ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 26-08-2021

 

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 108/2021 ಕಲಂ: 279, 337, 338 ಐಪಿಸಿ : ದಿನಾಂಕ:25/08/2021 ರಂದು 7 ಪಿಎಮ್ ಕ್ಕೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಸಾಯಬಣ್ಣ ಹೆಚ್.ಸಿ 102 ರವರಿಗೆ ಸದರಿ ಎಮ್.ಎಲ್.ಸಿ ವಿಚಾರಣೆ ಮಾಡಿಕೊಂಡು ಬರಲು ನೇಮಕ ಮಾಡಿ ಕಳುಹಿಸಿದ್ದು, ಸದರಿಯವರು ಜಿಜಿಹೆಚ್ ಆಸ್ಪತ್ರೆಗೆ 7-15 ಪಿಎಮ್ ಕ್ಕೆ ಭೇಟಿ ನೀಡಿ, ಎಮ್.ಎಲ್.ಸಿ ಸ್ವಿಕೃತ ಮಾಡಿಕೊಂಡು ಆಸ್ಪತ್ರೆಯಲ್ಲಿದ್ದ ಗಾಯಾಳು ಶ್ರೀಮತಿ ಲಕ್ಷ್ಮೀಬಾಯಿ ಗಂಡ ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್, ವ:60, ಜಾ:ಲಿಂಗಾಯತ, ಉ:ಹೊಲಮನೆ ಕೆಲಸ ಸಾ:ಕುರುಕುಂದಾ ತಾ:ವಡಗೇರಾ ಇವರ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡು 8-45 ಪಿಎಮ್ ಕ್ಕೆ ಮರಳಿ ಪೊಲೀಸ್ ಠಾಣೆಗೆ ಬಂದು ಹಾಜರಪಡಿಸಿದ್ದು, ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶವೇನಂದರೆ ನನ್ನ ಮಕ್ಕಳು, ಮೊಮ್ಮಕ್ಕಳು ಬೆಂಗಳೂರಿನಲ್ಲಿ ವಾಸ ಇರುತ್ತಾರೆ. ನಾನು ಒಬ್ಬಳೆ ಕುರುಕುಂದಾ ಗ್ರಾಮದಲ್ಲಿ ಮನೆ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ಹೀಗಿದ್ದು ನನಗೆ ಆರೋಗ್ಯದಲ್ಲಿ ತೊಂದರೆ ಇದ್ದುದ್ದರಿಂದ ನಾನು ಪ್ರತಿ ತಿಂಗಳು ಬೆಂಗಳೂರಿಗೆ ಹೋಗಿ ಆಸ್ಪತ್ರೆಗೆ ತೋರಿಸಿಕೊಂಡು ಮರಳಿ ಊರಿಗೆ ಬರುತ್ತೇನೆ. ಅದರಂತೆ ಇಂದು ದಿನಾಂಕ:25/08/2021 ರಂದು ಸಾಯಂಕಾಲ ಯಾದಗಿರಿಗೆ ಹೋಗಿ ಅಲ್ಲಿಂದ ಬೆಂಗಳೂರಿಗೆ ರೈಲು ಮೂಲಕ ಹೊದರಾಯಿತು ಎಂದು ನಮ್ಮೂರಿಂದ ನಮ್ಮ ಪರಿಚಯದ ಅಬ್ದುಲ್ ರಜಾಕ ತಂದೆ ಅಬ್ದುಲ್ ಬಾಷಾ ಕಲ್ಮನಿ ಈತನಿಗೆ ನನಗೆ ಯಾದಗಿರಿ ರೈಲು ನಿಲ್ದಾಣ ವರೆಗೆ ಮೋಟರ್ ಸೈಕಲ್ ಮೇಲೆ ಬಿಟ್ಟು ಬಾ ಎಂದು ಹೇಳಿದ್ದರಿಂದ ಅವನು ಮೋಟರ್ ಸೈಕಲ್ ನಂ. ಕೆಎ 33 ವ್ಹಿ 0524 ನೇದ್ದರ ಮೇಲೆ ನನಗೆ ಕೂಡಿಸಿಕೊಂಡು ಯಾದಗಿರಿಗೆ ಹೊರಟನು. ಸಾಯಂಕಾಲ 6 ಗಂಟೆ ಸುಮಾರಿಗೆ ಖಾನಾಪೂರ-ಕುರುಕುಂದಾ ರೋಡ ನಮ್ಮ ಕುರುಕುಂದಾ ಗ್ರಾಮದ ಪೂಜಾರಿ ಹಳ್ಳದ ಹತ್ತಿರ ನಮ್ಮ ಪಾಡಿಗೆ ನಾವು ನಿಧಾನವಾಗಿ ಮೋಟರ್ ಸೈಕಲ್ ಮೇಲೆ ಹೋಗುತ್ತಿದ್ದಾಗ ಎದುರುಗಡೆ ಖಾನಾಪೂರ ಕಡೆಯಿಂದ ಮೋಟರ್ ಸೈಕಲ್ ನಂ. ಕೆಎ 33 ವೈ 4612 ನೇದ್ದನ್ನು ಅದರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ರೋಡಿನ ಆ ಕಡೆ ಈ ಕಡೆ ಚಲಾಯಿಸಿಕೊಂಡು ಬಂದು ಎದುರುನಿಂದ ನಮಗೆ ಡಿಕ್ಕಿಪಡಿಸಿದನು. ಅಪಘಾತದಲ್ಲಿ ನಾನು ಮತ್ತು ಅಬ್ದುಲ್ ರಜಾಕ ಇಬ್ಬರೂ ಮೋಟರ್ ಸೈಕಲ್ ಸಮೇತ ಕೆಳಗಡೆ ಬಿದ್ದು ಬಿಟ್ಟೆವು. ನಮಗೆ ಡಿಕ್ಕಿಪಡಿಸಿದ ಮೋಟರ್ ಸೈಕಲ್ ಸವಾರರು ಕೂಡಾ ಮೋಟರ್ ಸೈಕಲ್ ಸಮೇತ ಕೆಳಗಡೆ ಬಿದ್ದುಬಿಟ್ಟರು. ಅಪಘಾತದಲ್ಲಿ ನನಗೆ ಬಲ ಮೊಳಕಾಲ ಕೆಳಗಡೆ ಭಾರಿ ಒಳಪೆಟ್ಟಾಗಿತ್ತು. ಅಬ್ದುಲಸಾಬನಿಗೆ ಹಣೆಗೆ ಮತ್ತು ಗದ್ದಕ್ಕೆ ಭಾರಿ ರಕ್ತಗಾಯಗಳಾಗಿದ್ದವು. ನಮಗೆ ಡಿಕ್ಕಿಪಡಿಸಿದ ಮೋಟರ್ ಸೈಕಲ್ ಸವಾರನ ಮತ್ತು ಹಿಂದೆ ಕುಳಿತವನು ಇಬ್ಬರೂ ನಮ್ಮ ಗ್ರಾಮದವರೆ ಇರುತ್ತಾರೆ. ಸದರಿ ಮೋಟರ್ ಸೈಕಲ್ ಸವಾರನ ಹೆಸರು ಜೈಹಿರೋದ್ದಿನ ತಂದೆ ಬಾಷುಮಿಯಾ ಸಾ:ಕುರುಕುಂದಾ ಮತ್ತು ಹಿಂದೆ ಕುಳಿತವನ ಹೆಸರು ಮಹ್ಮದಸಾಬ ತಂದೆ ಬಾವಾಸಾಬ ಮೊಮಿನ ಇರುತ್ತಾರೆ. ಅಪಘಾತದಲ್ಲಿ ಜೈಹಿರೋದ್ದಿನ ಈತನಿಗೆ ತೆಲೆಗೆ ಭಾರಿ ರಕ್ತಗಾಯ, ಬಲಕಣ್ಣಿನ ಮೇಲೆ ರಕ್ತಗಾಯವಾಗಿತ್ತು. ಮೋಟರ್ ಸೈಕಲ್ ಹಿಂದೆ ಕುಳಿತ ಮೊಹ್ಮದಸಾಬನಿಗೆ ತೆಲೆಗೆ ಭಾರಿ ರಕ್ತಗಾಯವಾಗಿತ್ತು. ಯಾರೋ ದಾರಿ ಮೇಲೆ ಹೋಗುವವರು ಅಪಘಾತವಾದದ್ದನ್ನು ನೋಡಿ 108 ಅಂಬುಲೇನ್ಸಗೆ ಫೋನ ಮಾಡಿ ಕರೆಸಿ, ನಮಗೆ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತಾರೆ. ಕಾರಣ ಸದರಿ ಮೋಟರ್ ಸೈಕಲ್ ನಂ. ಕೆಎ 33 ವೈ 4612 ನೇದ್ದರ ಸವಾರನಾದ ಜೈಹಿರೋದ್ದಿನನು ತನ್ನ ಮೋಟರ್ ಸೈಕಲ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ರೋಡಿನ ಆ ಕಡೆ ಈ ಕಡೆ ಚಲಾಯಿಸಿಕೊಂಡು ಬಂದು ನಮಗೆ ಡಿಕ್ಕಿಪಡಿಸಿ ಭಾರಿ ಗಾಯಗೊಳಿಸಿರುತ್ತಾನೆ. ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಹೇಳಿ ಟೈಪ ಮಾಡಿಸಿದ ಹೇಳಿಕೆ ನಿಜವಿರುತ್ತದೆ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 108/2021 ಕಲಂ: 279, 337, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂಬರ 196/2021 ಕಲಂ 420, 504, 506, ಸಂ 34 ಐಪಿಸಿ : ಇಂದು ದಿನಾಂಕ:25/08/2021 ರಂದು 16-00 ಗಂಟೆಯ ಸುಮಾರಿಗೆ ಶಹಾಪೂರ ಪೊಲೀಸ್ ಠಾಣೆಯ ಕೋರ್ಟ ಸಿಬ್ಬಂದಿಯಾದ ರಾಮಣ್ಣ ಪಿಸಿ-424 ರವರು ಠಾಣೆಗೆ ಹಾಜರಾಗಿ ಕ್ನಡದಲ್ಲಿ ಟೈಪ್ ಮಾಡಿಸಿದ ಖಾಸಗಿ ದೂರು ಸಂ.93/2021 ನೇದ್ದು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಶಹಾಪೂರ ನಗರದಲ್ಲಿನ ನಕ್ಷತ್ರ ಡೆವಲಪರ್ಸ್ ನೊಂದಣಿ ಹೆಸರಿನ ಮಾಲೀಕ ಆರೋಪಿ ನಂ.1 ರವರು ನಗರದ ಹಳಿಸಗರದ ಬಳಿ ಸವರ್ೇ ನಂ. 171 ಹಾಗೂ 174 ರಲ್ಲಿ ನಿವೇಶನ ಮಾಡುವ ಉದ್ದೇಶವಿದ್ದು ಅದರ ಹೆಸರು ಸೂರ್ಯ ನಗರ ಎಂದು ನಾಮಕರಣ ಮಾಡಿದ್ದು ಇರುತ್ತದೆ. ಅಲ್ಲದೇ ಆರೋಪಿ ನಂ.01 ಮತ್ತು 02 ಅವರ ಕಛೇರಿ ನಗರದ ಗಿಂಡಿ ಕಾಂಪ್ಲೇಕ್ಸ್ ಹಳೆ ಅಂಚೆ ಕಛೇರಿಯ ಹತ್ತೀರ (ಡಾ|| ಮಹೇಶ ಆಸ್ಪತ್ರೆಯ ಹತ್ತೀರ) ಇರುತ್ತದೆ. ಮೋ ನಂ.9972607004, 9341643035 ಇರುತ್ತದೆ. ಪ್ರತಿ ತಿಂಗಳು ಡ್ರಾ ಮೂಲಕ ನಿವೇಶನ ನೀಡಲಾಗುತ್ತದೆ. ಪ್ರತಿ ತಿಂಗಳು 1000 ರೂ. ಹಣವನ್ನು ಸಂದಾಯ ಮಾಡಬೇಕು. ಎಂದು ಮಾತುಕತೆ ಆಗಿದ್ದು ಇರುತ್ತದೆ. ಪಿಯರ್ಾದಿದಾರ ಹೇಳುವದೇನೆಂದರೆ ಅದರಂತೆ ನಕ್ಷತ್ರ ಡವಲಪರ್ಸ್ ನೊಂದಣಿ ಹೆಸರಿನ ಮಾಲೀಕ ಆರೋಪಿ ನಂ.1 ಮತ್ತು 2 ರವರು ನಗರದ ಹಳಿಸಗರ ಬಳಿ ಸವರ್ೆ ನಂ 171 ಹಾಗೂ 174 ರಲ್ಲಿ ನಿವೇಶನ ಮಾಡುವ ಉದ್ದೇಶ ಹೊಂದಿದ್ದ ಮತ್ತು ಅದರ ಹೇಸರು ಸೂರ್ಯನಗರ ಎಂದು ನಾಮಕರಣ ಮಾಡಿದ ಪ್ರದೇಶದಲ್ಲಿ ನಿವೇಶನ ಪಡೆಯುವ ಉದ್ದೇಶದಿಂದ ದಿನಾಂಕ-31/10/2008 ರಂದು ಪಿಯರ್ಾದಿದಾರ ನೊಂದಣಿ ಮಾಡಿಸಿ ಪ್ರತಿ ತಿಂಗಳು ನಿಗದಿಪಡಿಸಿದ ಹಣವನ್ನು ಪಾವತಿಸುತ್ತಾ ಬಂದಿರುತ್ತಾರೆ. ಪಿಯರ್ಾದಾರ ಹೇಳುವದೆನೆಂದರೆ ಆರೋಪಿ ನಂ,01 ಮತ್ತು 02 ಅವರು ನಿಗದಿಪಡಿಸಿದ ಅವಧಿ ಮುಗಿದು 04 ವರ್ಷ ಕಳೆದರೂ ಸಹ ಕರಾರಿನ ಪ್ರಕಾರ ನಿವೇಶನವನ್ನು ನೀಡದೇ ಮೋಸ ಮಾಡುವ ಉದ್ದೇಶದಿಂದ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮೋಸ ಮಾಡುತ್ತಿರುವುದು ನಗರ ಸಭೆಯ ಕಛೇರಿಗೆ ತೆರಳಿ ದಾಖಲೆಗಳನ್ನು ಪರೀಶಿಲಿಸಿದಾಗ ಅದು ಪಿಯರ್ಾದಿದಾರನ ಅರಿವಿಗೆ ಬಂದಿತು ನಂತರ ನಿವೇಶನ ನೀಡುವಂತೆ ಕೇಳಿದಾಗ ಇಲ್ಲದ ಸಬೂಬು ಹೇಳುತ್ತಾ ಮುಂದುಡುತ್ತಾ ಬಂದಿದ್ದಾರೆ ಎಂಬುವುದು ಫಿಯರ್ಾದಿದಾರನ ಆರೋಪ, ಹೀಗಿರುವಾಗ ದಿನಾಂಕ-09/08/2021 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ನಾನು ಹೋಸ ಬಸ್ ನಿಲ್ದಾಣದ ಬಳಿ ಕಲಬುರಗಿಗೆ ವೈಯಕ್ತಿಕ ಕೆಲಸದ ಮೇಲೆ ತೆರಳಲು ಬಸ್ ಕಾಯುತ್ತಾ ನಿಂತಿದ್ದೆ. ಆಗ ನಮ್ಮ ಗೆಳೆಯರಾದ (ಸಾಕ್ಷಿದಾರರು) ಮಹ್ಮದ್ ಮುಜಾಹಿದ ಪಟೇಲ್ ತಂದೆ ಮಹಮದ್ ಬಸೀರ್ ಅಹ್ಮದ್ ಪಟೇಲ್ ಹಾಗೂ ವಸೀಮ್ ತಂದೆ ಹಸನ್ ಅಸ್ಕರಿ ಆಗಮಿಸಿದರು. ಅವರ ಜೋತೆ ಮಾತನಾಡುತ್ತಾ ನಿಂತಾಗ ಆರೋಪಿಗಳಾಗ 01 ಮತ್ತು 02 ಅವರು ಆಗಮಿಸಿ ಲೇ ತುರುಕಾ ಸೂಳೇ ಮಗನೇ ಪ್ಲಾಟ್ ಕೋಡು ಅಂತಾ ಕೇಳಲಿಕ್ಕೆ ನಿಮ್ಮಪ್ಪನ ಆಸ್ತಿ ಎಂದು ತಿಳಿದುಕೊಂಡಿದ್ದಿಯಾ ಲಂಗಾ ಸೂಳಿ ಮಗನೇ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ನನಗೆ ಹೋಡೆಯಲು ಬಂದರು. ಆಗ ನನ್ನ ಗೆಳೆಯರಾದ (ಸಾಕ್ಷಿದಾರರು) ಜಗಳ ಬಿಡಿಸಿದರು. ನೋಡು ಇವರು ಜಗಳ ಬಿಡಿಸ್ಯಾರ ಅಂತಾ ನೀನು ಉಳಿದುಕೊಂಡಿದ್ದಿ ನಾವು ಯಾವುದೇ ಪ್ಲಾಟ್ (ನಿವೇಶನ) ಕೊಡುವುದಿಲ್ಲ. ನಾವು ಮೋಸ ಮಾಡಿ ನಿನ್ನ ಬಳಿ ಹಣ ತೆಗೆದುಕೊಂಡಿದ್ದೇವೆ ಇನ್ನೊಂದು ಸಲ ಮೋಸ ಮಾಡ್ಯಾರ ಪ್ಲಾಟ್ ಕೊಡುವುದಿಲ್ಲ ಅಂತಾ ಹೇಳಿದಿ ಅಂದರೆ ಪೆಟ್ರೋಲ್ ಹಾಕಿ ಸುಡುತ್ತಿ ಜೀವ ಸಹಿತ ಬಿಡುವುದಿಲ್ಲ ಎಂದು ಜೀವದ ಬೆದರಿಕೆ ಹಾಕಿದರು. ಸದರಿ ಖಾಸಗಿ ದೂರಿನ ಮೇರೆಗೆ ಶಹಾಪೂರ ಪೊಲೀಸ್ ಠಾಣೆಯ ಗುನ್ನೆ ನಂ.196/2021 ಕಲಂ.420, 504, 506, ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂ 197/2021 ಕಲಂ 420.504.506. ಐ.ಪಿ.ಸಿ. : ಇಂದು ದಿನಾಂಕ 25/08/2021 ರಂದು 16-00 ಗಂಟೆಗೆ ಕೊರ್ಟ ಸಿಬ್ಬಂದಿ ಶ್ರೀ ರಾಮಣ್ಣ ಪಿ.ಸಿ. 424. ಶಹಾಪೂರ ಠಾಣೆ ರವರು ಠಾಣೆಗೆ ಬಂದು ಪಿಯರ್ಾದಿ ಶ್ರೀ ರಾಮನಗೌಡ ತಂದೆ ಸಾಹೇಬಗೌಡ ವಂದಗನೋರ ಸಾ|| ಯಾಳಗಿ (ಕೆಂಭಾಗಿ) ಹಾ||ವ|| ಶಹಾಪೂರ ಇವರು ಮಾನ್ಯ ಪ್ರಧಾನ ಜೆ.ಎಂ.ಎಫ್. ಸಿ ನ್ಯಾಯಾಲಯ ಶಹಾಪೂರ ರವರಲ್ಲಿ ಕನ್ನಡದಲ್ಲಿ ಸಲ್ಲಿಸಿದ ಖಾಸಗಿ ದೂರು ಸಂಖ್ಯೆ 94/2021 ನ್ನೇದ್ದನ್ನು ತಂದು ಹಾಜರ ಪಡಿಸಿದ ಸಾರಾಂಶವೆನೆಂದರೆ. ಅದು ಹೇಳುವುದೆನೆಂದರೆ, ಪಿಯರ್ಾದಿದಾರನು ಆರೋಪಿಯ ಜೆ.ಸಿ.ಬಿ. ನಂ ಕೆಎ-31 ಎಂ-6914 3ಡಿಎಕ್ಸಝಡ್ ಮಾಡೆಲ್ ಹಳದಿ ಬಣ್ಣ ಜೇಸಿಬಿಯನ್ನು ಒಟ್ಟು ರೂ 8,75,000/- ಖರಿದಿಯನ್ನು ತೆಗೆದುಕೊಂಡಿದ್ದು. ಸದರಿ ಜೆಸಿಬಿಯ ಖರೀದಿ ಒಪ್ಪಂದದ ಪ್ರಕಾರ ಪಿಯರ್ಾದಿದಾರನು ಆರೋಪಿಗೆ ಒಟ್ಟು ರೂ. 6,00,000/- ರೂಪಾಯಿಗಳನ್ನು ಚೆಕ್ ಮುಖಾಂತರ ಹಣವನ್ನು ಕೊಟ್ಟಿರುತ್ತಾನೆ. ಇನ್ನುಳಿದ ರೂ 2,75,000/- ಕ್ಲಿಯರೆನ್ಸ ಸಟರ್ಿಫಿಕೇಟ್ ಪಿಯರ್ಾದುದಾರನು ಪಡೆದುಕೊಂಡ ನಂತರ ತನ್ನ ಹೆಸರಿನಲ್ಲಿ ಸದರಿ ಜೆ.ಸಿ.ಬಿ.ಯನ್ನು ವಗರ್ಾವಣೆ ಮಾಡಿಕೊಂಡನಂತರ ಇನ್ನುಳಿದ ರೂ 2,75,000/- ಕೊಡಬೇಕು ಎಂದು ಜೆಸಿಬಿ ಖರೀದಿ ಕರಾರು ಪತ್ರ ಆಗಿರುತ್ತದೆ. ಸದರಿ ಜೆಸಿಬಿ ಖರಿದಿ ಕರಾರು ಪತ್ರದ ನಕಲು ಪ್ರತಿಯನ್ನು ಮಾನ್ಯ ನ್ಯಾಯಾಲಯದ ಮಾಹಿತಿಗಾಗಿ ಸದರಿ ಖಾಸಗಿ ಪಿಯರ್ಾದಿಯೊಂದಿಗೆ ಲಗತ್ತಿಸಲಾಗಿರುತ್ತದೆ. ಅದು ಹೇಳುವಿದೇನಂದರೆ. ಆರೋಪಿಯು ಪಿಯರ್ಾದುದಾರನಿಗೆ ಫಾರಂ ನಂ 29 & 30 ಸಹಿ ಮಾಡಿಕೊಟ್ಟಿದ್ದು. ಆದರೆ ಆರೋಪಿಯು ಸಹಿ ಮಾಡಿ ಕೊಟ್ಟಿದ್ದರೂ ಸಹ ಪಿಯರ್ಾದುದಾರನು ತನ್ನ ಹೆಸರಿಗೆ ಮಾಡಿಕೊಡಲು ವಿನಾ ಕಾರಣ ತಕರಾರು ಮಾಡುತ್ತಿದ್ದು ಮತ್ತು ಇನ್ನು ಹೆಚ್ಚಿನ ಹಣವನ್ನು ಕೊಡಬೇಕು ಎಂದು ಆರೋಪಿಯು ಪಿಯರ್ಾದುದಾರನಿಗೆ ತೊಂದರೆ ನಿಡುತ್ತಿದ್ದನು, ಮತ್ತು ಸದರಿ ಜೇ.ಸಿ.ಬಿಯು ಪಿಯರ್ಾದುದಾರನು ಖರೀದಿ ಮಾಡಿದ್ದು ಮತ್ತು ಪಿಯರ್ಾದುದಾರನ ಸ್ವಾದಿನದಲ್ಲಿ ಜೆಸಿಬಿ ಇದ್ದರು ಸಹ ಆರೋಪಿಯು ಪಿಯರ್ಾದುದಾರನಿಗೆ ಮೋಸ, ವಂಚನೆ, ಮಾಡುವ ಸಲುವಾಗಿ ಶಹಾಪೂರ ತಾಲೂಕಿನ ತಿಪನಳ್ಳಿ ಕ್ರಾಸ್ ಹತ್ತಿರ ಜೆಸಿಬಿ ಚಾಲಕನು ಕಾಮಗಾರಿ ಮಾಡುತ್ತಿದ್ದಾಗ ಆರೋಪಿಯು ಬಂದು ಜಬರದಸ್ತಿನಿಂದ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೇದರಿಕೆ ಹಾಕಿ ಸದರಿ ಜೆಸಿಬಿ ನಂ ಕೆಎ-31 ಎಂ-6914 ತೆಗೆದುಕೊಂಡು ಹೋಗಿರುತ್ತಾನೆ. ಇದರಿಂದ ಪಿಯರ್ಾದಿದಾರನಿಗೆ ತುಂಬಾ ಹಣಕಾಸಿನ ನಷ್ಟ ಉಂಟಾಗಿರುತ್ತದೆ. ಅಂತ ಖಾಸಗಿ ಪಿಯರ್ಾದಿ ಇರುತ್ತದೆ. ಸದರಿ ಖಾಸಗಿ ದೂರಿನ ಮೇರೆಗೆ ಠಾಣೆ ಗುನ್ನೆ ನಂ 197/2021 ಕಲಂ 420. 504. 506. ಐ.ಪಿ.ಸಿ.

 

ಇತ್ತೀಚಿನ ನವೀಕರಣ​ : 26-08-2021 09:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080