ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 26-11-2022

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ:43/2022 ಕಲಂ: 279, 338, 304(ಎ) ಐಪಿಸಿ : ದಿನಾಂಕ 02/06/2022 ರಂದು ಫಿಯರ್ಾದಿ ಹಾಗು ಗಾಯಾಳು ಇಬ್ಬರು ಸೇರಿ ತಮ್ಮ ಊರಿನವರು ಸಗರ ಸೋಫಿ ಸರಮತ್ ದೇವರು ಮಾಡಿದ್ದರಿಂದ ತಮ್ಮ ಗ್ರಾಮದವರೊಂದಿಗೆ ಸಗರ ಗ್ರಾಮಕ್ಕೆ ಜೀಪ್ ನಂ ಕೆಎ:48, ಎಮ್:3582 ನೇದ್ದರಲ್ಲಿ ಹೋಗಿ ದೇವರು ಮುಗಿಸಿಕೊಂಡು ಮರಳಿ ತಮ್ಮೂರಿಗೆ ಹೋಗುತ್ತಿದ್ದಾಗ 3.30 ಪಿಎಮ್ ಸುಮಾರಿಗೆ ಉಮರದೊಡ್ಡಿ-ಸೈದಾಪೂರ ರೋಡಿನ ಮೇಲೆ ಸೈದಾಪೂರ ಸಮೀಪ ಹೊರಟಾಗ ಆರೋಪಿತನು ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿ ಒಮ್ಮೆಲೆ ಕಟ್ ಹೊಡೆದಿದ್ದರಿಂದ ಜೀಪಿನ ಹಿಂದಿನ ಸೀಟಿನ ಮೇಲೆ ಡೋರಿನ ಪಕ್ಕದಲ್ಲಿ ಕುಳಿತಿದ್ದ ಗಾಯಾಳು ಕೆಳಗೆ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿದ್ದು ಫಿಯರ್ಾದಿದಾರರು ಬಡವರಾಗಿದ್ದು ಕಾನೂನಿನ ಅರಿವು ಇಲ್ಲದೇ ಇದ್ದುದರಿಂದ ಮತ್ತು ಘಟನಾ ಸ್ಥಳವು ಯಾವ ಪೊಲೀಸ್ ಠಾಣೆಗೆ ಬರುತ್ತದೆ ಅನ್ನುವದು ಗೊತ್ತಾಗದೇ ಇದ್ದುದರಿಂದ ಊರಲ್ಲಿ ವಿಚಾರಿಸಿಕೊಂಡು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ನಂತರ ಪ್ರರಕಣದಲ್ಲಿ ಗಾಯಾಳು ಉಪಚಾರ ಪಡೆದುಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿ ಕೋಮಾದಲ್ಲಿಯೇ ಮನೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ, ಸದರಿಯವನ ಹೇಳಿಕೆಯನ್ನು ಮಾತಾಡಲು ಬಂದಾಗ ಪಡೆದು ಸಲ್ಲಿಸುವ ಬಾಕಿ ಇಟ್ಟು ದಿನಾಂಕ: 04/09/2022 ರಂದು ಆರೋಪಿತನ ವಿರುದ್ಧ ದೋಷಾರಪಣೆ ಸಲ್ಲಿಸಿದ್ದು ಪ್ರಕರಣವು ಮಾನ್ಯ ನ್ಯಾಯಾಲಯದ ವಿಚಾರಣೆಯಲ್ಲಿ ಇತ್ತು. ನಂತರ ಇಂದು ದಿನಾಂಕ: 25/11/2022 ರಂದು 12.15 ಪಿಎಮ್ ಕ್ಕೆ ಪ್ರಕರಣದಲ್ಲಿ ಫಿಯರ್ಾದಿದಾರರಾದ ಶಂಕರಸಿಂಗ್ ತಂದೆ ರಾಮಸಿಂಗ್ ಠಾಕೂರ, ವ:26ವರ್ಷ, ಜಾ:ರಜಪೂತ, ಉ:ಕೂಲಿಕೆಲಸ, ಸಾ:ಮದರಿ, ತಾ:ಜೇವಗರ್ಿ, ಜಿ:ಕಲಬುಗರ್ಿ ಇವರು ಠಾಣೆಗೆ ಹಾಜರಾಗಿ ಸದರಿ ಪ್ರಕರಣದಲ್ಲಿ ಗಾಯಗೊಂಡು ಕೋಮಾದಲ್ಲಿ ಇದ್ದ ತಮ್ಮ ಅಣ್ಣನಾದ ರಘುವೀರಸಿಂಗ್ ತಂದೆ ರಾಮಸಿಂಗ್ ಠಾಕೂರ, ವ:40ವರ್ಷ, ಜಾ:ರಜಪೂತ, ಉ:ಕೂಲಿಕೆಲಸ, ಸಾ:ಮದರಿ, ತಾ:ಜೇವಗರ್ಿ, ಜಿ:ಕಲಬುಗರ್ಿ ಈತನಿಗೆ ಬಹಳಷ್ಟು ತ್ರಾಸ್ ಆಗುತ್ತಿದ್ದರಿಂದ ಉಪಚಾರಕ್ಕೆ ಯುನೈಟೇಡ್ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೊಗಬೇಕೆನ್ನುವಾಗ ಜೇವಗರ್ಿ ಹತ್ತಿರ ರಸ್ತೆ ಅಪಘಾದಿಂದ ತನಗಾದ ಗಾಯ ಪೆಟ್ಟಿನಿಂದ ಮಾರ್ಗ ಮಧ್ಯದಲ್ಲಿ ನಿನ್ನೆ ರಾತ್ರಿ ಅಂದರೆ, ಇಂದು ದಿನಾಂಕ: 25/11/2022 ರಂದು 02.00 ಎಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ. ನಮಗೆ ಕಾನೂನಿನ ತಿಳುವಳಿಕೆ ಇಲ್ಲದ್ದರಿಂದ ನಾವು ಶವವನ್ನು ನಮ್ಮೂರಾದ ಮಧರಿ ಗ್ರಾಮಕ್ಕೆ ತಗೆದುಕೊಂಡು ಹೊಗಿರುತ್ತೇವೆ. ಕಾರಣ ಮಾನ್ಯರವರು ರಸ್ತೆ ಅಪಘಾತದಲ್ಲಿ ತೆಲೆಗೆ ಭಾರಿಗಾಯವಾಗಿ ಉಪಚಾರ ಪಡೆಯುತ್ತಿದ್ದ ನಮ್ಮ ಅಣ್ಣನು ಗುಣಮುಖವಾಗದೆ ಮೃತಪಟ್ಟಿದ್ದು ಸದರಿಯವನ ಸಾವಿನ ಬಗ್ಗೆ ಮುಂದಿನ ಕ್ರಮ ಜರುಗಿಸಲು ಮಾನ್ಯರವರಲ್ಲ ವಿನಂತಿ ಅಂತಾ ಅಜರ್ಿ ಸಾರಂಶದ ಮೇಲಿಂದ ಪ್ರಕರಣದಲ್ಲಿ ಕಲಂ: 304(ಎ) ಐಪಿಸಿ ಅಳವಡಿಸಿಕೊಂಡು ಮುಂದಿನ ತನಿಖೆ ಕೈಕೊಳ್ಳಲಾಗಿದೆ ಅಂತಾ ವಿನಂತಿ.

ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 91/2022 ಕಲಂ 87 ಕೆಪಿ ಯ್ಯಾಕ್ಟ: ಇಂದು ದಿನಾಂಕ 25/11/2022 ರಂದು 03.30 ಪಿ.ಎಮ್.ಕ್ಕೆ ಫಿಯರ್ಾದಿ ಠಾಣೆಯಲ್ಲಿದ್ದಾಗ ಹೊತಪೇಟ ಮೇಲಿನ ತಾಂಡಾ ಸೀಮಾಂತರದ ಸರಕಾರಿಕಿರಿಯ ಪ್ರಾಥಮಿಕ ಶಾಲೆಯ ಹತ್ತಿರಇರುವಗುರುನಾಥರಾಠೋಡಇವರ ಹೊಲದಲ್ಲಿನ ಸಾರ್ವಜನಿಕಖುಲ್ಲಾಜಾಗದಲ್ಲಿಕೆಲವು ಜನರುದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿಅಂದರ ಬಾಹರಅಂತಇಸ್ಪೇಟಜೂಜಾಟಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ 04.40 ಪಿ.ಎಮ್ ಕ್ಕೆ ದಾಳಿ ಮಾಡಿದಾಗ 05 ಜನಆರೋಪಿತರು ಸಿಕ್ಕಿದ್ದು ಹಾಗು ಕಣದಲ್ಲಿಂದ ನಗದುಒಟ್ಟು ಹಣ 2300/- ರೂ, 52 ಇಸ್ಪೇಟ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕುರಿತು ವರದಿ ಸಲ್ಲಿಸಿರುತ್ತಾರೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 199/2022. ಕಲಂ. 413,420,423,463,461 ಐ.ಪಿ.ಸಿ.: ಇಂದು ದಿನಾಂಕ 25/11/2022 ರಂದು 1700 ಗಂಟೆಗೆ ಮಾನ್ಯ ಪ್ರಧಾನ ಜೆ ಎಮ್ ಎಫ್ ಸಿ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯವರಾದ ಶ್ರೀ ರಾಮಣ್ಣ ಪಿಸಿ 424 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ಫಿಯರ್ಾದಿ ನಂಬರ 20/2022 ನೇದ್ದನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೇನಂದರೆ ಅಜರ್ಿದಾರರು ಶಹಾಪೂರ ತಾಲೂಕಿನ ಶಿರವಾಳ ಗ್ರಾಮದ ಸೀಮಾಂತರದ ಹೊಲ ಸವರ್ೆ ನಂಬರ 238/6 ರಲ್ಲಿನ 18 ಎಕರೆ 37 ಗುಂಟೆ ಹೊಲಕ್ಕೆ ಸಂಬಂದಿಸಿದಂತೆ ಮಾಲೀಕಳು ಇರುತ್ತಾಳೆ. ಸದರಿ ಆಸ್ತಿಯು ಹಿರಿಯರಿಂದ [ಪೂರ್ವಜಕರ] ಬಂದ ಆಸ್ತಿ ಇರುತ್ತದೆ. ಸದರಿ ಜಮೀನು ಅಜರ್ಿದಾರರಾದ ಬಸವರಾಜ ಇವರ ತಾಯಿಯಾದ ನಾಗಮ್ಮ ಗಂಡ ಹಣಮಂತ್ರಾಯ ಬೊಜ್ಜಿ ರವರ ಹೆಸರಿನಲ್ಲಿರುತ್ತದೆ. ಆದರೆ ದಿನಾಂಕ 05/01/2009 ರಂದು ಅಜರ್ಿದಾರರಾದ ತಾಯಿಯವರಾದ ನಾಗಮ್ಮ ಮರಣ ಹೊಂದಿರುತ್ತಾರೆ. ನಂತರ ಸದರಿ ಜಮೀನನ್ನು ಅಜರ್ಿದಾರರಾದ ಬಸವರಾಜ ತಂದೆ ಹಣಮಂತ್ರಾಯ ಬೊಜ್ಜಿ ಹಾಗು ಅವರ ಅಣ್ಣ, ತಮ್ಮ ಹಾಗು ಅಕ್ಕ-ತಂಗಿಯರು ಸಾಗುವಳಿ ಮಾಡುತ್ತಾ ಬಂದಿದ್ದು ಇರುತ್ತದೆ. ಆರೋಪಿ ನಂಬರ 01 ನಾಗಮ್ಮ ಇವರು ಆರೋಪಿ ನಂಬರ 02 ಬಸಮ್ಮ ಇವರ ತಾಯಿ ಇದ್ದು ಹಾಗು ಆರೋಪಿ ನಂಬರ 05 ಹಣಮಂತಪ್ಪ ರವರು ಆರೋಪಿ ನಂಬರ 02 ಬಸಮ್ಮ ಇವರ ಗಂಡನಿರುತ್ತಾರೆ. ಆರೋಪಿ ನಂಬರ 06 ವಿಶ್ವನಾಥ ಇವರು ಆರೋಪಿ ನಂಬರ 01 ನಾಗಮ್ಮ ಇವರ ಮಗನಾಗಿರುತ್ತಾನೆ. ಉಳಿದ ಆರೋಪಿತರು ಆರೋಪಿ ನಾಗಮ್ಮ ವಾಡಿ ಹಾಗು ಬಸಮ್ಮ ಇವರಿಗೆ ಸಂಬಂದಿಕರು ಮತ್ತು ಪರಿಚಯದವರಾಗಿರುತ್ತಾರೆ. ದಿನಾಂಕ 20/12/2021 ರಂದು ಆರೋಪಿ ನಂಬರ 02 ಬಸಮ್ಮ ಇವರು ತನ್ನ ಸಂಗಡ ಸಮಾಜ ಘಾತುಕರನ್ನು ಕರೆದುಕೊಂಡು ಬಂದು ಶಿರವಾಳ ಗ್ರಾಮದ ಹೊಲ ಸವರ್ೆ ನಂಬರ 238/6 ರಲ್ಲಿ ಬಂದು ಹೊಲದಲ್ಲಿದ್ದ ಅಜರ್ಿದಾರರಾದ ಬಸವರಾಜ ತಂದೆ ಹಣಮಂತ್ರಾಯ ಬೊಜ್ಜಿ ಇವರೊಂದಿಗೆ ಜಗಳಾ ತೆಗೆದು ಜಮೀನಿನಿಂದ ಹೊರಗೆ ಹಾಕಲು ಪ್ರಯತ್ನಿಸಿದಾಗ ಅಜರ್ಿದಾರರು ಊರಿನ ಜನರ ಸಹಾಯದಿಂದ ಆರೋಪಿ ನಂಬರ 02 ರವರನ್ನು ಹೊಲದಿಂದ ಓಡಿಸಿದ್ದು ಇರುತ್ತದೆ. ನಂತರ ಅದೇ ವೇಳೆಯಲ್ಲಿ ಆರೋಪಿ ನಂಬರ 02 ನೇದ್ದವರಾದ ಬಸಮ್ಮ ಗಂಡ ಹಣಮಂತಪ್ಪ ಬೆಕ್ಕಿನ್ ಇವರು ಆರೋಪಿ ನಂಬರ 01 ರವರಾದ ನಾಗಮ್ಮ ವಾಡಿ ಇವರಿಂದ ಸದರಿ ಜಮೀನನ್ನು ಗಿಪ್ಟ್ ಡೀಡ್ ಅಂತ ದಿನಾಂಕ 27/08/2021 ರಂದು ಡಿಓಸಿ ನಂ 3441/2021-22, 13 ಎಕರೆ 37 ಗುಂಟೆ ಗಿಫ್ಟ್ ಡೀಡ್ ಮಾಡಿದ್ದು ಇರುತ್ತದೆ. ಸದರಿ ಘಟನೆಯ ನಂತರ ಅಜರ್ಿದಾರರು ದಾಖಲಾತಿಗಳನ್ನು ಪಡೆದುಕೊಳ್ಳಲು ಉಪ- ನೊಂದಣಾಧಿಕಾರಿಗಳು ಹಾಗು ಕಂದಾಯ ಇಲಾಖೆಗೆ ಸಂಪಕರ್ಿಸಿದಾಗ ತಿಳಿದು ಬಂದಿದ್ದೇನಂದರೆ ಆರೋಪಿತರಾದ 1] ನಾಗಮ್ಮ ಗಂಡ ಹಣಮಂತಪ್ಪ ವಾಡಿ ಮತ್ತು 2] ಬಸಮ್ಮ ಗಂಡ ಹಣಮಂತಪ್ಪ ವಾಡಿ ಈ ಎರಡು ಜನರು ಸೇರಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿದ್ದು ಕಂಡು ಬಮದಿರುತ್ತದೆ. ಅಸಲಿ ನಾಗಮ್ಮ ಇವರು ದಿನಾಂಕ 05/01/2009 ರಂದು ಮೃತಪಟ್ಟಿದ್ದು ನಕಲಿ ನಾಗಮ್ಮ ಇವಳು ಅಂದರೆ ಆರೋಪಿ ನಂಬರ 01 ರವರಾದ ನಾಗಮ್ಮ ಗಂಡ ಹಣಮಂತಪ್ಪ ವಾಡಿ ಇವಳು ತನ್ನ ಮಗಳಾದ ಆರೋಪಿ ನಂಬರ 02 ಬಸಮ್ಮ ಗಂಡ ಹಣಮಂತಪ್ಪ ಬೆಕ್ಕಿನ್ ಇವಳಿಗೆ ದಿನಾಂಕ 27/08/2021 ರಂದು ಗಿಫ್ಟ್ ಡೀಡ್ ಮಾಡಿದ್ದು ಇರುತ್ತದೆ. ಅಲ್ಲದೇ ತಹಸೀಲ್ದಾರ ವಡಗೇರಾ ಇವರು ನಾಗಮ್ಮ ಇವಳು ದಿನಾಂಕ 06/11/2021 ರಂದು ಮರಣ ಹೊಂದಿದ ಬಗ್ಗೆ ದಾಖಲಾತಿ ಕೊಟ್ಟಿದ್ದು ಇರುತ್ತದೆ. ಅಜರ್ಿದಾರರ ತಾಯಿಯ ಹೆಸರು ಹಾಗು ಆರೋಪಿತರ ಹೆಸರು ಒಂದೇ ಇರುವ ಕಾರಣ ಗಿಫ್ಟ್ ಡೀಡ್ ಮಾಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ ಒಟ್ಟು 08 ಜನ ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಇದ್ದ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 199/2022 ಕಲಂ 413, 420, 423, 463, 461 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ:-

ಗುನ್ನೆ ನಂ: 200/2022 ಕಲಂ: 324,355,504,506 ಸಂಗಡ 34 ಐಪಿಸಿ(ಮಾನ್ಯ ನ್ಯಾಯಾಲಯದ ಉಲ್ಲೇಖಿತ ಗುನ್ನೆ): ಮಾನ್ಯ ನ್ಯಾಯಾಲದಿಂದ ವಸೂಲಾದ ಖಾಸಗಿ ದಾವೆ ನಂ: 123/2022 ನೇದ್ದನ್ನು ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಶ್ರೀ ರಾಮಣ್ಣ ಪಿ.ಸಿ-424 ರವರು ತಂದು ಠಾಣೆಗೆ ಹಾಜರು ಪಡಿಸಿದ್ದನ್ನು ಇಂದು ದಿನಾಂಕ: 25/11/2022 ರಂದು 7-30 ಪಿ.ಎಮ್ ಕ್ಕೆ ಸ್ವಿಕರಿಸಿಕೊಂಡು, ಸದರಿ ಹಾಜರು ಪಡಿಸಿದ ಅಜರ್ಿ ಸಾರಾಂಶವೆನಂದರೆ, 1) ಪಿರ್ಯಾದಿದಾರ ಈ ಕೆಳಗಿನಂತೆ ಮಾನ್ಯ ನ್ಯಾಯಾಲದ ಮುಂದೆ ವಿನಂತಿ ಪೂರ್ವಕವಾಗಿ ಅರಿಕೆ ಮಾಡಿಕೊಳ್ಳುವುದೆನೆಂಧರೆ, 2) ಪಿರ್ಯಾದಿದಾರನು ಬಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಾ ಉಪಜೀವಿಸುತ್ತಿದ್ದಾರೆ. 3) ಆರೋಪಿ ನಂಬರ 1 ಅವರು ಕೆ.ಎಸ್.ಆರ.ಟಿ.ಸಿ ಇಲಾಖೆಯಲ್ಲಿ ಮೆಕ್ಯಾನಿಕ ಆಗಿ ಸೇವೆ ಸಲ್ಲಿಸಿ ಈಗ ನಿವೃತ್ತಿಯ ಜೋತೆಯಲ್ಲಿ ವ್ಯಾಪಾರ ಮಾಡಿಕೊಂಡು ಜೀವಿಸುತಿದ್ದಾರೆ. 4) ಅದರಂತೆ ಆರೋಪಿ ನಂ 2 ಮತ್ತು 3 ಅವರು ವ್ಯಾಪಾರ ಮಾಡಿಕೊಂಡು ಉಪಜಿವಿಸುತ್ತಿದ್ದಾರೆ. 5) ಪಿರ್ಯಾದಿದಾರ ಹೇಳುವುದೆನೆಂದರೆ ನಗರದ ಗುತ್ತಿಪೇಠ ಬಡಾವಣೆಯ ಹಳೆ ತರಕಾರಿ ಮಾರುಕಟ್ಟೆಯ ಹತ್ತಿರ ನಮ್ಮ ಅಣ್ನ ಜಲೀಲ ಅಹ್ಮದ ತಂದೆ ಗುಲಾಮ ರಸೂಲ್ ದಾದುಲ್ಲಾ ಅವರ ಮಳಿಗೆ ನಂಬರ 22-64 ಇದ್ದು, ಅದರ ಪಕ್ಕದಲ್ಲಿಯೇ ನನ್ನ ಮಳಿಗೆ ಇದೆ ನಾವಿಬ್ಬರೂ ಪ್ರತ್ಯೇಕವಾಗಿ ವಾಸವಾಗಿದ್ದು ಇರುತ್ತದೆ. ನಮ್ಮ ಅಣ್ಣ ಜಮೀಲ ಅಹ್ಮದ ತಂದೆ ಗುಲಾಮ ರಸೂಲ್ ದಾದುಲ್ಲಾ ಅವರು ನಗರ ಸಭೆಯಿಂದ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಕಟ್ಟಡ ನಿಮರ್ಿಸುತ್ತಿದ್ದಾರ ಇದರ ಬಗ್ಗೆ ನಮ್ಮಿಬ್ಬರ ನಡುವೆ ಸಣ್ಣ ಪುಟ್ಟ ಭಿನ್ನಾಬಿಪ್ರಾಯವಿದೆ. 6) ಹೀಗಿರುವಾಗ ದಿನಾಂ: 15/09/2022 ರಂದು ಸಂಜೆ 4 ಗಂಟೆ ಸುಮಾರಿಗೆ ನನ್ನ ಮಳಿಇಗೆಗೆ ಹೊಂದಿಕೊಂಡು ಆರೋಪಿ ನಂ: 1 ಅವವರು ಕಟ್ಟಡ ನಿಮರ್ಿಸುವಾಗ ನಾನು ಅವರಿಗೆ ಮೂರು ಅಡಿ ಜಾಗವನ್ನು ಬಿಟ್ಟು ಮಳಿಗೆ ನಿಮರ್ಿಸುವಂತೆ ಮನವಿ ಮಾಡಿದೆ. ಆಗ ಆರೋಪಿ ನಂ: 1 ರಿಂದ 3 ಅವರು ಅಕ್ರಮ ಕೂಟವನ್ನು ಕಟ್ಟಿಕೊಂಡು ಬಂದು ಲೇ ಬೋಸಡಿ ಮಗನೇ ಎಷ್ಟು ಸೊಕ್ಕು ನಿನಗೆ ನಮ್ಮ ಮಳಿಗೆ ಮಟ್ಟಡ ನಿಮರ್ಿಸಿದರೆ ನಿನಗೆ ಏನಾಗುತ್ತದೆ ಎಂದು ಆರೋಪಿ ನಂ: 1 ಅವರು ತನ್ನ ಬಲಕಾಲಿನ ಚಪ್ಪಲಿ ತೆಗೆದುಕೊಂಡು ನನ್ನ ಎಡ ಮೆಲಕಿಗೆ ಹೊಡೆದು ಗಾಯಗೊಳಿಸಿದ ಆಗ ಆರೋಪಿ 2 ಮತ್ತು 3 ಅವರು ಕೈಯಿಂದ ಹೊಡೆದು ನೆಲಕ್ಕೆ ಕೆಡವಿದರು ಆಗ ಅಲ್ಲೆ ನಿಂತಿದ್ದ ಸಾಕ್ಷಿದಾರರಾರ ಪರಶುರಾಮ ತಂದೆ ದೇವಿಂದ್ರ ನಾಟೆಕಾರ ಹಾಗೂ ನಜೀರ ಅಹ್ಮದ ತದೆ ಲಾಲ ಅಹ್ಮದ ಅವರು ಬಂದು ಜಗಳ ಬಿಡಿಯಾರ ಅಂತಾ ನಿನ್ನ ಜೀವ ಉಳಿದಿದೆ. ಇಲ್ಲಾ ಅಂದರೆ ನಿನಗೆ ಪೆಟ್ರೋಲ್ ಹಾಕಿ ಸುಡುತ್ತೇವೆ ಎಂದು ಜೀವ ಬೇದರಿಕೆ ಹಾಕಿ ನಡಡೆದರು. ಇದರಿಮದ ಗಾಯಗೊಂಡ ನಾನು ಜಗಳವಾದ ದಿನ ಅಂದರೆ: 15-9-2022 ರಂದು ಸಂಜೆ ಐದು ಗಂಟೆಗೆ ತೆರಳಿ ಶಹಾಪೂರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ತೆರಲಿದೆ ಆದರೆ ಪೊಲೀಸ್ ದೂರು ತೆಗೆದುಕೊಳ್ಳದೆ ವಾಪಸ್ಸು ಕಳುಹಿಸಿದ್ದು ಇರುತ್ತದೆ. 7) ಗಾಯಗೊಂಡ ನಾನು ನೋವು ತಾಳಲಾರದೇ ನಗರದ ಸ್ಪಂದನ ಆಸ್ಪತ್ರೆಗೆ ತೆರಲಿ ಚಿಕಿತ್ಸೆ ಪಡೆದುಕೊಂಡೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸೋಲಾಪೂರಕ್ಕೆ ತೆರಳಿ ಚಿಕಿತ್ಸೆ ಪಡೆದುಕೊಂಡು ಈಗ ಸ್ವಲ್ಪ ಗುಣಮುಖನಾಗಿರುವೆ. 8) ಇದರಿಂದ ಹತಾಶೆಗೊಂಡು ಪಿರ್ಯಾರಿದಾರರ ದಿನಾಂ: 28/7/2022 ರಂದು ಜಿಲ್ಲಾ ಪೊಲೀಸ್ ವರéಿಷ್ಠಾದಿಕಾರಿ ಲಿಖಿತ ದೂರು ಸಲ್ಲಿಸಿದರು ಯಾವುದೆ ಕ್ರಮ ತೆಗೆದುಕೊಂಡಿಲ್ಲ. ಮಾನ್ಯ ನ್ಯಾಯಾಲದ ಅವಗಾನೆಗಾಗಿ ಪೊಲೀಸ್ ಮೇಲಾಧಿಕಾರಿಗಳಿಗೆ ಸಲ್ಲಿಸಿದ ದೂರಿನ ಪ್ರತಿಯನ್ನು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವರದಿಯನ್ನು ದೂರಿನ ಸಂಗಡ ಲಗತ್ತಿಸಿದ್ದನ್ನು ಇರುತ್ತದೆ ಅಂತಾ ಕೊಟ್ಟ ಖಾಸಗಿ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ: 200/2022 ಕಲಂ:324, 355, 504, 506 ಸಂಗಡ 34 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 201/2022 ಕಲಂ: 279, 337, 338 ಐ.ಪಿ.ಸಿ: ಇಂದು ದಿನಾಂಕ: 25/11/2022 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿ ಶ್ರೀಮತಿ ವಿಜಯಲಕ್ಷ್ಮೀ ಗಂಡ ಶರಣಪ್ಪ ಟಣಕೆದಾರ ವಯಾ: 26 ಜಾತಿ: ಪ.ಜಾತಿ(ಹೊಲೆಯ) ಉ: ಕೂಲಿಕೆಲಸ ಸಾ: ಬೀರನೂರ ತಾ: ಶಹಾಪೂರ ರವರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ ಅಜರ್ಿ ಸಾರಾಂಶವೆನೆಂದರೆ, ಹೀಗಿದ್ದು ನಾನು ಮತ್ತು ನನ್ನ ಮಗನಾದ ಹರ್ಷವರ್ಧನ ಇಬ್ಬರೂ ನನ್ನ ತವರು ಮನೆಯಾದ ಹುಂಡೆಕಲ್ ಗ್ರಾಮದಲ್ಲಿದ್ದಾಗ ನನ್ನ ಗಂಡನಾದ ಶರಣಪ್ಪನು ಬೀರನೂರದಿಂದ ನಮ್ಮ ಹೀರೋ ಸ್ಪೆಂಡರ ಪ್ಲಸ್ ಮೋಟಾರ ಸೈಕಲ್ ನಂ: ಕೆ.ಎ-33/ಯು-7361 ನೇದ್ದನ್ನು ದಿನಾಂಕ:23/11/2022 ರಂದು ತೆಗೆದುಕೊಂಡು ನಮ್ಮ ಊರಿಗೆ ಬಂದು ನಮ್ಮ ಮಗನಿಗೆ ಶಹಾಪೂರದ ಸಹಾರಾ ಶಾಲೆಗೆ ಬಿಟ್ಟು ಬರುತ್ತೇನೆ ಅಂತಾ ಹೇಳಿ ಬೆಳಿಗ್ಗೆ 9-00 ಗಂಟೆಗೆ ತನ್ನ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಹೋದನು. ನಂತರ ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನನ್ನ ಗಂಡನಾದ ಶರಣಪ್ಪನು ಪೋನ ಮಾಡಿ ನನಗೆ ತಿಳಿಸಿದ್ದೆನೆಂದರೆ ನಾನು ಮತ್ತು ನನ್ನ ಮಗ ಇಬ್ಬರೂ ಕೂಡಿ ತಿಪ್ಪನಳ್ಳಿ ದಾಟಿ ವಿಬೂತಿಹಳ್ಳಿ ಮೇನ ರೋಡ ಇನ್ನೂ 500 ಮೀಟರ ಅಂತರದಲ್ಲಿ ಇರುವಾಗ ನಾನು ನನ್ನ ಮೋಟಾರ ಸೈಕಲ್ನ್ನು ಅತೀವೇಗ ಮತ್ತು ಅಲಕ್ಷತನದಂದ ಚಲಾಯಿಸಿಕೊಂಡು ಬೆಳಿಗ್ಗೆ 9-15 ಗಂಟೆ ಸುಮಾರಿಗೆ ಮೋಟಾರ ಸೈಕಲ್ ಮೇಲೆ ಹೋಗುವಾಗ ರಸ್ತೆ ಮದ್ಯದಲ್ಲಿ ಹಂದಿ ಅಡ್ಡ ಬಂದಿದ್ದರಿಂದ ನಾನು ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಮೋಟಾರ ಸೈಕಲ್ ಸ್ಕಿಡಾಗಿ ರಸ್ತೆ ಮೇಲೆ ಬಿದ್ದಿದ್ದು, ನನಗೆ ಟೊಂಟಕ್ಕೆ ಒಳಪೆಟ್ಟು ಆಗಿರುತ್ತದೆ. ನನ್ನ ಮಗನಾದ ಹರ್ಷವರ್ಧನಿಗೆ ಎಡಕಾಲು ತೋಡೆಗೆ ಭಾರೀ ಒಳಪೆಟ್ಟು ಆಗಿ ಮುರಿದಂತಾಗಿರುತ್ತದೆ ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನಮ್ಮ ಸಂಬಂದಿಯಾದ ಮೌನೇಶ ತಂದೆ ನಿಂಗಪ್ಪ ಟಣಕೆದಾರ ವಯಾ: 22 ಸಾ: ಬೀರನೂರ ಇಬ್ಬರೂ ಕೂಡಿ ಸದರಿ ಜಾಗಕ್ಕೆ ಬಂದು ನೋಡಲಾಗಿ ನನ್ನ ಗಂಡ ಹೇಳಿದಂತೆ ಇಬ್ಬರಿಗೂ ಗಾಯಗಳಾಗಿದ್ದು ಇರುತ್ತವೆ. ನಂತರ ಎಲ್ಲರೂ ಕೂಡಿ ನನ್ನ ಮಗನಿಗೆ ಉಪಚಾರ ಕುರಿತು ಕಲಬುರಗಿಯ ಮೇಟ್ರೋ ಪ್ಲಸ್ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ಈ ವಿಷಯದ ಬಗ್ಗೆ ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಸ್ಪೆಂಡರ ಪ್ಲಸ್ ಮೋಟಾರ ಸೈಕಲ್ ನಂ: ಕೆ.ಎ-33/ಯು-7361 ನೇದ್ದರ ಚಾಲಕನಾದ ನನ್ನ ಗಂಡ ಶರಣಪ್ಪ ತಂದೆ ಚಂದ್ರಾಮಪ್ಪ ಟಣಕೆದಾರ ಸಾ: ಬೀರನೂರ ಇವರು ತಿಪ್ಪನಳ್ಳಿ ಗ್ರಾಮ ದಾಟಿ ವಿಬೂತಿ ಹಳ್ಳಿ ಮುಖ್ಯ ರಸ್ತೆ ಸಮೀಪದಲ್ಲಿ ತನ್ನ ಮೋಟಾರ ಸೈಕಲ್ನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆ ಮದ್ಯದಲ್ಲಿ ಹಂದಿ ಅಡ್ಡ ಬಂದಿದ್ದರಿಂದ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಮೋಟಾರ ಸೈಕಲ್ ಸ್ಕಿಡಾಗಿ ರಸ್ತೆ ಮೇಲೆ ಬಿದ್ದು ನನ್ನ ಮಗನಿಗೆ ಭಾರಿ ಗಾಯ ಪಡಿಸಿದ್ದು, ಸದರಿ ಮೋಟಾರ ಸೈಕಲ್ ಚಾಲಕನ ಮೇಲೆ ಕಾನೂನ ಕ್ರಮ ಜರುಗಸಲು ಮಾನ್ಯರವರಲ್ಲಿ ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 201/2022 ಕಲಂ: 279, 337, 338 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 130/2022 ಕಲಂ: 279, 337, 338 ಐಪಿಸಿ: ಇಂದು ದಿನಾಂಕ 25/11/2022 ರಂದು 5-30 ಪಿಎಮ್ ಕ್ಕೆ ಶ್ರೀಮತಿ ಮರೆಮ್ಮ ಗಂಡ ಲಚಮಣ್ಣ ಕಾವಲಿ, ವ:45, ಜಾ:ಕಬ್ಬಲಿಗ, ಉ:ಹೊಲಮನೆ ಕೆಲಸ ಸಾ:ಉಳ್ಳೆಸೂಗುರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಹೊಲಮನೆ ಕೆಲಸ ಮಾಡಿಕೊಂಡು ಗಂಡ-ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ದಿನಾಂಕ:23/11/2022 ರಂದು ನಾನು ಮತ್ತು ನನ್ನ ಮಗಳಾದ ಐಶ್ವರ್ಯ ತಂದೆ ಲಚಮಣ್ಣ ಕಾವಲಿ, ವ:20 ವರ್ಷ ಇಬ್ಬರೂ ಕೂಡಿ ನಮ್ಮೂರಿಂದ ಯಾದಗಿರಿಗೆ ಬಂದು ಮದ್ಯಾಹ್ನದ ವರೆಗೆ ಯಾದಗಿರಿಯಲ್ಲಿ ಸಂತೆ ಮಾಡಿಕೊಂಡು ಮದ್ಯಾಹ್ನ ನಮ್ಮೂರಿಗೆ ಮರಳಿ ಬರಬೇಕೆಂದು ಯಾದಗಿರಿ ಹಳೆ ಬಸ್ ನಿಲ್ದಾಣ ಹತ್ತಿರ ಬಂದು ನಿಂತುಕೊಂಡೆವು. ಹಳೆ ಬಸ್ ಸ್ಟ್ಯಾಂಡ ಹತ್ತಿರ ನಮ್ಮೂರಿಗೆ ಹೋಗಲು ಅಟೋ ನಂ. ಕೆಎ 33 ಎ 9069 ನಿಂತಿದ್ದು, ಅದರ ಚಾಲಕನಾದ ನಮ್ಮೂರ ಹಣಮಂತ ತಂದೆ ಶರಣಪ್ಪ ಸಾ:ಉಳ್ಳೆಸುಗೂರು ಈತನು ಉಳ್ಳೆಸೂಗುರಿಗೆ ಹೋಗುತ್ತೇನೆ ಬನ್ನಿ ಎಂದು ಹೇಳಿದಾಗ ನಾವು ಅಟೋದಲ್ಲಿ ಹತ್ತಿದೆವು. ನನ್ನ ಮಗಳು ಅಟೋದಲ್ಲಿ ಬಲ ಸೈಡಿಗೆ ಕುಂತಳು ನಾನು ಮಧ್ಯದಲ್ಲಿ ಕುಳಿಕೊಂಡೆನು. ಅದೇ ವೇಳೆಗೆ ನಮ್ಮೂರ ನಾಗಮ್ಮ ತಂದೆ ಪರತಪ್ಪ ಕುಂಬಾರ ಇವಳು ಕೂಡಾ ಬಂದು ಅಟೋದಲ್ಲಿ ಹತ್ತಿ ನನ್ನ ಪಕ್ಕದಲ್ಲಿ ಎಡ ಸೈಡಿಗೆ ಕುಂತಳು. ಅಟೋ ಚಾಲಕನು ತನ್ನ ಅಟೋ ಚಲಾಯಿಸಿಕೊಂಡು ಹೊರಟನು. ಯಾದಗಿರಿ-ವಡಗೇರಾ ಮೇನ ರೋಡ ಹಾಲಗೇರಾ ಪ್ರೌಢ ಶಾಲೆ ಸಮೀಪ ದಿಬ್ಬಿ ಹತ್ತಿರ ನಮ್ಮ ಸೈಡಿಗೆ ನಾವು ಹೋಗುತ್ತಿದ್ದಾಗ ಮದ್ಯಾಹ್ನ 3-30 ಗಂಟೆ ಸುಮಾರಿಗೆ ಎದುರುಗಡೆಯಿಂದ ಮಾರುತಿ ವ್ಯಾನ ವಾಹನ ನಂ. ಕೆಎ 33 ಎಮ್ 5993 ನೇದನ್ನು ಅದರ ಚಾಲಕನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಾವು ಹೊರಟ ಅಟೋಗೆ ಬಲ ಸೈಡಿಗೆ ಡಿಕ್ಕಿಪಡಿಸಿ, ಅದೇ ವೇಗದಲ್ಲಿ ಮುಂದೆ ಹೋಗಿ ನಮ್ಮ ಹಿಂದೆ ಬರುತ್ತಿದ್ದ ಮೋಟರ್ ಸೈಕಲ್ ಸವಾರರಿಗೆ ಕೂಡಾ ಡಿಕ್ಕಿಪಡಿಸಿದನು. ಸದರಿ ಅಪಘಾತದಲ್ಲಿ ನನಗೆ ಅಲ್ಲಲ್ಲಿ ಒಳಪೆಟ್ಟಾಗಿದ್ದು ಯಾವುದೇ ರಕ್ತಗಾಯಗಳಾಗಿರಲಿಲ್ಲ ಹೀಗಾಗಿ ನಾನು ಆಸ್ಪತ್ರೆಗೆ ತೋರಿಸಲಿಲ್ಲ. ನನ್ನ ಮಗಳು ಐಶ್ವರ್ಯ ಇವಳಿಗೆ ನೋಡಲಾಗಿ ನನ್ನ ಮಗಳ ಎರಡು ಕಾಲುಗಳಿಗೆ ಪಾದದ ಮೇಲ್ಭಾಗದಲ್ಲಿ ಭಾರಿ ರಕ್ತಗಾಯಗಳಾಗಿ ಎಲುಬು ಮುರಿದಿದ್ದು ಮತ್ತು ಎರಡು ಪಾದಗಳಿಗೆ ಅಲ್ಲಲ್ಲಿ ಭಾರಿ ರಕ್ತ ಗಾಯಗಳಾಗಿದ್ದವು. ಎಡಗಡೆ ಗದ್ದಕ್ಕೆ ತೂತು ಬಿದ್ದ ಭಾರಿಗಾಯ ಮತ್ತು ತಲೆ ಹಿಂಭಾಗದಲ್ಲಿ ರಕ್ತಗಾಯವಾಗಿದ್ದವು. ನಾಗಮ್ಮ ಕುಂಬಾರ ಇವಳಿಗೆ ಎಡಗಡೆ ಮುಡ್ಡಿಗೆ ಭಾರಿ ಒಳಪೆಟ್ಟಾಗಿತ್ತು. ಹಿಂದೆ ಬರುತ್ತಿದ್ದ ಮೋಟರ್ ಸೈಕಲ್ ನಂ. ಕೆಎ 01 ಹೆಚ್.ಬಿ 0011 ಇದ್ದು, ಅದರ ಸವಾರ ಮರಿಲಿಂಗ ತಂದೆ ಬಸವರಾಜ ಹಲಗಿ ಸಾ:ಕೋನಹಳ್ಳಿ ಈತನಿಗೆ ಬಲಗಣ್ಣಿನ ಹುಬ್ಬಿನ ಮೇಲೆ ಭಾರಿ ರಕ್ತಗಾಯ, ಕಣ್ಣಿನ ಕೆಳಗಡೆ, ಗದ್ದಕ್ಕೆ ಮತ್ತು ಕೆಳ ತುಟಿಗೆ ರಕ್ತಗಾಯವಾಗಿ ಎಡಕಾಲ ಮೊಣಕಾಲಿಗೆ ತರಚಿದ ಗಾಯಗಳಾಗಿದ್ದವು. ಹಿಂದೆ ಕುಂತಿದ್ದ ಮರೆಪ್ಪ ತಂದೆ ಶಾಂತಪ್ಪ ಸಾ:ಕೋನಹಳ್ಳಿ ಈತನಿಗೆ ಅಲ್ಲಲ್ಲಿ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದವು. ಮಾರುತಿ ಕಾರನ್ನು ನೋಡಲಾಗಿ ಅದರ ನಂ. ಕೆಎ 33 ಎಮ್ 5993 ಇದ್ದು, ಅದರ ಚಾಲಕನಿಗೆ ಹೆಸರು ವಿಳಾಸ ಕೆಳಿದಾಗ ರವಿ ತಂದೆ ನರಸಿಂಗ ಮುಕ್ಕೆ ಸಾ:ಯಾದಗಿರಿ ಎಂದು ಹೇಳಿದನು. ಸದರಿ ಮಾರುತಿ ವ್ಯಾನಿನಲ್ಲಿ ರವಿ ಈತನ ಹೆಂಡತಿ ಸವಿತಾ ಮತ್ತು ಮಗಳು ಸುಜಾತಾ ಇಬ್ಬರೂ ಇದ್ದು, ಅವರೆಲ್ಲರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆಗ ಯಾರೋ ದಾರಿ ಮೇಲೆ ಹೋಗುವವರು ನಮಗೆ ನೋಡಿ 108 ಅಂಬ್ಯುಲೇನ್ಸ ಕರೆಸಿದ್ದು, ಅದರಲ್ಲಿ ಗಾಯಾಳುಗಳಿಗೆ ಉಪಚಾರ ಕುರಿತು ಯಾದಗಿರಿಗೆ ಕರೆದುಕೊಂಡು ಬಂದಿದ್ದು, ನನ್ನ ಮಗಳು ಐಶ್ವರ್ಯ ಮತ್ತು ನಮ್ಮೂರ ನಾಗಮ್ಮ ಇವರಿಗೆ ಯಾದಗಿರಿಯ ಶರಣಬಸವ ಆಸ್ಪತ್ರೆಯಲ್ಲಿ ತೋರಿಸಿ, ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ರಾಯಚೂರಿನ ಆರಾಧನಾ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತೇವೆ. ಮೋಟರ್ ಸೈಕಲ್ ಮೇಲಿದ್ದವರಿಗೆ ಮತ್ತು ಮಾರುತಿ ವ್ಯಾನಿನಲ್ಲಿದ್ದವರಿಗೆ ಯಾದಗಿರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಸದರಿ ರಾಯಚೂರು ಆರಾಧನಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿರುತ್ತಾರೆ. ನನ್ನ ಮಗಳಿಗೆ ನಾನು ಆಸ್ಪತ್ರೆಗೆ ಸೇರಿಕೆ ಮಾಡಿದ ನಂತರ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಸದರಿ ಮಾರುತಿ ವ್ಯಾನಿನ ಚಾಲಕ ರವಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 130/2022 ಕಲಂ: 279, 337, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 26-11-2022 10:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080