ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 27-03-2022


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 23/2022 ಕಲಂ. 279, 304(ಎ) ಐಪಿಸಿ : ದಿನಾಂಕ:14/03/2022 ರಂದು ಮದ್ಯಾಹ್ನ 3.00 ಗಂಟೆಯ ಸುಮಾರಿ ಮೃತನು ತನ್ನ ಹೆಂಡತಿಗೆ ಕೆಲಸ ನಿಮಿತ್ಯ ರಾಜನಕೊಳುರ ಗ್ರಾಮಕ್ಕೆ ಹೋಗಿ ಬರುವುದಾಗಿ ಹೇಳಿ ತನ್ನ ಮೋಟಾರ್ ಸೈಕಲ್ ನಂ:ಕೆಎ-33 ಎಕ್ಸ್-8466 ನೇದ್ದನ್ನು ತೆಗೆದುಕೊಂಡು ಹೋಗಿದ್ದು, ಮದ್ಯಾಹ್ನ 3.30 ಗಂಟೆಯ ಸುಮಾರಿಗೆ ಹುಣಸಗಿ-ನಾರಾಯಣಪುರ ರಸ್ತೆಯ ಕಾಮನಟಗಿ ಸೀಮಾಂತರ ಹಿರೇ ಕೆನಾಲ ಸಮೀಪ ತನ್ನ ಮೋಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ, ನಿಯಂತ್ರಣ ತಪ್ಪಿ ಮೋಟಾರ್ ಸೈಕಲ್ ಸ್ಕಿಡ್ಡಾಗಿ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು, ತಲೆಗೆ ಭಾರಿ ರಕ್ತಗಾಯ ಹಾಗೂ ಒಳಪೆಟ್ಟಾಗಿ ಬೇವುಸಾಗಿ ಬಿದ್ದಾಗ, ದಾರಿ ಹೋಕರು ನೋಡಿ ಯಾವುದೋ ಒಂದು ವಾಹನದಲ್ಲಿ ಹಾಕಿ ಹುಣಸಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಫಿರ್ಯಾದಿಗೆ ತಿಳಿಸಿದಾಗ, ಫಿರ್ಯಾದಿಯು ಬಂದು ನೋಡಿ ಹೆಚ್ಚಿನ ಉಪಚಾರ ಕುರಿತು ವಿಜಯಪೂರದ ಬಿ.ಎಲ್.ಡಿ.ಇ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು, ಮೃತನು ಇಲಾಜು ಹೊಂದಿ ಗುಣಮುಖವಾಗಿ ತನ್ನ ಹೆಂಡತಿ ಊರಿಗೆ ಬಂದು ಇದ್ದಾಗ ದಿನಾಂಕ:24/03/2022 ರಂದು ತಲೆ ಮತ್ತೆ ನೋಯಿಸುತ್ತಿದೆ ಅಂತಾ ಬೇವುಸಾಗಿ ಬಿದ್ದಾಗ ಪುನಃ ವಿಜಯಫೂರ ಬಿ.ಎಲ್.ಡಿ.ಇ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು, ದಿನಾಂಕ:25/03/2022 ರಂದು ತಲೆಗೆ ಶಸ್ತ್ರ ಚಿಕಿತ್ಸೆ ಮಾಡಿದ್ದು, ದಿನಾಂಕ:26/03/2022 ರಂದು ಬೆಳಿಗ್ಗೆ ಇಲಾಜು ಹೊಂದುತ್ತಾ ಗುಣಮುಖವಾಗದೆ ಮೃತಪಟ್ಟ ಬಗ್ಗೆ ಅಪರಾಧ.

 

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ:38/2022 ಕಲಂ.409,417,419,420,465,468,ಐಪಿಸಿ : ಇಂದು ದಿನಾಂಕ.26/03/2022 ರಂದು 11-15 ಎಎಂಕ್ಕೆ ಪಿರ್ಯಾದಿ ಶ್ರೀ ಮಹಮ್ಮದ ಜಲಾಲ ತಂದೆ ಮಹಮ್ಮದ ಇಲಾಮಸಾಬ ವಃ70 ಜಾಃ ಮುಸ್ಲಿಂ ಉಃ ಒಕ್ಕಲುತನ ಸಾಃ ನಾಗರಬಂಡಿ ತಾಃಜಿಃಯಾದಗಿರಿ ಹಾಃವಃಮಹಿಬೂಬ ನಗರ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಯಾದಗಿರಿ ತಾಲೂಕಿನ ಬಳಿಚಕ್ರ ಹೋಬಳಿ ಮಲ್ಹಾರ ಗ್ರಾಮದ ಸೀಮಾಂತರದಲ್ಲಿ ಬರುವ ಜಮೀನು ಸವರ್ೆ ನಂ 272/282-ಈ (ಹಳೆದು) 272/4 (ಹೊಸದು) ವಿಸ್ತೀರ್ಣ 06 ಎಕರೆ 39 ಗುಂಟೆ ಜಮೀನಿದ್ದು ಆರೋಪಿತನಾದ ಗಂಗಾಧರ ಹಿರೇಮಠ ಎಂದು ತನ್ನ ನಾಗರಬಂಡ ಗ್ರಾಮದ ಸೋಲಾರ ಪ್ಲಾಂಟ ಕಂಪನಿಯ ಹೆಸರಿಗೆ ಸದರಿ ಜಮೀನನ್ನು ನೊಂದಾಯಿತ ಖರೀದಿ ಪತ್ರವನ್ನು ಯಾದಗಿರಿ ಉಪ ನೊದಣಾಧಿಕಾರಿಗಳ ಕಾರ್ಯಲಯದಲ್ಲಿ ನೊಂದಣಿ ಮಾಡಿಕೊಂಡಿದ್ದು, ಸದರಿ ನೊದಣಿಯ ದಸ್ತಾವೇಜು ಸಂ ಃಏ-6180/2021-22 ದಿನಾಂಕ:16-12-221 ರಂದು ಮತ್ತು ದಸ್ತಾವೇಜು ಸಂ: ಃಏ-6216/2021-22 ದಿನಾಂಕ:17-12-2021 ರಂದು ನೊಂದಣಿ ಮಾಡಿಸಿಕೊಂಡಿರುತ್ತಾರೆ. ಸದರಿ ನೊಂದಣಿ ಪತ್ರಕ್ಕೆ ಸಾಕ್ಷಿಗಳಾಗಿ 1) ನಟರಾಜ ಕೆ.ಎಂ. ತಂದೆ ಶೇಕ್ರಪ್ಪ ಸಾ|| ಇಟಗಿ-583220, 2) ಮಹೇಂದ್ರ ಕುಮಾರ ತಂದೆ ಮಹಾದೇವಪ್ಪ ಸಾ|| ಬಂಡಿಗೇರಾ ಯಾದಗಿರಿ ಎಂಬುವವರು ಸಹ ರುಜುಕರಿಸಿರುತ್ತಾರೆ.ಈಗಾಗಲೇ ನಮ್ಮ ತಂದೆಯು ದಿನಾಂಕ: 09-08-1985 ರಲ್ಲಿ ಮೃತಪಟ್ಟಿರುತ್ತಾರೆ. ಸದರಿ ನಮ್ಮ ಜಮೀನಿಗೆ ಈ ಮೇಲೆ ಹೇಳಲಾದ ವ್ಯಕ್ತಿಗಳಾದ 1) ಗಂಗಾಧರ ಹಿರೇಮಠ 2)ಸುದೀನಂದ್ರ ಚಿನಮಲಂಗಿ 3) ವಸಂತರಾವ 4) ಇಮಾಮಸಾಬ ತಂದೆ ಗೂಡಸಾಬ ಸಾ|| ನಾಗರಬಂಡಿ, ಮತ್ತು ಸಾಕ್ಷಿದಾರರಾದ 5)ಪ್ರಭು ತಂದೆ ಮರೆಪ್ಪ, 6) ಶ್ರೀಕಾಂತ ತಂದೆ ಅಜರ್ುನ, 7) ನಟರಾಜ ಕೆ.ಎಂ. ತಂದೆ ಶೇಕ್ರಪ್ಪ ಸಾ|| ಇಟಗಿ 8) ಮಹೇಂದ್ರ ಕುಮಾರ ತಂದೆ ಮಹಾದೇವಪ್ಪ ಸಾ|| ಬಂಡಿಗೇರಾ ಯಾದಗಿರಿ 9) ಹಿರಿಯ ಉಪನೊಂದಣಾದಿಕಾರಿಗಳು ಯಾದಗಿರಿ ಇವರೆಲ್ಲರೂ ಯಾವುದೇ ರೀತಿಯ ನಮ್ಮ ಕುಟುಂಬಕ್ಕೆ ಮತ್ತು ನಮ್ಮ ಜಮೀನಿಗೆ ಯಾವುದೇ ರೀತಿಯ ಸಂಬಂದ ಇರುವುದಿಲ್ಲ. ಎಲ್ಲರೂ ಕೂಡಿಕೊಂಡು ಮೋಸದಿಂದ ಎಲ್ಲಾ ಕಾಗದ ಪತ್ರಗಳನ್ನು ಸೃಷ್ಡಿ ಮಾಡಿ, ನಮಗೆ ಮೋಸ ಮಾಡುವ ಉದ್ದೇಶದಿಂದ ಸದರಿ ನೊಂದಾಯಿತ ದಾಖಲೆಗಳನ್ನು ಸೃಷ್ಟಿ ಮಾಡಿ ನಮಗೆ 22,12,000/- ರೂ ದಷ್ಟು ಮೋಸ ಮಾಡಿರುತ್ತಾರೆ. ಇದೇ ರೀತಿ ಬೇರೆಯವರ ಜಮೀನು ಸಹ ಕೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿ, ಮೋಸದಿಂದ ಖರೀದಿ ನೊಂದಣಿ ಮಾಡಿಸಿಕೊಂಡಿರುತ್ತಾರೆ.ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.38/2022 ಕಲಂ.409,417,419,420,465,468,ಐಪಿಸಿ ಅಡಿಯಲ್ಲಿ ಪ್ರಕರಣ ದಆಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 40/2022 ಕಲಂ:504, 326, 324, 323, 506 ಸಂ 34 ಐಪಿಸಿ : ದಿನಾಂಕ:26/03/2022 ರಂದು 5-30 ಪಿಎಮ್ ಕ್ಕೆ ಶ್ರೀಮತಿ ಚಾಂದಬೀ ಗಂಡ ಕಾಸಿಂಸಾಬ ಗುರುಸಣಗಿ, ವ:55, ಜಾ:ಮುಸ್ಲಿಂ, ಉ:ಹೊಲಮನೆ ಕೆಲಸ ಸಾ:ಮನಗನಾಳ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಹೊಲ ಮನೆ ಕೆಲಸ ಮಾಡಿಕೊಂಡು ಗಂಡ-ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನ ಗಂಡ ಕಾಸಿಂಸಾಬ ಈತನು ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾನೆ. ನಮ್ಮೂರ ಪಕ್ಕದಲ್ಲಿ ಮೌಲಾಲಿಸಾಬ ದಗರ್ಾ ಇರುತ್ತದೆ. ಹೀಗಿದ್ದು ನನ್ನ ಗಂಡ ಕಾಸಿಂಸಾಬ ಈತನು ಪ್ರತಿ ಗುರುವಾರ ರಾತ್ರಿ ಮೌಲಾಲಿ ದಗರ್ಾಕ್ಕೆ ಹೋಗಿ ಅಲ್ಲಿಯೇ ಮಲಗಿಕೊಂಡು ಬೆಳಗ್ಗೆ ಎದ್ದು ಮನೆಗೆ ಬರುತ್ತಾನೆ. ಅದರಂತೆ ಮೊನ್ನೆ ಗುರುವಾರ ದಿನಾಂಕ:24/03/2022 ರಂದು ರಾತ್ರಿ ಊಟ ಮಾಡಿದ ನಂತರ 9-30 ಗಂಟೆ ಸುಮಾರಿಗೆ ನನ್ನ ಗಂಡನು ಮೌಲಾಲಿ ದಗರ್ಾಕ್ಕೆ ಮಲಗಲು ಹಾಸಿಗೆ ತೆಗೆದುಕೊಂಡು ಹೊದನು. ನಾನು ಮತ್ತು ನನ್ನ ಮಗ ಮೌಲಾಲಿ ಇಬ್ಬರೂ ನಮ್ಮ ಮನೆಯಲ್ಲಿ ಮಲಗಿಕೊಂಡೆವು. ನನ್ನ ಗಂಡ ಹೊದ ಸ್ವಲ್ಪ ಹೊತ್ತಿನ ನಂತರ ರಾತ್ರಿ 9-45 ಗಂಟೆ ಸುಮಾರಿಗೆ ನಮ್ಮೂರ ಮಲ್ಲಿಕಾಜರ್ುನ ತಂದೆ ಶರಣಪ್ಪಗೌಡ ಕುಣಚಿಗಿ ಈತನು ನನ್ನ ಮಗ ಮೌಲಾಲಿಗೆ ಫೋನ ಮಾಡಿ ಹೇಳಿದ್ದೇನಂದರೆ ನಮ್ಮೂರ ಮೌಲಾಲಿ ದಗರ್ಾದ ಹತ್ತಿರ ಮಲಗಲು ಬಂದಿದ್ದ ನಿಮ್ಮ ತಂದೆಯೊಂದಿಗೆ ಶರಭಣ್ಣ ಮತ್ತು ಇತರರು ಜಗಳ ಆಡುತ್ತಿದ್ದಾರೆ ನೀವು ಬೇಗನೆ ಬನ್ನಿ ಎಂದು ಹೇಳಿದನು. ಆಗ ಗಾಬರಿಯಾದ ನಾನು ಮತ್ತು ನನ್ನ ಮಗ ಮೌಲಾಲಿ ಇಬ್ಬರೂ ನಮ್ಮೂರ ಮೌಲಾಲಿ ದಗರ್ಾದ ಹತ್ತಿರ ಓಡಿ ಹೋಗಿ ನೋಡಲಾಗಿ 1) ಶರಭಣ್ಣ ತಂದೆ ಯಂಕಪ್ಪ ಗೋಡಿಹಾಳ, 2) ತಾಯಪ್ಪ ತಂದೆ ಹಣಮಂತ ಬಡಿಗೇರ, 3) ಸುಭಾಶ ತಂದೆ ಭೀಮರಾಯ ಕರಡಿ ಮತ್ತು 4) ಮೌನೇಶ @ ಮೋನಪ್ಪ ತಂದೆ ಸುಳ ಮಲ್ಲಪ್ಪ ಎಲ್ಲರೂ ಸಾ:ಮನಗನಾಳ ಇವರೆಲ್ಲರೂ ಸೇರಿಕೊಂಡು ದಗರ್ಾದ ಹತ್ತಿರ ಮಲಗಲು ಹೋಗಿದ್ದ ನನ್ನ ಗಂಡ ಕಾಸಿಂಸಾಬನಿಗೆ ಭೊಸುಡಿ ಮಗನೆ ನೀನು ರಾತ್ರಿ ಹೊತ್ತು ನಮ್ಮ ಸಂಬಂಧಿಕಳಾದ ಮರೆಮ್ಮ ಗೋಡಿಹಾಳ ಇವಳ ಮನೆ ಕಡೆ ಬರುತ್ತಿದ್ದಿ, ನಿನ್ನ ಸೊಕ್ಕು ಜಾಸ್ತಿಯಾಗಿದೆ ಎಂದು ಅವಾಚ್ಯ ಬೈದು ಜಗಳ ತೆಗೆದವರೆ ಮೌನೇಶ ಮತ್ತು ಸುಭಾಶ ಇಬ್ಬರೂ ನನ್ನ ಗಂಡನ ಎರಡು ಕೈಗಳನ್ನು ಗಟ್ಟಿಯಾಗಿ ಹಿಂಬರಕಿ ಮಾಡಿ ಹಿಡಿದುಕೊಂಡು ನನ್ನ ಗಂಡನಿಗೆ ಕೆಳಗೆ ಬಗ್ಗಿಸಿದಾಗ ಶರಭಣ್ಣನು ಅಲ್ಲಿಯೇ ಬಿದ್ದ ಕಟ್ಟಿಗೆ ತೆಗೆದುಕೊಂಡು ನನ್ನ ಗಂಡನ ಕುತ್ತಿಗೆಯ ಹಿಂಭಾಗಕ್ಕೆ ಬಲವಾಗಿ ಹೊಡೆದು ಭಾರಿ ಒಳಪೆಟ್ಟು ಮಾಡಿದನು. ಆಗ ನನ್ನ ಗಂಡನು ಸತ್ತೆನೆಪ್ಪೊ ಅಂತಾ ಕೆಳಗೆ ಬಿದ್ದು ಬಿಟ್ಟನು. ಆಗ ತಾಯಪ್ಪನು ಬಂದು ನನ್ನ ಗಂಡನ ಎರಡು ಪಕ್ಕೆಗಳಿಗೆ ಕಾಲಿನಿಂದ ಒದ್ದು ಒಳಪೆಟ್ಟು ಮಾಡಿದನು. ಶರಭಣ್ಣ, ಮೌನೇಶ ಮತ್ತು ಸುಭಾಶ ಈ ಮೂರು ಜನ ಸೇರಿ ನನ್ನ ಗಂಡನ ಹೊಟ್ಟೆ ಮತ್ತು ಪಕ್ಕೆಗಳಿಗೆ ಕಾಲಿನಿಂದ ತುಳಿದರು. ಆಗ ಜಗಳವನ್ನು ನಾನು ಮತ್ತು ನನ್ನ ಮಗ ಮೌಲಾಲಿ ಹಾಗೂ ಅಲ್ಲಿಯೇ ಹೊಲಕ್ಕೆ ಹೋಗುತ್ತಿದ್ದ ಮಲ್ಲಿಕಾಜರ್ುನ ತಂದೆ ಶರಣಪ್ಪಗೌಡ ಮತ್ತು ನನ್ನ ಮೈದುನ ಬಾಷುಮಿಯಾ ತಂದೆ ಇಮಾಮಸಾಬ ಎಲ್ಲರೂ ಹೋಗಿ ಬಿಡಿಸಿದೆವು. ನಾವು ಜಗಳ ಬಿಡಿಸಿದಾಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿ ಸೂಳೆ ಮಗನೆ ಇನ್ನೊಂದು ಸಲ ಮರೆಮ್ಮಳ ಮನೆ ಕಡೆ ಬಂದರೆ ನಿನಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋದರು. ನನ್ನ ಗಂಡನಿಗೆ ನೋಡಲಾಗಿ ಆತನ ಕುತ್ತಿಗೆ ಹಿಂಭಾಗಕ್ಕೆ ಕಟ್ಟಿಗೆಯಿಂದ ಬಲವಾಗಿ ಹೊಡೆದಿದ್ದರಿಂದ ಕುತ್ತಿಗೆಯಿಂದ ಬೆನ್ನಿಗೆ ಹೋಗಿರುವ ನರಗಳಿಗೆ ಭಾರಿ ಪೆಟ್ಟಾಗಿ ನನ್ನ ಗಂಡನ ಎರಡು ಕಾಲುಗಳು ಸ್ವಾಧಿನತೆ ಕಳೆದುಕೊಂಡು ಎದ್ದು ನಿಲ್ಲದಂತಾಗಿದ್ದನು. ಆಗ ನಾವು ಆತನಿಗೆ ಅಲ್ಲಿಂದ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿಯ ಎ.ಎಸ್.ಎಮ್ ಸುಪರ್ ಸ್ಪೇಷಾಲಿಟಿ ಖಾಸಗಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದೇವು. ಅಲ್ಲಿನ ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದರು. ಆಗ ವಡಗೇರಾ ಠಾಣೆಯ ಪೊಲೀಸರು ಸದರಿ ಎಮ್.ಎಲ್.ಸಿ ಯನ್ನು ವಿಚಾರಣೆ ಮಾಡಲು ಬಂದಾಗ ನಾವು ವಡಗೇರಾ ಠಾಣೆ ಪೊಲೀಸರಿಗೆ ನಮ್ಮ ಹಿರಿಯರಿಗೆ ವಿಚಾರಣೆ ಮಾಡಿಕೊಂಡು ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ತಿಳಿಸಿರುತ್ತೇವೆ. ಅದರಂತೆ ಇಂದು ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ನನ್ನ ಗಂಡನು ಇನ್ನು ಆಸ್ಪತ್ರೆಯಲ್ಲಿ ಉಪಚಾರದಲ್ಲಿರುತ್ತಾನೆ. ಆದ್ದರಿಂದ ವಿನಾಕಾರಣ ನನ್ನ ಗಂಡನಿಗೆ ನೀನು ಮರೆಮ್ಮಳ ಮನೆ ಕಡೆ ಬರುತ್ತಿದ್ದಿ ಮಗನೆ ಎಂದು ವೈಮನಸ್ಸಿನಿಂದ ಜಗಳ ತೆಗೆದು ಅವಾಚ್ಯ ಬೈದು ಕಟ್ಟಿಗೆಯಿಂದ ಹೊಡೆಬಡೆ ಮಾಡಿ, ಭಾರಿ ಒಳಪೆಟ್ಟು ಮಾಡಿ ಕಾಲಿನಿಂದ ಒದ್ದು, ತುಳದಾಡಿ ಜೀವ ಬೆದರಿಕೆ ಹಾಕಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 40/2022 ಕಲಂ: 504, 326, 324, 323, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 46/2022 ಕಲಂ: 447,323,504,506 ಸಂಗಡ 34 ಐಪಿಸಿ : ಇಂದು ದಿನಾಂಕ: 26/03/2022 ರಂದು 5.00 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ತಾಜುದ್ದಿನ್ ತಂದೆ ಮುನೊವರ ಶಹಾ ಖಲ್ಲಂದರ್ ವಯಾ: 58 ವರ್ಷ ಜಾ: ಮುಸ್ಲಿಂ ಉ: ಸಗರದ ಹಜರತ್ ಸೋಪಿ ಸರಮಸ್ತ ದಗರ್ಾ ಸಾ: ಸಗರ ತಾ: ಶಹಾಪೂರ ರವರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ, ನಾನು ಸುಮಾರು 30 ವರ್ಷಗಳಿಂದ ಹಜರತ್ ಸೋಪಿ ಸರಮಸ್ತ ದಗರ್ಾ ಸಗರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುತ್ತೇನೆ. ಯಾದಗಿರಿ ತಾಲೂಕಿನ ಗುರಸುಣಗಿ ಗ್ರಾಮದ ಸೈಯದ್ ಖುಸ್ರು ತಂದೆ ಸೈಯದ ಅಹಮ್ಮದ್ ಹುಸೇನಿ ಇತನು ಆಗಾಗ ದಗರ್ಾಕ್ಕೆ ಬಂದು ನನಗೆ ದಗರ್ಾದಲ್ಲಿ ಸೇವೆ ಮಾಡುವುದನ್ನು ಬಿಡಿಸಬೇಕು ಅಂತಾ ಎಂಬ ಉದ್ದೇಶದಿಂದ ದಗರ್ಾಕ್ಕೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಹೋಗುತ್ತಿದ್ದನು, ಇರಲಿ ಬಿಡು ದೇವರ ಸೇವೆ ಮಾಡಿದರಾಯಿತು ಅಂತಾ ಇಲ್ಲಿವರೆಗೆ ನಾನು ಸೇವೆ ಮಾಡುತ್ತಾ ಬಂದಿರುತ್ತೇನೆ. ಹೀಗಿದ್ದು ದಿನಾಂಕ: 21/03/2022 ರಂದು 7-40 ಪಿ.ಎಮ್ ಸುಮಾರಿಗೆ ದಗರ್ಾದ ಒಳಗಡೆಯಲ್ಲಿ ಇರುವ ಒಂದು ರೋಮಿನಲ್ಲಿ ನಾನು ಮತ್ತು ನಮ್ಮೂರಿನ ಭಾಗಪ್ಪ ತಂದೆ ಲಕ್ಷ್ಮಣ ಬಡಿಗೆರ ಇಬ್ಬರೂ ರೂಮಿನಲ್ಲಿ ಇದ್ದಾಗ ಗುರಸುಣಗಿ ಗ್ರಾಮದ ಸೈಯದ್ ಖುಸ್ರು ತಂದೆ ಸೈಯದ ಅಹಮ್ಮದ್ ಹುಸೇನಿ ಇತನೊಂದಿಗೆ ಇನ್ನೂ ಮೂರು ಜನರು ಕೂಡಿಕೊಂಡು ನಾನು ಇದ್ದ ರೂಮಿನಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ''ಏ ಫಕೀರ್ ಮಾಕಿ ಲವಡೆ, ತು ಫಕೀರ ಹೈ ಹಮಾರೆ ಸೆ, ತು ಸವಾಲ್ ಕರತಾ ಮಾಕೆ ಲವಡೆ ಎಂದು ನಿನಗೆ ಸೊಕ್ಕು ಬಹಳ ಬಂದಿದೆ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನನ್ನು ರೂಮಿನಲ್ಲಿ ಎದೆಯ ಮೇಲೆ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದನು, ಅವನ ಜೋತೆ ಬಂದಿದ್ದು ಮೂರು ಜನ ಕೂಡಾ ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು ಯಾಕೆ ನನಗೆ ಎಲ್ಲರೂ ಬೈಯುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ ಎದೆಯ ಮೇಲೆ ಅಂಗಿ ಹಿಡಿದುಕೊಂಡು ರೂಮಿನ ಹೊರಗೆ ದಗರ್ಾದ ಅಂಗಳದಲ್ಲಿ ಎಳೆದುಕೊಂಡು ಬಂದು ನನಗೆ ಹೊಡೆ ಬಡೆ ಮಾಡುತ್ತಿದ್ದಾಗ ಅಲ್ಲಿಯೇ ಇದ್ದ ನಮ್ಮೂರಿನ ಭಾಗಪ್ಪ ತಂದೆ ಲಕ್ಷ್ಮಣ ಬಡಿಗೇರ ಹಾಗೂ ಮೊಹಮ್ಮದ ಖಲಂದಾರ ತಂದೆ ಖಲಾಂದರಷಾ ಇಬ್ಬರೂ ಬಂದು ನನಗೆ ಹೊಡೆ ಬಡೆ ಮಾಡುವುದನ್ನು ಬಿಡಿಸಿಕೊಂಡರು. ನಂತರ ಎಲ್ಲರೂ ನನಗೆ ಸೂಳೆ ಮಗನೇ ಇವತ್ತು ನಮ್ಮ ಕೈಯಲ್ಲಿ ಉಳಿದಿದಿಯಾ ಇನ್ನೊಮ್ಮೆ ಸಿಕ್ಕರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೇದರಿಕೆ ಹಾಕಿರುತ್ತಾರೆ. ಸೈಯದ್ ಖುಸ್ರು ತಂದೆ ಸೈಯದ ಅಹಮ್ಮದ್ ಹುಸೇನಿ ಇತನೊಂದಿಗೆ ಬಂದು ಮೂರು ಜನರ ಹೆಸರು ಗೊತ್ತಿರುವುದಿಲ್ಲ ಅವರನ್ನು ನೋಡಿದರೆ ನಾನು ಗುತರ್ಿಸುತ್ತೇನೆ. ನನಗೆ ಯಾವುದೆ ರಕ್ತಗಾಯ ಆಗದೆ ಇರುವುದರಿಂದ ನಾನು ಆಸ್ಪತ್ರೆಗೆ ತೋರಿಸಿಕೊಂಡಿರುವುದಿಲ್ಲ. ಈ ವಿಷಯದ ಬಗ್ಗೆ ನಾನು ಸಮಾಜದ ಹಿರಿಯರಲ್ಲಿ ವಿಚಾರಿಸಿ ಇಂದು ಠಾಣೆಗೆ ಬಂದು ಅಜರ್ಿ ನೀಡಿರುತ್ತೇನೆ. ಕಾರಣ ನಾನು ದಗರ್ಾದಲ್ಲಿರುವ ಒಂದು ರೋಮಿನಲ್ಲಿ ಇದ್ದಾಗ ಸೈಯದ್ ಖುಸ್ರು ತಂದೆ ಸೈಯದ ಅಹಮ್ಮದ್ ಹುಸೇನಿ ಸಾ: ಗುರುಸಣಗಿ ಇತನೊಂದಿಗೆ ಇನ್ನೂ ಮೂರು ಜನರು ಎಲ್ಲರೂ ಕೂಡಿ ಅಕ್ರಮವಾಗಿ ನಾನಿದ್ದ ರೂಮ ಪ್ರವೇಶ ಮಾಡಿ ನನಗೆ ಎದೆಯ ಮೇಲೆ ಅಂಗಿ ಹಿಡಿದು ಕೈಯಿಂದ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದವರ ಮೇಲೆ ಕಾನೂನು ರೀತಿ ಸೂಕ್ತ ಕ್ರಮ ಜರುಗಿಬೇಕೆಂದು ಮಾನ್ಯರವಲ್ಲಿ ವಿನಂತಿ ಇರುತ್ತದೆ ಅಂತಾ ಪಿರ್ಯಾದಿ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 46/2022 ಕಲಂ: 447,323,504,506 ಸಂಗಡ 34 ಐಪಿಸಿ ನೇದ್ದರಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 28/2022 ಕಲಂ: 279 337 338 ಐಪಿಸಿ : ನಿನ್ನೆ ದಿನಾಂಕ:25.03.2022 ರಂದು ನಾನು ಗಾಯಾಳುಗಳ ಎಮ್ಎಲ್ಸಿ ವಿಚಾರಣೆ ಕುರಿತು ಠಾಣೆಯಿಂದ ಬಾಗಲಕೋಟ ಕಟ್ಟಿ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳುಗಳ ಪೈಕಿ ಒಬ್ಬರಾದ ವಿಶಾಲಾಕ್ಷಿ ಗಂಡ ವಿಶ್ವನಾಥ ದೇಸಾಯಿ ವ:39 ವರ್ಷ ಜಾ:ಹಿಂದೂ ಲಿಂಗಾಯತ ಉ:ಸ್ಟಾಪ್ ನರ್ಸ ಜಾಲಹಳ್ಳಿ ಸರಕಾರಿ ಆಸ್ಪತ್ರೆ ಸಾ:ಜಾಲಹಳ್ಳಿ ತಾ:ದೇವದುರ್ಗ ಜಿ:ರಾಯಚೂರ ರವರಿಗೆ ಅಪಘಾತದ ಬಗ್ಗೆ ವಿಚಾರಿಸಿ ಸದರಿಯವರ ಹೇಳಿಕೆಯನ್ನು ನಿನ್ನೆ ದಿನಾಂಕ 25.03.2022 ರಂದು ರಾತ್ರಿ 8:00 ಗಂಟೆಯಿಂದ 9:00 ಗಂಟೆಯವರೆಗೆ ಆಸ್ಪತ್ರೆಯಲ್ಲಿ ಪಡೆದುಕೊಂಡು ಸದರಿಯವರ ಹೇಳಿಕೆಯೊಂದಿಗೆ ಇಂದು ದಿನಾಂಕ 26.03.2022 ರಂದು ಬೆಳಿಗ್ಗೆ 09:00 ಗಂಟೆಗೆ ಠಾಣೆಗೆ ಬಂದಿದ್ದು ಸದರಿ ಪಿರ್ಯಾದಿಯ ಹೇಳಿಕೆಯ ಸಾರಾಂಶವೆನೆಂದರೆ ತಾನು ಜಾಲಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ ಅಂತ ಕೆಲಸ ಮಾಡಿಕೊಂಡು ಗಂಡ ಮಕ್ಕಳೊಂದಿಗೆ ಉಪಜೀವಿಸುತ್ತೇನೆ. ನನ್ನ ಮಗಳಾದ ಮಾನಸಾ ಇವರಿಗೆ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಆಕ್ಸಫರ್ಡ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಬಿಟ್ಟಿದ್ದು ಅವಳು ಸದ್ಯ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದುದು ಇರುತ್ತದೆ.
ಹೀಗಿದ್ದು ನಿನ್ನೆ ದಿನಾಂಕ 24.03.2022 ರಂದು ನಾನು ಮತ್ತು ನನ್ನ ಗಂಡ ವಿಶ್ವನಾಥ ತಂದೆ ತಿಪ್ಪಣ್ಣ ದೇಸಾಯಿ ಹಾಗೂ ಮಗಳಾದ ಐಶ್ವರ್ಯ, ಮಗ ವಿಕ್ರಾಂತ ಹಾಗೂ ನನ್ನ ಗಂಡನ ಅಣ್ಣನ ಮಗನಾದ ಬಸವರಾಜ ಮತ್ತು ನನ್ನ ಗಂಡನ ಗೆಳೆಯನಾದ ವಿನೋದಕುಮಾರ ತಂದೆ ಲಕ್ಷ್ಮಣರಾವ್ ಕಲ್ಯಾಣಕರ್ ಎಲ್ಲರೂ ಕೂಡಿಕೊಂಡು ನಮ್ಮ ಕಾರ್ ನಂ:ಕೆಎ-51 ಎಮ್ಬಿ-3583 ನೇದ್ದರಲ್ಲಿ ನನ್ನ ಮಗಳಾದ ಮಾನಸಾಳಿಗೆ ಮಾತನಾಡಿಸಿಕೊಂಡು ಬರಲು ಮತ್ತು ಶಾಲೆಯ ಫೀ ಕಟ್ಟಿ 10 ನೇ ತರಗತಿ ಹಾಲ್ ಟೀಕೆಟ್ ಕೊಡಿಸಲು ನಮ್ಮೂರಿನಿಂದ 12:00 ಗಂಟೆಯ ಸುಮಾರಿಗೆ ನಾಗರಬೆಟ್ಟಕ್ಕೆ ಹೋಗಲು ಬಿಟ್ಟಿದ್ದು ನಮ್ಮ ಕಾರನ್ನು ನನ್ನ ಗಂಡ ವಿಶ್ವನಾಥ ದೇಸಾಯಿ ರವರು ಚಲಾಯಿಸುತ್ತಿದ್ದು ನಾವು ಹುಣಸಗಿ ನಾರಾಯಣಪೂರ ಮುಖ್ಯ ರಸ್ತೆಯ ಮೇಲೆ ರಾಜನಕೊಳೂರ ಗ್ರಾಮದ ಗುಳಬಾಳ ಕ್ರಾಸ್ ದಾಟಿ ಸ್ವಲ್ಪ ಮುಂದೆ ರಸ್ತೆಯ ಪೂಲಿನ ಹತ್ತಿರ ಹೋಗುತ್ತಿರುವಾಗ ಮಧ್ಯಾಹ್ನ 1:30 ಗಂಟೆಯ ಸುಮಾರಿಗೆ ನನ್ನ ಗಂಡನು ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಹತ್ತಿದ್ದು ನಾನು ಮತ್ತು ನನ್ನ ಗಂಡನ ಗೆಳೆಯ ವಿನೋದಕುಮಾರ ರವರು ನನ್ನ ಗಂಡನಿಗೆ ನಿಧಾನವಾಗಿ ಕಾರನ್ನು ಚಲಾಯಿಸು ಅಂದರೂ ಕೂಡ ವೇಗವಾಗಿ ನಡೆಸಹತ್ತಿದ್ದು ಅದೇ ವೇಳೆಗೆ ಎದುರುಗಡೆಯಿಂದ ಕೊಡೆಕಲ್ಲ ಕಡೆಯಿಂದ ರಾಜನಕೊಳೂರ ಕಡೆಗೆ ಬರಲು ಒಬ್ಬ ಮೋಟರ್ ಸೈಕಲ್ ಸವಾರನು ತನ್ನ ಮೋಟರ್ ಸೈಕಲ್ನ್ನು ಅತಿ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದವನೇ ನಮ್ಮ ಕಾರಿನ ಮುಂಭಾಗದಲ್ಲಿ ಬಂದಿದ್ದು ಆಗ ನನ್ನ ಗಂಡನು ಅವನಿಗೆ ತಪ್ಪಿಸುವ ಉದ್ದೇಶದಿಂದ ಒಮ್ಮೇಲೆ ನಮ್ಮ ಕಾರನ್ನು ರಸ್ತೆಯ ಎಡಮಗ್ಗಲಿಗೆ ಕಟ್ ಹೊಡೆದಿದ್ದು ಆಗ ನಮ್ಮ ಕಾರು ರಸ್ತೆಯ ಪೂಲಿಗೆ ಡಿಕ್ಕಿ ಹೊಡೆದು ಬಲಮಗ್ಗಲಾಗಿ ರಸ್ತೆಯ ಪಕ್ಕದ ತಗ್ಗಿನಲ್ಲಿ ಮುಳ್ಳುಕಂಟಿಯಲ್ಲಿ ಬಿದ್ದಿದ್ದು ಮತ್ತು ಎದುರುಗಡೆಯಿಂದ ಬರುತ್ತಿದ್ದ ಮೋಟರ್ ಸೈಕಲ್ ಸವಾರನು ಕೂಡ ತನ್ನ ಮೋಟರ್ ಸೈಕಲ್ ಮೇಲೆ ನಿಯಂತ್ರಣ ಕಳೆದುಕೊಂಡು ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು ಕಾರಿನಲ್ಲಿ ಸಿಕ್ಕಿಬಿದ್ದಿದ್ದ ನಮಗೆ ಅದೇ ವೇಳೆಗೆ ಅಲ್ಲಿಂದಲೇ ಹೋಗುತ್ತಿದ್ದ 1)ಪಾಂಡು ತಂದೆ ಕಸ್ತೂರಪ್ಪ ಪವಾರ 2) ತಿರುಪತಿ ತಂದೆ ವೆಂಕಟೇಶ ಪವಾರ ಸಾ: ಇಬ್ಬರೂ ರಾಜನಕೊಳೂರ ಮೇಲಿನ ತಾಂಡಾ ಎಂಬುವವರು ನೋಡಿ ಹೊರಗೆ ತೆಗೆದಿದ್ದು ಈ ಅಪಘಾತದಲ್ಲಿ ನನಗೆ ತಲೆಯ ಮಧ್ಯಭಾಗದಲ್ಲಿ ರಕ್ತಗಾಯವಾಗಿದ್ದು ಮತ್ತು ತಲೆಯ ಹಿಂಭಾಜುವಿಗೆ ಒಳಪೆಟ್ಟಾಗಿದ್ದು, ಬಲಗಣ್ಣಿನ ಹುಬ್ಬಿಗೆ, ಬಲಗಡೆ ಕಪಾಳಕ್ಕೆ ರಕ್ತಗಾಯವಾಗಿದ್ದು, ಬಲಗೈ ರಟ್ಟೆಯ ಮೇಲೆ ಬಲಗಾಲ ತೊಡೆಯ ಮೇಲೆ ಭಾರಿ ಒಳಪೆಟ್ಟಾಗಿದ್ದು, ಎಡಗೈ ಹಸ್ತದ ಮೇಲೆ ರಕ್ತಗಾಯವಾಗಿದ್ದು ನನ್ನ ಮಗಳಾದ ಐಶ್ವರ್ಯ ವ:6 ವರ್ಷ ಇವಳಿಗೆ ತಲೆಯ ಮೇಲ್ಭಾಗದಲ್ಲಿ ಮತ್ತು ಹಿಂಭಾಜುವಿಗೆ ರಕ್ತಗಾಯವಾಗಿದ್ದು, ಮಗ ವಿಕ್ರಾಂತ ವ:1 ವರ್ಷ ಇವನಿಗೆ ಬಲಗಣ್ಣಿನ ಹುಬ್ಬಿನ ಮೇಲೆ ಮತ್ತು ಬಲ ಕಪಾಳದ ಮೇಲೆ, ಗದ್ದದ ಮೇಲೆ ರಕ್ತಗಾಯವಾಗಿದ್ದು, ಬಸವರಾಜ ವ:11 ವರ್ಷ ಇತನಿಗೆ ಎಡಗಾಲ ಮೊಳಕಾಲ ಕೆಳಭಾಗದಲ್ಲಿ ಭಾರಿ ಒಳಪೆಟ್ಟಾಗಿದ್ದು ನನ್ನ ಗಂಡನ ಗೆಳೆಯ ವಿನೋದಕುಮಾರ ರವರಿಗೆ ಮೇಲಿನ ತುಟಿಯ ಮೇಲೆ ರಕ್ತಗಾಯವಾಗಿ ಎರಡು ಹಲ್ಲುಗಳು ಬಿದ್ದಿದ್ದು ಮತ್ತು ಬಲಗಾಲ ಮೊಳಕಾಲ ಕೆಳಗಿನ ಭಾಗದಲ್ಲಿ ಮತ್ತು ಎದೆಯ ಮೇಲೆ ಎಡಗಡೆಗೆ ಭಾರಿ ಒಳಪೆಟ್ಟಾಗಿದ್ದು ನನ್ನ ಗಂಡ ವಿಶ್ವನಾಥ ತಲೆಯ ಮೇಲ್ಭಾಗದಲ್ಲಿ ಎಡಭಾಜುವಿಗೆ ಭಾರಿ ಪೆಟ್ಟಾಗಿದ್ದು ಮತ್ತು ಎದೆಯ ಮೇಲೆ ಎಡಗಾಲ ಮೊಳಕಾಲಿಗೆ, ಎಡಗಾಲ ಪಾದದ ಹಿಮ್ಮಡಿಗೆ ರಕ್ತಗಾಯವಾಗಿದ್ದು ಮತ್ತು ಕಿವಿಯಿಂದ ದ್ರವಸ್ವರೂಪದ ನೀರು ಬರುತ್ತಿದ್ದು ನಮ್ಮ ಕಾರಿನ ಮುಂದೆ ಅತಿವೇಗದಿಂದ ಮೋಟರ್ ಸೈಕಲ್ ಸವಾರನ ಹೆಸರು ಬಾಲಾಜಿ ತಂದೆ ಸೇವಾನಾಯಕ ರಾಠೋಡ ಸಾ:ರಾಜನಕೊಳೂರ ಮೇಲಿನತಾಂಡಾ ಅಂತ ಗೊತ್ತಾಗಿದ್ದು ಸದರಿಯವನು ನಡೆಯಿಸಿಕೊಂಡು ಬಂದ ಮೋಟರ್ ಸೈಕಲ್ ನಂ:ಕೆಎ-36 ಡಬ್ಲೂ-6404 ಇದ್ದು ಸದರಿಯವನು ತನ್ನ ಮೋಟರ್ ಸೈಕಲ್ ಸಮೇತ ಬಿದ್ದುದರಿಂದ ಅವನಿಗೂ ಕೂಡ ಗಾಯಗಳಾಗಿದ್ದು ನಂತರ ನಮಗೆ ಹಾಗೂ ಬಾಲಾಜಿ ಇತನಿಗೆ 1)ಪಾಂಡು ತಂದೆ ಕಸ್ತೂರಪ್ಪ ಪವಾರ 2) ತಿರುಪತಿ ತಂದೆ ವೆಂಕಟೇಶ ಪವಾರ ಸಾ: ಇಬ್ಬರೂ ರಾಜನಕೊಳೂರ ಮೇಲಿನ ತಾಂಡಾ ಎಂಬುವವರು ಘಟನಾ ಸ್ಥಳದಿಂದ ಉಪಚಾರಕ್ಕಾಗಿ ರಾಜನಕೊಳೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ರಾಜನಕೊಳೂರ ಆಸ್ಪತ್ರೆಯ ವೈದ್ಯರು ನಮ್ಮೆಲ್ಲರಿಗೂ ಪ್ರಥಮ ಉಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಅಂಬುಲೆನ್ಸ್ದಲ್ಲಿ ಲಿಂಗಸೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಬಾಲಾಜಿಗೂ ಕೂಡ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಗೆ ಹೋಗಲು ತಿಳಿಸಿದ್ದು, ಲಿಂಗಸೂರ ಆಸ್ಪತ್ರೆಯ ವೈದ್ಯರು ನನಗೆ ಮತ್ತು ನನ್ನ ಗಂಡನಿಗೆ ಹಾಗೂ ಮಕ್ಕಳಾದ ಐಶ್ವರ್ಯ, ವಿಕ್ರಾಂತ ಹಾಗೂ ಬಸವರಾಜ ರವರಿಗೆ ಬಾಗಲಕೋಟ ಕಟ್ಟಿ ಆಸ್ಪತ್ರೆಗೆ ಹೋಗಲು ಮತ್ತು ವಿನೋದಕುಮಾರ ಕಲ್ಯಾಣಕರ ರವರಿಗೆ ಬಳ್ಳಾರಿಯ ನ್ಯೂ ಟ್ರಾಮಕೇರ್ ಸ್ಯಾನಿಟರಿ ಆಸ್ಪತ್ರೆಗೆ ಹೋಗಲು ತಿಳಿಸಿದ್ದರಿಂದ ನಾವು ಬಾಗಲಕೋಟ ಕಟ್ಟಿ ಆಸ್ಪತ್ರೆಗೆ ಹಾಗೂ ವಿನೋದಕುಮಾರ ರವರು ಬಳ್ಳಾರಿಯ ನ್ಯೂ ಟ್ರಾಮಕೇರ್ ಸ್ಯಾನಿಟರಿ ಆಸ್ಪತ್ರೆಗೆ ಬಂದು ಉಪಚಾರ ಪಡೆಯುತ್ತಿದ್ದು ಈ ಅಪಘಾತವು ಕಾರ ನಂ:ಕೆಎ-51 ಎಮ್ಬಿ-3583 ನೇದ್ದರ ಚಾಲಕನಾದ ನನ್ನ ಗಂಡ ವಿಶ್ವನಾಥ ತಂದೆ ತಿಪ್ಪಣ್ಣ ದೇಸಾಯಿ ಹಾಗೂ ಮೊಟರ್ ಸೈಕಲ್ ನಂ:ಕೆಎ-36 ಡಬ್ಲೂ-6404 ನೇದ್ದರ ಸವಾರನಾದ ಬಾಲಾಜಿ ತಂದೆ ಸೇವಾನಾಯಕ ರಾಠೋಡ ಸಾ:ರಾಜನಕೊಳೂರ ಮೇಲಿನತಾಂಡಾ ರವರುಗಳ ನಿರ್ಲಕ್ಷ್ಯತನದಿಂದಲೇ ಸಂಭವಿಸಿದ್ದು ಇಬ್ಬರ ಮೇಲೂ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಪಿಯರ್ಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:28/2022 ಕಲಂ: 279 337 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 27-03-2022 05:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080