾಹ್ನ 1:30 ಗಂಟೆಯಿಂದ 2:30 ಗಂಟೆಯವರೆಗೆ ಮಾಡಿಕೊಂಡು ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಮಧ್ಯಾಹ್ನ 3:00 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ. ರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿಯವನ ವಿರುಧ ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ 2021 ರ ಪ್ರಕಾರ ಕ್ರಮ ಜರುಗಿಸಲು ನಿಡಿದ ವರದಿ ಆಧಾರದ ಮೇಲಿಂದ . ಠಾಣಾ ಗುನ್ನೆ 158/2021 ಕಲಂ 78(3) ಕೆ.ಪಿ. ಆ್ಯಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 159/2021 ಕಲಂ: ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ 2021 : ದಿನಾಂಕ:25/11/2021 ರಂದು 06.45 ಪಿ.ಎಮ್ ಕ್ಕೆ ಶ್ರೀ ಸುರೇಶಕುಮಾರ ಪಿ.ಎಸ್.ಐ(ಕಾ.ಸೂ) ಯಾದಗಿರಿ ಗ್ರಾಮೀಣ ಠಾಣೆ ರವರು ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೋಂದಿಗೆ ಠಾಣೆಗೆ ಬಂದು ಕೊಟ್ಟ ಒಂದು ವರದಿಯ ಸಾರಾಂಶವೆನೆಂದರೆ ನಾನು ಇಂದು ದಿನಾಂಕ 25/11/2021 ರಂದು ಸಂಜೆ 04.00 ಗಂಟೆಗೆ ಠಾಣೆಯಲ್ಲಿರುವಾಗ ಮಾಹಿತಿ ಬಂದಿದ್ದೆನೆಂದರೆ ಯರಗೋಳ ಗ್ರಾಮದಲ್ಲಿ ಯಾರೊ ಒಬ್ಭ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಕೂಡಲೇ ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ಮೋನಪ್ಪ ಪಿ.ಸಿ.263,ಶ್ರೀ ಭೀಮರಾಯ ಪಿಸಿ.33 ಹಾಗೂ ಪಂಚರಾದ 1) ಭೀಮರಾಯ ತಂದೆ ಮಸ್ತೇಪ್ಪ ಬೂಸಪ್ಪನೋರ್ ವ: 43 ಜಾ: ಬೇಡರ 2) ಹಣಮಂತ ತಂದೆ ಮಲ್ಲಪ್ಪ ಕಾರಿಕಂಟಿ ವ: 53 ವರ್ಷ ಜಾ: ಬೇಡರ ಸಾ:ಇಬ್ಬರೂ ಕೊಯಿಲೂರು ತಾ:ಜಿ: ಯಾದಗಿರಿ.ಇವರಿಗೆ ದಾಳಿಯ ಮಾಹಿತಿ ತಿಳಿಸಿ ಎಲ್ಲರೊ ಸೇರಿಕೊಂಡು ಠಾಣೆಯಿಂದ 04.30 ಪಿ.ಎಮ್.ಗೆ ನಮ್ಮ ಸಕರ್ಾರಿ ಜೀಪ ನಂ.ಕೆ.ಎ.33/ ಜಿ.-0115 ನೆದ್ದರಲ್ಲಿ ಕುಳಿತುಕೊಂಡು ಹೊರಟು ಯರಗೋಳ ಗ್ರಾಮಕ್ಕೆ ತಲುಪಿ ಸಾರ್ವಜನಿಕ ಬಸ್ ನಿಲ್ದಾಣದ ಹತ್ತಿರ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತು ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಗೆಲ್ಲಿರಿ ಅಂತಾ ಕೂಗಾಡುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಕರೆಯುತ್ತಿದ್ದನು ಮತ್ತು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನು, ಆಗ ನಾವೆಲ್ಲರೂ ಕೂಡಿ ಒಮ್ಮೆಲೆ ದಾಳಿ ಮಾಡಿ ಸಂಜೆ 05:00 ಗಂಟೆಗೆ ಅವನನ್ನು ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಶರೀಪ್ ತಂದೆ ಮೈನೊದಿನ್ ಸೌದಾಗಾರ ವ:21 ವರ್ಷ ಉ:ಆಟೋ ಚಾಲಕ ಸಾ: ಯರಗೋಳ ಅಂತಾ ತಿಳಿಸಿದನು. ಅವನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ 1) ನಗದು ಹಣ 3510/ ರೂ 2) 01 ವಿವೋ ಕಂಪನಿಯ ಮೋಬೈಲ್ ಅದರ ಐ.ಎಮ್.ಇ.ಐ ನಂ. 865752050425214 // 865752050425206 ಮೊಬೈಲಗಳಲ್ಲಿ ಮಟಕಾನಂಬರ ಕಳುಹಿಸಿದ ಮೇಸೇಜಗಳಿದ್ದು ಮೊಬೈಲ್ಗಳ ಅಂದಾಜು ಕಿಮ್ಮತ್ತು 2500/-ರೂ 3)ಎರಡು ಮಟಕಾ ನಂಬರ ಬರೆದ ಚೀಟಿ ಮತ್ತು 4) ಒಂದು ಬಾಲಪೆನ್. ಹಿಗೆ ಒಟ್ಟು 6010/-ರೂ ಗಳ ಕಿಮ್ಮತಿನ ಮುದ್ದೆಮಾಲಗಳು ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ನಮ್ಮ ವಶಕ್ಕೆ ಪಡೆದುಕೊಂಡೆನು, ಈ ಸವಿಸ್ತಾರವಾದ ಪಂಚನಾಮೆಯನ್ನು ಸಂಜೆ 5:00 ಗಂಟೆಯಿಂದ 6:00 ಗಂಟೆಯವರೆಗೆ ಮಾಡಿಕೊಂಡು ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಸಂಜೆ 6:45 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಇರುತ್ತದೆ. ಸದರಿಯವನ ವಿರುಧ ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ 2021 ರ ಪ್ರಕಾರ ಕ್ರಮ ಜರುಗಿಸಲು ನಿಡಿದ ವರದಿ ಆಧಾರದ ಮೇಲಿಂದ . ಠಾಣಾ ಗುನ್ನೆ 159/2021 ಕಲಂ 78(3) ಕೆ.ಪಿ. ಆ್ಯಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ :181/2020 ಕಲಂ 379 ಐಪಿಸಿ : ದಿನಾಂಕ:25/11/2021 ರಂದು 6 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗ ಫಿಯರ್ಾದಿ ಶ್ರೀ ಉತ್ತಪ್ಪ ತಂದೆ ಮಲ್ಲಪ್ಪ ರಂಗಂಪೇಠ ವ|| 42 ವರ್ಷಸಾ|| ಕುರುಬರಗಲ್ಲಿ ಕುಂಬಾರಪೇಠ ಸುರಪುರಇವರು ಠಾಣೆಗೆ ಬಂದು ಒಂದು ಅಜರ್ಿ ನೀಡಿದ್ದು ಸಾರಾಂಶವೆನೆಂದರೆ, ನನ್ನ ಕಪ್ಪು ಮಿಶ್ರಿತ ನೀಲಿ ಮತ್ತು ಗ್ರೇ ಬಣ್ಣದ ಹಿರೋ ಸ್ಪ್ಲೆಂಡರ್ ಪ್ರೋ ಮೋಟರ ಸೈಕಲ್ ನಂಬರ ಏಂ-33-ಖ-8062ನೇದ್ದು ಇದ್ದು, ಅದರ ಚೆಸ್ಸಿ ನಂಬರ. ಒಃಐಊಂ10ಃಈಇಊಒ24947 ಮತ್ತುಇಂಜಿನ್ ನಂಬರ ಊಂ10ಇಖಇಊಒ72210 ನೇದ್ದು ಇರುತ್ತದೆ. ಸದರಿ ಮೋಟರ ಸೈಕಲ್ನ್ನು ನಾನು ಮತ್ತು ನನ್ನ ಮಕ್ಕಳು ಉಪಯೋಗ ಮಾಡಿಕೊಂಡಿರುತ್ತೇವೆ. ಹಿಗಿದ್ದು ನಿನ್ನೆ ದಿನಾಂಕ: 24/11/2021 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾನು ಎಂದಿನಂತೆ ಗೌಂಡಿ ಕೆಲಸಕೆಂದು ನನ್ನ ಮೋಟರ್ ಸೈಕಲ್ನ್ನು ತೆಗೆದುಕೊಂಡು ಸುರಪುರಕ್ಕೆ ಬಂದು, ಸುರಪುರದ ಬಸ್ ನಿಲ್ದಾಣದ ಹತ್ತಿರ ಇರುವ ಅಂಬೇಡ್ಕರ್ ಚೌಕ್ ಮುಂದೆ ನಿಲ್ಲಿಸಿ ಹೋಗಿದ್ದೆನು. ನಂತರ ನಾನು ನನ್ನ ಕೆಲಸ ಮುಗಿಸಿಕೊಂಡು ಸಾಯಂಕಾಲ 5 ಗಂಟೆ ಸುಮಾರಿಗೆ ಬೈಕ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲಾಗಿ ಅಲ್ಲಿ ನನ್ನ ಮೋಟರ್ ಸೈಕಲ್ ಇರಲಿಲ್ಲ. ಆಗ ನಾನು ಗಾಬರಿಯಾಗಿ ಸುರಪುರ ಬಸ್ ನಿಲ್ದಾಣ, ಕೆಂಬಾವಿ ರೋಡ್, ಗಾಂಧಿಚೌಕ್, ಡೊಣ್ಣಿಗೇರಿ, ಕಬಾಡಗೇರಿ, ಮೇದಾರಗಲ್ಲಿ ಎಲ್ಲಾ ಕಡೆ ಹುಡುಕಾಡಿದರು ನನ್ನ ಮೋಟರ್ ಸೈಕಲ್ ಸಿಕ್ಕಿರುವದಿಲ್ಲ. ಇಂದು ತಡವಾಗಿ ಠಾಣೆಗೆ ಹಾಜರಾಗಿ ದೂರು ಸಲ್ಲಿಸುತಿದ್ದೆನೆ. ಕಾರಣ ದಿನಾಂಕ 24/11/2021 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯ ಮದ್ಯದ ಅವಧಿಯಲ್ಲಿ ಸುರಪುರದ ಬಸ್ ನಿಲ್ದಾಣದ ಹತ್ತಿರ ಇರುವ ಅಂಬೇಡ್ಕರ್ ಚೌಕ್ ಮುಂದೆ ನಿಲ್ಲಿಸಿದ ನನ್ನ ಮೋಟರ ಸೈಕಲ್ ನಂಬರ ಏಂ-33-ಖ-8062 ಅ.ಕಿ. 40,000=00 ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳುವಾದ ನನ್ನ ಮೋಟರ ಸೈಕಲ್ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 181/2021 ಕಲಂ: 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

ಸೈದಾಪೂರ ಪೊಲೀಸ ಠಾಣೆ
ಗುನ್ನೆ ನಂ: 170/2021 ಕಲಂ 379 ಐಪಿಸಿ : ಇಂದು ದಿನಾಂಕ: 25-11-2021 ರಂದು ಬೆಳಿಗ್ಗೆ 08-45 ಗಂಟೆಗೆ ಶ್ರಿ ವಿಜಯಕುಮಾರ ಪಿ..ಐ ಸಾಹೇಬರು ಠಾಣೆಗೆ ಹಾಜರಾಗಿ ಕಣೆಕಲ್ ಹಳ್ಳದಲ್ಲಿ ಮರಳು ತುಂಬಿದ ಮ್ಯಾಶಿ ಪರಗುಶನ್ ಕಂಪನಿಯ ಟ್ರ್ಯಾಕ್ಟರ ನೇದ್ದನ್ನು ಜಪ್ತಿ ಮಾಡಿಕೊಂಡು ಜಪ್ತಿಪಂಚನಾಮೆ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರ ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.170/2021 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 85/2021 ಕಲಂ. 279, 337 338 ಐಪಿಸಿ : ದಿ:25/11/2021 ರಂದು ಸಾಯಂಕಾಲ 6.30 ಗಂಟೆಯ ಸುಮಾರಿಗೆ ಫಿರ್ಯಾದಿ ಹುಣಸಗಿ-ತಾಳಿಕೋಟಿ ರೋಡಿನ ಮೇಲೆ ಕುಪ್ಪಿ ಕ್ರಾಸ್ ಹತ್ತಿರ ಇರುವ ಹೊಟೇಲ್ ಹತ್ತಿರ ರಸ್ತೆ ದಾಟುತ್ತಿರುವಾಗ ಮಾಳನೂರ ಕಡೆಯಿಂದ ಆರೋಪಿತನು ತನ್ನ ಮೋಟಾರ್ ಸೈಕಲ್ ಮೇಲೆ 2 ಜನ ಹೆಣ್ಣುಮಕ್ಕಳಿಗೆ ಕೂಡಿಸಿಕೊಂಡು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಜೊರಾಗಿ ಡಿಕ್ಕಿ ಕೊಟ್ಟಿದ್ದು, ಫಿರ್ಯಾದಿಯು ರಸ್ತೆಯ ಮೇಲೆ ಕೆಳಗಡೆ ಬಿದ್ದಿದ್ದು, ಮೋಟಾರ್ ಸೈಕಲ್ ಸವರಾನು ಮುಂದೆ ಹೋಗಿ ನಿಯಂತ್ರಣ ತಪ್ಪಿ ಕೆಳಗೆ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ಫಿರ್ಯಾದಿಗೆ ಮೂಗಿಗೆ ಭಾರಿ ಒಳಪೆಟ್ಟಾಗಿ ಮೂಗಿನಿಂದ ರಕ್ತ ಬಂದಿದ್ದು, ಎರಡು ಮೊಳಕಾಲಗಳಿಗೆ ರಕ್ತಗಾಯಗಳಾಗಿದ್ದು, ಟೊಂಕಕ್ಕೆ ಒಳಪೆಟ್ಟಾಗಿದ್ದು ಇರುತ್ತದೆ. ಮೋಟಾರ್ ಸೈಕಲ್ ಸವಾರನಿಗೆ ಬಲಗಾಲ ಮೊಣಕಾಲ ಹತ್ತಿರ ಭಾರಿ ರಕ್ತಗಾಯವಾಗಿದ್ದು, ಬಲಗಡೆ ಗಲ್ಲಕ್ಕೆ ರಕ್ತಗಾಯವಾಗಿದ್ದು, ಬಲಗೈ ಮುಂದೈ ಹತ್ತಿರ ಭಾರಿ ರಕ್ತಗಾಯವಾಗಿದೆ. ಹಾಗೂ ಆರೋಪಿತನ ಮೊಟಾರ್ ಸೈಕಲ್ ಮೇಲೆ ನಡುವೆ ಕುಳಿತ ಯಾಸ್ಮೀನ ಇವಳಿಗೆ ಬಲಗೈ ಮಣಿಕಟ್ಟು ಬೆರಳುಗಳಿಗೆ ಬಾರಿ ರಕ್ತಗಾಯವಾಗಿದ್ದು, & ಬಲ ಕಪಾಳಕ್ಕೆ ರಕ್ತಗಾಯವಾಗಿದೆ. ಬಲತಲೆಗೆ ರಕ್ತಗಾಯವಾಗಿದೆ. ಮೋಟಾರ್ ಸೈಕಲ್ ಮೇಲೆ ಕೊನೆಯಲ್ಲಿ ಹಿಂದೆ ಕುಳಿತ ಬೋರಮ್ಮ ಇವಳಿಗೆ ಬಲಗಣ್ಣಿನ ಹತ್ತಿರ ರಕ್ತಗಾಯವಾಗಿದೆ, ಬಲಗೈ ಮಣಿಕಟ್ಟಿ ಹತ್ತಿರ ರಕ್ತಗಾಯ & ಒಳಪೆಟ್ಟಾಗಿದ್ದು ಇರುತ್ತದೆ. ಸದರಿ ಆರೋಪಿತನ ವಿರುದ್ದ ಕ್ರಮ ಕೈಕೊಳ್ಳಲು ಕೊಟ್ಟ ದೂರಿನಸಾರಂಶ ಇರುತ್ತದೆ.

ಇತ್ತೀಚಿನ ನವೀಕರಣ​ : 26-11-2021 10:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080