ಅಭಿಪ್ರಾಯ / ಸಲಹೆಗಳು

                    ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 26-12-2022ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 174/2022 ಕಲಂ: 279, 304(ಎ) ಐ.ಪಿ.ಸಿ: ಇಂದು ದಿನಾಂಕ 25/12/2022 ರಂದು 9.00 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ತುಳಜಾರಾಮ ತಂದೆ ಬಸವರಾಜ ಸೂರ್ಯವಂಶಿ ವಯಾ|| 38 ಜಾ|| ಗೊಂದಳಿ ಉ|| ಬಾಂಡೆ ವ್ಯಾಪಾರ ಸಾ|| ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಅಜರ್ಿ ಸಲ್ಲಿಸಿದ್ದು, ಅದರ ಸಾರಾಂಶವೇನೆಂದರೆ, ನಮಗೆ 4 ಜನ ಮಕ್ಕಳಿದ್ದು, 1)ಸಾಕ್ಷಿ ವ|| 11ವರ್ಷ, 2)ಭೂಮಿಕಾ ವ|| 9ವರ್ಷ, 3)ರೋಹಿತ ವ|| 7ವರ್ಷ ಮತ್ತು 4)ರೋಹಿಣಿ ವ|| 5ವರ್ಷ ಅಂತಾ ಮಕ್ಕಳಿರುತ್ತಾರೆ.  ನಮ್ಮ ಮನೆಯು ಕೆಂಭಾವಿ ಹುಣಸಗಿ ರಸ್ತೆಯ ಪಕ್ಕದಲ್ಲಿ ಕೆಂಭಾವಿ ಪಟ್ಟಣದ ಹೊರವಲಯದಲ್ಲಿರುವ ಇಂಡೇನ್ ಗ್ಯಾಸ್ ಗೋದಾಮಿನ ಎದುರುಗಡೆ ಇರುತ್ತದೆ. ನಾವು ಮತ್ತು ನಮ್ಮ ಮಕ್ಕಳು ನಮ್ಮ ಮನೆಯಿಂದ ಮೂತ್ರ ವಿಸರ್ಜನೆ ಮಾಡಲು ಅಥವಾ ಸಂಡಾಸ್ ಮಾಡುವುದಕ್ಕಾಗಿ ಹೋಗಲು ಕೆಂಭಾವಿ ಹುಣಸಗಿ ಮುಖ್ಯ ರಸ್ತೆಯು ದಾಟಿ ಹೋಗಬೇಕಾಗುತ್ತದೆ. ಹೀಗಿದ್ದು ಇಂದು ದಿನಾಂಕ 25/12/2022 ರಂದು 12.50 ಪಿಎಂ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಗಂಗಮ್ಮ ಗಂಡ ತುಳಜಾರಾಮ ಸೂರ್ಯವಂಶಿ ಮತ್ತು ನಮ್ಮ ಸಂಬಂಧಿಕನಾದ ಕರೆಪ್ಪ ತಂದೆ ಶಂಕರ ವಾಸ್ಟರ್ ಸಾ|| ಕೆಂಭಾವಿ ಮೂರೂ ಜನರು ನಮ್ಮ ಮನೆಯ ಹತ್ತಿರ ಮುಖ್ಯ ರಸ್ತೆಯ ಪಕ್ಕದಲ್ಲಿ ಮಾತನಾಡುತ್ತಾ ನಿಂತಿದ್ದೆವು. ಅದೇ ವೇಳೆಗೆ ನನ್ನ ಮಗನಾದ ರೋಹಿತ ತಂದೆ ತುಳಜಾರಾಮ ಸೂರ್ಯವಂಶಿ ವ|| 7ವರ್ಷ ಜಾ|| ಗೊಂದಳಿ ಉ|| ವಿದ್ಯಾಥರ್ಿ ಸಾ|| ಕೆಂಭಾವಿ ಈತನು ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ತಂಬಿಗೆ ತೆಗೆದುಕೊಂಡು ಹೋಗಿದ್ದನು. ನಂತರ 10 ನಿಮಿಷವಾದ ಬಳಿಕ ಅಂದರೆ 1.00 ಪಿಎಂ ಸುಮಾರಿಗೆ ನನ್ನ ಮಗನಾದ ರೋಹಿತನು ನಮ್ಮ ಮನೆಯ ಕಡೆಗೆ ಬರುವ ಕುರಿತು ಇಂಡೇನ್ ಗ್ಯಾಸ್ ಗೋದಾಮಿನ ಮುಂದೆ ಕೆಂಭಾವಿ ಹುಣಸಗಿ ಮುಖ್ಯ ರಸ್ತೆ ದಾಟುತ್ತಿದ್ದಾಗ ಕೆಂಭಾವಿ ಕಡೆಯಿಂದ ಹುಣಸಗಿ ಕಡೆಗೆ ಹೋಗುವ ಒಂದು ಟಾಟಾ ಏಸ್ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನ್ನ ಮಗನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದು ಅಪಘಾತದಿಂದಾಗಿ ನನ್ನ ಮಗನಾದ ರೋಹಿತನು ಕೆಳಗೆ ಬಿದ್ದಿದ್ದು ಅವನ ಹೊಟ್ಟೆ ಮತ್ತು ಸೊಂಟದ ಮೇಲೆ ಟಾಟಾ ಏಸ್ ವಾಹನದ ಬಲಗಡೆಯ ಎರಡೂ ಗಾಲಿಗಳು ಹಾಯ್ದಿದ್ದು ತಕ್ಷಣ ನಾನು, ನನ್ನ ಹೆಂಡತಿಯಾದ ಗಂಗಮ್ಮ, ನಮ್ಮ ಸಂಬಂಧಿಕನಾದ ಕರೆಪ್ಪ ಮೂರೂ ಜನರು ಹೋಗಿ ನನ್ನ ಮಗನಿಗೆ ಎಬ್ಬಿಸಿ ನೋಡಲಾಗಿ ಹೊಟ್ಟೆಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು, ಸೊಂಟಕ್ಕೆ ಭಾರೀ ಗುಪ್ತಗಾಯವಾಗಿದ್ದು ಮುಖಕ್ಕೆ, ಬೆನ್ನಿಗೆ ತರಚಿದ ರಕ್ತಗಾಯವಾಗಿದ್ದು, ಬಾಯಿಯಿಂದ ರಕ್ತಸ್ರಾವವಾಗಿ ಮಾತನಾಡಿದ ಸ್ಥಿತಿಯಲ್ಲಿ ಬಿದ್ದಿದ್ದು, ಅಪಘಾತಪಡಿಸಿದ ಟಾಟಾ ಏಸ್ ವಾಹನದ ನಂಬರ ನೋಡಲಾಗಿ ಕೆಎ 34 ಬಿ 6230 ನೇದ್ದು ಇದ್ದು ಅದರ ಚಾಲಕನು ಅಲ್ಲಿಯೇ ನಿಂತಿದ್ದು ಅವನ ಹೆಸರು ಮಲ್ಲಣ್ಣ ತಂದೆ ಕರಬಸಪ್ಪ ಕುಂಬಾರ ಸಾ|| ಕೆಂಭಾವಿ ಅಂತಾ ಇದ್ದು ನಮಗೆ ತುಂಬಾ ಪರಿಚಯ ಇರುತ್ತಾನೆ. ನನ್ನ ಮಗನಾದ ರೋಹಿತನಿಗೆ ಭಾರೀ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದರಿಂದ ತಕ್ಷಣ ಒಂದು ಖಾಸಗಿ ಕಾರಿನಲ್ಲಿ ಹಾಕಿಕೊಂಡು ಕಲಬುರಗಿಯ ಅಮೃತ ಸ್ಪರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದೆವು. ಆದರೆ ನನ್ನ ಮಗನಾದ ರೋಹಿತನು ಇಂದು ದಿನಾಂಕ 25/12/2022 ರಂದು 6.00 ಪಿಎಂ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಈ ಅಪಘಾತಕ್ಕೆ ಟಾಟಾ ಏಸ್ ವಾಹನ ನಂಬರ ಕೆಎ 34 ಬಿ 6230 ನೇದ್ದರ ಚಾಲಕನಾದ ಮಲ್ಲಣ್ಣ ಕುಂಬಾರ ಸಾ|| ಕೆಂಭಾವಿ ಈತನ ಅತೀವೇಗ ಹಾಗೂ ಅಲಕ್ಷತನದ ಚಾಲನೆಯೇ ಕಾರಣವಾಗಿದ್ದು, ಅಪಘಾತಪಡಿಸಿ ನನ್ನ ಮಗನ ಸಾವಿಗೆ ಕಾರಣನಾದ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 174/2022 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 138/2022 ಕಲಂ 279, 337, 338 ಐಪಿಸಿ: ಇಂದು ದಿನಾಂಕ 25.12.2022 ರಂದು ಮಧ್ಯಾಹ್ನ 1.30 ಗಂಟೆಗೆ ಜೈಪಾಲರೆಡ್ಡಿ ತಂದೆ ಕೃಷ್ಣಾರೆಡ್ಡಿ ವನಿಗೇರಿ, ವ|| 27 ವರ್ಷ, ಜಾ|| ರೆಡ್ಡಿ, ಉ|| ಸಾಫ್ಟವೇರ್ ಇಂಜಿನಿಯರ್, ಸಾ|| ಸಂಕ್ಲಾಪೂರ ಗ್ರಾಮ, ಹಾ||ವ|| ಹೈದ್ರಾಬಾದ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 22.12.2022 ರಂದು ಮಧ್ಯಾಹ್ನ ವೇಳೆ ನಾನು ಹೈದ್ರಾಬಾದ ನಗರದಲ್ಲಿದ್ದಾಗ ನಮ್ಮ ಸಂಬಂಧಿ ರಾಮಮೋಹನರೆಡ್ಡಿ ತಂದೆ ವೆಂಕಟರೆಡ್ಡಿ ದೊಡ್ಡಿ ಜೈಗ್ರಾಂ ಗ್ರಾಮ ಈತನು ನನಗೆ ಫೋನ್ಮಾಡಿ ನನ್ನತಂದೆ ಕೃಷ್ಣಾರೆಡ್ಡಿ ನಮ್ಮೂರಿನಿಂದ ಕೊಂಕಲ್ ಗ್ರಾಮದ ಕಡೆಗೆ ನಮ್ಮ ಮೋಟಾರ್ ಸೈಕಲ್ ಸಂಖ್ಯೆ ಟಿ.ಎಸ್-06-ಎಫ್.ಸಿ-3718 ವಾಹನದ ಮೇಲೆ ಹೋಗುವಾಗ ಕರಣಿಗಿ ಸಮೀಪ ರಸ್ತೆಯ ಮೇಲೆ ಜೈಗ್ರಾಂ ಕಡೆಯಿಂದ ಮೋಟಾರ್ ಸೈಕಲ್ ಸಂಖ್ಯೆ ಕೆಎ-50-ಇ.ಎ-2069 ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದ ಖತಲಪ್ಪ ತಂದೆ ಬಸಪ್ಪ ಕೊರೆಬಾನ ಜೈಗ್ರಾಂ ಗ್ರಾಮ ಈತನು ಮೋಟಾರ್ ಸೈಕಲ್ ವೇಗವಾಗಿ ಓಡಿಸಿಕೊಂಡು ಹೋಗಿ ನನ್ನತಂದೆ ನಡೆಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ಗೆ ಆದಿನ ಮಧ್ಯಾಹ್ನ 3 ಗಂಟೆ ಸುಮಾರಿಗೆ ಡಿಕ್ಕಿಪಡಿಸಿರುತ್ತಾನೆ ಅಂತಾ ತಿಳಿಸಿದ್ದ. ಅಲ್ಲದೆ ರಸ್ತೆ ಅಪಘಾತದಲ್ಲಿ ನನ್ನತಂದೆ ತೆಲೆಗೆ ಭಾರಿ ರಕ್ತಗಾಯವಾಗಿ ಕೋಮದಲ್ಲಿದ್ದಾನೆ ಅಂತಾ ಮತ್ತು ಹಿಂದುಗಡೆಯಿಂದ ಮೋಟಾರ್ ಸೈಕಲ್ ಗುದ್ದಿದ ಖತಲಪ್ಪ ಹಾಗೂ ಅದೇ ಮೋಟಾರ್ ಸೈಕಲ್ ಮೇಲೆ ಹಿಂಬದಿ ಸವಾರಿ ಮಾಡುತ್ತಿದ್ದ ದೇವಪ್ಪ ತಂದೆ ರಾಮುಲು ಮದ್ದೂರು ಇವರಿಗೂ ಸಹ ಗಾಯಗಳಾಗಿದ್ದರಿಂದ 3 ಜನರನ್ನು ಕಾರ್ ವಾಹನದಲ್ಲಿ ಹಾಕಿಕೊಂಡು ನಾರಾಯಣಪೇಟ ಆಸ್ಪತ್ರೆಗೆ ಕರೆದೊಯ್ಯತ್ತಿರುವದಾಗಿ ತಿಳಿಸಿದ್ದ. ಕೂಡಲೇ ನಾನು ಹೈದ್ರಾಬಾದ ಬಿಟ್ಟು ನಾರಾಯಣಪೇಟ ಕಡೆಗೆ ಬರುತ್ತಿದ್ದೆ. ನಾನು ಮಾರ್ಗಮಧ್ಯದಲ್ಲಿ ಇರುವಾಗಲೇ ರಾಮಮೋಹನರೆಡ್ಡಿ ನನಗೆ ಮರಳಿ ಫೋನ್ಮಾಡಿ ನನ್ನ ತಂದೆಯನ್ನು ಮಹಿಬೂಬನಗರ ಆಸ್ಪತ್ರೆಗೆ ಕರೆತರುತ್ತಿರುವದಾಗಿ ಹೇಳಿದ್ದ. ನಾನು ಮಹಿಬೂಬಗರ ಶ್ರೀಕೃಷ್ಣ ಆಸ್ಪತ್ರೆಗೆ ಹೋಗಿ ನನ್ನ ತಂದೆಯನ್ನು ನೋಡಿದ್ದೆ, ನನ್ನತಂದೆ ತೆಲೆಗೆ ಭಾರಿ ಪೆಟ್ಟಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಆದಿನ ತಡರಾತ್ರಿ ಸೈದಾಪೂರ ಪೊಲೀಸರು ಶ್ರೀಕೃಷ್ಣ ಆಸ್ಪತ್ರೆಗೆ ಬಂದು ದೂರು ನೀಡುವಂತೆ ನನಗೆ ಮತ್ತು ನನ್ನತಾಯಿಗೆ ಕೇಳಿದ್ದರು. ಅದಕ್ಕೆ ನಾನು ನನ್ನತಂದೆಗೆ ಉಷಾರ ಆದ ನಂತರ ಅವರಿಗೆ ವಿಚಾರಿಸಿ ಠಾಣೆಗೆ ಬಂದು ದೂರು ಕೊಡುವದಾಗಿ ಪೊಲೀಸರಿಗೆ ತಿಳಿಸಿದ್ದೆ. ಇಂದಿನವರೆಗೂ ನನ್ನತಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಇಂದು ನಾನು ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಿ ನಮ್ಮ ಸಂಬಂಧಿ ಪ್ರತಾಪರೆಡ್ಡಿ ಜೈಗ್ರಾಂ ಈತನೊಂದಿಗೆ ಠಾಣೆಗೆ ಬಂದು ದೂರು ನೀಡಿದ್ದೇನೆ. ನನ್ನತಂದೆಯ ಮೋಟಾರ್ ಸೈಕಲ್ಗೆ ಗುದ್ದಿ ರಸ್ತೆ ಅಪಘಾತ ನಡೆದೋಗಲು ಕಾರಣಿಭೂತನಾದ ಖತಲಪ್ಪ ತಂದೆ ಬಸಪ್ಪ ಸಾ|| ಜೈಗ್ರಾಂ ಗ್ರಾಮ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ ಅಂತಾ ವಗೈರೆ ಆಪಾದನೆ.


ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 42/2022 ಕಲಂ: 323, 354, 504, 506, ಸಂಗಡ 34 ಐಪಿಸಿ: ಇಂದು ದಿನಾಂಕ 25/12/2022 ರಂದು 8:10 ಪಿ.ಎಂ ಕ್ಕೆ ಶ್ರೀಮತಿ ಅಂಬ್ರಮ್ಮ ಗಂಡ ಸಂಗನಬಸಪ್ಪ ಕುಳಗೇರಿ ವ:55 ವರ್ಷ ಉ:ಮನೆಕೆಲಸ ಜಾ:ಹಿಂದು ಲಿಂಗಾಯತ ಸಾ:ಹಗರಟಗಿ ತಾ: ಹುಣಸಗಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ತಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ನನಗೆ ಇಬ್ಬರು ಗಂಡು ಮಕ್ಕಳಿದ್ದು ಇಬ್ಬರದ್ದು ಮದುವೆಯಾಗಿದ್ದು ಹಿರಿಯಮಗ ಮಲ್ಲಿಕಾಜರ್ುನ ಈತನು ತನ್ನ ಹೆಂಡತಿ ಮಕ್ಕಳೊಂದಿಗೆ ವಿಜಯಪೂರದ ಹತ್ತಿರ ಕೌಲಗಿ ಗ್ರಾಮದಲ್ಲಿ ವಾಸವಿರುತ್ತಾನೆ,  ನನ್ನ ಎರಡನೆ ಮಗ ವಿಜಯಕುಮಾರ ಈತನು ಮುರಾಳದಲ್ಲಿ ಮೆಡಿಕಲ್ ಶಾಪ ಅಂಗಡಿ ಇಟ್ಟುಕೊಂಡು ಅಲ್ಲಿಯೆ ಇರುತ್ತಾನೆ, ಮನೆಯಲ್ಲಿ ನಾನು ಮತ್ತು ನನ್ನ ಗಂಡ ಸಂಗನಬಸಪ್ಪ ಹಾಗೂ ನನ್ನ ಸೊಸೆ ಸರಸ್ವತಿ @ ಪ್ರತಿಭಾ ರವರು ಇರುತ್ತೇವೆ. ಇಂದು ದಿನಾಂಕ 25/12/2022 ರಂದು 3:30 ಪಿ.ಎಂ ಸುಮಾರಿಗೆ ನಾನು ಹಾಗೂ ನನ್ನ ಸೊಸೆ ಸರಸ್ವತಿ @ ಪ್ರತಿಭಾ ಇಬ್ಬರು ಕೂಡಿ ಹಗರಟಗಿ ಗ್ರಾಮದಲ್ಲಿ ಇರುವ ನಮ್ಮ ಮನೆಯ ಮುಂದೆ ಅಕ್ಕಿ ಸ್ವಚ್ಛಮಾಡುತ್ತಾ ಕುಳಿತುಕೊಂಡಿದ್ದೇವು ಆಗ ಅಲ್ಲಿಗೆ ಬಂದ ನಮ್ಮೂರ ಕಾಶಿನಾಥ ತಂದೆ ಯಮನಪ್ಪ ಕುಳಗೇರಿ ಈತನು ನನಗೆ ಎಲೆ ಬೋಸುಡಿ ಸೂಳಿ ಎಲ್ಲಿ ಇದ್ದಾನೆ ನಿನ್ನ ಗಂಡ ನಮ್ಮ ಹೊಲದಲ್ಲಿ ಹ್ಯಾಂಗ ಬೇಕ ಹಂಗ ತಿರುಗಾಡಿ ಹೊಲ ಹಾಳಮಾಡ್ಯಾನ ಹಾಗೂ ಎಲ್ಲಾ ಕಡೆ ಕಡ್ಡಿ ಆಡಸಕತ್ತ್ಯಾನ ಇವತ್ತ ಅವನ ಇಲ್ಲೆ ಕಡಿದು ಕಲಾಸ ಮಾಡಿಬಿಡುತ್ತೇನೆ ಅಂತಾ ಅಂದನು,  ಆಗ ನಾನು ಕಾಶಿನಾಥನಿಗೆ ಆಯತಪ್ಪ ನನ್ನ ಗಂಡ ಊರಲ್ಲಿ ಇಲ್ಲ ಬೋರಗಿ ಗ್ರಾಮಕ್ಕೆ ಶ್ರಮಕ್ಕೆ ಹೋಗಿದ್ದಾನೆ ಬರಲಿ ವಿಚಾರ ಮಾಡೋಣಾ ಅಂತಾ ಅಂದೇನು. ಆಗ ಕಾಶಿನಾಥನು ಬೋಸುಡ ಸೂಳಿ ಮನ್ಯಾಗ ಇಟ್ಟುಕೊಂಡು ಇಲ್ಲಾ ಅಂತಾ ಅಂತಿಯಾ ಅಂತಾ ನನ್ನ ಹತ್ತಿರ ಬಂದು ನನಗೆ ಕೈಯಿಂದ ಕಪಾಳಕ್ಕೆ ಹೊಡೆದು ನನ್ನ ಜಂಪರ ಹಿಡಿದು ಎಳೆದಾಡಿ ಅವಮಾನ ಮಾಡಿದನು, ನನಗೆ ಹೊಡೆಯುವದನ್ನು ನೋಡಿ ಕಾಶಿನಾಥನ ಮನೆಯವರಾದ ರವಿ ತಂದೆ ಬಸವರಾಜ ಗೋಗಿ ಹಾಗೂ ಅವನ ಹೆಂಡತಿ ಸಂಗಮ್ಮ ಗಂಡ ಕಾಶಿನಾಥ ಕುಳಗೇರಿ ಹಾಗೂ ಅವರ ಅಕ್ಕ ಸಂಗಮ್ಮ ತಂದೆ ಯಮನಪ್ಪ ಕುಳಗೇರಿ ರವರು ಅಲ್ಲಿಗೆ ಬಂದು ಅವರಲ್ಲಿಯ ಸಂಗಮ್ಮ ತಂದೆ ಯಮನಪ್ಪ ಕುಳಗೇರಿ ಈತಳು ನನಗೆ ಬೋಸುಡಿ ಸೂಳಿ ನಮ್ಮ ತಮ್ಮನೊಂದಿಗೆ ಜಗಳಕ್ಕೆ ಬಿದ್ದಿಯಾ ಅಂತಾ ನಿನ್ನ ಸೊಕ್ಕು ಬಹಳ ಆಗ್ಯಾದ ತಡಿ ನಿನಗ ಮಾಡತಿನಿ ಅಂತಾ ಅಂದು ನನ್ನ ಕೂದಲು ಹಿಡಿದು ನನ್ನ ಬೆನ್ನಿಗೆ ಕೈಯಿಂದ ಗುದ್ದಿದ್ದು ಇರುತ್ತದೆ.  ಆಗ ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಳ್ಳಲು ಬಂದ ನನ್ನ ಸೊಸೆ ಸರಸ್ವತಿ @ ಪ್ರತಿಭಾಳಿಗೆ ಅವರಲ್ಲಿಯ ಸಂಗಮ್ಮ ಗಂಡ ಕಾಶಿನಾಥ ಕುಳಗೇರಿ ಇವಳು ಬೋಸುಡಿ ಸೂಳಿ ನಿಮ್ಮತ್ತಿಗೆ ಹೊಡೆಯುವದನ್ನು ಬಿಡಿಸಿಕೊಳ್ಳಲು ಬರುತ್ತಿಯಾ ಹಲಕಟ್ಟ ರಂಡಿ ಅಂತಾ ಅವಾಚ್ಯವಾಗಿ ಬೈಯ ಹತ್ತಿದಳು. ನಮಗೆ ಹೊಡೆಯುವದು ಹಾಗೂ ಬೈಯುವದನ್ನು ನೋಡಿ ಅಲ್ಲಿಯೇ ಅಂಗಡಿಗೆ ಬಂದಿದ್ದ ನಮ್ಮೂರ ಧರ್ಮಣ್ಣ ತಂದೆ ಗೋವಿಂದಪ್ಪ ತಳವಾರ ಹಾಗೂ ಯಮನಪ್ಪ ತಂದೆ ರಮಣಪ್ಪ ಚಲುವಾದಿ ರವರು ಬಂದು ಬಿಡಿಸಿಕೊಂಡರು ಆಗ ಅವರಲ್ಲಿ ಇದ್ದ ರವಿ ತಂದೆ ಬಸವರಾಜ ಗೋಗಿ ಈತನು ಬೋಸುಡಿ ಸೂಳೆರ ನಿನ್ನ ಗಂಡನಿಗೆ ಸ್ವಲ್ಪ ಸರಿಯಾಗಿ ಹೇಳರಿ ಊರಲ್ಲಿ ಎಲ್ಲಾ ಕಡೆ ಕಡ್ಡಿ ಆಡಸಿದನಂದರ ನಿನ್ನ ಗಂಡನನ್ನು ಕಡಿದು ಕಲಾಸ ಮಾಡಿಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಜಗಳದಲ್ಲಿ ನನಗೆ ಅಷ್ಟೇನು ಪೆಟ್ಟಾಗಿರುವದಿಲ್ಲ ನಾನು ಉಪಚಾರ ಕುರಿತು ಆಸ್ಪತ್ರೆಗೆ ಹೋಗುವದಿಲ್ಲ ಅಂತಾ ನೀಡಿದ ಪಿಯರ್ಾದಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 42/2022 ಕಲಂ 323, 354, 504, 506, ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 100/2022 ಕಲಂ:279, 337, 304(ಎ) ಐಪಿಸಿ:ದಿನಾಂಕ:25/12/2022 ರಂದು 19.00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದೆನೆಂದರೇ, ಇಂದು ದಿನಾಂಕ:25/12/2022 ರಂದು ಸಾಯಂಕಾಲ 5.45 ಗಂಟೆಯ ಸುಮಾರಿಗೆ ನಮ್ಮ ತಮ್ಮನಾದ ಪರಸಪ್ಪ ಉದ್ದನ್ ಈತನು ತನ್ನ ಮಗನಾದ ರಾಚಪ್ಪ ಈತನಿಗೆ ತನ್ನ ಮೋಟಾರ್ ಸೈಕಲ್ ಮೇಲೆ ಹಿಂದೆ ಕೂಡಿಸಿಕೊಂಡು ಕೊಡೇಕಲ್ಲಗೆ ಹೊರಟಾಗ, ಹುಣಸಗಿ-ನಾರಾಯಣಪೂರ ರಸ್ತೆಯ ಮೇಲೆ ರಘುನಾಥಪೂರ ಕ್ಯಾಂಪ್ ಕ್ರಾಸ್ ಹತ್ತಿರ ಪರಸಪ್ಪನು ತನ್ನ ಮೋಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಹೊರಟಾಗ, ಅದೇ ಸಮಯಕ್ಕೆ ಎದುರುಗಡೆಯಿಂದ ಜಟ್ಟೆಪ್ಪ ತಂದೆ ಸಿದ್ದಪ್ಪ ಬಡಿಗೇರ ಈತನು ತನ್ನ ಮೊಟಾರ್ ಸೈಕಲ್ಲ ಹಿಂದೆ  ಬಾಲಪ್ಪ ತಂದೆ ಹುಲಿಗೆಪ್ಪ ಕ್ಯಾದಗೇರಿ ಈತನಿಗೆ ಕೂಡಿಸಿಕೊಂಡು ಅತೀ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ಇಬ್ಬರೂ  ಪರಸ್ಪರ ಮುಖಾಮುಖಿಯಾಗಿ ಅಪಘಾತ ಮಾಡಿಕೊಂಡು ಭಾರಿ ರಕ್ತಗಾಯ & ಒಳಪೆಟ್ಟಾಗಿ, ಪರಸಪ್ಪ, ಜಟ್ಟೆಪ್ಪ, ಬಾಲಪ್ಪ ಇವರು ಮೃತಪಟ್ಟಿದ್ದು, ರಾಚಪ್ಪ ಈತನಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿವೆ ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

ಇತ್ತೀಚಿನ ನವೀಕರಣ​ : 26-12-2022 10:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080