ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 28-05-2022


ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 78/2022. ಕಲಂ. 143, 147, 148, 427, 447, 323, 324, 504, 506 ಸಂಗಡ 149 ಐ.ಪಿ.ಸಿ. ಕಾಯ್ದೆ.: ಇಂದು ದಿನಾಂಕ :27/05/2022 ರಂದು 06:30 ಪಿ.ಎಮ್ ಗಂಟೆಗೆ ಶ್ರೀ ಮೋನಪ್ಪ ತಂದೆ ಯಲ್ಲಪ್ಪ ಕಂದಾರ ವಯ: 50 ಜಾತಿ: ಕಬ್ಬಲಿಗ ಉ: ಒಕ್ಕಲತನ ಸಾ: ಬೆಳಗೇರ ಇವರು ಠಾಣೆಗೆ ಖುದ್ದಾಗಿ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ತಂದು ಹಾಜರುಪಡೆಸಿದ್ದು ಸದರಿ ಅಜರ್ಿ ಸಾರಂಶದವೆನೆಂದರೆ, ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಒಕ್ಕಲತನ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪಜೀವನ ಸಾಗಿಸುತ್ತಿದ್ದು. ನಮ್ಮ ಅಣ್ಣತಮ್ಮಂದಿರಾದ ಮಲ್ಲಪ್ಪ ತಂದೆ ಯಲ್ಲಪ್ಪ, ಸಾಬಣ್ಣ ತಂದೆ ಯಲ್ಲಪ್ಪ, ಹಣಮಂತ ತಂದೆ ಯಲ್ಲಪ್ಪ, ಸಾ: ಬೇಳಗೇರ ತಾ:ಜಿ:ಯಾದಗಿರಿ ಇದ್ದು ನಮ್ಮ ಹೊಲದ ಸವರ್ೇ ನಂ 310/2 ರಲ್ಲಿ 1 ಎಕರೆ 32 ಗುಂಟೆಯ ಅಲ್ಲೂರು ರವರ ಹೊಲ ಮಲ್ಲಪ್ಪ ತಂದೆ ಯಲ್ಲಪ್ಪ ಕಂದಾರ ಇವರ ಹೆಸರಿನಲ್ಲಿ ಫಿತರ್ಾಜಿತ ಆಸ್ತಿದೆೆ. ಸುಮಾರು ವರ್ಷಗಳಿಂದ ಇವರು ಉಳುಮೆ ಮಾಡಿಕೊಂಡಿದ್ದು ಇರುತ್ತದೆ. ಈ ಹೊಲದಲ್ಲಿ ದಿನಾಂಕ:22/06/2021 ರಂದು ನಮ್ಮ ಬೇಳಗೇರ ಗ್ರಾಮದ ಊರಿನ ಮುಖ್ಯಸ್ಥರು ಮತ್ತು ಅವರು ಗುರು ಶಾಸ್ತ್ರಿಗಳೊಂದಿಗೆ 1 ಎಕರೆ 32 ಗುಂಟೆ ಮತ್ತು 20 ಗುಂಟೆ ಬಿಗೆರ ಹೊಲ ನಾಲ್ಕು ಭಾಗ ಮಾಡಬೇಕು ಅಂತ ನ್ಯಾಯ ಮಾಡಿದರು.ನಾವು ಅದಕ್ಕೆ ಒಪ್ಪಿಕೊಂಡೆವು, ಅದರಂತೆ 20 ಗುಂಟೆಯ ಬಿಗೆರ ಹೊಲದಲ್ಲಿ ನಮ್ಮ ಪಾಲಿಗೆ ಬಂದಿದ್ದನು ನಾಲ್ಕು ಪಾಲು ಮಾಡಿಕೊಟ್ಟಿರುತ್ತೇನೆ ಅದಕ್ಕೆ ನಾವು ಕೂಡು ಒಪ್ಪಿದ್ದು ನಂತರ 1 ಎಕರೆ 32 ಗುಂಟೆಯ ಹೊಲ ನಮ್ಮ ಪಾಲಿಗೆ ಪಾಲು ಕೇಳಿದರು ಇಲ್ಲಿಯವರಿಗೆ ಕೊಡಲಿಲ್ಲ ಆದರೆ ದಿನಾಂಕ:25/05/2022 ರಂದು ಮುಂಜಾನೆ 8:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ವೀರಭದ್ರಮ್ಮ ಗಂಡ ಮೊನಪ್ಪ ಕಂದಾರ ಇಬ್ಬರು ನಮ್ಮ ಪಾಲಿಗೆ ಬರುವ ಹೊಲಕ್ಕೆ ಹೋಗಿ ನೇಗಿಲು ಹೊಡೆಯುತ್ತಿದ್ದೇವು ಆಗ ಅಲ್ಲಿಗೆ ಬಂದ ನಮ್ಮ ಅಣ್ಣಾತಮ್ಮಂದಿರಾದ 1] ದೇವಿಂದ್ರಪ್ಪ ತಂದೆ ಸಾಬಣ್ಣ 2] ಶರಣಪ್ಪ ತಂದೆ ಮಲ್ಲಪ್ಪ 3] ಮಲ್ಲಪ್ಪ ತಂದೆ ಯಲ್ಲಪ್ಪ 4] ಸಾಬಣ್ಣ ತಂದೆ ಯಲ್ಲಪ್ಪ 5] ಹಣಮಂತ ತಂದೆ ಯಲ್ಲಪ್ಪ 6] ಪದ್ಮಾ ಗಂಡ ದೇವಿಂದ್ರಪ್ಪ 7] ಮಲ್ಲಮ್ಮ ಗಂಡ ಮಲ್ಲಪ್ಪ ಮತ್ತು 8] ಬಸಲಿಂಗ ತಂದೆ ಸಾಬಣ್ಣ ಸಾ: ಎಲ್ಲರು ಬೇಳಗೇರ ಇವರು ಅಕ್ರಮ ಕೂಟ ರಚಿಸಿಕೊಂಡು ಬಂದು ನಾವು ನೇಗಿಲು ಹೊಡೆಯುವುದನ್ನು ನಿಲ್ಲಿಸಿ ನಮಗೆ ಲೇ ಬೋಸಡಿ ಮಗನೇ ರಂಡಿ ಮಗನೇ ನಿಂದು ಏನು ಸೊಕ್ಕು ಅದ ಲೇ ನಮ್ಮ ಹೊಲಕ್ಕೆ ಬಂದು ನೇಗಿಲು ಹೊಡೆತ್ತಿಯಾ ಸುಳೇ ಮಗನೇ ಅಂತ ಅವಚ್ಯ ಶಬ್ದಗಳಿಂದ ಬೈದು ದೇವಿಂದ್ರ, ಶರಣಪ್ಪ, ಮಲ್ಲಪ್ಪ, ಸಾಬಣ್ಣ, ಬಸಲಿಂಗ ಮತ್ತು ಹಣಮಂತ ಇವರು ಬಡಿಗೆ ಮತ್ತು ಹಿಡಿ ಗಾತ್ರದ ಕಲ್ಲುಗಳಿಂದ ಮತ್ತು ಕೈಗಳಿಂದ ಹೊಟ್ಟೆಗೆ ಬೆನ್ನಿಗೆ ಮುಖಕ್ಕೆ ಹೊಡೆದರು ಆಗೆ ನನ್ನ ಹೆಂಡತಿಗೆ ಪದ್ಮಾ ಗಂಡ ದೇವಿಂದ್ರ ಮತ್ತು ಮಲ್ಲಮ್ಮ ಗಂಡ ಮಲ್ಲಪ್ಪ ಇವರು ಅವಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದಿರುತ್ತಾರೆ. ನನ್ನ ಹೆಂಡತಿ ನನ್ನ ಗಂಡನಿಗೆ ಸಾಯಿಸುತ್ತಾರೆ ಯಾರಾದರು ಬರ್ರಿ ಅಂತಾ ಚೀರಾಡುವುದನ್ನು ಕೇಳಿ ಅಲ್ಲಿ ನಮ್ಮ ಹೊಲದ ಪಕ್ಕದಲ್ಲಿ ಹೋಗುತ್ತಿದ್ದ ಹೋನ್ನಪ್ಪ ತಂದೆ ಬಸಪ್ಪ ಯಲ್ಹೇರಿ, ಮೋನಪ್ಪ ತಂದೆ ಸಾಬರೆಡ್ಡಿ ಬಸನ್ಯಾ ಮತ್ತು ಮಲ್ಲಿಕಾಜರ್ುನ ತಂದೆ ನರಸಪ್ಪ ಬಸನ್ಯಾಯ್ಕ ಸಾ: ಬೆಳಗೇರಿ ಇವರು ಬಂದು ಯಾಕ ಜಗಳ ಮಾಡಿಕೊಳ್ಳುತಿರಿ ಬಿಡ್ರರೀ ಅಂತ ಜಗಳ ಬಿಡಿಸಿರುತ್ತಾರೆ. ಆಗ ಮೇಲೆ ನಮೂದಿಸಿದವರೆಲ್ಲರು ಸೇರಿ ನೀವು ಇವತ್ತು ಉಳುದರಿ ಇಲ್ಲ ಅಂದರೆ ನಿಮ್ಮಗೆ ಖಲಾಸ ಮಾಡುತ್ತಿದ್ದವು ಅಂತ ಜೀವ ಬೆದರಿಕೆ ಹಾಕಿದ್ದು ನಂತರ ನನಗೆ ಗಾಯಗಳಾಗಿದ್ದರಿಂದ ನನ್ನ ಹೆಂಡತಿ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ತಂದು ಸೇರಿಕೆ ಮಾಡಿದ್ದು. ನನಗೆ ಮತ್ತು ನನ್ನ ಹೆಂಡತಿ ಮೇಲೆ ಹಲ್ಲೆ ಮಾಡಿರುತ್ತಾರೆ ಆದರೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ತೋರಿಸಿರುವುದಿಲ್ಲ ನಮ್ಮ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ಈ ಮೇಲ ನಮೂದಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ವಿನಂತಿ.ನಮ್ಮ ಮನೆಯಲ್ಲಿ ಹಿರಿಯರೊಂದಿಗೆ ಚಚರ್ಿಸಿ ಠಾಣೆಗೆ ಬರಲು ತಡವಾಗಿರುತ್ತದೆ. ಸದರಿ ಅಜರ್ಿ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ 78/2022 ಕಲಂ 341, 143, 147, 148, 323, 324, 504, 506, ಸಂಗಡ 149 ಐ.ಪಿಸಿ ನೇದ್ದರಲ್ಲಿ ಪ್ರಕರಣ ದಾಖಸಿಕೊಂಡು ತನಿಖೆ ಕೈಗೊಂಡೆನು

 

ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 79/2020 ಕಲಂ 15[ಎ], 32[3] ಕೆ,ಇ ಯಾಕ್ಟ್: 27-05-2022 ರಂದು ಸಾಯಂಕಾಲ 06-45 ಗಂಟೆಗೆ ಪಿ.ಎಸ್.ಐ ರವರು ಯಡ್ಡಳ್ಳಿ ಗ್ರಾಮದ ಕೊಳಿ ಪಾರ್ಮ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರೋಡಿನ ಮೆಲೆ ಪರವಾನಿಗೆ ಇಲ್ಲದೆ ಮದ್ಯ ಸೇವನೆ ಮಾಡುವ ವ್ಯಕ್ತಿಯನ್ನು ಮತ್ತು ಮದ್ಯವನ್ನು ವಶಕ್ಕೆ ಪಡೆದುಕೊಂಡು ವರದಿಯೊಂದಿಗೆ ಮದ್ಯದ ಜಪ್ತಿಪಂಚನಾಮೆಯನ್ನು ಹಾಗೂ ಆರೋಪಿತನನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಮತ್ತು ವರದಿಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 79/2022 ಕಲಂ. 15[ಎ], 32[3] ಕೆ.ಇ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 75/2022 ಕಲಂ: 420 ಐಪಿಸಿ: :ಇಂದು ದಿನಾಂಕ:27/05/2022 ರಂದು 1-30 ಪಿಎಮ್ ಕ್ಕೆ ಶ್ರೀ ಮುರಳಿ ಕೃಷ್ಣ ತಂದೆ ದೇವಲ್ಲು ವಲ್ಲಿ, ವ:50, ಜಾ:ಇಳಿಗ, ಉ:ಒಕ್ಕಲುತನ ಸಾ:ಐಕೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಮೂಲತಃ ಸಿಂಧನೂರು ನಿವಾಸಿಯಾಗಿದ್ದು, ಈಗ ಸುಮಾರು 10 ವರ್ಷಗಳಿಂದ ಐಕೂರು ಗ್ರಾಮಕ್ಕೆ ಬಂದು ಇಲ್ಲಿಯೆ ಗದ್ದೆಗಳನ್ನು ಲೀಜಿಗೆ ಮಾಡಿಕೊಂಡು ಐಕೂರು ಬಸ್ ನಿಲ್ದಾಣದ ಸಮೀಪ ಸೆಡ್ಡ ಹಾಕಿಕೊಂಡು ವಾಸವಾಗಿರುತ್ತೇನೆ. ನನಗೆ ಚೇತನಕುಮಾರ ವ:20 ಮತ್ತು ನಿತೀಶಕುಮಾರ ವ:18 ವರ್ಷದ ಇಬ್ಬರೂ ಗಂಡು ಮಕ್ಕಳಿರುತ್ತಾರೆ. ನಿತೀಶಕುಮಾರನು ಪಿ.ಯು.ಸಿ ವರಗೆ ವಿದ್ಯಾಭ್ಯಾಸ ಮಾಡಿರುತ್ತಾನೆ. ಹೀಗಿದ್ದು ಸದರಿ ನಿತೀಶಕುಮಾರನು ಆಗಾಗ ಸಣ್ಣಪಟ್ಟ ಟಿಕಟಾಕ್ ನಟನೆ ಮಾಡುವುದು ಮೊಬೈಲಿನಲ್ಲಿ ತನ್ನ ಇನಸ್ಟಾಗ್ರಾಂಗೆ ಹಾಕುವುದು ಮಾಡುತ್ತಿದ್ದನು. ಹೀಗೆ ನಿತೀಶಕುಮಾರನು ಈಗ ಸುಮಾರು 2 ವರ್ಷಗಳ ಹಿಂದೆ ತಾನು ಮೊಬೈಲಿನಲ್ಲಿ ಟಿಕಟಾಕ್ ಮಾಡಿ ತನ್ನ ನಿತೀಶಕುಮಾರ ಎಂಬ ಇನಸ್ಟಾಗ್ರಾಂ ಐಡಿ ಗೆ ಹಾಕಿರುವುದನ್ನು ರಾಕಿ @ ಸುನಿಲಕುಮಾರ ಎಂಬುವರು ನೋಡಿ ನನ್ನ ಮಗನ ಮೊಬೈಲ್ ನಂ. 9731734644 ನೇದಕ್ಕೆ ಕರೆ ಮಾಡಿ ಚನ್ನಾಗಿ ಟಿಕಟಾಕ್ ಮಾಡಿದಿ, ನಮ್ಮವು ಫ್ಯೂಚರ್ ಸ್ಟಾರ್ ಎಂಟರ್ಟೈನಮೆಂಟ್ ಮತ್ತು ಬೀಟ್ಸ್ ಮ್ಯೂಸಿಕ್ ಎಂಬ ಎರಡು ಕಂಪನಿಗಳು ಹೈದ್ರಾಬಾದನಲ್ಲಿ ಇವೆ. ನೀನು ನಮ್ಮ ಕಂಪನಿಯಲ್ಲಿ ಆ್ಯಕ್ಟಿಂಗ್ ಮಾಡ್ತಿಯಾ ಅಂತಾ ಕೇಳಿದಾಗ ನನ್ನ ಮಗನು ಸರಿ ನಾನು ಆ್ಯಕ್ಟಿಂಗ್ ಮಾಡುತ್ತೇನೆ ಎಂದು ಹೇಳಿದಾಗ ಆಯಿತು ನೀನು ರೆಡಿ ಇರು ನಾವು ನಿಮ್ಮೂರಿಗೆ ಬಂದು ನಿನಗೆ ಕರೆದುಕೊಂಡು ಬರುತ್ತೇವೆ ಎಂದು ಮೊಬೈಲಿನಲ್ಲಿ ಹೇಳಿರುತ್ತಾರೆ ಈ ಸಂಗತಿಯನ್ನು ನನ್ನ ಮಗ ನಿತೀಶಕುಮಾರನು ನನಗೆ ಹೇಳಿದನು. ದಿನಾಂಕ:01/06/2020 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ನಿತೀಶಕುಮಾರ, ನನ್ನ ಹೆಂಡತಿ ಶ್ರೀದೇವಿ ಮತ್ತು ನನ್ನ ಇನ್ನೊಬ್ಬ ಮಗ ಚೇತನಕುಮಾರ ಎಲ್ಲರೂ ನಮ್ಮ ಮನೆಯಲ್ಲಿದ್ದಾಗ ಹೈದ್ರಾಬಾದದಿಂದ ರಾಕಿ @ ಸುನಿಲಕುಮಾರ ಮತ್ತು ಅನಿಲಕುಮಾರ ಎಂಬ ಇಬ್ಬರೂ ಸಹೋದರರು ಬಂದು ನನ್ನ ಮಗ ನಿತೀಶಕುಮಾರನಿಗೆ ಗುರುತು ಹಿಡಿದು ನಾವು ನೀನು ಟಿಕಟಾಕನಲ್ಲಿ ಆ್ಯಕ್ಟ್ ಮಾಡಿರುವುದನ್ನು ನಿನ್ನ ಇನಸ್ಟಾಗ್ರಾಂ ನಲ್ಲಿ ನೋಡಿರುತ್ತೇವೆ. ನೀನು ಚನ್ನಾಗಿ ಆ್ಯಕ್ಟ್ ಮಾಡಿರುತ್ತಿಯಾ ಮತ್ತು ನಮ್ಮ ಕಂಪನಿಯಲ್ಲಿ ಆ್ಯಕ್ಟಿಂಗ್ ಮಾಡುತ್ತೇನೆ ಎಂದು ಹೇಳಿರುತ್ತಿ ಅದಕ್ಕೆ ನಿನಗೆ ಕರೆಯಲು ಬಂದಿರುತ್ತೇವೆ. ನೀನು ನಮ್ಮ ಕಂಪನಿಯಲ್ಲಿ ಆ್ಯಕ್ಟಿಂಗ್ ಮಾಡಬೇಕಾದರೆ ಅಲ್ಲಿ ಹೈದ್ರಾಬಾದ ಹೋದ ನಂತರ ನೀನು 20,000/- ರೂ. ಹಣ ಕಟ್ಟಬೇಕಾಗುತ್ತದೆ ಎಂದು ಹೇಳಿದರು. ಆಗ ನಾನು ಮತ್ತು ನನ್ನ ಮಗ ನಿತೀಶಕುಮಾರ ಇಬ್ಬರೂ ಒಪ್ಪಿಕೊಂಡು ಅವರೊಂದಿಗೆ ನಮ್ಮೂರಿಂದ ಹೈದ್ರಾಬಾದಕ್ಕೆ ಹೋದೆವು. ಹೈದ್ರಾಬಾದದ ಉಪ್ಪಲ ಎಂಬ ನಗರದ ಬಸ್ ಸ್ಟ್ಯಾಂಡ ಎದುರುಗಡೆ ಇರುವ ಅವರ ಕಂಪನಿಯಲ್ಲಿ ನಮಗೆ ಕರೆದುಕೊಂಡು ಹೋಗಿ ನನ್ನ ಮಗನ ಪೂತರ್ಿ ಬಯೋಡೆಟಾ ಮಾಹಿತಿಯನ್ನು ತಿಳಿದುಕೊಂಡರು. ನಂತರ ಅಲ್ಲಿ ಯಾವುದೋ ಆ್ಯಕ್ಟಿಂಗ್ ದ ಫಾರಂಗಳನ್ನು ತುಂಬಿ ರಿಜಿಸ್ಟ್ರೇಶನ ಮಾಡಿಸುತ್ತೇವೆ ಎಂದು ನನ್ನ ಮಗನಿಗೆ 20,000/ ರೂ. ಹಣ ಕೊಡು ಎಂದು ಕೇಳಿದಾಗ ನಾನು ನನ್ನ ಬಳಿ ಇದ್ದ 20,000/- ಹಣವನ್ನು ಕೊಟ್ಟೆನು. ನನ್ನ ಎಸ್.ಬಿ.ಐ ಶಹಾಪೂರ ಬ್ಯಾಂಕ್ ಖಾತೆ ನಂ. 38377548095 ನೇದಕ್ಕೆ ಎಟಿಮ್ ಕಾರ್ಡ ಇರುತ್ತದೆ. ಸದರಿ ಎಟಿಎಮ್ ಕಾರ್ಡದ ಸಿಕ್ರೆಟ್ ಪಿನ್ ನಂಬರ ನನಗೆ ನೆನಪು ಇರುವುದಿಲ್ಲ ಆದ್ದರಿಂದ ಅದನ್ನು ಒಂದು ಸಣ್ಣ ಚೀಟಿಯಲ್ಲಿ ಬರೆದು ಎಟಿಎಮ್ ಕಾರ್ಡ ಜೊತೆ ಪಾಕೆಟನಲ್ಲಿ ಹಾಕಿ ಇಟ್ಟಿದ್ದೆನು. ನಂತರ ದಿನಾಂಕ:02/06/2020 ರಂದು ರಾಕಿ @ ಸುನೀಲಕುಮಾರ ಮತ್ತು ಅನಿಲಕುಮಾರ ಇಬ್ಬರೂ ನನ್ನ ಮಗನಿಗೆ ನಿಮ್ಮ ತಂದೆಗೆ ವಾಪಸ ಈಗ ಊರಿಗೆ ಕಳುಹಿಸಿ ಬಿಡು ನಾವು ನಿನಗೆ ಶೂಟಿಂಗ್ ನಡೆದ ಜಾಗಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದಾಗ ನಾನು ನನ್ನ ಮಗನಿಗೆ ನಿನಗೆ ಖಚರ್ಿಗೆ ಬೇಕಾದರೆ ಇರಲಿ ಎಂದು ನನ್ನ ಹತ್ತಿರ ಇದ್ದ ಎಟಿಎಮ್ ಕಾರ್ಡ ಪಾಕೆಟನಲ್ಲಿ ಸಿಕ್ರೆಟ್ ಪಿನ್ ನಂಬರ ಚಿಟ್ಟಿ ಸಮೇತ ಕೊಟ್ಟು ನಾನು ಮರಳಿ ಊರಿಗೆ ಬಂದೆನು. ರಾಕಿ @ ಸುನೀಲಕುಮಾರ ಮತ್ತು ಅನಿಲಕುಮಾರ ಇಬ್ಬರೂ ನನ್ನ ಮಗನಿಗೆ ಕರಿಂನಗರ ಜಿಲ್ಲೆಯ ಗೋದಾವರಿ ಘನಿ ಎಂಬ ನಗರದಲ್ಲಿ ಶೂಟಿಂಗ್ ನಡೆದಿದೆ ಬಾ ಅಲ್ಲಿ ನಿನಗೆ ಆ್ಯಕ್ಟಿಂಗ್ ಮಾಡಲು ಚಾನ್ಸ ಕೊಡುತ್ತೇವೆ ಎಂದು ಕರೆದುಕೊಂಡು ಹೋಗಿ ಅಲ್ಲಿ ನನ್ನ ಮಗನಿಗೆ ಆ್ಯಕ್ಟಿಂಗ್ ಮಾಡಬೇಕಾದರೆ ನಿನ್ನ ಬಳಿ ಎಟಿಎಮ್ ಕಾರ್ಡ, ಮೊಬೈಲ್, ಪರ್ಸ ಏನು ಇರಬಾರದು ಎಂದು ಹೇಳಿ ಅವನಿಗೆ ನಂಬಿಸಿ, ಅವನ ಬಳಿ ಇದ್ದ ಎಟಿಎಮ್ ಕಾರ್ಡ, ಮೊಬೈಲ್, ಪರ್ಸ ಎಲ್ಲವನ್ನು ಇಸಕೊಂಡು ಅವನಿಗೆ ಆ್ಯಕ್ಟಿಂಗ್ ಮಾಡಲು ಹಚ್ಚಿ ನನ್ನ ಮಗನ ಹತ್ತಿರ ಇದ್ದ ನನ್ನ ಎಟಿಎಮ್ ಕಾರ್ಡ ಪಾಕೆಟನಲ್ಲಿ ಸಿಕ್ರೆಟ್ ಪಿನ್ ನಂಬರ ಇದ್ದದ್ದು ನೋಡಿ ನನ್ನ ಬ್ಯಾಂಕ ಖಾತೆಯಿಂದ ದಿನಾಂಕ: 02/06/2020 ರಂದು 73,000/- ದಿನಾಂಕ: 03/06/2020 ರಂದು 70,000/-, ದಿನಾಂಕ: 04/06/2020 ರಂದು 70,000/- ಮತ್ತು ದಿನಾಂಕ: 05/06/2020 ರಂದು 20,000/- ರೂ. ಹೀಗೆ ಒಟ್ಟು 2,33,000/- ಹಣವನ್ನು ವಿವಿಧ ಕಡೆಯ ಎಟಿಎಮ್ ದಿಂದ ಡ್ರಾ ಮಾಡಿಕೊಂಡು, ನಂತರ ನನ್ನ ಮಗನಿಗೆ ಅವನ ಎಟಿಎಮ್ ಕಾರ್ಡ, ಮೊಬೈಲ್, ಪರ್ಸ ವಾಪಸ ಕೊಟ್ಟು ಕಳುಹಿಸಿರುತ್ತಾರೆ. ನನ್ನ ಮಗನು ವಾಪಸ ಊರಿಗೆ ಬಂದ ನಂತರ ನಾನು ಬ್ಯಾಂಕಿಗೆ ದುಡ್ಡು ಡ್ರಾ ಮಾಡಲು ಹೋದಾಗ ನನ್ನ ಅಕೌಂಟದಿಂದ ಮೇಲಿನಂತೆ ಹಣ ಡ್ರಾ ಆಗಿರುವುದು ನನ್ನ ಬ್ಯಾಂಕ ಸ್ಟೇಟಮೆಂಟ್ ನೋಡಿದಾಗ ನನಗೆ ಗೊತ್ತಾಗಿರುತ್ತದೆ. ಆಗ ನನ್ನ ಮಗನು ರಾಕಿ @ ಸುನಿಲಕುಮಾರನಿಗೆ ನನ್ನ ತಂದೆಯವರ ಎಟಿಎಮ್ ದಿಂದ ಹಣ ಡ್ರಾ ಮಾಡಿಕೊಂಡಿರುತ್ತಿರಿ ಎಂದು ಕೇಳಿದಾಗ ಅವರು ಹೌದು ನಾವು ಹಣ ಡ್ರಾ ಮಾಡಿಕೊಂಡಿದ್ದೆವೆ ನಿನಗೆ ವಾಪಸ ಕೊಡುತ್ತೇವೆ ಎಂದು ಒಪ್ಪಿಕೊಂಡಿರುತ್ತಾರೆ. ಹೀಗೆ ಆ್ಯಕ್ಟಿಂಗ್ ಮಾಡಲು ಚಾನ್ಸ ಕೊಡುತ್ತೇವೆ ಎಂದು ನಂಬಿಸಿ, ಕರೆದುಕೊಂಡು ಹೋಗಿ ನನ್ನ ಮಗನಿಗೆ ಶೂಟಿಂಗ್ ಸಮಯದಲ್ಲಿ ನಿನ್ನ ಹತ್ತಿರ ಮೊಬೈಲ್, ಪರ್ಸ ಮತ್ತು ಎಟಿಎಮ್ ಕಾರ್ಡ ಇರಬಾರದು ಎಂದು ನಂಬಿಸಿ, ಎಟಿಎಮ್ ಕಾರ್ಡ ಇಸ್ಕೊಂಡು, ಸದರಿ ಎಟಿಎಮ್ ಕಾರ್ಡದಿಂದ ನನ್ನ ಖಾತೆಯಲ್ಲಿದ್ದ ರೂ. 2,33,000/- ಹಣವನ್ನು ಡ್ರಾ ಮಾಡಿಕೊಂಡು ನಮಗೆ ಮೋಸ ಮಾಡಿರುತ್ತಾರೆ. ಸದರಿ ಮೋಸ ಮಾಡಿದ ಹಣವನ್ನು ನಾವು ಕೇಳಿದಾಗೊಮ್ಮೆ ಅವರು ಇಂದು ಕೊಡುತ್ತೇವೆ ನಾಳೆ ಕೊಡುತ್ತೇವೆ ಎಂದು ಹೇಳಿ ದಿನ ದೂಡುತ್ತಾ ಬಂದಿರುತ್ತಾರೆ. ನಾವು ಹಲವಾರು ಸಲ ಹೈದ್ರಾಬಾದಕ್ಕೆ ಹೋಗಿ ನಮ್ಮ ದುಡ್ಡು ನಮಗೆ ವಾಪಸ ಕೊಡಿ ಎಂದು ಕೇಳಿ ಬಂದಿರುತ್ತೇವೆ. ನಾವು ಹೋದಾಗೊಮ್ಮೆ ಅವರು ಏನಾದರೂ ನೆಪ ಹೇಳಿ ನಮಗೆ ವಾಪಸ ಕಳುಹಿಸಿರುತ್ತಾರೆ. ಹೀಗಾಗಿ ಅವರು ಇಂದಲ್ಲ ನಾಳೆ ನಮ್ಮ ದುಡ್ಡು ನಮಗೆ ಮರಳಿ ಕೊಡಬಹುದು ಎಂದು ತಿಳಿದು ನಾವು ಅವರ ದಾರಿ ಕಾಯುತ್ತಾ ಕೂತಿದ್ದರಿಂದ ಠಾಣೆಗೆ ಬಂದು ದೂರು ಕೊಡಲು ವಿಳಂಬವಾಗಿರುತ್ತದೆ. ಕಾರಣ ನನ್ನ ಮಗನಿಗೆ ಆ್ಯಕ್ಟಿಂಗ್ ಮಾಡಲು ಚಾನ್ಸ ಕೊಡುತ್ತೇವೆ ಎಂದು ಹೈದ್ರಾಬಾದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅವನಿಗೆ ಶೂಟಿಂಗ್ ಮಾಡಿಸುತ್ತೇವೆ ಎಂದು ನಂಬಿಸಿ, ನನ್ನ ಮಗ ನಿತೀಶಕುಮಾರ ಬಳಿಯಿದ್ದ ನನ್ನ ಎಟಿಎಮ್ ಕಾರ್ಡ ತೆಗೆದುಕೊಂಡು ಹಣ ಡ್ರಾ ಮಾಡಿ ನಮಗೆ ಮೋಸ, ವಂಚನೆ ಮಾಡಿದವರ ಮೇಲೆ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ನಮ್ಮ ಹಣ ನಮಗೆ ಮರಳಿ ಕೊಡಿಸಬೇಕಾಗಿ ವಿನಂತಿ. ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 75/2022 ಕಲಂ: 420 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 87/2022 ಕಲಂ 143,147,148, 448, 323, 324, 504, 506 ಸಂ 149 ಐ.ಪಿ.ಸಿ: ದಿನಾಂಕ:25.05.2022 ರಂದು ಸಾಯಂಕಾಲ 6.30 ಗಂಟೆಯ ಪಿರ್ಯಾಧಿ ಮತ್ತು ಪಿರ್ಯಾಧಿಯ ಗಂಡ ಪಿರ್ಯಾಧಿಯ ಮಗ ಪಿರ್ಯಾಧಿಯ ಸೊಸೆ ಇವರೆಲ್ಲರೂ ಕೂಡಿ ತಮ್ಮ ಮನೆಯಲ್ಲಿ ಮತನಾಡುತ್ತಾ ಕುಳಿತ್ತಿದ್ದಾಗ ಆರೋಪಿತರೆಲ್ಲರೂ ಗುಂಪುಕಟ್ಟಿಕೊಂಡು ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಬಂದು ಪಿರ್ಯಾಧಿಯ ಮನೆಯನ್ನು ಅತೀಕ್ರಮ ಪ್ರವೇಶ ಮಾಡಿ ಪಿರ್ಯಾಧಿಗೆ ಮತ್ತು ಪಿರ್ಯಾಧಿಯ ಗಂಡ ಮಗನಿಗೆ ಅವಾಚ್ಯ ಶಬ್ದಗಳಿಂದ ಬೈದು ಬಡಿಗೆ ಮತ್ತು ಕೈಯಿಂದ ಹೊಡೆ-ಬಡೆ ಮಾಡಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾಧಿ ವಗೈರೆ ಸಾರಾಂಶ ಇರುತ್ತದೆ.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 88/2022 ಕಲಂ: 279, 337, 338 ಐಪಿಸಿ, : ಯುನೈಟೆಡ್ ಆಸ್ಪತ್ರೆ ಕಲಬುರಗಿಯಿಂದ ಎಮ್.ಎಲ್.ಸಿ ವಸೂಲಾದ ಮೇರೆಗೆ ಇಂದು ದಿನಾಂಕ 27/05/2022 ರಂದು ಠಾಣೆಯ ಪ್ರಕಾಶ ಹೆಚ್.ಸಿ 122 ರವರು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವಾದ ರಾಮಪ್ಪ ತಂದೆ ಹಣಮಂತ್ರಾಯ ಸುರಪೂರ ವ|| 57ವರ್ಷ ಜಾ|| ಕಬ್ಬಲಿಗ ಉ|| ಪ್ರಾಥಮಿಕ ಶಾಲಾ ಶಿಕ್ಷಕರು ಸ.ಹಿ.ಪ್ರಾ.ಶಾಲೆ ಬೇವಿನಾಳ ಸಾ|| ವಂದಗನೂರ ತಾ|| ಸುರಪೂರ ಇವರಿಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 05.30 ಪಿ ಎಮ್ ಕ್ಕೆ ಮುಂದಿನ ಕ್ರಮಕ್ಕಾಗಿ ಹೇಳಿಕೆಯನ್ನು ತಂದು ನೀಡಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ, ನಾನು ಸುಮಾರು 10 ವರ್ಷಗಳಿಂದ ಸ.ಹಿ.ಪ್ರಾಥಮಿಕ ಶಾಲೆ ಬೇವಿನಾಳದಲ್ಲಿ ಶಿಕ್ಷಕನಾಗಿ ಕೆಲಸ ಮಾಡಿಕೊಂಡು ಇರುತ್ತೇನೆ. ನನ್ನ ಮನೆಯು ವಂದಗನೂರ ಗ್ರಾಮದಲ್ಲಿದ್ದು ದಿನಾಲು ನಾನು ನನ್ನ ಮೋಟರ ಸೈಕಲ ನಂಬರ ಕೆಎ-33 ಆರ್-4498 ರಲ್ಲಿ ಹೋಗಿ ಬರುವದು ಮಾಡುತ್ತಿದ್ದೆನು. ಹೀಗಿದ್ದು ದಿನಾಂಕ 23.05.2022 ರಂದು ಬೆಳಿಗ್ಗೆ ನಾನು ನನ್ನ ಕರ್ತವ್ಯದ ಮೇಲೆ ಬೇವಿನಾಳ ಶಾಲೆಗೆ ಬಂದು ಕರ್ತವ್ಯ ಮುಗಿಸಿ ಸ್ವಲ್ಪ ಕೆಲಸವಿದ್ದ ನಿಮಿತ್ಯ ಕೆಂಭಾವಿಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ನಮ್ಮ ಊರಾದ ವಂದಗನೂರ ಗ್ರಾಮಕ್ಕೆ ಹೋಗುವ ಕುರಿತು ನನ್ನ ಮೋಟರ ಸೈಕಲ ನಂಬರ ಕೆಎ-33 ಆರ್-4498 ಅನ್ನು ನಾನೇ ನಡೆಸಿಕೊಂಡು ಅಂದಾಜು 05.30 ಪಿ ಎಮ್ ಸುಮಾರಿಗೆ ತಾಳಿಕೋಟಿ ಕೆಂಭಾವಿ ಮುಖ್ಯ ರಸ್ತೆಯ ಐನಾಪೂರ ಕ್ರಾಸ ಹತ್ತಿರ ರೋಡಿನಲ್ಲಿ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಹಿಂದಿನಿಂದ ಒಂದು ಮೋಟರ ಸೈಕಲ್ ಚಾಲಕನು ತನ್ನ ಮೋಟರ ಸೈಕಲನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ಬಲವಾಗಿ ನನ್ನ ಮೋಟರ ಸೈಕಲಗೆ ಡಿಕ್ಕಿಪಡಿಸಿದನು. ನಾನು ಮೋಟರ ಸೈಕಲ ಸಮೇತ ಕೆಳಗೆ ಬಿದ್ದಿದ್ದು ಅಲ್ಲದೇ ನನಗೆ ಡಿಕ್ಕಿಪಡಿಸಿದ ಮೋಟರ ಸೈಕಲ ಚಾಲಕನು ಸಹ ಬಿದ್ದಿದ್ದು ಈ ಅಪಘಾತದಲ್ಲಿ ನನಗೆ ಹಣೆಗೆ, ಮೂಗಿಗೆ ಬಾರೀ ರಕ್ತಗಾಯವಾಗಿ ಬಲಕಪಾಳಕ್ಕೆ ತರಚಿದ ಗಾಯವಾಗಿದ್ದು ಅಲ್ಲದೇ ಎದೆಗೆ, ಕುತ್ತಿಗೆಗೆಎರಡು ಮೊಳಕಾಲಿಗೆ ಗುಪ್ತಗಾಯವಾಗಿದ್ದು ಇರುತ್ತದೆ. ನಂತರ ನನಗೆ ಅಪಘಾತಪಡಿಸಿದ ಮೋಟರ ಸೈಕಲ ಸವಾರನಿಗೆ ಯಾವದೇ ಗಾಯಗಳಾಗಿರಲಿಲ್ಲ ಆತನ ಹೆಸರು ವಿಚಾರಿಸಲಾಗಿ ನಿಂಗಣಗೌಡ ತಂದೆ ಕುಂಟಪ್ಪಗೌಡ ದೇಸಾಯಿ ಸಾ|| ಆಲಾಳ ಅಂತ ಗೊತ್ತಾಗಿದ್ದು ನನಗೆ ಅಪಘಾತ ಪಡಿಸಿದ ಮೋಟರ ಸೈಕಲ್ ಅಲ್ಲಿಯೇ ಬಿದ್ದಿದ್ದು ಅದರ ನಂಬರ ನೋಡಲಾಗಿ ಕೆಎ-33 ಎಕ್ಸ್-1870 ಅಂತ ಇತ್ತು. ನಂತರ ಅಷ್ಟರಲ್ಲಿ ನನಗೆ ಪರಿಚಯವಿರುವ ಶಿವರಾಜ ತಂದೆ ಶರಣಪ್ಪ ತಳವಾರ ಹಾಗು ಶರಣಪ್ಪ ತಂದೆ ಭೀಮರಾಯ ತಳವಾರ ಇವರು ಬಂದು ನನಗೆ ನೋಡಿ ಮಾತನಾಡಿಸುವಷ್ಟರಲ್ಲಿ 108 ವಾಹನ ಬಂದಿದ್ದು ಆಗ ಇಬ್ಬರೂ ಕೂಡಿ ನನಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ನಂತರ ನನಗೆ ಉಪಚಾರ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಬೇರೆ ಕಡೆ ಹೋಗಲು ತಿಳಿಸಿದ ಮೇರೆಗೆ ನನ್ನನ್ನು ಹೆಚ್ಚಿನ ಚಿಕಿತ್ಸೆ ಕುರಿತು ನನ್ನ ಹೆಂಡತಿಯಾದ ಅನ್ನಮ್ಮ ಸುರಪೂರ ಹಾಗು ನನ್ನ ಅಣ್ಣನಾದ ಕನಕಪ್ಪ ಸುರಪೂರ ಇಬ್ಬರೂ ಕೂಡಿಕೊಂಡು ನನಗೆ ಕಲಬುಗರ್ಿಯ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ ಅಂದಿನಿಂದ ನಾನು ಇಲ್ಲಿಯವರೆಗೆ ಇಲ್ಲಿಯೇ ಉಪಚಾರ ಪಡೆದುಕೊಳ್ಳುತ್ತಿದ್ದೇನೆ. ಕಾರಣ ನಾನು ನನ್ನ ಮೋಟರ ಸೈಕಲ ಮೇಲೆ ಊರಿಗೆ ಹೋಗುತ್ತಿದ್ದಾಗ ಹಿಂದಿನಿಂದ ಮೋಟರ ಸೈಕಲ ನಂಬರ ಕೆಎ-33 ಎಕ್ಸ್-1870 ನೇದ್ದರ ಚಾಲಕ ನಿಂಗಣಗೌಡ ತಂದೆ ಕುಂಟಪ್ಪಗೌಡ ದೇಸಾಯಿ ಸಾ|| ಆಲಾಳ ಈತನು ತನ್ನ ಮೋಟರ ಸೈಕಲನ್ನು ಅತೀವೇಗ ಹಾಗು ಅಲಕ್ಷತನದಿಂದ ಡಿಕ್ಕಿಪಡಿಸಿ ಭಾರೀ ಹಾಗು ಸಾದಾ ಗಾಯಪಡಿಸಿದ್ದು ಸದರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 88/2022 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 89/2022 ಕಲಂ 341, 283, 336 ಐ.ಪಿ.ಸಿ : ಇಂದು ದಿನಾಂಕ 27/05/2022 ರಂದು ಮುಂಜಾನೆ 11-00 ಗಂಟೆಗೆ ಫಿಯರ್ಾದಿ ಶ್ರೀ ಲಚಮಪ್ಪ ತಂದೆ ನಿಂಗಪ್ಪ ದಳವಾಯಿ, ವಯಸ್ಸು 35 ವರ್ಷ, ಉಃ ಒಕ್ಕಲುತನ ಕೆಲಸ, ಸಾಃ ಯಕ್ಷಂತಿ ತಾಃ ವಡಗೇರಾ ಜಿಃ ಯಾದಗಿರಿ. ಇದ್ದು ತಮ್ಮಲ್ಲಿ ದೂರು ನೀಡುವುದೇನೆಂದರೆ, ನನ್ನ ಅಳಿಯ ಅಂದರೆ ತಂಗಿಯ ಗಂಡನಾದ ಬಸವರಾಜ ತಂದೆ ಮಲ್ಲಣ್ಣ ಬುಡಚಕ್ರಿ ಇವರಿಗೆ ಪಾಶ್ರ್ವವಾಯು (ಲಕ್ವಾ) ಹೊಡೆದಿದ್ದರಿಂದ ಆಯುವರ್ೇದಿಕ ಔಷದಿ ಹಾಕಿಸಿಕೊಂಡು ಬರಲು ನಮ್ಮೂರಿನಿಂದ ಕಾರ್ನಲ್ಲಿ ನಾನು ಮತ್ತು ನನ್ನ ತಮ್ಮ ಭೀಮಪ್ಪ ತಂದೆ ದೇವಪ್ಪ ದಳವಾಯಿ, ದೇವಪ್ಪ ತಂದೆ ಮಲ್ಲಪ್ಪ ಬುಡಚಕ್ರಿ ಮೂರು ಜನರು ಕೂಡಿ ನನ್ನ ಅಳಿಯ ಬಸವರಾಜನಿಗೆ ಕರೆದುಕೊಂಡು ಬೆಳಗಿನ ಜಾವ 03-00 ಗಂಟೆಗೆ ಸೊರಟುರು ಗ್ರಾಮಕ್ಕೆ ಹೊರಟೆವು. ಯಕ್ಷಂತಿ-ಗೌಡುರ ರಸ್ತೆಯ ಮೇಲೆ ನಮ್ಮೂರಿನಿಂದ ಅಂದಾಜು 2 ಕಿ.ಮೀ ಅಂತರದಲ್ಲಿ ಗೌಡುರ ಗ್ರಾಮದ ಶಿವರಾಯ ರವರ ಹೊಲದ ಹತ್ತಿರ ಬೆಳಗಿನ ಜಾವ 03-15 ಗಂಟೆಯ ಸುಮಾರಿಗೆ ಹೋಗುತಿದ್ದಾಗ, ಗೌಡುರ ಸೀಮಾಂತರದಲ್ಲಿ ಮರಳು ಡಕ್ಕಾ ಹತ್ತಿರ ನಿಂತಿದ್ದ ಒಬ್ಬ ಟಿಪ್ಪರ ಚಾಲಕನು ತನ್ನ ವಾಹನವನ್ನು ರೋಡಿನ ಮೇಲೆ ಅಡ್ಡವಾಗಿ ಸಂಚಾರಕ್ಕೆ ಅಡತಡೆಯಾಗುವ ರೀತಿಯಲ್ಲಿ ನಿಲ್ಲಿಸಿದ್ದನು. ಆಗ ನಾನು ಮತ್ತು ನನ್ನ ಜೊತೆಯಲ್ಲಿದ್ದ ಭೀಮಪ್ಪ ತಂದೆ ದೇವಪ್ಪ, ಮತ್ತು ದೇವಪ್ಪ ತಂದೆ ಮಲ್ಲಪ್ಪ ರವರುಗಳು ಹಾಗೂ ಮರಳು ಡಕ್ಕಾದಲ್ಲಿದ್ದ ನಾಗರಾಜ ತಂದೆ ಯಲ್ಲಪ್ಪ ನಾಯ್ಕೋಡಿ, ಮಹೇಶ ತಂದೆ ಶಿವಪ್ಪ ಅಂಗಡಿ ರವರೆಲ್ಲರೂ ಸೇರಿ ಟಿಪ್ಪರ ಚಾಲಕನಿಗೆ ಕಾರಿನಲ್ಲಿ ಪಾಶ್ರ್ವವಾಯು ಪೇಸೆಂಟ್ ಇದ್ದು ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಪ್ರಾಣಾಪಾಯದಲ್ಲಿರುತ್ತಾನೆ ಅರ್ಜಂಟ ಉಪಚಾರ ಕುರಿತು ಹೋಗಬೇಕಾಗಿದೆಂದು ಹೇಳಿದೆವು. ಅದಕ್ಕೆ ಟಿಪ್ಪರ ಚಾಲಕನು ಮರಳು ಡಕ್ಕಾದವರ ಮಧ್ಯ ಮತ್ತು ನಮ್ಮ ಟಿಪ್ಪರ ಮಾಲೀಕರಾದ ಮಲ್ಲು ಮಲ್ಲಾಬಾದಿ ಎಂಬುವರ ಮಧ್ಯ ಸಮಸ್ಯವಿದ್ದು ಲಾರಿ ತೆಗೆಯಬೇಡ ಅಂತಾ ನಮ್ಮ ಮಾಲೀಕರು ತಿಳಿಸಿದ್ದಾರೆ ಅಂತಾ ಹೇಳಿ ಟಿಪ್ಪರ ನಂಬರ ಕೆಎ-32-ಎಎ-7189 ನೇದ್ದು ವಾಹನವನ್ನು ತೆಗೆಯಲಿಲ್ಲ. ಚಾಲಕನು ವಾಹನ ಮಾಲೀಕರಿಗೂ ತಿಳಿಸಿದರು ಸಹಿತ ಅವರು ಕೂಡಾ ನನಗೂ ಮತ್ತು ಮರಳು ಡಕ್ಕಾ ಮಾಲೀಕರ ಮಧ್ಯ ಸಮಸ್ಯವಿದೆ ಇಬ್ಬರ ಸಮಸ್ಯ ಸರಿಹೊಂದುವರೆಗೆ ನಾನು ಅಲ್ಲಿಂದ ಟಿಪ್ಪರ ತೆಗೆಯುವದಿಲ್ಲಾ ಅಂತಾ ತಿಳಿಸಿ ವಾಹನಕ್ಕೆ ಜಿ.ಪಿ.ಎಸ್ ಲಾಕ್ ಮಾಡಿರುತ್ತಾರೆ.
ನಂತರ ನಾವೆಲ್ಲರೂ ಕೂಡಿ ರೋಡಿನ ಮೇಲೆ ಅಡ್ಡವಾಗಿ ನಿಂತಿರುವ ಟಿಪ್ಪರನ್ನು ತಳ್ಳಲು ಪ್ರಯತ್ನಿಸಿದ್ದು ಟಿಪ್ಪರನ್ನು ತೆಗೆಯಲು ಸಾದ್ಯವಾಗಲಿಲ್ಲ. ನಂತರ ಕಾರನ್ನು ರಸ್ತೆಯ ಪಕ್ಕದಲ್ಲಿರುವ ಹೊಲದಲ್ಲಿಂದ ಹಾದು ಹೋಗಿದ್ದು ಇರುತ್ತದೆ. ನನ್ನ ಅಳಿಯನನ್ನು ನನ್ನ ತಮ್ಮ ಮತ್ತು ಇತರರೊಂದಿಗೆ ಸೊರಟುರಿಗೆ ಕಳುಹಿಸಿಕೊಟ್ಟು ಈಗ ಬಂದು ದೂರು ಸಲ್ಲಿಸುತಿದ್ದೆನೆ ಕಾರಣ ಟಿಪ್ಪರ ನಂಬರ ಕೆಎ-32-ಎಎ-7189 ರ ಚಾಲಕ ಮತ್ತು ಮಾಲೀಕರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 89/2022 ಕಲಂ 341, 283, 336 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಭೀ.ಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 48/2022 ಕಲಂ 379 ಐಪಿಸಿ: ಫಿಯರ್ಾದಿದಾರರ ುದಿನಾಂಕ:25/05/2022 ರಂದು ಸಾಯಂಕಾಲ ತಮ್ಮಅಂಗಡಿ ಹತ್ತಿರತಮ್ಮಟಿಪ್ಪರ್ ನಂ:ಕೆಎ-33, ಎ-7794 ನೇದ್ದು ನಿಲ್ಲಿಸಿ ರಾತ್ರಿ 11.00 ಗಂಟೆ ಸುಮಾರಿಗೆಅಂಗಡಿಯಲ್ಲಿ ಮಲಗಿಕೊಂಡಿದ್ದು, ನಿನ್ನೆ ದಿನಾಂಕ:26/05/2022 ರಂದು ಮುಂಜಾನೆ 06.00 ಗಂಟೆ ಸುಮಾರಿಗೆಎದ್ದು ನೋಡಲಾಗಿತಮ್ಮಟಿಪ್ಪರನಎಡಭಾಗದಲ್ಲಿನ ಹಿಂದಿನ ನಾಲ್ಕು ಡಿಸ್ಕಗಳೊಂದಿಗೆ ನಾಲ್ಕು ಅಪೋಲೋ ಕಂಪನಿಯ ಟೈರಗಳು ಹಾಗೂ ಟಿಪ್ಪರಗೆ ಅಳವಡಿಸಿದ ಎಕ್ಸೈಡ್ಕಂಪನಿಯಎರಡು ಬ್ಯಾಟರಿಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದುಕಂಡು ಬಂದಿರುತ್ತದೆ. ಕಳ್ಳತನವಾದ ಬಗ್ಗೆ ಮನೆಯಲ್ಲಿ ವಿಚಾರಿಸಿ ಮತ್ತು ಶಹಾಪೂರ ಪಟ್ಟಣದಲ್ಲಿತಿರುಗಾಡಿ ವಿಚಾರಿಸಿ ಇಂದು ದಿನಾಂಕ:27/05/2022 ರಂದುತಡವಾಗಿಠಾಣೆಗೆ ಬಂದುದೂರುಅಜರ್ಿ ನೀಡಿದ್ದುಇರುತ್ತದೆ. ದಿನಾಂಕ 25/05/2022 ರಂದುರಾತ್ರಿ 11 ಗಂಟೆಯಿಂದ ದಿನಾಂಕ 26/05/2022 ರಂದು ಬೆಳಿಗ್ಗೆ 6 ಗಂಟೆಯ ಮದ್ಯದಅವಧಿಯಲ್ಲಿಯಾರೋ ಕಳ್ಳರು ಕಳ್ಳತನ ಮಾಡುವಉದ್ದೇಶದಿಂದ ಫಿಯರ್ಾದಿದಾರರ ಭಾರತಬೆಂಜ್ಟಿಪ್ಪರನ 04 ಟೈರ್ಗಳು 04 ಡಿಸ್ಕ್ಗಳ ಸಮೇತ ಅ.ಕಿ. 60,000 ರೂ ಹಾಗೂ 02 ಬ್ಯಾಟರಿಗಳು ಅ.ಕಿ. 6000 ರೂ ನೇದ್ದವುಗಳನ್ನು ಬಿಚ್ಚಿಕೊಂಡು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ದೂರು.

ಇತ್ತೀಚಿನ ನವೀಕರಣ​ : 28-05-2022 10:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080