Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 28-02-2022


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 39/2022 ಕಲಂ 279, 338 ಐಪಿಸಿ : ಪಿರ್ಯಾಧಿಯು ಹೆಂಡತಿಯು ಗಾಯಾಳು ಇವಳು ಮೋಟರ್ ಸೈಕಲ್ ಸೈಕಲ್ ನಂ ಕೆಎ- 33 ಕ್ಯೂ-2577 ನೇದ್ದರ ಮೇಲೆ ಹಿಂದೆ ಕುಳಿತು ಚಿನ್ನಾಕರಾದಿಂದ ಗುಂಜನೂರ್ ಕ್ರಾಸ್ ಕಡೆಗೆ ಹೋಗುತ್ತಿರುವಾಗ ಮೋಟರ್ ಸೈಕಲ್ ನೇದ್ದರ ಚಾಲಕ ಅತೀವೇಗ, ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಹೋಗಿ ತಗ್ಗಿಗೆ ಹಾಕಿದ್ದರಿಂದ ಪಿರ್ಯಾಧಿಯ ಹೆಂಡತಿಯು ಮೋಟರ್ ಸೈಕಲ್ ನಿಂದ ಕೆಳಗೆ ಬಿದ್ದು ತಲೆಗೆ ಹಿಂಬಾಗಕ್ಕೆ ಭಾರಿ ಸ್ವರೂಪದ ಗುಪ್ತಗಾಯಗಾಳಗಿ ಕಿವಿಯಲ್ಲಿ ರಕ್ತ ಮೂಗಿನಲ್ಲಿ ಸೊರುತ್ತಿದ್ದು. ಉಪಚಾರಕ್ಕಾಗಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ ಅಂತಾ ಪಿರ್ಯಾಧಿ ವಗೈರೆ ಇರುತ್ತದೆ.

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 31/2022 ಕಲಂ:379 ಐಪಿಸಿ : ಇಂದು ದಿನಾಂಕ:26/02/2022 ರಂದು 3-30 ಪಿಎಮ್ ಕ್ಕೆ ಶ್ರೀ ಸೋಮಪ್ಪ ತಂದೆ ಶಿವಬಸಪ್ಪ ಹೊಸಮನಿ, ವ:63, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ಖಾನಾಪೂರ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಕೆ.ಎಸ್.ಆರ್.ಟಿ.ಸಿ ನಿವೃತ್ತ ಕಂಟ್ರೋಲರ್ ಇದ್ದು, ಈಗ ಸುಮಾರು 3 ವರ್ಷಗಳಿಂದ ಖಾನಾಪೂರ ಸೀಮಾಂತರದಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ಹೊಲದಲ್ಲಿಯೇ ಮನೆ ಕಟ್ಟಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನಮ್ಮ ಹೊಲ ಸವರ್ೆ ನಂ. 109 ಇದ್ದು, 9 ಎಕರೆ 27 ಗುಂಟೆ ವಿಸ್ತೀರ್ಣ ಇರುತ್ತದೆ. ಕುರುಕುಂದಿ ರೊಡಿಗೆ ಖಾನಾಪೂರ ಕೆರೆ ಕೋಡಿ ಹಳ್ಳಕ್ಕೆ ನಮ್ಮೂರ ಮಲ್ಲಮ್ಮ ಗಂಡ ಮಾರ್ತಂಡಪ್ಪ ಪರತಾಪೂರ ಇವರ ಹೊಲ ಇರುತ್ತದೆ. ಸದರಿ ಮಲ್ಲಮ್ಮ ಇವರ ಹೊಲಕ್ಕೆ ಹತ್ತಿರ ಹಳ್ಳದಲ್ಲಿ ನಾನು ಒಂದು 10 ಹೆಚ್.ಪಿ ಮೇಲಿನ ಮೋಟರ್ ಅನ್ನು ಕೂಡಿಸಿ, ನನ್ನ ಹೊಲಕ್ಕೆ ಪೈಪ ಲೈನ ಮಾಡಿಕೊಂಡಿರುತ್ತೇನೆ. ನನ್ನ ಮೋಟರ್ ಬಾಜು ಮಲ್ಲಮ್ಮ ಇವರು ಕೂಡಾ ನನ್ನಂತೆಯೇ ತನ್ನ ಹೊಲಕ್ಕೆ ನೀರು ಹರಿಸಲು 5 ಹೆಚ್.ಪಿ ಮೇಲಿನ ಮೋಟರ್ ಕೂಡಿಸಿರುತ್ತಾಳೆ. ಈಗ ಸುಮಾರು ಒಂದುವರೆ ತಿಂಗಳ ಹಿಂದೆ ದಿನಾಂಕ:11/01/2022 ರಂದು ಸಾಯಂಕಾಲ ನಾನು ಮತ್ತು ಮಲ್ಲಮ್ಮ ಇವಳ ಮಗನಾದ ನಾಗಪ್ಪ ಇಬ್ಬರೂ ನಮ್ಮ ನಮ್ಮ ಮೋಟರ್ ಗಳನ್ನು ಚಾಲು ಮಾಡಿ ನಮ್ಮ ನಮ್ಮ ಹೊಲಕ್ಕೆ ನೀರು ಹರಿಸಿ, ಸಾಯಂಕಾಲ 6 ಗಂಟೆ ಸುಮಾರಿಗೆ ನಮ್ಮ ಮೋಟರಗಳನ್ನು ಬಂದ ಮಾಡಿಕೊಂಡು ಮನೆಗೆ ಹೋಗಿರುತ್ತೇವೆ. ಮರು ದಿವಸ ದಿನಾಂಕ:12/01/2022 ರಂದು ಎಂದಿನಂತೆ ಬೆಳಗ್ಗೆ 10 ಗಂಟೆ ಸುಮಾರಿಗೆ ನಾನು ಮತ್ತು ನಾಗಪ್ಪ ಇಬ್ಬರೂ ನಮ್ಮ ಮೋಟರಗಳನ್ನು ಚಾಲು ಮಾಡಲು ಹೋಗಬೇಕೆಂದರೆ ನಾವು ಅಳವಡಿಸಿದ ಜಾಗದಲ್ಲಿ ಮೋಟರಗಳು ಇರಲಿಲ್ಲ. ಆಗ ಗಾಬರಿಯಾದ ನಾವು ನಮ್ಮ ಮೋಟರ್ ಗಳನ್ನು ಎಲ್ಲಾ ಕಡೆ ಸುತ್ತಮುತ್ತ ಹುಡುಕಾಡಿದೆವು. ಎಲ್ಲಿಯೂ ನಮ್ಮ ಮೋಟರಗಳು ಸಿಗಲಿಲ್ಲ. ನಂತರ ನಾವು ನಮ್ಮ ಅಕ್ಕಪಕ್ಕದ ಗ್ರಾಮಗಳಿಗೆ ಹೋಗಿ ವಿಚಾರಿಸಲಾಗಿ ಎಲ್ಲಿಯೂ ಮೋಟರಗಳು ಸಿಗಲಿಲ್ಲ. ದಿನಾಂಕ:11/01/2022 ರಂದು ಸಾಯಂಕಾಲ 6 ಗಂಟೆಯಿಂದ ದಿನಾಂಕ:12/01/2022 ರ ಬೆಳಗ್ಗೆ 10 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ 10 ಹೆಚ್.ಪಿ ಮೇಲಿನ ಮೋಟರ್ ಅ:ಕಿ: 40,000/- ಮತ್ತು ಮಲ್ಲಮ್ಮ ಇವರ 5 ಹೆಚ್.ಪಿ ಮೇಲಿನ ಮೋಟರ್ ಅ:ಕಿ: 24,000/- ನೇದವುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ನಾವು ಎಲ್ಲಾ ಕಡೆ ಹುಡುಕಾಡಿ ಈಗ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ, ನನ್ನ ಮತ್ತು ಮಲ್ಲಮ್ಮ ಇಬ್ಬರ ಮೇಲ್ಕಂಡ ಎರಡು ಮೋಟರಗಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 31/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 20/2022 ಕಲಂ, 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 26/02/2022 ರಂದು 06.15 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಅಯ್ಯಪ್ಪ ಪಿಎಸ್ಐ (ಕಾ.ಸು) ಗೋಗಿ ಪೊಲೀಸ್ ಠಾಣೆ. ರವರು ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 26/02/2022 ರಂದು ಹೋಸ್ಕೇರಾ ಗ್ರಾಮದ ಕಕ್ಕಸಗೇರಾ ಕ್ರಾಸ್ನ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ಮಾನಪ್ಪ @ ಮಾನಯ್ಯ ತಂದೆ ಸಂಗಯ್ಯ ಗುತ್ತೆದಾರ ವಯಾ:42 ವರ್ಷ ಉ: ಕೂಲಿ ಜಾ: ಇಳಗೇರ ಸಾ: ಹೋಸ್ಕೇರಾ ತಾ: ಶಹಾಪೂರ ಜಿ: ಯಾದಗಿರಿ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 04.30 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 1220/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 20/2022 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 10/2022 ಕಲಂ 279, 337, 338 ಐಪಿಸಿ : ಇಂದು ದಿನಾಂಕ 26/02/2022 ರಂದು ಸಮಯ 4-15 ಪಿ.ಎಂ.ಕ್ಕೆ ಯಾದಗಿರಿ ಜಿಜಿಎಚ್ ನಿಂದ ರಸ್ತೆ ಅಪಘಾತದ ಬಗ್ಗೆ ಎಮ್.ಎಲ್.ಸಿ ಇರುತ್ತದೆ ಅಂತಾ ಪೋನ್ ಮೂಲಕ ತಿಳಿಸಿದಾಗ ಆಸ್ಪತ್ರೆಗೆ ಭೇಟಿ ನೀಡಿದ್ದು ಗಾಯಾಳುಗಳಿಗೆ ವಿಚಾರಿಸಿದ್ದು, ನಂತರ ಆಸ್ಪತ್ರೆಯಲ್ಲಿದ್ದ ಗಾಯಾಳು ಪಿಯರ್ಾದಿ ಶ್ರೀ ವಿರುಪಾಕ್ಷರೆಡ್ಡಿ ತಂದೆ ಬಸವಂತರಾಯ ಕೊಳ್ಳೇರ ವಯ;54 ವರ್ಷ, ಜಾ;ಲಿಂಗಾಯತ್, ಉ;ಒಕ್ಕುಲುತನ, ಸಾ;ರಾಮತೀರ್ಥ, ತಾ;ಚಿತ್ತಾಪುರ, ಜಿ;ಕಲಬುರಗಿ ರವರು ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ ನಾನು ಒಕ್ಕುಲುತನ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ಇಂದು ದಿನಾಂಕ 26/02/2022 ರಂದು ಬೆಳಿಗ್ಗೆ ಸುಮಾರಿಗೆ ನಾನು ಮತ್ತು ನನ್ನ ಪತ್ನಿಯಾದ ಈರಮ್ಮ ಇಬ್ಬರು ಕೂಡಿಕೊಂಡು ಯಾದಗಿರಿಯಲ್ಲಿನ ಎಲ್ಹೇರಿ ಡಾಕ್ಟರ್ ಹತ್ತಿರ ದವಾಖಾನೆಗೆ ತೋರಿಸಿಕೊಂಡು ಹೋದರಾಯಿತೆಂದು ನಮ್ಮ ಮೋಟಾರು ಸೈಕಲ್ ನಂಬರ ಕೆಎ-32, ಇ.ಎನ್-0102 ನೇದ್ದರ ಮೇಲೆ ಯಾದಗಿರಿಗೆ ಬಂದಿದ್ದೆವು. ಹೀಗಿದ್ದು ಇಂದು ದಿನಾಂಕ 22/02/2022 ರಂದು ಮದ್ಯಾಹ್ನ 1-30 ಪಿ.ಎಂ.ದ ವರೆಗೆ ದವಾಖಾನೆಗೆ ತೋರಿಸಿಕೊಂಡು ಅದೇ ಮೋಟಾರು ಸೈಕಲ್ ಮೇಲೆ ಮರಳಿ ನಮ್ಮುರಿಗೆ ಹೋಗುತ್ತಿದ್ದಾಗ ಮಾರ್ಗ ಮದ್ಯೆ ಯಾದಗಿರಿ-ಸೇಡಂ ಮುಖ್ಯ ರಸ್ತೆಯ ಯಾದಗಿರಿ ನಗರದ ಹತ್ತಿಕುಣಿ ಕ್ರಾಸ್ ಹತ್ತಿರ ಕಾಳಪ್ಪ ಕಟ್ಟಿಗೆ ಅಡ್ಡಾ ಹತ್ತಿರ ನಾವು ಸೇಡಂ ರಸ್ತೆ ಕಡೆಗೆ ಹೋಗುತ್ತಿದ್ದಾಗ ನಮ್ಮ ಹಿಂದಿನಿಂದ ಬರುತ್ತಿದ್ದ ಒಬ್ಬ ಕಾರ್ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ನಮ್ಮ ಮೋಟಾರು ಸೈಕಲನ್ನು ಓವರ್ ಟೇಕ್ ಮಾಡುವಾಗ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಸದರಿ ಅಪಘಾತದಲ್ಲಿ ನಾವಿಬ್ಬರು ಮೋಟಾರು ಸೈಕಲ್ ಮೇಲಿಂದ ರಸ್ತೆ ಬದಿಗೆ ಬಿದ್ದಾಗ ಸದರಿ ಅಪಘಾತದಲ್ಲಿ ನನಗೆ ಬಲಗೈ ಮೊಳಕೈ ಹತ್ತಿರ ತರಚಿದ ರಕ್ತಗಾಯವಾಗಿದ್ದು, ಎದ್ದು ಸುಧಾರಿಸಿಕೊಂಡು ನನ್ನ ಹೆಂಡತಿಗೆ ನೋಡಲು ಆಕೆಗೆ ಬಲಗೈ ರಟ್ಟೆಗೆ ಭಾರೀ ಗುಪ್ತಗಾಯವಾಗಿದ್ದು, ಅಲ್ಲಲ್ಲಿ ತರಚಿದ ರಕ್ತಗಾಯವಾಗಿದ್ದು ಇರುತ್ತದೆ. ಈ ಅಪಘಾತವು ಇಂದು ದಿನಾಂಕ 26/02/2022 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ಜರುಗಿದ್ದು ಇರುತ್ತದೆ. ನಮಗೆ ಅಪಘಾತಪಡಿಸಿದ ಕಾರ್ ಘಟನಾ ಸ್ಥಳದಲ್ಲಿದ್ದು ಅದರ ನಂಬರ ನೋಡಲಾಗಿ ಕೆಎ-05, ಎಜಿ-4642 ಅಂತಾ ಇರುತ್ತದೆ ಅದರ ಚಾಲಕನು ಸ್ಥಳದಲ್ಲಿದ್ದು, ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ತಿರುಮಲ ತಂದೆ ರೂಪಲಾ ಪವಾರ್ ಸಾ;ವಿಶ್ವಾಸಪುರ ತಾಂಡ ಅಂತಾ ತಿಳಿಸಿರುತ್ತಾನೆ. ನಾನು ಈ ಘಟನೆ ಬಗ್ಗೆ ನಮ್ಮ ಸಂಬಂಧಿಯಾದ ಶ್ರೀ ವಿಶ್ವನಾಥರೆಡ್ಡಿ ತಂದೆ ಯಂಕಾರೆಡ್ಡಿ ಹಳ್ಳೇರ ಸಾ;ಹಂದರಕಿ ಇವರಿಗೆ ಪೋನ್ ಮಾಡಿ ನಡೆದ ಘಟನೆ ಬಗ್ಗೆ ತಿಳಿಸಿ ಕೂಡಲೇ ಯಾದಗಿರಿಗೆ ಬರಲು ಹೇಳಿರುತ್ತೇನೆ. ನಂತರ ಕಾರ್ ಚಾಲಕನು ನಮಗೆ ಅದೇ ಕಾರಿನಲ್ಲಿ ಉಪಚಾರ ಕುರಿತು ಯಾದಗಿರಿ ನೀಲಕಂಠ ಸೈದಾಪುರ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿದ್ದು ನಂತರ ನಮ್ಮ ಸಂಬಂಧಿಕರಾದ ಶ್ರೀ ವಿಶ್ವನಾಥರೆಡ್ಡಿ ಮತ್ತು ಅವರ ಸಂಗಡ ಶ್ರೀ ಬೀಮರಾಯ ತಂದೆ ತಿಪ್ಪಣ್ಣ ಮುಕಡಿ ಸಾ;ಹಂದರಕಿ ಇವರುಗಳು ನೀಲಕಂಠ ಸೈದಾಪುರ ಆಸ್ಪತ್ರೆಗೆ ಬಂದು ನಮಗೆ ವಿಚಾರಿಸಿರುತ್ತಾರೆ. ನಮಗೆ ಉಪಚಾರ ನೀಡಿದ ವೈದ್ಯರು ಹೆಚ್ಚಿನ ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಹೋಗಲು ತಿಳಿಸಿದ ಮೇರೆಗೆ ನಾವುಗಳು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇವೆ. ಹೀಗಿದ್ದು ಇಂದು ದಿನಾಂಕ 26/02/2022 ರಂದು ಮದ್ಯಾಹ್ನ 2 ಪಿ.ಎಂ.ದ ಸುಮಾರಿಗೆ ಯಾದಗಿರಿ-ಸೇಡಂ ಮುಖ್ಯ ರಸ್ತೆಯ ಯಾದಗಿರಿ ಹತ್ತಿಕುಣಿ ಕ್ರಾಸ್ ಹತ್ತಿರ ನಮ್ಮ ಮೋಟಾರು ಸೈಕಲ್ ನಂಬರ ಕೆಎ-32, ಇ.ಎನ್.-0102 ನೇದ್ದಕ್ಕೆ ಕಾರ್ ನಂಬರ ಕೆಎ-05, ಎ.ಜಿ-4642 ನೇದ್ದರ ಚಾಲಕನು ತನ್ನ ವಾಹನವನ್ನು ಯಾದಗಿರಿ ಕಡೆಯಿಂದ ಸೇಡಂ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಮೋಟಾರು ಸೈಕಲ್ ನೇದ್ದಕ್ಕೆ ಡಿಕ್ಕಿಹೊಡೆದಿದ್ದರಿಂದ ಅಪಘಾತವಾಗಿದ್ದು, ಆತನ ಮೇಲೆ ಮುಂದಿನ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದನ್ನು ಪಡೆದುಕೊಂಡಿದ್ದು, ಮರಳಿ ಠಾಣೆಗೆ 6 ಪಿ.ಎಂ.ಕ್ಕೆ ಬಂದು ಪಿಯರ್ಾದಿಯ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 10/2022 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

 


ಭಿಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 25/2022 ಕಲಂ 78[3] ಕೆಪಿ ಯ್ಯಾಕ್ಟ : ಇಂದು ದಿನಾಂಕ 26/02/2022 ರಂದು 11.30 ಎಎಮ್ ಕ್ಕೆ ಭೀ.ಗುಡಿಯ ಹೋತಪೇಟ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಫಿಯರ್ಾದಿದಾರರಿಗೆ ಬಾತ್ಮಿ ಬಂದಿದ್ದರಿಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಆರೋಪಿನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ದೈವದ ಆಟ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1050=00, 2) ಒಂದು ಮಟಕಾ ನಂಬರ ಬರೆದ ಚೀಟಿ 3) ಒಂದು ಬಾಲ್ ಪೆನ್ 4) ರೆಡ್ಮೀ ಮೊಬೈಲ ಅ.ಕಿ:500 5) ಒಂದು ಮೋ/ಸೈ ನಂ: ಕೆಎ:33ವಿ:2586 ಅಕಿ:8000/-ನೇದ್ದವುಗಳನ್ನು 12.20 ಪಿಎಮ್ ದಿಂದ 01.20 ಪಿಎಮ್ ಅವಧಿಯವರೆಗೆ ಜಪ್ತಿಪಡಿಸಿಕೊಂಡು 1.30 ಪಿಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:26/2022 ಕಲಂ 78(3) ಕೆ.ಪಿ. ಎಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

 

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 29/2022. ಕಲಂ. 279.338.ಐ.ಪಿ.ಸಿ. : ಇಂದು ದಿನಾಂಕ: 26/02/2022 ರಂದು 19-00 ಗಂಟೆಗೆ ಪಿಯರ್ಾದಿ ಶ್ರೀ ಯಲ್ಲಯ್ಯ ನಾಯಕ ತಂದೆ ತಿಪ್ಪಯ್ಯ ನಾಯಕ ಸೊಂಡರಪಲ್ಲಿ ವ|| 55 ಜಾ|| ಬೇಡರ ಉ|| ಒಕ್ಕಲುತನ ಸಾ|| ವನದುರ್ಗ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ಇಂದು ದಿನಾಂಕ 26/02/2022 ರಂದು ಬೆಳಿಗ್ಗೆ 6-15 ಗಂಟೆಯ ಸುಮಾರಿಗೆ ನನ್ನ ಮಾವನಾದ ಚನ್ನಬಸ್ಸು ತಂದೆ ರಂಗಯ್ಯ ಗುಂಡಲಕೊಂಡ ವ|| 59 ಸಾ|| ವನದುರ್ಗ ಹಾ||ವ|| ಬಸವೇಶ್ವರ ನಗರ ಶಹಾಪೂರ ಇವರು ಫೋನ ಮಾಡಿ ತಿಳಿಸಿದ್ದೆನೆಂದರೆ. ನಾನು ದಿನಾಲು ಬೆಳಿಗ್ಗೆ ಎದ್ದು ವಾಕಿಂಗ್ ಕುರಿತು ಹೋಗುತ್ತಿದ್ದು ಎಂದಿನಂತೆ ಇಂದ ಬೆಳಿಗ್ಗೆ ಎದ್ದು ವಾಕಿಂಗ ಕುರಿತು ಮನೆಯಿಂದ ನನ್ನ ಮೋಟರ್ ಸೈಕಲ್ ನಂ ಕೆಎ-33 ಇ-6265 ನೇದ್ದನ್ನು ತೆಗೆದುಕೊಂಡು 5-50 ಗಂಟೆಗೆ ಹೋರಟು ಹಳೆ ಬಸ್ ನಿಲ್ದಾಣಕ್ಕೆ ಬಂದು ಪೇಪರ್ ತೆಗೆದುಕೊಂಡು ಹಳೆ ಬಸ್ ನಿಲ್ದಾಣದ ಕಡೆಯಿಂದ ನನ್ನ ಮೋಟರ್ ಸೈಕಲ್ ಮೇಲೆ ಸುರಪೂರ-ಕಲಬುರಗಿ ಮುಖ್ಯ ರಸ್ತೆಯ ಮೇಲೆ ಹಳೆ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಶೌಚಾಲಯದ ಹತ್ತಿರ ಬಲಕ್ಕೆ ತಿರುಗಿಸಿಕೊಂಡು ಅಶ್ವೀನಿ ಟವರ ಕಡೆಗೆ ಬೆಳಿಗ್ಗೆ 6-00 ಗಂಟೆಗೆ ಹೋಗುತ್ತಿರುವಾಗ ಬಸವೇಶ್ವರ ಚೌಕ ಕಡೆಯಿಂದ ಒಂದು ಬುಲೇರೊ ಪಿಕ್ ಅಪ್ ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಎಡಗಡೆಯ ಸೈಡಿಗೆ ಮೋಟರ್ ಸೈಕಲ್ಕ್ಕೆ ಡಿಕ್ಕಿ ಪಡಿಸಿ ಮತ್ತು ರಸ್ತೆಯ ಪಕ್ಕದಲ್ಲಿ ನಿಂತಿದ್ದ ಕಾರ ನಂ ಕೆಎ-33 ಎಂ-8699 ನೇದ್ದಕ್ಕೆ ಬಲಗಡೆ ಡೋರ ಹತ್ತಿರ ಡಿಕ್ಕಿಪಡಿಸಿ ಅಪಘಾತಮಾಡಿದ್ದು ಸದರಿ ಅಪಘಾತದಲ್ಲಿ ನನಗೆ ಭಾರಿ ಗಾಯಗಳು ಆಗಿರುತ್ತವೆ. ಸದರಿ ಅಪಘಾತವನ್ನು ನೋಡಿ ಅಲ್ಲೆ ಇದ್ದ ವನದುರ್ಗದ ವಿರೇಶ ತಂದೆ ಭೀಮಸಿಂಗ್ ರಜಪೂತ ಈತನು ಬಂದು ನನಗೆ ನೋಡಿ ವಿಚಾರಿಸಿದ್ದು ಇರುತ್ತದೆ. ಅಂತ ತಿಳೀಸಿದ್ದರಿಂದ. ನಾನು ಶಹಾಪೂರದ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಮಾವ ಚೆನ್ನಬಸ್ಸು ಇವರಿಗೆ ನೋಡಿ ವಿಚಾರಿಸಿದ್ದು. ಸದರಿ ಅಪಘಾತದಲ್ಲಿ ಚನ್ನಬಸ್ಸು ಇವರಿಗೆ ಎಡಹಣೆಗೆ ರಕ್ತಗಾಯ, ಎಡಕಣ್ಣಿಗೆ ತರಚಿದ ಗಾಯ, ಎಡಗೈ ಮೋಳಕೈಯಿಗೆ ತರಚಿದ ಗಾಯ, ಎಡಗಡೆ ಬುಜಕ್ಕೆ ತರಚಿದ ಗಾಯ, ಎಡಬೆನ್ನಿಗೆ ತರಚಿದ ಗಾಯ, ಎಡಗಾಲು ಹೆಬ್ಬರಳಿಗೆ ಭಾರಿ ರಕ್ತಗಾಯ, ಎಡಗಾಲು ಪಾದದ ಕಿಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ. ಆಗ ನನ್ನ ಮಾವ ಚನ್ನಬಸ್ಸು ಇವರು ತಿಳಿಸಿದ್ದೆನೆಂದರೆ ನನಗೆ ಅಪಘಾತಮಾಡಿದ ಬುಲೇರೊ ಪಿಕ್ ಅಪ್ ನಂಬರ ನೋಡಲಾಗಿ ಕೆಎ-33 ಬಿ-1862 ನೇದ್ದು ಇದ್ದು ಅದರ ಚಾಲಕನಿಗೆ ನೋಡಿ ಹೆಸರು ವಿಚಾರಿಸಲಾಗಿ ಇಬ್ರಾಹಿಂ ಖಲೀಲ್ ತಂದೆ ಮಹ್ಮದ್ ಹಸನ್ ಲಧಾಫ್ ಸಾ|| ಆದೀಲ್ಪೂರ ಶಹಾಪೂರ. ತನಗೆ ಯಾವುದೆ ಗಾಯವಾಗಿರುವುದಿಲ್ಲ ಅಂತ ತಿಳಿಸಿದನು. ಕಾರ ಚಾಲಕನು ತನ್ನ ಕಾರಿನ ಪಕ್ಕದಲ್ಲಿ ನಿಂತ್ತಿದ್ದು ಹೆಸರು ವಿಚಾರಿಸಲಾಗಿ ತನ್ನ ಹೆಸರು ಸಿದಾರ್ಥ ತಂದೆ ಯಲ್ಲಪ್ಪ ಸಾ|| ಮಡಿವಾಳೇಶ್ವರ ನಗರ ಶಹಾಪೂರ ಅಂತ ತಿಳಿಸಿದನು ಸದರಿ ಅಪಘಾತದಲ್ಲಿ ನನ್ನ ಮೋಟರ್ ಸೈಕಲ್ ನಂ ಕೆಎ-33 ಇ-6265 ನೇದ್ದು ಮತ್ತು ಕಾರ ನಂ ಕೆಎ-33 ಎಂ-8699 ನೇದ್ದು ಹಾಗೂ ಬುಲೇರೊ ಪಿಕ್ ಅಪ್ ನಂ ಕೆಎ-33 ಬಿ-1862 ನೇದ್ದವುಗಳು ಜಖಂ ಗೊಂಡಿರುತ್ತದೆ. ಆಗ ವಿರೇಶನು ನನ್ನ ಮಗನಾದ ಮದಕರಿನಾಯಕ ತಂದೆ ಚನ್ನಬಸ್ಸು ಗುಂಡಲಕೊಂಡ ಈತನಿಗೆ ಫೋನ್ ಮಾಡಿ ಅಪಘಾತದ ವಿಷಯ ತಿಳಿಸಿದ್ದರಿಂದ ಮದಕರಿನಾಯಕನು ಅಪಘಾತವಾದ ಸ್ಥಳಕ್ಕೆ ಬಂದು ನನಗೆ ನೋಡಿ ವಿಚಾರಿಸಿ. ನನಗೆ ಉಪಚಾರ ಕುರಿತು ಮದಕರಿನಾಯಕ ಮತ್ತು ವಿರೇಶ ಇಬ್ಬರು ಕೂಡಿ ಅಲ್ಲೆ ಹೋರಟಿದ್ದ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ಶಹಾಪೂರದ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ ಅಂತ ತಿಳಿಸಿದನು. ನನ್ನ ಮಾವ ಚನ್ನಬಸ್ಸು ಇವರಿಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾನು ಮತ್ತು ನನ್ನ ಅಳಿಯ ಮದಕರಿನಾಯಕ ನಮ್ಮೂರ ವಿರೇಶ ಎಲ್ಲರು ಕೂಡಿಕೊಂಡು ಒಂದು ಅಂಬುಲೇನ್ಸದಲ್ಲಿ ಕಲಬುರಗಿಯ ಯುನೈಟೇಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆಮಾಡಿದ್ದರಿಂದ ಉಪಚಾರ ಪಡೆಯುತ್ತಿದ್ದು ಇರುತ್ತದೆ, ನನ್ನ ಮಾವ ಚನ್ನಬಸ್ಸು ಇವರಿಗೆ ಹೆಚ್ಚಿನ ಉಪಚಾರ ಮಾಡಿಸುವದು ಅವಶ್ಯಕವಾಗಿದ್ದರಿಂದ ಕಲಬುರಗಿಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆಮಾಡಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ.
ಕಾರಣ ನನ್ನ ಮಾವ ಚನ್ನಬಸ್ಸು ಇವರಿಗೆ ಅಪಘಾತ ಮಾಡಿದ ಬುಲೇರೊ ಪಿಕ್ ಅಪ್ ನಂ ಕೆಎ-33 ಬಿ-1862 ನೇದ್ದರ ಚಾಲಕನಾದ ಇಬ್ರಾಹಿಂ ಖಲೀಲ್ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೆಕು ಅಂತ ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 29/2022 ಕಲಂ: 279, 338, ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

 

ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ. 10/2022 ಕಲಂ: ಮಹಿಳೆ ಕಾಣೆಯಾದ ಬಗ್ಗೆ : ಇಂದು ದಿನಾಂಕ 26/02/2022 ರಂದು 9:30 ಪಿ.ಎಂ ಕ್ಕೆ ಶ್ರೀ ವೀರಭದ್ರಯ್ಯ ತಂದೆ ಈರಯ್ಯ ಗಣಚಾರಿ ಸಾ: ನಾರಾಯಣಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿಕೊಂಡು ಬಂದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆನೆಂದರೆ ನನಗೆ ಮೂರು ಜನ ಗಂಡು ಮಕ್ಕಳು ಹಾಗೂ ಆರು ಜನ ಹೆಣ್ಣು ಮಕ್ಕಳು ಇದ್ದು ನನ್ನ ನನ್ನ ನಾಲ್ಕನೆ ಮಗಳಾದ ಶಾಂತಮ್ಮ ಇವಳಿಗೆ ನಾರಾಯಣಪೂರದ ನಮ್ಮ ಸೋದರ ಮಾವನ ಮಗನಾದ ಬಸವರಾಜನಿಗೆ ಕೊಟ್ಟುಮದುವೆ ಮಾಡಿದ್ದು ಅವರಿಗೆ ಪಾರ್ವತಿ. ಆಶಾ ಅಂತಾ ಇಬ್ಬರು ಹೆಣ್ಣುಮಕ್ಕಳು ಹುಟ್ಟಿದ್ದರು. ನನ್ನ ಮಗಳು ಶಾಂತಮ್ಮ ಇವಳು ಇಬ್ಬರು ಹೆಣ್ಣು ಮಕ್ಕಳನ್ನು ಹೆತ್ತ ನಂತರ ಇಬ್ಬರು ಹೆಣ್ಣು ಮಕ್ಕಳು ಚಿಕ್ಕವರಿರುವಾಗಲೆ ಗಂಡ ಹೆಂಡತಿ ಇಬ್ಬರು ತೀರಿಹೋಗಿದ್ದು ಇರುತ್ತದೆ. ನನ್ನ ಮಗಳು ಹಾಗೂ ಅಳಿಯ ತೀರಿಹೋದ ನಂತರ ಅವರ ಮಕ್ಕಳಾದ ಪಾರ್ವತಿ ಹಾಗೂ ಆಶಾ ಇಬ್ಬರನ್ನು ನಾನೆ ಜೋಪಾನ ಮಾಡಿ ದೊಡ್ಡವರನ್ನಾಗಿ ಮಾಡಿ ನಂತರ ಪಾರ್ವತಿ ಇವಳಿಗೆ ನನ್ನ ಎರಡನೆ ಮಗ ಈರಯ್ಯನೊಂದಿಗೆ ಮದುವೆ ಮಾಡಿದ್ದು ಆಶಾ ವ:21 ವರ್ಷ ಇವಳಿಗೆ ನನ್ನ ಕೊನೆಯ ಮಗ ಮಲ್ಲಿಕಾಜರ್ುನಯ್ಯನಿಗೆ ತಗೆದು ಮದುವೆಮಾಡಿದ್ದು ಇರುತ್ತದೆ. ಆಶಾ ಇವಳು ಇನ್ನು ಶಾಲೆ ಕಲಿಯುತ್ತಿದ್ದು ನಾಲತವಾಡ ವಿರೇಶ್ವರ ಕಾಲೇಜದಲ್ಲಿ ಬಿ.ಎ. ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ದಿನಾಂಕ 22/02/202 ರಂದು ಮುಂಜಾನೆ 8:00 ಗಂಟೆಯ ಸುಮಾರಿಗೆ ಮನೆಯಲ್ಲಿ ನಾನು ಹಾಗೂ ನನ್ನ ಹೆಂಡತಿ ಗುರುಬಾಯಿ ಮನೆಯಲ್ಲಿ ಇದ್ದಾಗ ನನ್ನ ಮೊಮ್ಮಗಳು ಆಶಾ ಇವಳು ತಾನು ಕಾಲೇಜಿಗೆ ಹೋಗಿ ಸ್ಕಾಲರಶಿಪ್ಗೆ ಆದಾರಕಾರ್ಡ ನಂಬರ ಲಿಂಕ್ ಮಾಡಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೊದಳು. ಸಾಯಂಕಾಲವಾದರು ಮರಳಿ ಮನೆಗೆ ಬರಲಿಲ್ಲ ನಂತರ ಹೊಲಕ್ಕೆ ಹೋಗಿ ಬಂದ ನನ್ನ ಮಗ ಮಲ್ಲಿಕಾಜರ್ುನಯ್ಯನು ತನ್ನ ಹೆಂಡತಿ ಆಶಾ ಎಲ್ಲಿ ಎಂದು ಕೆಳಿದನು, ಆಗ ನಾನು ಅವಳು ಕಾಲೇಜಿಗೆ ಹೋಗಿ ಸ್ಕಾಲರಶಿಪ್ಗೆ ಆದಾರಕಾರ್ಡ ನಂಬರ ಲಿಂಕ್ ಮಾಡಿ ಬರುತ್ತೇನೆ ಅಂತಾ ಹೇಳಿ ಹೋದವಳು ಇನ್ನು ಬಂದಿರುವದಿಲ್ಲ ಅಂತಾ ತಿಳಿಸಿದೇನು. ನಂತರ ನನ್ನ ಮಗ ಮಲ್ಲಿಕಾಜರ್ುನಯ್ಯನು ನಾಲತವಾಡ ಕಾಲೇಜಿಗೆ ಹೋಗಿ ವಿಚಾರಿಸಿದ್ದು ಕಾಲೇಜಿ ಸಿಬ್ಬಂದಿಯವರು ಆಶಾಳು ಕಾಲೇಜಿಗೆ ಬಂದಿರುವದಿಲ್ಲ ಅಂತಾ ತಿಳಿಸಿರುತ್ತಾರೆ ಅಂತಾ ನನ್ನ ಮಗ ಮರಳಿ ಮನೆಗೆ ಬಂದು ತಿಳಿಸಿದನು. ನಂತರ ನಾವೇಲ್ಲರೂ ನನ್ನ ಮೊಮ್ಮಗಳಾದ ಆಶಾಳಿಗೆ ನಮ್ಮ ಸಂಬಂದಿಕರ ಊರುಗಳಾದ ಹೂವಿನ ಹಿಪ್ಪರಗಿ. ವಿಜಯಪೂರ, ಬಾಗಲಕೋಟಿ, ನಂದೋಡಿಗೆ, ಚಾಮಲಪೂರ ಹಾಗೂ ಮುಂತಾದ ಕಡೆಹೋಗಿ ನೋಡಿದ್ದು ಸಿಕ್ಕಿರುವದಿಲ್ಲ ಅಲ್ಲದೆ ಪೋನ ಮಾಡಿ ಕೇಳಿದರು ನನ್ನ ಮೊಮ್ಮಗಳಾದ ಆಶಾ ಇವಳು ಎಲ್ಲಿ ಸಿಕ್ಕಿರುವದಿಲ್ಲ ದಿನಾಂಕ 22/02/2022 ರಂದು ಮುಂಜಾನೆ 8:00 ಗಂಟೆಗೆ ನಾಲತವಾಡ ಕಾಲೇಜಿಗೆ ಹೋಗಿ ಸ್ಕಾಲರಶಿಪ್ಗೆ ಆದಾರಕಾರ್ಡ ನಂಬರ ಲಿಂಕ್ ಮಾಡಿ ಬರುತ್ತೇನೆ ಅಂತಾ ಹೇಳಿ ಹೊದ ನನ್ನ ಮೊಮ್ಮಗಳು ಆಶಾ ವ:21 ವರ್ಷ ಇವಳು ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ ಅವಳನ್ನು ಹುಡುಕಿಕೊಡಬೇಕು ಅಂತಾ ವಿನಂತಿ. ನನ್ನ ಮೊಮ್ಮಗಳ ಚಹರೆ ಗುತರ್ು ಈ ಕೆಳಗಿನಂತೆ ಇರುತ್ತದೆ
ಹೆಸರು: ಆಶಾ ಗಂಡ ಮಲ್ಲಿಕಾಜರ್ುನಯ್ಯ ಗಣಾಚಾರಿ ವ:21 ವರ್ಷ ಉ: ವಿಧ್ಯಾಭ್ಯಾಸ ಜಾ:ಹಿಂದು ಲಿಂಗಾಯತ ಸಾ: ನಾರಾಯಣಪೂರ ದುಂಡು ಮುಖ ಗೋದಿ ಮೈಬಣ್ಣ ಸಾದರಣ ಮೈಕಟ್ಟು ಬಿ.ಎ. ಅಂತಿಮ ವರ್ಷದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು ಕನ್ನಡ ಬಾಷೆ ಮಾತನಾಡುತ್ತಾಳೆ ಮನೆಯಿಂದ ಹೋಗುವಾಗ ಚೂಡಿದಾರ ಧರಸಿಕೊಂಡು ಹೋಗಿದ್ದು ಕಪ್ಪು ಬಣ್ಣದ ಪ್ಯಾಂಟ ಬಿಳಿಯ ಬಣ್ಣದ ಟಾಪ ಹಾಗೂ ಚಾಕಲೇಟ ಬಣ್ಣದ ವೇಲು ಇರುತ್ತದೆ. ಅಂತಾ ನೀಡಿದ ಪಿಯರ್ಾದಿಯ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 10/2022 ಕಲಂ ಮಹಿಳೆ ಕಾಣೆ ನೇದ್ದಕ್ಕೆ ಪ್ರಕರಣ ನೊಂದಾಯಿಸಿಕೊಂಡು ತನಿಖೆ ಕೈಕೊಂಡೆನು.

Last Updated: 28-02-2022 03:20 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080