ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 27-11-2022

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 124/2022 ಕಲಂ 457, 380 ಐಪಿಸಿ: ಪಿರ್ಯಾಧಿ ಸಾರಾಂಶವೆನೆಂದರೆ, ನಾನು ಯಾದಗಿರಿ ಜಿಲ್ಲಾ ಕಾರಾಗೃಹದಲ್ಲಿ ಕಳೆದ 2 ತಿಂಗಳುಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು ನಾನು ಮತ್ತು ನನ್ನ ಹೆಂಡತಿ ರುಚಿತಾ ಮತ್ತು ನನ್ನ ಮಗಳೊಂದಿಗೆ ಯಾದಗಿರಿ ನಗರದ ಅಜೀಜ ಕಾಲೋನಿಯ ಮನೋಹರ ಕಟ್ಟಿಮನಿ ಇವರ ಮನೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತೇವೆ. ನನ್ನ ಹೆಂಡತಿ ರುಚಿತಾ ಇವಳಿಗೆ ಶಸ್ತ್ರ ಚಿಕಿತ್ಸೆ ಆಗಿದ್ದರಿಂದ ಕಳೆದ ಒಂದು ತಿಂಗಳ ಹಿಂದೆ ಅವಳ ತವರು ಮನೆಗೆ ಹೋಗಿದ್ದು ಇರುತ್ತದೆ. ಹಿಗೀದ್ದು ದಿನಾಂಕ; 25/11/2022 ರಂದು ನನ್ನದು ರಾತ್ರಿ ಕರ್ತವ್ಯ ಇದ್ದುದರಿಂದ ನನ್ನ ಬಾಡಿಗೆ ಮನೆಯಿಂದ ಸಾಯಂಕಾಲ 6-00 ಗಂಟೆ ಸುಮಾರಿಗೆ ಮನೆಯ ಬೀಗ ಹಾಕಿಕೊಂಡು ಹೋಗಿದ್ದು ಇರುತ್ತದೆ. ನಂತರ ನನ್ನ ರಾತ್ರಿ ಕರ್ತವ್ಯ ಮುಗಿಸಿಕೊಂಡು ಇಂದು ದಿನಾಂಕ; 26/11/2022 ರಂದು ಬೆಳೆಗ್ಗೆ 7-43 ಗಂಟೆ ಸುಮಾರಿಗೆ ನನ್ನ ಮನೆಗೆ ಬಂದು ನೋಡಲಾಗಿ ಮನೆಯ ಬೀಗ ಮುರಿದಿದ್ದು ಒಳಗಡೆ ಹೋಗಿ ನೋಡಲಾಗಿ ಮನೆಯ ಸಾಮಾನುಗಳು ಚಲ್ಲಾಪಿಲ್ಲಿಯಾಗಿದ್ದವು. ನಂತರ ನಾನು ಬೆಡರೂಮದಲ್ಲಿ ಹೋಗಿ ನೋಡಲಾಗಿ ಅಲಮಾರಿ ಬಾಗಿಲು ತೆಗೆದಿತ್ತು ಆಗ ನಾನು ಅಲಮಾರಿಯಲ್ಲಿದ್ದ ನನ್ನ ಮಗಳ 5 ಗ್ರಾಂ ಬಂಗಾರದ ಲಾಕೆಟ್ ಚೈನ್ ಅ.ಕಿ.20,000/-ರೂ. ಮತ್ತು ಮಗಳ ಒಂದೊಂದು ಗ್ರಾಂ ದ ಮೂರು ಬಂಗಾರದ ಉಂಗುರಗಳು ಅ.ಕಿ.7,500/-ರೂ. ಮತ್ತು ನನ್ನ ಮಗಳ ಬೆಳ್ಳಿಯ 2 ತೊಲೆಯ ಕಾಲ್ ಚೈನ್ ಅ.ಕಿ.1,000/- ರೂ. ಹಾಗೂ ಬೆಳ್ಳಿಯ 2 ತೊಲೆಯ ಕೈ ಚೈನ್ ಅ.ಕಿ.1,000/- ರೂ. ನೇದ್ದವುಗಳು ಕಾಣಿಸಲಿಲ್ಲ. ನಂತರ ನಾನು ನಮ್ಮ ಮನೆಯ ಮಾಲೀಕರಾದ ಮನೋಹರ ಕಟ್ಟಿಮನಿ ಇವರಿಗೆ ವಿಷಯ ತಿಳಿಸಲಾಗಿ ಅವರು ಮತ್ತು ನಾನು ಮನೆಯಲ್ಲಿ ಅಲಮಾರಿ ಹಾಗೂ ಇತರೆ ಕಡೆಗಳಲ್ಲಿ ಹುಡುಕಲು ಈ ಮೇಲಿನ ಒಟ್ಟು 29,500/-ರೂ. ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಕಾಣಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ನಂತರ ನಮ್ಮ ಮನೆಯ ಕಳ್ಳತನ ವಿಷಯ ತಿಳಿದು ನಮ್ಮ ಮನೆಯ ಹತ್ತಿರದ ಶ್ರೀನಿವಾಸ ತಂದೆ ಹುಸೇನಪ್ಪ ಈಟೇಕರ್ ಇವರು ನನ್ನಲ್ಲಿಗೇ ಬಂದು ತಿಳಿಸಿದ್ದೆನೆಂದರೆ, ನಮ್ಮ ಮನೆಯ ಬೀಗ ಮುರಿದು ಯಾರೋ ಕಳ್ಳರು ಕಳ್ಳತನ ಮಾಡಿ ಮನೆಯಲ್ಲಿದ್ದ 5 ಗ್ರಾಂ ಬಂಗಾರದ ಕಿವಿಯೋಲೆ ಅ.ಕಿ.20,000/-ರೂ. ಮತ್ತು ಒಂದು ವಿವೋ ಕಂಪನಿಯ ಎ 51 ಮೊಬೈಲ್ ಅ.ಕಿ.5,000/- ರೂ. ನೇದ್ದು ಒಟ್ಟು ಸುಮಾರು 25,000/-ರೂ ಬೆಲೆಯ ಬಂಗಾರದ ಆಭರಣ ಮತ್ತು ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ್ದು ಇರುತ್ತದೆ. ಈ ಬಗ್ಗೆ ನಾನು ನಮ್ಮ ಮನೆಯಲ್ಲಿ ವಿಚಾರಿಸಿ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ನನ್ನ ಮತ್ತು ಶ್ರೀನಿವಾಸ ಇವರ ಮನೆಯ ಬೀಗ ಮುರಿದು ಮನೆಯಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣ ಹಾಗೂ ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.124/2022 ಕಲಂ.457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ..

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ : 202/2022 ಕಲಂ, 379. 511 ಐ.ಪಿ.ಸಿ: ಇಂದು ದಿನಾಂಕ: 26/11/2022 ರಂದು ಸಾಯಂಕಾಲ: 5-15 ಪಿ,ಎಂ ಕ್ಕೆ ಠಾಣೆಗೆ ಪಿರ್ಯಾದಿ ಶ್ರೀ ಸಿದ್ದಯ್ಯಸ್ವಾಮಿ ತಂದೆ ವೀರುಪಾಕ್ಷಯ್ಯ ಸ್ವಾಮಿ ವಯ: 45 ಉ: ಕಂದಾಯ ನಿರೀಕ್ಷಕರು ಹಯ್ಯಾಳ (ಬಿ) ತಾ: ವಡಗೇರಾ ಜಾ: ಜಂಗಮ ಸಾ: ದೇವರಗೋನಾಲ ತಾ: ಸುರಪೂರ ಜಿ: ಯಾದಗಿರ ಮೋ ನಂ: 9980590194 ರವರು ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ. ನಾನು ಮೇಲ್ಕಂಡ ವಿಳಾಸದಲ್ಲಿ ಈಗ ಸುಮಾರು 01 ವರ್ಷ 08 ತಿಂಗಳುಗಳಿಂದ ಕಂದಾಯ ನಿರೀಕ್ಷಕ ಅಂತ ಕರ್ತವ್ಯ ನಿರ್ವಹಿಸುತ್ತಿರುತ್ತೆನೆ.ಯಾದಗಿರ ಜಿಲ್ಲೆಯ ವಡಗೇರಾ ತಾಲೂಕಿನ ಹಯ್ಯಾಳ(ಬಿ) ಗ್ರಾಮದ ಶ್ರೀ ಹಯ್ಯಾಳಲಿಂಗೇಶ್ವರ ದೇವಸ್ಥಾನವು ಕನರ್ಾಟಕ ಸಕರ್ಾರದ ವ್ಯಾಪ್ತಿಗೆ ಬರುವ ಧಾಮರ್ಿಕ ದತ್ತಿ ಇಲಾಖೆಗೆ ಒಳಪಡುತ್ತಿದ್ದು. ಸದರಿ ದೇವಸ್ಥಾನವು ಜಿಲ್ಲಾಡಳಿತಕ್ಕೋಳಪಟ್ಟಿರುತ್ತದೆ. ಹಿಗಿದ್ದು ದಿನಾಂಕ: 21/11/2022 ರಂದು ನಾನು ನನ್ನ ಕರ್ತವ್ಯ ಮುಗಿಸಿಕೊಂಡು ಮನೆಯಲ್ಲಿದ್ದಾಗ ರಾತ್ರಿ 10-00 ಪಿ.ಎಂ ಕ್ಕೆ ಹಯ್ಯಾಳ (ಬಿ) ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಮೋನಪ್ಪ ತಂದೆ ಸುಭಾಷ್ ಪೂಜಾರಿ ವಯ: 30 ಉ: ಗ್ರಾಮ ಪಂಚಾಯತ ಅಧ್ಯಕ್ಷರು ಹಯ್ಯಾಳ(ಬಿ) ಜಾ: ಕುರುಬ ಸಾ: ಹಯ್ಯಾಳ(ಬಿ) ತಾ: ರವರು ನನನೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಪ್ರತಿ ನಿತ್ಯದಂತೆ ರಾತ್ರಿ ಊಟ ಮಾಡಿದ ನಂತರ ನಾನು ಮತ್ತು ನಮ್ಮೂರ ಶಿವಾರಾಜ ತಂದೆ ನಿಂಗಣ್ಣ ಕಾಮಣ್ಣೋರ ವಯ: 30 ಉ: ಕೂಲಿ ಕೆಲಸ ಜಾ: ಕುರುಬ ಸಾ: ಹಯ್ಯಾಳ(ಬಿ) ಇಬ್ಬರೂ ಕೂಡಿ ನಮ್ಮೂರ ಶ್ರೀ ಹಯ್ಯಾಳಲಿಂಗೇಶ್ವರ ದೇವಸ್ಥಾನದ ಕಡೆಗೆ ಹೋಗಿ ಗುಡಿಯ ಮುಂದೆ ತಿರುಗಾಡುತ್ತಾ ಗುಡಿಯ ಮುಂದೆ ನೋಡಲಾಗಿ ಗುಡಿಯ ಮುಂದಿನ ಆವರಣದಲ್ಲಿ ಇಟ್ಟ ಕುದುರೆಯ ಮೂತರ್ಿ ಕಾಣಲಿಲ್ಲ ನಂತರ ನಮಗೆ ಗೊತ್ತಾಗಿದ್ದೆನೆಂದರೆ ಕಳ್ಳರು ಕಂಚಿನ ಕುದುರೆಯ ಮೂತರ್ಿಯು ಮದರಕಲ್ ರೋಡಿನಲ್ಲಿ ಇಟ್ಟು ಹೋಗಿರುತ್ತಾರೆ ಅಂತ ಗೊತ್ತ್ತಾಗಿರುತ್ತದೆ ಅಂತ ಹೇಳಿದರು. ನಂತರ ನಾನು ಈ ವಿಷಯವನ್ನು ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ತಕ್ಷಣ ನಾನು ಹಯ್ಯಾಳ(ಬಿ) ಗ್ರಾಮಕ್ಕೆ ಹೋಗಿ ಹಯ್ಯಾಳ ದಿಂದ ಮದರಕಲ್ ರೋಡಿನಲ್ಲಿ ನಾನು ಮತ್ತು ಮೋನಪ್ಪ ತಂದೆ ಸುಬಾಷ ಪೂಜಾರಿ ಹಾಗೂ ಶಿವರಾಜ ತಂದೆ ನಿಂಗಣ್ಣ ಕಾಮಣ್ಣೋರ ಮೂರು ಜನರು ಕೂಡಿ ಹೋಗಿ ಅಲ್ಲಿಟ್ಟ ಕಂಚಿನ ಕುದುರೆಯ ಮೂತರ್ಿಯನ್ನು ತೆಗೆದುಕೊಂಡು ಬಂದು ಹಯ್ಯಾಳಲಿಂಗೇಶ್ವರ ದೇವಸ್ಥಾನದಲ್ಲಿ ಇಟ್ಟಿರುತ್ತವೆ.ಯಾರೋ ಕಳ್ಳರು ದಿನಾಂಕ: 21/11/2022 ರಂದು ರಾತ್ರಿ ಸಮಯದಲ್ಲಿ ಅಂದರೆ 9-00 ಪಿ.ಎಂ ದಿಂದ 9-30 ಪಿ.ಎಂ ಮದ್ಯದ ಅವದಿಯಲ್ಲಿ ಹಯ್ಯಾಳ(ಬಿ) ಗ್ರಾಮದ ಶ್ರೀ ಹಯ್ಯಾಳಲಿಂಗೇಶ್ವರ ದೇವಸ್ಥಾನ ಮುಂದೆ ಇಟ್ಟ ಕಂಚಿನ ಕುದುರೆಯ ಮೂತರ್ಿ ಅಂದಾಜು 10,000-00 ರೂ ಕಿಮ್ಮತ್ತಿದು ಕಳ್ಳತನ ಮಾಡುವ ಉದ್ದೇಶದಿಂದ ತೆಗದುಕೊಂಡು ಹೋಗಿ ಮದರಕಲ್ ಗ್ರಾಮದ ಕಡೆಗೆ ಹೋಗುವ ರೋಡಿನಲ್ಲಿ ಬಿಟ್ಟು ಹೋಗಿರುತ್ತಾರೆ. ಈ ಬಗ್ಗೆ ನಾನು ನಮ್ಮ ಮೇಲಾಧಿಕಾರಿಗಲ್ಲಿ ವಿಚಾರಣೆ ಮಾಡಿಕೊಂಡು ಇಂದು ದಿನಾಂಕ: 26/11/2022 ರಂದು ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಹಯ್ಯಾಳಲಿಂಗೇಶ್ವರ ಗುಡಿಯ ಮುಂದೆ ಇಟ್ಟಿದ್ದ ಕಂಚಿನ ಕುದೆರೆಯ ಮೂತರ್ಿ ಅಂದಾಜು ಕಿಮ್ಮತ 10,000-00 ನೇದ್ದನ್ನು ಕಳ್ಳತನ ಮಾಡಲು ಪ್ರಯತ್ನಿಸಿದ ಕಳ್ಳರ ವಿರುದ್ದ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 202/2022 ಕಲಂ: 379.511. ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡೆನು.

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 84/2022 ಕಲಂ 87 ಕೆಪಿ ಯ್ಯಾಕ್ಟ: ಇಂದು ದಿನಾಂಕ: 26/11/2022 ರಂದು 07.15 ಪಿ.ಎಮ್.ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಅಯ್ಯಪ್ಪ ಪಿಎಸ್ಐ ಗೋಗಿ ಪೊಲೀಸ್ ಠಾಣೆ. ರವರು ಆರೋಪಿತರು ಮತ್ತು ಜಪ್ತಿ ಪಂಚನಾಮೆ, ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ಒಂದು ವರದಿ ನೀಡಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 26/11/2022 ರಂದು 07.25 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಕಕ್ಕಸಗೇರಾ ಗ್ರಾಮದ ಸಮುದಾಯ ಭವನದ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದರಿಂದ, ಪಂಚರು ಮತ್ತು ಸಿಬ್ಬಂದಯವರೊಂದಿಗೆ ಕೂಡಿಕೊಂಡು 05.05 ಪಿ.ಎಮ್ ಕ್ಕೆ ದಾಳಿ ಮಾಡಿದ್ದು, ದಾಳಿಯಲ್ಲಿ ಮೇಲಿನ 04 ಜನ ಆರೋಪಿತರು ಸಿಕ್ಕಿದ್ದು ಆರೋಪಿತರಿಂದ ಮತ್ತು ಜೂಜಾಟ ಕಣದಲ್ಲಿದ್ದ ಒಟ್ಟು ನಗದು ಹಣ 6500=00 ರೂ, 52 ಇಸ್ಪೇಟ ಎಲೆಗಳನ್ನು 05.05 ಪಿಎ.ಎಮ್ ದಿಂದ 06.05 ಪಿಎಮ್ ವರೆಗೆ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ಪಡೆದು 07.15 ಪಿ.ಎಮ್.ಕ್ಕೆ ಠಾಣೆಗೆ ಬಂದು ವರದಿ ನೀಡಿದ್ದು ವರದಿಯ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 84/2022 ಕಲಂ: 87 ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 27-11-2022 10:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080