ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 27-08-2021

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 198/2021 ಕಲಂ 279, 338 ಐ.ಪಿ.ಸಿ. : ಇಂದು ದಿನಾಂಕ 26-08-2021 ರಂದು 11:00 ಎ.ಎಮ್.ಕ್ಕೆ ಫಿರ್ಯಾದಿ ಶ್ರೀ ರಮೇಶ ತಂದೆ ಭೀಮರಾಯ ಪಾಣಿಬಾತೆ ವಯಸ್ಸು: 25 ವರ್ಷ ಜಾ: ಸ್ವಕುಳ ಸಾಳೆ ಉ: ಮೆಡಿಕಲ್ ಶಾಪ್ ಸಾ: ಸಿ.ಬಿ.ಸ್ಕೂಲ ಹತ್ತಿರ ಶಹಾಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪಯೂಟರ ಟೈಪ ಮಾಡಿಸಿದ ಫಿರ್ಯಾದಿ ಹಾಜರು ಪಡಸಿದ್ದು ಸದರಿ ಫಿರ್ಯಾದಿ ಏನಂದರೆ, ನಮ್ಮ ತಂದೆಯಾದ ಭೀಮರಾಯ ತಂದೆ ಸಿದ್ದಪ್ಪ ಪಾಣಿಬಾತೆ ರವರು ದಿನಾಲು ಮುಂಜಾನೆ ಮತ್ತು ಸಾಯಂಕಾಲ ವಾಕಿಂಗ್ ಗೆ ಅಂತಾ ಚರಬಸವೇಶ್ವರ ಗದ್ದುಗೆಗೆ ಹೋಗಿ ಮರಳಿ ಬರುತ್ತಾರೆ. ಹೀಗಿದ್ದು ದಿನಾಂಕ: 21-08-2021 ರಂದು ಸಾಯಂಕಾಲ 7:15 ಪಿ.ಎಮ್.ಕ್ಕೆ ನಮ್ಮ ಪರಿಚಯದ ಹರೀಶ ತಂದೆ ಬಸನಗೌಡ ಆಲ್ದಾಳ ರವರು ನನಗೆ ಪೋನ ಮಾಡಿ ತಿಳಿಸಿದ್ದೇನಂದರೆ ನಿಮ್ಮ ತಂದೆಯವರಾದ ಭೀಮರಾಯ ರವರಿಗೆ ಜೀವೇಶ್ವರ ಕಲ್ಯಾಣ ಮಂಟಪದ ಹತ್ತಿರ ಒಂದು ಸ್ಕೂಟಿ ಚಾಲಕನು ಡಿಕ್ಕಿಪಡಿಸಿ ಭಾರಿ ಗಾಯ ಆಗಿದೆ ನೀನು ಬಾ ಎಂದು ಹೇಳಿದನು. ಆಗ ನಾನು ತಕ್ಷಣ ಅಲ್ಲಿಗೆ ಹೋಗಿ ನೊಡಲಾಗಿ ನಮ್ಮ ತಂದೆಯವರು ಸ್ಥಳದಲ್ಲೇ ಬಿದ್ದಿದ್ದು ಅವರ ಎಡಗಡೆ ತಲೆಗೆ ರಕ್ತಗಾಯವಾಗಿತ್ತು. ಮತ್ತು ಎಡಗಡೆ ಭುಜಕ್ಕೆ ಭಾರೀ ಒಳಪೆಟ್ಟಾಗಿ ನರಳುತ್ತಿದ್ದರು. ನಾನು ನಮ್ಮ ತಂದೆಗೆ ಹೇಗಾಯಿತು ಎಂದು ಕೇಳಲಾಗಿ ತಾನು ಮತ್ತು ಶಿವರಾಜ ತಂದೆ ಸಿದ್ರಾಮಪ್ಪ ಎಲೇರಿ ಇಬ್ಬರು ಕೂಡಿ ವಾಕಿಂಗ್ ಮುಗಿಸಿಕೊಂಡು ಮರಳಿ ಮನೆಗೆ ನಡೆದುಕೊಂಡು ಹೊರಟಾಗ ಜೀವೇಶರ್ವರ ಕಲ್ಯಾಣ ಮಂಟಪದ ಮುಂದೆ 7:00 ಪಿ.ಎಮ್.ಕ್ಕೆ ನಮ್ಮ ಎದುರಿನಿಂದ ಒಬ್ಬ ಸ್ಕೂಟಿ ಸವಾರನು ತನ್ನ ಸ್ಕೂಟಿ ವಾಹನವನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದವನೆ ನನಗೆ ಡಿಕ್ಕಿ ಪಡಿಸಿದ್ದು ನಾನು ಕೆಳಗೆ ಬಿದ್ದು ಭಾರಿ ಗಾಯವಾಗಿವೆ ಎಂದು ಹೇಳಿದನು. ಅಫಘಾತ ಮಾಡಿದ ಸ್ಕೂಟಿ ಅಲ್ಲೇ ಇದ್ದು ಅದರ ನಂಬರ ಕೆ.ಎ.02-ಕೆ.ಎ.1505 ಇರುತ್ತದೆ ಅದರ ಸವಾರನೂ ಅಲ್ಲೇ ಇದ್ದು ಆತನ ಹೆಸರು ಅಂಬ್ರೇಶ ತಂದೆ ಶಿವಪ್ಪ ಹಾಲಭಾವಿ ಸಾ: ದಿಗ್ಗಿ ತಾ: ಶಹಾಪರ ಅಂತಾ ಹೇಳಿದನು. ಆಗ ನಾನು ಮತ್ತು ಹರೀಶ ಆಲ್ದಾಳ ಇಬ್ಬರು ಕೂಡಿ ನಮ್ಮ ತಂದೆಯವರಿಗೆ ಅಲ್ಲಿಂದ ಶಹಾಪುರದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ಅಲ್ಲಿನ ವೈದ್ಯಯ ಸಲಹೆಯ ಮೇರೆಗೆ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ನಮ್ಮ ತಂದೆಯವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾನು ಇಲ್ಲಿಯ ವರೆಗೆ ನಮ್ಮ ತಂದೆಯವರೊಂದಿಗೆ ಉಪಚಾರಕ್ಕಾಗಿ ಇದ್ದು ಇದು ದಿನಾಂಕ: 26-08-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ದಿನಾಂಕ: 21-08-2021 ರಂದು 7:00 ಪಿ.ಎಮ್.ಕ್ಕೆ ಜೀವೇಶ್ವರ ಕಲ್ಯಾಣ ಮಂಟಪದ ಹತ್ತಿರ ನಮ್ಮ ತಂದೆಯವರು ನಡೆದುಕೊಂಡು ಮನೆಯ ಕಡೆ ಹೊರಟಾಗ ಎದುರಿನಿಂದ ಸ್ಕೂಟಿ ನಂ. ಕೆ.ಎ.02-ಕೆ.ಎ.1505 ನೇದ್ದರ ಚಾಲಕ ಅಂಬ್ರೇಶನು ತನ್ನ ಸ್ಕೂಟಿಯನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ಡಿಕ್ಕಿ ಪಡಿಸಿ ಭಾರಿ ಗಾಯ ಮಾಡಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.198/2021 ಕಲಂ 279, 338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 199/2021 ಕಲಂ 78 (3) ಕೆ.ಪಿ ಆಕ್ಟ್ : ಇಂದು ದಿನಾಂಕ 26/08/2021 ರಂದು, ಮಧ್ಯಾಹ್ನ 15-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಶಾಮಸುಂದರ ಪಿ.ಎಸ.ಐ ಶಹಾಪೂರ ಪೊಲೀಸ್ ಠಾಣೆ ರವರು, ಕನ್ನಡದಲ್ಲಿ ಟೈಪ್ ಮಾಡಿದ ವರದಿ ಸಲ್ಲಿಸಿದ್ದೇನೆಂದರೆ, ನಾನು ಇಂದು ದಿನಾಂಕ: 26/08/2021 ರಂದು, ಮಧ್ಯಾಹ್ನ 14-00 ಗಂಟೆಗ ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಚಟ್ನಳ್ಳಿ ಗ್ರಾಮದ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಪರಿಚತ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತಿದ್ದಾನೆ ಅಂತಾ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂಬರ 50/2021 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ನೋಂದಣಿ ಮಾಡಿಕೊಂಡು, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಪೂರ ರವರಿಗೆ ಪತ್ರ ಬರೆದು ವಿನಂತಿಸಿಕೊಂಡ ಮೇರೆಗೆ, ಮಾನ್ಯ ನ್ಯಾಯಾಲಯವು ಇಂದು ಮಧ್ಯಾಹ್ನ 14-45 ಗಂಟೆಗೆ ಅನುಮತಿ ನೀಡಿರುತ್ತಾರೆ. ಕಾರಣ ಮಟಕಾ ನಂಬರ ಬರೆದುಕೊಳ್ಳುವ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿಯವರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 199/2021 ಕಲಂ 78(3) ಕೆ.ಪಿಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.ನಂತರ ದಾಳಿ ಮಾಡಿ ಆರೋಪಿತನಿಂದ ನಗದು ಹಣ 1180=00ರೂಪಾಯಿ ಮತ್ತು ಒಂದು ಬಾಲ್ ಪೆನ್ ಹಾಗೂ ಎರಡು ಮಟಕಾ ಚೀಟಿಗಳು ಜಪ್ತಿ ಪಡಿಸಿಕೊಂಡು ಆರೋಪಿ ಮತ್ತು ಮುದ್ದೆಮಾಲು ಹಾಜರ ಪಡಿಸಿರುತ್ತಾರೆ.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 138/2021 ಕಲಂ 448 323 354 312 504 506 ಸಂ 34 ಐಪಿಸಿ : ಇಂದು ದಿನಾಂಕ: 26.08.2021 ರಂದು 12.30 ಪಿ.ಎಮ್.ಕ್ಕೆ ಪಿರ್ಯಾಧಿಯು ತನ್ನ ಮನೆಯಲ್ಲಿದ್ದಾಗ ಆರೋಪಿತರು ಪಿರ್ಯಾಧಿಯ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈ ಮತ್ತು ಕೂದಲು ಹಿಡಿದು ಎಳಿದಾಡಿ ಮಾನಬಂಗ ಪಡಿಸಲು ಪ್ರಯತ್ನಿಸಿ ಪಿರ್ಯಾಧಿಯು ಗರ್ಭವತಿ ಅಂತ ಗೊತ್ತಿದ್ದು ಅಳಿಗೆ ಗರ್ಭಪಾತ ಮಾಡುವ ಉದ್ದೇಶದಿಂದ ಅವಳ ಹೊಟ್ಟೆಗೆ ಬೆನ್ನಿಗೆ ಒದ್ದು ಜೀವಬೆದರಿಕೆ ಹಾಕಿಹೋದ ಬಗ್ಗೆ ಪಿರ್ಯಾಧಿ ವಗೈರೆ ಸಾರಾಂಶ ಇರುತ್ತದೆ.

 

ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ 132/2021 ಲಂ 380 ಐ.ಪಿ.ಸಿ : ಇಂದು ದಿನಾಂಕ: 26/08/2021 ರಂದು 8 ಪಿ.ಎಂಕ್ಕೆ ಫಿಯರ್ಾದಿ ಶ್ರೀಬೈಲಪ್ಪ ತಂದೆ ಹಣಮಂತ ಹದಗಲ್ ವ|| 40 ವರ್ಷ ಜಾ|| ಯಾದವ ಉ|| ಒಕ್ಕಲುತನ ಸಾ|| ಪೇಠ ಅಮ್ಮಾಪೂರ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಸಾರಾಂಶವೇನೆಂದರೆ, ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಇದ್ದು, ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಮಲ್ಲಮ್ಮ, ನನ್ನ ತಮ್ಮ ಸಂಗಯ್ಯ, ತಮ್ಮನ ಹೆಂಡತಿ ನರಸಮ್ಮ, ನಮ್ಮ ತಂದೆ ಹಣಮಂತ, ತಾಯಿ ಲಕ್ಷ್ಮಿ ನಾವೆಲ್ಲರು ಒಂದೆ ಮನೆಯಲ್ಲಿ ವಾಸವಾಗಿರುತ್ತೆವೆ, ನಿನ್ನೆ ದಿನಾಂಕ:25/08/2021 ರಂದು ನಾವೆಲ್ಲರು ರಾತ್ರಿ 10:00 ಗಂಟೆಗೆ ಊಟ ಮಾಡಿ 11:00 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದ್ದು ನಂತರ ಇಂದು ದಿನಾಂಕ: 26/08/2021 ರಂದು ಬೆಳಗಿನ ಜಾವ 04:00 ಎ.ಎಂ ಸುಮಾರಿಗೆ ನನ್ನ ತಮ್ಮನ ಹೆಂಡತಿ ನರಸಮ್ಮ ಇವರು ನೈಸಗರ್ಿಕ ಕ್ರೀಯೇಗೆ ಹೊಗಿ ಮರಳಿ ಮನೆಯನಲ್ಲಿ ಬಂದಾಗ ಮನೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯಲ್ಲಿನ ಸಾಮಾನುಗಳನ್ನು ಚಲ್ಲಾಪಿಲ್ಲಿ ಆಗಿದ್ದರಿಂದ, ತಮ್ಮನ ಹೆಂಡತಿ ನರಸಮ್ಮ ಇವಳು ನಮ್ಮೆಲ್ಲರಿಗೆ ಎಬ್ಬಿಸಿ ಮನೆಯಲ್ಲಿನ ಸಾಮಾನುಗಳು ಚಲ್ಲಾಪಿಲ್ಲಿ ಆಗಿರುತ್ತವೆ, ನಾನು ಬೆಳಗಿನ ಜಾವ 04:00 ಸಮಾರಿಗೆ ನೈಸಗರ್ಿಕ ಕ್ರೀಯೇಗೆ ಹೊಗಿ ಮರಳಿ ಬಂದಾಗ ಕಬ್ಬಿಣದ ಪೆಟ್ಟಿಗೆಯಲ್ಲಿದ್ದ ಸಾಮಾನುಗಳು ಚಲ್ಲಾಪಿಲ್ಲಿ ಆಗಿರುತ್ತವೆ ಅಂತಾ ತಿಳಿಸಿದ್ದರಿಂದ, ನಾವು ನೋಡಲಾಗಿ ಅದರಲ್ಲಿದ್ದ 1) 5 ಗ್ರಾಮ್ನ ಮೂರು ಬಂಗಾರದ ಸುತ್ತುಗುಂಗರಗಳು ಅ.ಕಿ 60,000/- 2) 10 ಗ್ರಾಮ್ದ ಒಂದು ಬಂಗಾರದ ನಕ್ಲೇಸ್ ಅ.ಕಿ 40,000/-, 3) 9 ಗ್ರಾಮ್ನ ಒಂದು ಬಂಗಾರದ ಬೋರಮಳ ಅ.ಕಿ 35,000/-, ಹಿಗೆ ಒಟ್ಟು 1,35,000/- ರೂ.ಗಳ ಕಿಮ್ಮತ್ತಿನ ಬಂಗಾರದ ಆಭರಣಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಘಟನೆಯು ದಿನಾಂಕ:25/08/2021 ರಂದು ರಾತ್ರಿ 11 ಗಂಟೆಯಿಂದ ದಿನಾಂಕ:26/08/2021 ರಂದು ಬೆಳಗಿನ ಜಾವ 4 ಗಂಟೆಯ ಅವದಿಯಲ್ಲಿ ಘಟನೆ ಜರುಗಿರುತ್ತದೆ.ಕಾರಣ ನಮ್ಮ ಮನೆಯ ಒಳಗಡೆ ಪ್ರವೇಶ ಮಾಡಿ ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟ ಬಂಗಾರದ ಆಭರಣಗಳ ಒಟ್ಟು ಅ.ಕಿ 1,35,000/- ರೂಪಾಯಿ ನೇದ್ದವುಗಳನ್ನು ಕಳ್ಳತನ ಮಾಡಿದ ಅಪರಿಚಿತ ಕಳ್ಳರ ವಿರುದ್ದ ಕ್ರಮ ಕೈಕೊಂಡು ಪತ್ತೆ ಮಾಡಲು ಮಾನ್ಯರವರಲ್ಲಿ ವಿನಂತಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 132/2021 ಕಲಂ 380 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.

 


ಕೊಡೇಕಲ್ ಪೊಲೀಸ ಠಾಣೆ
ಗುನ್ನೆ ನಂ. 47/2021 ಕಲಂ: 78(3) ಕೆ.ಪಿ ಆಕ್ಟ್ : ಇಂದು ದಿನಾಂಕ:26.08.2021 ರಂದು 6:00 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ವೆಂಕಟೇಶ ಹುಗಿಬಂಡಿ ಡಿಎಸ್ಪಿ ಸಾಹೇಬರು ಸುರಪೂರ ಉಪವಿಭಾಗ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ಇಂದು ದಿನಾಂಕ:26.08.2021 ರಂದು 4:00 ಪಿ.ಎಮ್.ಕ್ಕೆ ನಾನು ನನ್ನ ಕಾಯರ್ಾಲಯದಲ್ಲಿದ್ದಾಗ ಕೊಡೇಕಲ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕಕ್ಕೇರಾ ಪಟ್ಟಣದ ಶ್ರೀ ಮಹಷರ್ಿ ವಾಲ್ಮೀಕಿ ವೃತ್ತದ ಹತ್ತಿರ ಸಾರ್ವಜನಿಕ ಮುಖ್ಯ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗಿ ಕರೆದು ಸಾರ್ವಜನಿಕರಿಂದ ಹಣವನ್ನು ಪಡೆದು ಮಟಕಾ ಚೀಟಿ ಬರೆದು ಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದಿದ್ದು ನಾನು ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ ಪ್ರತಿಯು 4:45 ಪಿ.ಎಮ್ಕ್ಕೆ ವಸೂಲಾಗಿದ್ದು ನಾನು ಸದರ ಅನುಮತಿ ಪತ್ರದೊಂದಿಗೆ 5:55 ಪಿಎಮ್ಕ್ಕೆ ಠಾಣೆಗೆ ಬಂದಿದ್ದು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಕೊಡೆಕಲ್ಲ ಪೊಲೀಸ್ ಠಾಣಾ ಗುನ್ನೆ ನಂ:47/2021 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. ಮೈನುದ್ದೀನ್ ತಂದೆ ನಿಜಾಮುದ್ದೀನ್ ಖಾಜಿ ವ:55 ವರ್ಷ, ಉ:ಒಕ್ಕಲುತನ, ಜಾ:ಮುಸ್ಲಿಂ, ಸಾ|| ಕಕ್ಕೇರಾ ತಾ||ಸುರಪೂರ ಜಿ||ಯಾದಗಿರಿ
ಜಪ್ತು ಪಡಿಸಿಕೊಂಡ ಮುದ್ದೆಮಾಲು.1) ನಗದು ಹಣ=69,960/- ರೂ

ಇತ್ತೀಚಿನ ನವೀಕರಣ​ : 27-08-2021 10:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080