ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 28-04-2022


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ, 70/2022 ಕಲಂ 447,323,504,506 ಸಂಗಡ 34 ಐಪಿಸಿ : ಇಂದು ದಿನಾಂಕ 27.04.2022 ರಂದು 11 ಎಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ರಾಚಪ್ಪ ತಂದೆ ಸಿದ್ದಣ್ಣ ಸೂಗುರು ವಯಾ|| 56 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಏವೂರ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಏನಂದರೆ ನಮ್ಮೂರ ವ್ಯಾಪ್ತಿಗೆ ಬರುವ ನಗನೂರ ರéೇಷ್ಮೆ ವಲಯ ಕಛೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳಾದ ಸಿದ್ದಯ್ಯ ಅಂದಾನಿಮಠ, ಶರಣಪ್ಪ ಅಂವಟಿ ಹಾಗು ಇತರೆ ಅಧಿಕಾರಿಗಳು ಕೂಡಿ ರೈತರಿಗೆ ರೇಷ್ಮೆ ಸಾಲದಲ್ಲಿ ಅವ್ಯವಹಾರ ನಡೆದ ವಿಷಯ ನನ್ನ ಗಮನಕ್ಕೆ ಬಂದು ನಾನು ಸದರಿ ಅಧಿಕಾರಿಯವರ ಮೇಲಾಧಿಕಾರಿಯವರಲ್ಲಿ ಮಾಹಿತಿ ಹಕ್ಕು ಅಡಿಯಲ್ಲಿ ಕೆಲವೊಂದು ದಾಖಲಾತಿಗಳನ್ನು ಕೇಳಿದ್ದು ಅದೇ ವಿಷಯದಿಂದ ಮೇಲ್ಕಾಣಿಸಿದ ಅಧಿಕಾರಿಗಳು ನನ್ನ ಮೇಲೆ ಹಗೆತನ ಸಾಧಿಸುತ್ತಿದ್ದರು. ಹೀಗಿದ್ದು ನಾನು ಮಾಹಿತಿ ಹ್ಕು ಅಡಿಯಲ್ಲಿ ಕೇಳಿದ ದಾಖಲಾತಿಗಳ ಪ್ರಕಾರ ರೇಷ್ಮೇ ಇಲಾಖೆಯ ಹಿರಿಯ ಅಧಿಕಾರಿಗಳು ದಿನಾಂಕ 08/02/2022 ರಂದು ನಮ್ಮ ಹೊಲಕ್ಕೆ ಪರಿವೀಕ್ಷಣೆಗಾಗಿ ಬಂದು ಪರೀವಿಕ್ಷಣೆ ಮಾಡಿಕೊಂಡು ಹೋಗಿದ್ದು ಇರುತ್ತದೆ. ಹೀಗಿದ್ದು ದಿನಾಂಕ 12/02/2022 ರಂದು ನಾನು ನಮ್ಮ ಏವೂರ ಸೀಮಾಂತರದ ಹೊಲ ಸವರ್ೆ ನಂಬರ 216 ರಲ್ಲಿ ಬೆಳಿಗ್ಗೆ 6 ಗಂಟೆಗೆ ನಾನು ನಮ್ಮ ಹೊಲದಲ್ಲಿನ ರೇಷ್ಮೆ ಬೆಳೆಗೆ ನೀರು ಬಿಡುತ್ತಿದ್ದಾಗ ಅದೇ ಸಮಯಕ್ಕೆ ರೇಷ್ಮೇ ಇಲಾಖೆಯ ಅಧಿಕಾರಿಗಳಾದ 1] ಸಿದ್ದಯ್ಯ ಅಂದಾನಿಮಠ ರೇಷ್ಮೆ ವಿಸ್ತರಣಾ ಅಧಿಕಾರಿ ತಾಂತ್ರಿಕ ಸೇವಾ ಕೇಂದ್ರ ಬೀಗುಡಿ ಹಾಗು 2] ಶರಣಪ್ಪ ತಂದೆ ಬಸಣ್ಣ ಅಂವಟಿ ಕಂಪ್ಯೂಟರ್ ಆಫೇರೇಟರ್ ರೇಷ್ಮೇ ಇಲಾಖೆ ಸುರಪೂರ ಹಾಗು ಇನ್ನು ಒಬ್ಬ ಅಧಿಕಾರಿ ಈ ಮೂರು ಜನರು ಸೇರಿ ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ನನಗೆ ಏನಲೇ ಸೂಳೇ ಮಗನೇ ನಮ್ಮ ಮೇಲೆ ನಮ್ಮ ಮೇಲಾಧಿಕಾರಿಯವರಲ್ಲಿ ಅಜರ್ಿ ಕೊಡುತ್ತೀಯಾ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಏಕೇ? ಸುಮ್ಮನೇ ಬೈಯುತ್ತೀರಿ ನಾನು ಕಾನೂನು ಬದ್ದವಾಗಿ ಕೇಳಿದ್ದೇನೆ ಅಂತ ಅಂದಾಗ ಆ ಮೂರು ಜನರು ನನಗೆ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆಯುತ್ತಿದ್ದಾಗ ಅಲ್ಲಿಯೇ ಪಕ್ಕದ ಹೊಲದಲ್ಲಿದ್ದ ಹುಸೇನಸಾಬ ತಂದೆ ಮಕ್ತುಂಸಾಬ ಮಕಾಶಿ ಹಾಗು ಪುತ್ರಪ್ಪ ತಂದೆ ಗೊಲ್ಲಾಳಪ್ಪ ಮಾದರ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ಹೊಡೆಯುವದನ್ನು ಬಿಟ್ಟು ಸೂಳೇ ಮಗನೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತಿ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋಗಿದ್ದು ಈ ವಿಷಯದಲ್ಲಿ ನಾನು ಮನೆಯಲ್ಲಿ ವಿಚಾರಿಸಿ ಇರಲೀ ಬಿಡು ಅಂತ ಸುಮ್ಮನಿದ್ದೆನು. ಆದರೂ ಸಹಿತ ಅವರು ನನಗೆ ಎಲ್ಲಿಗಾದರೂ ಹೋದಲ್ಲಿ ಹಿಂಬಾಲಿಸುವದು ಹಾಗು ದಿಟ್ಟಿಸಿ ನೋಡುವದು ಮಾಡುತ್ತಿದ್ದರಿಂದ ನನಗೆ ಭಯವಾಗಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ಮೇಲ್ಕಾಣಿಸಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 70/2022 ಕಲಂ 447,323,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 71/2022 ಕಲಂ: 279, 337, 338 ಐಪಿಸಿ, 187 ಐಎಂವಿ ಯಾಕ್ಟ್ : ಇಂದು ದಿನಾಂಕ 27.04.2022 ರಂದು 6 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಸಾಹೇಬಲಾಲ ತಂದೆ ದಾವಲಸಾಬ ನಾಶಿ ವ|| 53ವರ್ಷ ಜಾ|| ಮುಸ್ಲೀಂ ಉ|| ಕೂಲಿಕೆಲಸ ಸಾ|| ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಮ್ಮ ತಂದೆ ತಾಯಿಗೆ ನಾವು ಒಟ್ಟು ಏಳು ಜನ ಮಕ್ಕಳಿದ್ದು ಅವರಲ್ಲಿ ಐದು ಜನ ಗಂಡು ಮಕ್ಕಳು ಎರಡು ಜನ ಹೆಣ್ಣು ಮಕ್ಕಳಿರುತ್ತಾರೆ. ಎಲ್ಲಾ ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ನಾವು ಎಲ್ಲಾ ಜನ ಗಂಡು ಮಕ್ಕಳದು ಮದುವೆಯಾಗಿದ್ದು ಎಲ್ಲಾ ಗಂಡು ಮಕ್ಕಳು ಕೂಡಿಯೇ ಸಂಸಾರ ಮಾಡಿಕೊಂಡು ಇರುತ್ತೇವೆ. ನಾವು ಎಲ್ಲಾ ಜನರು ಕೂಲಿಕೆಲಸ ಮಾಡಿಕೊಂಡು ಇರುತ್ತೇವೆ. ನಮ್ಮ ತಮ್ಮನಾದ ಅಲ್ಲಾಭಕ್ಷ ತಂದೆ ದಾವಲಸಾಬ ನಾಶಿ ವ|| 30 ವರ್ಷ ಈತನು ಸುಮಾರು ದಿನಗಳಿಂದ ಯಾಳಗಿ ಸೀಮಾಂತರದ ಸೋಲಾರ ಕಂಪನಿಯಲ್ಲಿ ಕೂಲಿಕೆಲಸಕ್ಕೆಂದು ಹೋಗಿ ಬರುವದು ಮಾಡುತ್ತಿದ್ದನು.ಹೀಗಿದ್ದು ದಿನಾಂಕ 22.04.2022 ರಂದು ಬೆಳಿಗ್ಗೆ 06.30 ಗಂಟೆಗೆ ನಮ್ಮ ತಮ್ಮನಾದ ಅಲ್ಲಾಭಕ್ಷ ಈತನು ಕೂಲಿಕೆಲಸಕ್ಕೆಂದು ಸೋಲಾರ ಕಂಪನಿಗೆ ಹೋದನು. ನಾನು ಆ ದಿನ ನನಗೆ ಮೈಯಲ್ಲಿ ಆರಾಮವಿಲ್ಲ ಅಂತ ಮನೆಯಲ್ಲಿಯೇ ಇದ್ದೆನು. ಹೀಗಿರುತ್ತಾ ನಾನು ಬೆಳಿಗ್ಗೆ 7 ಗಂಟೆಗೆ ನಮ್ಮ ಮನೆಯಲ್ಲಿದ್ದಾಗ ನಮ್ಮೂರ ನಮ್ಮ ಜನಾಂಗದ ಮೈನುದ್ದೀನ್ ತಂದೆ ಮುತರ್ುಜಾ ನಾಶಿ ಇವರು ನನಗೆ ಪೋನ ಮಾಡಿ ನಮ್ಮ ತಮ್ಮನಾದ ಅಲ್ಲಾಭಕ್ಷ ಈತನು ನಡೆದುಕೊಂಡು ಸೋಲಾರ ಕಂಪನಿಗೆ ಹೋಗುತ್ತಿದ್ದಾಗ ಅದೆ ರಸ್ತೆಯಲ್ಲಿ ಹಿಂದಿನಿಂದ ಕೆಂಭಾವಿಯ ಚಾಂದಪಟೇಲ ಕಾಚೂರ ಇವರ ಟ್ರ್ಯಾಕ್ಟರ ಡಿಕ್ಕಿಪಡಿಸಿದ್ದು ಕಾರಣ ಅಲ್ಲಾಭಕ್ಷ ಈತನಿಗೆ ಬಲಗಾಲ ತೊಡೆಯಲ್ಲಿ ಹಾಗು ಟೊಂಕಕ್ಕೆ ಭಾರೀ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ ಅಂತ ತಿಳಿಸಿದಾಗ ನಾನೂ ಕೂಡಲೇ ಆ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಮ್ಮನು ರೋಡಿನ ಪಕ್ಕದಲ್ಲಿ ಬಿದ್ದಿದ್ದು ನೋಡಲಾಗಿ ಬಲಗಾಲ ತೊಡೆಯಲ್ಲಿ ಕಾಲು ಮುರಿದು ನಡೆಯಲು ಬರುತ್ತಿರಲಿಲ್ಲ. ನಂತರ ನಮ್ಮ ತಮ್ಮನಿಗೆ ಅಪಘಾತಪಡಿಸಿದ ಟ್ರ್ಯಾಕ್ಟರ್ ಇಂಜಿನ ಅಲ್ಲಿಯೇ ನಿಂತಿದ್ದು ಅದರ ನಂಬರ ನೋಡಲಾಗಿ ಕೆಎ-33ಟಿ-7564 ಅಂತ ಇದ್ದು ಅದರ ಚಾಲಕನು ಅಪಘಾತಪಡಿಸಿದ ತಕ್ಷಣ ತನ್ನ ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಅದು ಕೆಂಭಾವಿಯ ಮೈನುದ್ದೀನ್ ತಂದೆ ಮುತರ್ುಜಾ ನಾಶಿ ಇವರ ಟ್ರ್ಯಾಕ್ಟರ ಇದ್ದು ಅದರ ಚಾಲಕನ ಬಗ್ಗೆ ಕೇಳಿ ತಿಳಿಯಲಾಗಿ ಅನ್ವರ ಪಟೇಲ ತಂದೆ ಇಮಾಮಪಟೇಲ್ ಕಾಚೂರ ಸಾ|| ಕೆಂಭಾವಿ ಅಂತ ಗೊತ್ತಾಯಿತು. ಆ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಡಸಿಕೊಂಡು ಹೋಗಿ ರೋಡಿನ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ನಮ್ಮ ತಮ್ಮನಾದ ಅಲ್ಲಾಭಕ್ಷ ಈತನಿಗೆ ಹಿಂದಿನಿಂದ ಭಲವಾಗಿ ಡಿಕ್ಕಿಪಡಿಸಿದ್ದು ಇರುತ್ತದೆ. ನಂತರ ನಾನು ನನ್ನ ತಮ್ಮನನ್ನು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಕಲಬುಗರ್ಿಯ ಕಾಮರಡ್ಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಲ್ಲಿಯವರೆಗೆ ಉಪಚಾರ ಮಾಡಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ನಡೆದುಕೊಂಡು ಕೂಲಿಕೆಲಸಕ್ಕೆಂದು ಹೊರಟ ನಮ್ಮ ತಮ್ಮನಿಗೆ ಅಪಘಾತ ಪಡಿಸಿದ ಟ್ರ್ಯಾಕ್ಟರ ಇಂಜಿನ ನಂಬರ ಕೆಎ-33ಟಿ-7564 ನೇದ್ದರ ಚಾಲಕ ಅನ್ವರಪಟೇಲ ಕಾಚೂರ ಸಾ|| ಕೆಂಭಾವಿ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 71/2022 ಕಲಂ 279,337,338 ಐಪಿಸಿ ಸಂಗಡ 187 ಐಎಮ್ವಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 64/2022 ಕಲಂ 279,338 ಐಪಿಸಿ: ಇಂದು ದಿನಾಂಕ:27/04/2022 ರಂದು 6.00 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀಮತಿ ಶಿವಮ್ಮ ಗಂಡ ಭೀಮರಾಯ ಹುಲಕಲ್ ವಯ: 45 ವರ್ಷ ಜಾ: ಕುರುಬ ಉ: ಕೂಲಿಕೆಲಸ ಸಾ: ಬೇವಿನಳ್ಳಿ ತಾ: ಶಹಾಪೂರ ರವರು ಠಾಣೆಗೆ ಹಾಜರಾಗಿ ಈ ಮೂಲಕ ಮಾನ್ಯರವರಲ್ಲಿ ಅಜರ್ಿ ಸಲ್ಲಿಸುವುದೇನಂದರೆ ನಮ್ಮ ಮನೆಯಲ್ಲಿ ಮಗಳ ಮದುವೆ ಇರುವುದರಿಂದ ಮದುವೆ ಕಾರ್ಡಗಳನ್ನು ಕೊಡುವ ಸಲುವಾಗಿ ದಿನಾಂಕ: 20/04/2022 ರಂದು ಬೆಳಿಗ್ಗೆ 10-30 ಗಂಟೆಗೆ ಊರಿಂದ ಶಹಾಪೂರಕ್ಕೆ ಬಂದನು. ನನ್ನ ಗಂಡನಾದ ಭೀಮರಾಯ ತಂದೆ ಹಯ್ಯಾಳಪ್ಪ ವಯಾ: 54 ವರ್ಷ ಉ: ಕೂಲಿಕೆಲಸ ಅಂದು ಸಾಯಾಂಕಾಲ 7-45 ಗಂಟೆಗೆ ಸುಮಾರಿಗೆ ನನ್ನ ಗಂಡನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ಶಹಾಪೂರದಲ್ಲಿ ಮದುವೆ ಕಾಡರ್ುಗಳನ್ನು ಹಂಚಿ ಸಾಯಾಂಕಾಲ 6-45 ಗಂಟೆ ಸುಮಾರಿಗೆ ಕಾಲುನಡಿಗೆಯಿಂದ ಬಸವೇಶ್ವರ ಸರ್ಕಲ ಕಡೆಗೆ ಬರುವ ಕುರಿತು ಐಸಿಐಸಿ ಬ್ಯಾಂಕಿನ ಎದುರುಗಡೆ ಇರುವ ಶರಬಲಿಂಗೇಶ್ವರ ಲಿಂಗಾಯತ ಖಾನಾವಳಿ ಮುಂದುಗಡೆ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಅದೇ ವೇಳೆಗೆ ನನ್ನ ಹಿಂದುಗಡೆಯಿಂದ ಒಂದು ಮೋಟಾರ ಸೈಕಲ್ ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಹಿಂದುಗಡೆ ಹಿಕ್ಕಿ ಪಡಿಸಿದನು ನಾನು ರಸ್ತೆ ಮೇಲೆ ಬಿದ್ದೆನು. ನನಗೆ ಎಡಸೊಂಟಕ್ಕೆ ಭಾರಿ ಒಳಪೆಟ್ಟು ಆಗಿದ್ದು ಮತ್ತು ತಲೆಗೆ ರಕ್ತಗಾಯ ಮತ್ತು ಒಳಪೆಟ್ಟು ಆಗಿರುತ್ತದೆ. ನಂತರ ಮೋಟಾರ ಸೈಕಲ್ ನೋಡಲಾಗಿ, ಸ್ಕೂಟಿ ಇದ್ದು ಸ್ಕೂಟಿ ಮೋಟಾರ ಸೈಕಲ್ ನಂ: ಕೆ.ಎ.33/ಎಸ್-5166 ನೇದ್ದು ಇದ್ದು, ಅದರ ಚಾಲಕನ ಹೆಸರು ವಿಚಾರಿಸಲಾಗಿ, ಭೀರಲಿಂಗ ತಂದೆ ಮಲ್ಲಪ್ಪ ಕರಗರ ಸಾ: ಬಾಣತಿಹಾಳ ತಾ: ಶಹಾಪೂರ ಅಂತಾ ಗೊತ್ತಾಗಿರುತ್ತದೆ. ನಾನು ಉಪಚಾರ ಕುರಿತು ಶಹಾಪೂರ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇನೆ ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನಮ್ಮ ಸಂಬಂದಿಕನಾದ ಮಲ್ಲಪ್ಪ ತಂದೆ ನಾಗಪ್ಪ ಬುಶನವರು ಸಾ: ಚಟ್ನಳ್ಳಿ ಇಬ್ಬರೂ ಕೂಡಿ ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬಂದು ನನ್ನ ಗಂಡನಿಗೆ ನೋಡಲಾಗಿ ಮೇಲೆ ಹೇಳಿದಂತೆ ಒಳಪೆಟ್ಟು ಹಾಗೂ ರಕ್ತಗಾಯ ಆಗಿದ್ದು ಇರುತ್ತದೆ. ನಂತರ ಹೆಚ್ಚಿನ ಉಪಚಾರ ಕುರಿತು ಧನ್ವಂತರಿ ಆಸ್ಪತ್ರೆ ರಾಯಚೂರಿಗೆ ಸೇರಿಕೆ ಮಾಡಿರುತ್ತೇವೆ. ನನ್ನ ಗಂಡನಿಗೆ ಹೆಚ್ಚಿನ ಉಪಚಾರ ಕುರಿತು ಸೇರಿಕೆ ಮಾಡಿ ಈ ವಿಷಯದ ಬಗ್ಗೆ ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನನ್ನ ಗಂಡನು ಕಾಲನಡಿಗೆಯಿಂದ ನಡೆದುಕೊಂಡು ಐಸಿಐಸಿ ಬ್ಯಾಂಕ ಎದುರುಗಡೆ ಇರುವ ಶರಬಲಿಂಗೇಶ್ವರ ಲಿಂಗಾಯತ ಖಾನಾವಳಿ ಮುಂದೆ ರಸ್ತೆ ಮೇಲೆ ಹೋಗುತ್ತಿರುವಾಗ ಹಿಂದುಗಡೆಯಿಂದ ಮೋಟಾರ ಸೈಕಲ್ ನಂ: ಕೆ.ಎ/ಎಸ್-5166 ನೇದ್ದರ ಚಾಲಕನ ಭೀರಲಿಂಗ ತಂದೆ ಮಲ್ಲಪ್ಪ ಕರಗರ ಸಾ: ಬಾಣತಿಹಾಳ ತಾ: ಶಹಾಪೂರ ಈತನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡನಿಗೆ ಡಿಕ್ಕಿ ಪಡಿಸಿ ಭಾರೀ ಮತ್ತು ಸಾದಾಗಾಯ ಪಡಿಸಿದ್ದು, ಸದರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 64/2022 ಕಲಂ: 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ.

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 65/2022 ಕಲಂ 279, 337, 338 ಐ.ಪಿ.ಸಿ : ಇಂದು ದಿನಾಂಕ 27/04/2022 ರಂದು, ಸಾಯಂಕಾಲ 18-30 ಗಂಟೆಗೆ ಫಿಯರ್ಾದಿ ಶ್ರೀ ಗುರುನಾಥರಡ್ಡಿ ತಂದೆ ಮಲ್ಲರೆಡ್ಡೆಪ್ಪಗೌಡ ಸಾಲೋಡಗಿ, ವಯಸ್ಸು 53 ವರ್ಷ, ಜಾತಿ ಲಿಂಗಾಯತರಡ್ಡಿ, ಉಃ ಒಕ್ಕಲುತನ ಕೆಲಸ ಸಾಃ ರಸ್ತಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 26/04/2022 ರಂದು, ಸಾಯಂಕಾಲ 7-00 ಗಂಟೆಯ ಸುಮಾರಿಗೆ ಫಿಯರ್ಾದಿಯ ತಮ್ಮ ಸಂಗನಗೌಡ ಮತ್ತು ಗ್ರಾಮದ ಶರಣಪ್ಪ ಕಾಳಗಿ ಇಬ್ಬರೂ ಶಹಾಪೂರದಿಂದ ಊರಿಗೆ ಮೋಟರ್ ಸೈಕಲ್ ನಂ ಕೆಎ-36-ಇಎ-0864 ರ ಮೇಲೆ ಬರುತಿದ್ದಾಗ ಶಹಾಪೂರದ ಚಾಂದ ಪೆಟ್ರೋಲ್ ಪಂಪ್ ದಾಟಿ ಅಂದಾಜು 1 ಕಿ.ಮೀ ಅಂತರದಲ್ಲಿರುವ ವಿಭೂತಿಹಳ್ಳಿ ರೋಡಿಗೆ ಇರುವ ಕನಕ ವೇ ಬ್ರೀಡ್ಜ್ ಹತ್ತಿರ ಬರುತಿದ್ದಾಗ ಹಿಂದಿನಿಂದ ಅಂದರೆ ಶಹಾಪೂರ ಕಡೆಯಿಂದ ಕಾರ್ ನಂ ಕೆಎ-33-ಎಮ್-3397 ರ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟರ್ ಸೈಕಲ್ ಅಪಘಾತ ಪಡಿಸಿದ್ದರಿಂದ ಸಂಗನಗೌಡ ಬಲಗಾಲ ತೊಡೆಗೆ ಮತ್ತು ಬಲಗಾಲ ಮೊಳಕಾಲ ಎಲಬು ಮುರಿದು ಭಾರಿ ಗುಪ್ತಗಾಯವಾಗಿರುತ್ತದೆ. ತಲೆಯ ಎಡಭಾಗಕ್ಕೆ ಮತ್ತು ಎದೆಗೆ ಗುಪ್ತಗಾಯವಾಗಿರುತ್ತದೆ. ಶರಣಪ್ಪನಿಗೆ ಎಡಗಾಲ ಮೊಳಕಾಲ ಕೆಳಗಡೆ ಎಲಬು ಮುರಿದು ರಕ್ತಗಾಯವಾಗಿರುತ್ತದೆ, ಬಲಗಾಲ ಮೊಳಕಾಲಿಗೆ, ಬಲಗಾಲ ಬೆರಳುಗಳಿಗೆ ರಕ್ತಗಾಯವಾಗಿರುತ್ತದೆ. ತಲೆಯ ಬಲಭಾಗಕ್ಕೆ ಕಟ್ಟಾದ ಭಾರಿ ರಕ್ತಗಾಯವಾಗಿ, ಬಲಭುಜದ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ.
ಈ ಅಪಘಾತಕ್ಕೆ ಕಾರಣನಾದ ಕಾರ್ ನಂ ಕೆಎ-33-ಎಮ್-3397 ರ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 65/2022 ಕಲಂ 279, 337, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 64/2022 ಕಲಂ: 418, 420 ಐಪಿಸಿ : ಇಂದು ದಿನಾಂಕ: 27/04/2022 ರಂದು 11 ಎಎಮ್ಕ್ಕೆ ಪಿರ್ಯಾದಿದರರಾದ ಶ್ರೀ ಶಾಂತಗೌಡ ತಂದೆ ಭೀಮರಾಯಗೌಡ ಮಾಲಿ ಪಾಟೀಲ ಸಾ|| ಚನ್ನಪಟ್ಟಣ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಾನು ದಿನಾಂಕ: 08/06/2020 ರಂದು ನಾಲ್ಕು ಎಮ್ಮೆಗಳನ್ನು ಖರೀದಿ ಮಾಡಿದ್ದು ಇರುತ್ತದೆ. ಸದರಿ ಎಮ್ಮೆಗಳ ಮೇಲೆ ದಿನಾಂಕ: 09/07/2020 ರಂದು ಕನರ್ಾಟಕ ಬ್ಯಾಂಕ ಸುರಪೂರ ಶಾಖೆಯಲ್ಲಿ ಲೋನ್ ಮಾಡಿರುತ್ತೇನೆ. ಅಲ್ಲದೆ ಅದೇ ಶಾಖೆಯಲ್ಲಿ ನಾಲ್ಕೂ ಎಮ್ಮೆಗಳ ಮೇಲೆ ಗಟಿತಜಡಿಚಿಟ ಠಟಠಿಠ ಉಜಟಿಜಡಿಚಿಟ ಟಿಣಡಿಚಿಟಿಛಿಜ ಅಠ.ಐಣಜ ಕಂಪನಿ ಕಡೆಯಿಂದ ಇನ್ಸೂರನ್ಸ್ ಕೂಡ ಮಾಡಿಸಿರುತ್ತೇನೆ. ಹೀಗಿದ್ದು ದಿನಾಂಕ: 29/04/2021 ರಂದು ಎರಡು ಎಮ್ಮೆಗಳು ಮೃತಪಟ್ಟಿದ್ದು, ಅವುಗಳ ಟ್ಯಾಗ್ ನಂಬರ 390082728108, 390082728165 ಮತ್ತು ದಿನಾಂಕ: 27/07/2021 ರಂದು ಎರಡು ಎಮ್ಮೆಗಳು ಮೃತಪಟ್ಟಿದ್ದು ಅವುಗಳ ಟ್ಯಾಗ್ ನಂಬರ 390082912940, 390082912610 ಇದ್ದು ಸದರಿ ಎಮ್ಮೆಗಳ ವೈದ್ಯಕೀಯ ಪರೀಕ್ಷೆಯನ್ನು ಡಾ|| ಸೈಯದ ಪಶು ವೈದ್ಯಾದಿಕಾರಿಗಳು ದೇವತ್ಕಲ್ ರವರಿಂದ ಮಾಡಿಸಿದ್ದು ಇರುತ್ತದೆ. ನಾಲ್ಕೂ ಎಮ್ಮೆಗಳು ಮೃತಪಟ್ಟ ನಂತರ ಇನ್ಸೂರನ್ಸ್ ಕ್ಲೇಮಿಗೆ ಹಾಕಿದ್ದು, ಇನ್ಸೂರನ್ಸ್ ಕಂಪನಿಯವರು ಕ್ಲೇಮ್ ಮಾಡದೇ ಇಲ್ಲ ಸಲ್ಲದ ಮಾತುಗಳನ್ನು ಹೇಳುತ್ತಾ ನನಗೆ ಮೋಸ ಮಾಡಿ, ಅಕ್ರಮ ನಷ್ಟ ಉಂಟು ಮಾಡಿ ತೊಂದರೆ ಕೊಡುತ್ತಿದ್ದಾರೆ ಮತ್ತು ಸದರಿ ಕಂಪನಿಯವರು ಮೃತ ಹೊಂದಿದ ಎಮ್ಮೆಗಳು ಪರಿಶೀಲನೆ ಕೂಡ ಬೆಂಗಳೂರಿನಿಂದ ಬಂದು ಮಾಡಿಕೊಂಡು ಹೋಗಿರುತ್ತಾರೆ. ಇಷ್ಟಿದ್ದರೂ ಕೂಡ ಕರಾರಿನಂತೆ ಯಾವುದೇ ಇನ್ಸೂರನ್ಸ್ ಕ್ಲೇಮ್ ಮಾಡುತ್ತಿಲ್ಲ. ಆದ್ದರಿಂದ ದಯಾಳುಗಳಾದ ತಾವುಗಳು ಸದರಿ ಕಂಪನಿಯ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ನನಗೆ ನ್ಯಾಯ ದೊರಕಿಸಿಕೊಡಬೇಕು ಅಂತ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 64/2022 ಕಲಂ: 418, 420 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 65/2022 ಕಲಂ: 341, 323, 504, 506 ಸಂಗಡ 34 ಐಪಿಸಿ : ಇಂದು ದಿನಾಂಕಃ 27/04/2022 ರಂದು 3:00 ಪಿ.ಎಂ ಕ್ಕೆ ಪಿಯರ್ಾದಿದಾರರಾದ ಶ್ರೀ ಅಯ್ಯಪ್ಪ ತಂದೆ ಭೀಮಣ್ಣ ಬೇವಿನಗಿಡ ವ|| 25 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ದೇವಿಕೇರಾ ತಾ|| ಸುರಪುರ ಜಿ|| ಯಾದಗಿರಿ ಇದ್ದು ತಮ್ಮಲ್ಲಿ ಕೊಡುವ ದೂರು ಅಜರ್ಿ ಏನೆಂದರೆ, ನಮ್ಮೂರ ತಿಮ್ಮಣ್ಣ ತಂದೆ ಮಲ್ಲಪ್ಪ ಬಿಲ್ಲವ ಈತನು ನಮ್ಮ ಮೇಲೆ ಮೊದಲಿನಿಂದಲೂ ಹಗೆತನ ಸಾದಿಸುತ್ತಾ ಬಂದಿರುತ್ತಾನೆ. 2016 ನೇ ಸಾಲಿನಲ್ಲಿ ನಮ್ಮ ಮೇಲೆ ಅಟ್ರಾಸಿಟಿ ಕೇಸ್ ಮಾಡಿಸಿದ್ದು ಈ ಕೇಸ್ ಕೋಟರ್ಿನಲ್ಲಿ ವಿಚಾರಣೆಯಲ್ಲಿರುತ್ತದೆ. ತಿಮ್ಮಣ್ಣ ಬಿಲ್ಲವ ಈತನು ಆಗಾಗ ನಮ್ಮೊಂದಿಗೆ ತಕರಾರು ಮಾಡುತ್ತಾ, ನಿಮ್ಮ ಮೇಲೆ ಕೇಸ್ ಮಾಡಿದ್ದೇನೆ ಮಕ್ಕಳೆ ನಮ್ಮ ತಂಟೆಗೆ ಬಂದರೆ ಯಾರಿಗೂ ಬಿಡುವದಿಲ್ಲ ಮಕ್ಕಳೆ ಅಂತ ಅನ್ನುತ್ತಾ ತಿರುಗಾಡುತ್ತಿದ್ದನು. ಮುಂದೆ ಸರಿಹೋಗಬಹುದು ಅಂತ ಸುಮ್ಮನೆ ನಮ್ಮ ಪಾಡಿಗೆ ನಾವು ಇದ್ದೆವು. ಹೀಗಿದ್ದು ದಿನಾಂಕ: 21/04/2022 ರಂದು ರಾತ್ರಿ 9:00 ಗಂಟೆ ಸುಮಾರಿಗೆ ನಾನು, ನಮ್ಮ ಅಣ್ಣನಾದ ದೇವಪ್ಪ, ತಮ್ಮಂದಿರಾದ ಪರಶುರಾಮ, ರಂಗಣ್ಣ ಮತ್ತು ಅತ್ತಿಗೆಯಾದ ಮಲ್ಲಮ್ಮ ಗಂಡ ದೇವಪ್ಪ ಎಲ್ಲರು ಕೂಡಿ ನಮ್ಮ ಹೊಲದಲ್ಲಿ ಸಜ್ಜಿ ರಾಶಿ ನಡೆದಿದ್ದರಿಂದ ಹೊಲಕ್ಕೆ ಹೋಗುವ ಕುರಿತು ನಮ್ಮೂರ ನಾಗಪ್ಪ ಪತ್ತಾರ ಇವರ ಹೊಲದ ಗೇಟ್ ಹತ್ತಿರ ಹೋಗುತ್ತಿದ್ದಾಗ, ಅದೇ ಸಮಯಕ್ಕೆ ನಮ್ಮೂರ ಮಾದಿಗ ಜನಾಂಗದವರಾದ 1) ತಿಮ್ಮಣ್ಣ ತಂದೆ ಮಲ್ಲಪ್ಪ ಬಿಲ್ಲವ, 2) ಅಯ್ಯಪ್ಪ ತಂದೆ ತಿಮ್ಮಣ್ಣ ಬಿಲ್ಲವ ಇಬ್ಬರು ಅಲ್ಲಿಗೆ ಬಂದು ಏನಲೇ ಅಯ್ಯಾ ಸೂಳೆಮಗನೆ ನಮ್ಮೊಂದಿಗೆ ಇಂದು 8 ಗಂಟೆ ಸುಮಾರಿಗೆ ಜಗಳ ಮಾಡಿ ಹೋಗುತ್ತಿ ಮಗನೆ ನಿನಗೆ ಎಷ್ಟು ಸೊಕ್ಕು ಇದೆ ಸೂಳೆಮಗನೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ನಾವೆಲ್ಲಿ ನಿಮ್ಮೊಂದಿಗೆ ಜಗಳ ತೆಗೆದೀವಿ, ನೀವೆ ನಮಗೆ ಬೈದಿದ್ದೀರಿ ಅಂತ ಅನ್ನುತ್ತಾ ನಾನು ಮುಂದೆ ಹೋಗುತ್ತಿದ್ದಾಗ ನನ್ನನ್ನು ತಡೆದು ನಿಲ್ಲಿಸಿ, ತಿಮ್ಮಣ್ಣ ಈತನು ನನಗೆ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಟ್ಟೆಗೆ ಹೊಡೆದು ನೆಲಕ್ಕೆ ಕೆಡವಿ ಒಳಪೆಟ್ಟು ಮಾಡಿದನು. ಅಯ್ಯಪ್ಪ ತಂದೆ ತಿಮ್ಮಣ್ಣ ಈತನು ನನಗೆ ಕಾಲಿನಿಂದ ಮೈಕೈಗೆ ಒದ್ದನು. ಆಗ ಅಲ್ಲಿಯೇ ಇದ್ದ ಅಣ್ಣ ದೇವಪ್ಪ, ತಮ್ಮಂದಿರಾದ ಪರಶುರಾಮ, ರಂಗಣ್ಣ ಮತ್ತು ಅತ್ತಿಗೆ ಮಲ್ಲಮ್ಮ ಎಲ್ಲರು ಕೂಡಿ ಬ್ಯಾಟರಿ ಬೆಳಕಿನಿಂದ ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಆಗ ಅವರಿಬ್ಬರು ನನಗೆ ಹೊಡೆಯುವದನ್ನು ಬಿಟ್ಟು ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಅಲ್ಲಿಂದ ಹೋದರು. ನನಗೆ ಅಷ್ಟೇನು ಗಾಯಗಳು ಆಗಿರುವದಿಲ್ಲ ನಾನು ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ನಡೆದ ಘಟನೆ ಬಗ್ಗೆ ಮನೆಯಲ್ಲಿ ಅತ್ತಿಗೆ ಮತ್ತು ತಮ್ಮಂದಿರೊಂದಿಗೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನನಗೆ ತಡೆದು ನಿಲ್ಲಿಸಿ, ಹೊಡೆ ಬಡೆ ಮಾಡಿ, ಅವಾಚ್ಯವಾಗಿ ಬೈದು, ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ನೀಡಿದ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 65/2022 ಕಲಂ: 341, 323, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 28-04-2022 09:02 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080