ಅಭಿಪ್ರಾಯ / ಸಲಹೆಗಳು

   ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 27-10-2022

ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 84/2022 ಕಲಂ 279, 337, 338 ಐ.ಪಿ.ಸಿ: ಗಾಯಾಳುಗಳೆಲ್ಲರೂ ಕೂಡಿ ಹುಲಿಜಂತಿ ಮಾಳಿಂಗರಾಯ ದೇವರಜಾತ್ರೆ ಮುಗಿಸಿಕೊಂಡು ಮರಳಿ ಊರ ಕಡೆಗೆ ದಿನಾಂಕ: 26/10/2022 ರಂದು 01.00 ಎ.ಎಮ್. ಸುಮಾರಿಗೆ ಆರೋಪಿತನ ಕ್ರಷರ್ಜೀಪ್ ನಂ:ಕೆಎ-43, ಎಮ್-3671 ನೇದ್ದರಲ್ಲಿ ಕುಳಿತು ಹೊರಟಾಗದಿಗ್ಗಿ ಸೀಮಾಂತರದಲ್ಲಿನ ಬಾಣತಿಹಾಳ ಕ್ರಾಸ್ ಹತ್ತಿರ ಗೋಗಿ-ಭೀ.ಗುಡಿ ರೋಡಿನ ಮೇಲೆ ಆರೋಪಿತನುತನ್ನಜೀಪನ್ನುಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದ ಜೀಪ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡ ಬದಿಗೆ ಇರುವ ಜಾಲಿಗಿಡಕ್ಕೆಡಿಕ್ಕಿ ಹೊಡೆದು ಅಪಘಾತವಾಗಿದ್ದರಿಂದ ಸದರಿ ಅಪಘಾತದಲ್ಲಿ ಗಾಯಾಳುಗಳಿಗೆ ಭಾರಿ ಮತ್ತು ಸಾದಾರಕ್ತಗಾಯ ಮತ್ತು ಗುಪ್ತ ಗಾಯಗಳಾಗಿದ್ದು ಕಾರಣ ಸದರಿ ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ಇರುತ್ತದೆ.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 48/2022 ಕಲಂ 279, 338, ಐ.ಪಿ.ಸಿ: ಇಂದು ದಿನಾಂಕ 26/10/2022 ರಂದು ಸಮಯ 11-00 ಎ.ಎಂ.ಕ್ಕೆ ಪಿಯರ್ಾದಿ ರಿಯಾಜ್ ತಂದೆ ಶಬ್ಬೀರ ಖುರೇಶಿ, ವಯ:32 ವರ್ಷ, ಜಾತಿ:ಮುಸ್ಲಿಂ, ಉ:ವ್ಯಾಪಾರ, ಸಾ:ಯರಗೋಳ, ತಾ:ಜಿ:ಯಾದಗಿರ ರವರು ಖುದ್ದಾಗಿ ಠಾಣೆಗೆ ಹಾಜರಾಗಿ ದಿನಾಂಕ:23/10/2022 ರಂದು 07-15 ಪಿ.ಎಂ.ಕ್ಕೆ ಜರುಗಿದ ರಸ್ತೆ ಅಪಘಾತದ ಘಟನೆ ಬಗ್ಗೆ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ದೂರು ಅಜರ್ಿ ನೀಡಿದ್ದು ಸಾರಂಶವೆನೆಂದರೆ ದಿನಾಂಕ:23/10/2022 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ನನ್ನ ತಮ್ಮನಾದ ಮಹೆಬೂಬ ಮತ್ತು ನಮ್ಮೂರಿನ ಮಹಿಬೂಬ ಪಾಷಾ ಇಬ್ಬರೂ ಸೇರಿಕೊಂಡು ಮೋಟಾರ ಸೈಕಲ್ ನಂ:ಕೆಎ- 33 ಇಸಿ-2700 ರ ಮೇಲೆ ಯರಗೋಳದಿಂದ ಯಾದಗಿರಿಗೆ ಹೋಗಿ ಮೋಬೈಲ್ ಸಾಮಾನುಗಳು ತೆಗೆದುಕೊಂಡು ಬರುತ್ತೇವೆ ಎಂದು ಹೇಳಿ ಹೋದರು. ಸಾಯಂಕಾಲ 7:30 ಪಿ.ಎಮ ಸುಮಾರಿಗೆ ನನಗೆ ಪರಿಚಯದ ಅಲ್ಲಿಪೂರ ತಾಂಡಾದ ಬಸವರಾಜರವರು ಫೋನ್ಮಾಡಿ ತಿಳಿಸಿದ್ದೇನೆಂದರೆ, ಈಗ 7:15 ಪಿ.ಎಮ್. ಸುಮಾರಿಗೆ ಅರಕೇರಾ(ಬಿ) ಕ್ರಾಸ್ ಹತ್ತಿರ ಮಹಿಬೂಬಪಾಶಾ ಈತನು ಮೋಟರ್ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುವಾಗ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದು ಅಪಘಾತಪಡಿಸಿದ್ದು, ಅಪಘಾತದಲ್ಲಿ ಮೋಟರ್ ಸೈಕಲ್ ಸಮೇತ ಮಹಿಬೂಬಪಾಶಾ ಮತ್ತು ಹಿಂದುಗಡೆ ಕುಳಿತಿದ್ದ ನಿಮ್ಮ ತಮ್ಮನಾದ ಮಹೆಬೂಬ ಇಬ್ಬರು ರಸ್ತೆಯ ಮೇಲೆ ಬಿದ್ದು ಗಾಯಗೊಂಡಿರುತ್ತಾರೆ ಎಂದು ತಿಳಿಸಿದ ಕೂಡಲೇ ನಾನು ನಮ್ಮೂರಿನವರಾದ ಅಜೀಜ್ ಬಾಬು ಮತ್ತು ಮಾರ್ಕಂಡಪ್ಪ ರವರೊಂದಿಗೆ ಅಪಘಾತ ಸ್ಥಳಕ್ಕೆ ಬಂದು ನೋಡಲಾಗಿ ಅಪಘಾತದಲ್ಲಿ ಗಾಯಹೊಂದಿದ್ದ ನನ್ನ ತಮ್ಮ ಮಹೆಬೂಬನಿಗೆ ತಲೆಯ ಹಿಂದುಗಡೆ ಭಾರಿ ಗುಪ್ತಗಾಯ ಮತ್ತು ಎಡಗೈಗೆ ತರಚಿತ ಗಾಯವಾಗಿದ್ದು, ಅರೆ ಪ್ರಜ್ಞೆಯಲ್ಲಿದ್ದನು. ಮೋಟರ್ ಸೈಕಲ್ ಸವಾರ ಮಹಿಬೂಬಪಾಶಾ ಈತನಿಗೆ ನೋಡಲಾಗಿ ಆತನಿಗೆ ಗಾಯಗಳು ಕಂಡುಬಂದಿರುವುದಿಲ್ಲಾ. ಅಲ್ಲಿಯೇ ಇದ್ದ ಬಸವರಾಜನಿಗೆ ವಿಚಾರಿಸಲಾಗಿ ಈ ಮೊದಲು ಫೊನಿನಲ್ಲಿ ಹೇಳಿದಂತೆ ವಿಷಯ ತಿಳಿಸಿದನು. ನಂತರ ಗಾಯಗೊಂಡ ನನ್ನ ತಮ್ಮ ಮಹೆಬೂಬನಿಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ನಂತರ ದಿನಾಂಕ:24/10/2022 ರಂದು ಕಲಬುರಗರ್ಿಯ ಸನ್ ರೈಸ ಆಸ್ಪತ್ರೆ ತಂದು ಉಪಚಾರ ಕುರಿತು ಸೇರಿಕೆ ಮಾಡಿದ್ದು, ಇನ್ನೂ ಅರೆಪ್ರಜ್ಞರೆಯಲ್ಲಿ ಇರುತ್ತದೆ. ನನ್ನ ತಮ್ಮನಿಗೆ ಚಿಕಿತ್ಸೆ ಕೊಡಿಸುವಲ್ಲಿ ನಾನು ನಿರತನಾಗಿರುವುದರಿಂದ ಮತ್ತು ಮನೆಯಲ್ಲಿ ಹಿರಿಯರಿಗೆ ವಿಚಾರ ಮಾಡಿಕೊಂಡು ದೂರು ಕೊಡಲು ತಡವಾಗಿರುತ್ತದೆ. ಕಾರಣ ದಿನಾಂಕ:23/10/2022 ರಂದು 7:15 ಪಿ.ಎಮ್.ಕ್ಕೆ ಯಾದಗಿರಿ-ಕಲಬುರಗಿ ಮುಖ್ಯ ರಸ್ತೆಯ ಮೇಲೆ ಅರಕೇರಾ(ಬಿ) ಕ್ರಾಸ್ ಹತ್ತಿರ ಸೈಕಲ್ ಮೋಟಾರ ನಂ:ಕೆಎ- 33 ಇಸಿ-2700 ರ ಸವಾರ ಮಹಿಬೂಬಪಾಶಾ ತಂದೆ ಜಮಾಲಸಾಬ ಇನಾಮದಾರ ಸಾ||ಯರಗೋಳ ಈತನು ತನ್ನ ಮೋಟರ್ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಯಾದಗಿರಿಗೆ ಹೋಗುವಾಗ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದು ಅಪಘಾತಪಡಿಸಿದ್ದು, ಅಪಘಾತದಲ್ಲಿ ಮೋಟರ್ ಸೈಕಲ್ ಸವಾರ ಮಹಿಬೂಬಪಾಶಾ ಮತ್ತು ಹಿಂದುಗಡೆ ಕುಳಿತಿದ್ದ ನನ್ನ ತಮ್ಮ ಮಹೆಬೂಬ ತಂದೆ ಶಬ್ಬೀರ ಖುರೇಶಿ, ವಯ:29 ವರ್ಷ, ಜಾ; ಮುಸ್ಲಿಂ, ಉ:ವ್ಯಾಪಾರ, ಸಾ:ಯರಗೋಳ ಇಬ್ಬರು ರಸ್ತೆಯ ಮೇಲೆ ಬಿದ್ದಿದ್ದು, ಅಪಘಾತದಲ್ಲಿ ನನ್ನ ತಮ್ಮ ಮಹೆಬೂಬನಿಗೆ ತಲೆಯ ಹಿಂದುಗಡೆ ಭಾರಿ ಗುಪ್ತಗಾಯ ಮತ್ತು ಎಡಗೈಗೆ ತರಚಿತ ಗಾಯವಾಗಿದ್ದು, ಅಪಘಾತಕ್ಕೆ ಕಾರಣವಾದ ಮೋಟರ್ ಸೈಕಲ್ ಸವಾರ ಮಹಿಬೂಬಪಾಶಾ ತಂದೆ ಜಮಾಲಸಾಬ ಇನಾಮದಾರ ಸಾ||ಯರಗೋಳ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ: 48/2022 ಕಲಂ:279, 338 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 182/2022 ಕಲಂ: 143, 147, 323, 448, 504, 506 ಸಂಗಡ 149 ಐಪಿಸಿ:- ಇಂದು ದಿನಾಂಕ: 26/10/2022 ರಂದು 8-15 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ಭೀಮರಡ್ಡಿ ತಂದೆ ಮಲ್ಲಣಗೌಡ ಕುರಾಳ, ವಯಸ್ಸು 45 ವರ್ಷ, ಜಾತಿ ರಡ್ಡಿ, ಉಃ ವ್ಯಾಪಾರ ಸಾಃ ಸೂಗೂರ ಎನ್. ತಾಃ ಚಿತ್ತಾಪೂರ ಜಿಃ ಕಲಬುರಗಿ ಇದ್ದು, ತಮ್ಮಲ್ಲಿ ದೂರು ನೀಡುವುದೇನೆಂದರೆ, ಶಹಾಪೂರ ಪಟ್ಟಣದ ಗ್ಯಾರೇಜ್ ಲೈನದಲ್ಲಿ ನನ್ನ ಮತ್ತು ನಮ್ಮ ಸಂಬಂಧಿಕರಾದ ಶ್ರೀ ಡಿ. ರಾಜಶಂಕರ ತಂದೆ ನರಸರಡ್ಡಿ, ದುಗನೂರ ಸಾಃ ಬಸವೇಶ್ವರ ನಗರ ಶಹಾಪೂರ ಇಬ್ಬರ ಹೆಸರಿನಲ್ಲಿ ಶ್ರೀ ಓಂ ಶಿವಕೃಪಾ ಮಹಿಂದ್ರಾ ಟ್ರ್ಯಾಕ್ಟರ್ ಶೋ ರೂಮ ಇರುತ್ತದೆ. ಈ ಶೋ ರೂಮದಲ್ಲಿ ಶೇಖ್ ಯೂನುಸ್ ತಂದೆ ಶೇಖ ಮಂಜೂರ ಅಹ್ಮದ ಇನಾಮದಾರ ಈತನು ಮ್ಯಾನೇಜರ್ ಕೆಲಸ ಮಾಡಿಕೊಂಡಿರುತ್ತಾನೆ. ನನ್ನ ಹೆಂಡತಿಯಾದ ಮೀನಾಕ್ಷಿ ಮತ್ತು ಪಾರ್ಟನರಾದ ಡಿ. ರಾಜಶಂಕರ ತಂದೆ ನರಸರೆಡ್ಡಿ ದುಗನೂರ ಇವರ ಹೆಂಡತಿಯಾದ ಶ್ರೀಮತಿ ಪೂಣರ್ಿಮಾ ಇವರಿಬ್ಬರ ಹೆಸರಿನಲ್ಲಿ ಶ್ರೀ ಶಿವ ಸಾಯಿ ಸೂಪರ್ ಬಜಾರ್ ಅಂಗಡಿ ಇರುತ್ತದೆ. ಈ ಅಂಗಡಿಯಲ್ಲಿ ಸುರೇಶ ತಂದೆ ಚಂದ್ರಕಾಂತ ಜಕರಡ್ಡಿ ಇವರು ಮ್ಯಾನೇಜರ್ ಕೆಲಸ ಮಾಡಿಕೊಂಡಿರುತ್ತಾರೆ. ಎರಡು ಅಂಗಡಿಯ ಎಲ್ಲಾ ವ್ಯವಹಾರಗಳು ಶಹಾಪೂರದಲ್ಲಿರುವ ಡಿ. ರಾಜಶಂಕರ ದುಗನೂರ ಇವರು ನೋಡಿಕೊಂಡು ಹೋಗುತ್ತಾರೆ. ನಾನು ಆಗಾಗ ಬಿಡುವಿನ ವೇಳೆಯಲ್ಲಿ ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಶಹಾಪೂರಕ್ಕೆ ಬಂದು ವ್ಯವಹಾರದ ಬಗ್ಗೆ ನೋಡಿಕೊಳ್ಳುತ್ತೇನೆ. ಹೀಗಿರುವಾಗ ಮೊನ್ನೆ ದಿನಾಂಕ: 24/10/2022 ರಂದು, ಮಧ್ಯಾಹ್ನದ ಸುಮಾರಿಗೆ ಯಾದಗಿರಿ ಮಾರ್ಗವಾಗಿ ಶಹಾಪೂರಕ್ಕೆ ಬರುತಿದ್ದೇನು. ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಯಾದಗಿರಿಯಲ್ಲಿದ್ದಾಗ, ನಮ್ಮ ಅಂಗಡಿಯಲ್ಲಿ ಪಾರ್ಟನರಾದ ಡಿ. ರಾಜಶಂಕರ ಇವರು ನನಗೆ ಫೋನ್ ಮಾಡಿ ಈ ದಿನ 1) ಶಾಂತರಡ್ಡಿ ತಂದೆ ವೆಂಕಣ್ಣಗೌಡ ಪಾಟೀಲ್ ಸಾಃ ಬಸವೇಶ್ವರ ನಗರ ಶಹಾಪೂರ 2) ಶಿವರಡ್ಡಿ ತಂದೆ ಬಸವರಾಜ ಕುರಾಳ, ಸಾಃ ಸೂಗುರ ಎನ್ ತಾಃ ಚಿತ್ತಾಪೂರ, 3) ಬಸವರಾಜ ತಂದೆ ಮಲ್ಲಣಗೌಡ ಕುರಾಳ, ಸಾಃ ಸುಗುರ ಎನ್ ತಾ: ಚಿತಾಪುರ 4) ವಿಜಯ ಶಂಕರ ತಂದೆ ವೆಂಕಟರಡ್ಡಿ ಪಾಟೀಲ್ ಸಾಃ ವಡವಟ್ಟ ತಾ: ಗುರುಮಿಠಕಲ್ 5) ರಘುನಾಥ ರಡ್ಡಿ ತಂದೆ ಪರ್ವತರಡ್ಡಿ ಪಾಟೀಲ್, ಸಾಃ ಗುರಮಿಠಕಲ್ 6) ಮಂಜುಳಾ ಗಂಡ ಸಿದ್ರಾಮರೆಡ್ಡಿ ಕುರಾಳ ಸಾ: ಸುಗುರ ಎನ್. ತಾ: ಚಿತ್ತಾಪೂರ 7) ಶಶಿಕಲಾ ಗಂಡ ಬಸವರಾಜ ಕುರಾಳ ಸಾ: ಸುಗುರ ಎನ್. ತಾ: ಚಿತಾಪೂರ ಇವರೆಲ್ಲರೂ ಕೂಡಿಕೊಂಡು ಮದ್ಯಾಹ್ನ 1-30 ಗಂಟೆಗೆ ನಮ್ಮ ಮಹಿಂದ್ರಾ ಶೋ ರೂಮಗೆ ಬಂದು, ಅಲ್ಲಿದ್ದ ಮ್ಯಾನೇಜರ್ ಶೇಖ್ ಯೂನುಸ್ ತಂದೆ ಶೇಖ ಮಂಜೂರ ಅಹ್ಮದ, ಇನಾಮಾದರನಿಗೆ ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದು, ಬೆದರಿಕೆ ಹಾಕಿ ಎಲ್ಲರೂ ಕೈಯಿಗಳಿಂದ ಹೊಡೆ ಬಡೆ ಮಾಡಿ, ಶೋ ರೂಮಿನ್ ಬೀಗ ಹಾಕಿಕೊಂಡು ಅಲ್ಲಿಂದ ನಗರದ ಶ್ರೀ ಶಿವ ಸಾಯಿ ಸೂಪರ್ ಬಜಾರಕ್ಕೆ ಹೋಗಿ ಅಲ್ಲಿದ ಮ್ಯಾನೇಜರ್ ಸುರೇಶ ಜಕರಡ್ಡಿ ಈತನಿಗೆ ಬೀಗ ಕೊಡಲು ಹೇಳಿದ್ದು, ಆತನು ಬೀಗ ಕೊಡಲು ನಿರಾಕರಿಸಿದಕ್ಕೆ ಆತನಿಗೆ ಶಾಂತರೆಡ್ಡಿ ತಂದೆ ವೆಂಕಣ್ಣಗೌಡ ಪಾಟೀಲ ಇವರು ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದನು. ಹಾಗೂ ಉಳಿದ ಎಲ್ಲರೂ ತಮ್ಮ ಕೈಯಿಗಳಿಂದ ಹೊಡೆದು ಜೀವ ಬೇದರಿಕೆ ಹಾಕಿ ಅಂಗಡಿಗೆ ಬೀಗ ಹಾಕಿರುತ್ತಾರೆ. ಅಂಗಡಿಯ ಕೀ ಬೇಕಾದರೆ ನಿಮ್ಮ ಮಾಲೀಕರು ನಮಗೆ ಬಂದು ಭೇಟಿಯಾಗಲು ಹೇಳಿರಿ ಅಂತಾ ಹೇಳಿ ಅಕ್ರಮವಾಗಿ ಬೀಗ ಹಾಕಿಕೊಂಡು ಹೋಗಿರುತ್ತಾರೆ ಅಂತಾ ಮ್ಯಾನೇಜರ್ ಕೆಲಸ ಮಾಡುವರಿಬ್ಬರೂ ನನಗೆ ತಿಳಿಸಿರುತ್ತಾರೆ. ನಾನು ಅಂಗಡಿಯ ಕಡೆಗೆ ಹೋಗುತ್ತೇನೆ ನೀವು ಶಹಾಪೂರಕ್ಕೆ ಬನ್ನಿ ಅಂತಾ ತಿಳಿಸಿದ ಮೇರೆಗೆ, ನಾನು ಯಾದಗಿರಿಯಲ್ಲಿಯೇ ಇದ್ದೇನೆ ಸ್ವಲ್ಪ ಸಮಯದಲ್ಲಿ ಬರುತ್ತೇನೆ ಅಂತಾ ತಿಳಿಸಿ ಮಧ್ಯಾಹ್ನ 2-45 ಗಂಟೆಯ ಸುಮಾರಿಗೆ ಶಹಾಪೂರದ ಮಹಿಂದ್ರಾ ಶೋ ರೂಮಗೆ ಹೋದಾಗ ಬೀಗ ಹಾಕಿತ್ತು. ನಂತರ ಶ್ರೀ ಶಿವ ಸಾಯಿ ಸೂಪರ್ ಬಜಾರಕ್ಕೆ ಹೋದಾಗ ಆ ಅಂಗಡಿಯು ಬೀಗ ಹಾಕಿತ್ತು. ಅಂಗಡಿಯ ಮುಂದೆ ನನ್ನ ಪಾರ್ಟನರಾದ ಡಿ. ರಾಜಶೇಖರ ಮತ್ತು ಮ್ಯಾನೇಜರ್ ಸುರೇಶ ಜಕರಡ್ಡಿ, ಶೇಖ್ ಯೂನುಸ್ ಇವರೆಲ್ಲರೂ ಅಲ್ಲಿಯೇ ಇದ್ದರು. ಅವರಿಗೆ ಭೇಟಿಯಾಗಿ ಘಟನೆಯ ಬಗ್ಗೆ ಪೂರ್ಣವಾದ ಮಾಹಿತಿ ಪಡೆದುಕೊಂಡು ಮನೆಯಲ್ಲಿ ವಿಚಾರಿಸಿ ಇಂದು ದಿನಾಂಕ: 26/10/202 ರಂದು ಪೊಲೀಸ್ ಠಾಣೆಗೆ ಬಂದು ಅಜರ್ಿ ನೀಡಿರುತ್ತೇನೆ. ಸದರಿ ಮಹಿಂದ್ರಾ ಟ್ರ್ಯಾಕ್ಟರ್ ಶೋ-ರೂಮ ಮತ್ತು ಶ್ರೀ ಶಿವ ಸಾಯಿ ಸೂಪರ್ ಬಜಾರ್ದಲ್ಲಿ ನಾನು ಮತ್ತು ಡಿ. ರಾಜಶಂಕರ ಇಬ್ಬರೇ ಪಾರ್ಟನರ್ ಹಾಗೂ ಹಕ್ಕುದಾರರು ಇರುತ್ತೇವೆ. ಶ್ರೀ ಶಿವ ಸಾಯಿ ಸುಪರ ಬಜಾರದಲ್ಲಿ ದಿನದ ವ್ಯವಹಾರದ ಹಣ ಮತ್ತು ಟ್ರಾಕ್ಟರ ಶೋ-ರೂಮದ ಗಲ್ಲಾದಲ್ಲಿ ಟ್ರ್ಯಾಕ್ಟರ ಬುಕಿಂಗ ಹಣ ಇರುತ್ತದೆ. ಇಲ್ಲಿಯವರೆಗೆ ಮಳಿಗೆಗಳ ಬೀಗ ಹಾಕಿಕೊಂಡು ಹೋದವರು ಇನ್ನೂ ಬೀಗ ನಮಗೆ ಕೊಟ್ಟಿರುವುದಿಲ್ಲ. ಕಾರಣ ಮೇಲ್ಕಂಡ 7 ಜನರು ಶಹಾಪೂರ ಪಟ್ಟಣದಲ್ಲಿರುವ ನನ್ನ ವ್ಯಾಪಾರ ಮಳಿಗೆಗಳಾದ ಮಹಿಂದ್ರಾ ಟ್ರ್ಯಾಕ್ಟರ್ ಶೋ-ರೂಮ ಮತ್ತು ಶ್ರೀ ಶಿವ ಸಾಯಿ ಸೂಪರ್ ಬಜಾರ್ದಲ್ಲಿ ಮಧ್ಯಾಹ್ನ 1-30 ಗಂಟೆಯಿಂದ 2-00 ಗಂಟೆಯ ಮಧ್ಯದ ಅವಧಿಯಲ್ಲಿ ಎರಡು ಅಂಗಡಿಗಳಲ್ಲಿ ಅತಿ ಕ್ರಮ ಪ್ರವೇಶ ಮಾಡಿ ಮ್ಯಾನೇಜರ್ಗಳಿಗೆ ಜೀವ ಬೆದರಿಕೆ ಹಾಕಿ ಸುರೇಶ ಜಕರಡ್ಡಿ ಇವರಿಗೆ ಕೈಯಿಂದ ಹಲ್ಲೆ ಮಾಡಿ ಅಂಗಡಿಯ ಬೀಗ ಹಾಕಿಕೊಂಡು ಹೋದವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ವಿನಂತಿ. ಅಂತಾ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 182/2022 ಕಲಂ: 143, 147, 323, 448, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 183/2022.ಕಲಂ, 341,323,504,506.114 ಸಂ 34 ಐ.ಪಿ.ಸಿ.: ಇಂದು ದಿನಾಂಕ 26/10/2022 ರಂದು 22.45 ಗಂಟೆಗೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಶಶಿಕಲಾ ಗಂಡ ಬಸವರಾಜಗೌಡ ಕುರಾಳ ವಯಸ್ಸು 46 ವರ್ಷ, ಜಾತಿ ರಡ್ಡಿ, ಉಃ ಮನೆಗೆಲಸ ಸಾಃ ಸೂಗೂರ ಎನ್. ತಾಃ ಚಿತ್ತಾಪೂರ ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ದೂರು ಅಜರ್ಿ ಏನಂದರೆ ನಮ್ಮ ನನ್ನ ಗಂಡನ ಅಣ್ಣ ತಮ್ಮಂದಿರು ಒಟ್ಟು ಮೂರು ಜನರು ಇದ್ದು ಅವರಲ್ಲಿ ನನ್ನ ಗಂಡನವರು ಎರಡನೇಯವರು ಆಗಿದ್ದು ಹಿರಿಯವರು ಸಿದ್ರಾಮರಡ್ಡಿ ಹಾಗು ಕಿರಿಯವನು ಭೀಮರಡ್ಡಿ ಹೀಗೆ ಒಟ್ಟು ಮೂರು ಜನ ಅಣ್ಣ ತಮ್ಮಂದಿರು ಇದ್ದು ಎಲ್ಲರೂ ಇನ್ನೂ ಬೇರೆ ಬೇರೆಯಾಗಿರುವದಿಲ್ಲ ಆದರೆ ಮೂರು ಜನ ಅಣ್ಣ-ತಮ್ಮಂದಿರ ಹೆಸರಿನಲ್ಲಿ ಶಹಾಪೂರ ಪಟ್ಟಣದ ಗ್ಯಾರೇಜ್ ಲೈನದಲ್ಲಿ ನನ್ನ ಮತ್ತು ನನ್ನ ಅಕ್ಕಳಾದ ಮಂಜುಳಾ ಗಂಡ ಸಿದ್ರಾಮರಡ್ಡಿ ಕುರಾಳ ಹಾಗು ಮೈದುನನಾದ ಭೀಮರಡ್ಡಿ ಇವರ ಹೆಂಡತಿಯಾದ ಮೀನಾಕ್ಷಿ ನಾವೂ ಮೂರು ಜನರ ಹೆಸರಿನಲ್ಲ್ಲಿ ಶಹಾಪೂರ ಪಟ್ಟಣದಲ್ಲಿ ಶ್ರೀ ಶಿವಕೃಪಾ ಮಹಿಂದ್ರಾ ಟ್ರ್ಯಾಕ್ಟರ್ ಶೋ ರೂಮ ಹಾಗು ಶ್ರೀ ಶಿವಸಾಯಿ ಸುಪರ್ ಬಜಾರ ಇರುತ್ತವೆ. ಅವುಗಳನ್ನು ನಾವೂ ಆಗಾಗ ಬಂದು ನೋಡಿಕೊಂಡು ಹೋಗುತ್ತಿದ್ದೆವು. ಅಲ್ಲದೇ ಶಹಾಪೂರ ಪಟ್ಟಣದ ಶ್ರೀ ಶಿವ ಸಾಯಿ ಸೂಪರ್ ಬಜಾರ್ ಅಂಗಡಿಯೂ ಸಹ ನಮ್ಮ ಮಾಲೀಕತ್ವಕ್ಕೆ ಒಳಪಟ್ಟಿದ್ದು ಇರುತ್ತದೆ. ಆದರೆ ಎರಡು ಅಂಗಡಿಗಳು ಮಾಲೀಕತ್ವವು ಮೂರು ಜನ ಅಣ್ಣ ತಮ್ಮಂದಿರದಾಗಿರುತ್ತದೆ. ಶ್ರೀ ಶಿವ ಸಾಯಿ ಸುಪರ ಬಜಾರ ಅಂಗಡಿಯಲ್ಲಿ ಸುರೇಶ ತಂದೆ ಚಂದ್ರಕಾಂತ ಜಕರಡ್ಡಿ ಇವರು ನಮ್ಮ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಹಾಗು ನಮ್ಮ ಮಹೇಂದ್ರ ಟ್ರ್ಯಾಕ್ಟರ ಶೋ ರೂಮ ವ್ಯವಹಾರಗಳನ್ನು ನಮ್ಮ ಮ್ಯಾನೇಜರ ಆದಂತಹ ಡಿ. ರಾಜಶಂಕರ ದುಗನೂರ ಇವರು ನೋಡಿಕೊಂಡು ಹೋಗುತ್ತಾರೆ. ನಾವಿಬ್ಬರೂ ಅಕ್ಕ ತಂಗಿಯರು ಆಗಾಗ ಬಿಡುವಿನ ವೇಳೆಯಲ್ಲಿ ನಮ್ಮ ಗಂಡಂದಿರೊಂದಿಗೆ ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಶಹಾಪೂರಕ್ಕೆ ಬಂದು ವ್ಯವಹಾರದ ಬಗ್ಗೆ ನೋಡಿಕೊಂಡು ಹೋಗುತ್ತಿದ್ದೆವು ಹೀಗಿರುವಾಗ ದಿನಾಂಕ 24/10/2022 ರಂದು, ಮಧ್ಯಾಹ್ನದ 1-00 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ಅಕ್ಕಳಾದ ಮಂಜುಳಾ ಹಾಗು ನನ್ನ ಗಂಡ ಬಸವರಾಜಗೌಡ ಮತ್ತು ನನ್ನ ಮಗನಾದ ಶಿವರಡ್ಡಿ ಮತ್ತು ಅಳಿಯನಾದ ವಿಜಯಶಂಕರ ಎಲ್ಲರೂ ಕೂಡಿ ಎಮದಿನಂತೆ ಶಹಾಪೂರ ಪಟ್ಟಣಕ್ಕೆ ಬಂದು ಮದ್ಯಾಹ್ನ 1-30 ಗಂಟೆಗೆ ನಮ್ಮ ಮಹಿಂದ್ರಾ ಶೋ ರೂಮಗೆ ಬಂದಾಗ ಅಲ್ಲಿದ್ದ ಮ್ಯಾನೇಜರ್ ಡಿ ರಾಜಶಂಕರ ತಂದೆ ನರಸರಡ್ಡಿ ದಗುನೂರ ಸಾ|| ಬಸವೇಶ್ವರ ನಗರ ಶಹಾಪೂರ ಈತನು ನಮಗೆ ತಡೆದು ನಿಲ್ಲಿಸಿ ಏ ನೀವು ಯಾರೂ ಇದು ಭೀಮರಡ್ಡಿ ಇವರಿಗೆ ಸಂಬಂದಿಸಿದ ಶೋ ರೂಮ ಇದೆ ನೀವು ಯಾರೂ ಒಳಗೆ ಬರಬಾರದು ಅಂತ ನಮಗೆ ತಡೆದು ನಿಲ್ಲಿಸಿದಾಗ, ನಾವೂ ಯಾಕೋ ಇದರ ಮಾಲೀಕರು ನಾವೂ ಇದ್ದೇವೆ ಇಲ್ಲಿಯವರೆಗೆ ನಮಗೆ ಏನೂ ಅನ್ನದವನು ನೀನು ಭೀಮರಡ್ಡಿ ಈತನ ಮಾತು ಕೇಳಿ ಮಾಲೀಕರಾದ ನಮಗೆ ಬಿಡುವದಿಲ್ಲವೇನೂ ಅಂತ ಅಂದಾಗ ಸದರಿಯವನು ಅವಾಚ್ಯವಾಗಿ ಬೈದು ನಮಗೆ ಕೈಯಿಂದ ದಬ್ಬಿಸಿಕೊಟ್ಟಿರುತ್ತಾನೆ. ನಂತರ ಮಧ್ಯಾಹ್ನ 2-45 ಗಂಟೆಯ ಸುಮಾರಿಗೆ ನಮ್ಮ ಮಾಲೀಕತ್ವದದ ಶಹಾಪೂರದ ಶ್ರೀ ಶಿವ ಸಾಯಿ ಸೂಪರ್ ಬಜಾರಕ್ಕೆ ಹೋದಾಗ ಅಲ್ಲಿಯೂ ಸಹ ಡಿ ರಾಜಶೇಖರ ಮತ್ತು ಮ್ಯಾನೇಜರ್ ಸುರೇಶ ಜಕರಡ್ಡಿ, ಅಲ್ಲಿಗೂ ಸಹ ಬಂದು ನಮಗೆ ಅಂಗಡಿಯಲ್ಲಿ ಹೋಗದಂತೆ ತಡೆದು ನಿಲ್ಲಿಸಿ ಸೂಳೇ ಮಕ್ಕಳೆ ಅಂಗಡಿಯೊಳಗೆ ಒಬ್ಬರೇ ಹೋದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ತಡೆದು ನಿಲ್ಲಿಸಿ ಕೈಯಿಂದ ಜಾಡಿಸಿ ದಬ್ಬಿಸಿಕೊಟ್ಟಿರುತ್ತಾರೆ. ಸದರಿ ಘಟನೆಗಳು ನಡೆದಾಗ ಅಲ್ಲಿಯೇ ಇದ್ದ ನಮಗೆ ಪರಿಚಯದವರಾದ ಮಲ್ಲಣ್ಣಗೌಡ ತಂದೆ ಸಂಗನಗೌಡ ಮಾಲೀಪಾಟೀಲ ವ|| 50 ಜಾ|| ರಡ್ಡಿ ಉ|| ಒಕ್ಕಲುತನ ಸಾ|| ಹೋತಪೇಟ, ಹೊನ್ನಪ್ಪ ತಂದೆ ಬಾಲಪ್ಪ ಯಾದಗಿರಿ ಸಾ|| ಹೋತಪೇಟ, ರಾಜು ತಂದೆ ಕಲ್ಲಪ್ಪ ಚಂಡು ಸಾ|| ಹಳಿಸಗರ, ರಮೇಶ ತಂದೆ ಬೋಜಪ್ಪ ನಗನೂರ ಸಾ|| ಹಳಿಸಗರ ಇವರು ಬಂದು ಸದರಿ ಘಟನೆಯನ್ನು ನೋಡಿ ನಮಗೆ ಬಿಡಿಸಿ ಕಳುಹಿಸಿರುತ್ತಾರೆ. ನಂತರ ನಾವೂ ನೇರವಾಗಿ ಮನೆಗೆ ಹೋಗಿ ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಂಡ 2 ಜನರು ನಮ್ಮ ಮೈದುನನಾದ ಭೀಮರಡ್ಡಿ ತಂದೆ ಮಲ್ಲಣಗೌಡ ಕುರಾಳ ಸಾ|| ಸೂಗೂರ ಎನ್. ತಾಃ ಚಿತ್ತಾಪೂರ ಜಿಃ ಕಲಬುರಗಿ ಈತನು ನಮ್ಮ ಆಸ್ತಿ ಲಪಟಾಯಿಸುವ ಸಲುವಾಗಿ ತಮ್ಮ ಮ್ಯಾನೇಜರುಗಳಿಗೆ ಹೇಳಿದ್ದರಿಂದ ಅವರು ಆತನ ಮಾತು ಕೇಳಿ ಆತನ ಕುಮ್ಮಕ್ಕಿನಿಂದು ನಾವೂ ನಮ್ಮ ಅಂಗಡಿಯ ಒಳಗೆ ಹೋಗದಂತೆ ನಮಗೆ ತಡೆದು ನಿಲ್ಲಿಸಿ ಜಗಳಾ ತೆಗೆದು ಅವಾಚ್ಯವಾಗಿ ಬೈದು ಜೀವದ ಭಯ ಹಾಕಿದ್ದು ಕಾರಣ ಮೇಲ್ಕಾಣಿಸಿದ 3 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ನೀಡಿದ್ದು ಇರುತ್ತದೆ, ಸದರಿ ದೂರಿನ ಸಾರಾಂಶದ ಮೆಲಿಂದ ಠಾಣೆಯ ಗುನ್ನೆ ನಂ 183/2022 ಕಲಂ 341, 323 504, 506, 114 ಸಂ 134 ಐ,ಪಿ,ಸಿ, ನ್ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಗೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 28-10-2022 12:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080