ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27-06-2021

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 147/2021 ಕಲಂ 323, 504,506, ಸಂಗಡ 34 ಐ.ಪಿ.ಸಿ. : ಇಂದು ದಿನಾಂಕ: 26-06-2021 ರಂದು 2:30 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ಚಂದ್ರಾಮ ತಂದೆ ಹಣಮಂತ ನಂದಳ್ಳಿ ವಯ: 60 ವರ್ಷ ಜಾ: ಬೇಡರ ಉ:ಒಕ್ಕಲುತನ ಸಾ: ಕೊಂಗಂಡಿ ತಾ: ಶಹಾಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಏನಂದರೆ ನನ್ನ ಮಗಳು ಲಕ್ಷ್ಮೀ ಎಂಬುವವಳನ್ನು ಸುರಪುರ ತಾಲೂಕಿನ ಸಿದ್ದಾಪುರ ಗ್ರಾಮದ ಪ್ರಭುಲಿಂಗ ಎಂಬುವವನಿಗೆ ಕೊಟ್ಟು ಮದುವೆ ಮಾಡಿದ್ದು ನಮ್ಮ ಅಳಿಯ ಪ್ರಭುಲಿಂಗ ಈತನು ಆಗಾಗ ನಮ್ಮೂರಿಗೆ ಬರುತ್ತಾನೆ. ಹೀಗಿದ್ದು ನಮ್ಮ ಅಳಿಯನು ನಮ್ಮೂರಿಗೆ ಬಂದಿದ್ದನು ದಿನಾಂಕ:22-06-2021 ರಂದು ರಾತ್ರಿ 11:45 ಗಂಟೆಯ ವೇಳೆಯಲ್ಲಿ ಆತನಿಗೆ ಪೋನ ಕರೆ ಬಂದು ಮೊಬೈಲಲ್ಲಿ ಮಾತನಾಡುತ್ತಾ ಹೊರಗಡೆ ಹೋಗಿ ಮತ್ತೆ ಮರಳಿ ಬಂದು ಮಲಗಿಕೊಂಡನು. ಹೀಗಿದ್ದು ದಿನಾಂಕ 23-06-2021 ರಂದು ಮುಂಜಾನೆ 8:00 ಗಂಟೆ ಸುಮಾರಿಗೆ ನಮ್ಮ ಅಳಿಯನಾದ ಪ್ರಭುಲಿಂಗ ಈತನು ನಮ್ಮ ತಮ್ಮನ ಮಗನಾದ ಮೌನೇಶ ತಂದೆ ಕಾಶೆಪ್ಪ ನಂದಳ್ಳಿ ಈತನ ಕಿರಾಣಿ ಅಂಗಡಿಯ ಮುಂದೆ ಹೋಗುತ್ತಿದ್ದಾಗ ನಮ್ಮೂರ 1) ಪರಶುರಾಮ ತಂದೆ ಮಲ್ಲಪ್ಪ ಗುಜಲೋರ 2) ಸಿದ್ದಪ್ಪ ತಂದೆ ಶಿವಲಿಂಗಪ್ಪ ಕರಿಗುಡ್ಡ 3) ರಂಗಪ್ಪ ತಂದೆ ಶಿವಲಿಂಗಪ್ಪ ಕರಿಗುಡ್ಡ 4) ದೇವಪ್ಪ ತಂದೆ ಶಿವಪ್ಪ ಕರಿಗುಡ್ಡ ನಾಲ್ಕು ಜನರು ಕೂಡಿ ನಮ್ಮ ಅಳಿಯ ಪ್ರಭುಲಿಂಗ ಈತನಿಗೆ ಅಡ್ಡಗಟ್ಟಿ ನಿಂತು ಅವರಲ್ಲಿಯ ಪರಶುರಾಮನು ಏನಲೇ ಸೂಳಿ ಮಗನೆ ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಮುಂದೆ ಪೋನಿನಲ್ಲಿ ಮಾತನಾಡುತ್ತಾ ಯಾಕೆ ತಿರುಗಾಡುತ್ತಿ ಅಂತಾ ಬೈದನು ಆಗ ನಮ್ಮ ಅಳಿಯನು ನನಗೆ ಮನೆಯವರಿಗೆ ಮಾತನಾಡುತ್ತಿದ್ದೇ ಏನಾಯಿತು ಅಂತಾ ಸಮಾಧಾನ ಮಾಡುತ್ತಿದ್ದರೂ ಸಹಿತ ಪರಶುರಾಮನು ನನ್ನ ಅಳಿಯನಿಗೆ ಕೈಯಿಂದ ಹೊಡೆದನು. ಸಿದ್ದಪ್ಪ ಕರಿಗುಡ್ಡ ಈತನು ಕಾಲಿನಿಂದ ಒದ್ದನು. ಉಳಿದ ಇಬ್ಬರು ಕೂಡ ಬೈದು ನೆಲಕ್ಕೆ ಹಾಕಿ ಹೊಡೆದಿರುತ್ತಾರೆ. ಅದರಿಂದ ಅಳಿಯನಿಗೆ ಒಳಪೆಟ್ಟಾಗಿದ್ದು ಇದೆ ಆಗ ಅಲ್ಲೇ ಕಿರಾಣಿ ಅಂಗಡಿಯ ಹತ್ತಿರ ಇದ್ದ ನಮ್ಮ ತಮ್ಮನ ಮಗನಾದ ಮೌನೇಶ ನಂದಳ್ಳಿ ಬಸವರಾಜ ತಂದೆ ಚಂದ್ರಾಮಪ್ಪ ನಂದಳ್ಳಿ ಮತ್ತು ನಾನು ಹೋಗಿ ಜಗಳ ಬಿಡಿಸಿಕೊಂಡಿರುತ್ತೇವೆ. ಆಗ ರಂಗಪ್ಪ ಕರಿಗುಡ್ಡ ಮತ್ತು ದೇವಪ್ಪ ಕರಿಗುಡ್ಡ ಇವರು ನಮ್ಮ ಅಳಿಯನಿಗೆ ಮಗನೆ ಇನ್ನೊಮ್ಮೆ ಪರಶುರಾಮನ ಮನೆಯ ದಾರಿಗೆ ಹೋದರೆ ನಿನ್ನ ಜೀವ ತೆಗೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ನಾನು ಮನೆಯಲ್ಲಿ ವಿಚಾರ ಮಾಡಿ ಇಂದು ದಿನಾಂಕ:26-06-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಕಾರಣ ದಿನಾಂಕ: 23-06-2021 ರಂದು ಮುಂಜಾನೆ 8:00 ಗಂಟೆಗೆ ನನ್ನ ಅಳಿಯನಿಗೆ ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 147/2021 ಕಲಂ. 341, 323, 504, 506 ಸಂಗಡ 34 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 148/2021 ಕಲಂ 78[3] ಕೆ.ಪಿ ಆಕ್ಟ : ಇಂದು ದಿನಾಂಕ 26/06/2021 ರಂದು 17-40 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚೆನ್ನಯ್ಯ ಎಸ್.ಹಿರೇಮಠ ಪಿ.ಐ. ಸಾಹೇಬರು ಶಹಾಪೂರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ವರದಿ ನೀಡಿದ್ದೆನೆಂದರೆ, ನಾನು ಇಂದು ದಿನಾಂಕ: 26/06/2021 ರಂದು ಸಾಯಂಕಾಲ 17-00 ಗಂಟೆಯ ಸುಮಾರಿಗೆ ನಾನು ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಶಹಾಪೂದ ಹಳಿಸಗರದಲ್ಲಿ ಇರುವ ಹನುಮಾನ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದಿರುತ್ತದೆ. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣೆಯ ಎನ್ ಸಿ ನಂ 36/20214 ನೇದ್ದು ದಾಖಲಿಸಿಕೊಂಡು. ಮಾನ್ಯ ಪ್ರಧಾನ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿ ನೀಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿ ವರದಿ ನೀಡಿದ ಪ್ರಕಾರ ಠಾಣಾ ಗುನ್ನೆ ನಂಬರ 148/2021 ಕಲಂ 78(3) ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ನಂತರ ದಾಳಿ ಮಾಡಿ ಒಬ್ಬ ಆರೋಪಿತನನ್ನು ದಸ್ತಗಿರಿ ಮಾಡಿಕೊಂಡು ನಗದು ಹಣ 2650=00 ರೂಪಾಯಿ ಹಾಗೂ ಒಂದು ಬಾಲ್ ಪೆನ್ ಅಂ.ಕಿ 00-00, ಎರಡು ಮಟಕಾ ಚೀಟಿಗಳು ಅಂ.ಕಿ 00-00 ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.


ಕೊಡೇಕಲ್ ಪೊಲೀಸ್ ಠಾಣೆ
ಗುನ್ನೆ ನಂ. 39/2021 ಕಲಂ: 78(3) ಕೆ.ಪಿ ಆಕ್ಟ್ : ಇಂದು ದಿನಾಂಕ:26/06/2021 ರಂದು 10:30 ಎ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ತಾವು ದಿನಾಂಕ:26.06.2021 ರಂದು ಮುಂಜಾನೆ 09:30 ಎ.ಎಮ್ಕ್ಕೆ ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಕೊಡೆಕಲ್ಲ ಬೀಟ್ ಸಿಬ್ಬಂದಿಯಾದ ಯಲ್ಲಪ್ಪ ಹೆಚ್ಸಿ-117 ರವರ ಮೂಲಕ ಕೊಡೆಕಲ್ಲ ಗ್ರಾಮದ ಶ್ರೀ ಗದ್ದೆಮ್ಮ ಕಟ್ಟೆಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮುಂಬಯಿ ಮಟಕಾ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಸದರಿ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಈ-ಮೇಲ್ ಮೂಲಕ ಕಳುಹಿಸಿದ್ದು ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ ಪ್ರತಿಯು ಈ-ಮೇಲ್ ಮುಖಾಂತರ 10:20 ಎ.ಎಂಕ್ಕೆ ಠಾಣೆಗೆ ವಸೂಲಾಗಿದ್ದು ಕಾರಣ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಕೊಡೆಕಲ್ಲ ಪೊಲೀಸ್ ಠಾಣಾ ಗುನ್ನೆ ನಂ:39/2021 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.ಸಂಗಪ್ಪ ತಂದೆ ತಿಮ್ಮಣ್ಣ ಜಂಗಳಿ ವ||46 ವರ್ಷ ಉ||ಪಾನ್ಶಾಪ್ ಅಂಗಡಿ ಜಾ||ಹಿಂದೂ ಗೊಲ್ಲ ಸಾ|| ಕೊಡೆಕಲ್ಲ ತಾ||ಹುಣಸಗಿ ಜಿ||ಯಾದಗಿರಿ.


ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 99/2021 ಕಲಂ. 143, 147, 448, 323, 354, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ. 26.06.2021 ರಂದು ಬೆಳಿಗ್ಗೆ 11.00 ಗಂಟೆಗೆ ಸರಕಾರಿ ಆಸ್ಪತ್ರೆ, ಸೈದಾಪೂರದಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಸದರಿ ಆಸ್ಪತ್ರಗೆ ಭೇಟಿ ನೀಡಿ ಫಿಯರ್ಾದಿ ಶ್ರೀಮತಿ ಶಂಕ್ರಮ್ಮ ಗಂಡ ದಂಡಪ್ಪ ಉಪ್ಪಾರ ವಯ|| 50 ವರ್ಷ,ಸಾ|| ವಂಕಸಂಬ್ರ ತಾ|| ಗುರುಮಠಕಲ ಜಿ|| ಯಾದಗಿರಿ ಇವರು ನೀಡಿದ ಫಿಯರ್ಾದಿ ಹೇಳಿಕೆ ಪಡೆದಿದ್ದರ ಸಾರಾಂಶವೆನೆಂದರೆ, ಜಮೀನುದಲ್ಲಿ ಒತ್ತುವರಿ ಮಾಡಬಾರದು ಅಂತ ತಿಂಗಳ ಹಿಂದಿನಿಂದ ಫಿಯರ್ಾದಿ ಮನೆಯವರು ತಾಕೀತು ಮಾಡಿದ್ದಕ್ಕೆ ಫಿಯರ್ಾದಿ ಮೇಲೆ ಹಗೆತನ ಸಾಧಿಸಲು ದಿನಾಂಕ. 26.06.2021 ರಂದು ಬೆಳಿಗ್ಗೆ 8.00 ಗಂಟೆಗೆ ಫಿಯರ್ಾದಿ ಮನೆಯಲ್ಲಿದ್ದಾಗ 1) ದೇವೆಂದ್ರಪ್ಪ ತಂದೆ ಸಾಬಲಯ್ಯ ವಳಪೂರ 2) ಶೇಖಪ್ಪ ತಂದೆ ದೊಡ್ಡ ಭೀಮಣ್ಣ ವಳಪೂರ 3) ಅಶೋಕ ತಂದೆ ಶೇಖಪ್ಪ ವಳಪೂರ 4) ಹಣಮಂತ್ರಾಯ ತಂದೆ ಬಸಪ್ಪ ವಳಪೂರ 5) ಸಾಬಯ್ಯ ತಂದೆ ಬಸಪ್ಪ ವಳಪೂರ 6) ಮಹಾದೇವ ತಂದೆ ತಾಯಪ್ಪ ವಳಪೂರ 7) ಶಿವ ತಂದೆ ತಾಯಪ್ಪ ವಳಪೂರ 8) ಬನ್ನಪ್ಪ ತಂದೆ ದೊಡ್ಡ ಭೀಮಣ್ಣ ವಳಪೂರ 9) ಭೀಮ ತಂದೆ ಬನ್ನಪ್ಪ ವಳಪೂರ 10) ಯಲ್ಲಪ್ಪ ತಂದೆ ಸಾಬಯ್ಯ ವಳಪೂರ 11) ಮಹೇಂದ್ರ ತಂದೆ ರೆಡ್ಡೆಪ್ಪ ವಳಪೂರ ಇವರೆಲ್ಲರೂ ಗುಂಪುಕಟ್ಟಿಕೊಂಡು ಫಿಯರ್ಾದಿ ಮನೆಗೆ ನುಗ್ಗಿ ಮನೆಯಲ್ಲಿ ಸಾಮಾನುಗಳನ್ನು ಬಿಸಾಡಿ ಮನೆಗೆ ಬೆಂಕಿ ಹಚ್ಚುತ್ತೇವೆ ಅಂತ ಧಮಕಿ ಹಾಕಿದ್ದು, ಯಾಕೆ ನಮ್ಮ ಮನೆಗೆ ಬೆಂಕಿ ಹಚ್ಚುತ್ತೀರಿ ಅಂತ ಫಿಯರ್ಾದಿ ಕೇಳಿದ್ದಕ್ಕೆ ದೇವೆಂದ್ರಪ್ಪ ತಂದೆ ಸಾಬಲಯ್ಯ ಕೂದಲು ಹಿಡಿದು ಜಗ್ಗಾಡಿ, ಸೂಳೇ, ರಂಡೀ ನಿನೇನು ಕೇಳುತ್ತೀ ಅಂತ ಅವಾಚ್ಯವಾಗಿ ಬೈದಿದ್ದು, ಅಶೋಕ ತಂದೆ ಶೇಖಪ್ಪ ಸೀರೆ ಹಿಡಿದು ಜಗ್ಗೀ, ಇಲ್ಲಿಂದ ಹೋಗುತ್ತೀಯಾ ಇಲ್ಲ ನಿನ್ನ ಸೀರೆ ಬಿಚ್ಚಲಾ ಅಂತ ಅವಮಾನ ಮಾಡಿ ಕೈಯಿಂದ ಮುಖಕ್ಕೆ ಹೊಡೆದಿರುತ್ತಾನೆ. ಶಿವ ತಂದೆ ತಾಯಪ್ಪ ವಳಪೂರ ಫಿಯರ್ಾದಿ ಮನೆಯಲ್ಲಿನ ಪಾತ್ರೆಗಳ ಮೇಲೆ, ಬಟ್ಟೆ ಮೇಲೆ ಪೆಟ್ರೋಲ ಸುರಿದಿರುತ್ತಾನೆ. ಬನ್ನಪ್ಪ ತಂದೆ ದೊಡ್ಡ ಭೀಮಣ್ಣ ಕೈ ಮುಷ್ಟಿ ಮಾಡಿ ಫಿಯರ್ಾದಿ ಬೆನ್ನಿಗೆ ಗುದ್ದಿರುತ್ತಾನೆ. ಫಿಯರ್ಾದಿ ಸುಸ್ತಾಗಿ ನೆಲಕ್ಕೆ ಬಿದ್ದಾಗ ಫಿಯರ್ಾದಿಗೆ ಹೊಡೆಯುವದನ್ನು ನೋಡಿ, ಮನೆ ಪಕ್ಕದವರು ಬಂದು ಹೊಡೆಯುವದನ್ನು ಬಿಡಿಸಿಕೊಂಡಿರುತ್ತಾರೆ. ಜಗಳದ ಸುದ್ದಿ ಗೊತ್ತಾಗಿ ಬಂದ ಫಿಯರ್ಾದಿ ಮಕ್ಕಳಾದ ಹಣಮಂತ್ರಾಯ ಮತ್ತು ಭೀಮರಾಯ ಇವರು ಜಗಳ ಬಿಡಿಸಿದ್ದು, ಅಲ್ಲಿಂದ ಹೋಗುವಾಗ ಎಲ್ಲರೂ ಈ ಸೂಳೇನ ಸುಮ್ಮನೆ ಬಿಡುವದಿಲ್ಲ, ನಮ್ಮನ್ನು ಎದರು ಹಾಕಿಕೊಂಡು ಈ ಊರಲ್ಲಿ ಸಂಸಾರ ಮಾಡಲು ಆಗುವದಿಲ್ಲ. ಇನ್ನೊಮ್ಮೆ ಸಿಕ್ಕರೆ ಜೀವ ಸಹಿತ ಬಿಡುವದಿಲ್ಲ. ಅಂತ ಜೀವದ ಭಯ ಹಾಕಿ ಹೋದ ಬಗ್ಗೆ ಫಿಯರ್ಾದಿ ಸಾರಾಂಶದ ಮೇಲಿಂದ ಮರಳಿ 12.15 ಪಿ.ಎಮ್.ಕ್ಕೆ ಠಾಣೆಗೆ ಬಂದು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

 

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 100/2021 ಕಲಂ 32,34 ಕೆ,ಇ ಯಾಕ್ಟ್ : ಇಂದು ದಿನಾಂಕ: 26-06-2021 ರಂದು ಮದ್ಯಾಹ್ನ 03-30 ಗಂಟೆಗೆ ಮಾನ್ಯ ಶ್ರೀ ಭೀಮರಾಯ ಪಿ.ಎಸ್.ಐ ಸಾಹೇಬರು ಜ್ಞಾಪನ ಪತ್ರದೊಂದಿಗೆ ಮದ್ಯದ ಬಾಟಲಿಗಳ ಜಪ್ತಿಪಂಚನಾಮೆ ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.100/2021 ಕಲಂ. 32, 34 ಕೆ.ಇ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 101/2021 ಕಲಂ. 323, 341, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ. 26.06.2021 ರಂದು ರಾತ್ರಿ 8-30 ಗಂಟೆಗೆ ಶ್ರೀ ದೇವಿಂದ್ರಪ್ಪ ತಂದೆ ಸಾಬಪ್ಪ ವಳಪೂರ ವಯ|| 30 ವರ್ಷ, ಸಾ|| ವಂಕಸಂಬರ ತಾ|| ಗುರುಮಠಕಲ ಜಿ|| ಯಾದಗಿರಿ ಇವರು ಠಾಣೆಗೆ ಬಂದು ಒಂದು ಗಣಕೀಕೃತ ದೂರು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ನನ್ನ ಹಳೆಯ ಮನೆಯಲ್ಲಿ ಎತ್ತುಗಳಿಗೆ ರಾತ್ರಿ ಮೇವು ಹಾಕಲು ಹೋಗಿದ್ದ ಸಂದರ್ಭದಲ್ಲಿ ಏಕಾಏಕಿಯಾಗಿ ರಾತ್ರಿ ವೇಳೆ. 9.00 ಗಂಟೆಗೆ 1) ಹಣಮಂತ ತಂದೆ ದಂಡಪ್ಪ ಭಗೀರಥ 2) ಭೀಮಪ್ಪ ತಂದೆ ದಂಡಪ್ಪ 3) ನವೀನ ತಂದೆ ದಂಡಪ್ಪ 4) ಶಂಕ್ರಮ್ಮ ಗಂಡ ದಂಡಪ್ಪ ಭಗೀರಥ ಇವರಲ್ಲದೇ 5) ಬಸಲಿಂಗಪ್ಪ ಹಾಗೂ 6) ನಾಗಪ್ಪ ( ಶಂಕ್ರಮ್ಮನ ಅಣ್ಣ ಮತ್ತು ತಮ್ಮ ) ಇನ್ನೂ ಹಲವರು ಊರಿನ ಜನರು ಇದ್ದರು ಇವರೆಲ್ಲರೂ ಈ ಮೇಲೆ ಕಾಣಿಸಿದ ಹೆಸರಿನವರು ನನಗೆ ಮನ ಬಂದಂತೆ ಜೋರಾದ ಏಟುಗಳಿಂದ ಹೊಡೆದು ನಿನ್ನನ್ನು ಹೊಡೆದು ಕೊಲೆ ಮಾಡುತ್ತೇವೆ ಎಂದು ಹೊಲಕ್ಕೆ ಬಂದರೆ ನಿನಗೆ ಇನ್ನೂ ಬೇರೆನೆ ಆಗುತ್ತೇ ಎಂದು ಹೊಡೆಯುತ್ತಾರೆ. ದಿನಾಂಕ 26.06.2021 ರಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಹಣಮಂತ ದೇವರ ದೇವಸ್ಥಾನದ ಬಳಿ ಬಂದು ಮತ್ತೆ ಅವರೆ ಜಗಳವಾಡಿದ್ದಾರೆ. ಕಾನೂನು ಕ್ರಮ ತೆಗೆದುಕೊಳ್ಳಬೇಕು ಅಂತ ನೀಡಿದ ದೂರು ಸಾರಾಂಶದ ಮೇಲಿಂದ ಸೈದಾಪುರ ಪೊಲೀಸ್ ಠಾಣೆ ಗುನ್ನೆ ನಂ. 101/2021 ಕಲಂ. 323, 341, 504, 506 ಸಂಗಡ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 27-06-2021 10:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ