Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 27-07-2021

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 114/2021 ಕಲಂ. ಮನುಷ್ಯ ಕಾಣೆ : ದಿನಾಂಕ: 26-07-2021 ರಂದು ಸಾಯಂಕಾಲ 4.30 ಗಂಟೆಗೆ ದಿನಾಂಕ: 10-06-2021 ರಂದು ಮದ್ಯಾಹ್ನ 01-00 ಗಂಟೆ ಸುಮಾರಿಗೆ ನಾನು ನಮ್ಮ ಅಣ್ಣ ರಾಘವೇಂದ್ರ ನಮ್ಮ ಅತ್ತೆಗೆ ಶರಣಮ್ಮ 3 ಜನರು ಕೂಡಿ ಹೊಲ ನೋಡಿ ಬರಲು ಹೋಗಿ ಹೊಲ ನೋಡಿಕೊಂಡು ವಾಪಸ ಮಾನೆಗೆ ಬಂದಾಗ ನನ್ನ ಗಂಡ ಮತ್ತು ಮಕ್ಕಳು ಇರಲಿಲ್ಲ ಆಗ ನಾನು ನಮ್ಮ ಅಣ್ಣ ರಾಘವೇಂದ್ರ ಕೂಡಿ ನನ್ನ ಗಂಡನಿಗೆ ಊರಲ್ಲಿ ಹುಡಕಾಡಲಾಗಿ ಊರಲ್ಲಿ ಎಲ್ಲು ಸಿಗಲಿಲ್ಲ ಎಲ್ಲಾದರು ಬಿಗರು ನೆಂಟರ ಮನೆಗೆ ಹೋಗಿರಬೇಕು ಅಂತಾ ಸುಮ್ಮನಾದೆವು ಆತನ ಪೊನಗೆ ಪೊನ್ ಮಾಡಿದರೆ ಸ್ವಿಚ್ ಆಫ್ ಅಂತಾ ಹೇಳಿತು ಎಲ್ಲಾದರು ಹೋಗಿರಬಹುದು ಅಂತಾ ಸುಮ್ಮನಾದೆವು ಮರುದಿನ ನಮ್ಮ ಬೀಗರು ನೆಂಟರ ಊರಿಗಳಿಗೆ ಹೋಗಿ ನನ್ನ ಗಂಡನ ಬಗ್ಗೆ ಮಾಹಿತಿ ಕೇಳಲಾಗಿ ನನ್ನ ಗಂಡ ಬಂದಿಲ್ಲ ಅಂತಾ ತಿಳಿಸಿದರು ಆಗ ನಾನು ನನ್ನ ಗಂಡನಿಗಾಗಿ ಮಾಗನೂರ ಮಕ್ತಲ್ ಹೈದ್ರಬಾದ ಎಲ್ಲಾ ಕಡೆ ಹುಡುಕಾಡಿದರು ಸಿಗಲಿಲ್ಲ ನನ್ನ ಗಂಡ ನಮ್ಮ 2 ಮಕ್ಕಳನ್ನು ಕರೆದುಕೊಂಡು ಹೋಗಿ ಕಾಣೆಯಾಗಿರುತ್ತಾನೆ.

 

ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂಬರ 165/2021 ಕಲಂ, 379 ಐ.ಪಿ.ಸಿ : ಇಂದು ದಿನಾಂಕ 26/07/2021 ರಂದು ಮಧ್ಯಾಹ್ನ 15-45 ಗಂಟೆಗೆ ಫಿಯರ್ಾದಿ ಶ್ರೀ ಸುಭಾಷ ತಂದೆ ರಾಯರಡ್ಡಿ ಅರಕೇರಿ, ವಯಸ್ಸು 31 ವರ್ಷ, ಜಾತಿ ಲಿಂಗಾಯತರಡ್ಡಿ, ಸಾಃ ರಸ್ತಾಪೂರ, ತಾಃ ಶಹಾಪೂರ, ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಾನು ನಮ್ಮೂರಲ್ಲಿ ಶ್ರೀ ಶರಬಲಿಂಗೇಶ್ವರ ಮೆಡಿಕಲ್ @ ಜನರಲ್ ಸ್ಟೋರ್ ಅಂಗಡಿ ಇಟ್ಟುಕೊಂಡಿರುತ್ತೇನೆ. ನನ್ನ ಮೆಡಿಕಲ್ದಲ್ಲಿ ನನ್ನ ಅಳಿಯನಾದ ಶರಬಗೌಡ ತಂದೆ ಬಸವರಾಜ ನಗರ, ಈತನು 2-3 ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿರುತ್ತಾನೆ, ನನ್ನ ಅಳಿಯನ ಹೆಸರಿನಲ್ಲಿ ಒಂದು ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂಬರ ಕೆಎ-33-ವಿ-7944 ಇದ್ದು ಚೆಸ್ಸಿ ನಂಬರಃ- ಒಃಐಊಂಖ076ಊಊಊ02311 & ಇಂಜಿನ್ ನಂಬರ ಊಂ10ಂಉಊಊಊ02152, ಮೋಟರ್ ಸೈಕಲ್ ಅಂದಾಜು 50,000=00 ರೂಪಾಯಿ ಕಿಮ್ಮತ್ತಿನದು ಇರುತ್ತದೆ. ಸದರಿ ಮೋಟರ ಸೈಕಲ್ ಮೆಡಿಕಲ್ ಕೆಲಸಕ್ಕೆ ನಾನೇ ಉಪಯೋಗ ಮಾಡಿಕೊಂಡು ನನ್ನ ಹತ್ತಿರವೇ ಇಟ್ಟುಕೊಂಡಿದ್ದೇನು. ಹೀಗಿರುವಾಗ ದಿನಾಂಕ 15/07/2021 ರಂದು, ಮುಂಜಾನೆಯ ಸುಮಾರಿಗೆ ಮೋಟರ್ ಸೈಕಲ್ ನಂಬರ ಕೆಎ-33-ವಿ-7944 ನೇದ್ದು ತೆಗೆದುಕೊಂಡು ಮೆಡಿಕಲ್ಗೆ ಹೋಗಿ ನಂತರ ರಾತ್ರಿ 9-00 ಗಂಟೆಗೆ ಮನೆಗೆ ಬಂದು ಮನೆಯ ಮುಂದೆ ಇರುವ ಬಯಲು ಜಾಗದಲ್ಲಿ ಮೋಟರ್ ಸೈಕಲ್ ನಿಲ್ಲಿಸಿ ಲಾಕ್ ಮಾಡಿಕೊಂಡು ಮನೆಯಲ್ಲಿ ಹೋಗಿರುತ್ತೇನೆ. ಊಟವಾದ ನಂತರ ಮನೆಯ ಹೊರಗಡೆ ಬಂದು, ಮನೆಯ ಮುಂದೆ ಸ್ವಲ್ಪ ಸಮಯದವರೆಗೆ ವಾಕ್ ಮಾಡಿ, ಮನೆಯಲ್ಲಿ ರಾತ್ರಿ 11-00 ಗಂಟೆಯ ಸುಮಾರಿಗೆ ಹೋಗುವಾಗ ಮೋಟರ್ ಸೈಕಲ್ ನೋಡಿದ್ದು, ನಾನು ನಿಲ್ಲಿಸಿದ ಸ್ಥಳದಲ್ಲಿಯೇ ಇತ್ತು. ದಿನಾಂಕ 16/07/2021 ರಂದು ಬೆಳಗಿನ ಜಾವ 06-00 ಗಂಟೆಗೆ ಎದ್ದು, ಮನೆಯ ಹೊರಗಡೆ ಬಂದಾಗ, ನಾನು ನಿಲ್ಲಿಸಿದ ಮೋಟರ್ ಸೈಕಲ್ ಕಾಣಲಿಲ್ಲ. ನನ್ನ ಅಳಿಯ ಶರಬಗೌಡ ತೆಗೆದುಕೊಂಡು ಹೋಗಿರಬಹುದು ಅಂತ ತಿಳಿದುಕೊಂಡು ಆತನಿಗೆ ಫೋನ್ ಮಾಡಿ ವಿಚಾರಿಸಿದಾಗ ಮೋಟರ್ ಸೈಕಲ್ ನಾನು ತೆಗೆದುಕೊಂಡು ಹೋಗಿರುವುದಿಲ್ಲ ಅಂತ ಹೇಳಿದನು. ಮನೆಯಲ್ಲಿ ಬಂದು ಕೀ ನೋಡಲಾಗಿ ನನ್ನ ಪ್ಯಾಂಟಿನಲ್ಲಿತ್ತು. ನಂತರ ಓಣಿಯಲ್ಲಿ ಹುಡಕಾಡಿದ್ದು ಮೋಟರ್ ಸೈಕಲ್ ಸಿಗದೇ ಇದ್ದಾಗ, ನನ್ನ ಅಳಿಯನಿಗೆ ನಮ್ಮ ಮನೆಯ ಹತ್ತಿರ ಕರೆಯಿಸಿಕೊಂಡು ಇಬ್ಬರು ಕೂಡಿ ನಮ್ಮೂರಿನ ಚೌಡಯ್ಯನ ಗುಡಿ ಹಾಗೂ ಶರಬಲಿಂಗೇಶ್ವರ ಗುಡಿ ಕಡೆಗೆ ಮತ್ತು ಸಗರ (ಬಿ) ರೋಡ, ಕೆನಾಲ್ ರೋಡ, ಶಾರದಳ್ಳಿ ರೋಡ, ಕಡೆಗೆ ಹೋಗಿ ಹುಡಕಾಡಿದ್ದು ಮೋಟರ್ ಸೈಕಲ್ ಸಿಕ್ಕಿರುವುದಿಲ್ಲ. ನಂತರದ ದಿನಗಳಲ್ಲಿ ನಾನು ಮತ್ತು ನನ್ನ ಅಳಿಯ ಇಬ್ಬರು ಕೂಡಿ ಶಹಾಪೂರ, ಹತ್ತಿಗೂಡುರ, ರಸ್ತಾಪೂರ ಕ್ರಾಸ್, ಸುರಪೂರ, ಶಾರದಳ್ಳಿ ಸಗರ(ಬಿ) ಗ್ರಾಮಗಳಿಗೆ ಹೋಗಿ ಹುಡಕಾಡಿರುತ್ತೇವೆ ಸಿಕ್ಕಿರುವುದಿಲ್ಲ. ಮೋಟರ್ ಸೈಕಲ್ ಇಂದಲ್ಲಾ ನಾಳೆ ಸಿಗಬಹುದು ಅಂತ ಭರವಸೆಯಲ್ಲಿ ಠಾಣೆಗೆ ಬಂದು ದೂರು ಸಲ್ಲಿಸಿರುವುದಿಲ್ಲ ಅಲ್ಲಿಂದ ಇಲ್ಲಿಯವರೆಗೆ ಹುಡಕಾಡಿದರು ಮೋಟರ್ ಸೈಕಲ್ ಸಿಗಲಾರದಿಂದ ತಡವಾಗಿ ಇಂದು ದಿನಾಂಕ 26/07/2021 ರಂದು ಠಾಣೆಗೆ ಹಾಜರಾಗಿ ಕಳುವಾದ ನನ್ನ ಮೋಟರ್ ಸೈಕಲ್ ಬಗ್ಗೆ ದೂರು ಸಲ್ಲಿಸುತಿದ್ದೇನೆ. ಕಾರಣ ದಿನಾಂಕ 15/07/2021 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ 16/07/2021 ರಂದು ಬೆಳಗಿನ ಜಾವ 06-00 ಗಂಟೆಯ ಅವಧಿಯಲ್ಲಿ ರಸ್ತಾಪೂರ ಗ್ರಾಮದಲ್ಲಿರುವ ನಮ್ಮ ಮನೆಯ ಮುಂದೆ ಇರುವ ಬಯಲು ಜಾಗದಲ್ಲಿ ನಿಲ್ಲಿಸಿದ 50,000=00 ರೂಪಾಯಿ ಕಿಮ್ಮತ್ತಿನ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂಬರ ಕೆಎ- 33-ವಿ-7944 ನೇದ್ದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳುವಾದ ನನ್ನ ಮೋಟರ ಸೈಕಲ್ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 165/2021 ಕಲಂ 379 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

 

ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ: 125/2021 ಕಲಂ 323,324,326,504,506 ಐ.ಪಿ.ಸಿ. : ಇಂದು ದಿನಾಂಕ:26-07-2021 ರಂದು 01-15 ಪಿ.ಎಂ.ಕ್ಕೆ ಠಾಣೆಯ ಎಸ.ಹೆಚ್.ಡಿ. ಕರ್ತವ್ಯದಲ್ಲ್ಲಿದ್ದಾಗ ಶ್ರೀ ಅಬೀಶೇಕ ತಂದೆ ಅಶೋಕ ಕಾಂಬಳೆ ವಯಾ:21 ವರ್ಷ ಉ:ಮಣಿಕಂಠ ಲಾಡ್ಜನಲ್ಲಿ ಕೆಲಸ ಜಾತಿ:ಹೊಲೆಯ ಸಾ:ಬಡರೊಜಾ ಬಂದೆನಮಾಜ ದಗರ್ಾ ಹತ್ತಿರ ಕಲಬುರಗಿ ಹಾವ: ಮಣಿಕಂಠ ಹೋಟೇಲ ಸುರಪೂರ ಇವರು ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನಾನು ಸುಮಾರು ಒಂದು ವರ್ಷದಿಂದ ಸುರಪೂರದ ಕೆಂಬಾವಿ ರೋಡಿನ ಹತ್ತಿರ ಇರುವ ಮಣಿಕಂಠ ಬಾರ & ರೇಸ್ಟೊರೆಂಟದಲ್ಲಿ ರಿಸಪ್ಸನ್ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡಿರುತ್ತೆನೆ. ಹೀಗಿದ್ದು ನಿನ್ನೆ ದಿನಾಂಕ:25-07-2021 ರಂದು ರಾತ್ರಿ 7 ಗಂಟೆ ಸುಮಾರಿಗೆ ನಮ್ಮ ಮಣಿಕಂಠ ಹೊಟೇಲದ ಒಳಗಡೆ ಇರುವ ಭಾರ ಕೌಂಟರ ಹತ್ತಿರ ನಾನು ಬಾರ ಕೌಂಟರ ಮ್ಯಾನೇಜರರಾದ ಶ್ರೀ ಪ್ರವಿಣ ತಂದೆ ಸಿದ್ದಪ್ಪ ಉಲಕಳ್ಳಿ ಹೊಟೇಲ ಕ್ಯಾಪ್ಟನ್ನಾದ ಶ್ರೀ ಪ್ರಲ್ಲಾದ ಚೌದರಿ ಮೂವರು ಇರುವಾಗ ಸುರಪೂರ ಬಿಜ್ಜಗತ್ತಕೇರಿಯ ರಾಮು ತಂದೆ ಮಲ್ಲಪ್ಪ ಜಾತಿ:ಬೇಡರ ಈತನು ಬಾರ ನಾನ್ ಏಸಿ ಬಾರ ರೆಸ್ಟೋರೆಂಟನಲ್ಲಿ ಬಂದ ಮಧ್ಯಪಾನ ಮಾಡಿ ಬಾರ ಕೌಂಟರ ಹತ್ತಿರ ಉಗುಳುತ್ತಾ ಬರುತ್ತಿರುವಾಗ ಬಾರ ಕ್ಯಾಪ್ಟನ್ವರಾದ ಪ್ರಲ್ಲಾದ ಚೌದರಿ ಇವರು ಇಲ್ಲಿ ಉಗಳ ಬೇಡಿ ಸರ್ ಅಂತಾ ಹೇಳಿದಕ್ಕೆ ನಾನು ಇಲ್ಲೇ ಉಗುಳುತ್ತೆನೆ ನೀನೆನು ಕಿತ್ತಗೊತಿ ಕಿತ್ತಿಕೊ ಮಗನಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ತನ್ನ ಬಲಗಾಲಲ್ಲಿಯ ಚಪ್ಪಲಿ ತೆದುಕೊಂಡವನೆ ಪ್ರಹ್ಲಾದ ಇವರ ಬಲಗಡೆ ಕಪಾಳ ಕಪಾಳಕ್ಕೆ ಹೊಡೆಯುತ್ತಿರುವಾಗ ಅದೇ ಸಮಯಕ್ಕೆ ಅಲ್ಲೆ ಕೆಲಸ ಮಾಡುತ್ತಿದ್ದ ನಮ್ಮ ಹೊಟೇಲ ಆಸಿಮ್ ಮಿತ್ರ ತಂದೆ ಬಬತೋಷ ಮಿತ್ರಾ ಇವರು ಬಿಡಿಸಲು ಬಂದಾಗ ಟೇಬಲ್ ಮೇಲೆ ಇದ್ದ ಕಾಲಿ ಬೀಯರ್ ಬಾಟಲಿ ಟೇಬಲ ಮೇಲೆ ಒಡೆದು ಆಸೀಮ್ ಮಿತ್ರಾ ಎಡಗಡೆ ಬುಜಕ್ಕೆ ಚುಚ್ಚಿ ಭಾರಿ ರಕ್ತಗಾಯಗೊಳಿಸಿದನು. ಆಗ ಬಿಡಿಸಲು ಹೊದ ನನಗೂ ಅದೆ ಬಾಟಲಿಯಿಂದ ನನ್ನ ಬಲಗಡೆ ಹಸ್ತದ ಮೇಲಗಡೆ ಚುಚ್ಚಿ ರಕ್ತಗಾಯ ಮಾಡಿದಾಗ ನಾವು ಪೊಲೀಸ್ ಠಾಣೆಗೆ ಹೋಗಿ ಕೇಸು ಮಾಡುತ್ತೆವೆ ಅಂತಾ ಅಂದಾಗ ಅವನು ಪೊಲೀಸ್ ಠಾಣೆಗೆ ಹೋಗಿ ಕೇಸು ಮಾಡಿದರೆ ನಿಮಗೆ ಜೀವ ಹೊಡೆಯದೆ ಬಿಡುವದಿಲ್ಲ ಅಂತಾ ಒಡೆದ ಬೀಯರ್ ಬಾಟಲಿ ಅಲ್ಲೆ ಬಿಸಾಕಿ ಜೀವದ ಬೇದರಿಕೆ ಹಾಕಿ ಹೊರಟು ಹೋಗಿರುತ್ತಾನೆ, ನಂತರ ಗಾಯಗೊಂಡ ನಾನು, ಆಸೀಮ ಮಿತ್ರಾ ಇಬ್ಬರು ಸರಕಾರಿ ಆಸ್ಪತ್ರೆ ಸುರಪೂರಕ್ಕೆ ಹೋಗಿ ಉಪಚಾರ ಪಡೆದುಕೊಂಡಿದ್ದು, ಪ್ರಲ್ಲಾದ ಚೌದರಿ ಇವರು ಚಿಕಿತ್ಸೆ ಪಡೆದುಕೊಂಡಿರುವದಿಲ್ಲ. ನಾವು ನಿನ್ನೆ ರಾತ್ರಿಯಾಗಿದ್ದರಿಂದ ಎಲ್ಲರೂ ವಿಚಾರ ಮಾಡಿ ಇಂದು ಠಾಣೆಗೆ ಬಂದು ದೂರು ಅಜರ್ಿ ನಿಡಿದ್ದು ಇರುತ್ತದೆ. ನಮಗೆ ಅವಾಚ್ಯ ಬೈದು ಹೊಡೆ ಬಡೆ ಮಾಡಿ ಭಾರಿ ರಕ್ತಗಾಯಗೊಳಿಸಿ ಜೀವದ ಬೇದರಿಕೆ ಹಾಕಿದ ರಾಮು ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.

 

ವಡಗೇರಾ ಪೊಲೀಸ ಠಾಣೆ 
96/2021 ಕಲಂ: 447,504,323,506 ಸಂ 34 ಐಪಿಸಿ : ಇಂದು ದಿನಾಂಕ: 26/07/2021 ರಂದು 1-30 ಪಿಎಮ್ ಕ್ಕೆ ಶ್ರೀ ಬಸವರಾಜ ತಂದೆ ಹಣಮಂತ ಭಂಡಾರಿ, ವ:45, ಜಾ:ಮಾದಿಗ,ಉ:ಡ್ರೈವರ ಸಾ:ಜೋಳದಡಗಿ ತಾ:ವಡಗೇರಾ ಜಿ:ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನಮ್ಮದೊಂದು ಜೋಳದಡಗಿ ಗ್ರಾಮದ ಸೀಮಾಂತರದಲ್ಲಿ ಬರುವ ಜಮೀನು ಸವರ್ೆ ನಂ. 01 ವಿಸ್ತೀರ್ಣ 11 ಎಕರೆ 12 ಗುಂಟೆ ಜಮೀನಿನನಲ್ಲಿ ನನಗೆ ಮತ್ತು ಅಶೋಕ ತಂದೆ ಸೂಗಪ್ಪ ಇಬ್ಬರಿಗೆ ಜಂಟಿಯಾಗಿರುತ್ತದೆ. ಇದು ನಮ್ಮ ಪಿತ್ರಾಜರ್ಿತ ಆಸ್ತಿಯಾಗಿದ್ದು ನಮ್ಮ ಮಾಲಿಕತ್ವ ಮತ್ತು ಕಬ್ಜೆದಾರ ನಾವೇ ಇರುತ್ತೇವೆೆ. ಸದರಿ ಜಮೀನಿನ್ನು ಸುಮಾರು 30 ವರ್ಷಗಳಿಂದ ನಾನೇ ಉಪಬೋಗಿಸಿಕೊಂಡು ಬಂದಿರುತ್ತೇನೆ. ಈಗ ನಮ್ಮ ಹೊಲವನ್ನು ನಿಂಗಪ್ಪ ತಂದೆ ಹಣಮಂತ ಈತನಿಗೆ ಲೀಜೆಗೆ ಹಾಕಿರುತ್ತೇನೆ. ಹೀಗಿದ್ದು ನಮ್ಮ ಅಣ್ಣತಮ್ಮಕೀಯರಾದ ಬಸವರಾಜ ತಂದೆ ಬಾಲಪ್ಪ ಈತನು ಸದರಿ ಜಮೀನಿನಲ್ಲಿ ನಮಗೆ ನಮ್ಮ ಪಿತ್ರಾಜರ್ಿತ ಆಸ್ತಿ ಪಾಲು ಬರುವುದಿದೆ ಎಂದು ಸುಮಾರು ದಿವಸಗಳಿಂದ ಆಸ್ತಿ ವಿಚಾರವಾಗಿ ನಮ್ಮೊಂದಿಗೆ ತಕರಾರು ಮಾಡಿಕೊಂಡು ಬರುತ್ತಿದ್ದಾನೆ. ಹೀಗಿದ್ದು ದಿನಾಂಕ: 25/07/2021 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ನಾನು ಹೊಲದಲ್ಲಿ ಕೆಲಸ ಮಾಡುತ್ತಿರುವಾಗ 1) ಬಸವರಾಜ ತಂದೆ ಬಾಲಪ್ಪ ತಂಗಡಗಿ 2) ನಾಗೇಶ ತಂದೆ ಮರೆಪ್ಪ ಭಂಡಾರಿ 3) ಸಾಬು@ ಸಾಬಣ್ಣ ತಂದೆ ಹುಲ್ಲೇಪ್ಪ ತಂಗಡಿ 4) ಸಾಬು@ಸಾಬಣ್ಣ ತಂದೆ ಮಹಾದೇವಪ್ಪ ತಂಗಡಿ ಎಲ್ಲರೂ ಸಾ: ಜೋಳದಡಗಿ ಎಲ್ಲರೂ ಕೂಡಿ ಬಂದು ನಮ್ಮ ಹೊಲದಲ್ಲಿ ಅತಿ ಕ್ರಮೇಣ ಪ್ರವೇಶ ಮಾಡಿ ನಾವು ಕೂಡ ಈ ಹೊಲದಲ್ಲಿ ಭಿತ್ತನೆ ಮಾಡುತ್ತೇವೆ ಸೂಳೆ ಮಗನೇ ನೀನು ಏನು ಮಾಡುತ್ತಿಯಾ ಮಾಡು ಅಂತಾ ಅವ್ಯಾಚವಾಗಿ ಬೈದು ಜಗಳ ತೆಗೆದು ಬಸವರಾಜ ಈತನು ನನ್ನ ಬಲಗೈ ವಡ್ಡು ತಿರಿವಿದನು. ಸಾಬು ತಂದೆ ಮಹಾದೇವಪ್ಪ ಮತ್ತು ಸಾಬು ತಂದೆ ಹುಲ್ಲೇಪ್ಪ ಇಬ್ಬರೂ ಗಟ್ಟಿಯಾಗ ಹಿಡಿದುಕೊಂಡಾಗ ನಾಗೇಶ ಈತನು ಜೋರಾಗಿ ತನ್ನ ಕೈಯಿಂದ ಕಪಾಳಕ್ಕೆ ಹೊಡೆದು ಹೊಟ್ಟೆ-ಬೆನ್ನಗೆ ಗುದ್ದಿ ಇಬ್ಬರೂ ಸೇರಿ ನೆಲಕ್ಕೆ ಜೋರಾಗಿ ನೂಕಿ ಕಾಲಿನಿಂದ ತುಳಿಯತ್ತಿರುವದನ್ನು ನೋಡಿದ ನನ್ನ ಹೆಂಡತಿ ಪುಷ್ಪಾ ಮತ್ತು ಕೃಷ್ಣ ತಂದೆ ಸೂಗಪ್ಪ ಹಾಗೂ ಅಶೋಕ ತಂದೆ ಸೂಗಪ್ಪ ಇವರು ಬಂದು ಹೊಡೆಯುವುದು ಬಿಡಿಸಿದಾಗ ಹೊಡೆಯುವುದು ಬಿಟ್ಟ ಅವರು ಇನ್ನೊಮ್ಮ ನಮ್ಮ ಹೊಲ ಕಡೇ ಬಂದರೆ ನಿಮ್ಮನ್ನು ಜೀವ ಸಹಿತ ಬೀಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ.ಕಾರಣ ಮೇಲ್ಕಂಡ ಜನರೆಲ್ಲರೂ ಸೇರಿಕೊಂಡು ಬಂದು ನನ್ನ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನನಗೆ ಅವಾಚ್ಯ ಬೈದು ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿರುತ್ತಾರೆ. ನಾನು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಸದರಿ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 96/2021 ಕಲಂ: 447,323,504,506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ನಗರ ಪೊಲೀಸ ಠಾಣೆ 
ಗುನ್ನೆ ನಂ:80/2021 ಕಲಂ:143,147,323,324,504.ಸಂ.149 ಐಪಿಸಿ : ಇಂದು ದಿನಾಂಕ.26/07/2021 ರಂದು 12-30 ಪಿಎಂಕ್ಕೆ ಶ್ರೀ ಸುರೇಶ ತಂದೆ ದುರ್ಗಪ್ಪ ಅಂಬಿಗೇರ ವಃ33 ಜಾಃ ಕಬ್ಬಲಿಗ ಉಃ ನಗರಸಭೆ ಸದಸ್ಯರು ಸಾಃ ಬಂಡಿಗೇರಾ ಯಾದಗಿರಿ ರವರು ಠಾಣೆಗೆ ಬಂದು ಒಂದು ಅಜರ್ಿಯನ್ನು ಹಾಜರಪಡಿಸಿದ್ದು ಸಾರಾಂಶವೆನೆಂದರೆ, ನಾನು ನಗರಸಭೆ ಸದಸ್ಯ ಹಾಗೂ ಅದ್ಯಕ್ಷರು ನಗರ ಮಂಡಲ ಬಿ.ಜೆ.ಪಿ. ಯಾದಗಿರಿ ಇದ್ದು ದಿನಾಂಕ. 23/07/2021 ರಂದು ಶುಕ್ರುವಾರ ನಮ್ಮ ಮನೆಗೆ ಕೆಲ ಕಿಡಗೇಡಿಗಳು ರಾತ್ರಿ ಹೊತ್ತಲ್ಲಿ ವಿನಾಕಾರಣ ಬಂದು ಜಗಳದ ನೆಪದಲ್ಲಿ ನನ್ನ ಮೇಲೆ ಮತ್ತು ನನ್ನ ಸಹೋದರನಾದ ನಾಗೇಶ ತಂದೆ ದುರ್ಗಪ್ಪ ಅಂಬಿಗೇರ ಈತನು ನಗರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಈತನು ರಾತ್ರಿ ಹೊತ್ತಲ್ಲಿ ಮನೆಗೆ ಹಿಂದುರಿಗಿ ಸುಮಾರು 9-00 ಗಂಟೆಗೆ ಮನೆಯಲ್ಲಿ ಇದ್ದಾಗ ಆತನಿಗೆ ಮನೆಯಿಂದ ಹೊರಗೆ ಕರೆಯಿಸಿ ಮನೆಯ ಅಂಗಳದಲ್ಲಿ ಹೊಡೆದು ನನಗೆ ರೂಪಾಯಿ 1,000/- ಹಣ ನೀಡಬೇಕು ಎಂದು ಜಗಳವಾಡಿದ್ದು ಅದೇ ಸಮಯಕ್ಕೆ ನಾನು ಮನೆಗೆ ಹೋಗುತ್ತಿದ್ದು ಅಲ್ಲಿಗೆ ಹೋದಾಗ ಹೊಡೆಸಿಕೊಂಡಿದ್ದ ನನ್ನ ತಮ್ಮನಿಗೆ ವಿಚಾರಿಸಿದೆ ಅಲ್ಲಿಯೇ ಇದ್ದ ಕಿಡಿಗೇಡಿಗಳಿಗೂ ವಿಚಾರಿಸಿದೇ ಆದರೂ ಮಾತಿಗೆ ಮಾತಾಡಿ ನಿನ್ಯಾವ ಕೌನ್ಸಲರ ಎಂದು ಅವಾಚ್ಯವಾಗಿ ನಿಂದಿಸಿದರು. ಅವಮಾನ ಮಾಡಿದರು ಆದರೂ ಸಂಯಮದಿಂದ ನಾನು ಅವರಿಗೆ ತಿಳಿ ಹೇಳಿದರು ಅವರುಗಳು ನನ್ನ ಮೇಲೆ ದೊಣ್ಣೆಯಿಂದ ತೀವ್ರವಾಗಿ ತಲೆಗೆ, ಕೈಗೆ ಹಲ್ಲೆ ಮಾಡಿರುತ್ತಾರೆ. ಜಗಳವಾಡಲು ಬಂದವರ ಹೆಸರುಗಳು 1) ಚಂದ್ರು ತಂದೆ ದೇವಿಂದ್ರಪ್ಪ ಕೋಟ್ರಕಿ 2) ಮಲ್ಲು ತಂದೆ ದೇವಿಂದ್ರಪ್ಪ ಕೋಟ್ರಕಿ 3) ರಾಘವೇಂದ್ರ ತಂದೆ ದೇವಿಂದ್ರಪ್ಪ ಕೋಟ್ರಕಿ ಮತ್ತು ಇನ್ನೀತರರು ಮೂರು ಜನರು ಅವರ ಹೆಸರುಗಳು ತಿಳಿದಿರುವುದಿಲ್ಲ. ಆದರೂ ಅವರು ಕೂಡಾ ನಮ್ಮ ವಾಡರ್ಿನ ನಿವಾಸಿಗಳೇ ಆಗಿರುತ್ತಾರೆ. ಆದ ಕಾರಣ ನಾನು ನಗರಸಭೆಯಲ್ಲಿ ನಗರದಲ್ಲಿ ಒಂದು ಉನ್ನತವಾದ ಜವಾಬ್ದಾರಿಯಲ್ಲಿ ಇದ್ದು ಹೆಚ್ಚು ಸಮಯ ಮನೆಯಿಂದ ಹೊರಗಡೆ ಇರುತ್ತೇನೆ. ಮನೆಯಲ್ಲಿ ಸಣ್ಣ ಸಣ್ಣ ಮಕ್ಕಳು, ವೃದ್ದ ತಂದೆ ತಾಯಿ ವಯಸ್ಕ ಮಹಿಳೆಯರು ಇದ್ದ ಕಾರಣ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಅವರನ್ನು ವಿಚಾರಣೆಗೆ ಒಳಪಡಿಸಿ ಕಾನೂನು ಪ್ರಕಾರ ತೆಗೆದುಕೊಳ್ಳು ತಮ್ಮಲ್ಲಿ ಕಳಕಳಿಯ ವಿನಂತಿ ಈ ಬಗ್ಗೆ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.80/2021 ಕಲಂ.143, 147, 323, 324, 504 ಸಂ.149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

 

ಗುರಮಿಠಕಲ್ ಪೊಲೀಸ ಠಾಣೆ 
ಗುನ್ನೆ ನಂ: 116/2021 ಕಲಂ:143, 147, 341, 323, 504 506 ಸಂಗಡ 149 ಐಪಿಸಿ : ನಿನ್ನೆ ದಿನಾಂಕ 25.07.2021 ರಂದು ಮಧ್ಯಾಹ್ನ 3:00 ಗಂಟೆಗೆ ಆರೋಪಿತರು ಮತ್ತು ಫಿರ್ಯಾದಿ ಹಾಗೂ ಆತನ ಸಂಬಂದಿಕರು ಕೂಡಿಕೊಂಡು ಫಿರ್ಯಾದಿ ಮತ್ತು ಎ-1 ಈಕೆಯ ಸಂಸಾರಿಕ ವಿಷಯಕ್ಕೆ ಸಂಬಂದಿಸಿದಂತೆ ನ್ಯಾಯ ಪಂಚಾಯತಿ ಮಾಡಲು ಗುರುಮಟಕಲ್ ಪಟ್ಟಣದ ನರೆಂದ್ರ ರಾಠೋಡ ಇವರ ಶಾಲೆಯ ಆವರಣದಲ್ಲಿ ಇದ್ದಾಗ ಬಾಯಿ ಮಾತಿನ ತಕರಾರು ಆಗಿದ್ದು ನಂತರ ಫೀರ್ಯಾದಿ ಮತ್ತು ಆತನ ಸಂಬಂದಿಕರು ಮನೆಯ ಕಡೆಗೆ ಹೋಗುತ್ತಿದ್ದಾಗ ಆರೋಪಿತರೆಲ್ಲಾರು ಕೂಡಿ ಅಕ್ರಮ ಕೂಟ ರಚಿಸಿಕೊಂಡು ಅವರಿಗೆ ತಡೆದು ನಿಲ್ಲಿಸಿ ಕೈಯಿಂದ ಹೊಡೆ-ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ಊರಲ್ಲಿ ಮತ್ತು ಮನೆಯಲ್ಲಿ ವಿಚಾರ ಮಾಡಿದ ನಂತರ ಇಂದು ದಿನಾಂಕ 26.07.2021 ರಂದು ತಡವಾಗಿ ಠಾಣೆಗೆ ಬಂದು ಗಣಕೀಕೃತ ದೂರು ಅಜರ್ಿಯನ್ನು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 116/2021 ಕಲಂ:143, 147, 341, 323, 504 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

Last Updated: 27-07-2021 01:08 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080