ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 27-08-2022

 

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 102/2022 ಕಲಂ 498(ಎ), 302 & 34 ಐಪಿಸಿ: ಇಂದು ದಿನಾಂಕ 26.08.2022 ರಂದು ಮಧ್ಯಾಹ್ನ 2 ಗಂಟೆಗೆ ಮಾರುತಿ ತಂದೆ ಹಣಮಂತ ವಡ್ಡರ ವಯ|| 54 ವರ್ಷ, ಜಾತಿ|| ವಡ್ಡರ ಉ|| ಕೂಲಿಕೆಲಸ ಸಾ|| ರಾಂಪೂರ ಜಿ. ಗ್ರಾಮ ಹಾ|| ವ|| ಬೆಂಗಳೂರು ಇವರು ಕೊಟ್ಟ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ನನ್ನ ಮಗಳಾದ ಕುರುಮಮ್ಮ @ಅನಸುಯ್ಯಾ ಇವಳಿಗೆ ಕಳೆದ ಸುಮಾರು 4 ವರ್ಷಗಳ ಹಿಂದೆ ಯಲಸತ್ತಿ ಗ್ರಾಮದ ಅಂಜಪ್ಪ ತಂದೆ ಹಣಮಂತ ವಡ್ಡರ ಈತನಿಗೆ ಕೊಟ್ಟು ಮದುವೆ ಮಾಡಿದ್ದೇವು. ಅವರ 4 ವರ್ಷದ ವೈವಾಹಿಕ ಜೀವನದಲ್ಲಿ ಅರುಣಕುಮಾರ 2 ವರ್ಷ ಅಂತಾ ಒಬ್ಬ ಗಂಡು ಹುಡುಗ ಇದ್ದಾನೆ. ನನ್ನ ಮಗಳು ಈಗ 8 ತಿಂಗಳ ಗಭರ್ಾವತಿ ಇದ್ದಳು. ಹೀಗಿದ್ದು ನಿನ್ನೆ ದಿನಾಂಕ 25.08.2022 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಯಲಸತ್ತಿ ಗ್ರಾಮದ ಶಂಕರಗೌಡ ಎಂಬುವವರು ನನಗೆ 9900166888 ಸಂಖ್ಯೆಯಿಂದ ಫೋನ ಮಾಡಿ ನಿನ್ನ ಮಗಳಿಗೆ ಗಂಡ ಮತ್ತು ಅವರ ಮನೆಯವರು ಹೊಡೆದು, ಕರೆಂಟ್ ಶಾಟ್ ಹೊಡೆದಿದೆ ಅಂತಾ ಸುಳ್ಳು ಹೇಳುತ್ತಿದ್ದಾರೆ ನಿನ್ನ ಮಗಳು ಬೇವಾಸ ಆಗಿ ಸೀರಿಯಸ್ ಇದ್ದಾಳೆ ಬೇಗ ಬಾ ಅಂತಾ ತಿಳಿಸಿದ. ಕೆಲ ಸಮಯದ ನಂತರ ಪುನ: ಅವರೇ ನನಗೆ ಫೋನ ಮಾಡಿ ನನ್ನ ಮಗಳು ಸತ್ತಿರುವ ವಿಷಯ ತಿಳಿಸಿದರು. ನಾನು ಮತ್ತು ನನ್ನ ಹೆಂಡತಿ ಲಕ್ಷ್ಮೀ ರೈಲಿನ ಮೂಲಕ ಯಾದಗಿರಿ ಕಡೆಗೆ ಬರುವಾಗ ನನ್ನ ಮಗಳ ಮೃತದೇಹ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಇದ್ದ ವಿಷಯ ಗೊತ್ತಾಗಿ ನಾವು ಬೆಳಿಗ್ಗೆ 7-40 ಕ್ಕೆ ಆಸ್ಪತ್ರೆಯ ಶವಾಗಾರ ಕೋಣೆಗೆ ಹೋಗಿ ನನ್ನ ಮಗಳ ಮೃತದೇಹ ನೋಡಿದೆವು. ನನ್ನ ಮಗಳಿಗೆ ಮದುವೆ ಮಾಡಿಕೊಟ್ಟ ಒಂದು ತಿಂಗಳ ನಂತರ ಗಂಡ ಮತ್ತು ಅವರ ಮನೆಯವರು ನನ್ನ ಮಗಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು. ಇಂದಿಲ್ಲ ನಾಳೆ ಎಲ್ಲಾ ಸರಿ ಹೋಗುತ್ತದೆ ಅಂತಾ ನಾವು ನನ್ನ ಮಗಳಿಗೆ ಸಮಾಧಾನ ಮಾಡಿ ಗಂಡನ ಮನೆಗೆ ಕಳಿಸುತ್ತಿದ್ದೆವು. ಈ ವಿಷಯದಲ್ಲಿ ನಮ್ಮೂರಲ್ಲಿ ನ್ಯಾಯ ಪಂಚಾಯತಿ ಸಹ ಮಾಡಿದ್ದು ಇದೆ. ನಿನ್ನೆ ದಿನಾಂಕ 25.08.2022 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನನ್ನ ಮಗಳಾದ ಕುರುಮಮ್ಮ @ ಅನಸುಯ್ಯಾ ಗಂಡ ಅಂಜಪ್ಪ ವಡ್ಡರ ವಯ|| 24 ವರ್ಷ ಇವಳಿಗೆ 1. ಅಂಜಪ್ಪ ತಂದೆ ಹಣಮಂತ ವಡ್ಡರ ವಯ|| 25 ವರ್ಷ, ಉ|| ಕೂಲಿಕೆಲಸ (ಗಂಡ) 2. ಬನ್ನಪ್ಪ ತಂದೆ ಹಣಮಂತ ವಡ್ಡರ ವಯ|| 20 ವರ್ಷ, ಉ|| ಕೂಲಿಕೆಲಸ (ಮೈದುನ) 3. ಅನಂತಮ್ಮ ಗಂಡ ಹಣಮಂತ ವಡ್ಡರ ವಯ|| 60 ವರ್ಷ, (ಅತ್ತೆ) 4. ಶ್ರೀನಿವಾಸ ತಿರಲಾಪೂರ (ನನ್ನ ಮಗಳ ಗಂಡನ ಚಿಕ್ಕಪ್ಪ) ಇವರು ಯಲಸತ್ತಿ ಗ್ರಾಮದ ತಮ್ಮ ಮನೆಯಲ್ಲಿ ಹೊಡೆದು ಕೊಲೆ ಮಾಡಿ ವಿದ್ಯುತ್ ತಂತಿ ಕೈಯಲ್ಲಿ ಕೊಟ್ಟು ಕೊಲೆ ಮಾಡಿರುತ್ತಾರೆ. ಆದ ಕಾರಣ ಮೇಲ್ಕಂಡ 4 ಜನರ ವಿರುದ್ದ ಕೊಲೆ ಪ್ರಕರಣ ದಾಖಲಿಸಿ ಅವರನ್ನು ಕೂಡಲೇ ಬಂಧಿಸಬೇಕೆಂದು ಕೇಳಿಕೊಳ್ಳುತ್ತೇವೆ. ಅಂತಾ ಆಪಾದನೆ.

ಇತ್ತೀಚಿನ ನವೀಕರಣ​ : 27-08-2022 11:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080