ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 27-11-2021

ಯಾದಗಿರ ನಗರ ಪೊಲೀಸ ಠಾಣೆ
ಗುನ್ನೆ ನಂ 122/2021 ಕಲಂ 457, 380 ಐಪಿಸಿ : ಫಿಯರ್ಾಧಿ ಸಾರಾಂಶವೇನೆಂದರೆ, ನಾನು ಯಾದಗಿರಿ ನಗರದ ಸುಭಾಷ ವೃತ್ತದಲ್ಲಿ ಇರುವ ಶ್ರೀ ಸೂರ್ಯಕಿರಣ ಯಂದೆ ಇವರ ಕಾಂಪ್ಲೆಕ್ಸ್ದಲ್ಲಿ ಸುಮಾರು 25 ವರ್ಷದಿಂದ ಬೇಕ್ರಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಇರುತ್ತೇನೆ. ನನ್ನ ಅಂಗಡಿಯನ್ನು ನಾನು ಮತ್ತು ನಮ್ಮ ತಮ್ಮ ವಿಜಯಕುಮಾರ ಇಬ್ಬರು ನೋಡಿಕೊಂಡು ಹೋಗುತ್ತೇವೆ. ಹೀಗಿದ್ದು ಪ್ರತಿ ನಿತ್ಯದಂತೆ ನಾನು ಮತ್ತು ನಮ್ಮ ತಮ್ಮ ನಿನ್ನೆ ದಿನಾಂಕ 25/11/2021 ರಂದು ರಾತ್ರಿ 11-20 ಗಂಟೆಯ ಸುಮಾರಿಗೆ ನಮ್ಮ ಬೇಕ್ರಿ ಅಂಗಡಿ ಶೆಟ್ಟರ ಕೀಲಿ ಹಾಕಿಕೊಂಡು ಮನೆಗೆ ಹೋದೆವು. ಪ್ರತಿ ನಿತ್ಯದಂತೆ ಇಂದು ದಿನಾಂಕ 26/11/2021 ರಂದು ಬೆಳಿಗ್ಗೆ 06-45 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ತಮ್ಮ ವಿಜಯಕುಮಾರ ಇಬ್ಬರು ಕೂಡಿ ಅಂಗಡಿಗೆ ಬಂದು ನೋಡಿದಾಗ ಅಂಗಡಿ ಕೀಲಿ ಮುರಿದಿದ್ದು, ಶೆಟ್ಟರ ತೆರೆದು ಮುಚ್ಚಿದಂತೆ ಕಂಡು ಬಂತು. ಗಾಭರಿಯಾಗಿ ಒಳಗೆ ಹೋಗಿ ನೋಡಿದಾಗ ಗಲ್ಲೆ ಮುರಿದಿದ್ದು ಅದರಲ್ಲಿ ಇದ್ದ ನಗದು ಹಣ 1,40,000/- ರೂಪಾಯಿಗಳು ಕಳ್ಳತನವಾಗಿದ್ದು ಕಂಡು ಬಂತು. ನಂತರ ನಾನು ನಮ್ಮ ಗೆಳೆಯನಾದ ಶ್ರೀ ಲಕ್ಷ್ಮೀಕಾಂತರೆಡ್ಡಿ ತಂದೆ ಸಿದ್ರಾಮರೆಡ್ಡಿ, ಮತ್ತು ನಮ್ಮಲ್ಲಿ ಕೆಲಸ ಮಾಡುವ ಸಂಜಯ ತಂದೆ ಬಸಣ್ಣ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನೋಡಿದರು. ಕಾರಣ ದಿನಾಂಕ 25/11/2021 ರಂದು ರಾತ್ರಿ 11-20 ಗಂಟೆಯಿಂದ ದಿನಾಂಕ 26/11/2021 ರ ಬೆಳಿಗ್ಗೆ 6-45 ಗಂಟೆಯ ಅವಧಿಯಲ್ಲಿ ಯಾದಗಿರಿಯ ಸುಭಾಷ ವೃತ್ತದಲ್ಲಿ ಇರುವ ನಮ್ಮ ಮಯೂರ ಬೆಂಗಳೂರು ಬೇಕ್ರಿ ಅಂಗಡಿಯ ಶೇಟ್ಟರ ಕೀಲಿ ಮುರಿದು ಗಲ್ಲೆಯಲ್ಲಿ ಇಟ್ಟಿದ್ದ ನಗದು ಹಣ 1,40,000/- ರೂಪಾಯಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮನೆಯಲ್ಲಿ ವಿಚಾರಣೆ ಮಾಡಿ ಈಗ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಳ್ಳತನ ಮಾಡಿವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 122/2021 ಕಲಂ 457, 380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 182/2020 ಕಲಂ 379 ಐಪಿಸಿ:ದಿನಾಂಕ:26/11/2021 ರಂದು 6:30 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗ ಫಿಯರ್ಾದಿ ಶ್ರೀ ನಿಂಗಪ್ಪ ತಂದೆ ಭೀಮರಾಯ ಪೂಜಾರಿ ವ|| 59 ವರ್ಷ ಸಾ|| ಖಾನಾಪುರ ಎಸ್ಹೆಚ್ (ರುಕ್ಮಾಪೂರ) ತಾ|| ಸುರಪುರಇವರು ಠಾಣೆಗೆ ಬಂದು ಒಂದು ಅಜರ್ಿ ನೀಡಿದ್ದು ಸಾರಾಂಶವೆನೆಂದರೆ, ನನ್ನದು ಗ್ರೇ ಬಣ್ಣದ ಹೊಂಡಾ ಕಂಪನಿಯ ಸಿಬಿ ಶೈನ್ ಡ್ರಮ್ ಮೋಟರ ಸೈಕಲ್ ನಂಬರ ಏಂ-33-ಘ-1286ನೇದ್ದು ಇದ್ದು, ಅದರ ಚೆಸ್ಸಿ ನಂಬರ. ಒಇ4ಎಅ65ಂಂಎಖಿ009666 ಮತ್ತುಇಂಜಿನ್ ನಂಬರ ಎಅ65ಇಖಿ2015665 ನೇದ್ದು ಇರುತ್ತದೆ. ಸದರಿ ಮೋಟರ ಸೈಕಲ್ನ್ನು ನಾನೇ ಚಲಾಯಿಸಿಕೊಂಡು ಇರುತ್ತೇನೆ. ಹಿಗಿದ್ದು ನಿನ್ನೆ ದಿನಾಂಕ: 24/11/2021 ರಂದು ಬೆಳಿಗ್ಗೆ 9:30 ಗಂಟೆ ಸುಮಾರಿಗೆ ನಾನು ಎಂದಿನಂತೆ ನನ್ನ ಕರ್ತವ್ಯಕ್ಕೆ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ ಸುರಪುರಕ್ಕೆ ಬಂದು ನನ್ನ ಮೋಟರ್ ಸೈಕಲ್ನ್ನು ಕಾಲೇಜಿನ ಮುಂಭಾಗದಲ್ಲಿ ನಿಲ್ಲಿಸಿ ಹೋಗಿದ್ದೆನು. ನಂತರ ನಾನು ನನ್ನ ಕರ್ತವ್ಯ ಮುಗಿಸಿಕೊಂಡು ಸಾಯಂಕಾಲ 4 ಗಂಟೆ ಸುಮಾರಿಗೆ ಬೈಕ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲಾಗಿ ಅಲ್ಲಿ ನನ್ನ ಮೋಟರ್ ಸೈಕಲ್ ಇರಲಿಲ್ಲ. ಆಗ ನಾನು ಗಾಬರಿಯಾಗಿ ಸುರಪುರದ ದರಬಾರ್ ರೋಡ್, ಮೂತರ್ಿಕಟ್ಟಾ, ಗಾಂಧಿಚೌಕ್, ತರಕಾರಿ ಮಾಕರ್ೆಟ್, ಹಳೆ ಬಸ್ ನಿಲ್ದಾಣ ಎಲ್ಲಾ ಕಡೆ ಹುಡುಕಾಡಿದರು ನನ್ನ ಮೋಟರ್ ಸೈಕಲ್ ಸಿಕ್ಕಿರುವದಿಲ್ಲ. ನನ್ನ ಮೋಟರ ಸೈಕಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಹಾಜರಾಗಿ ದೂರು ಸಲ್ಲಿಸುತ್ತಿದ್ದೇನೆ. ಕಾರಣ ದಿನಾಂಕ 24/11/2021 ರಂದು ಬೆಳಿಗ್ಗೆ 9:30 ಗಂಟೆಯಿಂದ ಸಾಯಂಕಾಲ 4:00 ಗಂಟೆಯ ಮದ್ಯದ ಅವಧಿಯಲ್ಲಿ ಸುರಪುರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ ಮುಂದೆ ನಿಲ್ಲಿಸಿದ ನನ್ನ ಮೋಟರ ಸೈಕಲ್ ನಂಬರ ಏಂ-33-ಘ-1286 ಅ.ಕಿ. 50,000=00 ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳುವಾದ ನನ್ನ ಮೋಟರ ಸೈಕಲ್ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 182/2021 ಕಲಂ: 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 


ಭೀಗುಡಿ ಪೊಲೀಸ ಠಾಣೆ
ಗುನ್ನೆ ನಂ: 87/2021 ಕಲಂ 3 & 7 ಇ.ಸಿಯ್ಯಾಕ್ಟ : ಇಂದು ದಿನಾಂಕ:26/11/2021 ರಂದು 2 ಎ.ಎಮ್. ಸುಮಾರಿಗೆ ಮಾನ್ಯ ಸಿಪಿಐ ಶಹಾಪೂರ ವೃತ್ತ ಹಾಗೂ ಪಿ.ಐ ಶಹಾಪುರಠಾಣೆಇವರಿಗೆಗುರುಮಠಕಲ್ದಿಂದ ಹೊರರಾಜ್ಯಕ್ಕೆ ಪಡಿತರಅಕ್ಕಿಯಯನ್ನುಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದರಿಂದಅವರು ಫಿಯರ್ಾದಿ ಪಿ.ಎಸ್.ಐ(ಕಾಸು) ಗೋಗಿ ಠಾಣೆರವರಿಗೆ ಮಾಹಿತಿ ನೀಡಿ ದಾಳಿ ಮಾಡುವಂತೆ ಸೂಚಿಸಿದ್ದರಿಂದ ಫಿಯರ್ಾದಿದಾರರುಇಂದು ದಿನಾಂಕ 26/11/2021 ರಂದು 3 ಎ.ಎಮ್.ಕ್ಕೆ ಭೀ.ಗುಡಿಠಾಣೆಯಅಧಿಕಾರಿ ಮತ್ತು ಸಿಬ್ಬಂದಿ ರವರೊಂದಿಗೆ ಮತ್ತುಆಹಾರಇಲಾಖೆಯವರನ್ನು ಕರೆಸಿಕೊಂಡು ಶಕಾಪುರಕ್ರಾಸ್ ಹತ್ತಿರ ನಿಂತಾಗ 3.30 ಎ.ಎಮ್.ಕ್ಕೆ ಶಹಾಪೂರಕಡೆಯಿಂದ ಮೂರು ಟ್ರಕ್ಗಳು ಬಂದಾಗ ದಾಳಿ ಮಾಡಿ 1)ಅಶೋಕ ಲೈಲಂಡ್ಟ್ರಕ್ ನಂ:ಜಿಜೆ-36, ಟಿ-4233 2)ಭಾರತ ಬೆಂಜ್ಟ್ರಕ್ ನಂ:ಜಿಜೆ-36, ವಿ-7433 3)ಭಾರತ ಬೆಂಜ್ಟ್ರಕ್ ನಂ:ಜಿಜೆ-36, ವಿ-1233 ಒಟ್ಟು ಅ.ಕಿ. 15 ಲಕ್ಷರೂಕಿಮ್ಮತ್ತಿನ ಮೂರು ಟ್ರಕ್ಗಳು ಹಾಗೂ ಟ್ರಕ್ಗಳಲ್ಲಿದ್ದ 1966 ಚೀಲಗಳಲ್ಲಿದ್ದ 983 ಕ್ವಿಂಟಲ್ ಅಕ್ಕಿ ಅ.ಕಿ. 21,62,600=00 ರೂ ನೇದ್ದವುಗಳನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಅಕ್ಕಿ ಮಾಲೀಕನಾದ ನರೇಂದ್ರರಾಠೋಡ ಸಾ:ಗುರುಮಠಕಲ್ ಹಾಗೂ ಮೂವರುಟ್ರಕ್ಚಾಲಕರಾದ ಮೊಹ್ಮದಇಮ್ರಾನ್ಖಾನ್(ಯು.ಪಿ), ರಾಮನಾಥಗುರ್ಜರ(ರಾಜಸ್ಥಾನ), ಸಾಕೀರತಂದೆಇಸ್ಲಾಂ(ಹರಿಯಾಣ) ಇವರ ವಿರುಧ್ಧ ಪ್ರಕರಣ ದಾಖಲಿಸಿ ಕ್ರಮಕೈಕೊಂಡಿದ್ದುಇರುತ್ತದೆ.

 

ಗೋಗಿ ಪೊಲೀಸ ಠಾಣೆ
ಗುನ್ನೆ ನಂ: 108/2021 ಕಲಂ 87 ಕೆಪಿ ಯ್ಯಾಕ್ಟ : ಇಂದು ದಿನಾಂಕ 26/11/2021 ರಂದು 04:00 ಪಿ.ಎಮ್.ಕ್ಕೆ ಫಿಯರ್ಾದಿ ಠಾಣೆಯಲ್ಲಿದ್ದಾಗ ನಡಿಹಾಳ ಗ್ರಾಮದ ಹನುಮಾನ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, 4.15 ಪಿ.ಎಮ್.ಕ್ಕೆ ಪ್ರಕರಣ ದಾಖಲಿಸಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ 04-55 ಪಿ.ಎಮ್ ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಸಿಕ್ಕ 07 ಜನ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 12600/- ರೂ, 52 ಇಸ್ಪೇಟ್ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿರುತ್ತಾರೆ.

ಇತ್ತೀಚಿನ ನವೀಕರಣ​ : 28-11-2021 10:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080