ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 27-09-2022
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 106/2022 ಕಲಂ 279, 337, 338, 304(ಎ) ಐಪಿಸಿ : ದಿನಾಂಕ 20.09.2022 ರಂದು ಸಾಯಂಕಾಲ 5 ಗಂಟೆಗೆ ದೇವಿಂದ್ರಪ್ಪ ತಂದೆ ಶಂಕ್ರಪ್ಪ ಕೌಳೂರು, ವ|| 32 ವರ್ಷ, ಜಾ|| ಕುರುಬರು, ಉ|| ಕೂಲಿಕೆಲಸ, ಸಾ|| ಕನಕನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ತನ್ನ ಅಕ್ಕ ಭಾಗಮ್ಮ ಗಂಡ ನಿಂಗಪ್ಪ ಹಾಗೂ ಇನ್ನಿತರರು ಕೂಡಿ ತಮ್ಮ ಸಂಬಂಧಿಕರೊಬ್ಬರ ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾದಗಿರಿಯಿಂದ ಮುನಗಲ್ ಗ್ರಾಮದ ಕಡೆಗೆ ಆಟೋ ವಾಹನ ಸಂಖ್ಯೆ ಕೆಎ-33-ಬಿ-0172 ವಾಹನದಲ್ಲಿ ಹೋಗುವಾಗ ಆಪಾದಿತ ಆಟೋ ಚಾಲಕ ತನ್ನ ಆಟೋ ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಆಟೋ ನಿಯಂತ್ರಿಸದೆ ದಿನಾಂಕ 18.09.2022 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಿಲ್ಲನಕೇರಾ ಗೇಟ ಸಮೀಪ ಮುಖ್ಯ ರಸ್ತೆಯ ಮೇಲೆ ಆಟೋ ಪಲ್ಟಿಮಾಡಿರುತ್ತಾನೆ. ರಸ್ತೆ ಅಪಘಾತ ದುರ್ಘಟನೆಯಲ್ಲಿ ಆಟೋ ವಾಹನದಲ್ಲಿದ್ದ ಚಾಲಕ ಸಮೇತ 9 ಜನರಿಗೆ ಗಂಭೀರ ಮತ್ತು ಸಾದ ಸ್ವರೂಪದ ಗಾಯಗಳಾಗಿರುತ್ತವೆ. ಗಾಯಾಳು ಜನರಿಗೆ ಉಪಚಾರ ಮಾಡಿಸುವ ಕೆಲಸದಲ್ಲಿ ನಿರತನಾಗಿದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದೆ. ಅಂತಾ ವಗೈರೆ ಆಪಾದನೆ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು ಇತ್ತು.
ರಸ್ತೆ ಅಪಘಾತ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ರಾಯಚೂರು ಆರಾಧನಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಭೀಮಮ್ಮ ಗಂಡ ಮಹಾದೇವಪ್ಪ ಯಾದಗಿರಿ ಇವಳು ರಸ್ತೆ ಅಪಘಾತ ಕಾಲಕ್ಕೆ ಆದ ಗಾಯಗಳ ನೋವನುಭವಿಸಿ ಇಂದು ದಿನಾಂಕ 26.09.2022 ರಂದು 0030 ಗಂಟೆ ಸುಮಾರಿಗೆ ರಾಯಚೂರು ಆರಾಧನಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ. ಕಾರಣ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 109/2022 ಕಲಂ 341, 323, 324, 504, 506 ಐಪಿಸಿ : ಇಂದು ದಿನಾಂಕ 26.09.2022 ರಂದು ಮಧ್ಯಾಹ್ನ 1.00 ಗಂಟೆ ಸುಮಾರಿಗೆ ಶಿವಮ್ಮ ಗಂಡ ತಾಯಪ್ಪ ದನಕಾಯಿ ಸಾ|| ಸೌರಾಷ್ಟ್ರಹಳ್ಳಿ ಗ್ರಾಮ ಇವಳು ಠಾಣೆಗೆ ಬಂದು ನೀಡಿದ ಫಿಯರ್ಾದಿ ಹೇಳಿಕೆ ಸಾರಾಂಶವೇನೆಂದರೆ, ದಿನಾಂಕ 17.09.2022 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ನಾನು ನಮ್ಮ ಹೊಲದಲ್ಲಿದ್ದಾಗ ಅಲ್ಲಿಗೆ ನನ್ನ ಕಿರಿಯ ಮಗನಾದ ಭೀಮಪ್ಪ ತಂದೆ ತಾಯಪ್ಪ ದನಕಾಯಿ ವಯ|| 39 ವರ್ಷ ಇವನು ಅಲ್ಲಿಗೆ ಬಂದಾಗ ನನ್ನ ಹೊಲದ ಸಮೀಪ ಬರಬೇಡ ನೀವು ನನ್ನ ಹೊಲ ಮಾರಿದ್ದಕ್ಕೆ ಕೇಸು ಮಾಡಿದ್ದೀರಿ ಅಂತ ಅಂದಿದ್ದಕ್ಕೆ. ನನ್ನ ಮಗ ನನ್ನನ್ನು ಹೊಲದಿಂದ ಹೊರಗಡೆ ದಬ್ಬಿ ಹೊಲದಲ್ಲಿ ಬರದಂತೆ ತಡೆದು, ಈ ಜಮೀನು ನಮ್ಮಪ್ಪನದು ಇಲ್ಲಿ ನಾನು ಯಾರಿಗೂ ಬರಲು ಬಿಡುವದಿಲ್ಲ ಮತ್ತು ಯಾರಿಗೂ ಮಾರಾಟ ಮಾಡಲು ಬಿಡುವದಿಲ್ಲ ಅಂತ ಜಗಳ ಮಾಡಿ ಅಲ್ಲಿ ಬಿದ್ದಿದ್ದ ಒಂದು ಕಟ್ಟಿಗೆಯಿಂದ ನನ್ನ ಎಡಗಾಲಿಗೆ ಜೋರಾಗಿ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತೆ ಅದೇ ಬಡಿಗೆಯಿಂದ ನನ್ನ ಬಲಗಾಲಿಗೆ ಮತ್ತು ಎಡಗೈಗೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ. ನನ್ನನ್ನು ಎರಡು ಕೈಯಿಂದ ನೂಕಿಸಿಕೊಟ್ಟು ಕೆಳಗೆ ಬೀಳಿಸಿರುತ್ತಾನೆ. ಇನ್ನೊಮ್ಮೆ ನೀನು ಹೊಲದ ಸಮೀಪ ಬಂದರೆ ಇಲ್ಲೆ ನಿನ್ನ ಇಲ್ಲೆ ಹೂತು ಹಾಕುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದನು. ನನ್ನ ಮಗನಿಂದ ನನಗೆ ಇನ್ನೂ ಜೀವ ಭಯ ಇದ್ದುದ್ದರಿಂದ ಮನೆಯಲ್ಲಿ ವಿಚಾರ ಮಾಡಿಕೊಂಡು ಠಾಣೆಗೆ ಬಂದಿರುತ್ತೇನೆ. ನನಗೆ ಹೊಡೆಬಡೆ ಮಾಡಿ ದು:ಖಪತಗೊಳಿಸಿದ ನನ್ನ ಮಗನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂತಾ ನೀಡಿದ ಫಿಯರ್ಾದಿ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 109/2022 ಕಲಂ 341, 323, 324, 504, 506 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 142/2022, ಕಲಂ, 341, 323, 504.506. ಸಂಗಡ 34 ಐ ಪಿ ಸಿ : ದಿನಾಂಕ: 26-09-2022 ರಂದು ಸಾಯಂಕಾಲ 06-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನಿಡಿದ ಸಾರಂಶವೆನೆಂದರೆ ದಿನಾಂಕ: 23-09-2022 ರಂದು ಮದ್ಯಾಹ್ನ 03-40 ಗಂಟೆ ಸುಮಾರಿಗೆ ಸರಕಾರಿ ಶಾಲೆಯ ಹತ್ತಿರ ಹೊಲಕ್ಕೆ ಹೋಗುತ್ತಿರುವಾಗ ಆರೋಪಿತರು ಶಾಲೆ ಮಾಸ್ತಾರ ಸಂಗಡ ಬಾಯಿ ಮಾಡುತಿದ್ದು ಅದಕ್ಕೆ ನಾನು ಯಾಕೆ ಶಾಲೆಗೆ ಕಲ್ಲು ಹೊಡೆದಿದ್ದಿ ಅಂತಾ ಕೇಳಿದ್ದಕ್ಕೆ ಆರೋಪಿತರು ಲೇ ಸೂಳೆ ಮಗನೆ ನಿನು ಏನ ಕೆಳುತ್ತಲೆ ಅಂತಾ ಬೈದು ಕೈಯಿಂದ ಮುಷ್ಟಿ ಮಾಡಿ ಹೊಡೆದು ನಿನಗೆ ಜೀವ ಸಹಿತ ಬಿಡುವದಿಲ್ಲ ಮಗನೆ ಅಂತಾ ಬೈದು ಅಡ್ಡಗಟ್ಟಿ ನಿಲ್ಲಿಸಿ ನೆಲಕ್ಕೆ ಬಿಳಿಸಿ ಕಾಲಿನಿಂದ ಒದ್ದು ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ
ಸಿ.ಇ.ಎನ್ ಪೊಲೀಸ್ ಠಾಣೆ ಯಾದಗಿರಿ:-
ಗುನ್ನೆ ನಂ: 07/2022 ಕಲಂ 66(ಸಿ) 66(ಡಿ) ಐ.ಟಿ. ಕಾಯ್ದಿ ಮತ್ತು 419, 420 ಐಪಿಸಿ : ಪಿಯರ್ಾದಿದಾರರು ದಿನಾಂಕ31-08-2022 ರಂದು ಸಂಜೆ 5-30 ಪಿ.ಎಮ್. ಕ್ಕೆ ಅವರ ಮೊಬೈಲ್ನಲ್ಲಿ ಹೊಂದಿರುವ ಎಸ್.ಬಿ.ಐ. ಖಾತೆ ಸಂಖ್ಯೆ 62078313581 ನೇದ್ದರಲ್ಲಿ 1] 25,000.00 2] 50,000.00 ಮತ್ತು 3] 25,000.00 ರೂಪಾಯಿಗಳು ಕಡಿತವಾಗಿರುವ ಬಗ್ಗೆ ಎಸ್.ಎಮ್.ಎಸ್. ಬಂದಿದ್ದು, ಹಾಗೂ ಅವರ ಮೋಬೈಲ್ ಸಂಖ್ಯೆ 9901546188 ನೇದ್ದನ್ನು ನನ್ನದೇ ಆದ ಇನ್ನೊಂದು ಎಸ್.ಬಿ.ಐ. ಖಾತೆ ಸಂಖ್ಯೆ : 34548735281 ನೇದ್ದಕ್ಕೆ ಲಿಂಕ್ ಮಾಡಿದ್ದು, ಸದರಿ ಖಾತೆಯಲ್ಲಿಯು ಸಹ 8,000.00 ರೂಪಾಯಿಗಳು ವಗರ್ಾವಣೆಯಾಗಿರುತ್ತದೆ. ಅವರ ಮಗಳಾದ ಕುಮಾರಿ ಸಿ. ಅನಿತಾ ರವರು ಸಹ ಗುರಮಿಠಕಲ್ ಎಸ್.ಬಿ.ಐ. ಶಾಖೆಯಲ್ಲಿ ಎಸ್.ಬಿ. ಖಾತೆ ಸಂಖ್ಯೆ : 62205084932 ಖಾತೆಯನ್ನು ಹೊಂದಿದ್ದು, ಸದರಿ ಖಾತೆಗೂ ಸಹ ವರ ಮೊಬೈಲ್ ಲಿಂಕ್ ಆಗಿದ್ದು, ಸದರಿ ಖಾತೆಯಿಂದಲೂ ಸಹ 1,200.00 ರೂಪಾಯಿ ಕಡಿತವಾಗಿರುತ್ತದೆ. ಆಗ ನಾನು ಗಾಬರಿಗೊಂಡು 6295110364 ನೇದ್ದಕ್ಕೆ ಹಲವು ಬಾರಿ ಕರೆ ಮಾಡಲು ಪ್ರಯತ್ನ ಮಾಡಿದಾಗ ಸ್ವಿಚ್ ಆಫ್ ಆಗಿದ್ದು, ನಾನು ಅಂತಜರ್ಾಲದಲ್ಲಿ ಮೋಸ ಹೋಗಿರುವ ಬಗ್ಗೆ ಅರಿವಾಗಿದ್ದು, ತಕ್ಷಣ ನಾನು ಭಾರತ ಸರಕಾರದ ಆನ್ಲೈನ್ ಸೈಬರ್ ಅಪರಾದ ರಿಪೊಟಿಂಗ್ ಪೊರ್ಟಲ್ ಉಚಿತ ಸಂಖ್ಯೆ 1930 ಗೆ ಕರೆ ಮಾಡಿ ಎಮ್.ಎಚ್.ಎ. ಯಲ್ಲಿ ದೂರು ಸಲ್ಲಿಸಿದ್ದು, ಸ್ವಿಕೃತಿ ಸಂಖ್ಯೆ : 31608220011985 ನೀಡಿರುತ್ತಾರೆ. ದಿನಾಂಕ : 01-09-2022 ರಂದು ನಾನು ಗುರಮಿಠಕಲ್ ಪಟ್ಟಣದ ಎಸ್.ಬಿ.ಐ. ಬ್ಯಾಂಕ್ಗೆ ಹೋಗಿ ವ್ಯವಸ್ಥಾಪಕರಿಗೆ ಬೇಟಿ ಮಾಡಿ ನಮ್ಮ ಮೂರು ಎಸ್.ಬಿ. ಖಾತೆಗಳಿಂದ ದಿನಾಂಕ : 31-08-2022 ರಂದು ಒಟ್ಟು ರೂಪಾಯಿ 1,09,202.00 ಗಳನ್ನು ಒಟ್ಟು ಐದು ಬಾರಿ ವಗರ್ಾವಣೆ ಆಗಿರುವ ಬಗ್ಗೆ ವಿಚಾರಿಸಲಾಗಿ ವ್ಯವಸ್ಥಾಪಕರು ನನ್ನ ಮೊಬೈಲ್ನಲ್ಲಿರುವ ಎಸ್.ಎಮ್.ಎಸ್. ಗಳನ್ನು ಮತ್ತು ಬ್ಯಾಂಕ್ ಸ್ಟೇಟಮಿಂಟ್ಗಳನ್ನು ನೋಡಿ ನಿಮಗೆ ಅಂತಜರ್ಾಲದಲ್ಲಿ ಯಾರೋ ಅಪರಿಚಿತರು ಮೊಸ ಮಾಡಿರುತ್ತಾರೆ ಅಂತಾ ಇತ್ಯಾದಿ ದೂರು ಅಜರ್ಿಯ ಸಾರಾಂಶವಿರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 147/2022 ಕಲಂ: 279, 337, 338 ಐಪಿಸಿ : ಇಂದು ದಿನಾಂಕ 26/09/2022 ರಂದು 1.00 ಪಿಎಮ್ ಕ್ಕೆ ಅಜರ್ಿದಾರರಾದ ಗೋವಿಂದ ತಂದೆ ಬಸವರಾಜ ಸೂರ್ಯವಂಶಿ ವ|| 24ವರ್ಷ ಜಾ|| ಗೊಂದಳಿ ಉ|| ವ್ಯಾಪಾರ ಸಾ|| ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕರಿಸಿದ ಅಜರ್ಿ ನೀಡಿದ್ದು ಸದರಿ ಫಿಯರ್ಾದಿಯ ಸಾರಾಂಶವೇನೆಂದರೆ, ನಾನು ಬಾಂಡೆ ವ್ಯಾಪಾರ ಮಾಡಿಕೊಂಡು ಕುಟುಂಬದೊಂದಿಗೆ ಇದ್ದು ಉಪಜೀವನ ಸಾಗಿಸುತ್ತಿದ್ದೇನೆ. ಹೀಗಿದ್ದು ನಿನ್ನೆ ದಿನಾಂಕ 25/09/2022 ರಂದು 3.00 ಪಿಎಂ ಸುಮಾರಿಗೆ ನಮ್ಮ ಅಟೋ ತೆಗೆದುಕೊಂಡು ಬಾಂಡೆ ವ್ಯಾಪಾರ ಮಾಡಲು ನಾನು ಮತ್ತು ನಮ್ಮ ತಂದೆಯಾದ ಬಸವರಾಜ ತಂದೆ ಗೋವಿಂದಪ್ಪ ಸೂರ್ಯವಂಶಿ ವ|| 55ವರ್ಷ ಜಾ|| ಗೊಂದಳಿ ಉ|| ವ್ಯಾಪಾರ ಸಾ|| ಕೆಂಭಾವಿ ಇಬ್ಬರೂ ಕೂಡಿ ನಮ್ಮ ಅಟೋ ನಂ ಕೆಎ 28 ಬಿ 3114 ನೇದ್ದರಲ್ಲಿ ಕೆಂಭಾವಿಯಿಂದ ಮುದನೂರ ಕಡೆಗೆ ಹೋಗುತ್ತಿದ್ದು, ನಾನು ಅಟೋ ನಡೆಸುತ್ತಿದ್ದು ನಮ್ಮ ತಂದೆಯು ಅಟೋದಲ್ಲಿ ಹಿಂದೆ ಕುಳಿತಿದ್ದನು. ನಾವು 3.20 ಪಿಎಂ ಸುಮಾರಿಗೆ ಮುದನೂರ ಕ್ರಾಸಿನ ಹತ್ತಿರ ಇರುವ ಚೌದ್ರಿ ಮುತ್ಯಾ ರವರ ಪೆಟ್ರೋಲ್ ಪಂಪ್ ಮುಂದೆ ರಸ್ತೆಯ ಮೇಲೆ ಹೋಗುತ್ತಿದ್ದಾಗ ಹಿಂದಿನಿಂದ ಒಬ್ಬ ಕಾರಿನ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ನಮ್ಮ ಅಟೋಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದು ಅಪಘಾತದಿಂದಾಗಿ ಅಟೋ ಪಲ್ಟಿಯಾಗಿ ಅಟೋದಲ್ಲಿದ್ದ ನಮ್ಮ ತಂದೆಯಾದ ಬಸವರಾಜನು ಕೆಳಗೆ ಬಿದ್ದು ನಮ್ಮ ತಂದೆಯ ಹಣೆಗೆ ಭಾರೀ ರಕ್ತಗಾಯ, ಬಲಗೈಗೆ, ಬಲಗಾಲಿಗೆ ಗುಪ್ತಗಾಯವಾಗಿದ್ದು, ನನಗೆ ಎಡಗೈಗೆ ತರಚಿದ ಗಾಯ, ಬಲಗಾಲಿಗೆ, ಹೊಟ್ಟೆಗೆ ಗುಪ್ತಗಾಯ ಆಗಿದ್ದು ನಾವು ಕೆಳಗೆ ಬಿದ್ದಾಗ ಅಲ್ಲಿಯೇ ರಸ್ತೆಯ ಮೇಲೆ ಹೋಗುತ್ತಿದ್ದ ನಮ್ಮ ಸಂಬಂಧಿಕರಾದ ಸುನಿಲ್ ತಂದೆ ಹುಸನಪ್ಪ ವಾಸ್ಟರ್ ಮತ್ತು ವಿಶಾಲ್ ತಂದೆ ಮಾರುತಿ ವಾಸ್ಟರ್ ಇವರು ಬಂದು ನಮಗೆ ನೋಡಿ ತಕ್ಷಣ ನಮಗೆ ಎಬ್ಬಿಸಿದ್ದು ನಾನು ಎದ್ದು ಕುಳಿತು ಅಪಘಾತ ಮಾಡಿದ ಕಾರಿನ ನಂಬರ ನೋಡಲಾಗಿ ಕೆಎ 33 ಎಮ್ 9071 ನೇದ್ದು ಇದ್ದು ಅಪಘಾತ ಮಾಡಿದ ಚಾಲಕನು ನಮ್ಮ ಹತ್ತಿರ ಬಂದಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಸೈದಪ್ಪ ತಂದೆ ಯಲ್ಲಪ್ಪ ಕಟ್ಟಿಮನಿ ಸಾ|| ಬಲಶೆಟ್ಟಿಹಾಳ ಅಂತಾ ತಿಳಿಸಿದ್ದು, ನಮಗೆ ಗಾಯಗಳಾಗಿದ್ದರಿಂದ ಕಾರಿನ ಚಾಲಕನಾದ ಸೈದಪ್ಪ ಮತ್ತು ನಮ್ಮ ಸಂಬಂಧಿಕರಾದ ಸುನಿಲ್ ಹಾಗೂ ವಿಶಾಲ ಇವರು ನನಗೆ ಮತ್ತು ನನ್ನ ತಂದೆಗೆ ಎಬ್ಬಿಸಿ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ಕೆಂಭಾವಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದರಿಂದ ಪ್ರಥಮ ಚಿಕಿತ್ಸೆ ಪಡೆದುಕೊಂಡು ವೈದ್ಯರ ಸಲಹೆಯ ಮೇರೆಗೆ ನಮ್ಮ ತಂದೆಯವರಿಗೆ ಹೆಚ್ಚಿನ ಗಾಯಗಳಾಗಿದ್ದರಿಂದ ಪಿ.ಜಿ.ಶಾ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ನಾನು ಮತ್ತು ನಮ್ಮ ತಂದೆಯಾದ ಬಸವರಾಜ ಇಬ್ಬರೂ ಕೂಡಿ ಅಟೋದಲ್ಲಿ ಕೆಂಭಾವಿ ಹುಣಸಗಿ ರಸ್ತೆಯ ಮೇಲೆ ಮುದನೂರ ಚೌದ್ರಿ ಮುತ್ಯಾರ ಪೆಟ್ರೋಲ್ ಪಂಪ್ ಮುಂದೆ ಹೋಗುತ್ತಿದ್ದಾಗ ಹಿಂದಿನಿಂದ ಕಾರು ನಂ ಕೆಎ 33 ಎಮ್ 9071 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಅಟೋಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಸಾದಾ ಗಾಯ ಮತ್ತು ನಮ್ಮ ತಂದೆಗೆ ಭಾರೀ ಪ್ರಮಾಣದ ಗಾಯವಾಗಲು ಕಾರಣನಾಗಿದ್ದು ಸದರಿ ಕಾರು ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 147/2022 ಕಲಂ 279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ :148/2022 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 26/09/2022 ರಂದು 7.15 ಪಿಎಂ ಕ್ಕೆ ಶ್ರೀ ಹಣಮಂತ ಪಿ.ಎಸ್.ಐ(ಕಾ.ಸು) ಸಾಹೇಬರು ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ಹಣಮಂತ ಪಿ.ಎಸ್.ಐ(ಕಾ.ಸು) ಕೆಂಭಾವಿ ಪೊಲೀಸ್ ಠಾಣೆ ಇದ್ದು ವರದಿ ನೀಡುವುದೇನೆಂದರೆ, ನಾನು ಇಂದು ದಿನಾಂಕ 26/09/2022 ರಂದು 5.40 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಕೆಂಭಾವಿ ಪಟ್ಟಣದ ಸಂಜೀವನಗರ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು, ನಮ್ಮ ಠಾಣೆಯ ಶಿವರಾಜ ಹೆಚ್.ಸಿ 85 ಮತ್ತು ಆನಂದ ಪಿಸಿ 43 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 5.45 ಪಿಎಂ ಕ್ಕೆ ಹೊರಟು ಕೆಂಭಾವಿ ಪಟ್ಟಣದ ಸಂಜೀವನಗರ ಕ್ರಾಸ್ ಹತ್ತಿರ 5.55 ಪಿಎಂ ಕ್ಕೆ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು 6.00 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿದ್ದು ಮಟಕಾ ನಂಬರ ಬರೆಯುತ್ತಿದ್ದ ಒಬ್ಬ ವ್ಯಕ್ತಿ ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ 1) ಜೀತೇಂದ್ರ ತಂದೆ ಭೀಮರಾವ್ ಗಾರಳ್ಳಿ ವ|| 32 ಜಾ|| ಧನಗರ ಉ|| ಕೂಲಿ ಸಾ|| ವೀಠಾ(ಮಹಾರಾಷ್ಟ್ರ) ಹಾ|| ವ|| ಕೆಂಭಾವಿ ತಾ|| ಸುರಪೂರ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ ಒಂದು ಬಾಲ್ ಪೆನ್ನು ಮತ್ತು ನಗದು ಹಣ 1140/- ರೂಪಾಯಿ ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 6.00 ಪಿಎಂ ದಿಂದ 7.00 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 148/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ :149/2022 ಕಲಂ 15[ಎ],32[3] ಕೆ. ಇ ಯಾಕ್ಟ : ಇಂದು ದಿನಾಂಕ 26/09/2022 ರಂದು 9.30 ಪಿ ಎಮ್ ಕ್ಕೆ ಮಾನ್ಯ ಹಣಮಂತ ಪಿ ಎಸ್ ಐ ಸಾಹೇಬರು ಠಾಣೆಗೆ ಹಾಜರಾಗಿ ಕೊಟ್ಟ ವರದಿ ಏನೆಂದರೆ , ನಾನು ಹಣಮಂತ ಪಿ.ಎಸ್.ಐ(ಕಾಸು) ಇದ್ದು, ಈ ವರದಿ ನೀಡುವುದೇನೆಂದರೆ, ಇಂದು ದಿನಾಂಕ: 26/09/2022 ರಂದು 7.20 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ, ಬೈಚಬಾಳ ಗ್ರಾಮದಲ್ಲಿ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಸರಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯವನ್ನು ಮಾರಾಟ ಮಾಡಿ ಮಧ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದಾನೆಂದು ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿ ಜನರಾದ ಪ್ರಕಾಶ ಹೆಚ್.ಸಿ 122, ಆನಂದ ಪಿಸಿ 43 ಮತ್ತು ಕಾಶಿನಾಥ ಪಿಸಿ 293 ರವರಿಗೆ ಬಾತ್ಮೀ ವಿಷಯ ತಿಳಿಸಿ ನಂತರ ಠಾಣೆಗೆ ಇಬ್ಬರು ಪಂಚರಾದ 1) ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವಯಾ|| 40 ಜಾ|| ಪ.ಜಾತಿ ಉ||ಕೂಲಿ ಸಾ|| ಕೆಂಭಾವಿ 2) ಮಕ್ತುಮ ತಂದೆ ಮಾಸುಮಸಾಬ ವಡಕೇರಿ ವಯಾ|| 38 ಜಾ|| ಮುಸ್ಲಿಂ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಬರಮಾಡಿಕೊಂಡು ಅವರಿಗೂ ಮಾಹಿತಿ ತಿಳಿಸಿ ದಾಳಿ ಮಾಡಲು ಸಹಕರಿಸಲು ತಿಳಿಸಿದ್ದು ಅವರು ಒಪ್ಪಿದ್ದರಿಂದ ನಾನು ಮತ್ತು ನಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ಠಾಣೆಯ ಜೀಪ ನಂಬರ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 7.30 ಪಿಎಮ್ಕ್ಕೆ ಹೊರಟು 7.55 ಪಿಎಮ್ಕ್ಕೆ ಬೈಚಬಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಅಕ್ರಮ ಮಧ್ಯ ಮಾರಾಟ ಮಾಡಿ ಸರಾಯಿ ಕುಡಿಯಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟ ಸ್ಥಳದಿಂದ ಸುಮಾರು 60 ಅಡಿ ದೂರದಲ್ಲಿ ನಿಂತು ಮದ್ಯ ಮಾರಾಟ ಮಾಡಿ ಸರಾಯಿ ಕುಡಿಯಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದನ್ನು ನೋಡಿ ಖಚಿತಪಡಿಸಿಕೊಂಡು ನಾನು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ 8.00 ಪಿಎಂ ಕ್ಕೆ ದಾಳಿ ಮಾಡಿದ್ದು ನಮ್ಮನ್ನು ನೋಡಿ ಅಲ್ಲಿ ಸೇರಿದ್ದ ಜನರು ಓಡಿ ಹೋದರು. ಮಧ್ಯ ಮಾರಾಟ ಮಾಡುತ್ತಿದ್ದವನು ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ನಾನು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಸದರಿ ವ್ಯಕ್ತಿಯನ್ನು ಹಿಡಿದು ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಯಂಕೋಬ ತಂದೆ ಜಯಪ್ಪ ಶೆಟ್ಟಿ ವ|| 36ವರ್ಷ ಜಾ|| ಉಪ್ಪಾರ ಉ|| ಹೊಟೇಲ್ ಕೆಲಸ ಸಾ|| ಬೈಚಬಾಳ ತಾ|| ಹುಣಸಗಿ ಅಂತ ತಿಳಿಸಿದನು. ನಂತರ ಸದರಿ ಸ್ಥಳದಲ್ಲಿದ್ದ ಒಂದು ಹಳೆಯ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ ಮಧ್ಯ ತುಂಬಿದ್ದು ಸದರ ಚೀಲದಲ್ಲಿ 90 ಎಮ್ಎಲ್ನ 8 ಓರಿಜಿನಲ್ ಚ್ವಾಯೀಸ್ ಪೌಚಗಳು ಇದ್ದು ಒಂದು ಪೌಚನ ಬೆಲೆ 35.13 ಇದ್ದು ಒಟ್ಟು 08 ಪೌಚಗಳ ಬೆಲೆ 281.04 ರೂ. ಆಗುತ್ತಿದ್ದು ನಂತರ ಸಿಕ್ಕ ವ್ಯಕ್ತಿಗೆ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ಮಾಡಿಕೊಡಲು ಯಾವುದಾದರು ಅಧಿಕೃತ ಪರವಾನಿಗೆ ಇದೆಯೇ ಎಂದು ವಿಚಾರಿಸಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದನು. ಆಗ ಸದರಿ ವ್ಯಕ್ತಿಯನ್ನು ವಶಕ್ಕೆ ಪಡೆದು ಅವನ ಹತ್ತಿರ ಸಿಕ್ಕ ಮಧ್ಯ ತುಂಬಿದ ಪೌಚ್ಗಳನ್ನು 8.00 ಪಿಎಮ್ದಿಂದ 9.00 ಪಿಎಮ್ದವರೆಗೆ ಬಸ್ ನಿಲ್ದಾಣದ ಮುಂದಿನ ಲೈಟಿನ ಬೆಳಕಿನಲ್ಲಿ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತಪಡಿಸಿಕೊಳ್ಳಲಾಯಿತು ನಂತರ ಸದರಿ ಆರೋಪಿತನೊಂದಿಗೆ 9.30 ಪಿಎಮ್ಕ್ಕೆ ಠಾಣೆಗೆ ಬಂದು ಸದರಿ ಆರೋಪಿತನ ವಿರುದ್ದ ಕಲಂ: 15(ಎ), 32(3) ಕೆಇ ಆಕ್ಟ ರೀತ್ಯಾ ಕ್ರಮ ಜರುಗಿಸಬೇಕು ಅಂತ ಇದ್ದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 149/2022 ಕಲಂ 15[ಎ],32[3] ಕೆಇ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ :167/2022 ಕಲಂ: 323,324,504,506 ಸಂಗಡ 34 ಐಪಿಸಿ: ಇಂದು ದಿನಾಂಕ: 26/09/2022 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿ ಶ್ರೀ ಪರಶುರಾಮ ತಂದೆ ಹಣಮಂತ ಗ್ವಾಡಿಕರ ವಯಾ: 18 ಜಾತಿ: ಪ.ಜಾತಿ(ಹೊಲೆಯ) ಉ: ಕೂಲಿಕೆಲಸ ಸಾ: ಮರಮಕಲ್ ತಾ: ಶಹಾಪೂರ ಮೊ.ನಂ: 9901345407 ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಸಲ್ಲಿಸಿದ ಅಜರ್ಿ ಸಾರಾಂಶವೆನೆಂದರೆ, ನಾನು ನಮ್ಮೂರಿನಿಂದ ಚಟ್ನಳ್ಳಿ ಗ್ರಾಮದಲ್ಲಿರುವ ನಮ್ಮ ದೊಡ್ಡಪ್ಪನ ಮಗನಾದ ಮಲ್ಲು ಗ್ಯಾರೆಜಕ್ಕೆ ಪ್ರತಿದಿನ ಗ್ಯಾರೇಜದಲ್ಲಿ ಕೆಲಸ ಮಾಡಲು ಹೋಗಿ ಬರುವುದು ಮಾಡುತ್ತೇನೆ. ನಾನು ನಿನ್ನೆ ದಿನಾಂಕ:25/09/2022 ರಂದು ಸಾಯಾಂಕಾಲ 3-30 ಗಂಟೆ ಸುಮಾರಿಗೆ ಮಲ್ಲು ಗ್ಯಾರೇಜ ಮುಂದೆ ನಿಂತಾಗ ನಮ್ಮೂರಿನ ನಮ್ಮ ಸಮಾಜದವರಾದ ರೆಡ್ಡೆಪ್ಪ ತಂದೆ ಭಾಗಪ್ಪ ಪೂಜಾರಿ ವಯಾ: 18 ವರ್ಷ ಮತ್ತು ಭಾಗಪ್ಪ ತಂದೆ ಬಸಪ್ಪ ಪೂಜಾರಿ ವಯಾ: 23 ಇಬ್ಬರೂ ಮೋಟಾರ ಸೈಕಲ್ ಮೇಲೆ ಬಂದವರೇ ಅವರಲ್ಲಿ ರೆಡ್ಡೆಪ್ಪನು ಎಲೇ ಸೂಳೆ ಮಗನೇ ಮೊನ್ನೆ ನೀನು ನನಗೆ ಮೋಟಾರ ಸೈಕಲ್ ಟಚ್ ಮಾಡಿ ಹೋಗುತ್ತಿಯಾ, ಎಷ್ಟು ಸೊಕ್ಕು ಇದ್ದಿರಬೇಕು ನಿನಗೆ. ನಿನ್ನದು ಊರಲ್ಲಿ ಬಹಾಳ ಆಗಿದೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು, ನಾನು ಯಾಕೆ ಬೈಯುತ್ತಿ ನಾನೇನು ಮಾಡಿನಿ ಅಂತಾ ಕೇಳಿದ್ದಕ್ಕೆ ರೆಡ್ಡೆಪ್ಪನು ಸೂಳೆ ಮಗನೆ ಏನು ಮಾಡತಿ ನೀನು ಅಂತಾ ಬೈಯುತ್ತಾ ಕೈಯಿಂದ ಕಪಾಳಕ್ಕೆ ಹೊಡೆದು, ಅಲ್ಲೇ ಗ್ಯಾರೇಜದಲ್ಲಿದ್ದ ಸುತಿಗಿಯಿಂದ ನನ್ನ ತಲೆಗೆ ಹೋಡೆದು ರಕ್ತಗಾಯ ಮಾಡಿದನು. ನಂತರ ಅಲ್ಲಿಯೇ ಇದ್ದ ನನ್ನ ಚಿಕ್ಕಪ್ಪನಾದ ನಾಗಪ್ಪ ತಂದೆ ಮರೆಪ್ಪ ಗ್ವಾಡೆಕರ ವಯಾ: 50 ಈತನು ಬಂದು ಯಾಕೆ ನಮ್ಮ ಹುಡುಗನಿಗೆ ಹೊಡೆಯುತ್ತಿದ್ದಿಯಾ ಅಂತಾ ಕೇಳಿದಾಗ ಅಲ್ಲಿಯೇ ಇದ್ದ ಭಾಗಪ್ಪ ತಂದೆ ಬಸಪ್ಪ ಪೂಜಾರಿ ವಯಾ: 23 ಈತನು ಚಿಕ್ಕಪ್ಪನಿಗೆ ಎಡಗಡೆ ಹೊಟ್ಟೆಗೆ ಕಾಲಿನಿಂದ ಒದ್ದು ಒಳಪೆಟ್ಟು ಮಾಡಿದನು. ಅವರಿಬ್ಬರೂ ಕೂಡಿ ನನಗೆ ಮತ್ತು ಚಿಕ್ಕಪ್ಪನಿಗೆ ಕೈಯಿಂದ ಕಾಲಿನಿಂದ ತಲೆಗೆ ಹೊಟ್ಟೆಗೆ ಹೊಡೆ ಬಡೆ ಮಾಡುತ್ತಿರುವಾಗ ಅಲ್ಲಿಯೇ ಇದ್ದ ಗ್ಯಾರೇಜ ಮಾಲಿಕನಾದ ಮಲ್ಲು ತಂದೆ ಸಾಬಣ್ಣ ಗ್ವಾಡೆಕಾರ ವಯಾ: 25 ವರ್ಷ ಈತನು ಬಂದು ನಮಗೆ ಹೊಡೆಯುವುದನ್ನು ನೋಡಿ ಬಿಡಿಸಿಕೊಂಡೆನು. ನಂತರ ಅವರಿಬ್ಬರೂ ನನಗೆ ಇವತ್ತು ನಮ್ಮ ಕೈಯಲ್ಲಿ ಉಳಿದ್ದಿಯಾ ಸೂಳೆ ಮಗನೆ ಇನ್ನೊಮ್ಮೆ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದರು. ನಂತರ ನನಗೆ ತಲೆಗೆ ರಕ್ತಗಾಯ ಮತ್ತು ಚಿಕ್ಕಪ್ಪನಾದ ನಾಗಪ್ಪ ಇಬ್ಬರೂ ಊರಲ್ಲಿಯೇ ಖಾಸಗಿ ಆಸ್ಪತ್ರೆಯಲ್ಲಿಯೇ ಉಪಚಾರ ಪಡೆದುಕೊಂಡಿರುತ್ತೇವೆ. ನಂತರ ನನಗೆ ಮತ್ತು ಚಿಕ್ಕಪ್ಪನಿಗೆ ಆರಾಮ ಆಗದೇ ಇರುವುದರಿಂದ ಇಂದು ದಿನಾಂಕ: 26/09/2022 ರಂದು ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಆಗಿರುತ್ತೇನೆ. ನಂತರ ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ಠಾಣೆಗೆ ಬಂದು ಬಂದು ಪಿರ್ಯಾದಿ ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಂಡ ಇಬ್ಬರೂ ವಿನಾಕಾರಣ ನನಗೆ ಸೊಕ್ಕು ಬಹಾಳ ಆಗಿದೆ ಅಂತಾ ಗ್ಯಾರೇಜದಲ್ಲಿದ್ದ ಸುತಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮತ್ತು ಚಿಕ್ಕಪ್ಪ ನಾಗಪ್ಪನಿಗೆ ಕಾಲಿನಿಂದ ಒದ್ದು ಗುಪ್ತಗಾಯ ಮಾಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದ್ದು. ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 167/2022 ಕಲಂ: 323,324,504,506 ಸಂಗಡ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ