ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/03/2021

ಯಾದಗಿರ ನಗರ ಪೊಲೀಸ ಠಾಣೆ:- 40/2021 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ.26/03/2021 ರಂದು 8-15 ಪಿಎಂಕ್ಕೆ ಶ್ರೀ ಸೋಮಶೇಖರ ಎಸ್.ಕೆಂಚರೆಡ್ಡಿ ಸಿಪಿಐ ಯಾದಗಿರಿ ವೃತ್ತ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಒಂದು ಜ್ಞಾಪನಾ ಪತ್ರವನ್ನು ಒಪ್ಪಿಸಿದ್ದು ಸದರಿ ಸಾರಾಂಶವೆನೆಂದರೆ, ಇಂದು ದಿನಾಂಕ: 26/03/2021 ರಂದು 05:30 ಪಿ.ಎಮ್. ಸುಮಾರಿಗೆ ಯಾದಗಿರಿ ನಗರದ ಶಾಸ್ತ್ರೀ ಚೌಕ ಹತ್ತಿರ ಮೀನು ಮಾರುಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಮಟಕಾ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ಕೈಗೊಳ್ಳಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಮಾನ್ಯ ಡಿ.ಎಸ್.ಪಿ.ಸಾಹೇಬರು ಯಾದಗಿರಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಇಬ್ಬರು ಪಂಚರೊಂದಿಗೆ ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ಸಾಯಂಕಾಲ 6-50 ಪಿ.ಎಮ್.ಕ್ಕೆ ದಾಳಿ ಕೈಗೊಂಡು ಮಟಕಾ ಜೂಜಾಟ ಆಡಿಸುತ್ತಿದ್ದ 1)ಗೋವಿಂದ ತಂದೆ ಚಂದ್ರಕಾಂತ ಚವ್ಹಾಣ, ವ:35, ಜಾ:ಲಮ್ಮಾಣಿ, ಉ:ಕೂಲಿ ಸಾ:ಲಾಡೇಜ್ ಗಲ್ಲಿ ಯಾದಗಿರಿ, 2)ಬ್ರಹ್ಮ ತಂದೆ ಹಣಮಂತ ಕೊಂಬಿನೋರ, ವ:31, ಜಾ:ಎಸ್.ಸಿ, ಉ:ವ್ಯಾಪಾರ ಸಾ:ಅಂಬೇಡ್ಕರ ನಗರ ಯಾದಗಿರಿ, 3)ಜಗಧೀಶ ತಂದೆ ಮಾಣಿಕಪ್ಪ ಕೊಟ್ರಿಕೆ, ವ:26, ಜಾ:ಎಸ್.ಸಿ, ಉ:ಒಕ್ಕಲುತನ ಸಾ:ಚಿಂತನಹಳ್ಳಿ ತಾ:ಗುರುಮಠಕಲ್ ಇವರಿಗೆ ವಶಕ್ಕೆ ಪಡೆದುಕೊಂಡು ಸದರಿಯವರಿಂದ ಒಟ್ಟು 1)ನಗದು ಹಣ ರೂ.11,500/-, 2)ಎರಡು ಮಟಕಾ ಅಂಕಿಗಳ ಚೀಟಿಗಳು, 3)ಎರಡು ಬಾಲ್ಪೆನ್ ದೊರೆತಿದ್ದು ಈ ಬಗ್ಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕೈಕೊಂಡಿದ್ದು ಇರುತ್ತದೆ. ಮೇಲ್ಕಂಡ ಆರೋಪಿತರಿಗೆ ವಿಚಾರಣೆಗೆ ಒಳಪಡಿಸಲಾಗಿ ಸದರಿಯವರು ಸಾರ್ವಜನಿಕರಿಂದ ಮಟಕಾ ನಂಬರ್ಗಳನ್ನು ಬರೆದುಕೊಂಡು ಅದರಿಂದ ಬಂದ ಹಣವನ್ನು ಮತ್ತು ಪಟ್ಟಿಯನ್ನು ಶರಣಪ್ಪ ಹಂದಿ ಸಾ:ಲಾಡೇಜ್ಗಲ್ಲಿ ಯಾದಗಿರಿ ಈತನಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿರುತ್ತಾರೆ. ಮೇಲ್ಕಂಡ 3 ಜನ ಆರೋಪಿತರನ್ನು ಹಾಗು ಜಪ್ತಿಪಂಚನಾಮೆಯನ್ನು ಮುದ್ದೆಮಾಲಿನೊಂದಿಗೆ ಈ ಕೂಡ ತಮಗೆ ಒಪ್ಪಿಸಿದ್ದು, ಮೇಲ್ಕಂಡ 4 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಲಾಗಿದೆ. ಅಂತಾ ಕೊಟ್ಟ ವರದಿಯ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂ.40/2021 ಕಲಂ.78(3) ಕೆಪಿ ಆ್ಯಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಗ್ರಾಮೀಣ ಪೊಲೀಸ್ ಠಾಣೆ:- 44/2021 ಕಲಂ 379 ಐಪಿಸಿ:ಇಂದು ದಿನಾಂಕ 26-03-2021 ರಂದು 11-45 ಎ.ಎಂ ಸುಮಾರಿಗೆ ಫಿರ್ಯಾಧಿದಾರರು ತಮ್ಮ ಸಿಬ್ಬಂಧಿಯವರೊಂದಿಗೆ ಯಾದಗಿರಿ ಗ್ರಾಮೀಣ ಪೋಲಿಸ್ ಠಾಣೆಯ ಹದ್ದಿಯಲ್ಲಿ ಪೆಟ್ರೊಲಿಂಗ್ ಕರ್ತವ್ಯದಲ್ಲಿರುವಾಗ ಆರೋಪಿತನು ಯಾಧಗಿರಿ ಕಡೆಯಿಂದ ವಾಡಿ ಕಡೆಗೆ ತಮ್ಮ ಟಿಪ್ಪರ ನಂ: ಕೆ.ಎ-35/ಬಿ-6617 ನೆದ್ದರಲ್ಲಿ ಸಕರ್ಾರಕ್ಕೆ ರಾಯಲ್ಟಿ ಕಟ್ಟದೇ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ಸಾಗಿಸುತಿದ್ದಾಗ ದಾಳಿ ಮಾಡಿ ಹಿಡಿದು ಕಾನೂನು ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ:- 28/2021 498(ಎ), 323, 307, 504, 506 ಐಪಿಸಿ : ಇಂದು ದಿನಾಂಕ: 26/03/2021 ರಂದು 7:30 ಪಿಎಮ್ ಕ್ಕೆ ಅಜರ್ಿದಾರಳಾದ ಶ್ರೀಮತಿ ಪೂಜಾ ಗಂಡ ಸುನೀಲ್ ಜಾಧವ ಸಾ|| ಕಕ್ಕಸಗೇರಾ ತಾಂಡಾ ತಾ|| ಶಹಾಪೂರ ಇವರು ಠಾಣೆಗೆ ಬಂದು ಒಂದು ಲಿಖಿತ ಅಜರ್ಿ ಹಾಜರ್ ಪಡಿಸಿದ್ದರ ಸಾರಾಂಶವೆನೆಂದರೆ, ನಮ್ಮ ತಂದೆ ತಾಯಿಗೆ ನಾನು ಒಬ್ಬಳು ಹೆಣ್ಣು ಮಗಳು ಹಾಗೂ ಆಕಾಶ ತಂದೆ ಲಕ್ಷ್ಮಣ ಚಿನ್ನಾರಾಠೋಡ ವಯ|| 17 ವರ್ಷ ಅಂತಾ ಒಬ್ಬ ಗಂಡು ಮಗನಿರುತ್ತಾನೆ. ನಮ್ಮ ತಾಯಿಯಾದ ಸುಶೀಲಾಬಾಯಿ ಇವಳು ಈಗ ಸುಮಾರು 10-12 ವರ್ಷಗಳ ಹಿಂದೆ ತೀರಿಕೊಂಡಿದ್ದು ಇರುತ್ತದೆ. ನಮ್ಮ ತಂದೆಯು ನನಗೆ ತನ್ನ ಅಕ್ಕಳಾದ ಕಸ್ತೂರಿಬಾಯಿ ಗಂಡ ತಿಪ್ಪಣ್ಣ ಜಾಧವ ಇವಳ ಮಗನಾದ ಸುನೀಲ್ ತಂದೆ ತಿಪ್ಪಣ್ಣ ಜಾಧವ ಈತನೊಂದಿಗೆ ಈಗ ಸುಮಾರು 8-9 ತಿಂಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಇರುತ್ತದೆ. ಮದುವೆಯಾದ ನಂತರ ನಮ್ಮ ಮಾವ ತಿಪ್ಪಣ್ಣ ತಂದೆ ಸಕ್ರುನಾಯಕ ಜಾಧವ, ಅತ್ತೆ ಕಸ್ತೂರಿಬಾಯಿ ಗಂಡ ತಿಪ್ಪಣ್ಣ ಜಾಧವ ಇವರು ನಾವು ಇಬ್ಬರೂ ಗಂಡ ಹೆಂಡತಿ ಚೆನ್ನಾಗಿ ಇಬ್ಬರೇ ಇರಲಿ ಅಂತಾ ಇಬ್ಬರೂ ಕೂಡಿ ದುಡಿಯಲು ಮಹಾರಾಷ್ಟ್ರಕ್ಕೆ ಹೋದರು. ಮನೆಯಲ್ಲಿ ನಾನು ನನ್ನ ಗಂಡ ಸುನೀಲ್ ತಂದೆ ತಿಪ್ಪಣ್ಣ ಜಾಧವ ಇಬ್ಬರೇ ಇರುತ್ತೇವೆ. ಮದುವೆಯಾಗಿ ಎರಡು ಮೂರು ತಿಂಗಳವರೆಗೆ ನನ್ನ ಗಂಡನು ನನಗೆ ಚೆನ್ನಾಗಿ ನೋಡಿಕೊಂಡಿದ್ದು, ನಂತರ ನಿನಗೆ ಅಡುಗೆ ಸರಿಯಾಗಿ ಮಾಡಲು ಬರುವುದಿಲ್ಲಾ, ನೀನು ಚೆನ್ನಾಗಿಲ್ಲಾ, ನೀನು ತವರು ಮನೆಗೆ ಹೋಗು ಬೋಸಡಿ, ಸೂಳೆ ಅಂತಾ ಅವಾಚ್ಯವಾಗಿ ಬೈಯುತ್ತಾ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡುತ್ತಿದ್ದು, ನಾನು ತಾಳಿಕೊಂಡು ಹೋಗುತ್ತಿದ್ದೇನು. ನನಗೆ ಕಿರುಕುಳ ನೀಡುವ ವಿಷಯವನ್ನು ನಾನು ನನ್ನ ತವರು ಮನೆಯಾದ ಚಾಮನಾಳ ತಾಂಡಾಕ್ಕೆ ಹೋದಾಗ ನಮ್ಮ ತಂದೆ ಲಕ್ಷ್ಮಣ ಚಿನ್ನಾರಾಠೋಡ ಇವರ ಮುಂದೆ ಹೇಳುತ್ತಿದ್ದು, ಅದಕ್ಕೆ ನಮ್ಮ ತಂದೆಯು ಗಂಡ ಮನೆಯಲ್ಲಿ ತಾಳಿಕೊಂಡು ಹೋಗಬೇಕು ಅಂತಾ ಸಮಾಧಾನ ಮಾಡಿ ಹೇಳಿ ಕಳುಹಿಸುತ್ತಿದ್ದರು. ಅದಕ್ಕೆ ನಾನು ಗಂಡನ ಮನೆಯಲ್ಲಿ ತಾಳಿಕೊಂಡು ಹೋಗುತ್ತಿದ್ದೇನು. ಹೀಗಿದ್ದು, ನಿನ್ನೆ ದಿನಾಂಕ: 25/03/2021 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ನಾನು ಗಂಡನ ಮನೆಯಲ್ಲಿರುವಾಗ, ನನ್ನ ಗಂಡ ಸುನೀಲ್ ತಂದೆ ತಿಪ್ಪಣ್ಣ ಜಾಧವ ಇತನು ಬಂದು ' ಲೇ ರಂಡಿ ಬೋಸಡಿ ನೀನು ಚೆನ್ನಾಗಿಲ್ಲಾ, ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲಾ ನೀನು ಇಲ್ಲಿ ಇರಬೇಡ ' ಅಂತಾ ಅವಾಚ್ಯವಾಗಿ ಬೈದು, ಕೈಯಿಂದ ಕಪಾಳಕ್ಕೆ ಹೊಡೆದು, ಕೈಯಿಂದ ಮೈಮೇಲೆ ಹೊಡೆದಿದ್ದು, ನಾನು ನನ್ನ ಗಂಡನಿಂದ ತಪ್ಪಿಸಿಕೊಂಡು ಮನೆಯ ಹೊರಗೆ ಬಂದಿದ್ದು, ನನ್ನ ಗಂಡನು ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಕೊಲೆ ಮಾಡುವ ಉದ್ದೇಶದಿಂದ ನನಗೆ ಚುಚ್ಚಲು ಬಂದಾಗ ನಾನು ತಪ್ಪಿಸಿಕೊಂಡಿದ್ದು, ಆಗ ನಮ್ಮ ಮನೆಯ ಎದುರು ಇರುವ ರಸ್ತೆಯ ಮೇಲೆ ಹೋಗುತ್ತಿದ್ದ ನಮ್ಮ ತಾಂಡಾದವರಾದ ಪರಶುರಾಮ ತಂದೆ ಶರಣಪ್ಪ ಜಾಧವ, ಯಂಕಪ್ಪ ತಂದೆ ಸೇವುನಾಯಕ ಚವ್ಹಾಣ ಇವರು ನನ್ನ ಗಂಡ ಚಾಕುವಿನಿಂದ ಹೊಡೆಯಲು ಬಂದಿದ್ದನ್ನು ನೋಡಿ ಬಿಡಿಸಿಕೊಂಡರು. ನನ್ನ ಗಂಡನು ' ಇವತ್ತು ಉಳಕೊಂಡಿ ಬೋಸಡಿ ಇನ್ನೊಮ್ಮೆ ಜೀವಸಹಿತ ಬಿಡುವುದಿಲ್ಲಾ ' ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ. ನಾನು ಮನೆಯಲ್ಲಿ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ದಿನಾಂಕ: 26/03/2021 ರಂದು ತಡವಾಗಿ ಠಾಣೆಗೆ ಬಂದು ನನ್ನ ದೊಡ್ಡಪ್ಪನ ಮಗನಾದ ತಿರುಪತಿ ತಂದೆ ಶಂಕರ ಚಿನ್ನಾರಾಠೋಡ ಸಾ|| ಚಾಮನಾಳ ತಾಂಡಾ ಇವರ ಕಡೆಯಿಂದ ಅಜರ್ಿ ಬರೆಯಿಸಿ ನೀಡುತ್ತಿದ್ದೇನೆ. ಕಾರಣ ನನಗೆ ದೈಹಿಕ ಮಾನಸಿಕ ಕಿರುಕುಳ ನೀಡಿ, ಅವಾಚ್ಯವಾಗಿ ಬೈದು, ಕೈಯಿಂದ ಹೊಡೆ ಬಡೆ ಮಾಡಿ, ಜೀವದ ಬೇದರಿಕೆ ಹಾಕಿ ಕೋಲೆ ಮಾಡುವ ಉದ್ದೇಶದಿಂದ ಚಾಕು ಚುಚ್ಚಲು ಬಂದ ನನ್ನ ಗಂಡ ಸುನೀಲ್ ತಂದೆ ತಿಪ್ಪಣ್ಣ ಜಾಧವ ಸಾ|| ಕಕ್ಕಸಗೇರಾ ತಾಂಡಾ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಆಂತಾ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ: 28/202 ಕಲಂ, 498(ಎ), 323, 307, 504, 506 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ:- 61/2021 ಕಲಂ 279 ಐಪಿಸಿ:ಇಂದು ದಿನಾಂಕ:26/03/2021 ರಂದು 7 ಪಿ.ಎಂ. ಕ್ಕೆ ಶ್ರೀ ರಾಘವೇಂದ್ರ ತಂದೆ ದೊಡ್ಡಪ್ಪ ಸುಬೇದಾರ ವಯಸ್ಸು: 31 ವರ್ಷ ಜಾತಿ: ಬೇಡರ ಉ: ಒಕ್ಕಲುತನ ಸಾ: ನರಿಬೋಳ ತಾ: ಜೇವರಗಿ ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಅಜರ್ಿಯ ಸಾರಾಂಶವೆನೆಂದರೆ,ನನ್ನ ಮಾವನಾದ ಶರಣಪ್ಪ ತಂದೆ ಯಮನಪ್ಪ ಬುಕನೆಟ್ಟಿ ಸಾ: ಯಲಗುತರ್ಿ ತಾ:ಕುಷ್ಟಗಿ ಜಿ:ಕೊಪ್ಪಳ ಇವರು ಮಾರುತಿ ಸ್ವಿಪ್ಟ್ ಕಾರ ನಂಬರ ಕೆಎ-37ಎಮ್-9523 ನೇದ್ದನ್ನು ಖರೀದಿಸಿರುತ್ತಾರೆ. ನಾನು ದಿನಾಂಕ: 24/03/2021 ರಂದು ಕುಷ್ಟಗಿಯಲ್ಲಿರುವ ನನ್ನ ಮಾವನ ಮನೆಗೆ ಹೋಗಿದ್ದೇನು. ಅಲ್ಲಿಂದ ನಿನ್ನೆ ದಿನಾಂಕಃ 25/03/2021 ರಂದು ನಾನು ಮರಳಿ ನಮ್ಮೂರಿಗೆ ಬರಲು ತಯಾರಾದಾಗ ನನ್ನ ಮಾವನವರು ನಮ್ಮ ಕಾರಿನಲ್ಲಿ ಬಿಟ್ಟು ಬರುತ್ತಾರೆ ಅಂತ ನನಗೆ ಹೇಳಿ ತನ್ನ ಕಾರ ಚಾಲಕನಾದ ಪ್ರವೀಣಕುಮಾರ ತಂದೆ ಭೀಮಣ್ಣ ಬಡಿಗೇರ ಸಾಃ ಕಂದಕೂರ ತಾಃ ಕುಷ್ಟಗಿ ಇತನಿಗೆ ಕಾರಿನಲ್ಲಿ ನನಗೆ ನರಿಬೋಳ ಗ್ರಾಮಕ್ಕೆ ಬಿಟ್ಟು ಬರುವಂತೆ ತಿಳಿಸಿದರು. ನಂತರ ನಾನು ಮತ್ತು ಚಾಲಕನಾದ ಪ್ರವೀಣಕುಮಾರ ಇಬ್ಬರೂ ಕುಷ್ಟಗಿಯಿಂದ ನನ್ನ ಮಾವನ ಕಾರ ನಂಬರ ಕೆಎ-37 ಎಮ್-9523 ನೇದ್ದರಲ್ಲಿ ಲಿಂಗಸುಗೂರ, ಶಹಾಪೂರ ಮಾರ್ಗವಾಗಿ ಜೇವಗರ್ಿ ತಾಲೂಕಿನ ನರಿಬೋಳ ಗ್ರಾಮದಲ್ಲಿರುವ ನಮ್ಮ ಮನೆಗೆ ಹೋದೇವು. ಅಲ್ಲಿ ನನಗೆ ಬಿಟ್ಟು ಚಾಲಕನಾದ ಪ್ರವೀಣಕುಮಾರ ಇತನು ಮರಳಿ ಕುಷ್ಟಗಿಗೆ ಹೋಗುತ್ತೇನೆ ಅಂತ ಹೇಳಿ ಸಾಯಂಕಾಲ 5-30 ಗಂಟೆಯ ಸುಮಾರಿಗೆ ಕಾರ ನಡೆಸಿಕೊಂಡು ಹೋಗಿದ್ದು, ನಾನು ಆತನಿಗೆ ನಿಧಾನವಾಗಿ ಹೋಗುವಂತೆ ಹೇಳಿ ಕಳುಹಿಸಿದೇನು. ನಂತರ ನಾನು ಮನೆಯಲ್ಲಿದ್ದಾಗ ನಿನ್ನೆ ರಾತ್ರಿ 8-30 ಗಂಟೆಯ ಸುಮಾರಿಗೆ ನನ್ನ ಮಾವನ ಕಾರ ಚಾಲಕನಾದ ಪ್ರವೀಣಕುಮಾರ ಇತನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ನರಿಬೋಳ ಗ್ರಾಮದಿಂದ ಬೇಗನೇ ಕುಷ್ಟಗಿ ತಲುಪಬೆಕೆಂದು ಶಹಾಪೂರ, ಸುರಪೂರ ಮಾರ್ಗವಾಗಿ ಲಿಂಗಸುಗೂರ ಕಡೆಗೆ ಅತಿವೇಗವಾಗಿ ಕಾರ ನಡೆಸಿಕೊಂಡು ಹೊರಟಿದ್ದಾಗ 7-30 ಪಿ.ಎಮ್ ಸುಮಾರಿಗೆ ದೇವಾಪೂರ ಗ್ರಾಮದ ಕಂಪಾಪೂರ ಕ್ರಾಸ್ ಹತ್ತಿರವಿರುವ ತಿರುವು ರಸ್ತೆಯಲ್ಲಿ ಒಂದು ಎಮ್ಮೆ ರಸ್ತೆ ದಾಟುತ್ತಿದ್ದಾಗ ನಾನು ವೇಗದಲ್ಲಿ ಒಮ್ಮೆಲೆ ಬಲಕ್ಕೆ ಕಾರ ತಿರುಗಿಸಿದಾಗ ಕಾರ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗದಲ್ಲಿ ಪಲ್ಟಿಯಾಗಿ ಬಿದ್ದಿರುತ್ತದೆ. ನನಗೆ ಯಾವುದೇ ಗಾಯಗಳಾಗಿರುವದಿಲ್ಲ ಅಂತ ತಿಳಿಸಿದರು. ಆಗ ನಾನು ಈಗ ರಾತ್ರಿಯಾಗಿದೆ ನೀನು ಅಲ್ಲೆ ಕಾರ ನೋಡುತ್ತ ದೇವಾಪೂರ ಗ್ರಾಮದಲ್ಲೆ ಮಲಗು, ನಾಳೆ ಬರುತ್ತೇನೆ ಅಂತ ತಿಳಿಸಿದೇನು. ನಂತರ ಇಂದು ದಿನಾಂಕಃ 26/03/2021 ರಂದು ನಾನು ನರಬೋಳ ಗ್ರಾಮದಿಂದ ದೇವಾಪೂರ ಗ್ರಾಮದ ಹತ್ತಿರ ಕಾರ ಪಲ್ಟಿಯಾದ ಸ್ಥಳಕ್ಕೆ ಮದ್ಯಾಹ್ನ ಹೋಗಿ ನೋಡಿದ್ದು, ಕಾರ ಬಹಳ ಜಖಂಗೊಂಡಿರುತ್ತದೆ. ಸದರಿ ವಿಷಯದ ಬಗ್ಗೆ ನನ್ನ ಮಾವನವರೊಂದಿಗೆ ಫೋನಿನಲ್ಲಿ ಚಚರ್ೆ ಮಾಡಿದಾಗ ನನ್ನ ಮಾವನು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವಂತೆ ತಿಳಿಸಿದರಿಂದ ಈಗ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೇನೆ. ಕಾರಣ ಪ್ರವೀಣಕುಮಾರ ತಂದೆ ಭೀಮಣ್ಣ ಬಡಿಗೇರ ಸಾಃ ಕಂದಕೂರ ಇವರು ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಪಲ್ಟಿ ಮಾಡಿರುವದರಿಂದ ಸದರಿಯವನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಕೊಡೇಕಲ್ ಪೊಲೀಸ್ ಠಾಣೆ:- 21/2021 ಕಲಂ: 323, 324, 504, 506, 354 ಸಂ 34 ಐಪಿಸಿ : ಇಂದು ದಿನಾಂಕ 26.03.2021 ರಂದು 6:00 ಪಿಎಮ್ ಕ್ಕೆ ಫಿಯರ್ಾದಿ ಶ್ರೀಮತಿ ಬಸಮ್ಮ ಗಂಡ ನಿಂಗಪ್ಪ ಗೊಜಗರ ವ||50 ವರ್ಷ ಜಾ||ಕುರುಬರ ಉ||ಹೊಲಮನೆಕೆಲಸ ಸಾ||ಗೋಜಗಾರದೊಡ್ಡಿ ಬುಗಲಗಟ್ಟಿ ಕಕ್ಕೇರಾ ತಾ||ಸುರಪೂರ ರವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ತನ್ನ ಪಿಯರ್ಾದಿ ಹೇಳಿಕೆಯನ್ನು ಹೇಳಿ ಟೈಪ್ ಮಾಡಿಸಿದ್ದು ಅದರ ಸಾರಾಂಶವೆನೇಂದರೆ ನಾನು ಗಂಡ ಮಕ್ಕಳೊಂದಿಗೆ ಹೊಲಮನೆಕೆಲಸ ಮಾಡಿಕೊಂಡು ವಾಸವಾಗಿದ್ದು. ನಮಗೆ ಕರೆಪ್ಪ, ಭೀಮವ್ವ, ಮೌನೇಶ, ಸಾಮವ್ವ ಅಂತ 4 ಜನ ಮಕ್ಕಳಿದ್ದು, ನನ್ನ ಗಂಡು ಮಗನಾದ ಕರೆಪ್ಪ ಹಾಗೂ ಹೆಣ್ಣು ಮಕ್ಕಳಾದ ಭೀಮವ್ವ, ಸ್ವಾಮವ್ವ ರವರದ್ದು ಮದುವೆಯಾಗಿದ್ದು ಮಗನಾದ ಮೌನೇಶನದು ಇನ್ನು ಮದುವೆಯಾಗಿರುವದಿಲ್ಲ. ನನ್ನ ಮಕ್ಕಳಾದ ಕರೆಪ್ಪ ಮತ್ತು ಮೌನೇಶ ರವರು ಸುಮಾರು 4-5 ವರ್ಷಗಳಿಂದ ಬೆಂಗಳೂರಿಗೆ ದುಡಿಯಲಿಕ್ಕೆ ಕೂಲಿಕೆಲಸಕ್ಕೆ ಹೋಗಿದ್ದು ನನ್ನ ಮಗಳಾದ ಭೀಮವ್ವಳಿಗೆ ಈಗ 15 ವರ್ಷಗಳ ಹಿಂದೆ ನಮ್ಮ ಊರಾದ ಗೊಜಗಾರದೊಡ್ಡಿಯ ದ್ಯಾವಪ್ಪ ತಂದೆ ನರಸಪ್ಪ ಯಲಗಟ್ಟಿ ಇವರ ಹಿರಿಯ ಮಗನಾದ ಮಲ್ಲಪ್ಪ ಇತನೊಂದಿಗೆ ನಮ್ಮೂರಲ್ಲಿಯೇ ವಿವಾಹ ಮಾಡಿಕೊಟ್ಟಿದ್ದು ಇರುತ್ತದೆ. ನನ್ನ ಮಗಳಾದ ಭೀಮವ್ವಳ ಗಂಡನಿಗೆ ಮಾಳಪ್ಪ ಅಂತ ಒಬ್ಬ ತಮ್ಮನಿದ್ದು ನನ್ನ ಮಗಳ ಗಂಡನಾದ ಅಳಿಯ ಮಲ್ಲಪ್ಪ ಹಾಗೂ ಅವರ ತಮ್ಮ ಮಾಳಪ್ಪ ರವರು ಇಲ್ಲಿಯವರೆಗೆ ಕೂಡಿಯೇ ಇದ್ದು ಈಗ 6 ತಿಂಗಳ ಹಿಂದೆ ನನ್ನ ಅಳಿಯ ಮಲ್ಲಪ್ಪ ಹಾಗೂ ಅವರ ತಮ್ಮ ಬೇರೆಬೇರೆಯಾಗಿದ್ದು, ಆ ವೇಳೆಯಲ್ಲಿ ನನ್ನ ಅಳಿಯನ ತಂದೆಯಾದ ದ್ಯಾವಣ್ಣನು 50 ಲಕ್ಷ ರೂಪಾಯಿ ಸಾಲ ಇದೆ ನೀವು ಇಬ್ಬರೂ ಅಣ್ಣತಮ್ಮರು ತಲಾ 25 ಲಕ್ಷ ರೂಪಾಯಿ ಸಾಲ ಹೊತ್ತುಕೊಂಡು ಹೊಲದಲ್ಲಿ ಪಾಲು ಮಾಡಿಕೊಳ್ಳಿರಿ ಅಂತ ನನ್ನ ಅಳಿಯನಿಗೆ ಅಂದಾಗ ನಾನು ನನ್ನ ಅಳಿಯನ ತಂದೆಯಾದ ದ್ಯಾವಪ್ಪನಿಗೆ ಹಾಗೂ ನನ್ನ ಅಳಿಯನ ತಮ್ಮನಾದ ಮಾಳಪ್ಪನಿಗೆ ನಿಮ್ಮ ಆಸ್ತಿಯನ್ನು ಮಾರಿಯಾದರೂ ಮಾಡಿದ ಸಾಲವನ್ನು ತೀರಿಸಿ ಉಳಿದ ಆಸ್ತಿಯಲ್ಲಿ ನೀವಿಬ್ಬರು ಅಣ್ಣತಮ್ಮರು ಪಾಲು ಮಾಡಿಕೊಳ್ಳಿರಿ ಅಂತ ಅಂದಿದ್ದಕ್ಕೆ ನನ್ನ ಮೇಲೆ ನನ್ನ ಅಳಿಯನ ತಂದೆಯಾದ ದ್ಯಾವಣ್ಣ ಹಾಗೂ ಅವರ ಕಿರಿಯ ಮಗನಾದ ಮಾಳಪ್ಪ ರವರು ಸಿಟ್ಟಾಗಿದ್ದು ಅಲ್ಲದೇ ಅವರು ಬೇರೆಯಾಗಿದ್ದು ಆಸ್ತಿ ಪಾಲು ಮಾಡಿಕೊಂಡಿರುವದಿಲ್ಲ. ನನ್ನ ಮಗಳಾದ ಭೀಮವ್ವ ಇವಳು ಈಗ ಎರಡು ತಿಂಗಳ ಹಿಂದೆ ಹೆರಿಗೆಗಾಗಿ ನಮ್ಮ ಮನೆಗೆ ಬಂದು ನಮ್ಮ ಮನೆಯಲ್ಲಿಯೇ ಇದ್ದು ಅವಳಿಗೆ ಒಂದುವರೆ ತಿಂಗಳ ಹಿಂದೆ ಸಿಜೆರಿಯನ್ ಹೆರಿಗೆ ಆಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 26.03.2021 ರಂದು ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಗಳಾದ ಭೀಮವ್ವ ಗಂಡ ಮಲ್ಲಪ್ಪ ಯಲಗಟ್ಟಿ ರವರು ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಕುಳಿತಿದ್ದಾಗ ನನ್ನ ಮಗಳಾದ ಭೀಮವ್ವ ಇವಳ ಗಂಡನ ತಮ್ಮನಾದ ಮಾಳಪ್ಪ ತಂದೆ ದ್ಯಾವಣ್ಣ ಯಲಗಟ್ಟಿ ಸಾ||ಬುಗಲಗಟ್ಟಿ ಮತ್ತು ಅವರ ಅಳಿಯನಾದ ಬಸಪ್ಪ ತಂದೆ ಪದ್ಮಪ್ಪ ಗೊಜಗಾರ ಸಾ||ಗೊಜಗಾರದೊಡ್ಡಿ ಬುಗಲಗಟ್ಟಿ ಕಕ್ಕೇರಾ ಇವರಿಬ್ಬರೂ ನಮ್ಮ ಮನೆಯ ಮುಂದೆ ನಾವು ಕುಳಿತಲ್ಲಿಗೆ ಬಂದವರೇ ನನಗೆ ಮಾಳಪ್ಪನು ಏ, ಸೂಳಿ,ಬಸ್ಸಿ ನಮ್ಮಪ್ಪನು ನಮಗೆ ಪಾಲು ಮಾಡಿಕೊಡುತ್ತಾನೆ ನಾವು ಅಣ್ಣತಮ್ಮರು ಬೇರೆಯಾಗುತ್ತೇವೆ ಅದರಲ್ಲಿ ನೀನೇಕೆ ಅಡ್ಡ ಬಂದು ನಾವು ಆಸ್ತಿ ಪಾಲು ಮಾಡಿಕೊಳ್ಳುವದನ್ನು ನಿಲ್ಲಿಸಿದಿ ನಿನಗೆ ಇವತ್ತು ಒಂದು ಗತಿ ಕಾಣಿಸುತ್ತೇವೆ ಅಂತ ಅಂದವನೇ ತನ್ನ ಕೈಯಲ್ಲಿಯ ಕುಡಗೋಲಿನಿಂದ ನನ್ನ ಹಣೆಯ ಮೇಲ್ಭಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿ ನನ್ನ ಕೈ ಹಿಡಿದು ಜಗ್ಗಾಡಿ ಕೂದಲು ಹಿಡಿದು ಎಳೆದಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿ ಕೈಯಿಂದ ಬಲಗಡೆ ಪಕಡಿಯ ಮೇಲೆ ಹೊಡೆದು ಒಳಪೆಟ್ಟು ಮಾಡಿದ್ದು ಇದನ್ನು ನೋಡಿ ಬಿಡಿಸಲು ಬಂದ ನನ್ನ ಮಗಳಾದ ಭೀಮವ್ವ ಗಂಡ ಮಲ್ಲಪ್ಪ ಯಲಗಟ್ಟಿ ಇವಳಿಗೆ ಬಸಪ್ಪ ತಂದೆ ಪದ್ಮಪ್ಪ ಗೊಜಗಾರ ಇತನು ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಜೋರಾಗಿ ಬಿಸಿದ್ದು ಆ ಕಲ್ಲಿನ ಏಟು ನನ್ನ ಮಗಳ ಬಲಗೈ ಮಧ್ಯದ ಬೆರಳಿಗೆ ಬಡಿದು ಒಳಪೆಟ್ಟಾಗಿದ್ದು ಮತ್ತು ಬಸಪ್ಪನು ನನ್ನ ಮಗಳಿಗೆ ಕೈ ಹಿಡಿದು ಜಗ್ಗಾಡಿ ಕೂದಲು ಹಿಡಿದು ಎಳೆದಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿದ್ದು ಆಗ ನಾನು ಮತ್ತು ನನ್ನ ಮಗಳಾದ ಭೀಮವ್ವಳು ನಮ್ಮನ್ನು ಉಳಿಸಿರಪ್ಪೋ ಅಂತ ಚೀರಾಡಲು ನಮ್ಮ ಮನೆಯ ಪಕ್ಕದ ಮನೆಯವರಾದ ಜಟ್ಟೆಪ್ಪ ತಂದೆ ಬಸಪ್ಪ ಗೋಜಗಾರ, ಜಾನಪ್ಪ ತಂದೆ ನಿಂಗಪ್ಪ ಗೋಜಗಾರ ಹಾಗೂ ಅಲ್ಲಿಂದಲೇ ತಾವು ಲಿಜಿಗೆ ಹಾಕಿಕೊಂಡ ಹೊಲಕ್ಕೆ ಹೋಗುತ್ತಿದ್ದ ಮಲಮುತ್ಯಾರದೊಡ್ಡಿಯ ನಂದಪ್ಪ ತಂದೆ ಪರಮಣ್ಣ ಇಂದರಗೆರ, ಸಾತಮ್ಮ ಗಂಡ ಮಾನಪ್ಪ ಮಲಮುತ್ತೆರ ಇವರುಗಳು ಬಂದು ನೋಡಿ ಮಾಳಪ್ಪ ಮತ್ತು ಬಸಪ್ಪ ರವರು ನನಗೆ ಹಾಗೂ ನನ್ನ ಮಗಳಿಗೆ ಹೊಡೆಯುವದನ್ನು ಬಿಡಿಸಿದ್ದು ಹೋಗುವಾಗ ಅವರಿಬ್ಬರೂ ನಮಗೆ ಹೊಡೆದ ಕುಡುಗೋಲು ಮತ್ತು ಕಲ್ಲನ್ನು ಅಲ್ಲಿಯೇ ಬಿಸಾಕಿ ಸೂಳೆರೇ ಇವತ್ತು ನೀವಿಬ್ಬರೂ ನಮ್ಮ ಕೈಯಲ್ಲಿ ಉಳಿದುಕೊಂಡಿರಿ ಇನ್ನೊಂದು ಸಲ ಸಿಕ್ಕರೇ ನಿಮಗೆ ಜೀವಂತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು ನಂತರ ಜಗಳವನ್ನು ನೋಡಿ ಬಿಡಿಸಿದ ಜಟ್ಟೆಪ್ಪ ತಂದೆ ಬಸಪ್ಪ ಗೋಜಗರ ಮತ್ತು ನಂದಪ್ಪ ತಂದೆ ಪರಮಣ್ಣ ಇಂದರಗೆರ ಇವರುಗಳು ನನಗೆ ಹಾಗೂ ನನ್ನ ಮಗಳಾದ ಭೀಮವ್ವಳಿಗೆ ಉಪಚಾರಕ್ಕಾಗಿ ಕಕ್ಕೇರಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನಾನು ಮತ್ತು ನನ್ನ ಮಗಳು ಕಕ್ಕೇರಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ಬಂದಿದ್ದು ನನಗೆ ಹಾಗೂ ನನ್ನ ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ ಮಾಳಪ್ಪ ಹಾಗೂ ಬಸಪ್ಪ ರವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಪಿಯರ್ಾದಿಯ ಗಣಕೀಕರಿಸಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.21/2021 ಕಲಂ: 323, 324, 504, 506, 354 ಸಂ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 27-03-2021 10:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080