ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 27-12-2021

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ: 189/2021 ಕಲಂ 15[ಎ],32[3] ಕೆ.ಇ ಯಾಕ್ಟ : ಇಂದು ದಿನಾಂಕ: 26/12/2021 ರಂದು 6.00 ಪಿಎಮ್ಕ್ಕೆ ಶ್ರೀ ಗಜಾನಂದ ಬಿರಾದಾರ ಪಿಎಸ್ಐ(ಕಾ.ಸು) ಕೆಂಭಾವಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ವರದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 26/12/2021 ರಂದು 4.00 ಪಿಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಕೆಂಭಾವಿ ಪಟ್ಟಣದ ಹಳೆ ಬಸ್ ನಿಲ್ದಾಣ ಹತ್ತಿರ ಒಂದು ಅಂಗಡಿಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯವನ್ನು ಮಾರಾಟ ಮಾಡಿ ಮಧ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದಾನೆಂದು ಮಾಹಿತಿ ಬಂದ ಮೇರೆಗೆ ನಾನು ಠಾಣೆಗೆ ಇಬ್ಬರು ಪಂಚರಾದ 1) ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವಯಾ|| 37 ಜಾ|| ಪ.ಜಾತಿ ಉ||ಕೂಲಿ ಸಾ|| ಕೆಂಭಾವಿ 2) ಮಕ್ತುಮ ತಂದೆ ಮಾಸುಮಸಾಬ ವಡಕೇರಿ ವಯಾ|| 36 ಜಾ|| ಮುಸ್ಲಿಂ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಬರಮಾಡಿಕೊಂಡು ಅವರಿಗೂ ಮಾಹಿತಿ ತಿಳಿಸಿ ದಾಳಿ ಮಾಡಲು ಸಹಕರಿಸಲು ತಿಳಿಸಿದ್ದು ಅವರು ಒಪ್ಪಿದ್ದರಿಂದ ನಾನು ಮತ್ತು ಠಾಣೆಯಲ್ಲಿದ್ದ ಹೆಚ್ಸಿ 33 ಶಂಕರಗೌಡ, ಪಿಸಿ 214 ಪೆದ್ದಪ್ಪಗೌಡ ರವರನ್ನು ಕರೆದುಕೊಂಡು ಸರಕಾರಿ ಜೀಪ ನಂಬರ ಕೆಎ-33 ಜಿ-0228 ನೇದ್ದರಲ್ಲಿ ಠಾಣೆಯಿಂದ 4.15 ಪಿಎಮ್ಕ್ಕೆ ಹೊರಟು 4.20 ಪಿಎಮ್ಕ್ಕೆ ಕೆಂಭಾವಿ ಪಟ್ಟಣದ ಹಳೆ ಬಸ್ ನಿಲ್ದಾಣ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯ ಕುಡಿಯಲು ಸ್ಥಳಾವಕಾಶ ಮಾಡಿ ಅವರಿಗೆ ಸರಾಯಿ ನೀಡುವುದನ್ನು ಖಚಿತಪಡಿಸಿಕೊಂಡು ನಾನು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಲಾಗಿ ನಮ್ಮನ್ನು ನೋಡಿ ಅಲ್ಲಿ ಸೇರಿದ್ದ ಜನರು ಓಡಿ ಹೋದರು. ಸಾರ್ವಜನಿಕರಿಗೆ ಸರಾಯಿ ಕುಡಿಯಲು ಸ್ಥಳಾವಕಾಶ ಮಾಡುತ್ತಿದ್ದ ವ್ಯಕ್ತಿಗೆ ನಾನು ಮತ್ತು ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮದಲ್ಲಿ ಹಿಡಿದು ಆತನ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ತನ್ನ ಹೆಸರು ದೊಡಪ್ಪ ತಂದೆ ಸಿದ್ದಪ್ಪ ಕವಲ್ದಾರ ವಯಾ|| 56 ವರ್ಷ ಜಾ|| ಹಿಂದೂ ಬೇಡರ ಉ|| ಕೂಲಿ ಸಾ|| ಕೆಳಗೇರಿ ಓಣಿ ಕೆಂಭಾವಿ ತಾ|| ಸುರಪೂರ ಅಂತ ತಿಳಿಸಿದನು. ನಂತರ ಸದರಿ ಸ್ಥಳದಲ್ಲಿದ್ದ ಒಂದು ಸೀಲ್ ಒಡೆದ 180 ಎಂಎಲ್ ನ ಓರಿಜಿನಲ್ ಚಾಯಿಸ್ ವಿಸ್ಕಿ ಪೌಚ್ ಹಾಗೂ 4 ತುಂಬಿದ 180 ಎಂಎಲ್ ನ ಓರಿಜಿನಲ್ ಚಾಯಿಸ್ ವಿಸ್ಕಿ ಪೌಚ್ಗಳು ಒಂದಕ್ಕೆ 70.26 ರೂ ಕಿಮ್ಮತ್ತಿನ 4 ಪೌಚಗಳ ಒಟ್ಟು ಅಂ|| ಕಿ|| 281.00 ರೂ ಮತ್ತು 2 ಖಾಲಿ ಪ್ಲಾಸ್ಟಿಕ್ ಗಿಲಾಸಗಳು ಅಂ|| ಕಿ|| 00.00 ರೂ ನೇದ್ದವು ಸಿಕ್ಕಿದ್ದು, ನಂತರ ದೊಡಪ್ಪ ಈತನನ್ನು ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ಮಾಡಿಕೊಡಲು ಯಾವುದಾದರು ಅಧಿಕೃತ ಪರವಾನಿಗೆ ಇದೆಯೇ ಎಂದು ವಿಚಾರಿಸಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದನು. ಸದರಿ ಮಧ್ಯ ತುಂಬಿದ 180 ಎಮ್ಎಲ್ನ 4 ಪೌಚ್ಗಳನ್ನು ಹಾಗೂ 1 ಖಾಲಿ ಪೌಚ್ ಮತ್ತು 2 ಖಾಲಿ ಪ್ಲಾಸ್ಟಿಕ್ ಗಿಲಾಸಗಳನ್ನು 4.30 ಪಿಎಮ್ದಿಂದ 5.30 ಪಿಎಮ್ದವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡು ಸದರಿ ಆರೋಪಿ, ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 189/2021 ಕಲಂ: 15(ಎ), 32(3) ಕೆಇ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಗುರಮಿಠಕಲ ಪೊಲೀಸ್ ಠಾಣೆ
ಗುನ್ನೆ ನಂ: 183/2021 ಕಲಂ 279, 338 ಐಪಿಸಿ ಮತ್ತು 187 ಐಎಮವಿ ಆಕ್ಟ : ಇಂದು ದಿನಾಂಕ 26.12.2021 ರಂದು ಮಧ್ಯಾಹ್ನ 12-30 ಗಂಟೆಗೆ ಫಿಯರ್ಾದಿ ಮನೆಯ ಎದುರು ಗಡೆಗೆ ಇರುವ ಎನ್.ಹೆಚ್-150 ಹೈವೇ ರೋಡಿನ ಮೇಲೆ ಗಾಯಾಳು ಭವ್ಯ 5 ವರ್ಷ, ಇವಳು ತನ್ನ ತಾಯಿಯೊಂದಿಗೆ ಹೊಲದಿಂದ ಮನೆ ಕಡೆಗೆ ನಡೆದುಕೊಂಡು ಹೊರಟು ರಸ್ತೆ ದಾಟುತ್ತಿದ್ದಾಗ ರಾಯಚೂರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದ ವಾಹನ ನಂಬರ ಕೆಎ-33, ಬಿ-2086 ಟಾಟಾ ಎ.ಸಿ ಗೂಡ್ಸ್ ವಾಹನ ಚಾಲಕನು ತನ್ನ ವಾಹನವನ್ನು ಭವ್ಯ ಇವಳಿಗೆ ಡಿಕ್ಕಿಪಡಿಸಿದ್ದರಿಂದ ಕೆಳಗೆ ಬಿದ್ದ ಭವ್ಯ ಇವಳಿಗೆ ತಲೆಗೆ ಭಾರಿ ರಕ್ತಗಾಯವಾಗಿ ಎಡಕಿವಿಯಿಂದ ಭಾರಿ ರಕ್ತ ಬಂದಿದ್ದು, ಎಡಪಕ್ಕೆಗೆ ಭಾರಿ ರಕ್ತಗಾಯ, ಗದ್ದಕ್ಕೆ, ಎರಡೂ ಮೊಳಕಾಲುಗಳಿಗೆ, ಎಡಭುಜದ ಹಿಂದುಗಡೆ ತೆರಚಿದ ರಕ್ತಗಾಯವಾಗಿದ್ದು, ತನ್ನ ವಾಹನವನ್ನು ಅಲ್ಲಿ ನಿಲ್ಲಿಸದೇ ಓಡಿ ಹೋದ ವಾಹನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 183/2021 ಕಲಂ 279, 338 ಐಪಿಸಿ ಮತ್ತು 187 ಐಎಮವಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 27-12-2021 10:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080