ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 27-04-2022


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 55/2022 ಕಲಂ: 143, 147, 504, 341, 324, 323, 506 ಸಂ 149 ಐಪಿಸಿ : ಇಂದು ದಿನಾಂಕ:26/04/2022 ರಂದು 12-30 ಪಿಎಮ್ ಕ್ಕೆ ಶ್ರೀ ಸಂಗಪ್ಪ ತಂದೆ ಮಲ್ಲಪ್ಪ ಅಗಸಿಮುಂದಲೋರ, ವ:40, ಜಾ:ಕುರುಬರ, ಉ:ಕೂಲಿ ಸಾ:ಕದರಾಪೂರ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ನನ್ನ ಹೆಂಡತಿ-ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನ್ನ ಹೆಸರಿನಲ್ಲಿ ರೋಟ್ನಡಗಿ ಸೀಮಾಂತರದಲ್ಲಿ ಸವರ್ೆ ನಂ. 152/2 ರಲ್ಲಿ 6 ಎಕರೆ 38 ಗುಂಟೆ ಜಮೀನು ಇರುತ್ತದೆ. ಸದರಿ ಜಮೀನು ನಾವು ಉಪಭೋಗಿಸುತ್ತಾ ಬರುತ್ತಿದ್ದೇವೆ. ಆದರೆ ನಮ್ಮ ಅಣ್ಣ ತಮ್ಮಕೀಯವರಾದ ರಾಯಪ್ಪ ತಂದೆ ನಾಗಪ್ಪ ಮತ್ತು ಸಂಗಡಿಗರಿಗೆ ಸವರ್ೆ ನಂ. 152/1 ರಲ್ಲಿ ಅವರ ಭಾಗಕ್ಕೆ ಜಮೀನು ಬಂದಿರುತ್ತದೆ. ಆದರೆ ಅವರು ನಮಗೆ ಸವರ್ೆ ನಂ. 152/2 ರ ಹಿಸ್ಸಾದ ಜಮೀನು ಬೇಕು ನೀವು ನಮ್ಮ 152/1 ರ ಜಮೀನು ಹಿಸ್ಸಾಕ್ಕೆ ಬರಬೇಕು ಎಂದು ಸುಮಾರು ದಿವಸಗಳಿಂದ ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ:25/04/2022 ರಂದು ರಾತ್ರಿ 10 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಮ್ಮ ಸಿದ್ದಲಿಂಗಪ್ಪ ಇಬ್ಬರೂ ವಡಗೇರಾಕ್ಕೆ ಬರುತ್ತಿದ್ದಾಗ ತುಮಕೂರು ಕೋರಗ್ರೀನ ಶುಗರ ಫ್ಯಾಕ್ಟರಿ ಹತ್ತಿರ 1) ರಾಯಪ್ಪ ತಂದೆ ನಾಗಪ್ಪ ಅಗಸಿಮುಂದಲೊರ, 2) ಮಲ್ಲಮ್ಮ ಗಂಡ ಬೂದೆಪ್ಪ ಅಗಸಿಮುಂದಲೊರ, 3) ಲಕ್ಷ್ಮೀ ಗಂಡ ನಾಗಪ್ಪ ಅಗಸಿಮುಂದಲೊರ, 4) ಬಸಮ್ಮ ಗಂಡ ಮಲ್ಲಪ್ಪ ಅಗಸಿಮುಂದಲೊರ, 5) ರಾಯಮ್ಮ ತಂದೆ ನಾಗಪ್ಪ ಅಗಸಿಮುಂದಲೊರ, 6) ಮಾಳಪ್ಪ ತಂದೆ ರಾಯಪ್ಪ ಅಗಸಿಮುಂದಲೊರ, 7) ಬೂದೆಪ್ಪ ತಂದೆ ರಾಯಪ್ಪ ಅಗಸಿಮುಂದಲೊರ, 8) ರಾಮಪ್ಪ ತಂದೆ ನಾಗಪ್ಪ ಅಗಸಿಮುಂದಲೊರ ಎಲ್ಲರೂ ಸಾ:ಕದರಾಪೂರ ಇವರೆಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಬಂದವರೆ ನನಗೆ ಮತ್ತು ನನ್ನ ತಮ್ಮನಿಗೆ ತಡೆದು ನಿಲ್ಲಿಸಿದವರೆ ಲೇ ಭೊಸುಡಿ ಮಕ್ಕಳೆ ನೀವು ನಮ್ಮ ಹಿಸ್ಸಾದ ಹೊಲ ನಮಗೆ ಬಿಡ್ರಿ ಅಂದ್ರೆ ಬಿಡುತ್ತಿಲ್ಲ ನಿಮ್ಮ ಸೊಕ್ಕು ಜಾಸ್ತಿಯಾಗಿದೆ ಎಂದು ಜಗಳ ತೆಗೆದವರೆ ನನಗೆ ಬೂದೆಪ್ಪ ಮತ್ತು ರಾಮಪ್ಪ ಇಬ್ಬರೂ ಗಟ್ಟಿಯಾಗಿ ಹಿಡಿದುಕೊಂಡಾಗ ರಾಯಪ್ಪನು ಅಲ್ಲಿಯೇ ಬಿದ್ದ ಹಿಡಿಗಲ್ಲು ತೆಗೆದುಕೊಂಡು ಕಲ್ಲಿನಿಂದ ನನ್ನ ಹಣೆಗೆ ಹೊಡೆದು ರಕ್ತಗಾಯ ಮಾಡಿದನು. ಅದೇ ಕಲ್ಲಿನಿಂದ ನನ್ನ ಬಲಗೈ ಮೊಳಕೈ ಕೆಳಗೆ ಹೊಡೆದು ಒಳಪೆಟ್ಟು ಮಾಡಿದನು. ಮಲ್ಲಮ್ಮ ಇವಳು ಬಂದು ಕೈ ಮುಷ್ಠಿ ಮಾಡಿ ನನ್ನ ಎದೆಗೆ ಗುದ್ದಿ ಒಳಪೆಟ್ಟು ಮಾಡಿದಳು. ಲಕ್ಷ್ಮೀ, ಬಸಮ್ಮ ಮತ್ತು ರಾಯಮ್ಮ ಮೂರು ಜನ ಬಂದು ನನಗೆ ಕೈಯಿಂದ ಮುಖಕ್ಕೆ, ಹೊಟ್ಟೆಗೆ ಗುದ್ದಿದರು. ಮಾಳಪ್ಪನು ಬಿಡಿಸಲು ಬಂದ ನನ್ನ ತಮ್ಮ ಸಿದ್ದಲಿಂಗಪ್ಪನಿಗೆ ಜಾಡಿಸಿ ದಬ್ಬಿಕೊಟ್ಟನು. ಆಗ ಜಗಳವನ್ನು ನಮ್ಮೊಂದಿಗೆ ವಡಗೇರಾ ಬರುತ್ತಿದ್ದ ರಂಗಪ್ಪ ತಂದೆ ಹಣಮಂತ ಖಂಡೆಪ್ಪನೋರ ಮತ್ತು ದಂಡಪ್ಪ ತಂದೆ ಮಲ್ಲಪ್ಪ ನಾಟೇಕಾರ ಇವರು ಬಂದು ಜಗಳ ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಸೂಳೆ ಮಕ್ಕಳೆ ಇನ್ನೊಂದು ಸಲ ಸಿಕ್ಕರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದರು. ಆಗ ನನ್ನ ತಮ್ಮ ಸಿದ್ದಲಿಂಗಪ್ಪನು ನನಗೆ ಅದೆ ನಮ್ಮ ಮೋಟರ್ ಸೈಕಲ್ ಮೇಲೆ ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಇಲ್ಲಿನ ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾನು ಠಾಣೆಗೆ ಬಂದು ದೂರು ಸಲ್ಲಿಸುತ್ತೇನೆ ಎಂದು ತಿಳಿಸಿರುತ್ತೇನೆ. ನಾನು ಆಸ್ಪತ್ರೆಯಲ್ಲಿ ಉಪಚಾರ ಮಾಡಿಕೊಂಡು ಈಗ ಠಾಣೆಗೆ ಬಂದು ದೂರು ಕೊಡುತ್ತಿದ್ದೇನೆ. ಕಾರಣ ಹೊಲದ ಹಿಸ್ಸಾವನ್ನು ಬದಲಾಯಿಸಿಕೊಳ್ಳಿ ಇಲ್ಲದಿದ್ದರೆ ನಿಮಗೆ ಬಿಡುವುದಿಲ್ಲ ಅಂತಾ ಜಗಳ ತೆಗೆದು ನಮಗೆ ತಡೆದು ನಿಲ್ಲಿಸಿ, ಅವಾಚ್ಯ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿ ರಕ್ತಗಾಯ, ಗುಪ್ತಗಾಯ ಮಾಡಿ, ಜೀವ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 55/2022 ಕಲಂ: 143, 147, 504, 341, 324, 323, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ವಡಗೇರಾ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 56/2022 ಕಲಂ: 143, 147, 148, 504, 324, 326, 307 ಸಂ 149 ಐಪಿಸಿ : ದಿನಾಂಕ:26/04/2022 ರಂದು 3-30 ಪಿಎಮ್ ಕ್ಕೆ ಶ್ರೀ ಮಾರುತಿ ತಂದೆ ದುರುಗಪ್ಪ ಬೂದನಾಳ, ವ:50, ಜಾ:ಮಾದಿಗ (ಎಸ್.ಸಿ), ಉ:ಕೂಲಿ ಸಾ:ಶಿವನೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನಗೆ 1) ರಮೇಶ, 2) ಈಶಪ್ಪ, 3) ನಿರ್ಮಲಮ್ಮ, 4) ದುರುಗಪ್ಪ, 5) ನಾಗಮ್ಮ ಮತ್ತು 6) ಸಿದ್ದಲಿಂಗ ಹೀಗೆ 4 ಗಂಡು ಮತ್ತು 2 ಜನ ಹೆಣ್ಣು ಮಕ್ಕಳಿರುತ್ತಾರೆ. ನನ್ನ ಮಗ ರಮೇಶ ಮತ್ತು ಮಗಳಾದ ನಿರ್ಮಲಮ್ಮ ಇವರಿಗೆ ಲಗ್ನ ಮಾಡಿರುತ್ತೇವೆ. ನಾನು ನನ್ನ ಹೆಂಡತಿ ಯಲ್ಲಮ್ಮ ನಮ್ಮ ಮಕ್ಕಳು ಸೊಸೆಯರೊಂದಿಗೆ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇವೆ. ಹೀಗಿದ್ದು ಇಲ್ಲಿ ಕೂಲಿ ಕೆಲಸ ಇಲ್ಲದಾಗ ನಾವು ಕುಟುಂಬ ಸಮೇತ ಬೆಂಗಳೂರಿಗೆ ದುಡಿಯಲು ಹೋಗುತ್ತೇವೆ. ಬೆಂಗಳೂರಿನ ಬ್ಯಾಡರಹಳ್ಳಿ ಏರಿಯಾದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಅಲ್ಲಿ ಕೂಲಿ ಕೆಲಸ ಮಾಡುತ್ತೇವೆ. ಆಗಾಗ ನಮ್ಮೂರಿಗೆ ಬಂದು ಹೋಗುತ್ತಿರುತ್ತೇವೆ. ನಮ್ಮಂತೆಯೇ ನಮ್ಮ ಖಾಸಾ ಅಣ್ಣತಮ್ಮಕಿಯವರಾದ ದೊಡ್ಡ ದುರುಗಪ್ಪ ತಂದೆ ಮರೆಪ್ಪ ಬೂದನಾಳ ಮತ್ತು ಅವನ ಅಣ್ಣತಮ್ಮಂದಿರು ಕೂಡಾ ಬೆಂಗಳೂರಿಗೆ ದುಡಿಯಲು ಬಂದು ನಮ್ಮ ಏರಿಯಾದಲ್ಲಿ ಬಾಡಿಗೆ ಇದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. ಹೀಗಿದ್ದು ಈಗ ಸುಮಾರು 3 ತಿಂಗಳ ಹಿಂದೆ ಬೆಂಗಳೂರು ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ನನ್ನ ಮಗನಾದ ಈಶಪ್ಪ ತಂದೆ ಮಾರುತಿ ಈತನು ದೊಡ್ಡ ದುರುಗಪ್ಪನ ತಮ್ಮ ಸಣ್ಣ ದುರುಗಪ್ಪನ ಹೆಂಡತಿ ಲಕ್ಷ್ಮೀ ಇವಳೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಾನೆ ಎಂದು ಸುಳ್ಳು ಗುಮಾನಿ ಎಬ್ಬಿಸಿ, ದೊಡ್ಡ ದುರುಗಪ್ಪ ಮತ್ತು ಅವನ ಸಂಗಡಿಗರು ಬಂದು ವಿನಾಕಾರಣ ನಮ್ಮೊಂದಿಗೆ ಜಗಳ ಮಾಡಲಿಕ್ಕೆ ಬಂದಾಗ ನಾವು ಅವರಿಗೆ ನಮ್ಮ ಹುಡುಗ ಅಂಥವನಲ್ಲ ಸುಳ್ಳು ಆರೋಪ ಮಾಡಬೇಡಿ ಎಂದು ಹೇಳಿದರು, ಕೇಳದೆ ಮಕ್ಕಳೆ ನಿಮಗೆ ಬಿಡಲ್ಲ ಇವತ್ತಲ್ಲ ನಾಳೆ ಖಲಾಸ ಮಾಡೆ ಮಾಡುತ್ತೇವೆ ಅಂತಾ ಜೀವ ಬೆದರಿಕೆ ಹಾಕುತ್ತಿದ್ದರು. ಅದಕ್ಕೆ ನಾವು ಅವರಿಗೆ ಅಂಜಿ ಸುಮಾರು 2 ತಿಂಗಳ ಹಿಂದೆ ವಾಪಸ ಊರಿಗೆ ಬಂದು ಇಲ್ಲಿಯೇ ಕೆಲಸ ಮಾಡಿಕೊಂಡಿದ್ದೇವು. ನನ್ನ ಮಗ ಈಶಪ್ಪನು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದನು. ನಿನ್ನೆ ದಿನಾಂಕ:25/04/2022 ರಂದು ಬೆಳಗ್ಗೆ ನನ್ನ ಮಗ ಈಶಪ್ಪನು ಬೆಂಗಳೂರದಿಂದ ನಮ್ಮ ಮನೆಗೆ ಬಂದು ಮನೆಯಲ್ಲಿದ್ದನು. ಆಗ ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಯಲ್ಲಮ್ಮ, ನನ್ನ ಮಕ್ಕಳಾದ ರಮೇಶ ಮತ್ತು ಈಶಪ್ಪ ನಾವು ಎಲ್ಲರೂ ನಮ್ಮ ಮನೆ ಮುಂದೆ ಮಾತಾಡುತ್ತಾ ಕುಳಿತುಕೊಂಡಾಗ 1) ದೊಡ್ಡ ದುರುಗಪ್ಪ ತಂದೆ ಮರೆಪ್ಪ ಬೂದನಾಳ, 2) ಸಣ್ಣ ದುರುಗಪ್ಪ ತಂದೆ ಮರೆಪ್ಪ ಬೂದನಾಳ, 3) ಹಂಪಯ್ಯ ತಂದೆ ಮರೆಪ್ಪ ಬೂದನಾಳ, 4) ಹಣಮಂತ ತಂದೆ ಮರೆಪ್ಪ ಬೂದನಾಳ, 5) ಪಾರ್ವತಮ್ಮ ಗಂಡ ದೊಡ್ಡ ದುರುಗಪ್ಪ ಬೂದನಾಳ, 6) ಕಾಶಮ್ಮ ಗಂಡ ಹಣಮಂತ ಬೂದನಾಳ, 7) ಅಂಜಪ್ಪ ತಂದೆ ಹಣಮಂತ ಬೂದನಾಳ, 8) ಮರೆಪ್ಪ ತಂದೆ ದೊಡ್ಡ ದುರುಗಪ್ಪ ಬೂದನಾಳ ಎಲ್ಲರೂ ಸಾ:ಶಿವನೂರು ಇವರೆಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಬ್ಬಿಣದ ರಾಡು ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಬಂದವರೆ ಏ ಮಕ್ಕಳೆ ನಮ್ಮ ಹೆಣ್ಣುಮಗಳೊಂದಿಗೆ ಅನೈತಿಕ ಸಂಬಂಧ ಮಾಡುತ್ತಿರಿ ನಿಮ್ಮ ಸೊಕ್ಕು ಜಾಸ್ತಿ ಯಾಗ್ಯಾದ ಸೂಳೆ ಮಕ್ಕಳೆ ಇವತ್ತು ನಿಮ್ಮಲ್ಲಿ ಒಬ್ಬರಿಗಾದರೂ ಖಲಾಸ ಮಾಡುತ್ತೇವೆ ಎಂದು ಜಗಳ ತೆಗೆದು ಅವಾಚ್ಯ ಬೈದವರೆ ಸಣ್ಣ ದುರುಗಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬಾಜು ಕುಂತಿದ್ದ ನನ್ನ ಮಗ ಈಶಪ್ಪನಿಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆಯಲು ಬಂದಾಗ ಅವನು ಆ ಏಟು ತಪ್ಪಿಸಿಕೊಂಡನು. ಆಗ ನನ್ನ ಹೆಂಡತಿ ಯಲ್ಲಮ್ಮ ನನ್ನ ಮಗನಿಗೆ ಯಾಕೆ ಹೊಡೆಯುತ್ತಿರಿ ಎಂದು ನಡುವೆ ಬಿಡಿಸಲು ಹೊದರೆ ಲೇ ಮುದಿ ಸೂಳಿ ನೀನು ನಡುವೆ ಬರುತ್ತಿ ನಿನ್ನ ಸೊಕ್ಕು ಜಾಸ್ತಿಯಾಗಿದೆ ಇವತ್ತು ನಿನಗೆ ಕೊಲೆ ಮಾಡಿಯೇ ತೀರುತ್ತೇವೆ ಎಂದು ದೊಡ್ಡ ದುರುಗಪ್ಪನು ಅವಾಚ್ಯ ಬೈದು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ಹೆಂಡತಿ ಯಲ್ಲಮ್ಮಳ ತಲೆ ಹಿಂಭಾಗ ಹೊಡೆದು ಭಾರಿ ರಕ್ತಗಾಯ ಮಾಡಿದನು. ಸಣ್ಣ ದುರುಗಪ್ಪನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಹೆಂಡತಿಯ ಹಣೆಯ ಬಲಗಡೆ ಮತ್ತು ಕುತ್ತಿಗೆ ಹಿಂಭಾಗ ಹೊಡೆದು ಭಾರಿ ರಕ್ತ ಮತ್ತು ಗುಪ್ತಗಾಯ ಮಾಡಿದನು. ದೊಡ್ಡ ದುರುಗಪ್ಪನು ಅದೇ ರಾಡಿನಿಂದ ನನ್ನ ಹೆಂಡತಿಯ ಬಲಗೈಗೆ ಹೊಡೆದು ಭಾರಿ ರಕ್ತಗಾಯ ಮಾಡಿದನು. ಬಿಡಿಸಲು ಹೊದ ನನ್ನ ಹಿರಿಮಗ ರಮೇಶನಿಗೆ ಪಾರ್ವತಮ್ಮ ಮತ್ತು ಕಾಶಮ್ಮ ಇಬ್ಬರೂ ಬಂದು ಗಟ್ಟಿಯಾಗಿ ಹಿಡಿದುಕೊಂಡಾಗ ಹಂಪಯ್ಯನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ರಮೇಶನ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಹಂಪಯ್ಯನು ಅದೇ ಕಟ್ಟಿಗೆಯಿಂದ ಎಡಗೈಗೆ ಹೊಡೆದು ಭಾರಿ ಒಳಪೆಟ್ಟು ಮಾಡಿದ್ದರಿಂದ ಕೈ ಎಲುಬು ಮುರಿದಂತಾಗಿತ್ತು. ಹಣಮಂತ ಈತನು ಬಂದು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ರಮೇಶನ ಬಲಭುಕ್ಕೆ ಹೊಡೆದು ಒಳಪೆಟ್ಟು ಮಾಡಿದನು. ಹಣಮಂತನು ನನ್ನ ಹೆಂಡತಿ ಯಲ್ಲಮ್ಮಳಿಗೆ ಟೊಂಕಕ್ಕೆ ಹೊಡೆದು ಒಳಪೆಟ್ಟು ಮಾಡಿದನು. ಬಿಡಿಸಲು ಹೊದ ನನಗೆ ಮರೆಪ್ಪನು ಹಿಡಿದುಕೊಂಡಾಗ ಅಂಜಪ್ಪನು ಅಲ್ಲಿಯೇ ಬಿದ್ದ ಹಿಡಿಗಲ್ಲಿನಿಂದ ನನ್ನ ಹೊಟ್ಟೆಗೆ ಹೊಡೆದು ಒಳಪೆಟ್ಟು ಮಾಡಿದನು. ಎಲ್ಲರೂ ಸೇರಿ ನನ್ನ ಮಗ ಈಶಪ್ಪನ ಮೇಲೆ ಸುಳ್ಳು ಅಪಾದನೆ ಮಾಡಿ ನನ್ನ ಹೆಂಡತಿ ಮತ್ತು ಮಗ ರಮೇಶ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ. ಆಗ ಜಗಳವನ್ನು ಅಲ್ಲಿಯೇ ಇದ್ದ ನನ್ನ ಸಡ್ಡಕ್ಕನ ಹೆಂಡತಿ ಮರೆಮ್ಮ ಗಂಡ ತಾಯಪ್ಪ, ಆಕೆಯ ಮಗನಾದ ಮಲ್ಲಪ್ಪ ತಂದೆ ತಾಯಪ್ಪ ಮತ್ತು ನನ್ನ ಸೋಸೆ ಹಣಮಂತಿ ಗಂಡ ರಮೇಶ ಹಾಗೂ ನಾಗಮ್ಮ ಗಂಡ ದೇವಪುತ್ರ ಮತ್ತು ಇತರರು ಬಂದು ಬಿಡಿಸಿರುತ್ತಾರೆ. ಭಾರಿಗಾಯಗೊಂಡ ನನ್ನ ಹೆಂಡತಿ ಮತ್ತು ಮಗ ರಮೇಶನಿಗೆ 108 ಅಂಬುಲೇನ್ಸನಲ್ಲಿ ಉಪಚಾರ ಕುರಿತು ರಾಯಚೂರು ಬಾಲಂಕು ಆಸ್ಪತ್ರೆಗೆ ಕಳುಹಿಸಿರುತ್ತೇನೆ. ನಂತರ ನಾನು ಯಾದಗಿರಿ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಕುರಿತು ರಾತ್ರಿಯೇ ಸೇರಿಕೆಯಾಗಿದ್ದು, ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದರು. ಆಗ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾನು ಠಾಣೆಗೆ ಬಂದು ದೂರು ಸಲ್ಲಿಸುತ್ತೇನೆ ಎಂದು ಹೇಳಿರುತ್ತೇನೆ. ಕಾರಣ ನಾನು ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ಇಂದು ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದೇನೆ. ವಿನಾಕಾರಣ ನನ್ನ ಮಗ ಈಶಪ್ಪನ ಮೇಲೆ ಅನೈತಿಕ ಸಂಬಂಧದ ಆರೋಪ ಹೊರೆಸಿ, ಅವನಿಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆಯಲು ಬಂದಾಗ ನಾವು ಬಿಡಿಸಲು ಹೋದರೆ ನನ್ನ ಹೆಂಡತಿ ಯಲ್ಲಮ್ಮ ಮತ್ತು ಮಗ ರಮೇಶನಿಗೆ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕ ಹಲ್ಲೆ ಮಾಡಿ ಭಾರಿ ಗಾಯಗೊಳಿಸಿರುತ್ತಾರೆ. ಆದ್ದರಿಂದ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 56/2022 ಕಲಂ: 143, 147, 148, 504, 324, 326, 307 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

.

ಇತ್ತೀಚಿನ ನವೀಕರಣ​ : 27-04-2022 10:04 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080