ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 27-05-2022


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 85/2022 143, 147, 341, 323, 504, 506 ಸಂಗಡ 149 ಐಪಿಸಿ: ಫಿರ್ಯಾದಿಯ ತಾತನಾದ ಲಕ್ಷ್ಮಪ್ಪ ಈತನಿಂದ ಬಂದಂತಹ ಜಮೀನು ಸವರ್ೇ ನಂಬರ 88 ನೇದ್ದರ ವಿಸ್ತೀರ್ಣ 5 ಎಕ್ಕರೆ 24 ಗುಂಟೆ ಜಮೀನು ಫಿರ್ಯಾದಿಯ ದೊಡ್ಡಪ್ಪನಾದ ನರಸಪ್ಪ, ಸಾವಪ್ಪ ಹಾಗೂ ಆತನ ತಂದೆಯಾದ ಯಲ್ಲಪ್ಪ ಇವರ ಹೆಸರಿನಲ್ಲಿ ಜಂಟಿಯಾಗಿ ಇರುತ್ತದೆ. ಅವರಲ್ಲಿ ಫಿರ್ಯಾದಿಯ ದೊಡ್ಡಪ್ಪನಾದ ನರಸಪ್ಪ ಈತನ ಮೊಮ್ಮಮಗಳಾದ ಅರುಣ ಈಕೆ ಮತ್ತು ಅಕೆಯ ಗಂಡ ಹಾಗೂ ಉಳಿದ ಕ್ರ.ಸಂ-7 ರಲ್ಲಿಯ ಕ್ರ.ಸಂ-3 ರಿಂದ 07 ನೇದ್ದರವರು ಅನಪೂರ ಸಿಮಾಂತರದ ಜಮೀನು ಸವರ್ೇ ನಂಬರ 88 ರಲ್ಲಿ ಗಳೆ ಹೊಡೆಯುತ್ತಿದ್ಧಾಗ ಫಿರ್ಯಾದಿ ಮತ್ತು ಆತನ ತಮ್ಮ ಆಶಪ್ಪ ಇಬ್ಬರು ಅಲ್ಲಿಗೆ ಹೋಗಿ ಆ ಹೊಲದಲ್ಲಿ ತಕರಾರು ಇದೆ ಅದು ಸರಿ ಹೋದ ನಂತರ ಗಳೆ ಹೊಡಿರಿ ಅಂತಾ ಹೇಳಿದಕ್ಕೆ ಆರೋಪಿತರೆಲ್ಲಾರು ಕೂಡಿಕೊಂಡು ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳೀಂದ ಬೈದು ಕೈಯಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದ ಬಗ್ಗೆ ಫಿರ್ಯಾದಿಯು ಇಂದು ದಿನಾಂಕ 26.05.2022 ರಂದು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 85/2022 ಕಲಂ: 143, 147, 341, 323, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 86/2022 ಕಲಂ: 143, 147, 148, 323, 324, 354, 504, 506 ಸಂಗಡ 149 ಐಪಿಸಿ: ಮೊಟ್ನಳ್ಳಿ ತಾಂಡಾದಲ್ಲಿ ಸಂತ ಸೇವಾಲಾಲ್ ಹಳೆ ಗುಡಿಯನ್ನು ಕೆಡವಿ ಹೊಸ ಗುಡಿಯನ್ನು ಕಟ್ಟುತ್ತಿದ್ದಾರೆ. ಅದಕ್ಕಾಗಿ ಊರಿನ ಜನರು ಅಲ್ಲಿ ಹೋಗಿ ಕೆಲಸ ಮಾಡಿದ್ದು ಅವರಂತೆಯೇ ಫಿರ್ಯಾದಿಯು ತನ್ನ ಜೆ.ಸಿ.ಬಿ ವಾಹನವನ್ನು ತೆಗೆದುಕೊಂಡು ಹೋಗಿ ಕೆಲಸ ಮಾಡುತ್ತಿದ್ದಾಗ ಆರೋಪಿತರೆಲ್ಲಾರು ಕೂಡಿಕೊಂಡು ಬಂದು ಲೇ ಸೂಳೆ ಮಕ್ಕಳೆ ಯಾರಿಗೆ ಕೇಳಿ ಕೆಲಸ ಮಾಡಕತ್ತಿರಿಲೇ ಅಂತಾ ಅವಾಚ್ಯ ಶಬ್ದಗಳೀಂದ ಬೈದಿದ್ದು ಆಗ ಗಾಯಳು ಹಾಗೆಲ್ಲಾ ಬೈಯ ಬೇಡ ಅಂತಾ ಹೇಳಿದಕ್ಕೆ ಆರೋಪಿ ರಾಮು ಈತನು ಒಂದು ಕೊಡಲಿ ಕಾವನ್ನು ತಗೊಂಡು ಗೋಪಾಲ ಈತನ ತಲೆಗೆ ಹೊಡೆದು ಗಾಯಗೊಳಿಸಿದ್ದು ಜಗಳದ ಶಬ್ದ ಕೇಳಿ ಅಲ್ಲಿಗೆ ಬಂದ ಸೋನಿಬಾಯಿಯು ಜಗಳು ಬಿಡಿಸುತ್ತಿದ್ಧಾಗ ಆರೋಪಿ ದಶರಥ ಈತನು ಆಕೆಯ ಕುಪ್ಪಸಕ್ಕೆ ಕೈ ಹಾಕಿ ಮಾನಭಗ ಮಾಡಲು ಪ್ರಯತ್ನಿಸಿದ್ದು ಅಲ್ಲದೇ ಕೈಯಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ತಮ್ಮ ತಮ್ಮನಿಗೆ ಹೆಚ್ಚಿನ ಉಪಚಾರಕ್ಕಾಗಿ ರಾಯಚೂರನ ಆಸ್ಪತ್ರೆಗೆ ಸೇರಿಕೆ ಮಾಡಿದ ನಂತರ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಅದರ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ 86/2022 ಕಲಂ: 143, 147, 148, 323, 324, 354, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 44/2022 ಕಲಂ: 143, 147, 435, 323, 504, 506 ಸಂ.149 ಐಪಿಸಿ: ಇಂದು ದಿನಾಂಕ:26/05/2022 ರಂದು ಮಮದ್ಯಾಹ್ನ 12.30 ಗಂಟೆಗೆ ಶ್ರೀ. ಜೋತೆಪ್ಪ ತಂದೆ ಕರಿನಿಂಗಪ್ಪ ಪೂಜಾರಿ ವಯಾ-40 ವರ್ಷ, ಜಾ:ಕುರುಬರ ಉ:ಒಕ್ಕಲುತನ ಸಾ:ಕೊಳಿಹಾಳ ತಾ:ಹುಣಸಗಿ ಜಿಲ್ಲಾ:ಯಾದಗಿರ ಇವರು ಠಾಣೆಗೆ ಹಾಜರಾಗಿ ಟೈಪ್ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೇ, ನಮ್ಮ ತಂದೆಗೆ ನಾವು 2 ಜನ ಗಂಡು ಮಕ್ಕಳು 3ಜನ ಹೆಣ್ಣುಮಕ್ಕಳಿದ್ದು, ಹೆಣ್ಣು ಮಕ್ಕಳ ಲಗ್ನವಾಗಿದ್ದು, ಅವರು ತಮ್ಮ ತಮ್ಮ ಗಂಡನ ಮನೆಯಲ್ಲಿರುತ್ತಾರೆ. ನಾನು ಹಿರಿಯವನಿದ್ದು, 2ನೇದ್ದವನು ಬನ್ನೆಪ್ಪ ಅಂತಾ ಇದ್ದು, ನಮ್ಮಿಬ್ಬರ ಲಗ್ನವಾಗಿದ್ದು ಬೇರೆ ಬೇರೆಯಾಗಿದ್ದು ಇರುತ್ತದೆ. ಕೊಳಿಹಾಳ ಸೀಮಾಂತರದಲ್ಲಿರುವ ಹೊಲ ಸವರ್ೆ ನಂ:203 18 ಎಕರೆ ಜಮೀನು ಇದ್ದು, ದಿನಾಂಕ:17/05/2022 ರಂದು ನಮ್ಮ ಹೊಲದಲ್ಲಿ ಟ್ಯಾಕ್ಟರದಿಂದ ಗಳೆ ಹೊಡಿಸುತ್ತಿದ್ದು, ನನ್ನ ತಮ್ಮನಾದ ಬನ್ನೆಪ್ಪ ಈತನು ತನ್ನ ಮೋಟಾರ್ ಸೈಕಲ್ ನಂ: ಕೆಎ-33 ಜೆ-7312 ನೇದ್ದನ್ನು ತೆಗೆದುಕೊಂಡು ಹೊಲಕ್ಕೆ ಹೋಗಿದ್ದು, ಹೊಲದಲ್ಲಿ ಟ್ಯಾಕ್ಟರ್ದಿಂದ ಗಳೆ ಹೊಡೆಯುತ್ತಿದ್ದರಿಂದ ನಾನು ಸಹ ಅವನ ಹಿಂದೆಯೇ ಹೋಗಿದ್ದು, ನಾನು ನನ್ನ ತಮ್ಮ ಸದರಿ ಟ್ಯಾಕ್ಟರ್ ಹೊಡೆಯುವ ಹೊಲದಲ್ಲಿಯೇ ಇದ್ದೆವು. ಮದ್ಯಾಹ್ನ 1.00 ಗಂಟೆಯ ಸುಮಾರಿಗೆ ನಾನು ಸ್ವಲ್ಪ ದೂರದಲ್ಲಿ ಟ್ಯಾಕ್ಟರಗೆ ಡೋಣಕ್ಕೆ ಕಟ್ಟಿಗೆಗಳು ಇದ್ದುದರಿಂದ ಅವುಗಳನ್ನು ಕಡಿದು ಡೋಣದ ಮೇಲೆ ಹಾಕುತ್ತಿದ್ದು, ಅದೆ ವೇಳೆಗೆ ನಮ್ಮ ಹೊಲದ ಹತ್ತಿರ ನಿಂಗಪ್ಪ ತಂದೆ ಸಿದ್ದಪ್ಪ ಪೂಜಾರಿ & ಚಂದ್ರಪ್ಪ ತಂದೆ ನಿಂಗಪ್ಪ ಪೂಜಾರಿ ಇವರಿಬ್ಬರೂ ಕೂಡಿ ಅಲ್ಲಿ ನಿಂತಿದ್ದು, ಅವರಿಗೆ ನೋಡಿ ನನ್ನ ತಮ್ಮನಾದ ಬನ್ನೆಪ್ಪ ಈತನು ಅಂಜಿ ಓಡಿ ಹೋಗಿದ್ದು, ನನ್ನ ಹತ್ತಿರ ನಿಂಗಪ್ಪ ಪೂಜಾರಿ ಈತನು ಬಂದು ಏ ಜೋತ್ಯಾ ನಿಮ್ಮ ತಮ್ಮ ಬನ್ಯಾ ಈತನು ನಮ್ಮ ತಾಯಿಯೊಂದಿಗೆ ಅನೈತಿಕ ಸಂಬಂದ ಹೊಂದ್ಯಾನ ಇವತ್ತ ನಾವು ನಿಮಗೆ ಬಿಡುವದಿಲ್ಲ ಅಂತಾ ನನಗೆ ಪ್ರಾಣಭಯ ಹಾಕಿದ್ದು, ನಾನು ಅವರಿಗೆ ಅಂಜಿ ಸ್ವಲ್ಪ ದೂರದಲ್ಲಿ ಹೋದಾಗ, ಅವರ ಸಂಬಂದಿಕರಿಗೆ ಪೋನ್ ಮಾಡಿ 1) ಸಿದ್ದಪ್ಪ ತಂದೆ ನಿಂಗಪ್ಪ ಪೂಜಾರಿ, 2) ಹಣಮಂತ್ರಾಯ ತಂದೆ ನಿಂಗಪ್ಪ ಪೂಜಾರಿ, 3) ಶಿವಪ್ಪ ತಂದೆ ನಿಂಗಪ್ಪ ಪೂಜಾರಿ, 4) ಬಸಪ್ಪ ತಂದೆ ನಿಂಗಪ್ಪ ಬಿಸಿರೊಟ್ಟಿ, 5) ಭಿಮಣ್ಣ ತಂದೆ ಸಂಗಪ್ಪ ಬಿಸಿರೊಟ್ಟಿ, 6) ಬಸಪ್ಪ ತಂದೆ ಜುಮ್ಮಣ್ಣ ಪೂಜಾರಿ, 7) ನಿಂಗಪ್ಪ ತಂದೆ ಬಸವರಾಜ ಪೂಜಾರಿ, 8) ಮಲ್ಲಪ್ಪ ತಂದೆ ನಿಂಗಪ್ಪ ಪೂಜಾರಿ ಇವರಿಗೆ ಪೋನ್ ಮಾಡಿದ್ದು, ಎಲ್ಲರೂ ಕುಡಿ ಬರುಷ್ಟರಲ್ಲಿ, ನಿಂಗಪ್ಪ ತಂದೆ ಸಿದ್ದಪ್ಪ ಪೂಜಾರಿ ಈತನು ನಮ್ಮ ಹೊಲದ ಹತ್ತಿರ ನಿಲ್ಲಿಸಿದ ಮೋಟಾರ್ ಸೈಕಲ್ಲನ್ನು ತಮ್ಮ ಹೊಲದ ಹತ್ತಿರ ತೆಗೆದುಕೊಂಡು ಹೋಗಿ, ನಿಂಗಪ್ಪನು ಸದರಿ ಮೋಟಾರ್ ಸೈಕಲ್ಲಗೆ ಬೆಂಕಿ ಹಚ್ಚಿದನು. ಮೋಟಾರ್ ಸೈಕಲ್ಲಗೆ ಬೆಂಕಿ ಹತ್ತಿದ್ದು ನೋಡಿ ನಾನು ಚೀರಾಡಿದಾಗ, ಸದರಿ ಮೇಲ್ಕಂಡ ಎಲ್ಲರೂ ಕೂಡಿ ಬಂದು ನನಗೆ ಹೊಡೆಯಲು ಬೆನ್ನು ಹತ್ತಿದ್ದು, ನಾನು ಪರಮಣ್ಣ ತಂದೆ ಈರಪ್ಪ ಬೂದಿಹಾಳ ಇವರಿಗೆ ಪೋನ್ ಮಾಡಿದ್ದು, ಪರಮಣ್ಣ ತಂದೆ ಈರಪ್ಪ ಬೂದಿಹಾಳ, ಭೀಮಣ್ಣ ತಂದೆ ಈರಪ್ಪ ಪತ್ತೇಪೂರ, ಇವರು ಮೋಟಾರ್ ಸೈಕಲ್ ಮೇಲೆ ಬರುವದು ನೋಡಿ, ನಮಗೆ ಹೊಡೆಯಲು ಬಂದವರೆಲ್ಲರೂ, ಹೋಗ್ಲೆ ಮಗನೆ ಜ್ಯೋತ್ಯಾ ನೀನು ನಮ್ಮ ಕೈಯಾಗ ಉಳಿದಿದಿ, ಇನ್ನೊಂದು ಸಲ ನೀನು & ನಿಮ್ಮ ತಮ್ಮ ಬನ್ಯಾ ನಮ್ಮ ಕೈಯಾಗ ಸಿಕ್ಕರೆ ನಿಮಗೆ ಜೀವಂತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕುತ್ತಾ ಹೋಗಿದ್ದು ಇರುತ್ತದೆ. ಸದರಿಯವರಿಗೆ ಅಂಜಿ ಠಾಣೆಗೆ ಬಂದು ದೂರು ಕೊಡಲು ತಡವಾಗಿದ್ದು ಇರುತ್ತದೆ. ನನ್ನ ತಮ್ಮನಾದ ಬನ್ನೆಪ್ಪ ಈತನು ಸಿದ್ದಪ್ಪ ಪೂಜಾರಿ ಈತನ ಹೆಂಡತಿಯಾದ ಮಲ್ಲಮ್ಮಳೊಂದಿಗೆ ಅನೈತಿಕ ಸಂಬಂದ ಹೊಂದಿದ್ದಾನೆ ಅಂತಾ ಅದೆ ವೈಶಮ್ಯದಿಂದ ದಿನಾಂಕ:17/05/2022 ರಂದು ಮದ್ಯಾಹ್ನ 1.00 ಗಂಟೆಯ ಸುಮಾರಿಗೆ ನನಗೆ ಜೀವದ ಬೆದರಿಕೆ ಹಾಕಿ ಹೊಡೆಯಲು ಬೆನ್ನು ಹತ್ತಿ, ನನ್ನ ತಮ್ಮನಾದ ಬನ್ನೆಪ್ಪ ಈತನು ನಮ್ಮ ಹೊಲದ ಹತ್ತಿರ ಇಟ್ಟ ಮೋಟಾರ್ ಸೈಕಲ್ಲನ್ನು ಸಿದ್ದಪ್ಪ ಪೂಜಾರಿ ಇವರ ಹೊಲದಲ್ಲಿ ತಂದು ತೊಗರಿ ಕಟ್ಟಿಗೆ ಹಾಕಿ ಸುಟ್ಟು ಅ:ಕಿ:50,000/- ರೂ.ಗಳ ಕಿಮ್ಮತ್ತಿನಷ್ಟು ಹಾನಿ ಮಾಡಿದ್ದು ಇರುತ್ತದೆ. ಕಾರಣ ಸದರಿ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕಾಗಿತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 74/2022 ಕಲಂ: 379 ಐಪಿಸಿ: ಇಂದು ದಿನಾಂಕ:26/05/2022 ರಂದು 6-30 ಪಿಎಮ್ಕ್ಕೆ ಶ್ರೀ ವಿರೇಶ ತಂದೆ ಸಿದ್ದಣ್ಣ ವಿಶ್ವಕರ್ಮ, ವ:32, ಜಾ:ವಿಶ್ವಕರ್ಮ, ಉ:ಕಾಪರ್ೆಂಟರ್ ಸಾ:ನಾಯ್ಕಲ್ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿ ಸಲ್ಲಿಸಿದ್ದರ ದೂರು ಅಜರ್ಿಯೇನೆಂದರೆ ನಾನು ಕಾಪರ್ೆಂಟರ್ ಕೆಲಸ ಮಾಡಿಕೊಂಡಿದ್ದು, ಯಾದಗಿರಿಯ ಕನಕ ಚೌಕದ ಹತ್ತಿರ ಅಂಗಡಿ ಹಾಕಿರುತ್ತೇನೆ. ಸದರಿ ನನ್ನ ಅಂಗಡಿಗೆ ಕೆಲಸ ಕಾರ್ಯಗಳಿಗೆ ಹೋಗಿ ಬರಲು ಅಂತಾ ಒಂದು ಹೊಂಡಾ ಶೈನ್ ಮೋಟರ್ ಸೈಕಲ್ ನಂ. ಕೆಎ 33 ಕ್ಯೂ 1544 ನೇದನ್ನು 2013 ನೇ ಸಾಲಿನಲ್ಲಿ ಖರೀದಿ ಮಾಡಿರುತ್ತೇನೆ. ದಿನಾಂಕ:05/05/2022 ರಂದು ನಾನು ಎಂದಿನಂತೆ ಬೆಳಗ್ಗೆ ನನ್ನ ಮೋಟರ್ ಸೈಕಲ್ ಮೇಲೆ ಯಾದಗಿರಿಗೆ ಕಾಪರ್ೆಂಟರ್ ಕೆಲಸ ಕ್ಕೆ ಹೋಗಿ ಸಾಯಂಕಾಲದ ವರೆಗೆ ಕೆಲಸ ಮಾಡಿ ಸಾಯಂಕಾಲ 7 ಗಂಟೆ ಸುಮಾರಿಗೆ ಮರಳಿ ಮನೆಗೆ ಬಂದು ನನ್ನ ಮೋಟರ್ ಸೈಕಲನ್ನು ನಮ್ಮ ಮನೆ ಮುಂದೆ ನಿಲ್ಲಿಸಿ, ಹ್ಯಾಂಡಲ್ ಲಾಕ್ ಮಾಡಿ ಮನೆಗೆ ಹೋಗಿ ಊಟ ಮಾಡಿ ಮಲಗಿಕೊಂಡೆನು. ಮರು ದಿವಸ ದಿನಾಂಕ:06/05/2022 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನನ್ನ ಹೆಂಡತಿ ಸೂಗಮ್ಮ ಇವರು ಎದ್ದು ಮನೆ ಮುಂದೆ ಕಸ ಹೊಡೆಯುವಾಗ ರಾತ್ರಿ ನಿಲ್ಲಿಸಿದ ಜಾಗದಲ್ಲಿ ನನ್ನ ಮೋಟರ್ ಸೈಕಲ್ ಇಲ್ಲ ಎಂದು ನನಗೆ ಕೂಗಿ ಹೇಳಿದಾಗ ನಾನು ಮನೆಯಿಂದ ಹೊರಗಡೆ ಬಂದು ನೋಡಿದಾಗ ನಾನು ರಾತ್ರಿ ನಿಲ್ಲಿಸಿದ ಜಾಗದಲ್ಲಿ ನನ್ನ ಮೋಟರ್ ಸೈಕಲ್ ಇರಲಿಲ್ಲ. ಆಗ ಗಾಭರಿಯಾದ ನಾನು ಮತ್ತು ನನ್ನ ತಮ್ಮ ನವೀನ ತಂದೆ ಸಿದ್ದಣ್ಣ ಹಾಗೂ ನನ್ನ ತಮ್ಮನ ಸ್ನೇಹಿತ ಬಸವರಾಜ ತಂದೆ ದೇವಿಂದ್ರಪ್ಪ ಎಲ್ಲರೂ ಕೂಡಿ ಅಲ್ಲಿಯೇ ಸುತ್ತಮುತ್ತ ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ ನಂತರ ನಾಯ್ಕಲ್, ಗುರುಸಣಗಿ, ಕುರಕುಂದಾ, ಚಟ್ನಳ್ಳಿ, ಖಾನಪೂರ ಮುಂತಾದ ಕಡೆ ಹುಡಿಕಾಡಿದರೂ ಕೂಡಾ ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಕಾರಣ ಯಾರೋ ಕಳ್ಳರು ದಿನಾಂಕ: 05/05/2022 ರಂದು 7 ಪಿಎಮ್ ದಿಂದ ದಿನಾಂಕ: 06/05/2022 ರಂದು ಬೆಳಗ್ಗೆ 6 ಎಎಮ್ ಮಧ್ಯದ ಅವಧಿಯಲ್ಲಿ ನನ್ನ ಹೊಂಡಾ ಶೈನ್ ಮೋಟರ್ ಸೈಕಲ್ ನಂ. ಕೆಎ 33 ಕ್ಯೂ 1544 ಅ:ಕಿ: 25,000/- ನೇದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳುವಾದ ನನ್ನ ಹೊಂಡಾ ಶೈನ್ ಮೋಟರ್ ಸೈಕಲ್ ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಕಳುವಾದ ನನ್ನ ಹೊಂಡಾ ಶೈನ್ ಮೋಟರ್ ಸೈಕಲ್ ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 74/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು

ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 61/2022 ಕಲಂ 323, 324, 307, 504, 506 ಸಂಗಡ 34 ಐಪಿಸಿ: ದಿನಾಂಕ 24/05/2022 ರಂದು ಸಾಯಂಕಾಲ 05-06 ನಿಮಿಷಕ್ಕೆ ನಾನು ನಮ್ಮ ಮನೆಯಲ್ಲಿ ಇರುವಾಗ ನನ್ನ ಮೊಬೈಲ್ ನಂ 9483427188 ನೇದ್ದಕ್ಕೆ ಮೊಬೈಲ್ ನಂ-9449406431 ನೇದ್ದರಿಂದ ಪೋನ್ ಮಾಡಿದಾಗ ಆಗ ನಾನು ಯಾರೀ ಸರ್ ಅಂದೆನು. ಆಗ ಆತನು ಹೇ, ಬೋಸಡಿ ಮಗನೆ ಮೆಡಿಕಲ್ಗೆ ಬಾ ಅಂತಾ ಬೈದನು. ಆಗ ನಾನು ಮನೆಯಿಂದ ಮೆಡಿಕಲ್ಗೆ ಆಟೋದಲ್ಲಿ ಹೋಗುತ್ತಿರುವಾಗ ಇನ್ನೊಂದು ಮೊಬೈಲ್ ನಂ 9620776948 ನನಗೆ ಪೋನ್ ಮಾಡಿ ನಾನು ಮುನೀರ್ ಇದ್ದೀನಿ, ರಿಯಾಜ್ ನವರ ಅಣ್ಣ ಇದ್ದೀನಿ, ಮೆಡಿಕಲ್ಗೆ ಬಂದು ಮಾತಾಡು ಅಂದನು. ಆಗ ನಾನು ಮೆಡಿಕಲ್ಗೆ ಬರುತ್ತಿದ್ದೇನೆ ಅಂತಾ ಹೇಳಿದೆನು. ಆಗ ನಾನು ಯಾದಗಿರಿ ನಗರದ ಚಿತ್ತಾಪೂರ ರೋಡದ ಐ.ಡಿ.ಬಿ ಐ ಬ್ಯಾಂಕ್ ಪಕ್ಕದಲ್ಲಿ ಇರುವ ಅಪೋಲೋ ಪಾರ್ಮಸಿ ಮೆಡಿಕಲ್ಗೆ ಹೋದಾಗ ಅಲ್ಲಿ 1] ರಿಯಾಜ್, 2] ಮುನೀರ್ ಹಾಗೂ ಅವರ ಸಂಗಡ ಇನ್ನೊಬ್ಬ ಇದ್ದು ಆತನ ಹೆಸರು ಗೊತ್ತಿರುವುದಿಲ್ಲ. ಆಗ ಅವರಲ್ಲಿ ರಿಯಾಜ್ ಮತ್ತು ಮುನೀರ್ ಇವರಿಬ್ಬರು ನನಗೆ ಕೈಹಿಡಿದು ಬಿಳಿಯ ಬಣ್ಣದ ಇಂಡಿಕಾ ಕಾರ್ನಲ್ಲಿ ನನಗೆ ಬಲವಂತವಾಗಿ ಎಳೆದು ಬಾಯಿಗೆ ದಸ್ತಿಯಿಂದ ಒತ್ತಿ ಹಿಡಿದು ಕಾರಿನ ಮಧ್ಯ ಸೀಟ್ದಲ್ಲಿ ಕೂಡಿಸಿಕೊಂಡು ಹಳೆಯ ಬಸ್ ನಿಲ್ದಾಣದ ಹತ್ತಿರ ಇರುವ ಅನ್ಸಾರಿ ಹೊಟೇಲ್ ಹತ್ತಿರ ಹೋದರು. ಅಲ್ಲಿ ಕಾರಿನಿಲ್ಲಿಸಿ ಮುಂದೆ ಕುಳಿತ ರಿಯಾಜ್ ಈತನು ಕಾರನಿಂದ ಕೆಳಗೆ ಇಳಿದು ಅಲ್ಲೆ ಇದ್ದ ಪ್ರೀತಂ ಬಾರದಲ್ಲಿ ಹೋಗಿ ಬೀರ ಬಾಟಲ್ಗಳನ್ನು ತೆಗೆದುಕೊಂಡು ಬಂದು ಕಾರಿನಲ್ಲಿ ಕುಳಿತನು. ನಂತರ ಅಲ್ಲಿಂದ ನನಗೆ ಯಾದಗಿರಿ ರೈಲ್ವೆ ಸ್ಟೇಷನ್ ಹತ್ತಿರ ಕರೆದುಕೊಂಡು ಹೋಗಿ, ನನಗೆ ಕಾರಿನಿಂದ ಇಳಿಸಿ ರಿಯಾಜ್ ಈತನು ನನಗೆ ಕೈಯಿಂದ ಎಡಗಡೆ ಕಪಾಳಕ್ಕೆ ಹೊಡೆದು, ಕಾಲಿನಿಂದ ಒದ್ದನು. ಆಗ ನಾನು ಅಣ್ಣ ನೀನು ನನಗೆ ಹೊಡೆಯ ಬೇಡ ಏನಿದ್ದರು ಮನೆಯವರ ಜೊತೆ ಮಾತಾಡು ಅಂತಾ ಅಂದೆನು. ಆಗ ಅವನು ನನಗೆ ಅದೆಲ್ಲ ಗೊತ್ತಿಲ್ಲ, ನನಗೆ ಕಾಲೇಜ್ ಪೀ-25,500/-ರೂಪಾಯಿ ರೊಕ್ಕ ಕೊಡು ನಾನು ನಿನಗೆ ಮಾಕ್ಸರ್್ ಕಾಡರ್್ ಕೊಟ್ಟಿನಿ, ನನಗೆ ಪ್ರಿನ್ಸಿಪಾಲ್ ಬೈಯುತ್ತಿದ್ದಾನೆ. ನೀನು ರೊಕ್ಕ ಕೊಡದಿದ್ದರೆ, ಪ್ರಿನ್ಸ್ಪಾಲ್ ಅವನಿಗೆ ಹೊಡೆದು ರೊಕ್ಕ ಇಸಕೊಂಡು ಬಾ ಅಂತಾ ಹೇಳಿ ಕಳಿಸಿದ್ದಾನೆ ಮಗನೆ ಅಂತಾ ಅಂದಾಗ ಮುನೀರ್ ಮತ್ತು ಇನ್ನೊಬ್ಬ ಅವರಿಬ್ಬರು ಸೇರಿ ನನಗೆ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಬೀರ ಬಾಟಲ್ದಿಂದ ತಲೆಗೆ ಬಲ ಭಾಗಕ್ಕೆ ಹೊಡೆದು ಭಾರಿ ರಕ್ತಗಾಯ ಮಾಡಿದರು. ಆಗ ನಾನು ನೆಲಕ್ಕೆ ಬಿದ್ದಾಗ ಕಾಲಿನಿಂದ ಒದ್ದು, ನನಗೆ ಲೇ ಸುಳೇ ಮಗನೆ, ನೀನು ರೊಕ್ಕ ಕೊಡದಿದ್ದರೆ ನಿನಗೆ ಖಲಾಸ್ ಮಾಡುತ್ತೇವೆ ಮಗನೆ ಅಂತಾ ಜೀವದ ಬೆದರಿಕೆ ಹಾಕಿದರು. ಈ ಜಗಳವನ್ನು ನೋಡಿದ 1] ಶಶಾಂಕ ತಂದೆ ತಿಮ್ಮಾರೆಡ್ಡಿ ನಾಲಡಗಿ ಮತ್ತು 2] ಮಾಳಪ್ಪ ತಂದೆ ಮಲ್ಲಯ್ಯ ಮ್ಯಾಳಿಗಿ ಇವರು ಜಗಳವನ್ನು ಬಿಡಿಸಿದರು. ಆಗ ಅವರು ಅಲ್ಲಿಂದ ಕಾರ ತೆಗೆದುಕೊಂಡು ಹೋದರು. ನಂತರ ನಾನು ನಮ್ಮ ಅಣ್ಣನಾದ ಸಂಗಣ್ಣಗೌಡ ತಂದೆ ವಿಶ್ವನಾಥ ಪಾಟೀಲ್ ಇವರಿಗೆ ಪೋನ್ ಮಾಡಿದಾಗ ಅವರು ಕೂಡಲೆ ಸ್ಥಳಕ್ಕೆ ಬಂದು ನನಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಜಿಲ್ಲಾ ಸಕರ್ಾರಿ ಆಸ್ಪತ್ರೆ ಯಾದಗಿರಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದರು. ಈ ಜಗಳು ದಿನಾಂಕ 24/05/2022 ರಂದು 05-30 ಗಂಟೆಯ ಸುಮಾರಿಗೆ ಜರುಗಿರುತ್ತದೆ. ಕಾರಣ ನನಗೆ ವಿನಾ ಕಾರಣ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಬೀರ ಬಾಟಲ್ನಿಂದ ಹೊಡೆದು ರಕ್ತಗಾಯ ಮಾಡಿ ನನಗೆ ಜೀವದ ಬೆದರಿಕೆ ಹಾಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಈ ಮೇಲ್ಕಂಡ ಮೂರು ಜನರ ಮೇಲೆ ಮತ್ತು ಇವರಿಗೆ ಹೊಡೆಯಲು ಕುಮ್ಮಕ್ಕು ನೀಡಿದ ಡಾ|| ಸುರಗಿಮಠ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಿನ್ಸ್ಪಾಲ್ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಮನೆಯಲ್ಲಿ ವಿಚಾರಣೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 61/2022 ಕಲಂ 323, 324, 307, 504, 506 ಸಂಗಡ 34 ಐಪಿಸಿ

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 87/2022 ಕಲಂ: 323, 307, 326, 498ಎ, 504 ಐಪಿಸಿ: ಇಂದು ದಿ: 26/05/2022 ರಂದು 6.00 ಪಿಎಂ ಕ್ಕೆ ಸಕರ್ಾರಿ ಆಸ್ಪತ್ರೆ ಕೆಂಭಾವಿಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾದ ಮೇರೆಗೆ ಸಕರ್ಾರಿ ಆಸ್ಪತ್ರೆ ಕೆಂಭಾವಿಗೆ ಹೋಗಿ ಉಪಚಾರ ಪಡೆಯುತ್ತಿರುವ ಗಾಯಾಳುದಾರರಾದ ಮಾಳಮ್ಮ ಗಂಡ ಸಂತೋಷ ಕುರಿ ವ|| 30ವರ್ಷ ಜಾ|| ಕುರುಬರ ಉ|| ಕೂಲಿ ಸಾ|| ಬಾದ್ಯಾಪೂರ ತಾ|| ಸುರಪೂರ ಹಾ|| ವ|| ಯಡಿಯಾಪೂರ ಇವರಿಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 7.00 ಪಿಎಂ ಕ್ಕೆ ಬಂದಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ, ನನ್ನ ತವರುಮನೆಯು ಯಡಿಯಾಪೂರ ಗ್ರಾಮವಾಗಿದ್ದು, ನನಗೆ ನಮ್ಮ ತಂದೆ ತಾಯಿಯರು ಸುಮಾರು 10ವರ್ಷಗಳ ಹಿಂದೆ ಬಾದ್ಯಾಪೂರ ಗ್ರಾಮದ ಸಂತೋಷ ತಂದೆ ಭೀಮಣ್ಣ ಕುರಿ ಈತನಿಗೆ ಕೊಟ್ಟು ಮದುವೆ ಮಾಡಿದ್ದು ಮದುವೆಯಾದ ಬಳಿಕ ನಾನು ಮತ್ತು ನನ್ನ ಗಂಡ ಚನ್ನಾಗಿ ಸಂಸಾರ ಸಾಗಿಸುತ್ತಾ ಬಂದಿದ್ದು ನಮಗೆ 7ವರ್ಷದ ಒಬ್ಬ ಗಂಡು ಮಗ ಇರುತ್ತಾನೆ. ನಮಗೆ ಸಂಸಾರದ ಅಡಚಣೆ ಇದ್ದುದರಿಂದ ನನ್ನ ಗಂಡನು ದುಡಿಯಲು ಬೆಂಗಳೂರಿಗೆ ಹೋಗೋಣ ಅಂತಾ ಹೇಳಿದ್ದರಿಂದ ನಾನು ಮತ್ತು ನನ್ನ ಗಂಡ ಇಬ್ಬರೂ ಕೂಡಿ ಬೆಂಗಳೂರಿಗೆ ದುಡಿಯಲು ಹೋಗಿ ನಾವಿಬ್ಬರೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆವು. ಈಗ ಎರಡು ವರ್ಷಗಳ ಹಿಂದಿನಿಂದ ನನ್ನ ಗಂಡನಾದ ಸಂತೋಷನು ತನ್ನ ಮನೆಯವರ ಮಾತು ಕೇಳಿ ನನ್ನೊಂದಿಗೆ ಜಗಳ ಮಾಡುತ್ತಾ ನೀನು ಸರಿ ಇಲ್ಲ ನೀನು ಬೇರೆಯವರ ಜೊತೆಗೆ ಏಕೆ ಮಾತನಾಡುತ್ತೀ ಅಂತಾ ಮಾನಸಿಕ ಕಿರುಕುಳ ನೀಡುತ್ತಾ ನನ್ನ ಬಗ್ಗೆ ಇಲ್ಲ ಸಲ್ಲದ ಸಂಶಯ ಮಾಡಿ ನನ್ನೊಂದಿಗೆ ಜಗಳ ಮಾಡಿ ಹೊಡೆದಿದ್ದರೂ ನಾನು ಸಹಿಸಿಕೊಂಡು ಬಂದಿದ್ದೆನು. ಆದರೆ ನಾನು ಬೆಂಗಳೂರಿನಲ್ಲಿ ನನ್ನ ಗಂಡನೊಂದಿಗೆ ಇದ್ದಾಗ 4 ತಿಂಗಳ ಹಿಂದೆ ನನ್ನ ಗಂಡನಾದ ಸಂತೋಷನು ನನಗೆ ಹೊಡೆದು ನೀನು ಸರಿ ಇಲ್ಲ ನೀನು ನನ್ನ ಹತ್ತಿರ ಇರಬೇಡ ನನ್ನ ಹತ್ತಿರ ನಿನಗೆ ಜೀವ ಸಹಿತ ಹೊಡೆಯುತ್ತೇನೆ ನೀನು ಎಲ್ಲಿಗಾದರೂ ಹೋಗಿ ಇರು ಅಂತಾ ಹೇಳಿ ನನಗೆ ಮನೆಯಿಂದ ಹೊರಗೆ ಹಾಕಿದ್ದರಿಂದ ನಾನು ಬೆಂಗಳೂರಿನಿಂದ ನನ್ನ ಮಗನಿಗೆ ಕರೆದುಕೊಂಡು ನನ್ನ ತವರುಮನೆಯಾದ ಯಡಿಯಾಪೂರ ಗ್ರಾಮಕ್ಕೆ ಬಂದು ನಮ್ಮ ತಂದೆ ತಾಯಿಯರ ಹತ್ತಿರ ಇರುತ್ತಿದ್ದೇನೆ. ನಮ್ಮ ತಂದೆ ತಾಯಿಯರು ನನ್ನ ಗಂಡನಾದ ಸಂತೋಷನಿಗೆ ಅನೇಕ ಸಲ ಫೋನ್ ಮಾಡಿ ನೀನು ನಮ್ಮ ಮಗಳೊಂದಿಗೆ ಜಗಳ ಮಾಡಬೇಡ ಅವಳಿಗೆ ಕರೆದುಕೊಂಡು ಹೋಗು ಅಂತಾ ತಿಳಿಸಿ ಹೇಳಿದರೂ ಕೇಳದೇ ನಿಮ್ಮ ಮಗಳಿಗೆ ಕರೆದುಕೊಂಡು ಹೋಗಲ್ಲ. ಅವಳಿಗೆ ಕೊಲೆ ಮಾಡಿ ನಾನು ನೆಮ್ಮದಿಯಿಂದ ಜೀವನ ಮಾಡುತ್ತೇನೆ ಅಂತಾ ನಮ್ಮ ತಂದೆ ತಾಯಿಯರಿಗೆ ಹೇಳಿದ್ದನು. ಹೀಗಿದ್ದು ಇಂದು ದಿನಾಂಕ 26/05/2022 ರಂದು ನಮ್ಮ ಸಂಬಂಧಿಕರ ಮದುವೆ ಇದ್ದುದರಿಂದ ನಾನು, ನಮ್ಮ ತಾಯಿ, ನಮ್ಮ ಸೋದರತ್ತೆ, ನಮ್ಮ ಅಣ್ಣನಾದ ಸಂತೋಷ ಎಲ್ಲರೂ ಕೂಡಿ ನಡಕೂರ ಗ್ರಾಮಕ್ಕೆ ಹೋಗಿ ನಮ್ಮ ಸಂಬಂಧಿಕರ ಮದುವೆ ಮುಗಿಸಿ ಸಾಯಂಕಾಲ 4.00 ಗಂಟೆಯ ಸುಮಾರಿಗೆ ಮರಳಿ ಯಡಿಯಾಪೂರಕ್ಕೆ ಹೋಗಿದ್ದು ನಮ್ಮ ತವರುಮನೆಯ ಮುಂದೆ ರಸ್ತೆಯ ಮೇಲೆ ನಡೆದುಕೊಂಡು ನಾನು ಮತ್ತು ನಮ್ಮ ತಾಯಿಯಾದ ನಿಂಗಮ್ಮ ಗಂಡ ಸಹದೇವಪ್ಪ ಹೊಸಮನಿ ವ|| 60 ಇವಳು ಮತ್ತು ನಮ್ಮ ಸೋದರತ್ತೆಯಾದ ಶಾಂತಮ್ಮ ಗಂಡ ಶಂಕ್ರೆಪ್ಪ ಮೇಟಿ ಮೂರೂ ಜನರು ಮನೆಗೆ ಹೋಗುತ್ತಿದ್ದೆವು. ನಮ್ಮ ತಾಯಿಯು ಮುಂದೆ ಇದ್ದಳು ಅವಳ ಹಿಂದೆ ನಾನು ಇದ್ದೆನು, ನನ್ನ ಹಿಂದೆ ನಮ್ಮ ಸೋದರತ್ತೆ ಇದ್ದರು. ನಮ್ಮ ಮನೆಯ ಮುಂದೆ ಕೈಯಲ್ಲಿ ಚಾಕು ಹಿಡಿದುಕೊಂಡು ನಿಂತಿದ್ದ ನನ್ನ ಗಂಡನಾದ ಸಂತೋಷ ತಂದೆ ಭೀಮಣ್ಣ ಕುರಿ ಈತನು ಎಲೇ ಸೂಳಿ ನೀನು ನಿನ್ನ ಮಗಳಿಗೆ ಬುದ್ದಿ ಕಲಿಸಲು ಬರಲ್ಲೇನು, ನಿನ್ನ ಮಗಳಿಗೆ ಮತ್ತು ನಿನಗೆ ಇಬ್ಬರಿಗೂ ಖಲಾಸ ಮಾಡಬೇಕೆಂದು ತಯಾರಾಗಿ ಬಂದಿದ್ದೇನೆ, ಇವತ್ತು ನೀವು ಹ್ಯಾಂಗ ತಪ್ಪಿಸಿಕೊಳ್ಳುತ್ತೀರಿ ನೋಡುತ್ತೇನೆ ಅಂದವನೇ ಕೊಲೆ ಮಾಡುವ ಉದ್ದೇಶದಿಂದ ನಮ್ಮ ತಾಯಿಯಾದ ನಿಂಗಮ್ಮಳ ಕುತ್ತಿಗೆಗೆ ಹರಿತಾದ ಚಾಕು ಹೊಡೆದಿದ್ದು ನಮ್ಮ ತಾಯಿಯು ತಪ್ಪಿಸಿಕೊಳ್ಳಲು ಹೋದಾಗ ಚಾಕು ನಮ್ಮ ತಾಯಿಯ ಎಡಗೈ ಭುಜದ ಹತ್ತಿರ ಎದೆಗೆ ತಗುಲಿ ಭಾರೀ ರಕ್ತಗಾಯವಾಗಿದ್ದು ನಮ್ಮ ತಾಯಿಗೆ ಹೊಡೆಯುತ್ತಿದ್ದಾಗ ನಾನು ಬಿಡಿಸಿಕೊಳ್ಳಲು ಹೋಗಿದ್ದು ಆಗ ನಮ್ಮ ತಾಯಿಗೆ ಹೊಡೆಯುವುದು ಬಿಟ್ಟು ನನ್ನ ಗಂಡನು ಚಾಕುವಿನಿಂದ ನನ್ನ ಬೆನ್ನಿಗೆ ಬಲಗಡೆಯ ಭುಜದ ಹತ್ತಿರ ಹೊಡೆದು ಭಾರೀ ರಕ್ತಗಾಯ ಮಾಡಿ ನೆಲಕ್ಕೆ ಕೆಡವಿ ಹೊಡೆಯುತ್ತಿದ್ದಾಗ ನಮ್ಮ ಸೋದರತ್ತೆಯಾದ ಶಾಂತಮ್ಮ ಮತ್ತು ನಮ್ಮ ಅಣ್ಣನಾದ ಸಂತೋಷ ತಂದೆ ಸಹದೇವಪ್ಪ ಹೊಸಮನಿ ಇವರು ಬಂದು ಜಗಳ ಬಿಡಿಸಿಕೊಂಡರು. ಆಗ ನನ್ನ ಗಂಡನು ನನಗೆ ಮತ್ತು ನಮ್ಮ ತಾಯಿಗೆ ಹೊಡೆಯುವುದು ಬಿಟ್ಟು ಇವತ್ತು ನಿಮ್ಮ ಟೈಮ್ ಚನ್ನಾಗಿದೆ ಅನ್ನುತ್ತಾ ಓಡಿ ಹೋಗುತ್ತಿದ್ದನು. ಆಗ ಯಡಿಯಾಪೂರ ಗ್ರಾಮದ ಕೆಲವರು ನನ್ನ ಗಂಡನಿಗೆ ಹಿಡಿದು ಕೂಡಿಸಿದರು. ನಮ್ಮ ಅಣ್ಣನಾದ ಸಂತೋಷ ಮತ್ತು ನಮ್ಮ ಅತ್ತೆಯಾದ ಶಾಂತಮ್ಮ ಇವರು ನನಗೆ ಮತ್ತು ನಮ್ಮ ತಾಯಿಗೆ ಉಪಚಾರ ಕುರಿತು ಸಕರ್ಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ಕಾರಣ ನನಗೆ ದೈಹಿಕ, ಮಾನಸಿಕ ಕಿರುಕುಳ ನೀಡಿ ಕೊಲೆ ಮಾಡುವ ಉದ್ದೇಶದಿಂದ ನನಗೆ ಮತ್ತು ನಮ್ಮ ತಾಯಿಯಾದ ನಿಂಗಮ್ಮಳಿಗೆ ಚಾಕುವಿನಿಂದ ಹೊಡೆದು ಭಾರೀ ರಕ್ತಗಾಯ ಮಾಡಿದ ನನ್ನ ಗಂಡನಾದ ಸಂತೋಷನ ಮೇಲೆ ಕ್ರಮ ಜರುಗಿಸಬೇಕು ಅಂತ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 87/2022 ಕಲಂ: 323, 307, 326, 498ಎ, 504 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 27-05-2022 11:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080